ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲ್ಲು ಚಪ್ಪರಿಸಿದವರ ಸೊಲ್ಲು...

By Staff
|
Google Oneindia Kannada News

ಹುಲ್ಲು ಚಪ್ಪರಿಸಿದವರ ಸೊಲ್ಲು...

ಶ್ರೀವತ್ಸ ಜೋಶಿ;
[email protected]

ವಿಚಿತ್ರಾನ್ನದಲ್ಲಿ grassಏ ಒಂದುವಾರದ ಗ್ರಾಸವಾದದ್ದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದಿವೆ. ಸಂಚಿಕೆಯ ಕೊನೆಯಲ್ಲೊಂದು ರಸಪ್ರಶ್ನೆಯೂ ಇದ್ದುದರಿಂದ ಅದನ್ನುತ್ತರಿಸಿ ಬಂದ ಪತ್ರಗಳೂ ಇವೆ.

ರಸಪ್ರಶ್ನೆ ಹೀಗಿತ್ತು: ‘‘ಒಂದು ಹೊರೆ ಹುಲ್ಲು ಮತ್ತು ಎರಡು ಕುದುರೆಗಳಿವೆ. ಒಂದು ಬಿಳಿಕುದುರೆ, ಇನ್ನೊಂದು ಕಪ್ಪಗಿನದು. ಬೆಳ್ಳಗಿನ ಕುದುರೆ ಪೂರ್ವದಿಕ್ಕಿಗೆ ತಿರುಗಿ ನಿಂತಿದ್ದರೆ ಕಪ್ಪು ಕುದುರೆ ನೂರೆಂಬತ್ತು ಡಿಗ್ರಿ ವಿರುದ್ಧವಾಗಿ ಪಶ್ಚಿಮಕ್ಕೆ ತಿರುಗಿ ನಿಂತಿದೆ. ಹೀಗಿದ್ದರೂ ಆ ಎರಡೂ ಕುದುರೆಗಳು ಒಂದೇ ರಾಶಿಯಿಂದ ಹುಲ್ಲು ತಿನ್ನುತ್ತಿದ್ದಾವೆ! ಇದು ಹೇಗೆ ಸಾಧ್ಯ?’’

Readers thank from Grass Root levelಪ್ರಶ್ನೆಯ ಸರಿಯುತ್ತರವನ್ನು ಈ ಚಿತ್ರ (ಕೃಪೆ : ಪ್ರಸಾದ್‌ ನಾಯಕ್‌, ಬೆಂಗಳೂರು) ತೋರಿಸುತ್ತಿದೆ. ಬಿಳಿಕುದುರೆ ಪೂರ್ವಾಭಿಮುಖವಾಗಿ ಮತ್ತು ಕಪ್ಪುಕುದುರೆ ನೂರೆಂಬತ್ತು ಡಿಗ್ರಿ ವಿರುದ್ಧವಾಗಿ ಪಶ್ಚಿಮಕ್ಕೆ ತಿರುಗಿ ನಿಂತಿದೆ. ಅಂದರೆ, ಎರಡೂ ಪರಸ್ಪರ ಎದುರುಬದುರಾಗಿ ನಿಂತಿವೆ! ಹಾಗಾಗಿ ಒಂದೇ ರಾಶಿಯಿಂದ ಹುಲ್ಲನ್ನು ತಿನ್ನುವುದು ಸಾಧ್ಯವಾಗಿದೆ.

ಆದರೆ ತಾಳಿ, ಚಿತ್ರದಲ್ಲಿ ಹುಲ್ಲಿನ ಹೊರೆ ಕಾಣಿಸುತ್ತಿಲ್ಲವಲ್ಲ ಎಂದಿರಾ? ಅವತ್ತು ನಾನು ಪ್ರಶ್ನೆ ಕೇಳುವಾಗ, ದೇವರಾಣೆಗೂ (ಹುಟ್ಟಿಸಿದವ ಹುಲ್ಲನ್ನೂ ಮೇಯಿಸುತ್ತಾನಲ್ಲ, ಆ ದೇವರೇ) ಹುಲ್ಲಿನ ಹೊರೆ ಇತ್ತು! ಈಗ ಕುದುರೆಗಳು ಆ ಹುಲ್ಲನ್ನು ತಿಂದು ಮುಗಿಸಿರುವುದರಿಂದ ಅದು ಕಾಣುತ್ತಿಲ್ಲ :-)

ಸರಿಯುತ್ತರ ಬರೆದವರು:

- ಸಂಧ್ಯಾ ಕೆ ಎಲ್‌; ಬೆಂಗಳೂರು
- ಈರಣ್ಣ ಎಂ ಶೆಟ್ಟರ್‌; ಮುಂಬಯಿ
- ಭಾಸ್ಕರ್‌ ಬಿ ಎಸ್‌, ಬೆಂಗಳೂರು
- ಉಷಾರಾಣಿ, ಹೈದರಾಬಾದ್‌
- ಗಿರೀಶ್‌ ಸಿ; ಬೆಂಗಳೂರು
- ಅರುಣ್‌ ಶಿವಸ್ವಾಮಿ; ಚಿಕಾಗೊ
- ರಾಜಗೋಪಾಲ್‌ ಟಿ; ಬೆಂಗಳೂರು
- ಶ್ರೀಹರ್ಷ ಬಿ ಜಿ; ಬೆಂಗಳೂರು
- ಕೃಷ್ಣಮೂರ್ತಿ ಬಿಜವಾರ; ಬೆಂಗಳೂರು
- ಅಶೋಕ್‌ ಎಚ್‌ ಎಸ್‌; ಬೆಂಗಳೂರು

ಎಲ್ಲರಿಗೂ ಅಭಿನಂದನೆ ಮತ್ತು ಧನ್ಯವಾದಗಳು.

ಇನ್ನು ಕೆಲವರು ಮಾತ್ರ ಪ್ರಶ್ನೆಯನ್ನು ಅರ್ಥಮಾಡುವುದರಲ್ಲಿ ಗಲಿಬಿಲಿಗೊಂಡಿದ್ದಾರೆ. ಅವರ ಉತ್ತರಗಳನ್ನು ನೋಡಿ:

ಬಿಳಿ ಕುದುರೆ ಪೂರ್ವ ದಿಕ್ಕಿಗೆ ‘‘ತಿರುಗಿ’’ ನಿಂತಿದೆ ಅಂದರೆ ಪಶ್ಚಿಮಕ್ಕೆ ಮುಖ ಮಾಡಿ ನಿಂತಿದೆ. ಹಾಗೆಯೇ ಕಪ್ಪು ಕುದುರೆ ನೂರೆಂಬತ್ತು ಡಿಗ್ರಿ ವಿರುದ್ದವಾಗಿ ಪಶ್ಚಿಮಕ್ಕೆ ಮುಖ ಮಾಡಿ ನಿಂತಿದೆ. ಹಾಗಾಗಿ ಎರಡು ಕುದುರೆಗಳೂ ಪಶ್ಚಿಮಕ್ಕೆ ಮುಖ ಮಾಡಿ ನಿಂತು ಹುಲ್ಲು ತಿನ್ನುತ್ತಿವೆ. ಸರಿನಾ...?

- ಭಕ್ಷಿ; ಬೆಂಗಳೂರು

*

ಆ 180 ಡಿಗ್ರಿ ಕರಿ ಕುದ್ರೆಯು ಬಿಳಿ ಕುದ್ರೆ ನೆರಳಾ? ಬಿಳಿ ಕುದ್ರೆ ರಿಯಲ್‌ ಹುಲ್ಲು ರಿಯಲ್‌ ಆಗಿ ತಿಂದ್ರೆ ಕರಿ ಕುದ್ರೆ ಹುಲ್ಲಿನ ನೆರಳನ್ನು ವರ್ಚ್ಯುವಲ್‌ ಆಗಿ ತಿಂತಿದೆಯಾ?

- ಗುರು ಚತುರ್ವೇದಿ; ಸಿಕಂದರಾಬಾದ್‌

*

ಹುಲ್ಲಿನ ಬಗೆಗಿನ ಎಲ್ಲಾ ವಿಷಯಗಳನ್ನು ಹೀರಿಕೊಂಡಿರುವ ಈ ಬಾರಿಯ ವಿಚಿತ್ರಾನ್ನ ಹುಲುಸಾಗಿ ಬೆಳೆದಿದೆ. ಚೆನ್ನವೀರ ಕಣವಿಯವರ ‘‘ಮಾತು’’ ಕವಿತೆಯಲ್ಲಿ ಬರುವ ಮಕಮಲ್ಲು ಹುಲ್ಲು ನಿಮಗಾಗಿ. ತಿನ್ನಲು ಅಲ್ಲ :-)

ಮುಂಜಾವಿನಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತವು ಹೂವು ಸುರಿಸಿದಂತೆ
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ!

ಅಂದಹಾಗೆ ಪ್ರಶ್ನೆಗೆ ಉತ್ತರ: ಕುದುರೆ ಕನ್ನಡಿ ಮುಂದೆ ನಿಂತು ಹುಲ್ಲು ತಿನ್ನುತ್ತಿರಬಹುದೇ? ಕನ್ನಡಿಯಲ್ಲಿ ಕುದುರೆಮುಖ!

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

*

ಹಲವಾರು ತಿಂಗಳುಗಳ ನಂತರ ನಿಮಗೆ ಪತ್ರಿಸುತ್ತಿರುವುದಕ್ಕೆ ಕ್ಷಮೆ ಇರಲಿ. ನಿಮ್ಮೊಂದಿಗೆ ಪತ್ರಿಸಲು ಸಾದ್ಯವಾಗದಿದ್ದರೂ ಲೇಖನಗಳನ್ನು ಓದುವ ಅವಕಾಶದಿಂದ ವಂಚಿತನಾಗಿರಲಿಲ್ಲ. ಅದೇ ಸಂತೋಷ.

ಇನ್ನು, ನಿಮ್ಮ ಲೇಖನಗಳ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಅದ್ಹೇಗೆ ನೀವು ವಿಷಯಗಳನ್ನು ಸಂಗ್ರಹಿಸುತ್ತಿರೋ, ಅದಕ್ಕೆ ನಿಮಗೆ ಸಾಕಷ್ಟು ಸಮಯವಿರುವುದೇ ಅಥವಾ ನಿಮ್ಮ ಈ ಕಾರ್ಯದಲ್ಲಿ ನಿಮ್ಮ ಅರ್ಧಾಂಗಿಯ ಪಾತ್ರವೇನಾದರೂ ಇದೆಯೇ ಎಂಬ ಅನುಮಾನ ಬರುತ್ತದೆ. ಅಷ್ಟು ವೈವಿಧ್ಯವನ್ನು ನಿಮ್ಮ ಲೇಖನಗಳಲ್ಲಿ ಕಾಣಬಹುದು. ಕೆಲವೊಮ್ಮೆ ಒಂದೇ ರೀತಿಯ ವಿಶ್ಲೇಷಣೆ ಎಂದು ಎನ್ನಿಸಿದರೂ ಲೇಖನಗಳ ಮುಖ್ಯ ವಿಷಯವನ್ನು ಹೋಲಿಸಿ ನೋಡಿದಲ್ಲಿ ಅದು ಮರೆಯಾಗುತ್ತದೆ. ನಿಜವಾಗಲೂ ನಿಮ್ಮ ಸಂಶೋಧನಾ ಶಕ್ತಿಗೆ ಮೆಚ್ಚಿ ಅಭಿನಂದಿಸಲೇಬೇಕಾಗುತ್ತದೆ. ಕಸದಿಂದ ರಸ ಎಂಬ ಹಿರಿಯಣ್ಣಂದಿರ ಹಿತೋಕ್ತಿಯಂತೆ ಹುಲ್ಲು ಬಗ್ಗೆಯೂ ಒಳ್ಳೆಯ ಸೊಗಸಾದ ಲೇಖನ ಬರೆದು ರಸವತ್ತಾದ ಔತಣ ನೀಡಿದ್ದಕ್ಕೆ ಅಭಿನಂದನೆಗಳು!

ರಸಪ್ರಶ್ನೆಗೆ ಉತ್ತರ: ಕುದುರೆಗಳು ಎರಡೂ ಒಂದೇ; ಬಿಳಿಕುದುರೆಯ ನೆರಳೇ ಕಪ್ಪು ಕುದುರೆ!

- ರಘುನಾಥ್‌.ಪಿ.ಜಿ; ಬೆಂಗಳೂರು

* * * *

ಇನ್ನಿತರ ಅನಿಸಿಕೆಗಳು, ಪತ್ರಗಳು:

ಹುಲ್ಲಿನ ಮೇಲಿನ ವ್ಯಾಖ್ಯಾನ/ಲೇಖನ ತುಂಬಾ ಚೆನ್ನಾಗಿದೆ. ಒಳ್ಳೆಯ ಉದಾಹರಣೆಗಳನ್ನು ಕೊಟ್ಟಿದ್ದೀರಿ. ಹಾಗೆಯೇ ವಿಶ್ವದಲ್ಲಿರುವ ಹುಲ್ಲುಗಾವಲುಗಳ ಹೆಸರುಗಳನ್ನೂ ಸೂಚಿಸಿದ್ದರೆ ಇನ್ನಷ್ಟು ಮಾಹಿತಿ ಸಿಕ್ಕಂತಾಗುತ್ತಿತ್ತು. ಇನ್ನು, ಜಾಣ್ಮೆಲೆಕ್ಕದಲ್ಲಿ ಬಿಳಿ ಕುದುರೆ ಪೂರ್ವಕ್ಕೆ ಹಾಗೂ ಕಪ್ಪು ಕುದುರೆ ಪಶ್ಚಿಮಕ್ಕೆ ತಿರುಗಿದ್ದರೂ ಬಹುಶಃ ಹುಲ್ಲಿನ ಹೊರೆ ಅವೆರಡರ ನಡುವೆಯೇ ಇದೆ ಅಂತ ನನ್ನ ಅನಿಸಿಕೆ.

- ಚಂದ್ರಶೇಖರ ಬಿ ಎಚ್‌; ಬೆಂಗಳೂರು

*

ವಿಚಿತ್ರಾನ್ನದ ಗ್ರಾಸವನ್ನು ಗ್ರಹಿಸಿದ್ದಾಯ್ತು ಈಗಷ್ಟೆ. ಚೆನ್ನಾಗಿತ್ತು. ಚಿಕ್ಕವಳಾಗಿದ್ದಾಗ ಅನ್ಸ್ತಾ ಇತ್ತು ಯಾಕೆ ಮನುಷ್ಯರು ಹುಲ್ಲು ತಿನ್ನಲ್ಲ ಅಂತ. ಅದು ಗೊತ್ತಾಗಿದ್ದು ಪಿಯುಸಿ ಓದ್ತಾ ಇರೋವಾಗ - ಸೆಲ್ಯುಲೊಸ್‌ ಅನ್ನು ಜೀರ್ಣಿಸಿಕೊಳ್ಳೋಕೆ ನಮ್ಗೆ ಆಗಲ್ಲ ಅನ್ನೋದು. ನಿಮ್ಮ ಪಜ‚ಲ್‌ ಗೆ ಉತ್ತರ - ಕುದ್ರೆಗಳು ಮುಖಾಮುಖಿಯಾಗಿ ನಿಂತಿರಬಹುದಾ? ಮತ್ತು ಹುಲ್ಲು ಮಧ್ಯೆ ಇರುತ್ತೆ, ಹೌದಾ?

- ರಾ-ಧಿಕಾ ಎಂ ಜಿ; ಬೆಂಗಳೂರು

*

ತರಹೇವಾರಿ ವಿಷಯಗಳನ್ನು ಸರಳ, ಸುಲಲಿತ ಹಾಗೂ ಸ್ವಾರಸ್ಯಕರವಾಗಿ ಓದುಗರಿಗೆ ಉಣಬಡಿಸುವ ನಿಮ್ಮ ರೀತಿ ನಿಜವಾಗಲೂ ಅದ್ಭುತ. ಹಾಸ್ಯ, ನೀತಿ ಹಾಗು ವಿಷಯದ ಬಗೆಗಿನ ತಿರುಳನ್ನು ಸಮಾನವಾಗಿ ಒಳಗೊಂಡ ನಿಮ್ಮ ಈ ವಾರದ ಅಂಕಣ ‘‘ಹುಲ್ಲು’’ ಬಹಳ ಸೊಗಸಾಗಿ ಮೂಡಿಬಂದಿದೆ. ಇದನ್ನು ಓದುವಾಗ ನಮ್ಮಲ್ಲಿ ವೈದಿಕ ಸಮಯದಲ್ಲಿ ದನಗಳಿಗೆ ಇಡುವ ಗೋಗ್ರಾಸದ ಬಗ್ಗೆ ನೆನಪಾಯಿತು. ರಸಪ್ರಶ್ನೆಯೂ ಕೂಡ ಚೆನ್ನಾಗಿದೆ. ಒಂದು ಕುದುರೆ ಪೂರ್ವಕ್ಕೆ, ಇನ್ನೊಂದು ಕುದುರೆ ಪಶ್ಚಿಮಕ್ಕೆ ತಿರುಗಿದ್ದರೇನಂತೆ, ಎರಡೂ ಕುದುರೆಗಳು ಎದುರು ಬದುರಾಗಿ ನಿಂತಾಗಲ್ಲವೇ ಮಧ್ಯ ಇಟ್ಟಿರುವ ಹುಲ್ಲನ್ನು ತಿನ್ನಲು ಸಾಧ್ಯ?

- ಅನಘಾ ತಾಮ್ಹನ್ಕರ್‌, ಬೆಂಗಳೂರು

*

ಹುಲ್ಲಾನ್ನ ಒಳ್ಳೆದಿತ್ತು ವಿಚಿತ್ರಾನ್ನಭಟ್ಟರೆ :) ರಸಪೂರಿತ ಕಬ್ಬು ಅಂತ ತಿಳ್ಕೊಂಡು ಚೆನ್ನಾಗಿ ತಿಂದೆ :) ಪ್ರಶ್ನೆಗೆ ಉತ್ತರ: ಕಪ್ಪು-ಬಿಳಿ ಕುದುರೆಗಳು ಎದುರುಬದುರಾಗಿ ನಿಂತಿವೆ, ನಡುವೆ ಹುಲ್ಲಿನ ರಾಶಿಯಿದೆ.

- ಮಹೇಶ್‌ ಮಾರ್ಪಳ್ಳಿ; ನ್ಯೂಜೆರ್ಸಿ

*

ಎರಡು ಕುದುರೆಗಳೂ ಎದುರುಬದುರಾಗಿ ನಿಂತರೆ ಒಂದು ಪೂರ್ವಕ್ಕೆ ಮುಖ ಹಾಕಿದಂತಾಗುತ್ತದೆ, ಇನ್ನೊಂದು ಪಶ್ಚಿಮಕ್ಕೆ ಮುಖ ಹಾಕಿದಂತಾಗುತ್ತದೆ. ಹೀಗೆ ಒಂದೇ ಹೊರೆ ಹುಲ್ಲನ್ನು ಜೊತೆಯಗಿ ತಿನ್ನಲು ಸಾಧ್ಯ! ನಾನು ಚಿಕ್ಕವಳಿದ್ದಾಗ ನನ್ನ ಅಜ್ಜ(ತಂದೆಯ ತಂದೆ) ಕೇಳುತ್ತಿದ್ದ ರಸಪ್ರಶ್ನೆಗಳಲ್ಲಿ ಇದೂ ಒಂದು.

ಪ್ರೀತಿಯಾಂದಿಗೆ... ವಿಚಿತ್ರಾನ್ನದ ಖಾಯಂ ಊಟಗಾರ್ತಿ/ಓದುಗಳು,

- ಸುಮನಾ ಭಟ್‌ ಸಂಕಹಿತ್ಲು; ಸೌತ್‌ ಸಲೆಮ್‌, ನ್ಯೂಯಾರ್ಕ್‌

*

’ಹುಲ್ಲಿನ ಹೊರೆ ಮತ್ತು ಕುದುರೆಗಳು’ ಸಮಸ್ಯೆಗೆ ಸಂಭವನೀಯ ಉತ್ತರಗಳು:

1. ಕುದುರೆಗಳ ಉದ್ದ: ತಲಾ 20,000 ಕಿ.ಮೀ

2. ಕುದುರೆಗಳು ಸಾಧಾರಣವೇ. ಆದರೆ: ಹುಲ್ಲು ಇರುವ ಜಾಗ ಉತ್ತರ ಧ್ರುವಕ್ಕೆ ಬಹಳ ಹತ್ತಿರ, ಒಂದು ಕುದುರೆಯೂ ಅರ್ಧ ವೃತ್ತಾಕಾರವಾಗಿ ) ಹುಲ್ಲು ತಿನ್ನುತ್ತಿದ್ದರೆ, ಇನ್ನೊಂದು ಕುದುರೆಯೂ (ಆಕಾರದಲ್ಲಿ ನಿಂತಿದೆ. ಅವುಗಳ ನಡುವಿನ ಹುಲ್ಲಿನ ರಾಶಿ ‘‘।’’ ಆಕಾರದಲ್ಲಿ ಧ್ರುವದ ಮೇಲೆಯೆ ಇದ್ದು ಎರಡರ ಬಾಯಿಗೂ ಸಿಗುತ್ತಿದೆ!

3. ಅದೇ ಉತ್ತರ, ಆದರೆ ಸ್ಥಳ: ದಕ್ಷಿಣ ಧ್ರುವಕ್ಕೆ ತುಂಬ ಹತ್ತಿರ.

4. ಒಂದೇ ರಾಶಿ ಎಂದರೆ: ಮೇಷ (ವೃಷಭವೂ ಆಗಬಹುದು) ರಾಶಿಯಲ್ಲಿ ಬೆಳೆದ ಹುಲ್ಲು.

5. ಕುದುರೆಗಳಿಗೆ ಪೂರ್ವ, ಪಶ್ಚಿಮ ಎಂದರೆ ಏನೆಂದು ಗೊತ್ತಿಲ್ಲ.

6. ಕುದುರೆಗಳು ಆಗಲೇ ಸ್ವಲ್ಪ ‘‘ಗ್ರಸ್ಸ್‌’’ (ವೀದ್‌, ಪೊತ್‌, ಭಂಗಿ) ಹಾಕಿರುವುದರಿಂದ... ದಿಕ್ಕು ತೋರುತ್ತಿಲ್ಲ.

7. ಬಿಳಿ ಕುದುರೆ = ಮುಂಜಾವದಲ್ಲೂ, ಕಪ್ಪು ಕುದುರೆ = ಸಂಜೆಯಲ್ಲೂ ಒಟ್ಟು ಒಂದೇ ಕುದುರೆ.

8. ಹುಲ್ಲಿನ ರಾಶಿ ಬಹಳ ದೊಡ್ಡದೂ ವಿಸ್ತಾರವೂ ಆಗಿದೆ. ಅದರ ಮೇಲೆಯೇ ನಿಂತು ಕುದುರೆಗಳು (ಬೆನ್ನಿಗೆ ಬೆನ್ನು ಹಾಕಿದ್ದರೂ ಪರವಾ ಇಲ್ಲ) ಅದೇ ರಾಶಿಯ ಹುಲ್ಲು ತಿನ್ನುತ್ತಿವೆ.

9. ಕುದುರೆಗಳು ಫಿಜಿ ದೇಶದಲ್ಲಿ, ಇಂಟರ್‌ ನ್ಯಾಷನಲ್‌ ಡೇಟ್‌ ಲೈನ್‌ ನ ಆ ಪಕ್ಕದಲ್ಲೂ ಈ ಪಕ್ಕದಲ್ಲೂ ನಿಂತಿವೆ, ಹುಲ್ಲು ಲೈನ್‌ ನ ಮೇಲೆಯೇ ಇದೆ.

10. ಎಲ್ಲೂ ಇರಬಹುದು, ಪೂರ್ವಕ್ಕೆ ತಿರುಗಿದ ಕುದುರೆ ---è ಹುಲ್ಲು Ç ಪಶ್ಚಿಮಕ್ಕೆ ತಿರುಗಿದ ಕುದುರೆ.

- ದಿನೇಶ್‌ ನೆಟ್ಟರ್‌, ನ್ಯೂಜೆರ್ಸಿ

*

ಸ್ವಾಮಿ, ನೀವು ಕುದುರೆಗಳನ್ನು ಮುಖಾಮುಖಿಯಾಗಿ ನಿಲ್ಲಿಸಿ ಹುಲ್ಲಿನ ಕಟ್ಟನ್ನು ಕುದುರೆಗಳ ಮಧ್ಯೆ ಇಟ್ಟು ತಿನ್ನಲು ಹೇಳಿದರೆ ಅವು ತಿನ್ನದೇ ಇರುತ್ತವೆಯೇ? ಕಳೆದವಾರ ’ಅಪ್ಪ’ವನ್ನು ತಿಂದ ಬಾಯಿಗೆ ಅಪ್ಪದಷ್ಟೇ ರುಚಿಯಾಗಿತ್ತು ಸ್ವಾಮಿ ಈ ವಾರದ ಹುಲ್ಲು! ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಬಿಡ್ತಾನೆಯೇ?

- ಸನತ್‌ ಕೊಲಚಿಪ್ಪು; ಮೈಸೂರು

*

ಹುಲ್ಲಿನ ರಸಾಯನ ಚನ್ನಾಗಿದೆ. ಪ್ರಪಂಚದ ಮುಖ್ಯವಾದ ಅಹಾರ ವರ್ಗವಾದ ಅಕ್ಕಿ, ಗೋ-ಧಿ ಮುಂತಾದುವು ಕೂಡಾ monocot ಹುಲ್ಲಿನ ಜಾತಿಯವೇ!

ಈಚೀಚೆಗೆ ಹೆಲ್ತ್‌ ನಟ್‌ಗಳು ಗೋಧಿ- ಹುಲ್ಲು, ಬಾರ್ಲಿ ಹುಲ್ಲುಗಳನ್ನು ಅತ್ಯಮೋಘವಾದ ಆಹಾರ (yoga food) ಎಂದು ಪ್ರಚಾರ ಮಾದುತ್ತಿದ್ದಾರಲ್ಲ. ಹೀಗೇ ಮುಂದುವರಿದಲ್ಲಿ ದೇವರು ತಿನ್ನಿಸಲೀ ಬಿಡಲೀ ನಾವೇ ಹುಲ್ಲು ಮೇದುಬಿಡುತ್ತೇವೇನೋ? ಕೊಟ್ಟಿಗೆಯಲ್ಲಿ ಗೋಮಾತೆಗಳೊಡನೆ ಸಹಪಂಕ್ತಿ ಭೋಜನ ಅಥವಾ ಗೋಮಾತೆಗಳ ಊಟಕ್ಕೇ ಚಕ್ರ (mooo ve over) ಅಂತ?

ನಿಮ್ಮ ಕುದುರೆಗಳು ಎದಿರುಬದಿರಾಗಿ ನಿಂತು ಒಂದೇ ರಾಶಿಯಿಂದ ಹುಲ್ಲು ತಿನ್ನುತ್ತಿವೆಯಲ್ಲವೆ? ಬಹುಶಃ ಕುದುರೆಗಳಲ್ಲಿ ವರ್ಣಬೇಧ ಇರಲಾರದು :)

- ಮಧುಶಾಲಿನಿ; ಮೇರಿಲ್ಯಾಂಡ್‌

*

ಇವತ್ತಿನ ವಿಚಿತ್ರಾನ್ನ ಚೆನ್ನಾಗಿದೆ. ಎರಡೂ ಕುದುರೆಗಳು ಎದುರುಬದುರಾಗಿ ನಿಂತಿವೆ ಅಲ್ಲ್ವಾ?

ನನಗೆ ಒಂದು ಸಂದೇಹ ಇದೆ: ‘‘ಮೂಡುವನು ರವಿ... ಮಾಡಿನ ಹುಲ್ಲಲಿ ಚಿನ್ನದ ಗೆರೆಯನು...’’ ನೀವು ಲೇಖನದಲ್ಲಿ ಉದ್ಧರಿಸಿದ ಕವಿತೆಯನ್ನು ಬರೆದದ್ದು ಕುವೆಂಪು ಅಲ್ಲವೇ? ಅಥವಾ ನೀವೆಂದಂತೆ ಪಂಜೆ ಮಂಗೇಶರಾಯರೇ?

- ಸಹನಾ ಶಾಫ‚್‌ರ್; ಬೆಂಗಳೂರು

(‘ಮೂಡುವನು ರವಿ ಮೂಡುವನು...’ ಪದ್ಯವನ್ನು ಬರೆದವರು ಪಂಜೆಮಂಗೇಶರಾಯರು. ನಿಮಗೆ ಸಂದೇಹ ಆಗುವುದಕ್ಕೆ ಕಾರಣವಿದೆ. ಅದೇನೆಂದರೆ ಈ ಕವಿತೆಯ ಶೀರ್ಷಿಕೆ ’ಉದಯರವಿ’. ಅದು ಕುವೆಂಪು ಅವರ ಮನೆಯ ಹೆಸರು ಕೂಡ! - ಶ್ರೀವತ್ಸ ಜೋಶಿ.)

*

ಇವತ್ತಿನ ’ಹುಲ್ಲು...’ ವಿಚಿತ್ರಾನ್ನ ತುಂಬಾ ಚೆನ್ನಾಗಿ ಬಂದಿದೆ. ಮೊನ್ನೆಯಷ್ಟೆ ಕನ್ನಡಸಾಹಿತ್ಯಶಿಬಿರದಲ್ಲಿ ಡಾ।ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರಿಂದ ರಾಘವಾಂಕನ ಹರಿಶ್ಚಂದ್ರಕಾವ್ಯವನ್ನಾಲಿಸಿದ ನಂತರ ಇವತ್ತು ನಿಮ್ಮ ಲೇಖನದಲ್ಲಿ ಚಂದ್ರಮತಿಯ ಪ್ರಲಾಪದ ಇನ್ನಷ್ಟು ಸಾಲುಗಳನ್ನು ಓದುವ ಸುಯೋಗ ಒದಗಿ ಬಂದಂತಾಯ್ತು. ಒಂದು ಸಣ್ಣ ವಿಶಯವನ್ನೂ ಇಷ್ಟೊಂದು ಸವಿಸ್ತಾರವಾಗಿ ಸೊಗಸಾಗಿ ಬರೆಯುವ ಚಾಣಾಕ್ಷತನ ನಿಮಗಿರುವುದರಿಂದ ನೀವು ಹುಲ್ಲನ್ನೂ ಕೂಡ ಸಿಂಹಾಸನಕ್ಕೆ ಏರಿಸುತ್ತೀರಿ! ಧನ್ಯವಾದಗಳು.

- ಪ್ರಸನ್ನ ಕುಮಾರ್‌; ನ್ಯೂಜೆರ್ಸಿ

*

ಸ್ವಾಮೀ, ವಿಚಿತ್ರಾನ್ನದ ತಲೆಬರಹ GRASS ಎಂದಕೂಡಲೇ ಬೆಚ್ಚಿಬಿದ್ದೆ! GRASS ಅಂತ ಒಂದು ಡ್ರಗ್‌ ಇದೆ, ಅದರ ಸಹವಾಸ ನಮಗೆ ಎಂದೂ ಬೇಡ! ಇನ್ನು ,ರಸಪ್ರಶ್ನೆ. ಕುದುರೆಗಳು ಮುಖಾಮುಖಿ ಇವೆ! ಸರಿ ತಾನೆ?

- ಎಸ್‌. ಎಂ. ಪೆಜತ್ತಾಯ; ಬೆಂಗಳೂರು

*

‘ಹುಲುಮಾನವರ’ ಮನರಂಜನೆಗೆಂದು ಹುಲ್ಲಿನ ಪುರಾಣವನ್ನೇ ಆಯ್ದುಕೊಂಡು, ಗಣಪನ ಪಾದಕ್ಕೆ ಗರಿಕೆಯ ಕಾಣಿಕೆಯನ್ನಿಡುವದರಿಂದ ಮೊದಲುಮಾಡಿ ಮಮತಾ ಬ್ಯಾನರ್ಜೀ ಮುಂತಾದವರನ್ನೆಲ್ಲ ಒಳಗೊಂಡು ಕೊನೆಗೆ ಕಬ್ಬಿನ ಸಿಹಿಯಾಂದಿಗೆ ಮುಕ್ತಾಯಗೊಂಡ ಲೇಖನ ಸಿಹಿಸಿಹಿಯಾದ ನೆನಪನ್ನು ಬಿಟ್ಟು ಹೋಗುವ ವಿಚಿತ್ರಾನ್ನ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಕಬ್ಬಿನಂತೆ ಬಿದಿರೂ ಹುಲ್ಲಿನ ಒಂದು ರೂಪವಷ್ಟೇ! ಅದರಿಂದ ನಿರ್ಮಿತವಾದ ಕೊಳಲು ತಮಿಳಿನಲ್ಲಿ ‘ಪುಲ್ಲಾಂ’ಗುಳಲ್‌ ಎಂದೇ ಕರೆಯಲ್ಪಡುತ್ತದೆ. ಮುರಲೀಧರನ ಕೈಯಲ್ಲಿದ್ದುಕೊಂಡು ಮನಮೋಹಕ ನಾದಸುಧೆಯನ್ನು ಹರಿಸಿ ಎಲ್ಲರನ್ನೂ ‘ಸೆಳೆ’ಯುತ್ತಿದ್ದ ವೇಣು ನಿಜಕ್ಕೂ Pull ಆಂಗುಳಲ್‌ ಅಲ್ಲವೇ!?

ಕೊನೆಗೆ ಕೊಟ್ಟ ಕುದುರೆ ಸಮಸ್ಯೆ: ಕುದುರೆ ಎಂದಮೇಲೆ ಅವಕ್ಕೆ horse sense ಇದ್ದೇ ಇರುತ್ತದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆ ಎನ್ನುತ್ತ ತಮ್ಮ ಮುಂದಿರುವ ಹುಲ್ಲನ್ನು ತಿನ್ನುತ್ತವೆ. ಪೂರ್ವಕ್ಕೆ ಮುಖಮಾಡಿದ ಕುದುರೆ, ಹೆಸರು ‘ಆಯುಷ್ಮಾನ್‌’, ’ಕೃಷ್ಣಾರ್ಪಣಮಸ್ತು’ ಎನ್ನುತ್ತ ಹುಲ್ಲಿಗೆ ಬಾಯಿ ಹಾಕುತ್ತದೆ. ಪಶ್ಚಿಮಕ್ಕೆ ಮುಖಮಾಡಿನಿಂತದ್ದು, ‘ಆಯ್‌. ಉಸ್ಮಾನ್‌’, ‘ಯಾ ಪರವರ್ದಿಗಾರ್‌, ತುಮ್‌ಹಾರೀ ಮೆಹರಬಾನೀ ಸೆ ಇತನಾ ಸಬ್‌ ಖಾನೇ ಕೊ ಮಿಲಾ’ ಎನ್ನುತ್ತ ‘ಬಿಸ್ಮಿಲ್ಲಾ’ ಮಾಡುತ್ತದೆ. (ಬಿಹಾರಿಗಳ ಉಚ್ಚಾರದಲ್ಲಿ ಎರಡೂ ಕುದುರೆಗಳ ಹೆಸರುಗಳು ಏಕರೂಪವಾಗಿರುತ್ತವೆ ಎಂಬುದು ಗಮನಿಸಬೇಕಾದ ಅಂಶ!)

ನಾನು ಚಿಕ್ಕವನಿದ್ದಾಗ ನನ್ನ ತಂದೆ ಈ ಸಮಸ್ಯೆಯನ್ನು ‘ನಾಲ್ಕು ಕುದುರೆಗಳು ನಾಲ್ಕು ದಿಕ್ಕಿಗೆ ಮುಖಮಾಡಿ ನಿಂತಿವೆ’ ಎಂದು ಹೇಳಿದ್ದರು. ಇಲ್ಲಿ ಎರಡೇ ಕುದುರೆಗಳು!! ಇನ್ನೂ ಸುಲಭವಾಯಿತು ಬಿಡಿ.

- ವಿಕ್ರಮ ಕವಲಿ; ಮೈಸೂರು

*

ರಸಪ್ರಶ್ನೆಗೆ ಉತ್ತರ: ಎರಡು ಕುದುರೆಗಳು ಮುಖಾಮುಖಿಯಾಗಿವೆ! ನೂರೆಂಬತ್ತು ಡಿಗ್ರಿ ವಿರುದ್ಧ ಎಂದಿದ್ದರೂ ಬೆನ್ನಿಗೆ ಬೆನ್ನು ಎಂದು ನೀವು ಹೇಳಿಲ್ಲವಲ್ಲ! ಆಫ‚್‌ಕೋರ್ಸ್‌, ನನಗೂ ಎರಡು-ಮೂರು ನಿಮಿಷ ಯೋಚಿಸಿದ ಮೇಲೆನೇ ಗೊತ್ತಾಗಿದ್ದು ಬಿಡಿ!

ಸರಿಯುತ್ತರ ಬರೆದದ್ದಕ್ಕೆ ಬಹುಮಾನವಾಗಿ ನನಗೆ ಒಂದು ಕಟ್ಟು ಹುಲ್ಲು ಕಳಿಸಿದರೆ ಬಹಳ ಉಪಕಾರವಾಗುವುದು ;-) ಮೊನ್ನೆ ಭಾನುವಾರ ನಮ್ಮ ಹೊಸ ಮನೆಗೆ ಮೂವ್‌ ಆದೆವು. ಗಾರ್ಡನ್‌ ಮಾಡಿಸೋಣವೆಂದು ವಿಚಾರಿಸಿದರೆ ಅದೇನೇನೊ ಮೆಕ್ಸಿಕನ್‌, ಇಟಾಲಿಯನ್‌ ಹುಲ್ಲು ಅಂತೆ, ಒಂದು ಚದರ ಅಡಿಗೆ 50 ರಿನ್ದ 150 ರೂಪಾಯಿ! ಒಂದೈದು ವರ್ಷಗಳ ಹಿಂದೆ ಜಮೀನಿನ ರೇಟು ಅಷ್ಟಿರ್ತಿತ್ತು ಬೆಂಗಳೂರಲ್ಲಿ. ಸದ್ಯಕ್ಕೆ ಬರೀ ಹುಲ್ಲು ಸಿಗ್ತಿದೆ ಆ ಬೆಲೆಗೆ! ಕಾಲ ಹೆಗೆ ಬದಲಾಗಿದೆ, ನೋಡಿ!

- ಚೈತನ್ಯರಾಮ್‌; ಬೆಂಗಳೂರು

*

Intro and first para of todays "grass" article is very opt. Touches the grass roots of writing and inspiration!

- Shama Sundara; Bangalore

*

Every time I hear grass, few things come to my mind. Kautilya’s story: After being humiliated by the King Dhana Nanda, Chaanakya was walking along the road. There were some grass on the way, and he got hurt by the grass, which was dry and deep rooted (and hence strong and can be hurting). He got angry and in the scorching Sun begins up root the grass. Sweating all over in the heat he sees to it that the entire stretch of grass is removed. Looking this from the window of a nearby building Chandragupta got interested in him and approaches Chaanakya. Both of them got teamed up and the rest is history. Chaankya neethi says: shatrushesha nirnaama maadabeku. Big trees fall flat during heavy wind and rain but grass never! Also grass will be always green, while trees dry Says one of the poems ‘Guru Nanank

The smell of grass is very refreshing. At least I have felt it so and checked with couple of others. I don’t know the reason. May be some biological or chemical reason is there. Or is just nostalgia? Is it straight away associated with child hood play and is recollected, ticking that memory when we see and smell grass? Do not know. Along with Kabbu even Battha is also form a grass and there are about 3000+ types of grass including the giant grass ‘bamboo’ Last thing: The role played by the grass in water conservation and prevention of soil erosion.

Coming to your quiz question: It is never said that the horses were back to back. Naturally they were facing each other and thereby facing east and west eating the grass thats in center.

- Krishnananda V; Bangalore

*

As I browsed through your article on grass, I thought I would find the mahime of wheat grass juice and all kinds of grass juice drinking craze among health fanatics in this country! You forgot to mention that. How come?

- Smitha Rayadurga; Michigan

*

Its nice article! Nice puzzle too. Well, I have answer for this puzzle - the horses are facing each other.

- Jagadeesh Kumar M; IISc, Bangalore

*

It’s a nice and interesting edition. Many important features of grass have been discussed in it. But you know, uve missed one interesting and most important mythological incident in it. I mean, when talking with Ravana, Seetha used to talk to a Thruna, why... coz she was a pativrate and she could not talk to another samsari man directly, but why she chose Hullu, coz its as sacred as a Rishi and as pure as Ganges. By seeing it, all the sins washed away. And also it signified that Ravana was as small as a grass in-front of the heroics of Shree Rama.

Keep providing us these beautiful articles, Sir. Thanks for this one.

- Srikanth Prabhakar; Bangalore

*

Your "hullu or Grass" article is too good! Keep writing such articles.

- Shruti Keerthi; New Jersey

*

I read your article "Grass" on Friday (3 days after its published online in thatskannada.com). I couldnt reply online for some reason. I personally liked the narration. I guess the haystack is in the middle of two horses and the horses are facing each other while grazing.

- Nijaguna Prasad; Columbia, Maryland

*

I have been a regular reader of your vichitranna. Regarding the hullu there is another important thing which realy counts. The decline of the Nanda empire was also because of the hullu. Chanakya takes the oath to destroy them, not even living their grass root.

Thanks for your informative and delicious articles, may Ganesha bless you with more and more information, so that you can serve us with nutritious vichitranna for ever.

- Dattatri Tiptur; City?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X