• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ನಾನಗೃಹ ಗಾಯನಸಮಾಜದ ಸದಸ್ಯರು...

By Super
|

ಈ ವಾರದ ಅಂಕಣದಲ್ಲಿನ ವಿಷಯ ಆಯ್ಕೆ ನನಗೆ ತುಂಬ ಇಷ್ಟವಾಯಿತು. ಮತ್ತು ಈ ಸಾಮಾನ್ಯ ಸಂಗತಿಯ ಹಿಂದೆ ಇಷ್ಟೊಂದು ವಿವರವಾದ ವಿಷಯಗಳನ್ನು (ಭೌತಶಾಸ್ತ್ರ ಮತ್ತು ಮನೋವೈಜ್ಞಾನಿಕ) ನಿಮ್ಮ ವಿಶಿಷ್ಟವಾದ ಬರವಣಿಗೆಯ ಧಾಟಿಯಲ್ಲಿ ನಮಗೆ ಉಣಬಡಿಸಿದ್ದು ಹೆಚ್ಚು ಅರ್ಥಪೂರ್ಣವಾಗಿತ್ತು. ಅದಕ್ಕಾಗಿ ನಿಮಗೆ ನನ್ನ ವೈಯಕ್ತಿಕ ಧನ್ಯವಾದಗಳು.

ನಾನಂತೂ ಬಾತ್‌ರೂಮ್‌ನಲ್ಲಿಹಾಡು ಗುನುಗುನಿಸುವುದಿಲ್ಲ. ಅದರೆ ನೀವು ಹೇಳಿದಂತೆ ಕೆಲವರು ಬಾತ್‌ರೂಮ್‌ನಲ್ಲಿ ತಮ್ಮ ಮನಸ್ಫೂರ್ತಿ ಮನಮೆಚ್ಚಿದ ಹಾಡು ಹೇಳುವುದನ್ನು ನಾನೇ ಸ್ವತಃ ಕೇಳಿದ್ದೇನಿ. ನನ್ನ ಸ್ನೇಹಿತರಲ್ಲಿಯೇ ಕೆಲವರು ಜೊತೆಯಲ್ಲಿದ್ದಾಗ ಹಾಡು ಹೇಳಲಾರದವರು ಬಾತ್‌ರೂಮ್‌ನಲ್ಲಿ ಸೂಪರ್‌ ಆಗಿ ಹಾಡು ಹೇಳಿ ನಮಗೆಲ್ಲಾ ಕೇಳಿಸಿರುವರು. ಪುನಃ ಬಾತ್‌ ರೂಮ್‌ ನಿಂದ ಹೊರಗೆ ಬಂದಾಗ ‘ಎನಮ್ಮಾ ಸಖತ್ತಾಗಿ ಹಾಡು ಹಾಡುತ್ತಿಯ ನಮ್ಮ ಎದುರಿಗೆ ಹೇಳಬಾರದಾ' ಅಂತ ಕೇಳಿದರೆ. ಅಯ್ಯಾ ಎಲ್ಲಿ ಬರುತ್ತೆ ನನಗೆ ನನ್ನ ಸ್ವರನೇ ಸರಿ ಇಲ್ಲ ಎಂದು ನುಣುಚಿಕೊಳ್ಳುವವರು ಇದ್ದಾರೆ. ಅದ್ದರಿಂದ ಇದನ್ನೆಲ್ಲಾ ಗಮನಿಸಿದರೆ ನೀವು ನೀಡಿರುವ ಆ ಎರಡೂ ಕಾರಣಗಳು ಸತ್ಯವೇ ಇರಬೇಕು ಅನ್ನಿಸುತ್ತಿದೆ.

ಹಾಡುಗಳನ್ನು ಹಾಡಲು ವ್ಯಕ್ತಿಗೆ ಒಂದು ರೀತಿಯ ಕಂಫರ್ಟ್‌ಅನ್ನು ಬಾತ್‌ರೂಮ್‌ ನೀಡುವುದೇ ಇದಕ್ಕೆ ಕಾರಣವಿರಬಹುದೇನೊ. ಅಂತೂ ಒಂದು ರೀತಿಯಲ್ಲಿ ಪ್ರತಿಯಾಬ್ಬರಿಗೆ ಸಂಗೀತದ ಗೀಳೂ ಹಲವು ರೀತಿಯಲ್ಲಿ ಅನುಭವಕ್ಕೆ ಬಂದೇ ಬರುತ್ತದೆ ಎಂಬುವುದನ್ನು ನಾವು ಕಾಣಬಹುದು. ಕೆಲವರು ಒಬ್ಬರೇ ನಡೆಯುತ್ತಿರುವಾಗ ಸಹ ಹಾಡು ಹೇಳಿಕೊಂಡು ಹೋಗುವುದು ಸಾಮಾನ್ಯ. ಮತ್ತೆ ಕೆಲವರು ಬಾಯಿಯಲ್ಲಿ ವಿಶಲ್‌ ಮೂಲಕ ವಿವಿಧ ಹಾಡುಗಳನ್ನು ಗುನುಗುತ್ತ ಸಂತೋಷಪಡುತ್ತಾರೆ. ಇದು ಒಂದು ರೀತಿ ಒಂಟಿತನದ ಉತ್ಕೃಷ್ಟತೆಯ ಸಂತೋಷದ ಅಭಿವ್ಯಕ್ತಿಯೇ ಸರಿ!

- ತಿಪ್ಪೇರುದ್ರ ಹೊಸಹಳ್ಳಿ; ಬೆಂಗಳೂರು

*ಹೊರಾಂಗಣ ಪ್ರದೇಶದಲ್ಲಿಯೂ ಹಾಡುವವರಿದ್ದರೆ ಹಾಡು ಬಂದೇ ಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡುವವರಿದ್ದರೆ ಮತ್ತು ಅವರು ಬಾತ್‌ರೂಮ್‌ಸಿಂಗರ್‌ಗಳಾಗಿದ್ದರೆ ಅಂಥವರ ಬಾಯಿಂದ ಬರುವ ಹಾಡಿನ ಗಮ್ಮತ್ತೇ ಬೇರೆ! ನಾನು ಕೂಡ ಒಳ್ಳೆಯ ಸಿಂಗರ್‌ (?) ಅಂತ ಗಮನಕ್ಕೆ ಬಂದಿದ್ದು, ನಾನೇ ಅಂದುಕೊಂಡಿದ್ದು ಬಾತ್‌ರೂಮ್‌ಸಿಂಗರ್‌ ಅಗಿದ್ದಕ್ಕೆ!

- ಪ್ರಸಾದ್‌ ನಾಯಕ್‌; ಬೆಂಗಳೂರು

*

ಬಾತ್ರೂಮ್‌ ಸಿಂಗಿಂಗ್‌ ಬಗ್ಗೆಯೂ ಬರೆಯಬಹುದಾ?!! ನಿಮ್ಮ ಲೇಖನ ಸೂಪರ್ರಾಗಿದೆ. ನಾನೂ ಬಾತ್ರೂಮ್‌ನಲ್ಲಿ ಹಾಡ್ತೀನಿ. ಹಾಡೋದು ಬೇಡಾಂದ್ರೂ ಸ್ವರ ಗಂಟಲಿನಿಂದ ಬರುತ್ತದೆ. ಏಕೆ ಗೊತ್ತೇ? ದಿನವೂ ನಾನು ಸ್ನಾನ ಮಾಡುವುದು ತಣ್ಣೀರಿನಲ್ಲಿ. ಮೊದಲ ಚೊಂಬು ನೀರು ಮೈ ಮೇಲೆ ಬಿದ್ದೊಡನೆಯೇ ಹಾಡುಗಾರಿಕೆ ನಡುಗಾಟ (ಇನ್ಮುಂದೆ ಭರತನಾಟ್ಯದ ಬಗ್ಗೆ ನೀವು ಬರೆದರೆ ಅಥವಾ ಈಗಾಗಲೇ ಬರೆದಿದ್ದರೆ ಅದಕ್ಕೂ ಇದೇ ಉತ್ತರವಾಗಬಹುದು) ಶುರು.

ಎರಡನೆಯ ಮೂರನೆಯ ಚೊಂಬಿನ ನೀರು ಬೀಳುವುದರೊಳಗೆ ನನಗಾಗುವ ಛಳಿ ಸ್ವಲ್ಪ ಕಡಿಮೆ ಆಗಿರುತ್ತದೆ. ಆಗ ಮನೆಯವರಿಗೆ ನಾನು ಎಚ್ಚರವಾಗಿರುವುದರ ಬಗ್ಗೆ ಸಂದೇಹ ಮೂಡುತ್ತದೆ (ಏಕೆಂದರೆ ನನ್ನ ಸ್ನಾನದ ಪರಿ ಬೆಳಗ್ಗೆ 5ರಿಂದ 5.30 ರೊಳಗೆ ನಡೆಯುವುದು). ನನ್ನ ಇರುವಿಕೆ ತಿಳಿಸುವುದಕ್ಕೋಸ್ಕರ ಲೈಫ್‌ಬಾಯ್‌ ಎಲ್ಲಿದೆಯೋ ಅಲ್ಲಿದೇ ಆರೋಗ್ಯ ಎಂಬ ಧಾಟಿಯಲ್ಲಿ ಹಾಡ್ತೀನಿ.

ಬಚ್ಚಲಿನಿಂದ ಹೊರಗೆ ಬರುವುದರೊಳಗೆ ನನ್ನ ಅರಚಾಟಕ್ಕೆ ಎಚ್ಚರವಾಗುವ ನನ್ನ ಮಗಳಿಗೆ ತನ್ನ ಹಾಡುಗಾರಿಕೆಯ ಅಭ್ಯಾಸದ ಮನವರಿಕೆಯಾಗಿ ಸುಶ್ರಾವ್ಯ ಹಾಡುಗಾರಿಕೆ ಪ್ರಾರಂಭವಾಗುವುದು. ಆಗ ನಾನೇನಾದರೂ ಗುನುಗುನಿಸಿದರೆ ಅದು ಮಂತ್ರವಾಗಬೇಕೇ ಹೊರತು ಹಾಡಿನ ಭಾಗವಾದರೆ ಅಮ್ಮನವರಿಂದ ಸಹಸ್ರನಾಮ ಕೇಳಬೇಕಾಗುವುದು. ಇದು ನನ್ನ ದಿನಂಪ್ರತಿಯ ಅನುಭವದ ಇಣುಕು ನೋಟ.

- ತಳುಕು ಶ್ರೀನಿವಾಸ; ಮುಂಬಯಿ

*

ಬಾತ್‌ರೂಮ್‌ ಸಿಂಗಿಂಗ್‌ ಬಗೆಗಿನ ನಿಮ್ಮ ಲೇಖನ ಬಹಳ ಇಷ್ಟವಾಯಿತು. ಅದರ ಭೌತಿಕ ಮತ್ತು ಮನೋವೈಜ್ಞಾನಿಕ ಥಿಯರಿಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

ನಿಮಗೆ ನಿಜ ಹೇಳಬೇಕೆಂದರೆ ಬಾತ್‌ರೂಮ್‌ನಲ್ಲಿ ನಾನು ಸಿಂಗ್‌ ಮಾಡುವುದಕ್ಕಿಂತ ಹೆಚ್ಚಾಗಿ ಥಿಂಕ್‌ ಮಾಡುತ್ತೇನೆ! ಬಾತ್‌ರೂಮಿನಲ್ಲಿ ಇರುವಾಗ ಒಳ್ಳೆ ಐಡಿಯಾಗಳು, ಯೋಚನೆಗಳು ಹೊಳೆಯುತ್ತವೆ!

- ಸಂಪಿಗೆ ಶ್ರೀನಿವಾಸ; ಬೆಂಗಳೂರು

*

ಭೌತಶಾಸ್ತ್ರ ಹಾಗೂ ಮನಃಶಾಸ್ತ್ರಗಳ ಕನ್ನಡ ಅನುವಾದದ ಪದಗಳು ಎಲ್ಲಿ ಸಿಕ್ಕವು ನಿಮಗೆ? ಬಹಳ ಕಷ್ಟದ ಪದಗಳು ಅನ್ನಿಸಿದವು. ನಿಮ್ಮ ಎರಡೂ ಥಿಯರಿಗಳನ್ನೂ ನಾನು ಒಪ್ಪುತ್ತೇನೆ. ನಾವು ಬಾತ್ರೂಮ್‌ನಲ್ಲಿ ಹಾಡಿನ ಆಭ್ಯಾಸ ಮಾಡುವುದುಂಟು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮಗನ ಸಂಗೀತದ ಅಭಿರುಚಿ ತಿಳಿಯಲು ಬಹಳ ಮಟ್ಟಿಗೆ ಸಹಾಯವಾದದ್ದು ಇದೇನೇ! ಅವನೊಬ್ಬ ಬಾತ್‌ರೂಮ್‌ ಸಿಂಗರ್‌.

ಲೇಖನದಲ್ಲಿ ನೀವು ಬರೆದಿದ್ದ ಹಾಗೆ ಪ್ರೈವೆಸಿ ಸಿಗುತ್ತೆವ್‌ ಮತ್ತು ಯಾರೂ ಲೇವಡಿ ಮಾಡುವುದಿಲ್ಲ ಅಲ್ಲಿ ಅನ್ನುವ ಭಾವನೆ ಸರಿಯಾದದ್ದೇ. ‘ನಿನಗೆ ಈ ಹಾಡು ಇಷ್ಟ ಅಂತ ನನಗೆ ಗೊತ್ತು!' ಅಂತ ಹೇಳಿದರೆ, ಹೇಗೆ ಗೊತ್ತು ನಿನಗೆ ಅಂತ ನಮ್ಮ ಮಗ ಕೇಳುವುದುಂಟು. ಹೀಗಾಗಿ, ಒಬ್ಬರ ಇಶ್ಟವಾದ ಹಾಡು ಯಾವುದೆಂದು ಗೊತ್ತಾಗುವುದಲ್ಲದೆ, ಎಷ್ಟು ಕಲೀತಾ ಹೋಗ್ತಾ ಇದಾರೆ ಅನ್ನೋದು ನಮಗೆ ಗೊತ್ತಾಗಿ ಬಿಡುತ್ತದೆ. 'ಅಮ್ಮ, ನೀನು ಬಾತ್‌ರೂಮ್‌ನಲ್ಲಿ ಹೇಳಿದ ಹಾಡು ಇವತ್ತು ನನಗೆ ಹೇಳಿಕೊಡು ಎಂದು ಅವನು ಕೇಳ್ಲಿದ್ದೂ ಇದೆ.

ನಮ್ಮ ಯಜಮಾನರು ಕೂಡ ಒಬ್ಬ ಬಾತ್‌ರೂಮ್‌ ಸಿಂಗರ್‌. ಸಂಗೀತ ಅಭ್ಯಾಸ ಮಾಡಲು ಮರೆತಿದ್ದರೆ, ಇನ್ನೊಂದು ಚಾನ್ಸ್‌ಗಾಗಿ ಬಾತ್ರೂಮನ್ನು ಅವಲಂಬಿಸಬಹುದು. ಸಂಗೀತ ಅಭ್ಯಾಸ ಬಿಡುವುದಕ್ಕಿಂತ ಬಾತ್‌ರೂಮ್‌ನಲ್ಲಾದರೂ ಆ ಕಲೆಯನ್ನು ಜೀವಂತವಾಗಿಡಬಹುದಲ್ಲವೆ? ಈ ಲೇಖನಕ್ಕಾಗಿ ಉಪಯೋಗಿಸಿರುವ ರೇಖಾಚಿತ್ರವು ಬಹಳ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಲೇಖನಿಯಿಂದ ಮೂಡಿದ್ದಾ?

- ಅನುರಾಧಾ ಅರುಣ್‌; ಚಿಕಾಗೊ

*

ಬಾತ್‌ರೂಮ್‌ ಸಿಂಗಿಂಗ್‌ ಬಗೆಗಿನ ವಿಚಿತ್ರಾನ್ನ ಓದಿದೆ; ತುಂಬ ಚೆನ್ನಾಗಿತ್ತು! ಏನು ಈ ಸಲ ಫ‚ೆಬ್ರವರಿ 14ಕ್ಕೆ ವ್ಯಾಲೆಂಟೈನ್ಸ್‌ ವಿಷಯ ನಿಮ್ಮ ವಿಚಿತ್ರಾನ್ನದಲ್ಲಿ ಇರಲಿಲ್ಲ? ಹೋದ ಸಲ ಚಾಕೋಲೇಟ್‌ ಬಗ್ಗೆ ನಿಮ್ಮ ಅಂಕಣ ಇತ್ತು ಅಲ್ವಾ?

- ರೇಖಾ ಪ್ರದೀಪ್‌; ಅಟ್ಲಾಂಟಾ

*

ಬಾತ್‌ ರೂಮ್‌ ಸಿಂಗಿಂಗ್‌ ಬಗೆಗಿನ ಮಾಹಿತಿ ಬಹಳ ಉಪಯುಕ್ತವಾಗಿದೆ. ಬಚ್ಚಲಿನ ಬಾಗಿಲಿಗೆ ಅಗುಳಿ ಇಲ್ಲದೇ ಇದ್ದಲ್ಲಿ ಒಳಗೆ ನುಗ್ಗುವವರನ್ನು ತಡೆವುದೂ ಈ ಬಾತ್‌ ರೂಮ್‌ ಸಿಂಗಿಂಗ್‌. ಸ್ನಾನ ಮಾಡಿದರೆ ಮೈಗೆ ಹಿತ. ಮೈಮನ ಹಿತವಾದರೆ ಗಾನ ತಾನೇ ಹೊರಹೊಮ್ಮುತ್ತದೆ. ಬಾತ್‌ರೂಮ್‌ ಸಿಂಗಿಂಗ್‌ಗೆ ಇದೂ ಕಾರಣವಿರಬಹುದೆ?

- ಶ್ರೀನಾಥ್‌ ಭಲ್ಲೆ; ರಿಚ್‌ಮಂಡ್‌, ವರ್ಜೀನಿಯಾ

*

ಕೆಲವು ವಾರಗಳಿಂದ ದಟ್ಸ್‌ಕನ್ನಡ ಓದುವಷ್ಟಕ್ಕೆ 1-2 ವಾರವೇ ಕಳೆದು ಬಿಟ್ಟಿರುತ್ತಿತ್ತು, ಹಾಗಾಗಿ ನಿಮ್ಮ ಪಾದುಕಾಪುರಾಣಕ್ಕೆಲ್ಲ ಕಮೆಂಟ್‌-ರಿ ಕಳುಹಿಸಲಿಲ್ಲ. ಇದೀಗ ಬಾತ್‌ರೂಮ್‌ ಸಿಂಗಿಂಗ್‌ ಬಗ್ಗೆ:

ಅರಬಿ ಭಾಷೆಯಲ್ಲಿ, ಹಮಾಮ್‌ = ಸ್ನಾನ; ಆದ್ದರಿಂದ, ಬಾತ್‌ರೂಮ್‌ ಸಿಂಗಿಂಗ್‌ = ಹಮಾಮ್‌ ಹಮ್ಮಿಂಗ್‌. ಹಮ್‌ ಮಾಡುವ ಚಟ = ಹಮ್‌ಬಗ್‌. ಆಗ ಹೀಗೆನ್ನಬಹುದು: ''ಹಮ್‌ ಹಮಾಮ್‌ ಮೆ ಹಮಾಮ್‌ ಲಗಾಕೆ ಹಮ್‌ತೆ ಹೈ। ಜ‚ನಾನೆ ಮೆ ಸನಾನ ಕರ್ಕೆ ಸುನಾನಾ!

ಅಥವಾ ನಮ್ಮ ಕಸ್ತೂರಿ ಕನ್ನಡದಲ್ಲಿ - ಬಚ್ಚಲೊಳಗೆ ಬೆಚ್ಚಗಿನ ನೀರಿರಲು, ಬಿಚ್ಚಿತು ಬೆಚ್ಚದೇ ಇರುವ ಸ್ವರ!

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

*

ಸಾರ್‌, ನಾನೊಬ್ಬ ಬಾತ್ರೂಮ್‌ ಸಿಂಗರ್‌ ಆಗಿದ್ದು, ಬೆಳಿಗ್ಗೆ ನಮ್ಮ ರೂಮ್‌ಮೇಟ್‌ಗಳ ಹತ್ರ ಬೈಸಿಕೊಂಡು, ಉಗಿಸಿಕೊಂಡ್ರೂ ನಾನು ಆ ಅಭ್ಯಾಸವನ್ನು ಇನ್ನೂ ಮುಂದುವರಿಸಿದ್ದೇನೆ. ನೀವು ಹೇಳಿದ ಎರಡು ಅಂಶಗಳನ್ನೂ ನಾವು ಒಪ್ಪಿಕೊಳ್ಳಲೇ ಬೇಕು. ನಿಜವಾಗ್ಲೂ ನಮ್ಮ ಧ್ವನಿ ತುಂಬ ಚೆನ್ನಾಗಿದೆ ಅನಿಸುವುದು ಬಾತ್‌ರೂಮಿನಲ್ಲಿ ಅದು ಭೌತಿಕವಾಗಿ, ಆಮೇಲೆ ನಮಗೆ ರಿಲಾಕ್ಸ್‌ ಅನಿಸೋದು ಮಾನಸಿಕವಾಗಿ. ಅಂತೂ ಒಳ್ಳೇ ಆರ್ಟಿಕಲ್‌. ನಿಮಗೆ ತುಂಬ ಧನ್ಯವಾದಗಳು!

- ಗುರು ಪೂಜಾರಿ; ಬೆಂಗಳೂರು

*

ಬಾತ್‌ರೂಮ್‌ ಸಿಂಗಿಂಗ್‌ ಬಗ್ಗೆ ನಿಮ್ಮ ಲೇಖನ ಓದುತ್ತಿದ್ದಂತೆ ನನಗೆ ನನ್ನ ಹಾಸ್ಟೆಲ್‌ ದಿನಗಳು ನೆನಪಾದವು. ಹಾಸ್ಟೆಲ್‌ನಲ್ಲಿದ್ದಾಗ ನಾನು ನನ್ನ ಬಾತ್‌ರೂಮ್‌ ಸಿಂಗಿಂಗ್‌ಗೆ ಫ‚ೇಮಸ್‌ ಆಗಿದ್ದೆ! ನನಗೆ ಸಿಕ್ಕಿರೊ ಬೆಸ್ಟ್‌ ಕಾಂಪ್ಲಿಮೆಂಟ್‌ಗಳು ಬಾತ್‌ರೂಮ್‌ ಸಿಂಗಿಂಗ್‌ಗೆ. ಇವತ್ತಿಗೂ ನನ್ನನ್ನ ನೆನಪಿಟ್ಟುಕೊಂಡಿರೋದು ಬಾತ್‌ರೂಮ್‌ನಲ್ಲಿ ನಾನು ಅಣ್ಣಾವ್ರ ವಾಯ್ಸ್‌ನಲ್ಲಿ ಹಾಡುತ್ತಿದ್ದ ಗಂಧದ ಗುಡಿ, ಬಂಗಾರದ ಮನುಷ್ಯ ಮುಂತಾದ ಡಾ.ರಾಜ್‌ ಹಾಡುಗಳಿಗೆ.

ನಾವು ಹಾಸ್ಟೆಲ್‌ನಲ್ಲಿ ಇದ್ದಾಗ ಅಲ್ಲಿ ಕಂಪಾರ್ಟ್‌ಮೆಂಟ್‌ ಸಿಸ್ಟಮ್‌ ಇತ್ತು. ಥೇಟ್‌ ಜನರಲ್‌ ವಾರ್ಡ್‌ನಲ್ಲಿ ಇರುತ್ತದಲ್ಲ, ಹಾಗೆ. ಸಾಲಾಗಿ ಕಂಪಾರ್ಟ್‌ಮೆಂಟ್‌ಗಳನ್ನು ಸೇರಿಕೊಳ್ಳುತ್ತಿದ್ದ ನಾವು ಕೊನೆಗೆ ಹಾಡುವ ಜೊಶ್‌ನಲ್ಲಿ ಒಂದೇ ನಲ್ಲಿಲಿ ನೀರು ಹಿಡಿದು ರೋಮನ್‌ರ ಸಮೂಹ ಸ್ನಾನ ನೆನಪಿಗೆ ತರುವಂತಿರುತ್ತಿತ್ತು! ಒಂದು ದಿನ ಡಾ.ರಾಜ್‌ ಸ್ಪೆಷಲ್‌, ಒಂದು ದಿನ ರವಿಚಂದ್ರನ್‌ ಸ್ಪೆಷಲ್‌, ಒಂದು ದಿನ ಅಂಬರೀಶ್‌ - ಹೀಗೆ ಸಮಸ್ತ ಕನ್ನಡ ಹೀರೊಗಳ ಹಾಡು ನಮ್ಮ ಬಾಯಲ್ಲಿ ಬರುತ್ತಿತ್ತು.

ಎಕ್ಸಾಮ್‌ ಟೈಮ್‌ನಲ್ಲಿ ಟೆನ್ಷನ್‌ ಇರುತ್ತಿದ್ದ ಕಾರಣ ಬಾತ್‌ರೂಂ ಸಿಂಗಿಂಗ್‌ ಇನ್ನೂ ಹೆಚ್ಚಾಗಿ ತಾರಕಕ್ಕೇರುತ್ತಿತ್ತು! ನಮಗೇನೊ ಟೆನ್ಷನ್‌ ರಿಲೀಫ‚್‌ ಅಗುತ್ತಿತ್ತು, ಆದರೆ ನಮ್ಮ ವಾರ್ಡನ್‌ ಮತ್ತು ಉಳಿದ ವಿದ್ಯಾರ್ಥಿಗಳದ್ದು ಟೆನ್ಷನ್‌ ಜಾಸ್ತಿ ಆಗುತ್ತಿತ್ತು. ವಿಚಿತ್ರನ್ನ ಓದಿ ಇದನ್ನೆಲ್ಲ ಬರಿಯೋಣ ಅನ್ನಿಸ್ತು ಬರ್ದೆ, ಪ್ರೇರಣೆ ನೀಡಿದ ನಿಮ್ಮ ಲೇಖನಕ್ಕೆ ಧನ್ಯವಾದಗಳು.

- ಸನತ್‌ ಕೆ; ಮೈಸೂರು

*

ಸ್ನಾನಗೃಹ ಗಾಯನದ ಭೌತಶಾಸ್ತ್ರ ವಿಶ್ಲೇಷಣೆ ಚೆನ್ನಾಗಿತ್ತು. ಮೊನ್ನೆ ಇಂದಿರಾನಗರದಲ್ಲಿ ಯಾರೊ ಕುಬೇರರು ಕಟ್ಟಿಸಿರೊ ಮನೆಗೆ ಹೋಗಿದ್ದೆ, ವಿಚಿತ್ರ ಕೇಳಿ: ಬಾತ್ರೂಮ್‌ ಒಳ್ಳೇ ವಾಯ್ಸ್‌ ರೆಕಾರ್ಡಿಂಗ್‌ ಸ್ಟುಡಿಯಾ ಇದ್ದಂಗೆ ಇತ್ತು (ಹಾಡು ಚೆನ್ನಾಗಿ ಮೂಡಿ ಬರಬಹುದೊ ಎನೊ) ಆದ್ರೆ ಆ ಮನೆಯಲ್ಲಿ ನನಗೆ ಹಿಡಿಸಿದ್ದು ಅಂದ್ರೆ ಇಷ್ಟೆಲ್ಲ ವೈಭವೋಪೇತ ಮನೆಗೆ ಕಂಪೌಂಡ್‌ ನಮ್ಮ ಮಲೆನಾಡಿನ ಇಟ್ಟಿಗೆದು (ಗುಡ್ಡ ಕಡಿದು ಮಾಡಿರೊ ಮಣ್ಣಿನ ಇಟ್ಟಿಗೆ).

ಬಾಲ್ಯದ ಜ್ಞಾಪಕ ಬಂತು ಸ್ವಾಮಿ, ನಮ್ಮ ತಾಯಿ ಊರು ಹಳದಿಪುರದಲ್ಲಿ ಕಳೆದ ಬೇಸಿಗೆ ರಜಗಳು. ನಾನು ಕಟ್ಟೋ ಸಣ್ಣ ಮನೆಗೂ ಅದೇ ತರಹ ಇಟ್ಟಿಗೆ ಗೋಡೆಯ ಆವರಣವಿರೋದು ಖಂಡಿತ!

- ರಾಘವೇಂದ್ರ ಶ್ರೀಧರ್‌; ಬೆಂಗಳೂರು

*

ಚೆನ್ನಾಗಿದೆ ನಿಮ್ಮ ಸಿಂಗಿಂಗ್‌ ಪುರಾಣ. ಅಂದ್ರೆ 'ಬಾತ್ರೂಮ್‌ ಗಾಯನದ ಬಗ್ಗೆ ಚೆನ್ನಾಗಿದೆ ನಿಮ್ಮ ಲೇಖನ' :-)

ನಾನೂ ಹಾಡುತ್ತೀನಿ, ಅದ್ರೆ ಬರೀ ಬಾತ್‌ರೂಮ್‌ನಲ್ಲಿ ಅಲ್ಲ. ಆಲ್ಮೋಸ್ಟ್‌ ಎಲ್ಲ ಕೆಲಸ ಮಾಡುವಾಗ ಗುನುಗ್‌ತಾನೇ ಇರ್ತೀನಿ. ಅದ್ರಲ್ಲೂ ನಾನು ಸ್ನಾನ ಮಾಡುವಾಗ ಹಾಡೊದನ್ನ ಮರೆತರೂ ಬಟ್ಟೆ ಒಗೆಯುವಾಗ ಮರೆಯೋದೇ ಇಲ್ಲ. ಅದು (ಬಟ್ಟೆ ಒಗೆತ) ನನಗೆ ಸ್ವಲ್ಪ ಬೋರಿಂಗ್‌ ಕೆಲ್ಸ. ಹಾಡು ಹೇಳಿಕೊಂಡು ಮಾಡಿದ್ರೆ ಕೆಲಸಕ್ಕಿಂತ ಹಾಡಿನ ಕಡೆ ಗಮನ ಹೋಗೊದ್ರಿಂದ ಆ ಕೆಲ್ಸ ಬೋರಿಂಗ್‌ ಅನ್ನಿಸೊಲ್ಲ. ಈ ಐಡಿಯಾ ನನಗೆ ನನ್ನ ಅಮ್ಮನಿಂದ ಬಂದಿದ್ದು. ಮತ್ತೆ ಇನ್ನೊಂದು ಆಶ್ಚರ್ಯ ಅನ್ನಿಸೊ ಸಂಗತಿ ಏನಪ್ಪಾ ಅಂದ್ರೆ ಬಾತ್‌ರೂಮ್‌ನಲ್ಲಿ ಹಾಡುವ ಹಾಡುಗಳಿಗೆ ಒಂದು ಯುನಿಫ‚ಾರ್ಮಿಟಿ ಇರುತ್ತೆ. ಒಂದು ಹಾಡು ಆದಮೇಲೆ ಒಂದು. ಇದೇ ಪ್ಯಾಟರ್ನ್‌ನಲ್ಲಿ ಹಾಡಿರ್ತೀನಿ ನಾನು ಯವಾಗ್ಲೂ. ಆ ಹಾಡುಗಳ ಪಟ್ಟಿಗೆ ಹೊಸ ಹಾಡುಗಳೂ ಅಗಾಗ ಸೇರ್ತಾ ಇರುತ್ವೆ :) ಇಷ್ಟೇ ನನ್ನ ಗಾನ ಪುರಾಣ.

- ಲೀನಾ; ಬೆಂಗಳೂರು

*

I attended one creativity development seminar recently. Where it was told that one should try to sing in the bathroom (whatever others may think). This enhances the days work. Anyhow, thank you for the nice article.

- Soory Hardalli; Bangalore

*

Your recent artcle about bathroom singing is amazing. Its true that some people like to sing in bathroom. Ive a distant relative who sings while shes in bathroom & if we ask her to come out of bathroom shell say that theres another song which I want to sing, let me finish it.....! Needless to say that weve to wait for her to finish the song. When we ask her to sing in public shell tell us that shes a very bad singer & her singing can be called as gardabha gayana. Your article reminded me of her. I too sing while taking the shower & about your theory regarding physics & psychology both are true & what shivarudrappa says is also correct - ella kelali emdu naanu haaduvudilla...

I was on leave yesterday. Today first thing i did was to check thatskannada.com for ur article! sadaakaala hige vichitranna badisuttale iri.

- Jayashree; Bangalore

*

Its been a while since i read thatskannada articles. nimma bathroom singing article Odide, as ususal bahaLa chennagi mooDi bandide. nimma sampige marada haadina dhaTiyalli barediruva nimma kavite simple aagi cute aagide!

In my opinion, bathroom singing is not just for people who think they cannot sing in other places... even ameature or profesional singers do sing in bathroom. I have experienced this in person and also I have heard pro singers rehears their alaap not only in the river banks early in the morning but also in bathrooms. Another thing i would like to say about this acoustic effects while singing is, whether its an enclosed box-studio kind of set up such as bathroom or even as a matter of fact empty hall where you get good acoustics (i.e., reverb and echo effects) when you sing or even when you talk with voice modulations (usually in dramas) and when your voice bounces back to you with acoustic effects it gives some sort of pleasure & energy create aagi yarigaadru ullasa haagu mooD tharisuththe!

Even in Opera singing for instance they do not need any mics (as a matter of fact their voice modulation breaks mics). They use differect tactics through their vocal chords to do voice modulations and if the acoustics in that hall is good then it sounds very good not only to the hearing audience but also to the artists themselves to get more energy so that they in turn give better output through their voice.

- Vasantha Shashi; New Jersey

*

Oooooooooooooooo I like that! That is one "Close to my heart Singing"!!!

- Shailaja Gundurau; Maryland

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thatskannada readers responses to Vichitranna columnist Srivathsa Joshis bathroom singing article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more