• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೇಬು ಕಿಸೆಯಾಳಗೊ ಕಿಸೆಯು ಜೇಬೊಳಗೊ...

By Staff
|


ಮುಘಲ್‌ ದೊರೆ ಅವರಂಗಿಜೇಬನ ಚರಿತ್ರೆಯನ್ನೇ ಓದಿದ್ದೇವಂತೆ, ನಮ್ಮಂಗಿ ಜೇಬಿನ ಚರಿತ್ರೆ ಗೊತ್ತಿಲ್ಲವೆಂದರೆ ಏನರ್ಥ!? ಅದಕ್ಕಾಗಿಯೇ ವಿಚಿತ್ರಾನ್ನ-210ನೇ ಸಂಚಿಕೆಯಲ್ಲಿ ಜೇಬು ಪುರಾಣ!

  • ಶ್ರೀವತ್ಸ ಜೋಶಿ
Passion and Fashion of Pocketಇಲ್ಲ, ಇದು ಅವರು ‘ಜೇಬು’ ಎನ್ನುತ್ತಾರೆ ಮತ್ತು ನಾವು ‘ಕಿಸೆ’ ಎನ್ನುತ್ತೇವೆ ಎಂಬ ಚರ್ಚೆ ಅಲ್ಲ. ಜೇಬಿರಲಿ, ಕಿಸೆಯಿರಲಿ ಅಥವಾ pocket ಎಂದೇ ಇರಲಿ, ಈ ಜೀನ್ಸ್‌ ಪ್ಯಾಂಟ್‌ ಮ್ಯಾನುಫ‚ಾಕ್ಚರರುಗಳು ಪ್ಯಾಂಟಿನ ಮುಂಭಾಗದಲ್ಲಿ ಬಲಬದಿಯಲ್ಲಿ ಜೇಬಿನೊಳಗೊಂದು ಜೇಬು ಹೊಲಿದಿರುತ್ತಾರಲ್ಲ, ಅದರ ಸಂಗತಿ ಏನು? ಹಾಗೆ ಒಂದರೊಳಗೊಂದು ಜೇಬು ಇರುವುದರ ಉದ್ದೇಶವೇನು? ಜೀನ್ಸ್‌ ಪ್ಯಾಂಟಿನ ಬೇರೆ ಜೇಬುಗಳಿಗಿಲ್ಲದ್ದು ಅದೊಂದು ಮಾತ್ರ ಯಾಕೆ ಆರೀತಿ?

ಈ ಪ್ರಶ್ನೆಗಳಿಗೆ ಉತ್ತರವೂ ಸೇರಿದಂತೆ ಇಲ್ಲಿದೆ ಒಂದಿಷ್ಟು ಜೇಬು ಪುರಾಣ, ಜೇಬು ಚರಿತ್ರೆ. ಮಾನವನ ಉಡುಪಿನಲ್ಲಿ ಜೇಬು ಹುಟ್ಟಿಕೊಂಡ ಬಗೆ, ಜೇಬಿನ ವಿವಿಧ ಆಯಾಮಗಳು, ಅವತಾರಗಳು ಮತ್ತು ಉಪಯೋಗಗಳು, ಜೇಬಿನ ಬಗ್ಗೆ ನಾವು ತಿಳಿದುಕೊಂಡಿರಬೇಕಾದ್ದು ಏನು ಇತ್ಯಾದಿತ್ಯಾದಿ.

ಅಲ್ವೇ ಮತ್ತೆ, ಮುಘಲ್‌ ದೊರೆ ಅವರಂಗಿಜೇಬನ ಚರಿತ್ರೆಯನ್ನೇ ಓದಿದ್ದೇವಂತೆ, ನಮ್ಮಂಗಿ ಜೇಬಿನ ಚರಿತ್ರೆ ಗೊತ್ತಿಲ್ಲವೆಂದರೆ!?

*

ಮೊದಲು ‘ಜೇಬಿನೊಳಗೊಂದು ಜೇಬಿನ’ ವಿಚಾರ. ಈ ಮರಿಜೇಬು ಇರುವುದು ಚಿಲ್ಲರೆದುಡ್ಡು ಇಟ್ಟುಕೊಳ್ಳುವುದಕ್ಕೆ ಮತ್ತು ಅದರ ಹೆಸರೇ coin pocket ಎಂಬುದಿರುವುದಾಗಿ ನಿಮ್ಮ ಕಾಮನ್‌‘ಸೆಂಟ್ಸ್‌’ ಹೇಳುತ್ತದಿರಬಹುದು. ನಾಣ್ಯಗಳು, ಬೀಗದಕೈಗೊಂಚಲು, ಮತ್ತಿತರ ಮಿಸಲೇನಿಯಸ್‌ ವಸ್ತುಗಳನ್ನೆಲ್ಲ ಪ್ಯಾಂಟ್‌ ಕಿಸೆಯಲ್ಲಿ ಹಾಕಿಕೊಂಡರೆ ಮಿಕ್ಸ್‌ಅಪ್‌ ಆಗುತ್ತದೆ; ಚೂಪುವಸ್ತುಗಳನ್ನು ಹೊತ್ತ ಕಿಸೆ ಕ್ರಮೇಣ ಸವೆದು ತೂತಾಗಲೂಬಹುದು; ನಾಣ್ಯಗಳಿಗೆ ಮಾತ್ರ ಕಿಸೆಯಾಳಗೆಯೇ ಒಂದು ಪ್ರತ್ಯೇಕ ಕಂಪಾರ್ಟ್‌ಮೆಂಟ್‌ ಇದ್ದರೆ ಅನುಕೂಲವಾಗುತ್ತದೆ - ಇತ್ಯಾದಿ ಥಿಯರಿಗಳೆಲ್ಲವೂ ಅದಕ್ಕೆ coin pocket ಎಂಬ ಅನ್ವರ್ಥನಾಮವನ್ನೇ ಕೊಡುತ್ತವೆ.

ಆದರೆ ಮೂಲತಃ ಈ ಮರಿಜೇಬು ಹುಟ್ಟಿಕೊಂಡದ್ದು ನಾಣ್ಯಗಳನ್ನಿಡಲಿಕ್ಕಲ್ಲ, ಗಡಿಯಾರವನ್ನು ಇಟ್ಟುಕೊಳ್ಳುವುದಕ್ಕೆ! ಪುರಾತನಕಾಲದಲ್ಲಿ (ಆಗಿನ್ನೂ ‘ರಿಸ್ಟ್‌ ವಾಚ್‌’ ಕಾನ್ಸೆಪ್ಟ್‌ ಬಂದಿರಲಿಲ್ಲ) ಗಡಿಯಾರವನ್ನು ಸೊಂಟಕ್ಕೆ ಕಟ್ಟಿಕೊಳ್ಳುವ ರೂಢಿಯಿದ್ದದ್ದು. ಅದರ ಸರಪಳಿ ಸೊಂಟಕ್ಕೆ ಸುತ್ತಿಕೊಂಡಿದ್ದರೆ ಗಡಿಯಾರ ಮಾತ್ರ ಪೆಂಡುಲಮ್‌ ಇಲ್ಲದೆಯೂ ಪೆಂಡುಲಮ್‌ನಂತೆ ನೇತಾಡಿಕೊಂಡಿರಬಾರದೆಂಬ ಉದ್ದೇಶದಿಂದ ಮತ್ತು ಈಗಾಗಲೇ ಕಿಸೆಯಲ್ಲಿ ತುಂಬಿಕೊಂಡಿರುವ ಇತರೆ ವಸ್ತುಗಳೊಂದಿಗೆ ಸಿಲುಕಿ ಗಡಿಯಾರಕ್ಕೆ ಗೀರಾಗಬಾರದೆಂಬ ಉದ್ದೇಶದಿಂದ ಅದಕ್ಕಾಗಿಯೇ ಒಂದು ಪ್ರತ್ಯೇಕ ಜೇಬಿನ ವ್ಯವಸ್ಥೆ. ಹಾಗಾಗಿ ಅದು coin pocket ಅಲ್ಲ, ಬದಲಾಗಿ watch pocket. ಪೊಕೆಟಲ್ಲಿ ಇಟ್ಟುಕೊಳ್ಳುವುದಾದ್ದರಿಂದ ಆ ಗಡಿಯಾರ pocket watch!

ಈಗ ಪೊಕೆಟ್‌ ವಾಚುಗಳ ಬಳಕೆಯಿಲ್ಲವಾದರೂ ಜೀನ್ಸ್‌ ಕಂಪೆನಿಗಳು ಫ‚ಾ್ಯಷನ್‌ಗಾಗಿಯೂ, ವಿಂಟೇಜ್‌ ವಾಲ್ಯೂಗಾಗಿಯೂ five pocket styling with watch pocket ಎಂದೇ ಜೀನ್ಸ್‌ ಪ್ಯಾಂಟ್‌ ವಿನ್ಯಾಸವನ್ನು ಮುಂದುವರಿಸಿಕೊಂಡುಬಂದಿವೆ. ಅದೇ ಸ್ಪೆಷಾಲಿಟಿಯೆಂದು ಜಾಹೀರಾತುಗಳಲ್ಲೂ ನಮೂದಿಸುತ್ತವೆ. ಮತ್ತೆ ಈ ಮರಿಜೇಬನ್ನು ಗ್ರಾಹಕನು ಯಾವುದಕ್ಕಾದರೂ - ಚಿಲ್ರೆದುಡ್ಡು, ಕೀಬಂಚ್‌, ಪೇಜರ್‌, ಸೆಲ್‌ಫ‚ೋನ್‌, ಮೆಮೊರಿಸ್ಟಿಕ್‌, ಮೌತ್‌ಫ‚ೆ್ರಶ್ನರ್‌, ನಶ್ಯದಡಬ್ಬಿ(ಜೀನ್ಸ್‌ ಏಂಡ್‌ ನಶ್ಯ?), ಲೈಟರ್‌... - ಉಪಯೋಗಿಕೊಳ್ಳಲಿ, ಲೆವಿಸ್‌ ಕಂಪೆನಿಯ (ಮೊಟ್ಟಮೊದಲಿಗೆ 1890ರಲ್ಲಿ Levis 501s ಎಂಬ ಜೀನ್ಸ್‌ ಪ್ಯಾಂಟ್‌ ಮಾರುಕಟ್ಟೆಗೆ ತಂದದ್ದು ಲೆವಿಸ್‌) ಗಂಟೇನು ಹೋಯ್ತು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more