• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚಿತ್ರಾನ್ನ ಹೂಸ್ಪರ್ಧೆ: ಮಲ್ಲಿಗೆ ಗೆದ್ದಿತು!

By Staff
|
Srivathsa Joshi *ಶ್ರೀವತ್ಸ ಜೋಶಿ

ಮಂದಾರ ಹೂವಿನ ಮಹಿಮೆಯನ್ನು ಬಣ್ಣಿಸಿದ ವಿಚಿತ್ರಾನ್ನ ಸಂಚಿಕೆಯ ಕೊನೆಯಲ್ಲಿ ‘ಓದುಗರ ಮೆಚ್ಚಿನ ಹೂ’ವಿನ ಆಯ್ಕೆಗಾಗಿ ಒಂದು ವಿಶಿಷ್ಟ ರೀತಿಯ ಚುನಾವಣೆಯ ಏರ್ಪಾಡು ಮಾಡಲಾಗಿತ್ತು. ಅತಿ ಹೆಚ್ಚು ಮತಗಳಿಸುವ ಹೂವು ಯಾವುದೆಂದು ನಿರ್ಧರಿಸಿ ಅದರ ನಾಮಪತ್ರ ಸಲ್ಲಿಸಿದವರಿಗೆಲ್ಲ ಬಹುಮಾನ ಎಂದು ಪ್ರಕಟಿಸಲಾಗಿತ್ತು. ಸ್ಪರ್ಧೆಯನ್ನು ಇನ್ನೂ ಆಸಕ್ತಿಕರವಾಗಿಸಲಿಕ್ಕಾಗಿ, ಒಂದೇ ಒಂದು ಮತ ಗಳಿಸುವ ಹೂವಿಗೂ (ಹೂಗಳಿಗೂ) ಬಹುಮಾನವಿರಿಸಲಾಗಿತ್ತು.

ವಿಚಿತ್ರಾನ್ನದ ಆ ಸಂಚಿಕೆಯನ್ನು ಓದಿರುವ ಓದುಗರ ಒಟ್ಟು ಸಂಖ್ಯೆಗೆ (ವೆಬ್‌ಸರ್ವರ್‌ ಅಂಕಿ ಅಂಶಗಳಾಧಾರದ ಅಂದಾಜು) ಹೋಲಿಸಿದರೆ ಮತದಾನ ಮಾಡಿದವರ ಸಂಖ್ಯೆ ಕೇವಲ 5%. ಅದರಲ್ಲೇನೂ ನಿರಾಸೆಯ ಮಾತಿಲ್ಲ - ಭಾರತದಲ್ಲಿ, ಅಮೆರಿಕದಲ್ಲಿ ಎಲ್ಲ ಕಡೆಯೂ ಓಟು ಹಾಕುವವರ ಶೇಕಡಾವಾರು ಸಂಖ್ಯೆ ಕಡಿಮೆಯಾಗುತ್ತಲೇ ಇದೆಯೆಂದ ಮೇಲೆ. ಆದರೆ ಶೋಚನೀಯ ವಿಷಯವೆಂದರೆ ನಮ್ಮ ಸುತ್ತಲ ಪ್ರಕೃತಿಯಲ್ಲಿನ ಸುಂದರ ವಸ್ತುವಾದ ಹೂವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾರದಷ್ಟೂ ವ್ಯಸ್ತರಾಗಿ ಹೋದೆವಾ ನಾವು...?

Flower Poll Results! - Mallige is the championಇರಲಿ, ಗಂಭೀರ ವಿಚಾರಗಳ ವೇದಿಕೆಯಲ್ಲ ಇದು. ಚಲಾವಣೆಯಾದ ಮತಗಳ ಪೈಕಿ ಯಾವ ಹೂವು ‘ಚೆಲುವೆಲ್ಲ ನಂದೆಂದಿತು’ ಎಂದಿದೆ ನೋಡೋಣ. ಬೇರಾವುದಿದ್ದೀತು? ಅತ್ಯಧಿಕ ಮತಗಳನ್ನು ಗಳಿಸಿದ ಕೀರ್ತಿ ‘ಮಲ್ಲಿಗೆ’ಯದು! ಮತ್ತೆ ? ವಿದೇಶಗಳಿಗೂ ರಫ್ತಾಗುವ ಮೈಸೂರ ಮಲ್ಲಿಗೆಗೆ ಅಂಥಾ ಆಕರ್ಷಣೆ ಇರೋದು ಸುಮ್ನೆ ಅಂದು ಕೊಂಡಿರಾ? ಅದಕ್ಕೇ ಹೇಳಿದ್ದು, ಚೆಲ್ಲಿದರು ಮಲ್ಲಿಗೆಯ ಬಾನ ಸೂರೇರಿ ಮ್ಯಾಲೆ... ಮಾತ್ರವಲ್ಲ , ಚೆಲ್ಲಿದರು ಮಲ್ಲಿಗೆಯ... ಅಂತರ್ಜಾಲದ ಮಾಹಿತಿ ಕಾಲುದಾರಿಗಳ ಮ್ಯಾಲೆ...

ಮಲ್ಲಿಗೆ ಮತ್ತು ಮಲ್ಲಿಗೆಯ ನಾಮಪತ್ರಸಲ್ಲಿಸಿದವರಿಗೆ ಹಾರ್ದಿಕ ಅಭಿನಂದನೆಗಳು!

ಇನ್ನು, ಒಂದೇ ಒಂದು ಓಟು ಗಳಿಸಿದ ಹೂಗಳು? ಅವುಗಳ ಸಂಖ್ಯೆ 22. ಹೂವಿನ ಆಯ್ಕೆಯ ಇಡೀ ಸ್ಪರ್ಧೆ ಅತ್ಯಂತ ಆತ್ಮೀಯ ಎನಿಸುವುದೇ ಈ 22 ಹೂಗಳ ಪಟ್ಟಿಯಲ್ಲಿ. ಒಂದೊಂದು ಹೂವಿನ ಉಲ್ಲೇಖದ ಹಿಂದೆಯೂ ಅದೆಂತಹ ರೋಚಕ ನೆನಪುಗಳು, ಮಧುರ ಭಾವನೆಗಳು! ಈ ಎಲ್ಲ ಹೂಗಳಿಗೂ ಅವುಗಳ ಅಭಿಮಾನಿಗಳಿಗೂ ಸಹ ಅಭಿನಂದನೆಗಳು.

ತಲಾ 3 ಮತ ಗಳಿಸಿದ ಸಂಪಿಗೆ ಮತ್ತು ತಾವರೆ; ತಲಾ 2 ಮತ ಗಳಿಸಿದ ಗುಲಾಬಿ, ಜಾಜಿ, ಕಣಗಿಲೆ, ಪಾರಿಜಾತಗಳಿಗೂ Better luck next time... ಸಮಾಧಾನ)

ವಿಜೇತರಾದ ಎಲ್ಲ 32 ಮಂದಿಗೂ ಸೂಕ್ತವಾದ ಬಹುಮಾನವನ್ನು ಸೂಕ್ತವಾದ ರೀತಿಯಲ್ಲಿ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು.

* * * * *

‘ವಿಚಿತ್ರಾನ್ನ ಓದುಗರ ನೆಚ್ಚಿನ ಹೂವು’ ಸ್ಪರ್ಧೆಯ ಫಲಿತಾಂಶ:

Flower Poll Results! - Mallige is the championಅ) ಅತ್ಯಧಿಕ ಮತಗಳನ್ನು ಗಳಿಸಿದ ಹೂ: ಮಲ್ಲಿಗೆ

ಈ ಹೂವಿನ ಹೆಸರು ಸೂಚಿಸಿದ ಓದುಗರು:

- ಉಮೇಶ್‌ ಬಾಗಲೂರು; ಬೆಂಗಳೂರು

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

- ಶ್ರೀಧರ್‌ ಕೆ ಎನ್‌; ಸಿಂಗಾಪುರ

- ಶಾಂತಿ ತಂತ್ರಿ; ಮೇರಿಲ್ಯಾಂಡ್‌

- ಜಯಕುಮಾರ್‌ ಸಿ ಡಿ; ಕೆಂಟಕಿ

- ಪ್ರಕಾಶ್‌ ಕೆ ಶೆಟ್ಟಿ; ಮಂಗಳೂರು

- ಬಿಂದು; ಊರು?

- ಹಂಸವೇಣಿ; ಮೈಸೂರು

- ರಾಘವೇಂದ್ರ ಕೆ ಐತಾಳ್‌; ಮೈಸೂರು

- ವಾಣಿ ಅರವಿಂದ್‌; ಆಸ್ಟಿನ್‌, ಟೆಕ್ಸಸ್‌

ಆ) ಏಕೈಕ ಮತ ಗಳಿಸಿದ ಹೂಗಳು ಮತ್ತು ಅವುಗಳನ್ನು ಸೂಚಿಸಿದ ಓದುಗರ ವಿವರ:

ಸೂರ್ಯಕಾಂತಿ - ರಾಜೇಂದ್ರ; ಮುಂಬಯಿ
ಸುರಗಿ - ರವೀಂದ್ರ ಹೆಗಡೆ; ಬೆಂಗಳೂರು
ಮಂದಾರ - ಶ್ರೀನಿ ರಾವ್‌; ಚಿಕಾಗೊ
ನಂದಿಬಟ್ಟಲು - ಶ್ರೀಕಾಂತ ಬದರಿ; ಬೆಂಗಳೂರು
ಬಿಳಿ ದಾಸವಾಳ - ಶುಭಶ್ರೀ; ಡೆನ್ವರ್‌, ಕೊಲರಾಡೊ
ಔದುಂಬರ ಪುಷ್ಪ - ಡಾ। ಡಿ ಎಂ ಸಾಗರ್‌; ನೆದರ್‌ಲ್ಯಾಂಡ್ಸ್‌
ಮಾಲತಿ ಹೂವು - ಶಾಂತಾಮೂರ್ತಿ; ಸಿಯಾಟಲ್‌
ನಂದಿವರ್ಧನ - ಗೀತಾ ಮೂರ್ತಿ; ಟೊರಾಂಟೊ, ಕೆನಡಾ
ಪೊಪ್ಪಿ ಪುಷ್ಪ - ವಿದ್ಯಾ ಗದಗ್‌ಕರ್‌; ಡೇಟನ್‌, ಒಹಯಾ
ಬೆಟ್ಟ ತಾವರೆ - ಯಶವಂತ್‌ ಬಿ ಎಸ್‌; ಹೈದರಾಬಾದ್‌
ತುಂಬೆ ಹೂವು - ಸತ್ಯಪ್ರಕಾಶ್‌ ಕಾಗಿನೆಲೆ
ಮಾಂಗೊಲಿಯಾ ಹೂವು - ರೇಖಾ ಮೂಡಬಿದ್ರಿ; ಅಮೆರಿಕ
ತಂಗಟೆ ಹೂವು - ತಿಪ್ಪೇರುದ್ರ ಹೊಸಹಳ್ಳಿ; ಬೆಂಗಳೂರು
ಸೂಲಿ ಹೂವು - ಸ್ಮಿತಾ ಟಿ; ಬೆಂಗಳೂರು
ಎಕ್ಕದ ಹೂವು - ರಘುನಾಥ ಪಿ ಜಿ; ಬೆಂಗಳೂರು
ಶಿವಲಿಂಗ ಪುಷ್ಪ - ಉಷಾರಾಣಿ; ಹೈದರಾಬಾದ್‌
ಬ್ರಹ್ಮಕಮಲ - ಪ್ರಕಾಶ್‌ ವೆಂಕಟೇಶ್‌
ನಾಗಲಿಂಗ ಪುಷ್ಪ - ಪ್ರಕಾಶ್‌ ರಾಜಾರಾವ್‌, ನ್ಯೂಜೀಲೇಂಡ್‌
ಕರ್ಣಕುಂಡಲ - ಚಂದ್ರಶೇಖರ ಬಿ ಎಚ್‌; ಬೆಂಗಳೂರು
ಹೊಂದಾಳೆ - ರೇಖಾ ಆರ್‌; ಸಿಯಾಟಲ್‌
ಕನಕಾಂಬರ - ವನಿತಾ ಬೇಲೂರ್‌; ಕ್ಯಾಲಿಫೋರ್ನಿಯಾ
ಅಡಿಕೆ ಹೂವು (ಸಿಂಗಾರ) - ಮುರಲಿ ಚೆಂಬರ್ಪು; ಬೆಂಗಳೂರು

ಇ) ಸ್ಪರ್ಧೆಗೆ ಬಂದ ಇತರ ನಾಮಪತ್ರಗಳು

ಸಂಪಿಗೆ

- ರಾಘವೇಂದ್ರ ಬಿ ಎಚ್‌; ಬೆಂಗಳೂರು

- ವರದರಾಜು ಕೆ; ಬೆಂಗಳೂರು

- ಸ್ವರೂಪರಾಣಿ; ಬೆಂಗಳೂರು

ಕಲ್ಹಾರ (ರಾಜೀವ, ಕಮಲ, ತಾವರೆ)

- ಅನಂತಸ್ವಾಮಿ; ಮೇರಿಲ್ಯಾಂಡ್‌

- ಉಷಾ ಅಶ್ವಥ್‌; ಕೊಲಂಬಸ್‌, ಒಹಯಾ

- ಪ್ರಕಾಶ್‌ ದೇವೇಂದ್ರ; ಡಬ್ಲಿನ್‌, ಐರ್‌ಲ್ಯಾಂಡ್‌

ಗುಲಾಬಿ

- ಪುರುಶೋತ್ತಮ ಹೊಂಬಾಳೆ

- ಗಿರಿಜಾ ಮೇಘನಾಥ್‌; ನಾರ್ತ್‌ ಕೆರೊಲಿನಾ

ಜಾಜಿ

- ಮೀನಾ ರಾವ್‌, ಮೇರಿಲ್ಯಾಂಡ್‌

- ಅರುಣಾ ಜಿ ವಿ; ಊರು?

ಕಣಗಿಲೆ

- ವಸಂತ ಶಶಿ; ನ್ಯೂಜೆರ್ಸಿ

- ಮಾರುತೀಶ್‌ ಬಳ್ಳಾರಿ; ಬೆಂಗಳೂರು

ಪಾರಿಜಾತ

- ಗಜಾನನ ಡೋಂಗ್ರೆ; ಬೆಂಗಳೂರು

- ಪ್ರಶಾಂತ್‌ ಭಟ್‌; ಟೆಕ್ಸಸ್‌

ಈ) ನಾಮಪತ್ರ ಸಲ್ಲಿಕೆಯ ಜತೆಯಲ್ಲೇ ಬರೆದ ಕೆಲ ನುಡಿಮುತ್ತುಗಳು:

ಈವತ್ತಿನ ‘ನಮ್ಮೂರ ಮಂದಾರ ಹೂವೇ...’ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದನ್ನ ಓದಿ ನನ್ನ ಬಾಲ್ಯದ ನಮ್ಮಮ್ಮನ ಮನೆಯ ಹೂದೋಟದ ನೆನಪು ಮರುಕಳಿಸಿದೆ... ನನಗಂತೂ ಎಲ್ಲಾ ಹೂಗಳೂ ಇಷ್ಟ, ಮೈಸೂರಿನ ನಮ್ಮಮ್ಮನ ಮನೆಯಲ್ಲಿ ಈ ಎಲ್ಲಾ ಹೂಗಳ ಗಿಡಗಳೂ ಇತ್ತು ಅಂದರೆ...

ಜಾಜಿ, ಪಾರಿಜಾತ, ಸುಗಂಧರಾಜ, ಮಲ್ಲಿಗೆ (ಎಲ್ಲಾ ಸುತ್ತಿನದು 1, 3, 5, 7), ಸಂಪಿಗೆ, ಕೇದಗೆ, ಸ್ಫಟಿಕಾ (ಬಿಳಿ, ಸರಸ್ವತಿ ಬಣ್ಣದ್ದು), ಕನಕಾಂಬರ (ನೀಲ, ಕಿತ್ತಳೆ ಬಣದ್ದು), ಲಿಲ್ಲಿ (ಎಲ್ಲಾ ರಂಗಿನದು), ಕಣಗಿಲೆ (ಬಿಳಿ ಬಣ್ಣದ್ದು), ಬೊಗನ್‌ ವಿಲ್ಲಾ (ಸರಸ್ವತಿ ಬಣ್ಣದ್ದು), ದಾಸವಾಳ (ಬಿಳಿ, ಕೆಂಪು, ಕಿತ್ತಳೆ ಬಣ್ಣದ್ದು), ಗುಲಾಬಿ (ಅಂತೂ ಕೇಳಲೇ ಬೇಕಿಲ್ಲಾ - ವಿವಿಧ ಬಣ್ಣದ್ದು).., ಇತ್ಯಾದಿ

ಎಲ್ಲರೂ ಹೂವಿನ ಪರಿಮಳಕ್ಕೆ ಬಿದ್ದು ಆಯ್ಕೆ ಮಾಡಿದರೆ, ನಾನು ಹೂವು ಮನುಷ್ಯನಿಗೆ ಯಾವ ರೀತಿಯಲ್ಲಿ ಉಪಯೋಗಕ್ಕೆ ಬರಬಹುದು ಅನ್ನೊ ಒಂದು ದೃಷ್ಟಿಯಲ್ಲಿ ‘ಕಣಗಿಲೆ’ ಹೂವನ್ನ ಆಯ್ಕೆ ಮಾಡುತ್ತಿದ್ದೇನೆ. ಯಾಕೆಂದರೆ, ನಮ್ಮ ತಾಯಿಯವರು ‘ಕಣಗಿಲೆ ಕಣ್ಣಿಗೆ ತಂಪು’ ಎಂದು ಈ ಹೂವಿನಿಂದ ಕಣ್ಣು ಕಪ್ಪು ತಯಾರಿಸುತ್ತಿದ್ದುದು ನೆನಪಿಗೆ ಬರುತ್ತೆ...

- ವಸಂತಾ ಶಶಿ; ನ್ಯೂಜೆರ್ಸಿ

* * *

‘ಮಂಗಳೂರು ಮಲ್ಲಿಗೆ’ ನನಗೆ ಯಾಕೆ ಇಷ್ಟ ಎಂದರೆ ನಮ್ಮೂರಿನಲ್ಲಿ ರಾಜ ಮರ್ಯಾದೆಯನ್ನು ಪಡೆದಿರುವ ಹೂವು ಎಂದರೆ ಮಲ್ಲಿಗೆ. ಇಲ್ಲಿನ ಹೆಂಗಸರ ಮುಡಿಯಲ್ಲಿ ಮಲ್ಲಿಗೆಯಿದೆ ಎಂದಾದರೆ ಅದರ ಗತ್ತು ಗಾಂಭೀರ್ಯವೇ ಬೇರೆ. ಮದುವೆಯ ಸಭೆಯಲ್ಲಿ ಮದುವೆ ಮನೆಯವರು ಕೊಡುವ ಒಂದು ತುಂಡು ಮಲ್ಲಿಗೆಗಾಗಿ ಎಲ್ಲರೂ ಕಾಯುತ್ತಿರುತ್ತಾರೆ ಅದರ ವಿಷಯವಾಗಿ ಬೇಸರಗೊಳ್ಳುವುದೂ ಉಂಟು. ಮನೆಗೆ ಬಂದ ನೆಂಟರು ಒಂದು ಚೆಂಡು ಮಲ್ಲಿಗೆ ತಂದರೆ ಮನೆಯ ಹೆಂಗಸರಿಗೆ, ಹೆಣ್ಣು ಮಕ್ಕಳಿಗೆ ಖುಷಿಯೋ ಖುಷಿ. ನಾನು ಚಿಕ್ಕನಿಂದಲೂ ಮಲ್ಲಿಗೆಯ ಸೊಬಗನ್ನು ನನ್ನ ಅಮ್ಮನ ಮುಡಿಯಲ್ಲಿ ಅಕ್ಕನ ಮುಡಿಯಲ್ಲಿ ನೋಡಿದರಿಂದಲೋ ಏನೋ ನಾನು ಅದನ್ನು ತುಂಬಾ ಇಷ್ಟ ಪಟ್ಟಿದ್ದೇನೆ. ನಮ್ಮ ಪಕ್ಕದ ಮನೆಯಯವರು ಮಲ್ಲಿಗೆ ಕೃಷಿಯನ್ನು ಮಾಡುತ್ತಾರೆ ನಾವು ಚಿಕ್ಕವರಿದ್ದಾಗ ಅವರ ಮನೆಯಲ್ಲಿ ಮಲ್ಲಿಗೆ ಮೊಗ್ಗೆ ಕೊಯ್ದು ಆದ ನಂತರ ಅರಳಿದ ಮಲ್ಲಿಗೆಯನ್ನು ತರುತ್ತಿದ್ದೆವು ಈಗಲೂ ಅದು ನೆನಪಾಗುತ್ತಿದೆ.

ಹೂವಿನ ವಿಷಯ ಮಾತಾಡುವಾಗ ನನಗೆ ಇನ್ನೊಂದು ವಿಷಯ ನೆನಪಾಗುತ್ತದೆ. ಕ್ರೈಸ್ತ ಚರ್ಚಿನಲ್ಲಿ ಮೇರೀ ಜನ್ಮ ದಿನ ಅಥವಾ ಅವರ ತೆನೆ ಹಬ್ಬದ ಮುಂಚಿನ ವಾರದಲ್ಲಿ ಅವರ ಮಕ್ಕಳು ದಿನಾಲೂ ಒಂದು ತಟ್ಟೆಯಲ್ಲಿ ಹೂವುಗಳನ್ನು ಚರ್ಚಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಕಬ್ಬು ತರುತ್ತಾರೆ ಅವರ ತಟ್ಟೆಯಲ್ಲಿ ಕೆಲವೊಂದು ಹೂವುಗಳು ಕೆಲವೊಂದು ಆಕಾರದಲ್ಲಿ ಜೋಡಿಸಲ್ಪಟ್ಟಿರುತ್ತದೆ ಅದನ್ನು ನೋಡುವುದೇ ಚಂದ.

- ಪ್ರಕಾಶ್‌ ಶೆಟ್ಟಿ; ಉಳೆಪಾಡಿ

* * *

ನನಗೆ ಇಷ್ಟವಾದದ್ದು ಸೂಲಿ ಹೂವು. ಇದು ಶುಭ್ರ ಬಿಳಿ ಮತ್ತು ನಿಂಬೆಹಣ್ಣಿನ ಹಳದಿ ಬಣ್ಣದಲ್ಲಿ ಇರುತ್ತೆ. ಸುಮಧುರವಾದ ಪರಿಮಳ, ಕಣ್ಣಿಗೆ ಮುದ ನೀಡುವ ಬಣ್ಣ ಅದರ ವಿಶೇಷತೆ. ಇದನ್ನ ಹೆಚ್ಚಾಗಿ ಮಲೆನಾಡಲ್ಲಿ ಕಾಣಬಹುದು (ಅಥವಾ ನಾನು ನೋಡಿದ್ದು ಮಲೆನಾಡಲ್ಲಿ). ಬೆಂಗಳೂರಲ್ಲಿ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲೂ ನೋಡಿದ್ದೀನಿ. ಬೇರೆ ಹೂಗಳಂತೆ ಈ ಹೂವು ಮಾರಾಟಕ್ಕೆ ಇಟ್ಟಿದ್ದು ಇನ್ನೂ ಬೆಂಗಳೂರಲ್ಲಿ ನೋಡಿಲ್ಲ.

- ಸ್ಮಿತಾ; ಬೆಂಗಳೂರು

***

ಮಲ್ಲಿಗಿಷ್ಟವು ಬಹು ಇಷ್ಟವು ಮಲ್ಲಿಗೆ

ಅದರಲ್ಲು ವಿಶೇಷವು ಮೈಸೂರ ಮಲ್ಲಿಗೆ

ಅದ ಮುಡಿದು ಆಕೆ ಹೊರಟರೆ ಬೀದಿಗೆ

ಮೈಯ್ಯೆಲ್ಲ ಕಣ್ಣಾಯ್ತು ಪಡ್ಡೆ ಹುಡುಗರಿಗೆ

ತಲೆಹರಟೆ ಮಾಡ ಹೋದ ಗುಂಡನಿಗೆ

ಹಾಕಿದಳು ಆಕೆ ನಾಲ್ಕೇಟು ಅವನ ಕೆನ್ನೆಗೆ

- ವಾಣಿ ಅರವಿಂದ್‌; ಟೆಕ್ಸಸ್‌

* * *

The reason why I would elect Nagalinga pushpa is, it is a rare and exotic flower and more than that a doctor by that name Dr.Nagalinga Setty, an orthopedic in Bangalore was my boss. He treated my mother and gave "rebirth "to her. The name has a perpetually fragrant memory to me.

- Prakash Rajarao; New Zealand

* * *

The lotus is exotic, beautiful and quite rare , all the qualities i like! Its beauty is so great the limbs of every known deity compete with its perfection! To Hindus and Buddhists, it is an integral part of their philosophy and thought. It grows and blooms in muddy waters but itself remains pure and dry. It is the very epitome of great purity and richness of beauty. For centuries all over the world, all cultures have coveted this flower and depicted it in their art and architecture! Thats why I love the lotus the most! I enjoyed the Mandaara pushpa in my childhood too in Mysore and we used it often for puja.

- Usha Aswath; Columbus, Ohio

* * *

Maalathi hoovu, why I like most of all the flowers, is because its pure white color and its mild sweet intoxicating fragrance. We had this climbing shrub very near to our room of our house at Mysore. I would pluck these flowers for pooja everyday early morning. I think God also loved very much this flower of his creation. Today I missed my favorite flower to offer Sankashta Hara Ganapathy.

- Shantha Murthy; Seattle, Washington

* * *

My favorite flower is "NANDIVARDANA", because of its fragrance, its available in all the seasons, it is white in color which makes it perfect for pooja (because white is considered "symbolically" - as pure), and it also has a medicinal property. Its so cool!! Isnt it?!

- Geetha Murthy; Toranto, Canada

* * *

My favorite flower is "Tumbe Hoovu". I like it because, as a kid, when I get up every morning, the first thing I used to do, waiting for my brother to give me entry to bath room, was to sip the "honey" out of this small white flower....Have you done it ever ? It is sooooo sweet..

- Sathya Prakash Kaginele; Bangalore

* * *

I like this flower "tamgaTe hUvu". This looks very yellowish color and its size is small. This is very much a traditional flower in our village (In chitradurga district). This flowers season is October to December. During Deepavali, continuously for 3 days this flower is spread in every house of our village at morning. It gives very much brightness rays of gold inside home and everyone feels divine power. Also this flower is used in worship. Even as I am now leading an urban metro life, my mind goes to my village when I remember tamgaTe hoovu.

- Thipperudrappa; Bangalore

* * * *

ಇನ್ನೊಮ್ಮೆ ಎಲ್ಲರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ತಿಳಿಸುತ್ತ ‘ಪ್ರಕೃತಿಯ ಪ್ರೇಮಿಸುವ’ ನಿಮ್ಮ ವಿಶೇಷ ಒಲವು ಹೀಗೇ ಜೀವಂತವಿರಲಿ ಹಾಗೂ ಎರಡು ಸಾವಿರದ ಐದು - ಸರ್ವರಿಗೂ ಸುಖಶಾಂತಿದಾಯಕವಾಗಿರಲಿ ಎಂಬ ಹಾರೈಕೆಯಾಂದಿಗೆ ಫಲಿತಾಂಶ ಪ್ರಕಟಣೆ ಇಲ್ಲಿಗೆ ಮುಗಿಯುತ್ತದೆ.

ನಮ್ಮೂರ ಮಂದಾರ ಹೂವೆ......

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more