• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಪರಿಸರ ದಿನ-2007ಧರೆಗೆ ಡವಡವ - ಡಿಮ್‌ ಡಿಮ್‌ ಡಿಂಡಿಮ...

By Staff
|

ಬೆಳಗ್ಗೆ ಎದ್ದು ಸೂರ್ಯ ನಮಸ್ಕಾರ ಹಾಕುವುದರ ಜೊತೆಗೆ, ಸೂರ್ಯನ ಸಂಕಟವನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳೋಣ! ಸೂರ್ಯನಿಗೆ ಕಷ್ಟ ಬಂದಿದೆ ಅಂದ್ರೆ, ನಮ್ಮನಿಮ್ಮಗಳ ಗತಿ ಏನು? ಕತ್ತಲ ದರ್ಬಾರು ಶುರುವಾದರೆ, ಬೆಳಕಿಗಾಗಿ ಎಲ್ಲಿಗೆ ಓಡಬೇಕು?

  • ಶ್ರೀವತ್ಸ ಜೋಶಿ

Global Dimming - Cause and Effectಜೂನ್‌ 5ನೇ ತಾರೀಕು, ‘ವಿಶ್ವ ಪರಿಸರದಿನ’ವಾಗಿ ಆಚರಿಸಲ್ಪಡುತ್ತದೆ. ನಮ್ಮ ಪರಿಸರ ಮತ್ತು ಅದರ ಆಯುರಾರೋಗ್ಯ ನಿರ್ಧಾರವಾಗುವುದು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ನಮ್ಮೆಲ್ಲರ ದೈನಂದಿನ ಚಟುವಟಿಕೆಗಳಿಂದ, ಪರಿಸರದ ಬಗ್ಗೆ ನಮಗಿರುವ ತಿಳುವಳಿಕೆ ಮತ್ತು ಕಾಳಜಿಗಳಿಂದ. ಈ ನಿಟ್ಟಿನಲ್ಲಿ ವಿಚಿತ್ರಾನ್ನ ಅಂಕಣದ ಇಂದಿನ ಸಂಚಿಕೆಯಲ್ಲಿ ಪರಿಸರ ಪ್ರಜ್ಞೆಯ ಒಂದೆರಡು ‘ತಿಳಿ’ಗಾಳುಗಳನ್ನು ನಿಮ್ಮ ಮೆಲ್ಲುವಿಕೆಗೆಂದು ಸಂಗ್ರಹಿಸಿಕೊಟ್ಟಿದ್ದೇನೆ.

ಓಂ ಮಿತ್ರಾಯ ನಮಃ ಎಂದು ಯಾವ ಸೂರ್ಯನನ್ನು ಸ್ನೇಹಿತನೆಂದು ಪರಿಗಣಿಸಿ ನಮಸ್ಕರಿಸುತ್ತಿದ್ದೆವೋ, ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ ಬೇರೆ ಯಾರಿಲ್ಲ... ಎಂದು ಯಾವ ಸೂರ್ಯನನ್ನು ಕೊಂಡಾಡುತ್ತಿದ್ದೆವೋ, ಸೂರ್ಯಂಗೇ ಟಾರ್ಚಾ? ಎಂದು ಅಣಕಿಸಿ ಯಾವ ಸೂರ್ಯನ ಸರ್ವಶ್ರೇಷ್ಠತೆಯನ್ನು ಸಾರುತ್ತಿದ್ದೆವೋ, ಕೋಟಿಸೂರ್ಯ ಸಮಪ್ರಭ ಎಂದು ವಕ್ರತುಂಡನನ್ನಾಗಲೀ ದಿನಕರಕೋಟಿ ತೇಜದಿ ಹೊಳೆಯುವ... ಎಂದು ಭಾಗ್ಯದಲಕ್ಷ್ಮಿಯನ್ನಾಗಲೀ ಬಣ್ಣಿಸಲು ಯಾವ ಸೂರ್ಯನ ಪ್ರಭೆಯನ್ನು ಮಾನಕವಾಗಿಸಿದ್ದೆವೋ ಆ ಸೂರ್ಯ ಈಗ ಕಳೆಗುಂದುತ್ತಿದ್ದಾನೆ!

ಸರಳವಾಗಿ, ಅಂದರೆ ನಮಗೆಲ್ಲ ಅಭ್ಯಾಸವಾಗಿ ಹೋಗಿರುವ ಕಂಗ್ಲಿಷ್‌ಭಾಷೆಯಲ್ಲಿ ಹೇಳಬೇಕಿದ್ದರೆ ಸೂರ್ಯ ಈಗೀಗ ಡಿಮ್ಮಾಗುತ್ತಿದ್ದಾನೆ! ಅದಕಂಡು ಭೂಮಿ ಬೆದರಿದ್ದಾಳೆ, ಡಿಮ್‌ ಡಿಮ್‌ ಡಿಂಡಿಮ ಬಾರಿಸತೊಡಗಿದ್ದಾಳೆ!

ಹೌದು, Global dimming ನಮ್ಮ ಪರಿಸರದಲ್ಲಿ ಗಮನಕ್ಕೆ ಬರುತ್ತಿರುವ ಒಂದು ಹೊಸ ವಿದ್ಯಮಾನ. ಇದುವರೆಗೆ ಗ್ಲೋಬಲ್‌ ವಾರ್ಮಿಂಗ್‌, ಗ್ರೀನ್‌ಹೌಸ್‌ಎಫ‚ೆಕ್ಟ್‌, ಓಜ‚ೋನ್‌ ತೂತು ಮುಂತಾದವುಗಳ ಬಗ್ಗೆ ಮಾತ್ರ ಕೇಳಿ ಗೊತ್ತಿದ್ದ ನಮಗೆಲ್ಲ ಇನ್ನೊಂದು ಎಚ್ಚರಿಕೆಯ ಗಂಟೆ.

ಸೂರ್ಯನದೇನಿದು ಹೊಸ ಆಟ, ಆತನೂ ಉರಿದು ಉರಿದು ಸುಸ್ತಾದನೇ? ಅಥವಾ, ಹೈವೇಯಲ್ಲಿ ನೈಟ್‌ ಡ್ರೈವಿಂಗ್‌ ವೇಳೆ ಡಿಮ್ಮು-ಡಿಪ್ಪು ಮಾಡದ ಕೆಟ್ಟಚಾಳಿಯ ಚಾಲಕರಿಗೆ ಡಿಮ್‌ ಎಂದರೇನೆಂದು ಅವನಿಂದ ಪಾಠವೇ? ಸೂರ್ಯನೇ ಡಿಮ್‌ ಆಗುತ್ತ ಹೋದರೆ ನಮಗಿನ್ನಾರು ಗತಿ? ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು... ಎಂದು ಯಾರನ್ನು ಕೇಳಬೇಕು? ಬ್ಯಾಡ್‌ಲೈಟ್‌ ಎಂದು ಕ್ರಿಕೆಟ್‌ ಆಟ ಮುಗಿಸಿದಂತೆ ನಾವೆಲ್ಲ ಜೀವನದಾಟವನ್ನೇ ಮುಗಿಸಬೇಕಾಗುತ್ತದಾ ಹೇಗೆ?

ತಾಳಿ, ಅಷ್ಟು ಗಾಬರಿ ಬೇಕಿಲ್ಲ. ಒಂದನೆಯದಾಗಿ ಸೂರ್ಯ ಕಣ್ಣುಮಿಟುಕಿಸುತ್ತಾ ಇಲ್ಲ, ಪ್ರೇಮಲೋಕದಲ್ಲಿ (= ಭೂಲೋಕದಲ್ಲಿ) ಎಂತೆಂತಹ ಜ್ಯೂಹಿಚಾವ್ಲಾಗಳು ಹುಟ್ಟಿಬಂದರೂ, ‘ರವಿಫಚಂದ್ರನ್‌ ಹಾಗೆ ಹೇಳಿದರೂ, ಸೂರ್ಯ ಕಣ್‌ಹೊಡೆಯೋದಿಲ್ಲ. ಕೈ ಕೊಡೋದಿಲ್ಲ. ಅವನ ಉರಿಯುವಿಕೆ ಏಕಾಗ್ರತೆಯಿಂದ ಅನೂಚಾನವಾಗಿ ಸಾಗಿದೆ. ಕ್ಷಣಕ್ಷಣಕ್ಕೂ ಸುಮಾರು 174 ಬಿಲಿಯನ್‌ ಮೆಗಾವಾಟ್‌ಗಳಷ್ಟು ಸೌರಶಕ್ತಿಯ ಉತ್ಪಾದನೆಯನ್ನು ನಮ್ಮೆಲ್ಲರ ಈ ‘ಮಿತ್ರ’ ಮಾತಿಲ್ಲದೆ ಮಾಡುತ್ತಲೇ ಇದ್ದಾನೆ. ಇನ್ನೂ ಮಿಲಿಯಗಟ್ಟಲೆ ವರ್ಷಗಳಿಗಾಗುವಷ್ಟು ಸೌರಶಕ್ತಿಯ ಭಂಡಾರವೂ ಅವನಲ್ಲಿದೆ, ಆ ಬಗ್ಗೆ ನಮಗೆ ಅನುಮಾನವೇ ಬೇಡ.

ಮತ್ಯಾಕೆ ಡಿಮ್ಮು?

ಸೂರ್ಯನ ಶಾಖ ಮತ್ತು ಬೆಳಕು ಮೂಲದಲ್ಲಿ ಉತ್ಪಾದನೆಯಾದದ್ದು ಅಷ್ಟೂ ನಮಗೆ ಅಂದರೆ ಭೂಲೋಕದ ಜೀವಿಗಳಿಗೆ ದಕ್ಕುವುದಿಲ್ಲ ಎನ್ನೋದು ಗೊತ್ತಷ್ಟೆ? ಸೌರಶಕ್ತಿ ಹರಿದುಬಂದದ್ದರಲ್ಲಿ ಸುಮಾರು 30%ದಷ್ಟನ್ನು ಮೋಡಗಳು ಸೂರ್ಯನೆಡೆಗೆ ಪ್ರತಿಫಲಿಸುತ್ತವೆ. ಉಳಿದ ಭಾಗ ಮಾತ್ರ ನಮ್ಮೆಲ್ಲರ ಬಾಳನ್ನು ಬೆಳಕಾಗಿಸಲು ಸಿಗುತ್ತದೆ. ಇದು ಇಂದುನಿನ್ನೆಯ ಸಂಗತಿಯೇನಲ್ಲ, ಬ್ರಹ್ಮಾಂಡ ಉದಿಸಿದಂದಿನಿಂದಲೂ ಸಾಗಿಬಂದಿರುವ ಕ್ರಮ. ಆದರೆ ಕಳೆದ ಐವತ್ತು ವರ್ಷಗಳಿಂದೀಚೆಗೆ ವಿಜ್ಞಾನಿಗಳು ಗಮನಿಸಿರುವುದೇನೆಂದರೆ ಮೋಡಗಳನ್ನು ದಾಟಿ ಬರುವ ಸೌರಶಕ್ತಿ ಪ್ರಮಾಣ ವರ್ಷೇವರ್ಷೇ ಕುಗ್ಗುತ್ತಿದೆ - ಸುಮಾರು ಒಂದು ದಶಕಕ್ಕೆ 3 ರಿಂದ 4 % ಇಳಿಕೆ. ಬ್ರಿಟಿಷ್‌ ವಿಜ್ಞಾನಿ ಗೆರ್ರಿ ಸ್ಟಾನ್‌ಹಿಲ್‌ ಇದನ್ನು ಗ್ಲೋಬಲ್‌ ಡಿಮ್ಮಿಂಗ್‌ ಎಂದಿದ್ದಾನೆ.

ಬಹುಮಟ್ಟಿಗೆ ನಾವು ಮಾಡುತ್ತಿರುವ ಪರಿಸರಪ್ರದೂಷಣೆಯೇ ಇಂತಹ ಪ್ರಕೃತಿವಿಕೋಪಗಳ ಹೇತುವಾಗಿ ನಮ್ಮನ್ನು ಅಪರಾ-ಧಿಸ್ಥಾನದಲ್ಲಿ ನಿಲ್ಲಿಸುತ್ತದೆ. ಪರಿಸರಮಾಲಿನ್ಯದಿಂದ ಗ್ಲೋಬಲ್‌ ವಾರ್ಮಿಂಗ್‌ ಆಗುತ್ತದೆಂದು ಕೇಳಿದ್ದೇವೆ, ಇದೇನಿದು ಗ್ಲೋಬಲ್‌ ಡಿಮ್ಮಿಂಗ್‌ ಎಂಬ ಹೊಸಮಂತ್ರ ಎಂದು ಕೆಲವರು ಆಕ್ಷೇಪಿಸಬಹುದು. ನಿಜ, ಗ್ಲೋಬಲ್‌ ವಾರ್ಮಿಂಗ್‌ಗೆ ಕಾರಣವಾಗುವ ಕಶ್ಮಲಗಳು ಬೇರೆ, ಗ್ಲೋಬಲ್‌ ಡಿಮ್ಮಿಂಗ್‌ಗೆ ಕಾರಣವಾಗುವವು ಬೇರೆ. ಮುಖ್ಯವಾಗಿ ಗಂಧಕ, ಇಂಗಾಲ ಮತ್ತು ಧೂಳಿನ ಕಣಗಳಿಂದುಂಟಾಗುವ ‘ಆ್ಯಂತ್ರೊಪೊಜೆನಿಕ್‌ ಎರೊಸೊಲ್‌’ ರಚನೆಯೇ ಗ್ಲೋಬಲ್‌ ಡಿಮ್ಮಿಂಗ್‌ಗೆ ಕಾರಣವೆಂಬುದನ್ನು ಪರಿಸರವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more