• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈವಾರ ಹೊಸದೇನು ಎಂಬ ಕುತೂಹಲ ನಮಗೆ...

By Staff
|

ನಾವು ನಿಮ್ಮವಿಚಿತ್ರಾನ್ನದ ಹಾಗೂ ನಿಮ್ಮ ಅಭಿಮಾನಿಗಳು. ಪ್ರತೀ ವಾರ ನೀವು ಯಾವ ವಿಷಯುದ ಬಗ್ಗೆ ಬರೆಯಬಹುದು ಎಂದು ಕುತೂಹಲದಿಂದ ಕಾಯುತ್ತಿರುತ್ತೇವೆ. ನಿಮ್ಮ ವಿಷಯಗಳ ಆಯ್ಕೆ, ಪ್ರಸ್ತುತಿ ಎಲ್ಲಾ ಬಹಳ ಚೆನ್ನ. ಅತ್ಯಂತ ಸರಳ ಶೈಲಿಯ ನಿಮ್ಮ ಬರಹಗಳು ನಮಗೆ ವಿಶೇಷ ಮನರಂಜನೆ ಮತ್ತು ಮಾಹಿತಿ ಎರಡನ್ನೂ ಹೇರಳವಾಗಿ ದೊರಕಿಸುತ್ತವೆ.

ಮೊದಲೇ ತುರಿದ ತೆಂಗಿನಕಾಯಿ ಪ್ರಿಯರಾದ ನಮಗೆ ತೆಂಗಿನಕಾಯಿ ಒಡೆಯುವ ಸಲಹೆ ಬಹಳ ಹಿಡಿಸಿತು. ಅಂದೇ ನಮ್ಮ ಮನೆಯವರು ಅತ್ಯುತ್ಸಾಹದಿಂದ ನಿಮ್ಮ ಸಲಹೆಯಂತೆ ಕಾಯಿ ಒಡೆದು ಜಯಶೀಲರಾದರು. ನಂತರ ಏಕೋ, ಏನೋ ಇನ್ನೆಂದೂ ಸರಿ ಬರುತ್ತಿಲ್ಲ. ವಿಭಿನ್ನವಾಗಿರುವ ಕಣ್ಣು ಕಂಡು ಹಿಡಿಯುವುದೇ ಕಷ್ಟವಾಗಿದೆ! ವಾರ್ತಾ ವಾಚಕರ ಬಗೆಗಿನ ಲೇಖನ ಬಹಳ ಖುಷಿ ಕೊಟ್ಟಿತು. ನಿಮ್ಮ ನೆನಪಿನ ಶಕ್ತಿಗೆ ನಮೋ ನಮೋ! ಹಿಂದೆ ಕೇಳಿದ್ದ ದನಿಗಳು ನಮ್ಮ ಕಿವಿಯಲ್ಲಿ ಮತ್ತೊಮ್ಮೆ ಧ್ವನಿಸಿದಂತಾಯಿತು. ಧನುರ್ಮಾಸದ ಬಗೆಗಿನ ಲೇಖನ ಬಹಳ ಮಾಹಿತಿಪೂರ್ಣವಾಗಿದೆ. ಇಷ್ಟೆಲ್ಲಾ ವಿವರ ನಿಮಗೆ ಹೇಗೆ ಸಿಗುತ್ತದೆ ಎನ್ನುವುದೇ ನಮಗೆ ಪರಮಾಶ್ಚರ್ಯ !!

ಹೀಗೇ ನಿಮ್ಮ ಎಲ್ಲಾ ಲೇಖನಗಳನ್ನೂ ತಪ್ಪದೇ ಓದುತ್ತೇವೆ. ಪ್ರತಿಯಾಂದಕ್ಕೂ ಸ್ಪಂದಿಸುವ ಆಸೆ ಇದೆಯಾದರೂ ಕಾರಣಾಂತರಗಳಿಂದ ಸಾಧ್ಯ ಆಗುತ್ತಿಲ್ಲ. ನಿಮಗೆ ಹೊಸವರ್ಷದ ಶುಭಾಶಯ ಪತ್ರ ಕಳಿಸಲು ದಯವಿಟ್ಟು ನಿಮ್ಮ ಮನೆಯ ಅಂಚೆ ವಿಳಾಸ ಕಳಿಸಿಕೊಡಿ.

- ಪೂರ್ಣಿಮಾ ಸುಬ್ರಹ್ಮಣ್ಯ; ವರ್ಜೀನಿಯಾ

*

‘ಡಕೋಟ ರಾಜ್ಯದಲ್ಲಿ ಧನುರ್ಮಾಸ ಪೂಜೆ’ ನಿರೂಪಣೆ ತುಂಬ ಚೆನ್ನಾಗಿದೆ (ಪೂರಕ ಚಿತ್ರಗಳು ಸಹ). ಸ್ಮಿತಾ ಬಗ್ಗೆ ಹೆಮ್ಮೆ ಎನಿಸಿತು. ನೀರುದೋಸೆಯ ಸಂಚಿಕೆಯೂ ತುಂಬ ಚೆನ್ನಾಗಿತ್ತು. ನೀರುದೋಸೆ ಮಾಡುತ್ತಿರುತ್ತೇನೆ, ಈ ಸಾರಿ ಇನ್ನೂ ರುಚಿಯೆನಿಸಿತು (ಪಾ ಪ ತಿನ್ನುವ ತಿನಿಸು ಎಂದಿರಬಹುದೆ? :-)). ‘ಜೋಶ್‌’ ತುಂಬಿದ ಇಂಥ ಬರಹಗಳು ಹೀಗೇ ಮುಂದುವರೆಯಲಿ.

- ಸ್ವರೂಪರಾಣಿ; ಬೆಂಗಳೂರು

*

ಕಳೆದ 3 ವಾರಗಳಿಂದ ಅತ್ಯಂತ ತುರ್ತಾದ ಕೆಲಸಗಳು ಇದ್ದದ್ದರಿಂದ ನಿಮ್ಮ ಲೇಖನಗಳನ್ನು ಓದಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಎಂದಿನಂತೆ ಮೊದಲಿನ ದಿನಚರಿ ನಡೆದಿದೆ. ಆ ನಂತರ ನಾನು ಮೊದಲು ಮಾಡಿದ ಕೆಲಸವೇನೆಂದರೆ ವಿಚಿತ್ರಾನ್ನ ಅಂಕಣದ ಲೇಖನಗಳನ್ನು ಎರಡೆರಡು ಬಾರಿ ಓದಿ ಖುಷಿಪಟ್ಟಿದ್ದು.

‘ಓದಿಸಿಕೊಂದು ಹೋಗುವ ಲೇಖನ ಬರೆಯೋದು ಹೇಗೆ’ ಲೇಖನ ತುಂಬಾ ಉತ್ತೇಜನಕಾರೀ ಲೇಖನವಾಗಿದ್ದು, ಲೇಖನ ರಚಿಸುವ, ಬರೆಯುವ ಇಚ್ಛೆಯಿದ್ದು ಸರಿಯಾದ ಮಾರ್ಗದರ್ಶಕರಿಲ್ಲದೇ ಎಷ್ಟೋ ಉತ್ತಮ ಲೇಖನಗಳು ಬೆಳಕಿಗೆ ಬಾರದೇ, ಲೇಖನ ಬರೆಯುವ ಉತ್ಸಾಹ ಕಳೆದುಕೊಂಡಿರುವವರಿಗೆ ನಿಮ್ಮ ಸೂಚನೆಗಳು ನಿಜವಾಗಿ ದಾರಿದೀಪವಾಗಬಲ್ಲದು. ನೀವು ಬರೀ ಪಾಕ ಪ್ರವೀಣರೇ ಎಂದು ತಿಳಿದಿದ್ದೆ, ಆದರೆ ನೀವು ನೀಡುತ್ತಿರುವ ವೈವಿಧ್ಯಮಯ ಸಲಹೆಗಳು ಅಮೋಘ. ಉತ್ಪ್ರೇಕ್ಷೆ ಇಲ್ಲದೇ ಹೇಳಬೇಕೆಂದರೆ ನಿಮ್ಮ 116 ಲೇಖನಗಳನ್ನು ಸೇರಿಸಿದರೆ ಒಂದು ಸಣ್ಣ ಎನ್ಸೈಕ್ಲೋಪೀಡಿಯಾನೇ ಆಗುತ್ತದೆ. ಅದು ನಿಜವಾಗಿಯೂ ಒಳ್ಳೆ ಸಂಗ್ರಹ ಯೋಗ್ಯ ಪುಸ್ತಕವಾಗುವುದರಲ್ಲಿ ಯಾವುದೇ ಸಂಶಯವೂ ಇಲ್ಲ.

ಇನ್ನು ನಿಮ್ಮ ಇತ್ತೀಚಿನ ‘ಡಕೋಟ ರಾಜ್ಯದಲ್ಲಿ ಧರ್ನುಮಾಸ ಪೂಜೆ’ ಲೇಖನ ಮೂಡಿಬರಲು ಕಾರಣೀಮಣಿಯಾದ ಶ್ರೀಮತಿ ಸ್ಮಿತಾ ಮಾಟೇರ್‌ ಅವರಿಗೂ ನನ್ನ ವಂದನೆಗಳನ್ನು ತಿಳಿಸಲೇಬೇಕು. ಏಕೆಂದರೆ ಅವರು ಆ ಪ್ರಶ್ನೆ ನಿಮ್ಮಲ್ಲಿ ಕೇಳಿರದಿದ್ದರೆ ಸದ್ಯಕ್ಕಂತೂ ಧರ್ನುಮಾಸದ ದರ್ಶನ ನೀವು ಮಾಡಿಸುತ್ತಿರಲಿಲ್ಲ. ಹೌದಲ್ಲಾ. ಏಕೆಂದರೆ ನಮಗೆ ಧನುರ್ಮಾಸ ಎಂದರೆ ತಿಳಿದಿದ್ದು ಮುಂಜಾನೆ 4.30- 5 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದರೆ ಶುಭವಾಗುವುದೆಂಬ ಹಿರಿಯರ ಅಣತಿಯಷ್ಟೇ. ಆ ಅಣತಿಯನ್ನು ಈಗೀಗ ನಮ್ಮ ಇತ್ತೀಚಿನ ನಾರೀ ಮಣಿಗಳು ತಿಳಿದೂ ಜಾಣ ಮರೆವು ಸೂಚಿಸುತ್ತಾ ಹಾಯಾಗಿ ಪಲ್ಲಂಗದ ಮೇಲೆ ಪವಡಿಸಿರುತ್ತಾರೆ. ಹೀಗಿರಬೇಕಾದರೆ ನಳಪಾಕ ಪ್ರವೀಣರಾದ ನಿಮ್ಮ ಕೈಯಲ್ಲಿ ಧರ್ನುಮಾಸದ ಬಗ್ಗೆ ತಿಳಿಯಪಡಿಸಿದ್ದು ಮೆಚ್ಚತಕ್ಕ ಸಂಗತಿ.

ಸಾಕೆನಿಸುತ್ತಿದೆ. ಹೆಚ್ಚು ಹೇಳಿದರೆ ಏನಪ್ಪಾ ಇವನು ಬರೀ ಹೊಗಳೋದ್ರಲ್ಲೇ ಕಾಲಕಳೆದು ನಿಮ್ಮ ಸಮಯವನ್ನೂ ಹಾಳು ಮಾಡ್ತೇನೆ ಎಂದು ಮುಂದೆ ನನ್ನ ಪತ್ರಗಳನ್ನು ಓದುವುದೇ ನಿಲ್ಲಿಸಿಬಿಡುವಿರೇನೋ ಎಂದನಿಸುತ್ತಿದೆ. ನೂತನ ವರ್ಷವು ನಿಮಗೂ ನಿಮ್ಮ ಕುಟುಂಬಕ್ಕೂ ನಿಮ್ಮನ್ನು ನಮಗೆ ಪರಿಚಯಿಸಿದ ದಟ್ಸ್‌ ಕನ್ನಡಮ್ಮನಿಗೂ ಸನ್ಮಂಗಳವನ್ನು ಉಂಟು ಮಾಡಲೀ ಎಂದು ಆ ದೇವರಲ್ಲಿ ಕೋರುತ್ತೇನೆ. ಇದೇ ರೀತಿ ನಿಮ್ಮ ಲೇಖನಗಳು ಇನ್ನೂ ಹೆಚ್ಚು ಹೆಚ್ಚು ಕುತೂಹಲ ರಸಭರಿತವಾಗಿ ಮೂಡಿ ಬರಲಿ ಎಂದು ಹಾರೈಸುತ್ತೇನೆ.

- ರಘುನಾಥ್‌ ಪಿ ಜಿ; ಬೆಂಗಳೂರು

*

ನಿಮ್ಮ ವಿಚಿತ್ರಾನ್ನ ಅಂಕಣವನ್ನು ಆದಾಗೆಲ್ಲ ಓದುತ್ತಿರುತ್ತೇನೆ. ಖುಶಿ ಕೊಡುತ್ತದೆ. ಈ ಅಂಕಣವನ್ನು ಹೀಗೆಯೇ ಮುಂದುವರಿಸಿ. ಮುಂದಿನ ದಿನಗಳಲ್ಲಿ ಮತ್ತೆ ಪತ್ರಿಸುತ್ತೇನೆ.

- ಪ್ರದೀಪ್‌ ಬೆಳ್ಳಾವೆ

(ಈಗ ಇರುವುದು - ದುಬೈ; ಬಂದದ್ದು - ಅರಿಶಿನಕುಂಟೆ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ).

*

ಧನುರ್ಮಾಸದ ಅಂಕಣ ತುಂಬ ಚೆನ್ನಾಗಿತ್ತು. ಕೆವಿನ್‌ ಹಾಗೂ ಸ್ಮಿತಾ ದಂಪತಿಗಳನ್ನು ಹತ್ತಿರದಿಂದ ನೋಡಿದ ಅನುಭವ ಜೊತೆಗೆ ಧನುರ್ಮಾಸದ ಬಗೆಗೆ ಮಾಹಿತಿ... ವಾಹ್‌ ವಾಹ್‌... ಬಹಳ ರುಚಿಯಾಗಿತ್ತು ವಿಚಿತ್ರಾನ್ನ.

ಆದರೆ ಈ ಹಿಂದಿನ ವಾರದ ‘ಲೇಖನ ಬರೆಯೋದು ಹೇಗೆ...’ ತುಂಬ ನಿರೀಕ್ಷೆ ಹುಟ್ಟಿಸಿ ಹುಸಿಮಾಡಿತು (ಒಂದು ನಮೂನೆಯಲ್ಲಿ ಪಂಗನಾಮ ಹಾಕಿತು ಅಂತಾರಲ್ಲ, ಹಾಗೆ).

- ಗುರುಪ್ರಸಾದ್‌; ಬೆಂಗಳೂರು.

*

‘ಓದಿಸಿಕೊಂಡು ಹೋಗುವ ಲೇಖನ ಬರೆಯೋದು ಹೇಗೆ...’ ವಿಚಿತ್ರಾನ್ನ ಸಂಚಿಕೆ ಚೆನ್ನಾಗೇನೋ ಇತ್ತು. ಆದರೆ ಕೊನೆ ಪಕ್ಷ ಕನ್ನಡದ ಖ್ಯಾತ ಪ್ರಬಂಧಕಾರರ ಹೆಸರುಗಳನ್ನಾದರೂ ಉದ್ಧರಿಸಬಹುದಿತ್ತಲ್ಲ?

- ಗೌತಮ್‌ ಸುದತ್ತ; ಕ್ಯಾಲಿಫೋರ್ನಿಯಾ

*

‘ಓದಿಸಿಕೊಂಡು ಹೋಗುವ ಲೇಖನ ಬರೆಯೋದು ಹೇಗೆ?’ ಲೇಖನ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯ್ತು! Gets my 5 * rating!

- ಜನಾರ್ಧನ ಸ್ವಾಮಿ; ಕ್ಯಾಲಿಫೋರ್ನಿಯಾ

*

Nice article about odisikondu... I just remembred some thing what they say about an effective speaker

Q: how a speech should be?

Ans: it should be like a girl’s skirt. As long as to cover the subject and as short to as to evoke interest!

Your articles are very interesting!

- SS; City?

*

I just read your article on Dhanumaasa Pooje in South Dakota. It is very intersting and took me down the memorylane of my childhood. Growing up in Bangalore, during this month my mom use to wake up early in the morning finish pooja and go to Shiva Temple nearby. Being kids we use to see this as fun and sometimes I use to tagalong with her. As in all the temples regardless of the main deity there will be Dhanurmaasa pooja performed and some of the temples do give good hot pongal as prasada too.

Coming to our present world, people living in the DC metropolitan area we perform Dhanurmaasa pooje all through the year. Because to get to work ontime depending on how far we live from our work we get up at 5AM and do pooje and leave the house early in the morning. Arent we LUCKY!!!

- Kusuma Aralere; Centreville, VA

*

Please let Smt Smitha know that she can listen to and recite Thiruppavai and Thirupallielluchi along with a satsangam every morning at 5:00 AM EST on the following telebridge: 17128258000 Passcode: 89981#

This is live from the JETUSA center in VA. Happy Dhanurmasam to you and your family!

- Indira Prativadi; Maryland

*

I read your current column on Dhanurmasa. Very well written as always. Keep it up! Wish you all a very happy and healthy 2005.

- Dr. U B Vasudev; Florida

*

I read vichitraanna new edition, about danurmasa pooja. Really I liked it more about Smitha. Its nice to know she got such an understanding husband, whereas see many an Indian woman their husband always thinking about how to suppress his wife, thinking that wife means own personal commodity.

Well its glad to know that Kevin supports Smithas religous beliefs, may be coz of love towards her. Great smitha!

- Suchitra Shetty; London

*

I read your article about dhanurmaasada pooje. Thats our Indian culture! Wherever we go, we carry it with us. Its really amazing isnt it?

- Radhika M G; Bangalore

*

I have been reading your articles in Vichitranna and they are really interseting and odisi kondu hoguva articles. Some of them are indeed very informative. Keep up the good work.

- Vishnu Bhat H; Brighton, UK

*

Namaskaara Srivatsa Joshiyavarige,

Let me introduce myself as Saraswathi Vattam from Bangalore. I happened to read your article in "Vichitranna" AnkaNa. It is simply superb! It took me back to the days of my childhood.

Though I am a newsreader in Bangalore Doordarshan, I still happen to listen to Aakashavani news and "pradessha samaachaara" news! Yes, as you have rightly said, mornings, I dont look at the watch, instead listening to the A.I.R programs, I schedule my activities. I keep meeting Mr Purushottam, who still reads pradesha samaachara. He is working as a casual editor in DD too. Infact he gave me the news of sad demise of the exreader Mr Ramakrishna. I forwarded the link of your article to my colleagues in Doordarshan and a few in Akashavani.

Thanks for taking me to nostalgic moments. When I come to U.S in April, I will contact you.

NamaskaaragaLondige,

- Saraswathi Vattam; Bangalore

ವಾರ್ತೆಗಳು.... ಓದುತ್ತಿರುವವರು....

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more