ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಬು ಕಿಸೆಯಾಳಗೊ ಕಿಸೆಯು ಜೇಬೊಳಗೊ...

By Staff
|
Google Oneindia Kannada News


ಜೇಬು ಚರಿತ್ರೆಯನ್ನು ನಾವು pocket ಎಂಬ ಪದದ ವ್ಯಾಖ್ಯೆಯಾಂದಿಗೆ ಆರಂಭಿಸೋಣ. ನಿಖರವಾದ ಅರ್ಥದ ಪ್ರಕಾರ ಪೊಕೆಟ್‌ ಅಂದರೆ a small baglike attachment. ಈ ಡೆಫಿ‚ನಿಶನ್‌ ಏಕೆಂದರೆ ಆರಂಭದಲ್ಲಿನ ಪೊಕೆಟ್‌ಗಳು ಇವತ್ತಿದ್ದಂತೆ ಶರ್ಟ್‌ ಅಥವಾ ಪ್ಯಾಂಟ್‌ಗೆ ಹೊಲಿದು ಜೋಡಿಸಿದ್ದಾಗಿರಲಿಲ್ಲ. ಬದಲಿಗೆ, ಉಡುಪನ್ನು ಧರಿಸಿದ ನಂತರ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಒಂದು ಪುಟ್ಟ ಚೀಲವನ್ನೇ ಪೊಕೆಟ್‌ ಎನ್ನುತ್ತಿದ್ದದ್ದು. ನಮ್ಮೂರಲ್ಲಿ ಕೂಲಿಕಾರ್ಮಿಕರು ಎಲೆಅಡಿಕೆ (ತುಳುಭಾಷೆಯಲ್ಲಿ ‘ಬಚ್ಚಿರೆಬಜ್ಜಾಯಿ’) ಚೀಲವನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿರಲಿಲ್ಲವೆ, ಅಂಥದ್ದೇ. ಅದೇ ಆಗಿನ ಕಾಲದ ಪೊಕೆಟ್‌.

ಆಂಗ್ಲೊ-ನಾರ್ಮನ್‌ ಪದವಾದ pokete, ಹಳೇ ಇಂಗ್ಲಿಷ್‌ ಪದವಾದ pocca, ಜರ್ಮನ್‌ ಪದವಾದ bag - ಇವೆಲ್ಲ ಪೊಕೆಟ್‌ನ ಬೇರುಗಳು. ಪೊಕೆಟ್‌ನ ಸ್ತ್ರೀಲಿಂಗ ರೂಪವೋ ಎಂಬಂತಿರುವ purse ಸಹ ಇವೇ ಪದಮೂಲಗಳಿಂದ ಹುಟ್ಟಿದ್ದು. ಸ್ಕಾಟಿಶ್‌ ಪದ sporran, ಐರಿಶ್‌ ಪದ sparan, ಲ್ಯಾಟಿನ್‌ ಪದ bursa ಗಳಿಂದ ಬಂದಿರುವುದು ಪರ್ಸ್‌.

ಇಲ್ಲೊಂದು ಸ್ವಾರಸ್ಯವಿದೆ, ಅಮೆರಿಕದಲ್ಲಿ ‘ಪರ್ಸ್‌’ ಎಂದರೆ ಹೆಂಗಸರು ಉಪಯೋಗಿಸುವ ಪುಟ್ಟ ಚೀಲ. ಗಂಡಸರಾರಾದರೂ I have lost my purse ಎಂದು ದೂರುಕೊಟ್ಟರೆ ಅವರನ್ನು ಆಪಾದಮಸ್ತಕ ನೋಡಬಹುದು. ಗಂಡಸರ ಪಾಕೀಟನ್ನು wallet ಎನ್ನಬೇಕು, ಹೆಂಗಸರದಾದರೆ purse.

ಸರಿ, ಪೊಕೆಟ್‌ ಚರಿತ್ರೆಯನ್ನು ಮುಂದುವರಿಸುತ್ತ... ಈ ಪುಟ್ಟಚೀಲವನ್ನು ಉಡುಪಿನ ಮೇಲೆ ಸೊಂಟಕ್ಕೆ ಕಟ್ಟಿಕೊಳ್ಳುವುದರಿಂದ ಮತ್ತು ಅದರಲ್ಲಿ ದುಡ್ಡು ಇತ್ಯಾದಿ ವಾಲ್ಯುವೇಬಲ್ಸ್‌ ಇಡುವುದರಿಂದ ಕಳ್ಳಕಾಕರಿಗೆ (’ಪಿಕ್‌ಪೊಕೆಟ್‌’ ಪ್ರವೀಣರಿಗೆ) ಮುಕ್ತಆಹ್ವಾನ ಕೊಟ್ಟಂತಲ್ಲವೇ? ಅದಕ್ಕಾಗಿ, ಜಾಣರಾದವರು ಜಾಗರೂಕತೆಯುಳ್ಳವರು ಪುಟ್ಟಚೀಲವನ್ನು ಉಡುಪಿನೊಳಗೆ ಕಟ್ಟಿಕೊಳ್ಳತೊಡಗಿದರು. ಆದರೆ ಆಗಲೂ ಸಮಸ್ಯೆಯೇ. ಕ್ವಿಕ್ಕಾಗಿ ಅದರಿಂದ ದುಡ್ಡು ತೆಗೆಯಬೇಕೆಂದರೂ ಕಷ್ಟವೇ! ಒಮ್ಮೆ ಊಹಿಸಿಕೊಳ್ಳಿ. ಅಂಗಡಿಯಲ್ಲಿ ಸೇಬುಹಣ್ಣು ಖರೀದಿಸಿ ದುಡ್ಡುಕೊಡಬೇಕಾಗಿ ಬಂದಾಗ ಪ್ಯಾಂಟ್‌ ಕೆಳಗೆಜಾರಿಸಿ ಮಾರ್ಕೆಟ್‌ಗೆಲ್ಲ ವಿಶ್ವರೂಪದರ್ಶನ ಮಾಡಿಸಿ (ಆಗೆಲ್ಲ ‘ಅಂಡರ್‌ಗಾರ್ಮೆಂಟ್ಸ್‌’ ಅನ್ನೋದೂ ಇರಲಿಲ್ಲವಷ್ಟೆ?) ದುಡ್ಡಿನಚೀಲ ತೆಗೆಯೋದೇ? ಛೀ!

ಮುಂದಿನ ಹಂತವಾಗಿ ಪುಟ್ಟಚೀಲವನ್ನು ಉಡುಪಿನೊಳಗೇ ಜೋಡಿಸಿ ಹೊಲಿಯುವುದು ಮತ್ತು ಅದರ ಬಾಯಿಯನ್ನು ತೆರೆದಿಟ್ಟು, ಉಡುಪು ತೆಗೆಯದೇ ಚೀಲದಿಂದ ವಸ್ತುಗಳನ್ನು ತೆಗೆದುಕೊಳ್ಳುವಂಥ ಅನುಕೂಲವನ್ನು ಕಲ್ಪಿಸುವುದು - ಈ ರಿವಾಜು ಶುರುವಾಯಿತು. ಇದೇ ಇಂದಿನ ನಮ್ಮ ಪ್ಯಾಂಟ್‌ಗಳ (ಮತ್ತು ಸ್ಕರ್ಟ್‌ಗಳ ಕೂಡ?) ಸೈಡ್‌ ಓಪನಿಂಗ್‌ ಪೊಕೆಟ್‌.

ಕಾಲಕ್ರಮೇಣ ಸೈಡ್‌ಪೊಕೆಟ್‌ನಂತೆಯೇ ಪ್ಯಾಂಟಿನ ಮುಂಭಾಗ ಮತ್ತು ಹಿಂಭಾಗಕ್ಕೆ ಪೊಕೆಟ್‌ಗಳನ್ನು ಜೋಡಿಸುವ ಫ‚ಾ್ಯಷನ್‌ ಹುಟ್ಟಿಕೊಂಡಿತು. ಪೊಕೆಟ್‌ಗಳ ಮೇಲೆ ಅಂದಚೆಂದದ ಕಸೂತಿ ಕುಸುರಿಕೆಲಸ ಮಾಡಿ ಅವನ್ನು ಆಕರ್ಷಕವಾಗಿಸುವ ಪದ್ಧತಿಯೂ ಶುರುವಾಯಿತು. ಪೊಕೆಟ್‌ನೊಳಗೆ ದುಡ್ಡು ಎಷ್ಟಿದೆ ಎನ್ನುವುದು ವ್ಯಕ್ತಿಯ ಅಂತಸ್ತಿನ ಮಾನದಂಡವಾದರೆ ಅವನ ಪೊಕೆಟ್‌ನ ಬಾಹ್ಯಸೌಂದರ್ಯ ಹೇಗಿದೆ ಎನ್ನುವುದೂ ಗಮನಾರ್ಹವಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X