• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೇದಪಠಣದ ವಿಚಿತ್ರಾನ್ನಕ್ಕೆ ವ್ಹಾರೆವಾಹ್‌ ವಂದನೆಗಳು

By Staff
|

ವೇದಪಠಣದ ವಿಚಿತ್ರಾನ್ನಕ್ಕೆ ವ್ಹಾರೆವಾಹ್‌ ವಂದನೆಗಳು

(ವೇದಾಧ್ಯಯನ ವಿಧಾನದ ವಿಸ್ಮಯ ಕುರಿತ ವಿಚಿತ್ರಾನ್ನ ಸಂಚಿಕೆಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ. ಈ ಲೇಖನವು ಉಪಯುಕ್ತವಾಗಿದೆ ಮತ್ತು ಮಾಹಿತಿಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟವರಿಗೆ ಹಾಗೂ ಪತ್ರ ಬರೆದು ತಿಳಿಸಿದವರಿಗೆ - ಶ್ರೀವತ್ಸ ಜೋಶಿ.)

ವೇದಾಧ್ಯಯನ ಕುರಿತಾದ ಅಂಕಣ ಸೊಗಸಾಗಿತ್ತು. ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಪ್ರಾಯಶಃ ನಾವುಗಳು, ಯಾಂತ್ರಿಕ ಬದುಕಿಗೆ ಓಗೊಟ್ಟು, ನಮ್ಮ ಹಿರಿಯರು ನಮಗೆಂದು ಬಿಟ್ಟು ಹೋಗಿರುವ ಅಮೂಲ್ಯ ರತ್ನಗಳನ್ನು ತಿಪ್ಪೆಗೆ ಎಸೆಯಲು ಸಿದ್ಧರಿದ್ದೇವೆ ಎನಿಸುತ್ತದೆ. ನಮ್ಮ ವೇದಗಳಿಗೆ ನಮ್ಮ ಜನರಲ್ಲೆ ನಂಬಿಕೆಯಿಲ್ಲ, ಅದು ಕೆಲಸಕ್ಕೆ ಬಾರದ್ದು ಎಂಬ ಅಭಿಪ್ರಾಯ ಹಲವಾರು ಜನರಲ್ಲಿರುವುದನ್ನು ಕೇಳಿ, ತಿಳಿದು, ಮನಸಿಗೆ ಬಹಳ ಬೇಸರವಾಗುತ್ತದೆ. ತಂದೆ-ತಾಯಂದಿರಾಗಿ ನಾವುಗಳು ಏತಕ್ಕೆ ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು, ಪರಂಪರೆಯನ್ನು ಸರಿಯಾದ ರೀತಿಯಲ್ಲಿ ಪರಿಚಯಿಸುವುದಿಲ್ಲ? ಉದಾಹರಣೆಗೆ ಎಷ್ಟು ಜನ ತಮ್ಮ ಮಕ್ಕಳಿಗೆ ಕೂರಿಸಿಕೊಂಡು ನಮ್ಮ ರಾಮಾಯಣ, ಮಹಾಭಾರತ ಕಥೆಯನ್ನು ಹೇಳುವರು? ಎಲ್ಲವು ದೂರದರ್ಶನಮಯ. ಕಾರ್ಟೂನ್‌ ನೋಡು, ಇದು ನೋಡು, ಅದು ನೋಡು ಎನ್ನುವುದೇ ಹೆಚ್ಚು. ಕುವೆಂಪು ಅವರು ಹೇಳುವಂತೆ ನಾವೆಲ್ಲ ‘ಎರಡು ನಿಮಿಷದಲ್ಲಿ ಸ್ನಾನ ಮಾಡಿ, ಐದು ನಿಮಿಷದಲ್ಲಿ ತಿಂಡಿ ತಿನ್ನುವ’ ಜನ. ಯಾವುದಕ್ಕೂ ಸಮಯವಿಲ್ಲ. ನಮಗಾಗಿಯೇ ಸಮಯವಿಲ್ಲ. ಎಂಥ ವಿಪರ್ಯಾಸ !

ನಾನು ಶಾಲೆಯಲ್ಲಿ ಓದಿದ ನೆನಪು, ಆಗಿನ ಕಾಲದಲ್ಲೆ, ವಿಮಾನವನ್ನು ಮಾಯ ಮಾಡುವ ಕಲೆ ತಿಳಿದಿದ್ದರು ಎಂದು. ಆದರೆ ನಮ್ಮ ಭಾರತದಲ್ಲಿ ಇದನ್ನು ತಿಳಿಯುವ ಬಗ್ಗೆ ಎಷ್ಟರ ಮಟ್ಟಿಗೆ ಕಾರ್ಯ ಸಾಗಿದೆ ? ಶೂನ್ಯವಲ್ಲದಿದ್ದರೂ, ಮೆಚ್ಚುವ ರೀತಿಯಲ್ಲಂತೂ ಅಲ್ಲ. ಒಂದೇ ವಾಕ್ಯದಲ್ಲಿ ಸಂಪೂರ್ಣ ಗೊಳಿಸಲು ಪ್ರಯತ್ನ - ‘ಹಿತ್ತಲ ಗಿಡ ಮದ್ದಲ್ಲ!’

- ನಾಗರಾಜ ಅನಂತಶೇಷ; ಕನೆಕ್ಟಿಕಟ್‌

*

ಈ ಸಲದ ವಿಚಿತ್ರನ್ನ ಸೂಪರ್‌. ತುಂಬ ಸಿಂಪಲ್‌ ಆಗಿ ಘನಪಾಠ ಮುಂತಾದವನ್ನ ಎಕ್ಸ್‌ಪ್ಲೈನ್‌ ಮಾಡಿದ್ದೀರಿ... ಹ್ಯಾಟ್ಸ್‌ ಆಫ್‌ :)

- ಗಿರೀಶ್‌ ಪ್ರಭು; ಬೆಂಗಳೂರು

*

ಹ್ಯಾಟ್ಸ್‌ ಆಫ್‌- ನಿಮಗೂ ಮತ್ತು ನಮ್ಮ ಪೂರ್ವಜರಿಗೂ. ಇಂತಹ ವಿಧಾನವನ್ನ ಇನ್ವೆಂಟ್‌ ಮಾಡಿ ಪ್ರಾಕ್ಟೀಸ್‌ ಮಾಡಿರುವುದಕ್ಕೆ ಪೂರ್ವಜರಿಗೆ ನಮಸ್ಕಾರ. ಇಂತಹ ವಿಧಾನವನ್ನು ನಮಗೆ ತಿಳಿಸಿ - ಅರ್ಥವಾಗುವಂತೆ ಉದಾಹರಣೆ ಸಹಿತ - ಹೇಳಿರುವುದಕ್ಕೆ ನಿಮಗೆ ನಮಸ್ಕಾರ!

- ಚಂದ್ರ ನೆಲೊಗಲ್‌; ಟೆಕ್ಸಸ್‌

*

ವೇದಾಧ್ಯಯನದ ಪಾಠಕ್ರಮಗಳು ನಿಜಕ್ಕೂ ನಮ್ಮ ಪೂರ್ವಿಕರ ಬುದ್ಧಿಮತ್ತೆಗೆ ಹಿಡಿದ ಕನ್ನಡಿ. ಬರೀ ಬಾಯಿಪಾಠದಲ್ಲೇ ವೇದಗಳನ್ನು ರಕ್ಷಿಸಿಕೊಂಡು ಬಂದ ಅವರ ಪ್ರತಿಭೆ, ಚಾಣಾಕ್ಷತೆ ಇಂದಿನ ಪೀಳಿಗೆಗೆ ಖಂಡಿತ ಇಲ್ಲ ಎನ್ನಬಹುದು. ವೇದಪಾಠಕ್ರಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿರುವುದು ನಿಜಕ್ಕೂ ನಮಗೆಲ್ಲ ಹೆಮ್ಮೆಯ ವಿಷಯ.

- ಸಂಪಿಗೆ ಶ್ರೀನಿವಾಸ; ಬೆಂಗಳೂರು

*

ಮಂತ್ರಗಳ ಬಗ್ಗೆ ಲೇಖನವನ್ನು ಓದಿದಾಗ ನಮ್ಮೂರಲ್ಲಿ ‘ಏಕಾದಶ್ಣಿ’ (ಹನ್ನೊಂದು ಸಲ ರುದ್ರಪಠಣ) ಮಾಡುವಾಗ ಹೇಳುವ ರುದ್ರ ನೆನಪಾಯಿತು. ಲೇಖನ ಚೆನ್ನಾಗಿ ಮೂಡಿ ಬಂದಿದೆ.

- ಅರ್ಚನಾ ಕುಲದೀಪ್‌; ಬೆಂಗಳೂರು

*

ವೇದಾಂತದಂಥ ‘ಕಬ್ಬಿಣದ ಕಡಲೆ’ಯನ್ನೂ ಸರಳವಾಗಿ ಜಗಿದು ನುಂಗಿಸಿದ್ದೀರಿ, ಥಾಂಕ್ಸ್‌!

- ನಟೇಶ್‌; ಬೆಂಗಳೂರು

*

‘ವೇದಾಧ್ಯಯನ ವಿಸ್ಮಯ’ ದಲ್ಲಿ ಅನೇಕ ಹೊಸ ವಿಷಯಗಳನ್ನು ತಿಳಿದೆ. ಘನಪಾಠಿಗಳ ಬಗ್ಗೆ ತಿಳಿಸಿದಂತೆ, ತ್ರಿಪಾಠಿ, ದ್ವಿವೇದಿ, ತ್ರಿವೇದಿ, ಚತುರ್ವೇದಿ ಮುಂತಾದ ಹೆಸರುಗಳ ಹಿಂದಿರುವ ಕಾರಣ, ಅರ್ಥವನ್ನೂ ತಿಳಿಸಿದ್ದರೆ ಚೆನ್ನಾಗಿತ್ತು. ವಂದನೆಗಳು.

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

*

ನೀವು ವಿಚಿತ್ರಾನ್ನದಲ್ಲಿ ಬರೆದ ವೇದಾಧ್ಯಯನದ ಬಗೆಗಿನ ಲೇಖನ ತುಂಬ ಚೆನ್ನಾಗಿತ್ತು. ವೇದಪಠನ ಕೇಳುವುದಕ್ಕೆ ತುಂಬ ಹಿತ ಅನ್ನಿಸಿದರೂ ಅದರ ಅಭ್ಯಾಸಕ್ರಮ ಇಷ್ಟೊಂದು ಸಂಕೀರ್ಣವಾಗಿದೆ ಎಂದು ಗೊತ್ತೇ ಇರಲಿಲ್ಲ. ಲೇಖನ ಮಾಹಿತಿಪೂರ್ಣ ಮತ್ತು ಇಂಟೆರೆಸ್ಟಿಂಗ್‌ ಆಗಿತ್ತು.

ಧನ್ಯವಾದಗಳು.

- ಉಷಾರಾಣಿ ಹೆಗ್ಡೆ; ಬೆಂಗಳೂರು

*

ಈ ವಾರದ ವಿಚಿತ್ರಾನ್ನ ಲೇಖನದಲ್ಲಿ ನಮ್ಮ ಭವ್ಯ ಭಾರತದ ಸನಾತನವಾದ ವೇದಗಳ ಮಹತ್ವವನ್ನು ನಮಗೆ ಮನ ಮುಟ್ಟುವಂತೆ ತಿಳಿಸಿದ್ದೀರಿ. ಹೌದು, ನಮ್ಮ ಪುರಾತನ ಹಿಂದೂ ಸಾರವನ್ನು ಹೊಂದಿರುವ ವೇದಗಳ ಉಚ್ಚಾರಣೆ, ಅದರ ಪಠಣ ಮತ್ತು ಅಭ್ಯಾಸ ತುಂಬ ಕ್ಲಿಷ್ಟವಾದ ಕೆಲಸ ಮತ್ತು ಅದಕ್ಕೆ ನಿರಂತರವಾದ ಶ್ರಮ ಮತ್ತು ಸೂಕ್ತ ಗುರುಗಳ ನಿದರ್ಶನ ಅವಶ್ಯ. ನಿಮ್ಮ ಲೇಖನದಲ್ಲಿ ಕೊಟ್ಟಿರುವ ಹಲವು ಕಲಿಕೆಯ ಹಂತಗಳು ನಮ್ಮ ಇಂದಿನ ಯಾವುದೇ ನಮ್ಮ ಕಲಿಕೆಯ ಪದ್ಧತಿಗೆ ದಾರಿ ದೀಪವಾಗಿದೆ. ಇದೇ ರೀತಿಯ ಹಂತಗಳನ್ನು ನಾವು ನಮ್ಮ ಮಕ್ಕಳ ಅಕ್ಷರಾಭ್ಯಾಸದಲ್ಲಿ ಗೊತ್ತಿಲ್ಲದೆ ಬಳಸುತ್ತಿರುತ್ತೇವೆ.

ಇಂಥ ಮಹತ್ವವನ್ನು ಹೊಂದಿರುವ ನಮ್ಮ ಭಾರತದ ವೇದಗಳಿಗೆ ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಶೃಂಗ ಸಮ್ಮೇಳನದಲ್ಲಿ ಸೂಕ್ತ ಗೌರವವನ್ನು ನೀಡಿರುವುದು ನಮಗೆಲ್ಲಾ ತುಂಬ ಸಂತೋಷವನ್ನು ತಂದಿರುವ ವಿಚಾರವಾಗಿದೆ. ಈ ಮೂಲಕ ನಾವೆಲ್ಲಾ ನಮ್ಮ ಭಾರತಾಂಬೆಯ ಮಕ್ಕಳು ಎಂದು ಹೆಮ್ಮೆಯಿಂದ ಬೀಗಲೂ ಈ ಗೌರವ ನಮಗೆಲ್ಲಾ ಕಿರೀಟಪ್ರಾಯವಾಗಿದೆ. ಇಂಥ ಅಪರೂಪದ ನಮಗೆ ಗೊತ್ತಿಲ್ಲದ ವಿಷಯವನ್ನು ನಮಗೆ ನೀವು ನಿಮ್ಮ ವಿಚಿತ್ರಾನ್ನದ ಮೂಲಕ ಭಾರಿ ಭೋಜನವನ್ನು ಬಡಿಸಿದ್ದಕ್ಕೆ ಜೋಶಿಯವರೆ ನಿಮಗೆ ನಮ್ಮ ಡಬಲ್‌ ಥ್ಯಾಂಕ್ಸ್‌ ಮತ್ತು ಧನ್ಯವಾದಗಳು.

- ತಿಪ್ಪೇರುದ್ರ; ಬೆಂಗಳೂರು

*

ಜೋಶಿಯವರೇ, ಕೆಲವು ದಿವಸಗಳ ಕೆಳಗೆ ನಮ್ಮೂರ ದುರ್ಗಾಪರಮೇಶ್ವರಿಯ ಉತ್ಸವದ ಸಮಯ ದೇವಸ್ಥಾನಕ್ಕೆ ವೇದ ಪಾರಾಯಣ ಮಾಡಲು ಬಂದ ಘನಪಾಠಿಗಳೊಬ್ಬರ ವೇದೋಚ್ಛಾರ ಕೇಳಿ ಅಲ್ಲಿದ್ದ ನಾವೆಲ್ಲರೂ ಅಕ್ಷರಶಃ ಮಂತ್ರಮುಗ್ಧರಾಗಿದ್ದೆವು. ಅವರು ಪೂಜಾ ಸಮಯ ಹೇಳುತ್ತಿದ್ದ ಸಾಮವೇದದ ‘ಋಕ್‌’ ಗಳು ಇಂಪಾದ ಗಾನ ವೈವಿಧ್ಯ, ಸ್ವರ ಶುದ್ಧತೆ, ಅರ್ಥ ಶುದ್ಧತೆ ಮತ್ತು ಸ್ಪಷ್ಟತೆಯಿಂದ ಮೊಳಗುತ್ತಿದ್ದವು. ಅವರು ಸಾಮ ವೇದವನ್ನು ರಾಗವಾಗಿ ಹಾಡುತ್ತಾ ಉಚ್ಛರಿಸುವ ಸಮಯಲ್ಲಿ ಲೀಲಾಜಾಲವಾಗಿ ಉಸಿರಾಡಲು ಕೂಡಾ ಸಮರ್ಥರಾಗಿದ್ದರು! ಎಲ್ಲೂ ಉಸಿರು ಬಿಗಿದಂತಾಗಿ, ಉಚ್ಚರಿಸಲು ಅವರು ಕಷ್ಟ ಪಡುತ್ತಾ ಇರಲಿಲ್ಲ. ಹಿಮಾಲಯ ಪರ್ವತದ ಕಂದರಗಳಿಂದ ಹರಿದು ಬರುವ ಗಂಗಾ ಪ್ರವಾಹದಂತೆ, ಅವರ ವೇದ ಘೋಷ ಹರಿದು ಬರುತ್ತಿತ್ತು! ‘ಇದು ಅವರಿಗೆ ಹೇಗೆ ಸಾಧ್ಯವಾಗುತ್ತಿದೆ?’ ಎಂದು ನಾವೆಲ್ಲರೂ ಅಚ್ಚರಿಪಟ್ಟೆವು. ಅವರನ್ನು ಈ ಸುಲಲಿತ ವಾಚನದ ಅಭ್ಯಾಸದ ಬಗ್ಗೆ ಕೇಳಿದಾಗ, ಆ ಘನಪಾಠಿಗಳು ‘ಈ ವಿದ್ಯೆಯು ನನಗೆ ಒಳ್ಳೆಯ ಗುರುಗಳಿಂದ ಪ್ರಾಪ್ತವಾಗಿದೆ!’ ಎನ್ನುತ್ತ ಮುಗುಳ್ನಕ್ಕೂ ಸುಮ್ಮನಾದರು. ಆ ಮಹನೀಯರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ವೇದಗಳ ಅಧ್ಯಯನ ಶುರುಮಾಡಿದರಂತೆ. ಇಂದು ಅವರಿಗೆ ಸುಮಾರು ಐವತ್ತರ ಪ್ರಾಯ. ಇಂದು ಅವರು ಶ್ರೀ ಶೃಂಗೇರಿ ಶಾರದಾಂಬಾ ಪೀಠದ ಘನಪಾಠಿ ವಿದ್ವಾಂಸರು. ಅವರೊಡನೆ ವೇದಾದ್ಯಯನ ಪದ್ಧತಿಯಬಗ್ಗೆ ದೀರ್ಘಾವಧಿಯ ಚರ್ಚೆಮಾಡಿ ವೇದಾಧ್ಯಯನದ ವಿಧಾನಗಳನ್ನು ತಿಳಿದುಕೊಳ್ಳಲು ನನಗೆ ಅವಕಾಶ ಸಿಗಲಿಲ್ಲ. ಇದಕ್ಕಗೆ ನನಗೆ ಸ್ವಲ್ಪ ವ್ಯಥೆಯೂ ಆಯಿತು!

ಇಂದು ನಿಮ್ಮ ‘ವೇದಾಧ್ಯಯನ ವಿಧಾನದ ವಿಸ್ಮಯ’ ಎಂಬ ವಿಚಿತ್ರಾನ್ನದ ಕಂತು ಓದಿದ ನಂತರ, ನನ್ನ ಆ ಚಿಂತೆ ಪರಿಹಾರವಾಯಿತು! ಧನ್ಯವಾದಗಳು. ಹೀಗೆಯೇ, ನಿಮ್ಮ ವಿಚಿತ್ರಾನ್ನದ ರಾಶಿಯು ಹಸಿದ ಓದುಗರ ಕಡೆಗೆ ಹರಿದು ಬರುತ್ತಾ ಇರಲಿ! ವಂದನೆಗಳು.

- ಎಸ್‌. ಮಧುಸೂದನ ಪೆಜತ್ತಾಯ; ಸುಳಿಮನೆ ಕಾಪಿತೋಟ, ಬಾಳೆಹೊಳೆ

*

ವೇದಾಧ್ಯಯನದ ಬಗ್ಗೆ ನಿಮ್ಮ ಲೇಖನ ಸೊಗಸಾಗಿದೆ. ಗ್ರಾಮೀಣ ಹಿನ್ನೆಲೆಯಲ್ಲಿ ಬೆಳೆದ ನನಗೆ ಸಂಸ್ಕೃತದ ಜ್ಞಾನ ಬಲು ಕಡಿಮೆ. ಅದರಲ್ಲೂ ವೇದಾಧ್ಯಯನದ ಬಗ್ಗೆ ಏನೂ ಗೊತ್ತಿರಲಿಲ್ಲ.

- ಪ್ರೊ। ಮಹದೇವ ರಾವ್‌; ಬ್ರೂಕ್‌ಪೊರ್ಟ್‌, ನ್ಯೂಯಾರ್ಕ್‌

*

ತುಂಬ ತುಂಬಾನೆ ಚೆನ್ನಾಗಿದೆ ಲೇಖನ. ಮಸ್ತ್‌ ಮಜಾ ಸಿಕ್ತು. ವಿಷಯವನ್ನು ಸರಳವಾಗಿ ಸುಂದರವಾಗಿ ಹೇಳಿದ್ದೀರಿ.

- ಕೃಷ್ಣಸ್ವಾಮಿ ಬಿಜವಾರ; ಬೆಂಗಳೂರು

*

ಇವತ್ತಿನ ಲೇಖನದಿಂದ ಬಹಳಷ್ಟು ವಿಷಯ ತಿಳಿದುಕೊಳ್ಳಲು ಸಿಕ್ಕಿತು. ಹೀಗೆ ಪಠ್ಯ ಬೋಧನೆ ನಡೆಯುತ್ತಿರಲಿ, ಬಾಯಿಪಾಠ ಮಾಡಿದ ಮಗ್ಗಿಯಾಗಲಿ, ಶ್ಲೋಕಗಳಾಗಲಿ ಅಥವಾ ಸಂಗೀತದ ಶ್ರುತಿಗಳಾಗಲಿ ಮನಸ್ಸಿನಲ್ಲಿ ಬಹಳ ದಿನ ನಿಲ್ಲುತ್ತವೆ. ಕೆಲವರು ಅದನ್ನು ಉರು ಹೊಡಿಯೋದು ಅಂತ ಅಪಹಾಸ್ಯ ಮಾಡುವುದೂ ಉಂಟು. ಆದರೆ ನೆನಪಿನಲ್ಲಿ ಅಚ್ಚಳಿಯದೆ ಒಂದನೆ ತರಗತಿಯಲ್ಲಿ ಓದಿದ ಪಾಠಗಳಾಗಲಿ, ಪದ್ಯಗಳಾಗಲಿ ಇಷ್ಟು ದಿನ ನೆನಪಿದೆ ಎಂದ ಮೇಲೆ ಬಾಯಿಪಾಠ ಮಾಡಿಸಿದ ಗುರುಹಿರಿಯರಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಸಣ್ಣವರಿದ್ದಾಗ ಬುದ್ಧಿ ಬಹಳ ವಿಕಾಸವಾಗುವ ಸಮಯವಾದ್ದರಿಂದ ಬಹು ಕಾಲ ವಿಷಯಗಳನ್ನು ನೆನಪಿನಲ್ಲಿಡಲು ಸಹಾಯವಾಗುವುದು.

- ಅನುರಾಧಾ ಅರುಣ್‌; ಚಿಕಾಗೊ

*

ಇದು ನಿಜಕ್ಕೂ ಒಂದು ಅಸಾಮಾನ್ಯ ಲೇಖನ! ಬರೀ ವೇದ ಕೇಳಿ ‘ಮಕ್ಕಿ ಕಾ ಮಕ್ಕಿ...’ ಅಂತಾರಲ್ಲಾ ಹಾಗೆ ಕುದುರೆ ಕಣ್ಣು ಮುಚ್ಚಿದ ಹಾಗೆ ಹೋಗಿ ಅಭ್ಯಾಸವಾಗಿತ್ತು. ಆ ದೃಷ್ಟಿಗೆ ಹೊಸ ಬೆಳಕು ಚೆಲ್ಲಿದ, ಹೋಳಿಯ ದಿನ ಹೊಸ ಬಣ್ಣ ತುಂಬಿದ ನಿಮಗೆ ಧನ್ಯವಾದಗಳು.

- ಶೈಲಜಾ ಗುಂಡೂರಾವ್‌; ಮೇರಿಲ್ಯಾಂಡ್‌

*

ವಿಚಿತ್ರಾನ್ನ ವಿದ್ವಾಂಸರು ಈ ಬಾರಿ ವೇದಾಧ್ಯಯನದ ‘ಘನ’ ಪಾಟಿ ಭೋಜನ ಬಡಿಸಿರುವುದು ತುಂಬಾ ಸಂತೋಷ. ನಮ್ಮ ಸಂಸ್ಕೃತಿಯ ಅಧ್ಯಯನದ ಬಗ್ಗೆ ಇಷ್ಟೊಂದು ವಿಸ್ಮಯಕರವಾದ, ವಿವರವಾದ ಅಂಶಗಳನ್ನು ಅತ್ಯಂತ ಸರಳ ರೀತಿಯಲ್ಲಿ ಓದುಗರಿಗೆ ತಲುಪಿಸಿದ್ದಕ್ಕೆ ಧನ್ಯವಾದಗಳು. ಖಂಡಿತವಾಗಿಯೂ ಇದೊಂದು ಸಂಗ್ರಹ ಯೋಗ್ಯ ಲೇಖನ. ಈ ಸಂಚಿಕೆ ಪ್ರೊ। ಅ.ರಾ. ಮಿತ್ರ ಅವರ ‘ಛಂದೋಮಿತ್ರ’ ಕೃತಿಯನ್ನು ನೆನಪಿಗೆ ತಂದಿತು, ಅದರಲ್ಲಿ ಅವರು ಕನ್ನಡ ಛಂದಸ್‌ ಶಾಸ್ತ್ರವನ್ನು ಮೋಜಿನ ಉದಾಹರಣೆಗಳೊಂದಿಗೆ ವಿವರಿಸಿರುವ ರೀತಿ ಅದ್ಭುತ. ಸ್ವಾರಸ್ಯಕರವಾದ ಸಂಚಿಕೆಗಾಗಿ ನಿಮಗೆ ಮತ್ತೊಮ್ಮೆ ಧನ್ಯವಾದಗಳು.

- ರುದ್ರಮೂರ್ತಿ; ಬೆಂಗಳೂರು

*

ವಿಚಿತ್ರಾನ್ನದ ಈ ಲೇಖನವಂತೂ ಬಹಳ ಸೊಗಸಾಗಿದೆ. ಸಾಕಷ್ಟು ಸಂಶೋಧನೆ ಮಾಡಿ ವಿಷಯಗಳನ್ನು ಸಂಗ್ರಹಿಸಿ ಪ್ರಸ್ತುತಪಡಿಸಿದ್ದೀರಿ!

- ಜ್ಯೋತಿ ಜಯಕುಮಾರ್‌; ಫ್ಲೊರಿಡಾ

- ಜ್ಯೋತಿ ಮಹಾದೇವ್‌; ಕ್ಯಾಲಿಫೊರ್ನಿಯಾ

- ಉಷಾರಾಣಿ ಎ ಎಸ್‌; ಹೈದರಾಬಾದ್‌

*

ವೇದಾಧ್ಯಯನ ವಿಧಾನ ಲೇಖನ ಒಂದು ಕ್ಲಿಷ್ಟವಾದ ಮಾಹಿತಿಯನ್ನು ಜನ ಸಾಮಾನ್ಯರಿಗೆ ಬಿಡಿಸಿ ಹೇಳುವುದರಲ್ಲಿ ಸಫಲಗೊಂಡಿದೆ. ಜೊತೆಗೆ ಸರಳವೂ ಜನ ಜನಿತವೂ ಆದ ತುತ್ತೂರಿ ಹಾಡಿನ ಉದಾಹರಣೆ ಇರುವುದರಿಂದ ಅರ್ಥ ಮಾಡಿಕೊಳ್ಳಲು ಶ್ರಮಪಡಬೇಕಾಗಿಲ್ಲ.

ಈ ವಿಧಾನವನ್ನು ಎಲ್ಲೋ ಆಗಲೇ ಓದಿರುವ ಅಥವ ಕೇಳಿರುವ ನೆನಪು ಕಾಡುತ್ತಿತ್ತು ನಿನ್ನೆಯವರೆಗು. ಆದರೆ ಇತ್ತೀಚೆಗೆ ಬೆಂಗಳೂರಿನ ಬಳಿ ಇರುವ ಶಾಂತಿಧಾಮ ಸಂಸ್ಥೆ ಬಿಡುಗಡೆ ಮಾಡಿರುವ ‘ಯಜುರ್‌ ವೇದ ಮಂತ್ರಮ್‌’ ಅನ್ನುವ ಸಿ.ಡಿಯಲ್ಲಿ ಇಂಗ್ಲಿಷ್‌ ಭಾಷೆಯ ವ್ಯಾಖ್ಯಾನ ಅಕ್ಷರ ಸಹ ಇದನ್ನೇ ವರ್ಣಿಸಿರುವುದನ್ನು ಕೇಳಿದ ಮೇಲೆ ಖಚಿತವಾಯಿತು - ಜೋಶಿಯವರೂ ಕೂಡ ಇದನ್ನು ಕೇಳಿಯೇ ಕನ್ನಡಕ್ಕೆ ಅಳವಡಿಸಿಕೊಂಡು ಜೊತೆಗೆ ತಮ್ಮದೇ ವಿಚಾರಗಳನ್ನು ಸೇರಿಸಿದ್ದಾರೆಂದು. ವಿಚಿತ್ರಾನ್ನದ ಈ ಅಂಕಣಕ್ಕೆ ಬರೆಯಲು ಮೂಲ ಪ್ರೇರಣೆ ಈ ಸಿ.ಡಿ ಎನ್ನುವ ಅಂಶವನ್ನು ಓದುಗರೊಡನೆ ಹಂಚಿಕೊಂಡಿದ್ದರೆ ಪ್ರಮಾಣೀಕೃತ ವೇದಾಧ್ಯಯನ ವಿಧಾನಕ್ಕೆ ಪ್ರಾಮಾಣಿಕತೆಯನ್ನೂ ಸೇರಿಸಬಹುದಿತ್ತು.

- ರವಿ ಗೋಪಾಲ್‌ ರಾವ್‌; ಸ್ಯಾನ್‌ ಹೊಸೆ, ಕ್ಯಾಲಿಫೊರ್ನಿಯಾ

*

(ರವಿ ಗೋಪಾಲ್‌ ರಾವ್‌ ಅವರಿಗೆ ನಮಸ್ಕಾರ! ವೇದಾಧ್ಯಯನ ವಿಧಾನ ವಿವರಗಳ ವಿಚಿತ್ರಾನ್ನ ನಿಮಗೆ ಇಷ್ಟವಾಯಿತೆಂಬ ಸಂಗತಿ ಸಂತೋಷ ತಂದಿತು. ಈ ಲೇಖನವನ್ನು ತಯಾರಿಸಲು ನಾನು ವಿವಿಧ ಕಡೆಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದೇನೆ, ಆದರೆ ನೀವು ತಿಳಿಸಿರುವ ಧ್ವನಿಮುದ್ರಿಕೆಯ ವಿಷಯ ನನಗೆ ಗೊತ್ತಿಲ್ಲ ಈಗಿನ್ನು, ಅವಕಾಶ ಸಿಕ್ಕಿದಾಗ ಆ ಧ್ವನಿಮುದ್ರಿಕೆಯನ್ನೂ ಕೊಂಡು ನನ್ನ ಸಂಗ್ರಹಕ್ಕೆ ಸೇರಿಸುತ್ತೇನೆ, ತಿಳಿಸಿದ್ದಕ್ಕೆ ನಿಮಗೆ ಧನ್ಯವಾದ!

ನಮ್ಮ ಊರಿನಲ್ಲಿ (ಕಾರ್ಕಳ) ನಮ್ಮ ಪಕ್ಕದಮನೆಯವರಾದ ಶ್ರೀ ನೀಲಕಂಠ ಪಾಠಕ್‌ (ಅವರ ಸರ್‌ನೇಮ್‌ ‘ಪಾಠಕ್‌’ ಎಂಬುದನ್ನು ಗಮನಿಸಿ; ಸ್ವಾತಂತ್ರ್ಯಯೋಧರೂ ಆಗಿದ್ದ ಅವರು ಈಗ ದಿವಂಗತರಾಗಿದ್ದಾರೆ) ಅವರು ದಂಡಪಾಠ ರೀತಿಯಲ್ಲಿ ‘ಅಸಿ ಮರುತಾಮ್‌ ಮರುತಾಮ್‌ ಓಜಃ ಓಜೋಪಾಮ್‌ ಅಪಾಮ್‌ ಧಾರಾಮ್‌ ಧಾರಾಮ್‌ ಭಿಂಧಿಃ ।। ಭಿಂಧಿ ಧಾರಾಮಪಾಮೋಜೊ ಮರುತಾಮಸಿ ಮಾರುತಮ್‌।।...’ ಮಂತ್ರವನ್ನು ಪಠಿಸುತ್ತಿದ್ದರು. ನಾನು ಹೈಸ್ಕೂಲ್‌ನಲ್ಲಿದ್ದಾಗ ಅವರಿಂದ ಆ ವೇದಪಾಠಕ್ರಮದ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಇಟ್ಟಿದ್ದೆ. ದಂಡಪಾಠ ರೀತಿಯಲ್ಲಿ ಆ ಮಂತ್ರವನ್ನು ಕಂಠಪಾಠ ಮಾಡಿದ್ದೆ, ಈಗಲೂ ನನಗದು ಪೂರ್ತಿಯಾಗಿ ಕಂಠ ಪಾಠವಿದೆ! ಸಂಸ್ಕೃತ, ವೇದ ಮತ್ತು ಅವುಗಳಲ್ಲಿನ ವಿಸ್ಮಯದ ಬಗ್ಗೆ ನನಗೆ ಇನ್ನೊಬ್ಬ ಮಾರ್ಗದರ್ಶಿಯೆಂದರೆ ನನ್ನ ಸೋದರಮಾವ ದಿ। ನಾರಾಯಣ ಕಾಕತ್ಕರ್‌. ಅವರು ಸಹ ಕೆಲ ಸೂಕ್ತಗಳನ್ನು ಜಟಾ, ಘನ ಇತ್ಯಾದಿ ಪಾಠಕ್ರಮಗಳಲ್ಲಿ ಪಠಿಸಬಲ್ಲವರಾಗಿದ್ದರು. ಶ್ರೀ ರಾಮಕೃಷ್ಣ ಮಿಷನ್‌ ಅವರ ‘ಸಸ್ವರ ವೇದಮಂತ್ರಾಃ’ ಕನ್ನಡಲಿಪಿಯ ಪುಸ್ತಕ ಮತ್ತು ‘ಮಂತ್ರಪುಷ್ಪಮ್‌’ ದೇವನಾಗರಿ ಲಿಪಿಯ ಪುಸ್ತಕಗಳು ನನ್ನ ಬಳಿ ಇದ್ದು ಅವುಗಳಲ್ಲಿ ಕೆಲವೇ ಕೆಲವು ಸೂಕ್ತಗಳನ್ನು ಜಟಾ, ಘನ ರೂಪಗಳಲ್ಲೂ ಕೊಟ್ಟಿದ್ದಾರೆ, ಕೆಲವೊಮ್ಮೆ ನಾನು ಅವನ್ನೂ ಹೀಗೆಯೇ ‘ಓದು’ವುದುಂಟು.

ಸರಿ, ನನ್ನಲ್ಲಿದ್ದ ಈ ಅರೆಬರೆ ಮಾಹಿತಿಯನ್ನೆಲ್ಲ ಕ್ರೋಡೀಕರಿಸಿ ಒಂದು ಲೇಖನವನ್ನು ತಯಾರಿಸಿ ವಿಚಿತ್ರಾನ್ನದಲ್ಲಿ ಬಡಿಸಬೇಕೆಂದು ನಿರ್ಧರಿಸಿದ ಮೇಲೆ ನನ್ನ ಮಾಡರ್ನ್‌ ಜ್ಞಾನಗಂಗೋತ್ರಿಯಾದ ಗೂಗಲ್‌ನಿಂದ ಇನ್ನಷ್ಟು ಮಾಹಿತಿಯನ್ನೂ ಸಂಕಲಿಸಿ ಆ ಲೇಖನವನ್ನು ಸಿದ್ಧಪಡಿಸಿದೆ. ಸಂಸ್ಕೃತ ಮಂತ್ರಗಳನ್ನೇ ಉದಾಹರಣೆಗೆ ಬಳಸಿದರೆ ಅರ್ಧಕ್ಕರ್ಧ ಜನ ಲೇಖನವನ್ನು ಓದುವುದನ್ನು ಬಿಟ್ಟುಬಿಡಬಹುದೆಂಬ ಮನವರಿಕೆಯಾದ್ದರಿಂದ ತುತ್ತೂರಿ ಪದ್ಯದ ಸಾಲನ್ನು ಆಯ್ದುಕೊಂಡೆ!

ಹಾಗಾಗಿ ಲೇಖನಕ್ಕೆ ಪ್ರೇರಣೆ ಆ ಸಿ.ಡಿ ಅಲ್ಲ ಎಂಬುದನ್ನು ಸಿಡಿಮಿಡಿಗೊಳ್ಳದೆ ತಿಳಿಸುತ್ತಿದ್ದೇನೆ ಒ - ಶ್ರೀವತ್ಸ ಜೋಶಿ)

*

Different recitation methods of ancient Veda manthras! This is an excellent and mind blowing article. I expect more articles of this nature, than articles mainly built on pun. Pun is your strength and weakness too. Sometimes you get deviated from agenda of article by pun. Hope you control pun than pun controlling you. In many articles you start promisingly and end it disappointingly (from readers perspective).

VidyaShankar; Bangalore

*

It is a wonderfull writing!

Purushottama Joshi; Mumbai

*

I really liked "bannada tagadina tuttoori" example you have used in the vicitraanna article about Vedamanthras. That is very creative.

Sheshadrivasu Chandrashekaran; New Jersey

*

Thank you very much for introducing this Different recitation methods ancient Veda manthras! & you have given a very good example for that. We are very happy to read this kind of articles from you. Thank you very much. Keepitup!

Rohini Mohan; Orlando, Florida

*

The article is very informative and different vedic styles of pronouncing is described with a simple example that can be understood by a layman also. Further, I wonder whats the scientific impact of such pronounciations?. somewhere I read/heard that it will influence our nervous system, particularly, how the vibrations of manthras influence our body/mind has to be addressed/understood. If you come to know of any details, please share with us.

Drs.D.M.Sagar; The Netherlands

*

Your article on Veda Recitation (training) is very good. Using "Bannada Tagadina Tootoori" as an example was very imaginative and is very informative. I enjoyed the article thoroughly. Keep it up.

A. R. Char; Maryland

*

That was amazing! I thouroughly enjoyed reading this article and found it very informative. I commend you on writing such a profound article on veda chanting using a nursery rhyme, "baNNada tagaDina tuttUri", as an example! It is also amazing to learn how the grand old RishiMunis memorized and passed it on to the next generation. They did not have to depend on any computer storage media. They just etched it in their memory! Thanks for a fine article,

Sandhya Ravindranath; California

*

I read todays Vichitranna. It is so amazing. Now I understand what it takes to become (or too make) a Veda Brahma. I am just wordless. It is very very informative, at the sametime makes me ponder what can we do to keep it going? What are we contributing to this? This Vedic System is our greatest ASSET and Absolute knowledge and we (All of us) are not doing enough to protect it. What can we do? How can we do our duties to our Dharma? Dharmo Rakshathi Rakshathah. This article, at the onset was interesting and as I read, it was very thought provoking. Is there a possibility to balance between this capitalistic life style and retain our values? These are just my concerns.

Once again, hats off. Nimage Namo Namah with lot of respect.

Srikanth Badari; Rockville, Maryland

*

I have been reading your columns. But, the one on learning of the Vedas was particularly good one. Thank you for thinking deeply into these aspects, analyzing and writing clearly about them.

Raju Govindaraju, Ph.D. Associate Professor; Boston

*

Very interesting. I had heard such recitals; but never knew that there are so many modules. Keep more such articles coming. thanks.

Dr. Vishnu. R. Bapat; Bangalore

*

Your article about Vedaadhyana in ThatsKannada.com is wonderful. Thanks for the information.

Swarna N.P; Bangalore

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more