ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವೃಷಭ ವಿಸರ್ಜಿತ’ ವ್ಯಾಖ್ಯಾನ

By Staff
|
Google Oneindia Kannada News

‘ವೃಷಭ ವಿಸರ್ಜಿತ’ ವ್ಯಾಖ್ಯಾನ
ಭೂಲೋಕ ವಾಸಿಗಳ ಬಾಯಿಂದ ‘ಬುಲ್‌ಶಿಟ್‌’ ಅನ್ನೋ ಪದವನ್ನು ಪದೇಪದೇ ಕೇಳಿ, ಶಿವಪ್ಪನ ಪರ್ಸನಲ್‌ ವೆಹಿಕಲ್‌ ಆದ ನಂದೀಶ್ವರ ರೋಸಿ ಹೋದ! ತನ್ನ ಒಡೆಯನ ಮುಂದೆ ನಿಂತು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ. ಆಗ ಶಿವಪ್ಪ ಏನ್‌ ಹೇಳಿದ ಅನ್ನೋದನ್ನು ವಿಚಿತ್ರಾನ್ನ-206ನೇ ಸಂಚಿಕೆಯಲ್ಲಿ ಓದಿ.. ಎಂಜಾಯ್‌ ಮಾಡಿ..

Srivathsa Joshi ಶ್ರೀವತ್ಸ ಜೋಶಿ

ಕೈಲಾಸವಾಸ ಗೌರೀಶ ಈಶನಿಗೆ ಸಂಸಾರತಾಪತ್ರಯಗಳು ನಮಗಿಂತಲೂ ಹೆಚ್ಚು. ಹೆಚ್ಚು ಅನ್ನೋದಕ್ಕಿಂತಲೂ ಅವನ ತಾಪತ್ರಯಗಳು ವಿಚಿತ್ರದವು, ವಿಭಿನ್ನವಾದುವು ಎನ್ನಬಹುದು. ಸವತಿಯರಾದ ಗಂಗೆ-ಗೌರಿಯರ ಬಗೆಹರಿಯದ ಕಚ್ಚಾಟವಂತೂ ಆಯ್ತೇ, ಅದರ ಮಧ್ಯೆ ಗಣಪ-ಸುಬ್ಬಣ್ಣರ ಕಿತಾಪತಿಗಳು ಉಪದ್ವ್ಯಾಪಗಳು ಒಂದಲ್ಲ ಎರಡಲ್ಲ.

ಎಷ್ಟೆಂದರೂ ಮಕ್ಕಳು, ಜಗಳಾಡ್ತಿರ್ತಾವೆ ಬಿಡಿ ಆಮೇಲೆ ಒಟ್ಟಿಗೇ ಆಟ ಆಡ್ಲಿಕ್ಕೆ ಶುರು ಮಾಡ್ತಾವೆ ಎಂದು ಸಮಾಧಾನ ತಂದುಕೊಳ್ಳುವಷ್ಟರಲ್ಲಿ ಅವರ ವಾಹನಗಳಾದ ಇಲಿ ಮತ್ತು ನವಿಲುಗಳದು ಏನಾದರೂ ರಂಪ ಆರಂಭವಾಗಿರ್ತದೆ. ಅದು ಮುಗಿದ ಮೇಲೆ ಶಿವನ ಟೈ ಆಗಿರುವ ಹಾವಿಗೂ ಗಣಪನ ಬೆಲ್ಟ್‌ ಆಗಿರುವ ಹಾವಿಗೂ ಬುಸುಗುಟ್ಟುತ್ತ ಜಗಳ. ಇವರದಾರೂ ತಂಟೆ ಇಲ್ಲ ಅಂತಾದರೆ ತಲೆಯಲ್ಲಿರುವ ಚಂದ್ರ ಸಾಕಷ್ಟು ತಲೆನೋವು ತರುತ್ತಾನೆ. ಬಹುಶಃ ಶಿವ ‘ತಲೆಕೆಟ್ಟು ತಿರುಕ’ನಾಗಿದ್ದು ಅದಕ್ಕೇ ಇರಬಹುದು.

ಇದ್ದದ್ದರಲ್ಲಿ ಶಿವನ ಪರ್ಸನಲ್‌ ವೆಹಿಕಲ್‌ ಆದ ನಂದಿಯೇ ವಾಸಿ. ಅವನದು ಮೊದಲಿಂದಲೂ ನೋ ಕ್ರಿಬ್ಬಿಂಗ್‌ ಸ್ವಭಾವ. ಒಂದಿಷ್ಟು ಫ‚ಾ್ಯಟ್‌ಫಿ‚್ರೕ ಬೈಹುಲ್ಲು ಮತ್ತು ಡಯಟ್‌ಕಲಗಚ್ಚು ಕೊಟ್ಟರೆ ದಿನವಿಡೀ ತೆಪ್ಪಗಿರುತ್ತಾನೆ. ಅದೊಂದೇ ನೆಮ್ಮದಿ ಶಿವನಿಗೆ.

ಹೀಗಿರಲು ಒಂದು ದಿನ ನಂದಿಯೂ ಬೇಸರದ ಮುಖಮಾಡಿ ಶಿವನ ಬಳಿಗೆ ಬಂದ. ಶಿವನಿಗೋ ಆಶ್ಚರ್ಯ - ಇವನಾದರೂ ಕಾಟಕೊಡದವನೆಂದುಕೊಂಡಿದ್ದರೆ ಈಗ ರಾಗ ಎಳೆಯತೊಡಗಿದ್ದಾನಲ್ಲ, ಎಲಾ ಇವನ! ಎಂದುಕೊಂಡೇ ‘‘ಏನಪ್ಪಾ ನಂದಿ, ನೀನು ನೊಂದಿದ್ದೇಕೆ?’’ ಎಂದು ಪ್ರಶ್ನಿಸಿದ ಚಂದ್ರಮೌಳಿ.

ನಂದಿಯ ಮುಖ ನಂದಿಹೋದ ದೀಪದಂತಿತ್ತು. ಉಕ್ಕಿ ಬರುತ್ತಿದ್ದ ದುಃಖವನ್ನು ತಾಳಲಾರದೆ ನಂದಿ ಬಿಕ್ಕುತ್ತಲೇ ತನ್ನ ಅಳಲನ್ನು ಒಡೆಯನ ಬಳಿ ನಿವೇದಿಸತೊಡಗಿದ :

‘‘ಮಹಾಪ್ರಭೂ... ನಿಮ್ಮಿಂದಾಗಲೀ, ನಿಮ್ಮ ಸಂಸಾರದ ಇತರರಿಂದಾಗಲೀ ಅಥವಾ ನಿಮ್ಮ ಗಣಗಳಿಂದಾಗಲೀ ನನಗೆ ಯಾವತ್ತೂ ಯಾವ ನಮೂನೆಯ ಕಿರುಕುಳವೂ ಆಗಿಲ್ಲ. ಆಬಗ್ಗೆ ನನ್ನ ಕಂಪ್ಲೇಂಟ್‌ ಏನೂ ಇಲ್ಲ. ಆದರೆ ಭೂಲೋಕದ ಮನುಷ್ಯರಿದ್ದಾರಲ್ಲ, ಅವರಿಂದ ನನಗೆ ಅವಮಾನವಾಗಿದೆ...’’

ಪರಮೇಶ್ವರ ಒಂದುಕ್ಷಣ ಯೋಚಿಸಿದ. ಭೂಲೋಕದ ಹಳ್ಳಿಗಳಲ್ಲಿ ಈಗಲೂ ಗದ್ದೆಉಳುಮೆಗೆ, ಗಾಣಕ್ಕೆ, ಏತನೀರಾವರಿಗೆ, ಗಾಡಿ ಎಳೆಯಲಿಕ್ಕೆ - ಹೀಗೆ ವಿವಿಧ ಕೆಲಸಗಳಿಗೆ ಮನುಷ್ಯರು ಎತ್ತುಗಳನ್ನು ಉಪಯೋಗಿಸುತ್ತಿರುವುದರಿಂದ ಆಬಗ್ಗೆ ನಂದಿಯ ದೂರು ಇರಬಹುದೇ ಎಂದುಕೊಂಡ. ‘‘ಮನುಷ್ಯರು ನಿನ್ನ ಸಹೋದರರನ್ನೆಲ್ಲ ಮೈಮುರಿದು ದುಡಿಯುವಂತೆ ಮಾಡಿ ಸತಾಯಿಸುತ್ತಾರೆಂದು ತಾನೆ ನಿನ್ನ ಅಳಲು?’’ ಎಂದು ನಂದಿಯನ್ನು ಪ್ರಶ್ನಿಸಿದ.

‘‘ಇಲ್ಲ ಸ್ವಾಮಿ, ಹಾಗೇನೂ ಇಲ್ಲ. ‘ಗಾಣದೆತ್ತಿನಂತೆ ದುಡಿಯುವುದು’ ಎಂಬ ಗಾದೆಯಾದರೂ ಹುಟ್ಟಿದೆಯಲ್ಲ. ದುಡಿಯುವುದಕ್ಕೇನೂ ತೊಂದರೆಯಿಲ್ಲ. ನನ್ನ ಕಂಪ್ಲೇಂಟ್‌ ಬೇರೆಯೇ...’’ ಎಂದ ನಂದಿ.

‘‘ಮತ್ತೆ? ದುಡಿಸಿ ದುಡಿಸಿ ಉಪಯೋಗಕ್ಕೆ ಬಾರದು ಎಂದಾದ ಮೇಲೆ ಸ್ಲಾಟರ್‌ಹೌಸ್‌ಗೆ ಕಳಿಸಿ ಕೊಂದುಹಾಕುತ್ತಾರೆಂದು ದುಃಖವೇ?’’ - ಪರಶಿವನ ಪ್ರಶ್ನೆ.

‘‘ನೋ, ದಟ್ಸ್‌ ಆಲ್ಸೊ ಓಕೆ. ಆಫ‚್ಟರಾಲ್‌ ’ಜಾತಸ್ಯ ಮರಣಂ ಧ್ರುವಂ’ ಅಲ್ಲವೆ? ಹುಟ್ಟಿದವರು ಒಂದಲ್ಲ ಒಂದುದಿನ ಸಾಯಲೇಬೇಕು. ಸಂತೋಷದಿಂದಲೇ ಸಾಯೋಣವಂತೆ, ಅದಕ್ಯಾಕೆ ಚಿಂತೆ!’’ ಎಂದು ಗೋಣಲ್ಲಾಡಿಸಿದ ನಂದಿ.

‘‘ಹಾಗಿದ್ರೆ ‘ಬಸವ’ ಆಡಿಸುವವ ಒಂದು ಎತ್ತಿಗೂ ಜತೆಯಲ್ಲಿರುವ ಹೆಣ್ಣುಕರುವಿಗೂ ಮಾಲೆ ಹಾಕಿ ರಾಮ-ಸೀತೆಯರ ಮದುವೆ ಎಂದು ಬೀದಿನಾಟಕಮಾಡಿ ಮಕ್ಕಳನ್ನು ರಂಜಿಸುತ್ತಾನೆಂದು ನಾಚಿಕೆ-ಅವಮಾನಗಳೇ? ಅಥವಾ ಫ‚ಾ್ರನ್ಸ್‌ನಲ್ಲಿ ಬುಲ್‌-ರೇಸ್‌, ಬುಲ್‌-ಫ‚ೈಟ್‌ ಮಾಡಿಸಿ ಮೋಜು ಮಾಡುತ್ತಾರೆಂದೇ?’’ - ಶಿವ ಕೇಳಿದನು, ನಂದಿಯ ಅಸಲೀ ಸಮಸ್ಯೆಯೇನು ಎಂದು ಒಂದೂ ಅರ್ಥವಾಗದವನಂತೆ.

‘‘ಛೇ! ಎಲ್ಲಾದರೂ ಉಂಟೇ? ಮಕ್ಕಳಿಗೆ ಮನರಂಜನೆ ಆಗುತ್ತದಾದರೆ ರಾಮ-ಸೀತೆ ಮದುವೆ ಆಟ ಆಡೋದು, ಬುಲ್‌ರೇಸೂ, ಬುಲ್‌ಫ‚ೈಟೂ ನಮಗೂ ಇಷ್ಟವೇ. ನನ್ನ ಸಮಸ್ಯೆ ಅದಲ್ಲ. ನಿಜ ಹೇಳಬೇಕೆಂದರೆ ನನ್ನ ಸಮಸ್ಯೆಯನ್ನು ನಿಮ್ಮ ಬಳಿ ಹೇಳಲಿಕ್ಕೇ ಸ್ವಲ್ಪ ನಾಚಿಕೆ-ಸಂಕೋಚ ಆಗ್ತಿರೋದೇ ಹೊರತು ರಾಮ-ಸೀತೆ ಮದುವೆಯಾಟದಲ್ಲೇನೂ ನಾಚಿಕೆಯಿಲ್ಲ...’’ - ನಂದಿ ಉವಾಚ.

‘‘ಹೇಳಲು ನಾಚಿಕೆಯೆನಿಸುವ ಸಮಸ್ಯೆ ಅದೇನೋ ನನಗಂತೂ ಗೊತ್ತಾಗದು. ಬೇಗ ಹೇಳಿ ಇಲ್ಲಿಂದ ಜಾಗಖಾಲಿ ಮಾಡು!’’ - ಮುಕ್ಕಣ್ಣನೆಂದ ಸ್ವಲ್ಪ ಸಿಡುಕಿನಿಂದಲೇ.

ಇನ್ನು ಬಾಯ್ಬಿಡದಿದ್ದರೆ ಕೋಪಗೊಂಡು ಮೂರನೇ ಕಣ್ಣು ತೆರೆದು ಸುಟ್ಟೇಬಿಟ್ಟಾನು ಎಂದು ಭಯಪಟ್ಟ ನಂದಿ ‘‘ಅದೇ ಮಹಾಪ್ರಭೂ... ಮನುಷ್ಯರು ಅದರಲ್ಲೂ ಇಂಗ್ಲಿಷ್‌ ಮಾತಾಡುವವರು (ಮತ್ತು ಇಂಗ್ಲಿಷ್‌ ಮಾತಾಡುವವರನ್ನು ಅನುಕರಿಸುವವರು) ಸತ್ಯದಂತೆ ತೋರುವ ಸುಳ್ಳಿನ ಕಂತೆಗಳನ್ನು ನನ್ನ ಮಲಕ್ಕೆ ಹೋಲಿಸಿ ನನಗೆ ಅವಮಾನ ಮಾಡ್ತಿರ್ತಾರೆ...’’ ಎಂದು ತನ್ನ ನೋವನ್ನು ತೋಡಿಕೊಂಡ.

Bull shit! - ಜಗದೊಡೆಯ ಜಗದೀಶ್ವರನ ಬಾಯಿಂದಲೂ ಅದೇ ಮಾತು ಹೊರಡಬೇಕೆ!! ಪರಮೇಶ್ವರನೇ ಹಾಗೆ ಹೇಳಿದ್ದನ್ನು ಕೇಳಿದ ನಂದಿಗೆ ಗಾಯದ ಮೇಲೆ ರುಚಿಗೆ ತಕ್ಕಷ್ಟು ಐಯಾಡೈಜ್ಡ್‌ ಉಪ್ಪು ಉದುರಿಸಿದಂತಾಯಿತು. ಆದರೂ ಸಾವರಿಸಿಕೊಂಡು ತನ್ನ ಮನದಾಳದಿಂದ ನೋವನ್ನೆಲ್ಲ ಹೊರಗೆಡಹಿ ನಾನ್‌ಸ್ಟಾಪ್‌ ಆಗಿ ವಿಷದೀಕರಿಸಿದ:

‘‘ಆಕಳಿನ ಸೆಗಣಿಗಾದರೆ ಅಷ್ಟೊಂದು ಗೌರವವಿರುವಾಗ, ನನ್ನದಕ್ಕೆ ತಾತ್ಸಾರ ಮಾಡುವುದು ಯಾಕೆ? ‘ಕೌಡಂಗ್‌’ನ್ನು ಪೂಜ್ಯಭಾವದಿಂದ ಕಾಣುವವರು ‘ಬುಲ್‌ಶಿಟ್‌’ ಎಂದರೆ ಹೀಗಳೆಯುವುದೇಕೆ? ಅಷ್ಟೇ ಅಲ್ಲದೆ ಹೋಗಿಹೋಗಿ ಮನುಷ್ಯರ ಹಸಿಸುಳ್ಳಿನ ಕಂತೆಗಳನ್ನು ಬುಲ್‌ಶಿಟ್‌ ಎನ್ನುವುದೇಕೆ? ಈಗೀಗಂತೂ ಬುಲ್‌ಶಿಟ್‌ ಎಂಬ ಪದಪ್ರಯೋಗ ಎಷ್ಟು ಕಾಮನ್‌ ಆಗಿಬಿಟ್ಟಿದೆಯೆಂದು ಎಣಿಸಿಕೊಂಡರೇ ಬೇಜಾರಾಗುತ್ತದೆ...’’

ನಂದಿಯ ಆರ್ಗ್ಯುಮೆಂಟ್‌ನಲ್ಲಿ ಅಂಥದ್ದೇನೂ ಹುರುಳಿಲ್ಲ ಅನಿಸಿತು ಶಿವನಿಗೆ. ಬುಲ್‌ಶಿಟ್‌ ಎಂದಮಾತ್ರಕ್ಕೇ ಅದರಲ್ಲಿ ಅವಮಾನವಾಗೋದೇನಿದೆ? ಆದರೂ ನಂದಿ ಮಾತ್ರ ಪಟ್ಟುಹಿಡಿದು ಕುಳಿತಿದ್ದ. ಅವನು ಈ ಅಹವಾಲನ್ನು ಶಂಭೋಶಂಕರನ ಬಳಿಗೆ ತರುವ ಮೊದಲು ಸಾಕಷ್ಟು ತಯಾರಿಗಳನ್ನು ನಡೆಸಿದ್ದ; ಟಿಪ್ಪಣಿಗಳನ್ನು ಮಾಡಿಕೊಂಡಿದ್ದ. ಒಂದಿಷ್ಟು ವೆಬ್‌ರೆಫ‚ರೆನ್ಸ್‌ಗಳನ್ನೂ ಹೈಪರ್‌ಲಿಂಕ್‌ಗಳನ್ನೂ ನೋಟ್‌ ಮಾಡಿಟ್ಟುಕೊಂಡಿದ್ದ. ಅವನ್ನೆಲ್ಲ ಒಂದೊಂದಾಗಿ ಹೊರತೆಗೆದು ತೋರಿಸಿದ.

‘‘ನೋಡಿ ಪ್ರಭೂ, ಇವನ್ಯಾರೋ ಹ್ಯಾರಿ ಎಂಬುವವ ಬುಲ್‌ಶಿಟ್‌ ಬಗ್ಗೆ ಪ್ರೌಢಪ್ರಬಂಧ ಬರೆದಿದ್ದಾನೆ. ಇಲ್ಲಿ ನೋಡಿ’’ ಎಂದಾಗ ಶಿವನಿಗೆ ಆಶ್ಚರ್ಯ. ‘‘ಯಾರು? ನಮ್ಮ ಶ್ರೀಹರಿ ಸಹ ನಿನ್ನ ಬಗ್ಗೆ ತಮಾಷೆ ಮಾಡಿದ್ನಾ?’’ ಎಂದು ಕೇಳಿದ, ನಂದಿಯನ್ನು ಛೇಡಿಸಲೆಂಬಂತೆ.

‘‘ಅಲ್ಲ ಮಹಾಪ್ರಭೂ. ಶ್ರೀಹರಿಯಲ್ಲ. ಹ್ಯಾರಿ ಜಿ ಫ‚ಾ್ರಂಕ್‌ಫ‚ರ್ಟ್‌ ಎಂಬುವವ ಪ್ರಿನ್ಸ್‌ಟನ್‌ ಯುನಿವರ್ಸಿಟಿಯಲ್ಲಿ ಫಿಲಾಸಫಿ ಪ್ರೊಫ‚ೆಸರ್‌ ಅಂತೆ. 1986ರಲ್ಲೇ ಬುಲ್‌ಶಿಟ್‌ ಬಗ್ಗೆ ಯಾವುದೋ ಒಂದು ಮ್ಯಾಗಜಿನ್‌ನಲ್ಲಿ ಅವನೊಂದು ಮಹಾಪ್ರಬಂಧ ಬರೆದಿದ್ದಾನೆ. ಅದರ ಶೀರ್ಷಿಕೆಯನ್ನೂ On Bullshit ಎಂದು ಕೊಟ್ಟಿದ್ದಾನೆ; ಪ್ರಬಂಧದ ಮೊಟ್ಟಮೊದಲ ವಾಕ್ಯದಲ್ಲೇ One of the most salient features of our culture is that there is so much bullshit... ಎಂದು ಬೋಲ್ಡಾಗಿ ಬರೆದಿದ್ದಾನೆ! ಮುಂದೆ ಈ ಪ್ರಬಂಧದಲ್ಲಿ ಬುಲ್‌ಶಿಟ್‌ ಎಂದರೆ ಏನು, ಅಪ್ಪಟ ಸುಳ್ಳಿಗಿಂತ ಅದು ಹೇಗೆ ಭಿನ್ನ, ಬುಲ್‌ಶಿಟ್‌ ಅನ್ನೋದು ಒಂದು ಎಂಡ್‌ಪ್ರಾಡಕ್ಟ್‌ ಮಾತ್ರ ಅಲ್ಲ ಅದೊಂದು ಪ್ರೊಸೆಸ್‌ ಕೂಡ... ಇತ್ಯಾದಿತ್ಯಾದಿ ಕೊರೆದಿದ್ದಾನೆ. ಅವನ ಪ್ರಬಂಧ ಸಾಕಷ್ಟು ಜನಪ್ರಿಯವಾದ ಮೇಲೆ ಅದನ್ನೊಂದು ಪುಸ್ತಕವಾಗಿ ಪ್ರಕಟಿಸಿದ್ದಾನೆ!’’

‘‘ಹೋಗಲಿ ಬಿಡು, ಅವನೊಬ್ಬ ತತ್ವಜ್ಞಾನಿ ಪ್ರಾಧ್ಯಾಪಕ. ಬುಲ್‌ಶಿಟ್‌ ಬಗ್ಗೆ ತನಗೆ ತಿಳಿದಷ್ಟನ್ನು ಇತರ ಹುಲುಮಾನವರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾನೆ. ಅದನ್ನು ನೀನು ಅಷ್ಟೊಂದು ಪರ್ಸನಲ್‌ ಆಗಿ ತಗೊಳ್ಳೋ ಅವಶ್ಯಕತೆಯಿಲ್ಲ...’’ ಎಂದು ನಂದಿಯನ್ನು ಸಮಾಧಾನಿಸುವ ಪ್ರಯತ್ನ ಶಿವನದು.

‘‘ಆ ಒಬ್ಬ ಪ್ರೊಫ‚ೆಸರ್‌ ಅಷ್ಟೇ ಅಲ್ಲ ಪ್ರಭೂ, ಇಲ್ನೋಡಿ ಜಗದ್ವಿಖ್ಯಾತ ಎಂ.ಐ.ಟಿಯ ಕೆಲ ಕಿಡಿಗೇಡಿ ಸ್ಟೂಡೆಂಟ್ಸು ಸೇರಿ ‘ಬುಲ್‌ಶಿಟ್‌ ಗಜೆಟ್‌’ ಎಂಬ ವೆಬ್‌ಸೈಟ್‌ ಮಾಡಿದ್ದಾರೆ. ಅದರಲ್ಲಿ ಸರ್ವಂ ಬುಲ್‌ಶಿಟ್‌ಮಯಂ. ಅವರ ಪ್ರಕಾರ ಬುಲ್‌ಶಿಟ್‌ ಅಧ್ಯಯನಕ್ಕೇ ಒಂದು ಹೊಸ ಶಾಖೆ ಇದೆಯಂತೆ Tauroscatology ಎಂದು. ಈ ಮೆಸ್ಸಾಚುಸೆಟ್ಸ್‌ ಇನ್ಸ್ಟಿಟ್ಯೂಟ್‌ ಆಫ‚್‌ ಟೌರೊಸ್ಕಾಟೊಲೊಜಿ ಯವರೆಲ್ಲ ಬುದ್ಧಿವಂತರೇನೊ ಹೌದು, ಆದರೆ ಆ ಬುದ್ಧಿವಂತಿಕೆಯನ್ನು ಇಂಥದಕ್ಕಾ ಉಪಯೋಗಿಸೋದು?’’ - ನಂದಿಯ ವಾದ ಮುಂದುವರಿಯಿತು.

ನಂದಿ ಇಷ್ಟೆಲ್ಲ ಹೋಮ್‌ವರ್ಕ್‌ ಮಾಡಿಟ್ಟಿದ್ದಾನೆಂದು ಅಂದುಕೊಂಡಿರಲಿಲ್ಲ ಶಿವ. ‘‘ಮುಂದ?’’ ಎಂದ ‘ರಾಮಶಾಮಭಾಮ’ದ ಕಮಲಹಾಸನ್‌ನಂತೆ.

‘‘ಇಲ್ಲಿ ಇನ್ನೊಂದಿದೆ. ಇದು ’ಬುಲ್‌ಶಿಟ್‌ ಬಿಂಗೊ’ ಎಂಬ ಒಂದು ಆಟವಂತೆ, ಹೌಸಿ-ಒಸಿ ಇದ್ದಹಾಗೆ. ಮೀಟಿಂಗ್‌ಗಳಲ್ಲಿ, ಸೆಮಿನಾರ್‌ಗಳಲ್ಲಿ ತೂಕಡಿಕೆ ನಿದ್ದೆ ಬರದಂತೆ ಸುಲಭೋಪಾಯ. ಮೀಟಿಂಗ್‌ನಲ್ಲಿ ಮೊಳಗುತ್ತಲೇ ಇರುವ ಮ್ಯಾನೇಜ್‌ಮೆಂಟ್‌ ಜಾರ್ಗನ್‌ ಪದಗಳನ್ನು ಬಿಂಗೊ ಟಿಕೆಟ್‌ನಂತೆ ಪ್ರಿಂಟ್‌ ಮಾಡಿ, ಒಂದೊಂದು ಪದವೂ ಮೀಟಿಂಗಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಟಿಕ್‌ಆಫ‚್‌ ಮಾಡಬೇಕು. ಐದು ಪದಗಳ ಸಾಲು ಅಥವಾ ಸ್ತಂಭವನ್ನು ಮೊದಲು ಯಾರು ಕಂಪ್ಲೀಟ್‌ ಮಾಡುತ್ತಾರೊ ಅವರು ಎದ್ದುನಿಂತು ‘ಬುಲ್‌ಶಿಟ್‌!’ ಎಂದು ಗಟ್ಟಿಯಾಗಿ ಕಿರುಚಬಹುದು! ಈ ಆಟದ ಕಲ್ಪನೆಯೇನೋ ನನಗೂ ನಗು ತಂದಿತು, ಆದರೆ ಮತ್ತೆ ಬುಲ್‌ಶಿಟ್‌ ಅಂತ ಇರೋದನ್ನು ಊಹಿಸಿದ ಕೂಡಲೇ ಅಳು... ಏನಾದ್ರೂ ಮಾಡಿ ಇದನ್ನು ನಿಲ್ಲಿಸಬೇಕು ಮಹಾಪ್ರಭೂ...’’ - ನಂದಿ ಗೋಗರೆದ.

‘‘ಈ ಆಟ ಸಕ್ಕತ್ತಾಗಿದೆ. ನನ್ನ ಗಣಗಳಿಗೆ ನಾನು ಆಜ್ಞೆಕೊಡುವ ಮೀಟಿಂಗ್‌ಗಳಲ್ಲಿ ಉಪಯೋಗಕ್ಕೆ ಬರಬಹುದು. ಗಂಗೆ-ಗೌರಿ-ಗಣಪ-ಸುಬ್ಬಣ್ಣ- ಚಂದ್ರ-ಇಲಿ-ನವಿಲು-ಹಾವುಗಳ ನನ್ನ ಸಂಸಾರಕ್ಕೂ ಟೈಂಪಾಸ್‌ಗೆ ಒಳ್ಳೇ ಐಡಿಯಾ!’’ - ಈಶ್ವರ ಉವಾಚ.

ನಂದಿ ಕಂಟಿನ್ಯೂಡ್‌ - ‘‘ನಿಜ್ವಾಗ್ಲೂ ಹೇಳ್ತೇನೆ ಸ್ವಾಮೀ. ಭೂಲೋಕದಲ್ಲಿ ಈಗ ಬುಲ್‌ಶಿಟ್‌ ಎಷ್ಟು ಗಬ್ಬೆಬ್ಬಿಸಿದೆಯೆಂದರೆ ರಾಜಕಾರಣಿಗಳ ಉಕ್ತಿಗಳೆಲ್ಲ ಬೈ-ಡಿಫ‚ಾಲ್ಟ್‌ ಬುಲ್‌ಶಿಟ್‌ ಅಂತ ಇವತ್ತು ಹುಟ್ಟಿದ ಮಗುವಿಗೆ ಸಮೇತ ಗೊತ್ತು. ತಥಾಕಥಿತ ಸೂಪರ್‌ಪವರ್‌ ಅಮೆರಿಕದ ಈಗಿನ ಅಧ್ಯಕ್ಷನ ಅಧ್ವಾನಗಳನ್ನು ಬುಷ್‌ಶಿಟ್‌ ಎಂದು ಮುದ್ರಿಸಿ ಅದು ‘ಬುಲ್‌ಶಿಟ್‌’ ಎಂದಿರಬೇಕಿತ್ತು ಎನ್ನುತ್ತವಂತೆ ಪತ್ರಿಕೆಗಳು. ವಿಕಿಪಿಡಿಯಾದಲ್ಲಿ ಬುಲ್‌ಶಿಟ್‌ ಬಗ್ಗೆಯೇ ಒಂದು ಪೇಜ್‌ ಇದೆ! ಇನ್ನು, ಪಬ್ಲಿಕ್‌ಸ್ಪೀಕಿಂಗ್‌ ಕೋರ್ಸ್‌ನವರು ಏನಂತ ಕಲ್ಸಿಕೊಡ್ತಿದ್ದಾರೆ ಗೊತ್ತಾ? If you cant dazzle them with your brilliance, baffle them with your bullshit!

‘‘ನಂದಿ, ಟೇಕ್‌ ಇಟ್‌ ಈಜಿ, ಮಂದಿ ಏನಾದ್ರೂ ಅನ್ಲಿ ಬಿಡು, ಅದು ಅವರವರ ಸಿ(ಶಿ)ಟ್ಟೇ ಹೊರತು ನೀನು ಅದನ್ನು ನಿನ್ನದೆಂದು ತಲೆಗೆ ಹಚ್ಚಿಕೊಳ್ಳಬೇಡ. ನಿನ್ನ ಕೆಲಸ ನೀನು ಮಾಡ್ಕೊಂಡಿರು’’ ಎಂದಷ್ಟೇ ಶಿವನ ಉತ್ತರ.

ಅಂತೂ ತನ್ನ ಮೇಲೆ ಅನುಕಂಪ ತೋರಿಸುವ ಪರಿಹಾರೋಪಾಯದ ಯಾವೊಂದು ವಿಚಾರವೂ ಶಿವನಿಂದ ಬರುವ ಸೂಚನೆ ಕಂಡುಬರಲಿಲ್ಲವಾಗಿ ನಂದಿ ನಿರ್ಧರಿಸಿಬಿಟ್ಟ. ಹ್ಯಾರಿ ಜಿ ಫ‚ಾ್ರಂಕ್‌ಫರ್ಟ್‌ ಅಂದಿದ್ದು ನಿಜ. ಬುಲ್‌ಶಿಟ್‌ ಈಗ ಭೂಲೋಕದಲ್ಲಿ ಹಾಸುಹೊಕ್ಕಾಗಿರುವುದರಿಂದ ಅದನ್ನು ಕಿತ್ತೊಗೆಯುವುದು ಕಷ್ಟವೇ ಇದೆ. ಆದರೆ ಸ್ವಲ್ಪವಾದರೂ ಬದಲಾವಣೆ ತರಲು, ಅಂದರೆ ಬುಲ್‌ಶಿಟ್‌ ಬುಲ್‌ಶಿಟ್‌ ಎಂದು ಕೇಳುವುದನ್ನು ಕಡಿಮೆ ಮಾಡಲು ಏನು ಮಾಡಬಹುದೆಂದರೆ ಅದಕ್ಕೆ ಭಾರತೀಯ ರೂಪವನ್ನು ಕೊಡಬಹುದು. ಬುಲ್‌ಶಿಟ್‌ ಎನ್ನುವ ಬದಲು ಸುಸಂಸ್ಕೃತವಾಗಿ ‘ವೃಷಭ ವಿಸರ್ಜಿತ’ ಎಂದರೆ ಅದಕ್ಕೆ ಸ್ವಲ್ಪ ಗಾಂಭೀರ್ಯವಾದರೂ ಬರಬಹುದು.

ಆಬಗ್ಗೆ ಶಿವನ ಸಮ್ಮತಿಯನ್ನು ಕೇಳೋಣವೆನ್ನಿಸಿ, ‘‘ಮಹಾಪ್ರಭೂ, ಇನ್ನು ಮುಂದೆ ಭೂಲೋಕವಾಸಿಗಳು ಬುಲ್‌ಶಿಟ್‌ ಎಂಬ ಪದಪ್ರಯೋಗದ ಬದಲು ‘ವೃಷಭ ವಿಸರ್ಜಿತ’ ಎಂದು ಬಳಸಬೇಕು ಎಂಬ ಆಜ್ಞೆಯನ್ನಾದರೂ ಹೊರಡಿಸುತ್ತೀರಾ?’’ ಎಂದು ನಂದಿ ಕೇಳಿದಾಗ ಶಿವನ ಉದ್ಗಾರ ಏನಿರಬಹುದು ಯೋಚಿಸಿ!

ನಿಮ್ಮ ಉತ್ತರವೇ ಇವತ್ತಿನ ವಿಚಿತ್ರಾನ್ನ ಸಂಚಿಕೆಯ ಬಗ್ಗೆ ನಿಮ್ಮ ಫಿ‚ೕಡ್‌ಬ್ಯಾಕೂ ಆಗಬಹುದು! ಈಮೈಲ್‌ ಕಳಿಸುವುದಿದ್ದರೆ ಅದರ ಸಬ್ಜೆಕ್ಟೂ ಆಗಬಹುದು!!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X