• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಧಕಾರದ ಕುರಿತ ಲೇಖನ ತಟ್ಟಿತು ಅಂತಃಕರಣವ...

By Staff
|

'ಅಂಧಾನುಕರಣೆಯ ಪರಿ" ಲೇಖನ ನನಗೆ ಬಹಳ ಹಿಡಿಸಿತು, ಮುಖ್ಯ ಕಾರಣವೆಂದರೆ, ತನ್ನ ವೃದ್ಧಾಪ್ಯದಲ್ಲಿ ಸಂಪೂರ್ಣ ದೃಷ್ಟಿಹೀನರಾಗಿದ್ದ ನಮ್ಮ ತಾತ ನೆನಪಾದರು. ಅಂಧರಾಗಿದ್ದರೂ ಅವರು ಆದಷ್ಟು ಮಟ್ಟಿಗೆ ತನ್ನ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ನಾನಾಗ ಚಿಕ್ಕವಳಿದ್ದೆ, ನನ್ನನ್ನು ಕರಕೊಂಡು (ಅಥವಾ ನಾನು ಅವರನ್ನು ಕರಕೊಂಡು?) ಹೊರಗೆ ವಾಕಿಂಗ್‌ಗೆ ಹೋಗುತ್ತಿದ್ದೆವು!

ಅಂತೂ ಒಂದಿಲ್ಲೊಂದು ನೆನಪು ತರಿಸುವ ಲೇಖನಗಳನ್ನೇ ಬರೀತಿರಿ ಬಿಡಿ ನೀವು!

- ಹಂಸವೇಣಿ, ಮೈಸೂರು.

*

ಎಂದಾದರೂ ಇನ್ನೊಮ್ಮೆ ಸ್ವಿಡ್ಜರ್ಲ್ಯಾಂಡ್‌ಗೆ ಹೋದರೆ ನಾನು 'ಬ್ಲೈಂಡ್‌ ಕೌ"ದಲ್ಲಿ ಉಣ್ಣುವವನೇ! ನನ್ನ ಕಣ್ಣುಗಳಿಗೆ ಲೇಸರ್‌ ಚಿಕಿತ್ಸೆಯಿಂದಾಗಿ ಕಳೆದ ಮೂರುತಿಂಗಳಿನಿಂದ ಅಂಧಕಾರದ ಅಲ್ಪಸ್ಲಲ್ಪ ರುಚಿಕಂಡ ನಾನು ಅದರ ಪೂರ್ಣ ಆಸ್ವಾದನೆಯನ್ನು ಬ್ಲೈಂಡ್‌ ಕೌ ದಲ್ಲಿ ಸವಿಯುವ ಇರಾದೆ ಇದೆ! ಒಳ್ಳೆಯ ಲೇಖನ, - ಧನ್ಯವಾದಗಳು.

- ಎಸ್‌ ಎಂ ಪೆಜತ್ತಾಯ; ಬೆಂಗಳೂರು

*

ಈ ವಾರದ ವಿಚಿತ್ರಾನ್ನ ಮನಸ್ಸನ್ನು ತಟ್ಟಿತು. ಕಣ್ಣಿರುವ ನಮಗೆ ಕಣ್ಣಿಲ್ಲದವರ ಜಗತ್ತನ್ನು ಊಹಿಸುವುದೇ ಕಷ್ಟ. ಆ ಕತ್ತಲೆ ರೆಸ್ಟುರಾಂಟ್‌ನ ಕಲ್ಪನೆಯೇ ಅದ್ಭುತ. ಆದರೆ ನನಗಂತೂ ಅಲ್ಲಿ ಹೋಗಿ ಊಟ ಮಾಡಲು ಭಯವಾಗುತ್ತದೆ! ಈ ಎಲ್ಲಾ ವಿವರಗಳ ಜೊತೆಗೆ ಕಣ್ಣಿದ್ದೂ ಕುರುಡಾಗಿರುವವರ ಬಗ್ಗೆಯೂ ಸ್ವಲ್ಪ 'ಕಾಣಿಸಿದ್ದರೆ" ಇನ್ನೂ ಚೆನ್ನಾಗಿರುತ್ತಿತ್ತು. ಅಂಧ ಸಂಗೀತ ನಿರ್ದೇಶಕ - ರವೀಂದ್ರ ಜೈನ್‌ - ರಾಮಾಯಣ.

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

*

ನಿಮ್ಮ ಲೇಖನ ಕಣ್ಣಿನ ಬಗ್ಗೆ, ಅಂಧತ್ವದ ಬಗ್ಗೆ, ತುಂಬಾ ಚೆನ್ನಾಗಿದೆ. ಎಂತಹವರನ್ನೂ ಕಣ್ಣು ತೆರೆಸುವಂತೆ ಮಾಡುತ್ತದೆ. ನಿಮ್ಮ ಲೇಖನಿಯಿಂದ ಹೀಗೆ ಉತ್ತಮ ಲೇಖನಗಳು ನಿರಂತರವಾಗಿ ಹರಿದು ಬರುತ್ತಿರಲಿ.

- ಸರಸ್ವತಿ ವಟ್ಟಂ; ಬೆಂಗಳೂರು

*

ಅಂಧರ ಬಗೆಗಿನ ಲೇಖನ ಉತ್ತಮವಾಗಿತ್ತು. ಗೀತ್‌ ಗಾತಾ ಚಲ್‌ ಚಿತ್ರದಲ್ಲಿ ಶಾಮ್‌ ತೇರೀ ಬಂಸೀ ಪುಕಾರೇ ರಾಧಾ ನಾಮ್‌ ನಂತಹ ಗೀತೆಗಳನ್ನು ನೀಡಿ, ರಾಮಾಯಣ ಸೀರಿಯಲ್‌ಗೆ ಸಂಗೀತ ಒದಗಿಸಿದ ರವೀಂದ್ರ ಜೈನ್‌ ಈ ವಾರದ ರಸಪ್ರಶ್ನೆಗೆ ಸರಿ ಉತ್ತರ ಇರಬಹುದೇ? ದಿಲ್‌ನೆ ಫಿರ್‌ ಯಾದ್‌ ಕಿಯಾ ಚಿತ್ರದಲ್ಲಿ ಕಲಿಯಾನೆ ಘೂಂಘಟ್‌ ಖೋಲೆ ಇತ್ಯಾದಿ ಹಾಡುಗಳನ್ನು ಸಂಯೋಜಿಸಿದ ಸೋನಿಕ್‌-ಓಮಿ ಜೋಡಿಯ ಸೋನಿಕ್‌ ಕೂಡ ದೃಷ್ಟಿಹೀನರಾಗಿದ್ದರು ಎಂದು ಕೇಳಿದ್ದೇನೆ.

- ಚಿದಂಬರ ಕಾಕತ್‌ಕರ್‌; ಮಂಗಳೂರು

*

ಲೇಖನ ಚಿಂತನೆಗೆ ತೊಡಗಿಸುತ್ತದೆ. ಕಣ್ಣಿದ್ದೂ ಕೆಲವೊಮ್ಮೆ ಸಾಧಿಸಲಸಾಧ್ಯ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ನಿರುತ್ಸಾಹಿಗಳಿಗೆ ನಿಮ್ಮ ಲೇಖನದಲ್ಲಿ ಮೂಡಿಬಂದಿರುವ ಮಂದಿಯೇ ದಾರಿತೋರುವವರಾಗುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಈಗ್ಗೆ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ವಿಜ್ಞಾನ ಪ್ರದರ್ಶನದಲ್ಲಿ ಅಂಧರೊಬ್ಬರು ಬ್ರೈಲ್‌ ಲಿಪಿಯಲ್ಲಿ ಕಂಪ್ಯೂಟರಿನಲ್ಲಿ ಅವರನ್ನು ಮಾತಾಡಿಸುವವರ ಹೆಸರುಗಳನ್ನು ಕೇಳಿ (ಹೆಚ್ಚಾಗಿ ಮಕ್ಕಳ ಹೆಸರುಗಳನ್ನು) ತಯಾರಿಸಿಕೊಡುತ್ತಿದ್ದರು. ನಮ್ಮಲ್ಲೊಬ್ಬ ಅಂಧ ವಿದ್ಯಾರ್ಥಿ ಅರ್ಥಶಾಸ್ತ್ರದಲ್ಲಿ ಪಿ.ಎಚ್‌.ಡಿ. ಪದವಿಯನ್ನು ಕಳೆದ ವರ್ಷ ಪಡೆದರಲ್ಲದೆ, ತಮ್ಮ ಸಂಶೋಧನಾ ಲೇಖನವನ್ನು ಪುನ: ಆಂಗ್ಲಭಾಷೆಯಿಂದ ಬ್ರೈಲ್‌ ಲಿಪಿಯಲ್ಲಿ ತಯಾರಿಸಿ ಅನೇಕ ಅಂಧ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಲು ಇಚ್ಛಿಸುತ್ತೇನೆ. ಒಟ್ಟಿನಲ್ಲಿ ನಿಮ್ಮ ಲೇಖನ ಮತ್ತೆ ಮತ್ತೆ ಓದಬೇಕೆನಿಸುವಂತಿದೆ.

ನಿಮ್ಮ ಪ್ರಶ್ನೆಗೆ ಉತ್ತರ : ಸಂಗೀತ ನಿರ್ದೇಶಕ ಶ್ರೀ ರವೀಂದ್ರ ಜೈನ್‌. ಅವರ ಪ್ರಮುಖ ಗೀತೆಗಳಲ್ಲಿ, ಏಸುದಾಸ್‌ ಅವರ ಧ್ವನಿಯಲ್ಲಿ ಚಿತ್ತವನ್ನೇ ಸೂರೆಗೊಳ್ಳುವಂತೆ ಮೂಡಿಬರುವ ಚಿತ್‌ ಚೋರ್‌ ಚಿತ್ರದ ಹಾಡು: ಗೋರಿ ತೇರಾ ಗಾಂವ್‌ ಬಡಾ ಪ್ಯಾರಾ..., ಕಿಶೋರ್‌ ಕುಮಾರರ ಧ್ವನಿಯಲ್ಲಿ ಚೋರ್‌ ಮಚ್ಛಾಯೆ ಶೋರ್‌ ಚಿತ್ರದ ಲೇ ಜಾಯೆಂಗೆ, ಲೇ ಜಾಯೆಂಗೇ... ದಿಲ್‌ವಾಲೆ..., ದೂರದರ್ಶನದಲ್ಲಿ ಬರುತ್ತಿದ್ದ ರಾಮಾಯಣ, ಜೈ ಹನುಮಾನ್‌, ಶ್ರೀ ಕೃಷ್ಣ ಧಾರಾವಾಹಿಗಳು.

- ಚಂದ್ರಶೇಖರ ಬಿ.ಎಚ್‌; ಬೆಂಗಳೂರು

*

ಅಂಧ ಸಂಗೀತ ನಿರ್ದೇಶಕ ಯಾರು, ಅವರು ಸಂಗೀತ ನೀಡಿದ ಚಿತ್ರ, ಟಿವಿಧಾರಾವಾಹಿ ಹೆಸರಿಸಿ ಎಂಬ ಪ್ರಶ್ನೆಗೆ ಸರಿಯುತ್ತರ (ರವೀಂದ್ರ ಜೈನ್‌, ರಾಮ್‌ ತೇರಿ ಗಾಂಗಾ ಮೈಲಿ, ರಾಮಾಯಣ್‌) ಬರೆದ ವಿಚಿತ್ರಾನ್ನ ಓದುಗರು:

- ಗಾಯತ್ರಿ ಶೇಷಾಚಲ; ಬೆಂಗಳೂರು

- ಜಯತೀರ್ಥ ಬೆಂಗೂರ್‌; ಬೆಂಗಳೂರು

- ಕೃಷ್ಣಮೂರ್ತಿ ಭಟ್‌ ಬಸ್ರೂರು; ಬೆಂಗಳೂರು

- ಮಹೇಶ್‌ ಹೆಗಡೆ; ಬಾಸ್ಟನ್‌

- ಭಾರ್ಗವಿ ವೆಂಕಟ್‌; ಫೀನಿಕ್ಸ್‌, ಅರಿಜೊನಾ

- ಪ್ರಸಾದ್‌ ಕೋವಲಮ್‌; ಆಸ್ಟ್ರೇಲಿಯಾ

- ಸ್ಮಿತಾ ಟಿ; ಬೆಂಗಳೂರು

- ಎಂ ರೂಪಾ; ಬೆಂಗಳೂರು

- ಗುರುಪ್ರಸಾದ್‌ ವೆಂಕಟರಾಮು; ಟೊಕಿಯಾ, ಜಪಾನ್‌

- ವೆಂಕಟೇಶ್‌; ಬೆಂಗಳೂರು

- ಸಂಧ್ಯಾ ಶಾಮ್‌ಜಿ; ಹೈದರಾಬಾದ್‌

*

'ಗೆಲಿಲಿಯೋನ ಟಿಲಿಸ್ಕೋಪಿಂದ..ಟೆಲಿಕಿಸ್‌ ಎಂಬ ಗೇಲಿಯವರೆಗೆ" ಓದಿದೆ. ಅದೆಷ್ಟು ವಿಷಯಗಳನ್ನು ಅದರಲ್ಲಿ ಬರೆದಿದ್ದೀರಿ! ಒಂದೇ ಉಸಿರಿನಲ್ಲಿ ಅದನ್ನೆಲ್ಲಾ ಓದಿ ಮುಗಿಸಿದೆ. ನಿಜಕ್ಕೂ ನೀವು ಒಳ್ಳೆಯ ಕವಿ. ಟೆಲಿ ಟೆಲಿ ತಾಳೆನು ಈ ಟೆಲಿಯಾ... ಮುಂದೆ ಯಾವ ಪದ್ಯಕ್ಕಾಗಿ ನಿಮ್ಮ ತಯಾರಿ ನಡೆದಿದೆ?

- ಸುಮಿತ್ರಾ ಸೊಂಡೆಕೆರೆ; ಕ್ಯಾಲಿಫೋರ್ನಿಯಾ

*

ಇವತ್ತಿನ (ಟೆಲಿ ಪುರಾಣ) ವಿಚಿತ್ರಾನ್ನಕ್ಕೆ ನೀವು ಆರಿಸಿಕೊಂಡ ವಿಷಯ ಮತ್ತು ಅದನ್ನು ಬರೆದ ಶೈಲಿ ಮನಸ್ಸಿಗೆ ಮುದ ಕೊಟ್ಟು, ಒಂದು ಕಿರುನಗೆ ಮೂಡಿಸುವಲ್ಲಿ ಸಫಲವಾಗದೇ ಇರಲಿಲ್ಲ. ಅದಕ್ಕೆ ಇನ್ನೊಮ್ಮೆ ನನ್ನ ಥ್ಯಾಂಕ್ಸ್‌ ನಿಮಗೆ.

- ವಿದ್ಯಾ ಗದಗ್‌ಕರ್‌; ಒಹಯಾ

*

'ಟೆಲಿಕಥೆ" ಓದಿದೆ. ಸಕತ್ತಾಗಿದೆ. ಅಷ್ಟೊಂದು ಇನ್ಫಾರ್ಮೇಷನ್‌ ಎಲ್ಲಿಂದ, ಹೇಗೆ ಸಿಗುತ್ತೆ ಅನ್ನೋದೇ ಆಶ್ಚರ್ಯದ ವಿಷಯ. ನಿಮ್ಮ ಅಂಕಣದ ಥೀಮ್‌ ಸಹ 'ಮಾಹಿತಿಯ ಜೊತೆ ಮನರಂಜನೆ" ಬಹಳ ಅರ್ಥಪೂರ್ಣವಾಗಿದೆ. ಎಲ್ಲ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಾದ್ಯವಾಗದೆ ಹೋದರೂ, ಓದುವಾಗ ಆಶ್ಚರ್ಯ ಜೊತೆಗೆ ಮನರಂಜನೆ ಎಲ್ಲವೂ ಧಾರಾಳವಾಗಿ ಸಿಗುತ್ತದೆ. ಗ್ರೇಟ್‌ ವರ್ಕ್‌!

- ಅನುರಾಧಾ ಎಂ ಎಲ್‌ ರಾವ್‌; ಬೆಂಗಳೂರು

*

ನಿಮ್ಮ ಲೇಖನಗಳನ್ನು ಓದಿದೆ. ಓದುವುದು ಸುಲಭವಾಯಿತು, ಆದರೆ ಅದರ ಮೇಲೆ ಬರೆಯುವುದಕ್ಕೆ ಹೆಚ್ಚು ಸಮಯ ಬೇಕೆನಿಸಿತು. ನೀವು, ಬಾನಲ್ಲೇ ಮಧುಚಂದ್ರಕೆ... ಬರೆದಾಗ ನನಗನ್ನಿಸಿತು 'ಮಿತ್ರನನ್ನು ವಿಚಿತ್ರಾನ್ನದಲ್ಲಿರಿಸಿ ವಿಚಿತ್ರದ ಜೊತೆಗೆ ತಮಾಷೆಯನ್ನು ಕೊಟ್ಟಿರಿ". ನಿಲ್ರೀ ಮಾರಾಯ್ರೆ! ಒಂದು ಪ್ರಶ್ನೆ ಇದೆ ಅಂದ್ರೆ, " ಬಸ್ಸಿಗೆ ಹೊತ್ತಾಯಿತು ಅಂತ ಓಡಿದ್ರಿ. ಇನ್ನೊಂದು ಬಸ್‌ ಬರುತ್ತಿತ್ತು, "ಇವರು ಯಾಕೆ ಈ ತರಹ" ಓಡುತ್ತಿದ್ದಾರೆ ಅಂದ್ಕೊಂಡು ಬಸ್‌ ಹತ್ತಿದರೆ, ಆಗ ಗೊತ್ತಾಯಿತು ಕಂಡಕ್ಟ್ರು ಮತ್ತೂ ಡ್ರೈವರ್ರೂ ಇವರೇ. ಬಸ್ಸಿನ ಕೆಲಸ ಸುಸ್ತಾಗಿ 'ಬಸ್‌"(ಸಾಕು ಅನ್ನುವ ಅರ್ಥದಿಂದ) ಎಂದು, ಕಡೆಗೆ ರುದ್ರಾಕ್ಷಿ ಮೇಲೆ ಕಣ್ಣು ಹಾಯಿಸಿದರೆ? ಅಷ್ಟೇ ಅಲ್ಲ ರುದ್ರಾಕ್ಷಿ ಗೆ ಜಾತಿ ಬೇರೆ ಎಂಡಾರ್ಸ್‌ ಮಾಡಿದ್ದೀರಲ್ಲ ಎನು ಸಮಾಚಾರ? ನನ್ನ ಕೇಳಿದರೆ, 'ನಾವೆಲ್ಲ ಒಂದೊಂದು ರುದ್ರಾಕ್ಷಿನ ಮುಂದೆ ಇಟ್ಟುಕೊಂಡು, (ನಮ್ಮ ಇಷ್ಟಾನುಸಾರ) ಜನಕ್ಕೆಲ್ಲಾ, ನಮ್ಮ ಜಾತಿನ ಕೇಳಬೇಡಿ, ನಮ್ಮ ರುದ್ರಾಕ್ಷಿ ಬಣ್ಣ ನೋಡಿ" ಅಂತ ಹೇಳಕ್ಕೆ ಶುರು ಮಾಡಬಹುದು. ಅಂತೂ ಪರವಾಗಿಲ್ಲ ಬ್ರಾಹ್ಮಣರಾಗಬಯಸಿದವರಿಗೊಂದು ಸಾಧ್ಯವಾಗುವ ಸುಲಭವಾದ ಐಡಿಯ. "ಇನ್ನೇನಪ್ಪ ಕಾದಿದೆ ಮುಂದೆ?" ಅನ್ನೋಹಾಗೆ ನಿಲ್ಲಿಸಿದ್ದೀರಿ.

ನಿಮ್ಮ ಬರಹಗಳೆಲ್ಲಾ ಚೆನ್ನಾಗಿವೆ. ನಿಮ್ಮ ಲೇಖನದ ವಿಷಯಗಳು ಅವಲೋಕಿಸಿ ನೋಡಿದರೆ, ನೀವು ಅಲ್ಲಿ ಇಲ್ಲಿ ವಿಷಯಗಳನ್ನು ಹುಡುಕಿಕೊಂಡು ಹಾರುತ್ತಿರುವ ಹಾಗಿದೆ. ಹಾರುವಾಗ ಕೈಗೆ ಎನು ಸಿಗುತ್ತದೆಯೋ, ಅದು 'ವಿಚಿತ್ರಾನ್ನ ರೂಪ ಕಾಣಿಸುತ್ತದೆ". ನಿಮಗೆ ಬರೆಯುವ ವಿಷಯ ಬೇಕೆನಿಸಿದರೆ, ಓದುಗರಾದ ನಮ್ಮನ್ನೂ ಒಮ್ಮೆ ಕೇಳಿ ನೋಡಿ. ಬಿಸಿಬಿಸಿ ಇಂಗ್ರೇಡಿಯಂಟ್ಸ್‌ ಸಿಕ್ಕರೆ ನಿಮಗೆ ಚಿತ್ರಾನ್ನ ಅಷ್ಟೇ ಅಲ್ಲ, ವಿಚಿತ್ರಾನ್ನವೂ ಅಷ್ಟೇ ಸುಲಭವಾದೀತು. ಧನ್ಯವಾದಗಳು!

ವಿಶ್ವಾಸದಲ್ಲಿ,

- ಡಾ. ಮೀನಾ ಸುಬ್ಬರಾವ್‌; ಕ್ಯಾಲಿಫೋರ್ನಿಯಾ

*

ವಿಚಿತ್ರಾನ್ನ ಅಂಕಣ ತುಂಬ ಚೆನ್ನಾಗಿ ಬರುತ್ತಿದೆ. ಪ್ರತಿಸರ್ತಿನೂ ಯೇನಾದ್ರೂ ಹೊಸ ವಿಷಯ ತಿಳಿದು ಸ್ವಲ್ಪ ಬುದ್ಧಿ ಅಭಿವೃದ್ಧಿ ಆಗುತ್ತದೆ. ರುದ್ರಾಕ್ಷದ ಬಗ್ಗೆ ಇನ್ನೂ ಹೆಚ್ಚಿಗೆ ಮಾಹಿತಿ ಇದ್ದರೆ ತಿಳಿಸಿ. ಈಗಿನ ಕಾಲದಲ್ಲಿ ರುದ್ರಾಕ್ಷ ಹಾಕಿಕೊಳ್ಳುವವರು ತುಂಬ ಕಡಿಮೆ ಆಗಿದ್ದಾರೆ ಯಾಕೆಂದ್ರೆ ರುದ್ರಾಕ್ಷ ಅಷ್ಟು ಸುಲಭವಾಗಿ ಎಲ್ಲರೂ ಹಾಕಿಕೊಳ್ಳೊಕೆ ಸಾಧ್ಯವಿಲ್ಲ, ಅದೂ ಜಾತಕಫಲ ಇಲ್ಲವೇ ರಾಶಿ ಪ್ರಕಾರ ಮಾತ್ರ ಹಾಕಿಕೊಳ್ಳೊದಕ್ಕೆ ಸಾಧ್ಯ ಅಂತ ಕೇಳಿದ್ದೆ ಇನ್ನೇನೂ ಗೊತ್ತಿರಲಿಲ್ಲ. ನಿಮ್ಮ ಅಂಕಣ ಓದಿದ ಮೇಲೆ ಸ್ವಲ್ಪ ಹೆಚ್ಚಿಗೆ ವಿಷಯ ತಿಳಿಯಿತು.

- ರಷ್ಮಿ ಸುಧೀಂದ್ರ; ಟೆಕ್ಸಸ್‌

*

ಪ್ರೀತಿಯ ಜೋಷಿಯವರೆ, ನಮ್ಮ ವಿವಾಹಕ್ಕೆ ನಿಮ್ಮ ಲೇಖನ ಒಂದು ವಿಶಿಷ್ಟ ಉಡುಗೊರೆ!

ತಾತನವರ (ದಿ।ವಿಜಯನಾರಸಿಂಹ) ಸವಿನೆನಪನ್ನ ಓದುಗರೊಂದಿಗೆ ಹಂಚಿಕೊಂಡಿದ್ದಂತೂ ಬಹಳ ಸಂತೋಷದ ವಿಷಯ. ಬೆಂಗಳೂರಿನಲ್ಲಿ ನನ್ನ ಸ್ನೇಹಿತ ಭಾಸ್ಕರ್‌ ಈ ಲೇಖನದ ಪ್ರಿಂಟ್‌ಔಟ್‌ ತೆಗೆದು ನಮ್ಮ ಅಜ್ಜಿಗೂ (ವಿಜಯನಾರಸಿಂಹ ಅವರ ಪತ್ನಿ) ಓದಲಿಕ್ಕೆ ಕೊಟ್ಟಿದ್ದಾನೆ!

ಓಕೆ, ನಮ್ಮ ವಿವಾಹವೇನೋ ಸೊಗಸಾಗಿ ನಡೆಯಿತು. ವೀಸಾ ಕೂಡ ತೊಂದರೆಯಿಲ್ಲದೆ ಸಿಕ್ಕಾಗ ಹನಿಮೂನಿಗೆ ಹೋಗದೆ ಇರಲು ಕಾರಣ ಇರಲಿಲ್ಲ. ಸೌಮ್ಯ-ವಿಕ್ರಮ್‌ ದಂಪತಿಗಳ ವಿಶೇಷ ನೆರವಿನಿಂದ ಲಾಸ್ಟ್‌ ಮಿನಿಟ್‌ ಬುಕಿಂಗ್‌ ಲಭ್ಯ. ಹಾಗಾಗಿ ಮಡಿಕೇರಿ ಬಳಿಯ ಆರೆಂಜ್‌ ಕೌಂಟಿ ರಿಸಾರ್ಟ್‌ಗೆ ಹೋಗಿದ್ದೆವು. ಬಹಳ ಸುಂದರವಾದ ತಾಣ. ಒಂದು ಮಧುರ ಅನುಭವ!

ಇದೀಗ ಕ್ಯಾಲಿಫೋರ್ನಿಯಾದಲ್ಲಿ ಹೊಸ ಸಂಸಾರ ಗೃಹಕೃತ್ಯ ಹೂಡಿದ್ದೇವೆ!

- ಗೌತಮ್‌ ಮತ್ತು ದೀಪಾ; ಕ್ಯಾಲಿಫೋರ್ನಿಯಾ

*

ನಿಮ್ಮ ವಿಚಿತ್ರಾನ್ನವನ್ನು ಪ್ರತಿವಾರ ತಿಂದುತಿಂದು ನಾನು ತುಂಬ ದಪ್ಪ ಅಗ್ಬಿಟ್ಟಿದ್ದೀನಿ. ದಪ್ಪಗಿರುವವರು ಹೇಗೆ ಸಣ್ಣ ಆಗೋದು ಅಂತನೂ ನಿಮ್ಮ ವಿಚಿತ್ರಾನ್ನದಲ್ಲಿ ಸ್ವಲ್ಪ ಸಲಹೆ ಕೊಡುತ್ತೀರ :-)

- ಸಂಪಿಗೆ ಶ್ರೀನಿವಾಸ; ಬೆಂಗಳೂರು

*

Your recent writeup on Blind following was interesting. I would like to mention a small correction to your article: Bern (and not Zurich) is the Swiss capital.

- Aravind C L; Munich, Germany

[Dr. Aravind, Thank you so much for the correct information. It was oversight or lack of in-depth reasearch on my part :-(S.Joshi.]

*

I just now read your article about Andhanukarane. Its really amazing how a person can manage without eye sight (prob. manage even better than the people who have all the five senses). The music director of Ramayana was Ravindra Jain who has no sight.

I would like to tell you an interesting thing about the movie I recently watched. The title is "Dancer in the Dark". It was a most moving film I have ever seen. If you get a chance, please do watch it. Youll definitely like it. You can get the details for that movie on the following link. http://www.imdb.com/title/tt0168629/

Thanks.

- Rashmi Kulkarni; Pittsburgh

*

Read your article. Too good. Blind cow resturant! really interesting!! Adare, quizge answer gottilla

- Leena P; Bangalore

*

Nice article. In fact even I heard that "Blind cow" article on NPR. It was kind of reassuring. I personally believe of all the handicapedness , visual impairment is really a difficult one. It is amazing to know what people with such disability can do. Even for that matter, two years ago one blind American climbed Mt Everest. (I dont know his name). Like I said, it is reassuring to know they can lead a normal life. To me, I will consider we have made progress as a scientific society when we can give sight to blind people.

Anyway, I guess Ravindra Jain is the director who is blind. In fact I didnt know it. I was curious when you asked that question and I googled it.

- Vadiraj Narasimha; Boston

*

In spite of all the hectic work, I always make time to read your column. I was really impressed to know about the dining in darkness thing. This summer were planning a Europe trip. Since its a package tour, Im not sure if well have free time, but if we do, Id like to visit this restaurant.

- Lakshmi Srinath; California

*

Tele story - Really good episode! Could not wait to telecompliment the telewriter!! With Teleregards,

- Swarupa Rani; Bangalore

*

Excellent article! I thoroughly enjoyed reading it. More than anything, I could identify myself because I am a Telewife and my husband is Telepathi!! We are Telecouples!!!!

- Ragini in Bangalore (with Kishore in Hyderabad)

*

Good reading. Thank you. I have taken a printof this for my wife and daughter.

- Soory Hardalli; Bangalore

*

Tele couples story was very interesting to read and also fun in reading the last paragraph! Every line is so true! I was picturing myself and Malli in that :) It is really amazing how you can find so many thoughtful topics and also to collect quality information!! who do you ask help? GOOGLE??( just kidding...) I enzoyed reading!!

Article on Rudraksha was very good and very informative too. I knew little about Rudraksha but not its scientific benefits. It was very good reading! I have a question, if you know where to buy original rudraksha mala, please let me know.

- Madhu Bellarahalli; Connecticut

*

I did read the Tele story article, very funny and informative. Gosh! where do you get time to compile all these information?

- Shubha Satyanarayana; Boston

*

Rudraksha article is Excellent. Informative. Really nice. My rating for the article is 5 stars!

- Divakar Phadke; Kansas City

*

Article on Rudraksh was an impressing infotainment. I did remember some time back reading about bio-electrical therapy stuff but got to know more about this and much more on Rudraksh in vichitranna. Vichitranna is not only Chitranna, Its whole meal most of the times. Thank you very much for feeding us such a healthy and delicious food.

- Jayakumar CD; Louisville, Kentucky

*

Bit busy here to read Vichitranna articles on tuesday mornings itself but I am trying to catch up over the weekends. They have been infotaining as ever!

Sridevi Kulkarni; Minnesota

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more