ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ್‌ ಬಗ್ಗೆ ಒಂದಿಷ್ಟು ಓpun ಹರಟೆ...

By Staff
|
Google Oneindia Kannada News
  • ಶ್ರೀವತ್ಸ ಜೋಶಿ
‘‘ಬಂದ್‌ಏ ಬರುತಾವ ಕಾಲ... ಮಂದಾರ ಕನಸನು ಕಂಡಂಥ ಮನಸನು... ಒಂದುಮಾಡುವ ಸ್ನೇಹಜಾಲ...’’ ಎಂದು ಹಾಡಿತೋರಿಸಿ ಬಂದ್‌ ಹೇಗೆ ಆರಾಮಾಗಿ ಸ್ನೇಹಿತರೊಂದಿಗೆ ಹರಟೆಹೊಡೆಯುತ್ತ ಕಾಲಕಳೆಯಲು, ಸ್ನೇಹಜಾಲವನ್ನು ವ-ರ್ಧಿಸಲು ಅನುವಾಗುತ್ತದೆಯೆಂದವರು ಪಿ.ಸುಶೀಲಾ. ಬಂದ್‌ಒದಗುವ ಸ್ನೇಹಜಾಲದಲ್ಲಿ ಶ್ರೀರಾಮಚಂದ್ರರನ್ನು ಹುಡುಕುತ್ತಿರುವ ಸೀತೆಯಂದಿರು ‘‘ಬಂದ್‌ಏ ಬರುತಾನೇ ರಾಮ ಬಂದ್‌ಏ ಬರುತಾನೆ... ಬಂದ್‌ಅ ಒಡನೆಯೇ ಸೀತೆಯ ಕಂಡು ರಾಣಿ ಎನುತಾನೆ...’’ ಎಂದು ಕಾದುಕುಳಿತಿರುವುದನ್ನು ಎಸ್‌.ಜಾನಕಿ ಬಣ್ಣಿಸಿದರೆ, ಕೊನೆಗೂ ‘‘ಶ್ರೀರಾಮ ಬಂದ್‌ಅವ್ನೆ ಸೀತೆಯ ಕಾಣಲಿಕ್ಕೆ ನಮ್ಮೂರ ಹಾದ್ಯಾಗೆ...’’ ಎಂದು ಸಹರ್ಷವಾಗಿ (harsh ಆಗಿ ಅಲ್ಲ) ಕಸ್ತೂರಿ ಶಂಕರ್‌ ಹಾಡುತ್ತಾರೆ. ‘‘ದೂರದಿಂದ ಬಂದ್‌ಅಂಥ ಸುಂದರಾಂಗ ಜಾಣ...’’ ಎಂದು ದನಿಗೂಡಿಸುತ್ತಾರೆ ಎಲ್‌.ಆರ್‌.ಈಶ್ವರಿ.

ಹೀಗೆ ಬಂದ್‌ ನಡುವೆಯೇ ಪ್ರೇಮಕಥೆಯಾಂದು ಚಿಗುರೊಡೆಯುವುದನ್ನು ಬಣ್ಣಿಸುತ್ತ ಕೆ.ಜೆ.ಯೇಸುದಾಸ್‌ - ‘‘ಪ್ರೇಮಲೋಕದಿಂದ ಬಂದ್‌ಅ ಪ್ರೇಮದ ಸಂದೇಶ ಭೂಮಿಯಲ್ಲಿ ಹಾಡಿ ತಿಳಿಸೋಣ...’’ ಎನ್ನುತ್ತಾರೆ. ಪ್ರೇಮಕಥೆಯ ನಾಯಕ-ನಾಯಕಿ ‘‘ನೀ ಬಂದ್‌ಉ ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ...’’ ಎಂದು ಬಂದ್‌ಗೆ ಕೃತಜ್ಞರಾಗಿರುವುದನ್ನು ಪಿ.ಬಿ.ಶ್ರೀನಿವಾಸ್‌-ಪಿ.ಸುಶೀಲಾ ಯುಗಳಗೀತೆಯಾಗಿ ಹಾಡಿದರೆ ಎಸ್‌ಪಿಬಿ-ಜಾನಕಿ ಹೇಳುವುದು ಪ್ರೇಮಕಥೆಯ ಜೋಡಿಗೆ ‘‘ಬಂದ್‌ಎಯಾ ಬಾಳಿನ ಬೆಳಕಾಗಿ... ಬಂದ್‌ಎಯಾ ಪ್ರೇಮದ ಸಿರಿಯಾಗಿ... ’’ ಎಂದು!

ಚಿತ್ರಗೀತೆಗಳ ಮೂಲಕ ಮಾತ್ರ ಬಂದ್‌ ಬಗ್ಗೆ ಹಾಡಿಹೊಗಳಿದ್ದೆಂದುಕೊಂಡಿರಾ? ಪಂಡಿತ್‌ ಭೀಮಸೇನ ಜೋಶಿಯವರು ಬಂದ್‌ ಒಂದು ದೇವರಿದ್ದಂತೆ ಎಂದು ಪ್ರತಿಪಾದಿಸುತ್ತಾರೆ - ‘‘ದೇವ ಬಂದ್‌ಆ ನಮ್ಮ ಸ್ವಾಮಿ ಬಂದ್‌ಆನೊ... ದೇವರ ದೇವ ಶಿಖಾಮಣಿ ಬಂದ್‌ಆನೊ...’’. ವಿದ್ಯಾಭೂಷಣ ಸಹ ತನ್ನ ಕಂಚಿನಕಂಠದಿಂದ ‘‘ಬಂದ್‌ಉ ನಿಲ್ಲೋ ಕಣ್ಣ ಮುಂದೆ ಬಂದ್‌ಉ ನಿಲ್ಲೊ... ಬಂದ್‌ಉ ನಿಲ್ಲೊ ನಿನ್ನ ಪಾದಕೆ ವಂದಿಪೆ...’’ ಎನ್ನುತ್ತ ಭಕ್ತಿಪರವಶರಾಗುತ್ತಾರೆ. ಡಾ।ರಾಜ್‌ ಅವರಂತೂ ಬಂದ್‌ಗೆ ತನ್ನ ಆರಾಧ್ಯದೈವ ರಾಘವೇಂದ್ರಸ್ವಾಮಿಯಷ್ಟೇ ಗೌರವಕೊಟ್ಟು ‘‘ಬಂದ್‌ಎಯಾ ಗುರುರಾಯ... ದಯಮಾಡಿಸು ಮಹನೀಯ... ’’ ಎಂದು ಹಾಡುತ್ತಾರೆ.

ಈಗಲಾದರೂ ಗೊತ್ತಾಯ್ತಲ್ಲ ಬಂದ್‌ ಯಾಕೆ music to ears ಆಗಿತ್ತು ಎಂದು? ಇನ್ನೊಂದು ಕಿವಿಮಾತು (ಅಕ್ಷರಶಃ) - ಕಿವಿಗಳನ್ನು ಬಂದ್‌ ಮಾಡಿಕೊಂಡಿದ್ದರೆ ಇಂತಹ ಸ್ವಾರಸ್ಯಗಳು ನಿಮ್ಮ ಕಿವಿಗಳೊಳಗೆ ಬಂದ್‌ಉ ಬೀಳುವುದಾದರೂ ಹೇಗೆ? ಕಿವಿಗಳು openಆಗಿರಬೇಕು, ಬಂದ್‌ನಂಥ ವಿಷಯದಲ್ಲೂ ಕೇಳಿಸಿಕೊಂಡದ್ದು ಓpun ಆಗಿರಬೇಕು!

ಅಂದಹಾಗೆ ಜಿಲ್ಲಾ ಬಂದ್‌, ರಾಜ್ಯ ಬಂದ್‌, ಭಾರತ್‌ ಬಂದ್‌... ಇತ್ಯಾದಿ ಇದ್ದಂತೆ ಒಂದೊಮ್ಮೆಗೆ ಈ ಪ್ರಪಂಚವೇ ಅಂದರೆ ಭೂಮಿಯೇ ‘ಬಂದ್‌’ ಆದರೆ???

ಆಗ, ‘‘ಬಂದ್‌ಇದೆ ಭುವಿಗೆ ಈ ನರಬೊಂಬೆ... ನಂಬಲು ಏನಿದೆ ಸೌಭಾಗ್ಯವೆಂಬೆ...’’!!

*

ಈ ವಾರದ ಪ್ರಶ್ನೆ: ‘‘ಬಂದ್‌ಏ ಮೇ ಥಾ ದಮ್‌... ವಂದೇ ಮಾತರಂ...’’ - ಗಾಂ-ಧಿಗಿರಿಯನ್ನು ಪ್ರತಿಪಾದಿಸುವ ಮುನ್ನಾಭಾಯಿಯ ಈ ಮಂತ್ರವು ‘ಲಗೇ ರಹೊ ಮುನ್ನಾಭಾಯಿ’ ಚಲನಚಿತ್ರವನ್ನು ನೋಡಿರುವ ನಿಮ್ಮೆಲ್ಲರ ಮನಸ್ಸಲ್ಲೂ ಅಚ್ಚೊತ್ತಿರಬಹುದು. ಗಾಂ-ಧಿಗಿರಿಯ ಮೂಲಪ್ರೇರಕ ಮಹಾತ್ಮಾ ಗಾಂಧಿ-ೕಜಿಯವರು ಮೂರು ನಮೂನೆಯ ಬಂದ್‌ಗಳಿಗೆ ಕರೆಯಿತ್ತಿದ್ದರು. ಅವು ಯಾವುವು?

(ಸುಳಿವು: ಗಾಂ-ಧೀಜಿಯವರ ಚಿತ್ರದಲ್ಲಿ ಮೂರು ಬಂದರ್‌ಗಳನ್ನು ನೋಡಿದ್ದು ನೆನಪಿದೆಯಲ್ಲವೆ?)

ಉತ್ತರ ಕಳಿಸಲು ವಿಳಾಸ - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X