• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಾದ್ಯಂತ ಘನತೆ ಗಳಿಸಿದ ‘ಘನ’ ಆಟಿಗೆ!

By Staff
|

ಹಂಗರಿ ದೇಶದ ಬಡ ಕಲಾಶಾಲೆಯಲ್ಲಿ ಬೋಧಕನಾಗಿದ್ದ ಎರ್ನೊ ರುಬಿಕ್‌, 30ರ ವಯಸ್ಸಿನಲ್ಲೇ ಆ ದೇಶದ ಅತಿಶ್ರೀಮಂತ ವ್ಯಕ್ತಿಯಾದ! ಅದು ಹೇಗೆ? ಅವನು ಮಾಡಿದ ಮ್ಯಾಜಿಕಾದ್ರೂ ಏನು? ವಿಚಿತ್ರಾನ್ನ-218ನೇ ಸಂಚಿಕೆಯಲ್ಲಿ ಈ ಬಗ್ಗೆ ರಸವತ್ತಾದ ವಿವರಣೆ.

  • ಶ್ರೀವತ್ಸ ಜೋಶಿ
Rubics Cube - the magical toy cube‘‘ಹರಿಯುವ ನದಿಯ ನೋಡುತ ನಿಂತೆ ಅಲೆಗಳು ಕುಣಿದಿತ್ತು... ಕಲಕಲಕಲಕಲ ಮಂಜುಳನಾದವು ಕಿವಿಗಳ ತುಂಬಿತ್ತು... ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ... ಹಾಡಿದೆ ಈ ಕವಿತೆ...’’

ಹೀಗೆಂದದ್ದು ‘ಉಪಾಸನೆ’ ಚಿತ್ರದ ನಾಯಕಿಯಾದರೆ, ಹಂಗೆರಿ ದೇಶದ ಬುಡಾಪೆಸ್ಟ್‌ನಲ್ಲಿ ಹರಿಯುವ ಡೆನ್ಯೂಬ್‌ ನದಿಯನ್ನು ನೋಡುತ್ತ ನಿಂತಿದ್ದವನು ಎರ್ನೊ ರುಬಿಕ್‌ ಎಂಬ ಪ್ರಾಧ್ಯಾಪಕ. ಅವನು ಅಲ್ಲಿ ಆನಂದಿಸುತ್ತಿದ್ದದ್ದು ಕಲಕಲ ಸ್ವರಗಳ ಮಂಜುಳನಾದವನ್ನಲ್ಲ, ಸ್ವಚ್ಛವಾದ ನೀರು ಹರಿಯುತ್ತಿದ್ದ ನದಿಯಲ್ಲಿನ ಬಣ್ಣಬಣ್ಣದ ಕಲ್ಲುಗಳ (tiny pebbles) ಸೌಂದರ್ಯರಾಶಿಯನ್ನು. ಹೊಳೆಯ ಹರಿವಿನಿಂದಾಗಿ ಸವೆದುಹೋಗಿದ್ದ ಆ ಕಲ್ಲುಗಳ ವಿಶಿಷ್ಟ ಆಕಾರವನ್ನೇ ನೋಡುತ್ತಿದ್ದ ರುಬಿಕ್‌ನ ತಲೆಯಾಳಗೇನೋ ‘ಹೊಳೆ’ಯಿತು; ಮುಂದೆ ವಿಶ್ವಾದ್ಯಂತ ಘನತೆ ಗಳಿಸಿದ ‘ಘನ’ ಆಟಿಗೆ ‘ರುಬಿಕ್‌ ಕ್ಯೂಬ್‌’ ಜನ್ಮತಾಳಿತು!

*

80ರ ದಶಕದಲ್ಲಿ ನಾನು ಹೈಸ್ಕೂಲ್‌ವಿದ್ಯಾರ್ಥಿಯಾಗಿದ್ದಾಗ ನಮ್ಮಣ್ಣ ಮುಂಬಯಿಯಿಂದ ರುಬಿಕ್‌ ಕ್ಯೂಬ್‌ ತಂದುಕೊಟ್ಟಿದ್ದರು. ಆಗಷ್ಟೇ ಸುಧಾದಲ್ಲೋ ಬೇರಾವ ಪತ್ರಿಕೆಯಲ್ಲೋ ಈ ಹೊಸ ಆಟಿಗೆಯ ಬಗ್ಗೆ, ಅದು ಎಲ್ಲ ಕಡೆಯಲ್ಲೂ ‘ಕ್ರೇಜ್‌’ ಆಗಿರುವ ಬಗ್ಗೆ, ಸಚಿತ್ರಲೇಖನವೊಂದು ಬಂದಿತ್ತೆಂದು ನೆನಪು. ನಮ್ಮಣ್ಣ ತಂದಿದ್ದ ಕ್ಯೂಬ್‌ನ ಜತೆ ಒಂದು ಸಹಾಯಪುಸ್ತಿಕೆ (solution manual) ಸಹ ಇತ್ತು. ಶುರುವಿನಲ್ಲಿ ಅದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವೆನಿಸಿತ್ತಾದರೂ ಒಂದುದಿನ ನಾನೂ ನಮ್ಮಣ್ಣನೂ ಹರಸಾಹಸ ಮಾಡಿ ಕ್ಯೂಬ್‌ನ ‘ಆರು ಮುಖಗಳಿಗೆ ಆರು ಬಣ್ಣ’ ತರುವಲ್ಲಿ ಯಶಸ್ವಿಯಾಗಿದ್ದೆವು. ಏನೋ ಮಹಾಸಾಧನೆಯ ಬಣ್ಣ ನಮ್ಮ ಮುಖದಲ್ಲೂ ಮೂಡಿತ್ತು.

ಆಗ ರುಬಿಕ್‌ ಕ್ಯೂಬ್‌ನೊಂದಿಗೆ ಸಾಕಷ್ಟು ಕಾಲಹರಣ ಮಾಡುತ್ತಿದ್ದ ನಾನು ತಕ್ಕಮಟ್ಟಿಗೆ ಸಹಾಯಪುಸ್ತಿಕೆಯನ್ನು ನೋಡದೆಯೇ ಬಣ್ಣಗಳ ಹೊಂದಿಸುವಿಕೆಯನ್ನು ಕರಗತಮಾಡಿಕೊಂಡಿದ್ದೆ. ನಮ್ಮನೆಯಲ್ಲಿ ಅದು ಅಕ್ಷರಶಃ ‘ಆಟದ ಸಾಮಾನು’ ಆಗಿಹೋಯ್ತು; ಚಿಕ್ಕ ಮಕ್ಕಳ ಕೈಗೆ ಸಿಕ್ಕಿ ಅದಕ್ಕೊಂದು ಅವಸ್ಥೆ ಬಂತು. ಕೊನೆಕೊನೆಗೆ ಅದರ ಅವಯವಗಳೆಲ್ಲ ಕ್ಷೀಣಿಸಿ ಕಳಚಿಕೊಳ್ಳುವಷ್ಟು ಶಿಥಿಲವಾಯ್ತು, ಕ್ರಮೇಣ ಕ್ಯೂಬ್‌ ಕ್ರೇಜೂ ಕಡಿಮೆಯಾಯ್ತು.

ಮತ್ತೆ ನನಗೆ ರುಬಿಕ್‌ ಕ್ಯೂಬ್‌ ಮುಖಾಮುಖಿಯಾದದ್ದು ಕಳೆದವರ್ಷ ನಮ್ಮ ಆಫಿ‚ೕಸ್‌ನಲ್ಲಿ ಪ್ರೊಜೆಕ್ಟ್‌ ಮೆಮೆಂಟೊ ಆಗಿ ತಂಡದವರಿಗೆಲ್ಲ ಒಂದೊಂದು ರುಬಿಕ್‌ ಕ್ಯೂಬ್‌ ಉಡುಗೊರೆ ಸಿಕ್ಕಾಗ. ಹೈಸ್ಕೂಲ್‌ ದಿನಗಳಲ್ಲಿ ನಾನು ‘ರುಬಿಕ್‌ ಕ್ಯೂಬ್‌ ಪಾರಂಗತ’ನಾಗಿದ್ದೇನೋ ಹೌದು, ಆದರೆ ಈಗ ಅದರ ಸೊಲ್ಯುಶನ್‌ ನೆನಪಿನಲ್ಲುಳಿದಿಲ್ಲ. ಈಜು, ಸೈಕ್ಲಿಂಗ್‌ ಇತ್ಯಾದಿ ಒಮ್ಮೆ ಕಲಿತದ್ದು ಜನ್ಮವಿಡೀ ಮರೆತುಹೋಗುವುದಿಲ್ಲ ಅಂತಾರೆ, ಹಾಗೆಯೇ ರುಬಿಕ್‌ ಕ್ಯೂಬ್‌ ಸಹ ಅಂದುಕೊಂಡಿದ್ದೆ, ನನ್ನೆಣಿಕೆ ತಪ್ಪಾಯ್ತು!

ಒಂದುರೀತಿ ಒಳ್ಳೆಯದೇ ಆಯ್ತು, ರುಬಿಕ್‌ ಕ್ಯೂಬ್‌ ಸೊಲ್ವಿಸುವ ಸವಾಲು ನನ್ನಲ್ಲಿ ಮತ್ತೆ ಜಾಗ್ರತವಾಯ್ತು; ಈಬಾರಿ ಅದನ್ನೊಂದು ಬರೀ ಆಟಿಗೆಯನ್ನಾಗಿ ಪರಿಗಣಿಸದೆ ಅದರ ಇತಿಹಾಸವನ್ನು ಕೆದಕುವ, ಅದರ ಸಂಶೋಧಕನ ಬಗ್ಗೆ ಅರಿತುಕೊಳ್ಳುವ ಆಸಕ್ತಿ ಕೆರಳಿತು. ಜೈ ಗೂಗಲಾಯನಮಃ ಎಂಬ ಛೂಮಂತ್ರ ಹಾಕಿದಾಗ ಮಾಹಿತಿಯ ಮಹಾಪೂರವೇ ಹರಿಯಿತು, ಸಾರಾಂಶವೊಂದಿಷ್ಟನ್ನು ನಿಮಗೂ ದಾಟಿಸಿಬಿಡೋಣವೆಂದು ಈ ಲೇಖನದ ರಚನೆಯಾಯ್ತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more