ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಜಾಮತ್‌ಸೆ... ಸಂಚಿಕೆ ಆಹಾ ಏನು ಮಜಾ!

By Staff
|
Google Oneindia Kannada News

ಲೇಖನ ಚೆನ್ನಾಗಿತ್ತು. ಆದರೆ ನನ್ನ ಮನಸ್ಸಿಗೆ ‘ಕ್ಷೌರ’ ಅಂದಕೂಡಲೆ ಜ್ಞಾಪಕ ಬರೋದು ‘ತಿರುಪತಿ’. ಆ ವೆಂಕಟಾಚಲಪತಿಯನ್ನೂ ಮೆನ್ಷನ್‌ ಮಾಡ್ಬೇಕಾಗಿತ್ತು. ತಿರುಪತಿ ಚವ್ರ (ಕ್ಷೌರ ಅಪಭ್ರಂಶ ಆಗಿ ಚವ್ರ ಆಗಿದೆ) ಅಂಥಾ ವರ್ಲ್ಡ್‌ ಫೇಮಸ್‌!

ನಂಜನಗೂಡು ನಂಜುಂಡೇಶ್ವರ ಗೊತ್ತಲ್ಲ? ಅಯ್ಯಾ ಸರ್‌ ಅವ್ನೇ ಭವರೋಗ ವೈದ್ಯ. ಅಲೋಪತಿ, ಹೊಮಿಯಾಪತಿ, ಆ ಪತಿ ಈ ಪತಿ ಕಿತಾಪತಿ... ಹೀಗೆ ಯಾವ್ದೂ ಸಕ್ಸೆಸ್‌ ಆಗ್ದೆ ಇದ್ದಾಗ ಕೇಸ್‌ ಸೀತಾಪತಿ ಅಥವಾ ವೆಂಕಟಾಚಲಪತಿ ಕಡೆ ಹೋಗಿ ಅವರೂ ಕೈ ಬಿಟ್ಟಾಗ ಡೈರೆಕ್ಟ್‌ ಆಗಿ ನಮ್‌ ನಂಜನಗೂಡ್‌ ನಂಜುಂಡೇಶ್ವರನ ಹತ್ರ ಬರತ್ತೆ. ಅಂತಹ ನಂಜನಗೂಡಿನಲ್ಲಿ ಒಂದು ಬೋರ್ಡ್‌ ಇತ್ತು - ‘ಶ್ರೀ ಶ್ರೀ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಮುಡಿ ತೆಗೆಯುವ ಸನ್ನಿಧಿ’ ಅಂತ. ಈಗ ಇದೆಯಾ ಇಲ್ವೊ ಗೊತ್ತಿಲ್ಲ. ಆದರೆ ದೇವರೇ ಬಂದು ಭಕ್ತರಿಗೆ ಮುಡಿ (ಚವ್ರ!) ಮಾಡೊದನ್ನು ನಾನು ನಂಜನಗೂಡ್‌ ಬಿಟ್ರೆ ಬೇರೆ ಎಲ್ಲೂ ನೋಡಿಲ್ಲ!

- ಆನಂದ್‌ ಆಲುರ್‌; ಕೊಲಂಬಸ್‌, ಇಂಡಿಯಾನಾ.

*

ಈ ವಾರದ ವಿಚಿತ್ರಾನ್ನ ಓದಿದೆ. ಚೆನ್ನಾಗಿತ್ತು. ಅಂಕಣದ ಪೀಠಿಕೆಯಲ್ಲಿನ ನಿಮ್ಮ ಒಂದು ಪ್ರಶ್ನೆಗೆ ಒಂದು ತರ್ಲೆ ಉತ್ತರ!

ಪ್ರಶೆ ್ನ: ಸಮಾಜದಲ್ಲಿ ಕ್ಷೌರಿಕರು ಇಲ್ಲದಿದ್ದರೆ ಏನಾಗುತ್ತಿತ್ತು? ಕೂದಲ ಕಾಡಿನಲ್ಲಿ ದಾರಿ ತಪ್ಪುತ್ತಿದ್ದೆವು!

ನನ್ನ ಉತ್ತರ : ಏನೂ ಆಗ್ತಿರ್ಲಿಲ್ಲ... ನಮ್ಮ ಕೂದ್ಲು ನಾರ್ಮಲ್‌ ಉದ್ದಕ್ಕೆ ಬೆಳಿತಿತ್ತು. ಯಾಕಂದ್ರೆ ಕರಡಿಯಂಥ ಕರಡಿ ಕೂದ್ಲೇ ನಾರ್ಮಲ್‌ ಉದ್ದ ಬೆಳೆದು ಸ್ಟಾಪ್‌ ಆಗುತ್ತೆ.

ಕರಡಿಗೆ ಯಾರೂ ಕಟಿಂಗ್‌ ಮಾಡಲ್ಲ ಅಲ್ವ?

- ಯಶವಂತ್‌ ಬಿ.ಎಸ್‌; ಹೈದರಾಬಾದ್‌

*

ಹಜಾಮನ ಆರ್ಟಿಕಲ್‌ ಚೆನ್ನಾಗಿದೆ! ಆದರೆ ಹೆಂಗಸರನ್ನ ‘ಜಾಸ್ತಿ ಮಾತುಗಾರರು’ ಅಂತ ಗೇಲಿ ಮಾಡೋದೇ?

ಅಂದಹಾಗೆ ಬಾರ್ಬರ್‌ ಪದವು ಸ್ತ್ರೀಲಿಂಗದಲ್ಲಿ ‘ಬಾರ್ಬರಾ’ ಆಗಬಹುದು!

- ಡಾ। ಇಂದು ಅನಿಲೇಶ್‌; ನ್ಯೂಯಾರ್ಕ್‌

(ಡಾ। ಇಂದು, ಆರ್ಟಿಕಲ್‌ ಚೆನ್ನಾಗಿತ್ತು ಎಂಬ ನಿಮ್ಮ ಮೆಚ್ಚುಗೆಯನ್ನು ಹಜಾಮನಿಗೆ ತಿಳಿಸುತ್ತೇನೆ. ಇನ್ನು, ಹೆಂಗಸರ ಬಗ್ಗೆ ತಮಾಷೆಯಾಡಿದ ಬಗ್ಗೆ - ಅದು ಕೇವಲ ತಮಾಷೆ. ವಿಚಿತ್ರಾನ್ನ ಓದುಗಬಳಗದಲ್ಲಿ ಸುಮಾರು 60ರಿಂದ 70% ಸಂಖ್ಯೆಯಲ್ಲಿ ಹೆಂಗಸರಿದ್ದಾರೆಂಬ ಸಂಗತಿಯಿಂದ, ಮತ್ತು ಒಂದುವೇಳೆ ನಿಜವಾಗಿಯೂ ಗೇಲಿಮಾಡಿದರೆ ದುಬಾರಿ ಬೆಲೆ ತೆರಬೇಕಾಗಬಹುದು ಎಂದೂ ತಿಳಿದಿರುವುದರಿಂದ, ಅಂಥ ಅಪಹಾಸ್ಯ ಉದ್ದೇಶಪೂರ್ವಕವಾಗಿ ಇರುವುದಿಲ್ಲ. ಕೆಲವೊಮ್ಮೆ ಅಕ್ಸಿಡೆಂಟಲಿ ಆದರೆ, ಆಕ್ಷೀ... ಎಂದು ಒಂದು ಸೀನು ಬಂದಂತೆ ಎಂದು ‘ಮ್ಯಾಟರ್‌ ಆಫ್‌ ಫಾಕ್ಟ್‌’ ಪರಿಗಣಿಸಿ ಮುಂದೆಸಾಗುವುದು. ಆಗಬಹುದೇ? - ಎಸ್‌.ಜೆ)

*

ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿಯ ಭೋಜ ಎಂಬ ಕ್ಷೌರಿಕ ಹಜಾಮತ್‌ ಮಾಡುವಾಗ ಆಗಾಗ ನಮ್ಮ ಕಿವಿಗೆ ಗಾಯ ಮಾಡುತ್ತಿದ್ದ! ಗಾಯಮಾಡಿ ಅವನ ‘ಸರ್ವೌಷದ’ ಎನ್ನಿಸಿಕೊಂಡಿದ್ದ ‘ಪಟಿಕಾರ’ (ಪೊಟಾಶ್‌ ಆಲಮ್‌) ಸವರುತ್ತಿದ್ದ. ನಾವು ‘ಉರಿ! ’ ಎಂದು ಅತ್ತರೆ ‘ಅಣ್ಣಾ, ಬಿಸಿಯಾಗದೇ ಬೆಣ್ಣೆ ಕರಗದು!’ ಎಂಬ ವಾಕ್ಯಾಮೃತವನ್ನು ಹೇಳುತ್ತಿದ್ದ! ಇಂದಿಗೂ ಅವನ ನೆನಪಾದರೆ ನನಗೆ ಮೈ ಬೆವರುತ್ತೆ! ಸಲಾಮ್‌!

- ಎಸ್‌. ಎಂ. ಪೆಜತ್ತಾಯ

(‘ದಿಲ್‌ ಕಾ ಆಲಮ್‌... ಮೆ ಕ್ಯಾ ಬತಾವೂಂ ತುಝೆ...’ ಎಂದು ಪೊಟಾಶ್‌ ಆಲಮ್‌ಅನ್ನು ಉದ್ದೇಶಿಸಿ ಹಾಡಿದರೆ ಹೇಗೆ? - ಎಸ್‌.ಜೆ)

*

ಕ್ಷೌರಿಕನ ಬಗ್ಗೆ ಓದಿ ನಮ್ಮ ಬೆಂಗಳೂರಿನ ‘ಅಭಿಮಾನಿ’ ಕ್ಷೌರಿಕ ಮುತ್ತುರಾಜ್‌ ನೆನಪಾಯಿತು. ಕನ್ನಡದ ಅನೇಕ ಸಾಹಿತಿಗಳು ಹಾಗು ಮಹನೀಯರ ‘ಕ್ಷೌರ’ ಮಾಡಿದ ದಾಖಲೆ ಅವರದು. ನಮ್ಮ ತಾತ ವಿಜಯನಾರಸಿಂಹ ಅವರಿಗೂ ಕೂಡ ಒಮ್ಮೆ ಬಂದು ಕ್ಷೌರ ಮಾಡಿದ ನೆನಪು. ಏನೆ ಅನ್ನಿ. ಒಬ್ಬ ಹಜಾಮ ಸೆಟ್‌ ಆದ ಅಂದ್ರೆ ಬೇರೆಯವರು ಏನೇ ಕತ್ತರಿ ಹಾಕಿದ್ರೂ ಸಮಾಧಾನ ಇರಲ್ಲ. ಎನಂತಿರ? ನನ್ನ ಸ್ನೇಹಿತನ ತಂದೆ ಒಬ್ಬರು ಮೈಸೂರಿನಿಂದ ಶಿಡ್ಲಘಟ್ಟಕ್ಕೆ ಅವರ ಹಜಾಮತಿಗೆ ಹೋಗ್ತಾ ಇದ್ರು ಅಂತ ನೆನಪು.

ಅಮೇರಿಕಕ್ಕೆ ಬಂದ ಹೊಸದು. ಹಜಾಮತಿ ಮಾಡಿಸಬೇಕು. ಎಲ್ಲಿ ಹೋಗೊದು? ಒಂದು ಸುಪರ್‌ ಅಗಿರೋ ಜಾಗ ಕಾಣಿಸ್ತು. ಒಳಗೆ ಎರಡೆ ಖುರ್ಚಿ. ಒಬ್ಬ ಮುದುಕಿ ಹಾಗು ಒಬ್ಬ ಸುಂದರಿ ಕ್ಷೌರ ಮಾಡ್ತ ಇದ್ದಾರೆ. ಒಂದೆ ಒಂದು ಕ್ಷೌರಕ್ಕೆ ಬಹಳ ದುಡ್ಡು ಕೇಳಿದ ನೆನಪು. ಓಡಿದೆ ಅಲ್ಲಿಂದ. ಆದರೆ ಇವತ್ತಿನವರೆಗೆ ಹುಡುಕುತ್ತಾ ಇದ್ದೀನಿ. ಯಾವ ಹಜಾಮ/ಗಿತ್ತಿನೂ ಸರಿ ಹೋಗಿಲ್ಲ. ಈ ಸಲಿಯಂತೂ ಮದುವೆಗೆ ಬೆಂಗಳೂರಿಗೆ ಹೋಗಿದ್ದಾಗ ನಮ್ಮ ಹಜಾಮನ ಅಂಗಡಿಗೆ ಹೋದೆ. ಅವನು ನನ್ನ ತಲೆ ನೋಡಿ ಜೋರಾಗಿ ‘ಏಮ್‌ ಸಾರ್‌ ಇಟ್ಲುಂದಿ. ಎವ್ರು ಸಾರ್‌ ಚೇಸಿಂದಿ ಕಟ್ಟಿಂಗು’ಅನ್ನೋದೆ! ಏನ್‌ ಮಾಡೋದು. ನಮ್ಮ ಕಷ್ಟ ಯಾರಿಗು ಅರ್ಥ ಅಗೊಲ್ಲ ಅಂದುಕೊಂಡು ಬಂದೆ. :-)

- ಸುದತ್ತ ಗೌತಮ್‌; ಕ್ಯಾಲಿಫೋರ್ನಿಯಾ

*

ಲೇಟೆಸ್ಟ್‌ ವಿಚಿತ್ರಾನ್ನ ಓದಿ ಎಂದಿನಂತೆ ಮಜಾ ಬಂತು. ನನ್ನ ಅನುಭವಗಳನ್ನೂ ಸ್ವಲ್ಪ ಹಂಚಿಕೊಳ್ಳುವಾ ಅಂತ ಅನಿಸಿತು.

ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿ ಓದಿದ್ದೀರಾ? ಅದರಲ್ಲಿ ಅವರು ಕುವೆಂಪು ಅವರಿಗೆ ವರ್ಷಗಳಿಂದಲೂ ಕ್ಷೌರ ಮಾಡುತ್ತಿದ್ದ ಒಬ್ಬ ಕ್ಷೌರಿಕನ ಬಗ್ಗೆ ಬರೆದಿದ್ದಾರೆ. ಅವನನ್ನು ಕುವೆಂಪು ಅವರ ‘ಆಸ್ಥಾನ ಕ್ಷೌರಿಕ’ ಅಂತ ಬಣ್ಣಿಸಿದ್ದಾರೆ!

ನಮ್ಮದೂ ಸ್ವಲ್ಪ ಅಂಥದ್ದೇ ಕತೆ. ನಮ್ಮ ಊರಲ್ಲಿ ಮೋನಪ್ಪ ಅಂತ ಒಬ್ಬ ಕ್ಷೌರಿಕ ಇದ್ದಾನೆ. ನನ್ನ ಅಪ್ಪ ಚಿಕ್ಕವರಿರುವಾಗಿಂದಲೂ ಅವನೇ ಅವರಿಗೆ ಕ್ಷೌರ ಮಾಡ್ತಾ ಬಂದಿದ್ದಾನೆ. ನಮ್ಮ ಮನೆಗೇ ಬಂದು ಕ್ಷೌರ ಮಾಡುತ್ತಾನೆ! ನಾವು ಕೂಡ ಈವರೆಗೂ(ಆದಷ್ಟು) ಅವನ ಹತ್ತಿರವೇ ಕ್ಷೌರ ಮಾಡಿಸ್ತಾ ಇದ್ದೇವೆ. ಆವನೂ, ನೀವು ಬರೆದ ಕ್ಷೌರಿಕರ ಹಾಗೆಯೇ. ಕ್ಷೌರಿಸುತ್ತಿರುವಾಗ ಅವನ ಸಂಸಾರತಾಪತ್ರಯ ಎಲ್ಲ ಕಣ್ಣಿಗೆ ಕಟ್ಟುವ ಹಾಗೆ ಹೇಳ್ತಾನೆ. ದುಃಖದ ಮಾತೆಂದರೆ ಅವನ ಗಂಡು ಮಕ್ಕಳು ಯಾರೂ ಅವನ ಕೆಲ್ಸ ಕಲೀಲಿಲ್ಲ. ಶಾಲೆಗೆ ಹೋಗಿಯಾದ್ರು ಸರಿಯಗಿ ಅಕ್ಷರಾಭ್ಯಾಸ ಮಾಡಿದ್ರಾ, ಅದೂ ಇಲ್ಲ!

- ತಿರುಮಲೇಶ್‌; ಬೆಂಗಳೂರು (ಊರು : ಬಂಟ್ವಾಳ)

*

ಕ್ಷೌರಿಕ ಪುರಾಣ ಓದಿದೆ. ನಮ್ಮೂರಿಗೆ ಹತ್ತಿರದ ಬಜಗೋಳಿ ಪೇಟೆಯಲ್ಲಿನ ‘ಬಾಲಾಜಿ ಹೇರ್‌ ಡ್ರೆಸ್ಸಸ್‌’ ಸಹ ಒಂದು ಬಿಬಿಸಿ ವಾರ್ತಾಪ್ರಸಾರ ಕೇಂದ್ರ ಇದ್ದಂತೆ. ಅಲ್ಲಿ ಕ್ಷೌರಕ್ಕೆ ಹೋದರೆ ವಿಶ್ವವರ್ತಮಾನಗಳೆಲ್ಲ ಕಿವಿಗೆ ಬೀಳುತ್ತವೆ.

- ಕಾರ್ತಿಕ್‌; ಬೆಂಗಳೂರು

*

ಅರ್ವತ್ತರ ದಶಕದಲ್ಲಿ ಅಮೆರಿಕೆಗೆ ಬಂದ ಹೊಸದರಲ್ಲಿ, ಇಲ್ಲಿ ಮಹಿಳಾ ಕ್ಷೌರಿಕರಿಂದ ಕ್ಷೌರ ಮಾಡಿಸಿಕೊಳ್ಳಬೇಕಾಗಿಬರುತ್ತಲ್ಲಾ ಎಂದು ಸ್ವಲ್ಪ ಮುಜುಗರವಾದದ್ದು ನಿಜ. ಆದರೂ ಮನಸ್ಸಮಾಧಾನಕ್ಕಾಗಿ ’ಬಾರ್ಬರ್‌’ ಆಂಗ್ಲ ಪದವನ್ನು ಅಕರಾಂತ ಪುಲ್ಲಿಂಗ ರಾಮ ಶಬ್ದದಂತೆ ‘ಬಾರ್ಬರಃ ಬಾರ್ಬರೌ ಬಾರ್ಬರಾಃ... ಹೇ ಬಾರ್ಬರಃ ಹೇ ಬಾರ್ಬರೌ ಹೇ ಬಾರ್ಬರಾಃ... ಬಾರ್ಬರೇಣ ಬಾರ್ಬರಾಭ್ಯಾಂ ಬಾರ್ಬರೈಃ... ಬಾರ್ಬರಾಯ ಬಾರ್ಬರಾಭ್ಯಾಂ ಬಾರ್ಬರೇಭ್ಯಃ...’ ಎಂದು ಸಂಸ್ಕೃತದಲ್ಲಿ ಮನನ ಮಾಡಿದ ದಿನಗಳು ನೆನಪಿವೆ. ನನ್ನ ಆ ‘ಬಾರ್ಬರಃ’ ಶಬ್ದನಡೆಯನ್ನು ’ಅಮೆರಿಕನ್ನಡ’ ಪತ್ರಿಕೆಯೂ ಪ್ರಕಟಿಸಿತ್ತು ಮತ್ತು ಬಾರ್ಬರಾ ಹೆಸರಿನ ಹೆಂಗಸೇ ಕ್ಷೌರಮಾಡಿದ್ದರೂ ಆಕೆ ಬಾರ್ಬರಃ ಎಂದು ಓದುಗರೆಲ್ಲ ಸಮಾಧಾನಪಟ್ಟಿದ್ದರು!

- ಡಾ। ಮೈ.ಶ್ರೀ ನಟರಾಜ; ಪೊಟೊಮೆಕ್‌, ಮೇರಿಲ್ಯಾಂಡ್‌

*

"Napita" / "Namaata" dilemma/experimentation and many such things in your article made me laugh loudly in office. Luckily I was in my cabin and people outside could only see that I am laughing and they couldn’t hear! Overall nice fun!!

My experience (You can use it whenever you want) – I am losing my hairs rapidly. When I went to my regular barber after staying outside Bangalore for long time (including USA where I used to get haircut done by "Kshouragitthi") the old barber was so upset that I lost lot of hairs and he kept on praising my earlier hairstyle when I was young and made me also start feeling little bad!! I was actually feeling proud as loss of hairs give some "Proud" (Prouda – kannada) look!! By virtue of "proud" I generally get extra attention wherever I go!!!

This shows how barbers are so sentimentally attached to our hairs!!! Like "Henu?!"

- N AnanthaKrishna; Bangalore

*

It was a wondeful article about a profession.

1. As a business for a Barber it is one time investment. Now a days they change blades or else it is one time investment except for some materials used for shaving.

2. Irrespective of Hajam, when you go there ask for some specification of hari-cut their standard answer is SIR NIMAGE IDU CHENNAGI KAANISALLA Ultimately Hajam will cut our hair according to his will and not ours. I have tried atleast 20-25 Hajamas to test this, but not even one who could cut my hair to my satisfaction. NAM DUDDU, NAMAGE BEKADA HAAGE CUTTING MAADISKOLLO SWATANTRYA ILLVA ANTHA KOPA BARUTTHE.

3. With respect to Hajamas there is a famous story about Akbars barbar tried to fix birbal and ultimately birbal with his wits escapes himself and at last he saves foolish barbers life also. Check this story at the following link: http://www.geocities.com/shishusansar/birbal/birbal6.htm

Keep up the good work.

- Srivatsa; Bangalore

*

Very nice article. In fact, haircut is my favourite subject. When I was in Asian College Of Journalism, the wild idea of writing an article on Barbars came to my mind. Then I approached Sham (he was in KannadaPrabha then). When I was discussing with him then KP editor YNK came there and immediately rangup to his barbar A.G. Narayan (we can call him 5 star barbar) and instructed him to give all sorts of details to me.

I wrote one cover story for KannadaPrabha Naveena Vinyasagala Naapita Samaja, covering from hairstyle right upto barbars lifestyle. YNK liked it very much and told that it is one of the best articles in recent times. That was great compliment from him. Still I savour that experience.

One more thing I wanted to inform you, "Savita Samaja" name came from rushi Savita, who did the first haircut of none other than Brahma. And they do not like to be called as Hajama.

- Prasad Naik; Bangalore

*

Nimma "Barbarism" tumbaa (Barbara!?) vaagittu. Good imagination and fantastic writeup. Thank you

- Udaya Hegde; New Jersey

*

Namaskara Kesha-shayiyavarige (Kesha kurithu shayi-alli baredavaru)

Another GreatClip added to the SuperClip series of v-chitranna :-) I concur with your thoughts. I have always found interactions with saloonists to be interesting. "Caller-id" concept is very interesting :-) KaThu mele kaThari aadisuva ee keshadvamsakaru, hane baraha odhadhe iddaru, thalekeLagu iruva caller-id oduva nisseemaru.

I penned my thoughts after one encounter with a saloonist. Here is the link - http://deepsink.blogspot.com/

- Keshabhilashi Pradeep; Des Moines, Iowa

*

In Bangalore there is a barber who once gave a haircut to Nelson Mandela! Here is the newstory: http://www.rediff.com/news/1998/jul/20manda.htm

- Malli Sannappanavar; South Carolina

*

Nice article! I too am intrigued by the fact, what must have been told Saddam when they did his hair cut.

- Dr. Ashok Hegde; Bangalore

*

I enjoyed the headline and also the write up. Keep it up!

- Vishweshwar Bhat; Bangalore

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X