• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಕ್ಕಿಗಳ ಪಾಠ, ವ್ಯಾಕರಣ ಪಾಠ... ವಿಚಿತ್ರಾನ್ನ ಊಟವಲ್ಲ ಪಾಠ!

By Staff
|

ಇಂದಿನ ವಿಚಿತ್ರಾನ್ನದಲ್ಲಿ, ಕೊಕ್ಕರೆಗಳನ್ನು ಉದಾಹರಣೆಯಾಗಿಟ್ಟು ಮಾನವನನ್ನು ತುಲನೆ ಮಾಡುತ್ತಾ ನೀತಿಬೋಧೆಯನ್ನು ಮಾಡಿದ ನಿಮ್ಮ ಅದ್ಭುತ ಕಲ್ಪನಾಶಕ್ತಿ ಮೆಚ್ಚತಕ್ಕದ್ದು. ಪೂರ್ಣ ಲೇಖನ ಓದಿದಾಗ, ಮಾನವ ಕೇವಲ ಒಂದು ಕೊಕ್ಕರೆಗಿಂತಲೂ ಕೀಳಾಗಿ ಕಾಣುವಷ್ಟರ ಮಟ್ಟಿಗೆ ನಿಮ್ಮ ನಿರೂಪಣಾ ಶೈಲಿಯು ಕಾರ್ಯನಿರ್ವಹಿಸುತ್ತದೆ.

ಅಂದಹಾಗೆ ನೀವು ಹೇಳಿದ ಟೀಮ್‌ವರ್ಕ್‌ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅಳವಡಿಸಲಾದ ‘ಸ್ವ ಸಹಾಯ’ ಗುಂಪುಗಳಲ್ಲಿ ಕಾಣಬಹುದು. ಈ ಗುಂಪಿನಲ್ಲಿ 12 ರಿಂದ 15 ಮಂದಿ ವಾರಕ್ಕೊಂದು ಮನೆಯಲ್ಲಿ ಗುಂಪುಗೂಡಿ ಆ ಮನೆಯ ಕೆಲಸವನ್ನು ಮಾಡಿ ಒಂದಿಷ್ಟು ದುಡ್ಡು ಉಳಿತಾಯ ಮಾಡಿ ಅದನ್ನು ಬ್ಯಾಂಕಿಗೆ ಜಮಾ ಮಾಡುತ್ತಾರೆ. ದಿನದ ಕೊನೆಯಲ್ಲಿ ವಾರಕ್ಕೊಬ್ಬರಂತೆ ಸದಸ್ಯರನ್ನೇ ಪಾಳಿಯಲ್ಲಿ ಅಧ್ಯಕ್ಷರನ್ನಾಗಿ ಮಾಡಿ ಚಿಕ್ಕ ಸಭೆಯನ್ನು ಏರ್ಪಡಿಸಿ ಅಲ್ಲಿ ಒಂದು ವಿಷಯವನ್ನು ಚರ್ಚಿಸುತ್ತಾರೆ. ಹಾಗೂ ಯಾರಾದರೊಬ್ಬರನ್ನು ಅತಿಥಿಯಾಗಿ ಕರೆಯುತ್ತಾರೆ - ಅದು ಯಾರೂ ಆಗಬಹುದು, ನಮ್ಮ ಊರಿನಲ್ಲಿ ನನ್ನನ್ನೇ ಎರಡು ಸಲ ಅಥಿತಿಯಾಗಿ ಕರೆದಿದ್ದಾರೆ! ಅಷ್ಟೇ ಏಕೆ ಒಬ್ಬ 10 ತರಗತಿಯ ವಿದ್ಯಾರ್ಥಿಯೂ ಅತಿಥಿಯಾಗಿದ್ದಾನೆ. ಈ ಅಥಿತಿಗಳಿಂದ ಏನೋ ಒಂದು ವಿಷಯವನ್ನು ಪಡೆದು ತಿಳಿದುಕೊಳ್ಳುತ್ತಾರೆ. ನಿಮ್ಮ ಈ ಲೇಖನವನ್ನೋದಿದಾಗ ನನ್ನ ಮನದಾಳದಲ್ಲಿ ಮೇಲಿನ ಎಲ್ಲಾ ವಿಷಯಗಳು ಮೂಡಿ ಬಂದವು.

- ಪ್ರಕಾಶ್‌ ಶೆಟ್ಟಿ; ಉಳೆಪಾಡಿ

*

ನಿಮ್ಮ ಇಂದಿನ ವಿಚಿತ್ರಾನ್ನ ಓದುತ್ತಿದ್ದಾಗ ಕೆಲವು ವಾರಗಳ ಹಿಂದೆ ಎಬಿಸಿಯಲ್ಲಿಯೋ, ಎನ್‌ಬಿಸಿಯಲ್ಲಿಯೋ ಈ ಕೊಕ್ಕರೆಗಳ ಹಾರಾಟದ ಬಗ್ಗೆ ಒಂದು ಆಸಕ್ತಿಕರ ಕಾರ್ಯಕ್ರಮ ನೋಡಿದ್ದು ನೆನಪಾಯಿತು. ಆದರೆ ಕರ್ಮಕ್ಕೆ ಅದನ್ನು ಅರ್ಧಂಬರ್ಧ ನೋಡಿದ್ದರಿಂದ ಏನು ಎತ್ತ ಎಂದು ಜ್ಞಾಪಕಕ್ಕೆ ಬರುತ್ತಿಲ್ಲ. ಅದರಲ್ಲಿ ಒಬ್ಬ ಮನುಷ್ಯ/ವಿಜ್ಞಾನಿ ತನ್ನ ಚಿಕ್ಕ ವಿಮಾನದಲ್ಲಿ ಹೋಗುತ್ತಿದ್ದಾಗ ಆ ಚಿಕ್ಕ ವಿಮಾನವನ್ನೇ ಮುಂದೆ ಹೋಗುತ್ತಿರುವ ಲೀಡರ್‌ ಕೊಕ್ಕರೆ ಎಂದು ಉಳಿದ ಕೊಕ್ಕರೆಗಳು ್ಖಆಕಾರದಲ್ಲಿ ಹಿಂಬಾಲಿಸುತ್ತವೆ. ಒಂದು ದಿನ ಅಚಾನಕ್ಕಾಗಿ ಈ ರೀತಿ ಆಗಿದ್ದನ್ನು ಕಂಡ ಆತ ಅದರ ಬಗ್ಗೆ ಸಂಶೋಧನೆ ಮಾಡುತ್ತಾನೆ, ಮತ್ತೆ ಅವು ಅದನ್ನೇ ಪುನರಾವರ್ತಿಸುತ್ತವೆ; ಮತ್ತೆ ಇನ್ನೂ ಏನೇನೋ ತರಹದ ಪ್ರಯೋಗಗಳು. ಇದೇ ಘಟನೆಯನ್ನು ಆಧರಿಸಿ ಒಂದು ಹಾಲಿವುಡ್‌ ಚಲನಚಿತ್ರ ಸಹ ಬಂದಿದೆ ಎಂದು ಹೇಳುತ್ತಿದ್ದ ನೆನಪು. ನಾನು ಸರಿಯಾಗಿ ಗಮನವಿಟ್ಟು ಮರೆಯದಂತೆ ಗಮನಿಸಿಲ್ಲ ಎಂದು ಕಾಣುತ್ತದೆ. ನಿಮ್ಮ ಲೇಖನ ಓದುತ್ತಿದ್ದಾಗ ಇವೆಲ್ಲಾ ಮನಸ್ಸಿನಲ್ಲಿ ಸುಳಿಯಿತು. ಉತ್ತಮ ಲೇಖನ; ಉತ್ತಮ ವಿಷಯ. ಅಭಿನಂದನೆಗಳು.

- ರವಿ ರೆಡ್ಡಿ ; ಕ್ಯಾಲಿಫೊರ್ನಿಯಾ

*

ಕೊಕ್ಕರೆಗಳ ಹಾರಾಟದ ಬಗ್ಗೆ ಬರೆದ ವಿಚಿತ್ರಾನ್ನ ಬಹಳ ಹಿಡಿಸಿತು! ಹಲವಾರು ವಿಚಾರಗಳನ್ನು ವಿಚಿತ್ರಾನ್ನದಿಂದ ತಿಳಿದುಕೊಂಡೆ. ವಂದನೆಗಳು. ಬೇಸರದ ಸಂಗತಿ ಏನೆಂದರೆ ಈಗ ಕೊಕ್ಕರೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಅವುಗಳನ್ನು ಅವಿರತವಾಗಿ ಬೇಟೆಯಾಡಿ ಕೊಲ್ಲುತ್ತಾರೆ ಎನ್ನುವುದಲ್ಲ. ಇತ್ತೀಚೆಗೆ ಪ್ರಾಣಿಪಕ್ಷಿಗಳನ್ನು ಬೇಟೆಯಾಡಿ ಕೊಲ್ಲುವ ಪರಿಪಾಠ ಭಾರತದಲ್ಲಿ ಕಡಿಮೆ ಆಗುತ್ತಿದೆ. ಅದು ಸಂತೋಷದ ಸಂಗತಿ. ಆದರೂ, ಕೊಕ್ಕರೆಗಳ ಸಂಖ್ಯೆ ಯಾಕೆ ಇಳಿಮುಖವಾಗುತ್ತಿದೆ? ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಕ್ರಿಮಿನಾಶಕಗಳ ಉಪಯೋಗ. ಇದರಿಂದಾಗಿ ನಮ್ಮ ನೆಲ ಜಲ ವಿಷಮಯ ಆಗುತ್ತಿದೆ. ಈ ರೀತಿ ನಾವು ವಿಷಗಳನ್ನು ಕೃಷಿಯಲ್ಲಿ ಬಳಸಿದರೆ ಕೊಕ್ಕರೆಗಳಿಗೆ ಉಳಿಗಾಲ ಇಲ್ಲ. ಮುಂದಕ್ಕೆ ಕೃಷಿ ಉತ್ಪನ್ನ ಬಳಸುವ ನಮಗೆ ಕೂಡಾ ಉಳಿಗಾಲ ಇಲ್ಲ ಎಂಬುದು ಈ ‘ಕೊಕ್ಕರೆಗಳ ಇಳಿಮುಖವಾಗುತ್ತಿರುವ ಸಂಖ್ಯೆ’ ಕೊಡುವ ಎಚ್ಚರಿಕೆ ಅಲ್ಲವೇ? ಈ ಬಗ್ಗೆ ನೀವು ಎರಡು ವಾಕ್ಯ ಬರೆದಿದ್ದರೆ ಪರಿಸರ ಪ್ರೇಮಿಗಳಿಗೆ ತುಂಬಾ ಖುಷಿ ಆಗುತ್ತಿತ್ತು. ಬರೆಯುವಿರಾ?

- ಎಸ್‌. ಮಧುಸೂದನ ಪೆಜತ್ತಾಯ; ಬೆಂಗಳೂರು

*

ರಾಷ್ಟ್ರೀಯ ಭಾರ...ದ ಲೇಖನ ಓದಿದೆ. ಹೌದು, ಇಂತಹ ಪದಪ್ರಯೋಗಗಳು ಎಷ್ಟು ಅಭ್ಯಾಸವಾಗಿ ಹೋಗಿದೆಯೆಂದರೆ ನಿಮ್ಮಂತಹ ಪಂಡಿತರು ಹುಡುಕಿ ತೋರಿಸುವ ತನಕ ಅದು ನಮಗೆ ಗೊತ್ತೇ ಆಗುವುದಿಲ್ಲ (ಈ ವಾಕ್ಯದಲ್ಲಿ ಅಂಥದ್ದು ಏನೂ ಇಲ್ಲ ತಾನೇ?) ಅದಿರಲಿ, ನಟರಾಜರ ನೇಣು, ಮನೋಹರ ಕುಲಕರ್ಣಿಯವರ ಸಮಾಧಿಯೆಂದೆದ್ದ ಸುಂದರಿ ಬಗ್ಗೆ ಮಾತ್ರ ಬರೆದಿದ್ದೀರಿ? ಅನಂತಮೂರ್ತಿಯವರ ಸಂಸ್ಕಾರ?

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

(ಹೌದು, ಆಮೇಲೆ ಘಟಶ್ರಾದ್ಧ! - ಎಸ್‌ಜೆ)

*

ನಾನು ಆಗ ಏಳನೇ ಕ್ಲಾಸಿನಲ್ಲಿ ಓದುತ್ತಾ ಇದ್ದೆ. ಭಾನುವಾರ ನನ್ನ ಗೆಳೆಯ ಮಧುಕರನ ಮನೆಯ ಹತ್ತಿರನಿಂತು ‘ಮಧುಕರಾ! ಆಟಕ್ಕೆ ಬಾ!’ ಎಂದರೆ, ಆತನ ತಾಯಿ ಹೀಗೆ ಉತ್ತರಿಸಿದರು -‘ನಮ್ಮ ಮಧುಕರ ತಲೆ ಕತ್ತರಿಸಿಕೊಂಡು ಬರಲು ಹೋಗಿದ್ದಾನೆ!’ ಸ್ವಲ್ಪ ಹೊತ್ತಿನ ನಂತರ ಬಂದ ಮಧುಕರನನ್ನೇ ಕೇಳಿದರೆ ಆತ ಹೇಳಿದ್ದು ತಾನು ಲೇಟೆಸ್ಟ್‌ ಹೇರ್‌ ಕಟಿಂಗ್‌ ಸಲೂನ್‌ಗೆ ಹೋಗಿದ್ದೆ ಅಂತ. ಲೇಟೆಸ್ಟ್‌ ಹೇರ್‌ ಅಂದರೆ?

ಮಧುಕರನದ್ದೇ ಇನ್ನೊಂದು ಉವಾಚ ಸಕತ್ತಾಗಿದೆ - I too was cooking myself for two years!

- ಎಸ್‌. ಎಂ. ಪೆಜತ್ತಾಯ; ಬೆಂಗಳೂರು

*

ನಿಮ್ಮ ಇಂದಿನ ಲೇಖನ, ‘ಕನ್ನಡಭಾಷೆಯಲ್ಲಿ ಪರಿಪೂರ್ಣತೆ ಇಲ್ಲದಾಗ ಉಂಟಾಗುವ ತಮಾಷೆಗಳು’ ಓದಿದೆ. ಸಮಯ, ಸಂದರ್ಭ, ಧಾಟಿ ಇವೆಲ್ಲವೂ ಎಷ್ಟು ಮುಖ್ಯ ಒಂದು ಭಾಷೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಎಂದು ತಿಳಿಸುತ್ತದೆ.

- ಡಾ ಮೀನಾ ಸುಬ್ಬರಾವ್‌; ಕ್ಯಾಲಿಫೊರ್ನಿಯಾ

*

ನಿಮ್ಮ ಇಂದಿನ ವಿಚಿತ್ರಾನ್ನ ಬಹಳ ತಮಾಷೆಯಾಗಿತ್ತು. ನಮಗೆ ಗೊತ್ತಿಲ್ಲದೇನೆ ನಾವು ಎಷ್ಟೊ ಬಾರಿ ತಪ್ಪು ವ್ಯಾಕರಣ ಬಳಸುತ್ತೇವೆ!

- ಸರಸ್ವತಿ ವಟ್ಟಂ; ಕ್ಯಾಂಪ್‌- ಕ್ಯಾಲಿಫೊರ್ನಿಯಾ

*

ಪದಗಳ ತಪ್ಪು ಬಳಕೆಯಿಂದ ಉಂಟಾಗುವ ಗೊಂದಲಗಳನ್ನು ಕುರಿತ ನಿಮ್ಮ ಲೇಖನವನ್ನು ಓದಿ ಆನಂದಪಟ್ಟೆವು. ನಾನು ಕಂಡ ಒಂದೆರಡು ಸ್ವಾರಸ್ಯಕರ ವಾಕ್ಯಗಳು ಈ ಕೆಳಗಿನಂತಿವೆ.

1. ಇತ್ತೀಚೆಗೆ ದೂರದರ್ಶನದಲ್ಲಿ ಕೇಳಿದ್ದು: ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಯುತ....

2. ಬೆಂಗಳೂರಿನಲ್ಲಿ ನಮ್ಮ ಮನೆಯ ಹತ್ತಿರವಿರುವ ಒಂದು ಅಂಗಡಿಯ ಹೆಸರು: ನಿರುದ್ಯೋಗಿ ಯುವಕರ ಮೊಟ್ಟೆ ಅಂಗಡಿ.

ವಂದನೆಗಳೊಂದಿಗೆ,

- ಗುರುಪ್ರಸಾದ್‌; ಟೊಕಿಯಾ, ಜಪಾನ್‌

*

ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ ಬಗ್ಗೆ ಓದಿದೆ. ಬಹಳ ಚೆನ್ನಾಗಿದೆ. ಅದೆಲ್ಲಿಂದ ಸ್ವಾಮಿ ನಿಮಗೆ ಇಂಥ ಐಡಿಯಾಗಳು ಬರುತ್ತವೆ? ಇದ್ದಿದ್ರಲ್ಲಿ ನಾನೇ ಸ್ವಲ್ಪ ಓದಿದ್ದನ್ನ ವಕ್ರವಾಗಿ ಅರ್ಥ ಮಾಡ್ಕೊಳ್ಳೊನು ಅಂದ್ಕೊಂಡಿದ್ದೆ - ನೀವು ಅದಕ್ಕೆ ನೂರಾರು ಆಯಾಮಗಳು ಇರಲಿಕ್ಕೆ ಸಾಧ್ಯ ಅಂತ ತೋರಿಸಿ ಕೊಟ್ಟಿದ್ದೀರಿ! ಲೇಟರಲ್‌ ಥಿಂಕಿಂಗ್‌ ಅಂತಾರಲ್ಲಾ ಇಂಗ್ಲಿಷಲ್ಲಿ, ನಿಮ್ಮದು ಅದಕ್ಕೆ ಒಳ್ಳೇ ಉದಾಹರಣೆ ನೋಡಿ!

ಒಂದು ಸಣ್ಣ ಪ್ರಶ್ನೆ ಬಂತು, (ನನ್ನ ಕಾಲೇಜ್‌ ರ್ಯಾಗಿಂಗ್‌ ದಿನಗಳ ನೆನಪಿಂದ) ಪ್ರಶ್ನೆ ಏನು ಅಂದ್ರೆ - ‘ನಿಮ್ಮಪ್ಪನಿಗೆ ನೀನು ಎಷ್ಟನೆ ಮಗ?’ ಇದನ್ನ ಆಂಗ್ಲ ಭಾಷೆಯಲ್ಲಿ ಏನಂತ ಕೇಳೊದು? ಇದಕ್ಕೆ ಉತ್ತರ ನನಗೆ ಈಗಲೂ ಗೊತ್ತಿಲ್ಲ. ನಿಮಗೆ ಗೊತ್ತಿದ್ರೆ ತಿಳಿಸಿ.

- ಗಿರೀಶ್‌ ಜಗಜಂಪಿ; ಬೆಂಗಳೂರು

*

‘ಶ್ರೀವತ್ಸ ಜೋಶಿಯವರೇ ನಿಮ್ಮ ಭಾರ ಎತ್ತುವ ಸ್ಪರ್ಧೆ’ ಚೆನ್ನಾಗಿತ್ತು. (ಶ್ರೀವತ್ಸ ಜೋಶಿಯವರೇ, ಭಾರ ಎತ್ತುವ ಕುರಿತಾದ ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ)

ಇಂತಹ ಹತ್ತು ಹಲವಾರು ಪ್ರಸಂಗಗಳು ನಿತ್ಯ ಜೀವನದಲ್ಲಿ ಸಂಭವಿಸುತ್ತಲೇ ಇರುತ್ತವೆ. ಧಾರವಾಡದ ಮೂಲೆಯಾಂದರ ಅಂಗಡಿಯ ಬೋರ್ಡಿನಲ್ಲಿ ಹೀಗೆ ಬರೆದಿದೆ. ‘ದಗ ದಗ ಸೈಕಲ ಶಾಪ’ ಎಂದು. ಯಾವ ಮುನಿಗಳು ಮುನಿಸಿಕೊಂಡು ದಗ ದಗ ಉರಿದು ಹೋಗಲಿ ಎಂದು ಸೈಕಲ್ಲಿಗೆ ಶಪಿಸಿದರೋ..??!! ಎಂದುಕೊಳ್ಳಬೇಡಿ. ಅದು ಇರಬೇಕಾದದ್ದು ಹೀಗೆ ‘ದ ಗದಗ್‌ ಸೈಕಲ್‌ ಶಾಪ್‌’ ಎಂದು!

ಒಮ್ಮೆ ಧಾರವಾಡ ಪ್ರಾಂತ್ಯದ ಹಿರಿಯರೊಬ್ಬರು, ಬೆಂಗಳೂರಿಗೆ ಮದುವೆಯ ಸಮಾರಂಭಕ್ಕಾಗಿ ಭಾಗವಹಿಸಲು ಬಂದಿದ್ದರು. ಅವರು ಆ ಛತ್ರದ ಟಾಯ್ಲೆಟ್ಟಿನ ಬಳಿ, ಕಾಯುತ್ತ ನಿಂತಿದ್ದರು. ಕಾರಣ ಎಲ್ಲ ಟಾಯ್ಲೆಟ್‌ ಬಾಗಿಲುಗಳು ಮುಚ್ಚಿದ್ದವು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಬೆಂಗಳೂರಿಗರೊಬ್ಬರು ಧಾರವಾಡದವರನ್ನು ಕೇಳಿದರು ‘ಟಾಯ್ಲೆಟ್ಗೆ ಹ್ಯಾಗೆ ಹೋಗಬೇಕು?’. ಧಾರವಾಡದವರು ಉತ್ತರಿಸಲೇ ಇಲ್ಲ. ಬಹುಷಃ ಅವರಿಗೆ ಉತ್ತರಿಸಲು ಮುಜುಗರವಾಗಿರಬೇಕು. ಬೆಂಗಳೂರಿಗರು ಮತ್ತೆ ಬೇರೆ ರೀತಿಯಲ್ಲಿ ಕೇಳಿದರು ‘ಟಾಯ್ಲೆಟ್‌ ರೂಂ ಎಲ್ಲಿದೆ ?’ ಅಂತ. ಧಾರವಾಡದವರು ಹೇಳಿದರು ‘ಅದು ಬಂದ್‌ ಅದ ರೀ’ ಎಂದು. ಬೆಂಗಳೂರಿಗರು ಉತ್ತರಿಸಿದರು....‘ನಂಗೂ ಬಂದದರೀ, ಬೇಗ್‌ ಹೇಳಿ ಎಲ್ಲಿದೆ ಅಂತ’!

ಹಾಸ್ಯವನ್ನು ಅನುಭವಿಸುವ ಮನಸ್ಸು ಜಾಗ್ರತವಾಗಿದ್ದರೆ... ನಿತ್ಯವೂ ಹಾದು ಹೋಗುವ ಹಾಸ್ಯವನ್ನು ಅನುಭವಿಸಲು ಸಾಧ್ಯ.

- ಶೇಷಗಿರಿ ಕೆ. ಎಂ; ಬೆಂಗಳೂರು

*

ಒಳ್ಳೇ ನಗು ಬರಿಸುವ ಟಾಪಿಕ್‌! ಇಲ್ಲಿ ನೆರೆದಿರುವ ಮಹನೀಯರೇ, ಮತ್ತು ಇಲ್ಲಿ ನೆರೆದಿರುವ ಮಹಿಳೆಯರೇ ಅಂತ ಭಾಷಣಕಾರರು ಹೇಳುವುದನ್ನು ನಾವೆಲ್ಲ ಕೇಳಿಲ್ಲವೇ?

ಇವತ್ತಿನ ಸಂಜೆವಾಣಿ ಸುದ್ದಿ: ‘ಕೇಂದ್ರದ ಸಾರಿಗೆ ಸಚಿವರ ಭೇಟಿ’. ಹಾಗಾದರೆ ಸಾಂಬಾರಿಗೆ ಯಾರ ಭೇಟಿ?

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

*

ರಾಷ್ಟ್ರೀಯ ಭಾರ... ದ ಹರಟೆಯನ್ನು ಓದಿದಾಗ ಮೊನ್ನೆಮೊನ್ನೆ ಪತ್ರಿಕೆಯಾಂದರ ಸಂಪಾದಕೀಯದಲ್ಲಿದ್ದ ಒಂದು ಸ್ವಾರಸ್ಯ ನೆನಪಿಗೆ ಬಂತು. ಪತ್ರಿಕೆಯ ಸಂಪಾದಕರು ಹೀಗೆ ಬರೆದಿದ್ದರು - ‘ಕಳೆದ ಕೆಲ ತಿಂಗಳುಗಳಿಂದ ನಮ್ಮ ಪತ್ರಿಕೆ ಪ್ರಕಟವಾಗಿರಲಿಲ್ಲ. ಕಾರಣಗಳು ಅನೇಕ, ಎನೇ ಇರಲಿ. ಎಲ್ಲರ ಕ್ಷಮೆ ಕೇಳುತ್ತ ಆಸಕ್ತರು ಈ ಪುಟವನ್ನು ನೋಡಬೇಕಾಗಿ ಮನವಿ’

ಪತ್ರಿಕೆ ಪ್ರಕಟವಾಗದಿದ್ದರೆ ಓದುಗರು ಯಾಕೆ ಎಲ್ಲರ ಕ್ಷಮೆ ಕೇಳಬೇಕೆಂದು ನನಗೆ ಇನ್ನೂ ಅರ್ಥವಾಗಲಿಲ್ಲ

- ನಾಗರಾಜ್‌ ಎಂ; ಬೆಂಗಳೂರು

*

ನಾನು ನಿಮ್ಮ ಈವಾರದ ವಿಚಿತ್ರಾನ್ನ ಓದಿದೆ. ನನಗೆ ಒಂದು ಸಂಶಯ ಬೆಳಗಿನ ಜಾವನೊ ಅಥವಾ ಝಾವನೊ? ನಾನು ಜಾವ ಅಂದುಕೊಂಡಿದ್ದೀನಿ. ಮತ್ತೆ, ನನಗೆ ಇಷ್ಟ ಆಗಿದ್ದು 100ಕೇಜಿ ಮೀಸೆ

- ಸ್ಮಿತಾ; ಬೆಂಗಳೂರು

(ಒಂದನೆಯದಾಗಿ, ಸಂಶಯ ಯಾವಾಗ ಬೇಕಿದ್ದರೂ ಬರಬಹುದು. ಬೆಳಗಿನ ಜಾವವೇ ಆಗಬೇಕೆಂದಿಲ್ಲ. ಸಂಶಯಪಿಶಾಚಿ ಸಂಜೆ ಸಹ ಗವಾಕ್ಷಿಯಿಂದ ಬರಬಹುದು. ಅದಿರಲಿ, ‘ನೂರು ಕೇಜಿ ಮೀಸೆಯಾಂದಿಗೆ ಅಂದವಾಗಿ ಕಾಣುತ್ತಿದ್ದೀ!’ ಎಂದು ಮೆಚ್ಚುಗೆ ಸೂಚಿಸಿದ್ರಾ ನಿಮ್ಮ ಯಜಮಾನ್ರು? - ಎಸ್‌ಜೆ)

*

kokkare flying real photo by Subbu, Philadelphiaಇವತ್ತಿನ ವಿಚಿತ್ರಾನ್ನ ಓದಿದೆ. ಇನ್ಫೊಟೈನ್‌ಮೆಂಟ್‌ ಸಕ್ಕತ್ತಾಗಿದೆ! ನಾನೂ ಕೆಲವು ಪಿಕ್ಚರ್ಸ್‌ ತೆಗ್ದಿದ್ದೇನೆ ಹಕ್ಕಿಗಳು ವಿ ಅಕ್ಷರದಾಕಾರದಲ್ಲಿ ಹಾರುವಿಕೆಯದು. ಇಲ್ಲಿದೆ ನೋಡಿ ಆ ಚಿತ್ರ. ಆ ರೀತಿಯ ಹಾರುವಿಕೆಯ ಹಿಂದಿನ ರಹಸ್ಯ ನನಗೆ ತಿಳಿದಿರ್ಲಿಲ್ಲ, ಆ ಬಗ್ಗೆ ಮಾಹಿತಿಯನ್ನು ಚೆನ್ನಾಗಿ ಬರೆದಿದ್ದೀರಿ!

- ಸುಬ್ಬು; ಫಿಲಡೆಲ್ಫಿಯಾ

*

I was just reading the articles about the crane, aerodynamics and teamwork. It is a very interesting article and hats off to you for integrating all the three aspects - migration of birds, aerodynamics involved and also the teamwork and leadership in a very lucid manner.

Talking about aerodynmamics, I would like to see an article probably about aeroplanes used by presidents of the world, USAs Airforce One, something about National Air and Space museum in Washington DC or the museum in Seattle, where you get to see the old Air Force One plane, Concord, space shuttle etc Thank you once again for all your exciting articles on thatskannada.com

- Suhas Subramanya; Washington DC

*

Another hit! I liked it because it is a very practical matter that we need to be aware in professional and personal lives! United we stand, divided we fall! Thanks again,

- Ragini; Bangalore

*

Your article reminds me of my boyhood and my village. Kudo’s to you. Keep it up. I really like your Googalisi Kannidisi dare aiiitu,vichitranna ready phrase!

- Sandeep Hublikar; Bangalore

*

I read your latest article - "Raashtriya Bhara Ethuva Sparde". It was nice. You have amazing knack to catch the non-attention-grabber things and turn them into something very interesting to read and think about. Ottinalli bombat v-chitranna madthira!

- Parimala and Pradeep: Des Moines, Iowa

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more