• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲಸಿನ ಸವಿಯ ಹಲವು ಬಗೆಯಲಿ ನೆನೆದವರು...

By Staff
|

ಹಲಸಿನ ಬಗೆಗಿನ ವಿಚಿತ್ರಾನ್ನ, ಹಣ್ಣು ಸವಿದಷ್ಟೇ ಸೊಗಸಾಗಿತ್ತು. ವಿಚಿತ್ರಾನ್ನದ ಚೌಕಟ್ಟುಗಳನ್ನು ದಾಟಿದ ಈ ಬರಹ, ಒಳ್ಳೆಯ ಪ್ರಬಂಧವೊಂದನ್ನು ಓದಿದ ಖುಷಿ ನೀಡಿತು. ಆ ಖುಷಿಯಲ್ಲೇ ನಿಮಗೆ ಪ್ರತಿಕ್ರಿಯೆ ಬರೆಯಲು ಕೂತಿದ್ದೇನೆ.

ಕರಾವಳಿ, ಮಲೆನಾಡಿನ ಮಂದಿಗೆ ಹಲಸಿನ ಕುರಿತು ಆಪ್ಯಾಯತೆ ಇರಬೇಕಾದದ್ದೆ. ಆದರೆ ಬಯಲು ಸೀಮೆಯ ನನ್ನಂಥವರಿಗೆ ಹಲಸು ಕೂಡ ಅಪರೂಪದ ಹಣ್ಣೇ. ಆ ಕಾರಣದಿಂದಲೇ, ಹಲಸನ್ನು ರುಚಿಗಾಗಿ ತಿನ್ನುವುದೇ ವಿನಃ, ಹೊಟ್ಟೆ ತುಂಬಿಸಿಕೊಳ್ಳಲಿಕ್ಕಲ್ಲ. ಬೆಂಗಳೂರಿನಲ್ಲಂತೂ ಹಲಸು ದುಬಾರಿ. ಬೆಲೆ ತೆತ್ತರೂ ಹಣ್ಣು ಸಿಹಿಯಾಗಿರುವ ಕುರಿತು ಗ್ಯಾರಂಟಿಯಿಲ್ಲ!

ಹಲಸಿನ ಹಣ್ಣು ಕರಡಿಗಳಿಗೆ ತುಂಬಾ ಪ್ರಿಯವಂತೆ. ಅಜ್ಜಿ ಹಾಗೂ ಜಾನಪದ ಕಥೆಗಳ ಪ್ರಕಾರ- ಹಲಸು ಹಾಗೂ ಜೇನುತುಪ್ಪದ ಮಿಶ್ರಣ ಕರಡಿಗೆ ತುಂಬಾ ಇಷ್ಟವಾದ ಆಹಾರ. ಇನ್ನು, ಮಾವು ರಾಜ- ಹಲಸು ಚಕ್ರವರ್ತಿ ಎನ್ನುವ ನಿಮ್ಮ ಅಭಿಪ್ರಾಯಕ್ಕೆ ನನ್ನ ತಕರಾರಿದೆ. ಕಾರಣಗಳನ್ನು ಮತ್ತೆ ಯಾವಾಗಲಾದರೂ ಬರೆದೇನು?

- ರಘುನಾಥ್‌; ಬೆಂಗಳೂರು

* * *

ಇಂದು ಅಶ್ಚರ್ಯಕರವೆಂಬಂತೆ ನಮ್ಮ ಆಫೀಸಲ್ಲಿ ಯಾರೋ ಹಲಸಿನ ಹಣ್ಣಿನ ಅರ್ಧ ಭಾಗವನ್ನು ತಂದುಕೊಟ್ಟಿದ್ದರು. ಆ ಹಣ್ಣನ್ನು ಬಿಡಿಸಿ ಎಲ್ಲರಿಗೂ ಹಂಚಿ ಹಣ್ಣನ್ನು ಸವಿಯುತ್ತ ಇಂಟರ್‌ನೆಟ್‌ ಓಪನ್‌ ಮಾಡಿನೋಡಿದರೆ ನಿಮ್ಮ ವಿಚಿತ್ರಾನ್ನದಲ್ಲಿ ಅದೇ ಟಾಪಿಕ್‌! ತುಂಬ ಖುಶಿ ಆಯ್ತು. ಆದರೆ ನಿಮಗೆ ಅಲ್ಲಿ ಹಲಸಿನಹಣ್ಣು ಸಿಗುವುದು ಕಷ್ಟ ಎಂದು ತಿಳಿದು ಬೇಸರ ಆಯ್ತು.

ನಿಮ್ಮ ಲೇಖನ ತುಂಬ ಚೆನ್ನಾಗಿ ಮೂಡಿಬಂದಿದೆ. ಹಲಸಿನಹಣ್ಣಿನ ವಿವಿಧ ಮುಖಗಳ ಪರಿಚಯ ಆಯಿತು. ಹಲಸಿನ ಹಣ್ಣನ್ನು ತಿನ್ನುತ್ತ ಓದಿದ್ದರಿಂದಲೊ ಏನೊ ನಿಮ್ಮ ಲೇಖನದ ಎಫೆಕ್ಟ್‌ ಜಾಸ್ತಿ ಆಯ್ತು.

ನಿಮ್ಮ ಬರವಣಿಗೆಗಳು ಮನರಂಜನೆಯ ಜತೆಗೆ ಮಾಹಿತಿಯನ್ನೂ ನೀಡುತ್ತ ಬಂದಿವೆ. ನಿಮ್ಮ ಅಂಕಣಕ್ಕೆ ನನ್ನ ಶುಭ ಹಾರೈಕೆಗಳು.

- ಶುಭಶ್ರೀ; ಬೆಂಗಳೂರು

* * *

ಹಳೆ ನೆನಪುಗಳನ್ನು ಕೆದಕುವ ಹಾಗೆ ಮಾಡುವ ವಿಷಯದ ಆಯ್ಕೆಯಲ್ಲಿ ನಿಮ್ಮನ್ನು ಮೀರಿಸೊರಿಲ್ಲ ಬಿಡಿ. ಅದೇ ವಿಚಿತ್ರಾನ್ನದ ಗುಟ್ಟಿರಬಹುದೆ ಅಂತ ನನ್ನ ಗುಮಾನಿ.

ಈ ಸರ್ತಿಯ ಹಲಸು ಪುರಾಣವು ಅದರ ತೊಳೆಯಂತೆ ಮಧುರವಾಗಿತ್ತು. ನನಗೆ ಇಷ್ಟ ಆಗೊ ಕೆಲವೇ ಹಣ್ಣುಗಳಲ್ಲಿ ಹಲಸಿಗೆ ಪ್ರಥಮ ಸ್ಥಾನ. ಯಾರು ಏನೇ ಹೇಳಲಿ, ಮಾವು ಹಣ್ಣಿನ ರಾಜನೇ ಆಗಿರಬಹುದು, ನಾನು ಮಾತ್ರ ಹಲಸಿನ ತೊಳೆ ಇದ್ರೆ ಬೇರೆ ಮುಟ್ಟೊಲ್ಲ :-) ಹಾಂ, ಮತ್ತೆ ನಿಮ್ಮ ಲೇಖನದಲ್ಲಿ, ಹಲಸಿನ ಎಲೆಯಲ್ಲಿ ಮಾಡೊ ‘ಕೊಟ್ಟೆ ಕಡುಬು’ ಬಗ್ಗೆ ಪ್ರಸ್ತಾಪಿಸಿಲ್ಲದಿರುವುದು ಆಶ್ಚರ್ಯವಾಯ್ತು. ಮಿಸ್‌ ಆಯ್ತಾ ಹೇಗೆ? ನಾನು ಅದ್ರ ರುಚಿ ನನ್ನ ಒಬ್ಬ ಕೊಂಕಣಿ ಫ್ರೆಂಡ್‌ ಮನೇಲಿ ನೋಡಿದ್ದೆ.

- ಅನುರಾಧಾ ಆರ್‌ ಕೆ; ಬೆಂಗಳೂರು

* * *

ಬಯಲುಸೀಮೆಯ ಸಖರಾಯ ಪಟ್ಟಣದ ಸೀಮೆಯ ಹಲಸಿನ ಹಣ್ಣು ತಿನ್ನಲು ಬಹಳ ಸವಿಯಂತೆ. ನಮ್ಮ ಮಲೆನಾಡಿನ ಹಲಸು ಬಹಳ ಶ್ರೇಷ್ಠ ! ನಮ್ಮ ಪ್ರದೇಶವೇ ಅದರ ಹುಟ್ಟೂರು ಎಂಬ ಹೆಗ್ಗಳಿಕೆ ಬೇರೆ ಇದೆ. ಇನ್ನೊಂದು ಹೆಗ್ಗಳಿಕೆ ಎಂದರೆ ಅದನ್ನು ನಾವು ವಿಕ್ರಯಿಸುವುದಿಲ್ಲ. ಗುಜರಾತಿನ ಹಳ್ಳಿಗಳಲ್ಲಿ ಈಗಲೂ ಕೆಲವೆಡೆ ಹಾಲನ್ನು ವಿಕ್ರಯಿಸುವುದಿಲ್ಲವಂತೆ. ಹಾಲನ್ನು ಕೃಷ್ಣ ಕನ್ಹಯ್ಯನ ಹೆಸರಲ್ಲಿ ದಾನಮಾಡುತ್ತಾರಂತೆ! ನಮ್ಮ ಮಲೆನಾಡಿನಲ್ಲಿ ನಾವು ನಿತ್ಯ ಸ್ಮರಿಸುವ ‘ಹನುಮಂತನ ಹೆಸರು’ ನೆನಪಿಸಿಕೊಂಡು ಹಲಸಿನ ಹಣ್ಣುಗಳನ್ನು ನಾವು ವಿಕ್ರಯಿಸುವುದಿಲ್ಲ. ಹಲಸಿನ ಹಣ್ಣಿನ ಕಡೆ ನಾವು ವ್ಯಾಪಾರೀ ದೃಷ್ಟಿಯನ್ನು ಕೂಡಾ ಬೀರುವುದಿಲ್ಲ. ಕಾರಣ ಅದಕ್ಕೆ ನಮ್ಮಲ್ಲಿ ಬೆಲೆಯೇ ಇಲ್ಲ!

ಮಳೆಗಾಲದಲ್ಲಿ ಹಲಸಿನಹಣ್ಣುಗಳನ್ನು ಕೊಚ್ಚಿ ಬೇಯಿಸಿ ದನಕರುಗಳಿಗೆ ಆಹಾರವಾಗಿ ಹಾಕುತ್ತೇವೆ. ಆರಿಸಿ ಒಳ್ಳೆಯ ಹಣ್ಣುಗಳನ್ನು ಅಪರೂಪದಲ್ಲಿ ತಿನ್ನುತ್ತೇವೆ. ನೀವು ಹೇಳಿದ ಎಲ್ಲಾ ರೀತಿಯಲ್ಲೂ ಅದನ್ನು ಉಪಯೋಗಿಸುತ್ತೇವೆ. ನಾವು ಬಳಸಿ ಉಳಿದುದು, ನಮ್ಮಲ್ಲಿ ಕೆಲಸ ಮಾಡುವ ಆಳುಗಳ ಪಾಲು. ಇದು ಅವರಿಗೆ ಮಳೆಗಾಲದ ತರಕಾರಿ/ಹಣ್ಣು/ಆಹಾರ! ಕೆಲವುಸಲ ಅದನ್ನು ಮುಖ್ಯ ಆಹಾರವೇ ಎನ್ನಬಹುದು. ಆಳುಗಳು ಕೊಯ್ದು ಉಳಿದ ಹಣ್ಣುಗಳು ಮಂಗಗಳಿಗೆ ಮೀಸಲು. ಅವುಗಳಿಗೂ ಮಳೆಗಾಲದಲ್ಲಿ ಆಹಾರ ಬೇಕು ತಾನೇ?

ಹಲಸಿನ ಬೀಜ ಮೆಚ್ಚಿ ತಿನ್ನುವವರಿಗೆ ‘ಪ್ರೋಟೀನ್‌ ಯುಕ್ತ’ ಸತ್ವಾಹಾರ. ಹಲಸಿನ ಎಲೆಗಳು ನಮ್ಮ ತಳಿರು ತೋರಣಗಳಿಗೆ ಬೇಕೇಬೇಕು. ಹಲಸಿನ ಎಲೆಯ ದೊನ್ನೆ ಮಾಡಿ ಅದರೊಳಗೆ ಇಡ್ಲಿ ಹಿಟ್ಟು ಹುಯಿದು ಆವಿಯಲ್ಲಿ ಬೇಯಿಸಿ, ಮಲೆನಾಡು ಮತ್ತು ಕರಾವಳಿ ನಾಡಿನಲ್ಲಿ ವಿಶಿಷ್ಟವಾದ ‘ ಹಲಸಿನ ಕೊಟ್ಟೆ ಕಡುಬು’ ಮಾಡಿ ನೆಂಟರಿಷ್ಟರನ್ನು ಉಪಚರಿಸುತ್ತೇವೆ. ಹಲಸಿನ ಹಣ್ಣನ್ನು ಅಕ್ಕಿ ಮತ್ತು ಬೆಲ್ಲ ಸೇರಿಸಿ ಕಡೆದು ಬಾಳೆಯ ಎಲೆಯ ತೊಟ್ಟೆಯಲ್ಲಿ ಅಥವಾ ಸಾಗುವಾನಿಯ ಎಲೆಯ ತೊಟ್ಟೆ ಯಲ್ಲಿ ತುಂಬಿ ಹಬೆಯಲ್ಲಿ ಬೇಯಿಸಿ ಘಮ ಘಮಿಸುವ ‘ ಹಲಸಿನ ಹಣ್ಣಿನ ಗಟ್ಟಿ ’ ತಯಾರಿಸಿ ಮೆಲ್ಲುತ್ತೇವೆ. ಇದರ ಜತೆಗೆ ಮಲೆನಾಡಿನ ಜೇನಿದ್ದರೆ ಅದರ ರುಚಿ ವರ್ಣಿಸಲಸದಳ.

ಹಲಸಿನ ಕಟ್ಟಿಗೆಯು ಎಲ್ಲಾ ಹೋಮ ಹವನಗಳಿಗೆ ಬೇಕೇ ಬೇಕು. ಹಲಸಿನ ಹಣ್ಣಿನಲ್ಲಿ ‘ಬಿಳುವ’ ಮತ್ತು ಬಕ್ಕೆ ಎಂಬ ಎರಡು ಮುಖ್ಯ ಪ್ರಭೇದಗಳಿವೆ. ಬಿಳುವ ಹಣ್ಣು ಗಂಜಿ ಗಂಜಿಯಾಗಿ ತುಂಬಾ ಮೆದುವಾಗಿರುತ್ತವೆ. ಬಕ್ಕೆ ಹಣ್ಣು ಗಟ್ಟಿ ಗಟ್ಟಿಯಾಗಿದ್ದು ರಸಭರಿತವಾಗಿ ತಿನ್ನಲು ಯೋಗ್ಯ ಎನ್ನಿಸಿಕೊಂಡಿವೆ. ಬಕ್ಕೆ ಹಣ್ಣಿನಲ್ಲಿಯೂ ಬಂಗಾರದ ಬಣ್ಣದ ‘ಬಂಗಾರ ಬಕ್ಕೆ’ ಸರ್ವಶ್ರೇಷ್ಟ. ಬಕ್ಕೆ ಹಲಸಿನಲ್ಲಿ ‘ರುದ್ರಾಕ್ಷಿ ಹಲಸು’ ಎಂಬ ಒಂದು ಅಪರೂಪದ ಪ್ರಭೇದ ಇದೆ. ಆ ಹಣ್ಣುಗಳು ಗಾತ್ರದಲ್ಲಿ ಬಹಳ ಸಣ್ಣವು. ಸಾಮಾನ್ಯವಾಗಿ ಸಿಪ್ಪೆ ತೆಗೆದ ತೆಂಗಿನಕಾಯಿಯ ಗಾತ್ರದ ಇವು ರುಚಿಯಲ್ಲಿ ಯಾವ ಹಲಸಿಗೂ ಕಡಿಮೆ ಇಲ್ಲ.

ಹಲಸಿನ ಬೀಜದಿಂದ ಹಣ್ಣುಗಳನ್ನು ಬೆಳೆದರೆ ಅವು ಹೆಚ್ಚಾಗಿ ತಾಯಿಗಿಡವನ್ನು ಹೋಲುವುದಿಲ್ಲ. ಈ ಕಾರಣ ಹಲಸಿನ ತಳಿ ಸಂಗ್ರಹಣೆ ಅತ್ಯಂತ ಕಷ್ಟದ ಕೆಲಸವಾಗಿತ್ತು, ಈ ದಿನಗಳಲ್ಲಿ ಹಲಸಿನ ಗಿಡಗಳನ್ನು ‘ಕಸಿ’ ತಂತ್ರಜ್ಞಾನದ ಸಹಾಯದಿಂದ ಬೆಳಸಲು ಸಾಧ್ಯವಾಗಿದೆ. ಮಯಣದ ಅಂಶ ಕಡಿಮೆ ಇರುವ ‘ ಗಂ ಲೆಸ್‌ ಜಾಕ್‌’ ಎಂಬ ಒಂದು ತಳಿ ಈಗೀಗ ಹೆಸರುವಾಸಿ ಆಗುತ್ತಿವೆ. ಕೆಲವು ಹಲಸಿನ ಹಣ್ಣುಗಳು ಬಹು ದೊಡ್ಡ ಗಾತ್ರಕ್ಕೂ ಬೆಳೆಯುತ್ತವೆ. ಒಂದು ಆಳಿಗೆ ಹೊರಲು ಕಷ್ಟವಾಗುವ ಮಟ್ಟಿಗೂ ಬೆಳೆಯುವ ಹಣ್ಣುಗಳಿದ್ದಾವೆ.

ಹಲಸಿನ ಹಣ್ಣು ಅಂದರೆ ಹೆಚ್ಚಿನವರಿಗೆ ಇಷ್ಟ. ಹಲಸಿನ ಹಣ್ಣಿನ ವಾಸನೆ ಕೂಡಾ ಅಗದವರು ಬಹಳ ಮಂದಿ ಇದ್ದಾರೆ. ಐರೋಪ್ಯ ದೇಶಗಳಲ್ಲಿ ನಮ್ಮ ಹಲಸಿನ ಪರಿಮಳಕ್ಕೆ ಹೀಕರಿಸಿ ವಾಂತಿ ಮಾಡಿಕೊಳ್ಳುವ ಜನರು ಕೂಡಾ ಇದ್ದಾರೆ. ಈ ಕಾರಣದಿಂದಾಗಿ ಯೂರೋಪ್‌ ಮತ್ತು ಸಂಯುಕ್ತ ಸಂಸ್ಥಾನಗಳಲ್ಲಿ ಹಲಸು ಜನಪ್ರಿಯವಾಗಲು ಅಡ್ಡಿಯುಂಟಾಗಿರಬಹುದು ಎಂಬ ವಿಚಾರ ಸರಣಿಯೂ ಇದೆ.

ಹಲವಾರು ವರುಷಗಳು ಬೆಳೆದ ಮರ ಉತ್ತಮ ಮೋಪಾಗುತ್ತದೆ. ಒಳ್ಳೆಯ ಸೊಗಸಾದ ಹಳದಿ ಬಣ್ಣವಿರುವ ಉತ್ತಮ ಮೋಪಾಗುತ್ತದೆ. ಪೀಠೋಪಕರಣಗಳಿಗೆ ಉತ್ತಮ ಮರ ಇದು. ಬಣ್ಣ ಹಾಕದೇ ಬರೇ ‘ ಪಾಲಿಶ್‌ ’ ಹಾಕಿದರೆ ಸಾಕು.

ನಾನೊಬ್ಬ ವೃಕ್ಷ ಪ್ರೇಮಿ - ನಾನು ಆ ಹನುಮಂತನ ಶಿಷ್ಯ. ಕಳೆದ ಮೂವತ್ತು ವರ್ಷಗಳಿಂದ ಕಾಫಿಯ ತೋಟ ಮಾಡುತ್ತಿದ್ದರೂ. ಇದುವರೆಗೆ ನಾನು ಒಂದೇ ಒಂದು ಮರ ಕಡಿದಿಲ್ಲ. ನನ್ನ ಪ್ರೀತಿಯ ಹಲಸಿನ ಮರವನ್ನೆಂತು ಕಡಿದೇನು? ಒಳ್ಳೇ ಹಲಸಿನ ಹಣ್ಣಿನ ಮರಗಳು ನನಗೆ ಗುರುತು. ಆಳುಗಳಿಗಿಂತ ಮೊದಲೇ ನಾನು ಹಣ್ಣನ್ನು ಕೆಡವಿಸಿ ಮನೆಗೆ ತರಿಸುತ್ತೇನೆ. ನೀವು ಹಲಸಿನ ಹಣ್ಣಿನ ಸೀಜನ್‌ನಲ್ಲಿ ನಮ್ಮ ತೋಟಕ್ಕೆ ಬಂದರೆ, ಈ ಸೆಲೆಕ್ಟ್‌ ಹಣ್ಣುಗಳಲ್ಲಿ ದೊಡ್ಡದನ್ನು ಹುಡುಕಿ ತಮಗೆ ಬಹುಮಾನ ಕೊಡುವೆ!

ಇಂತೀ ಇಂದಿನ ಹಲಸಿನ ಪುರಾಣಂ ಸಂಪೂರ್ಣಂ.

- ಎಸ್‌. ಮಧುಸೂದನ ಪೆಜತ್ತಾಯ; ಬಾಳೆಹೊಳೆ (ಚಿಕ್ಕಮಗಳೂರು ಜಿಲ್ಲೆ)

* * *

ವಿಚಿತ್ರಾನ್ನದಲ್ಲಿ ‘ಹಲಸು’ ಬಹಳ ಸವಿಯಾಗಿತ್ತು. ಹಪ್ಪಳ, ಚಿಪ್ಸ್‌, ಪಾಯಸಗಳ ಹಲಸಿನ ಅಡುಗೆ ಬಾಯಲ್ಲಿ ನೀರೂರಿಸಿತು. ಸಿಂಗಾಪುರದಲ್ಲಿ ಕ್ಯಾನ್‌ಡ್‌ ಹಲಸಿನ ಮೊರೆ ಹೋಗಬೇಕಿಲ್ಲ. ಕೇಸರಿ ಬಣ್ಣದ ಹಲಸಿನ ತೊಳೆ ದುಬಾರಿಯಾದರೂ ಎಲ್ಲಾ ಕಾಲದಲ್ಲೂ ಸಿಗುತ್ತದೆ. ಎಂಟು ತೊಳೆಗಳಿಗೆ ಕೇವಲ ಐದು ಸಿಂಗಾಪುರ್‌ ಡಾಲರ್‌ಗಳು (125 ರೂ).

- ವಾಣಿ ರಾಮದಾಸ್‌; ಸಿಂಗಾಪುರ

* * *

ವಂಡರ್‌ಫುಲ್‌ ಆಗಿದೆ ಲೇಖನ. ಆದರೆ ನಿಮಗೆ ಗೊತ್ತೇ ನನಗೆ ಹಲಸು/ಹಲಸಿನ ಪದಾರ್ಥಗಳು ಕಂಡರೆ ‘ಒಂಥರಾ...’ ಆಗ್ತದೆ. ಯಾಕೆ ಗೊತ್ತಾ, ಮೊದಲೆಲ್ಲ ನನಗೆ ಹಲಸಿನಹಣ್ಣು ಅಂದ್ರೆ ಪಂಚಪ್ರಾಣ. ಆದರೆ ಒಂದು ಸಲ ಏನಾಯ್ತು ಅಂದ್ರೆ ತಾತನ ಮನೆಯಲ್ಲಿ (ದಾವಣಗೆರೆ) 2 ಹಲಸು ತಂದಿದ್ರು. ಎಲ್ಲರೂ ತಿಂದಿದ್ದೇ ತಿಂದಿದ್ದು. ಹುಡುಗರು ದೊಡ್ಡವರು ಎಲ್ಲ. ಅಮೇಲೆ ನಾವು ಅವತ್ತೇ ತುಮಕೂರಿಗೆ, ಫ್ಯಾಮಿಲಿ ಫಂಕ್ಷನ್‌ ಒಂದನ್ನು ಅಟೆಂಡ್‌ ಮಾಡ್ಲಿಕ್ಕೆ ಹೋಗೋವ್ರಿದ್ದೆವು. ಸರಿ, ಎಲ್ಲರೂ ಹೊರಟೆವು. ಅವತ್ತು ಏನು ಕಥೆನೊ ಗೊತ್ತಿಲ್ಲ ಎಲ್ಲ ಬಸ್‌ ಫುಲ್‌, ಸಿಕ್ಕಾಪಟ್ಟೆ ರಷ್‌. ಸರಿ ಒಂದು ವ್ಯಾನ್‌, ತುಮ್ಕೂರ್‌ ತುಮ್ಕೂರ್‌ ಅಂತಾ ಕೂಗ್ತಾ ಇದ್ರು... ತಾತ ಅದ್ರಲ್ಲಿ ಹೊರಟುಹೋಗೋಣ ಇಲ್ಲಾಂದ್ರೆ ಲೇಟ್‌ ಆಗುತ್ತೆ ಬಸ್‌ಗೆ ಕಾಯ್ತಾ ಇದ್ರೆ ಅಂದ್ರು. ಎಲ್ಲರೂ ಆ ವ್ಯಾನ್‌ನಲ್ಲಿ ತುರುಕಲ್ಪಟ್ಟೆವು. ಸರಿ ನಾ, ವ್ಯಾನ್‌ ಹೊರಟಿತು. ಅರ್ಧ ದಾರಿ. ನನ್ನ ಕಸಿನ್‌ ನನ್ನೆದುರಿಗೆ ಕೂತಿದ್ದವನು... ಅದೇನಾಯ್ತೋ ಗೊತ್ತಿಲ್ಲಾ, ಕ್ರೌಡೆಡ್‌ ಆಗಿದ್ದ ವ್ಯಾನ್‌ ಕಾರಣನೊ, ಏನೊ ಗೊತ್ತಿಲ್ಲ.... ತಿಂದಿದ್ದ ಹಲಸು ಇತ್ಯಾದಿಯೆಲ್ಲ ನನ್ನ ಮೇಲೆ ವಾಂತಿಮಾಡಿಬಿಟ್ಟ :-(

ಅವನೆದುರಿಗೇ ಕುಳಿತಿದ್ದವಳು ನಾನು. ಜಸ್ಟ್‌ ಇಮ್ಯಾಜಿನ್‌ ಮಾಡಿ; ಒಳ್ಳೆ ಬಟ್ಟೆ ಹಾಕಿಕೊಂಡಿದ್ದೆ. (ತುಮಕೂರಿಗೆ ನಾವು ಫಂಕ್ಷನ್‌ಗೆ ಹೊರಟವರು ಅಂದೆನಲ್ಲಾ) ಡ್ರೆಸ್‌ ಹೋಗಲಿ, ಆ ವಾಂತಿಯ ದೃಶ್ಯ... ಓಹ್‌ ಗುಡ್‌ನೆಸ್‌... ಅರ್ಧಪ್ರಯಾಣವಷ್ಟೆ ಆಗಿದ್ದದ್ದು, ವ್ಯಾನ್‌ ನಿಲ್ಲಿಸಿ ಇದ್ದ ಅಲ್ಪಸ್ವಲ್ಪ ನೀರಿನಲ್ಲೇ ತೊಳೆದುಕೊಂಡೆನಾದ್ರೂ ನಿಜಕ್ಕೂ ನಮ್ಮ ಸ್ಥಿತಿ ಹಾರ್ರಿಬಲ್‌! ಅವತ್ತಿಂದ ಹಲಸು ಅಂದಾಕ್ಷಣ ವಾಕರಿಕೆ ಮರುಕಳಿಸುತ್ತದೆ. ವರ್ಷಗಳಾಗಿ ಹೋಗಿವೆ ಆ ಇನ್ಸಿಡೆಂಟ್‌ ಆಗಿ. ಆದರೂ ಆ ಕೆಟ್ಟನೆನಪು ಕಾಡುತ್ತೆ.

ಅಮ್ಮ ಯಾವಾಗಲಾದ್ರೂ ಹಲಸಿನ ದೋಸೆ ಮಾಡಿದಾಗ ಒಂಚೂರು ಅಪರೂಪಕ್ಕೆ ತಿಂತೀನಿ. ಬಟ್‌ ಅದರ್‌ವೈಸ್‌ ಹಲಸು ಅಂದರೇ ‘ಎ ಬಿಗ್‌ ನೋ’ ನನಗೆ! ಆದರೆ ಒಂದು ಮಾತು... ಕೆಂಡದಲ್ಲಿ ಸುಟ್ಟ ಆ ಹಲಸುಬೀಜ... ಆಹಾ ಅದನ್ನು ಸಕತ್ತಾಗಿ ಇಷ್ಟ ಪಡ್ತೇನೆ!

- ಶ್ರಾವಣಿ; ಓಹಾಯೋ, ಅಮೆರಿಕ

* * *

ಹಲಸಿನ ಹಣ್ಣಿನ ಲೇಖನದಿಂದ ಹೊಟ್ಟೆಭರ್ತಿಯಾಯ್ತು! ಹಸಿದಾಗ ಹಲಸು ಉಂಡಮೇಲೆ ಮಾವು. ಉಂಡಮೇಲೆ ಹಲಸು ಅಜೀರ್ಣ, ಹಸಿದಾಗ ಮಾವು ಹೊಟ್ಟೆ ಕೆಡಿಸು. ಹೀಗೆಂದು ನನ್ನ ಅಜ್ಜಿ ಹೇಳುತ್ತಾರೆ. ಹೊಟ್ಟಿ ತುಂಬ ಉಂಡ್‌ ಮ್ಯಾಲೆ ಆಮ್ಯಾಲೆ ಹಲಸಿನ ಹಣ್ಣನ್ನೇನಾದರು ತಿಂದೆಪಾ, ಇನ್ನೊಮ್ಮೆ ಹಲಸಿನ ತಂಟಿಗೆ ಹೋಗಲ್ಲ ಹಂಗೆ ಅಜೀರ್ಣ್‌ ಆಗತ್ತೈತಿ. ಹಸ್ಕೆಂಡಾಗ ಮಾವಿನ ಹಣ್ಣನ್ನೇನಾರ ತಿಂದೆಪಾ ತಗ ಹೊಟ್ಟಿ ಹೀಂಗ್‌ ಝಾಡಿಸ್ತೈತಿ, ಚರಿಗಿ ಹಿಡ್ಕ್‌ಂಡು ಓಡಾದೆಯ. ಅಜೀರ್ಣ್‌, ‘ಚರಿಗಿ’(ತಂಬಿಗೆ) ತಂಟಿನೆ ಬ್ಯಾಡ ಅ0ತ ಗಾದಿ ಮಾತು ಇದ್ದಂಗೆ ತಿಂದರಾತು. ಎನಂತೀರಾ?

ನಿಮ್ಮ ಅಂಕಣ ಚೆನ್ನಾಗಿ ಬರುತ್ತಿದೆ, ಇದೇ ರೀತಿ ಮುಂದುವರೆಯಲಿ.

- ಅನ್ಮೋಲ್‌ ರಾಜ್‌; ಸ್ಯಾನ್‌ಡಿಯಾಗೊ, ಕ್ಯಾಲಿಫೋರ್ನಿಯಾ

* * *

ಒಳ್ಳೆಯ ಲೇಖನ. ಹಲಸಿನ ಮೂಲ ನಮ್ಮ ಮಲೆನಾಡು ಎಂಬ ವಿಚಾರ ನನಗೆ ಗೊತ್ತೇ ಇರಲಿಲ್ಲ!

- ರಾಮಣ್ಣ ದತ್ತಾತ್ರಿ; ಕ್ಯಾಲಿಫೋರ್ನಿಯಾ

* * *

ಕೆಲಸದ ‘ಬಿಸಿ’ಯ ಮಧ್ಯೆಯೂ ಹಲಸಿನ ಹಣ್ಣಿನ ಮಟ್ಟಿಗೆ ಹಸಿವೆ ಇದ್ದದ್ದರಿಂದ ನಿಮ್ಮ ವಿಚಿತ್ರಾನ್ನ ಓದಿಯೇಬಿಟ್ಟೆ.

ಲೇಖನದಲ್ಲಿ ‘ತುಳುವ’ ಟೈಪಿನ ಹಲಸಿನಹಣ್ಣಿನ ಸಮಾಚಾರವೇ ಇಲ್ಲ! ಇದು ‘ಬರಿಕ್ಕೆ’ಗಿಂಥಲೂ ಬಹಳ ಸಿಹಿ. ಆದರೆ ಸುಲಭವಾಗಿ ಗಂಟಲಲ್ಲಿ ಸಿಕ್ಕಿಕೊಳ್ಳುವ ಸಂಭವ ಇರುವುದರಿಂದ ಸಣ್ಣ ಮಕ್ಕಳಿಗೆ ಕೊಡುವಾಗ ಸ್ವಲ್ಪ ಎಚ್ಚರ ಬೇಕು. ಒಂದು ಗೋಣಿಯಲ್ಲಿ ಹಾಕಿ ಇದರ ಗುಳ ತೆಗೆದರೆ ಫಸ್ಟ್‌ ಕ್ಲಾಸ್‌!

ಹಲಸಿನ ಹಣ್ಣಿನ ಕಡುಬು, ಇಡ್ಲಿ... ಗುಜ್ಜೆ ಪಲ್ಯ, ಹಲಸಿನಕಾಯಿ ಸೋಂಟೆ, ಬೇಳೇ ಮತ್ತು ಸೌತೆಕಾಯಿ ಕೊದ್ಯೆಲ್‌ ... ಆಹಾ ಏನು ರುಚಿ!

ತುಳು ಗಾದೆ: ರಚ್ಚೆಡ್‌ದ್ಲಾ ಬುಡಾಯೆ, ಗೂಂಜಿಡ್‌ದ್ಲಾ ಬುಡಾಯೆ... (ಹಲಸಿನ ಹಣ್ಣಿನ ಮೇಣದಿಂದಾಗಿ ತೊಳೆ, ಅತ್ತ ಸಿಪ್ಪೆಯ ಭಾಗಕ್ಕೂ ಇತ್ತ ಹಣ್ಣಿನನಡುವಿನ ಗಟ್ಟಿಭಾಗಕ್ಕೂ ಅಂಟಿಕೊಂಡಿರುತ್ತದೆ. ಜಗಳದಲ್ಲಿ ಯಾರೊಬ್ಬರೂ ಬಿಟ್ಟುಕೊಡುವವರಲ್ಲ ಎಂಬುದಕ್ಕೆ ಉಪಮೆಯಾಗಿ ಈ ಗಾದೆ ಬಳಸುತ್ತಾರೆ).

- ದಿನೇಶ್‌ ನೆಟ್ಟರ್‌; ನ್ಯೂ ಜೆರ್ಸಿ

* * *

ನನ್ನ ಇಷ್ಟದ ಹಲಸಿನ ಹಣ್ಣಿನ ಬಗ್ಗೆ ಲೇಖನವೋದಲು ಬಹಳ ಸಂತೋಷವಾಯಿತು.

- ವಲ್ಲೀಶ ಶಾಸ್ತ್ರಿ; ನ್ಯೂ ಜೆರ್ಸಿ

* * *

ವಿಚಿತ್ರಾನ್ನ ಅಂಕಣದ ಹೆಸರೇ ಹಸಿವನ್ನು ಹೆಚ್ಚಿಸುವಂಥದ್ದು. ಅದರಲ್ಲಿನ್ನು ಹಲಸಿನಹಣ್ಣಿನ ಬಗ್ಗೆ, ಅದೂ ಸಚಿತ್ರವಾಗಿ, ಬರೆದರೆ ಬಾಯಲ್ಲಿ ನೀರೂರದೆ ಇರುತ್ತದೆಯೇ?

- ಬಿಂದುಮಾಧವಿ; ಐಐಟಿ ಕಾನ್ಪುರ

* * *

Even though Halisina hannu is not my favourite, I very much enjoyed Vichitranna-83 because I love Halisina happala and halisanakai huli. My mother is from Koppa and whenever we visit their village we used to get tons of home made happala from there along with chips. Even till today one of my doddamma who lives in Shivamoga makes happala for all of us and specially for me because it is a very rare item for us here.

I wanted to mention one improtant information with regard to fresh halisina hannu. It is available here in Centerville, VA in an international grocery store called Grand Mart.(It is kept in the fresh produce section) I had brought one home sometime back and it was pretty good. You can pass on the information to Mr.Anand Pujar of Woodlands, so that from now onwards his customers can enjoy halisana payasa from real fruit rather than from canned one.

Ok then, once again very nice article, made my mind go back to the golden days of my life.

Thanks,

- Rashmi Gopalakrishna; Virginia

* * *

I read your todays article about Halasina Hannu. It reminds our old days. It is nice to read your articles. My friend Mary (she has a phd in Kannada from Mysore / she is here now) also likes your articles. I print it and take it to her since she does not have access to a computer.

By the way we do get Halasina Hannu in NJ.

- Indu Vasudevan; New Jersey

* * *

Really Sweet article. Made me nostalgic and my mind went back to decade or two ago to my grandparents house in DK with lot of Jack Fruit trees. I was eager to see the recipe for that famous dessert from Washington DC woodlands.

Keep writing.

- Vadiraja N; Boston

* * *

Back at my home, my mom makes dosa out of raw jackfruit. No rice, no dal added, it is just raw jackfruit, (not the seed), ground, add salt and make dosa immediately. But not all the jackfruits will work. This is used for specific days when we are not supposed to eat rice etc. ( I am talking about special festivals). We make Halasina Hannu dosa also, that one with rice.

I really enjoy your articles. You come up with all unique topics. Thanks again.

- Usha; City?

* * *

Nimma ee sanchike thumba chennagittu. My favourite fruit is halasinahannu. Some of my colleagues/friends are from Uttara Pradesh and Bihar. I was told that people of upper strata of their society do not eat this fruit, because this is below their dignity(false one). Of course it is their loss. In Mumbai it is not easily available but still I always manage to get some and eat. You know I can cut one whole (big) fruit without cutting/wasting even a single slice (Thole).

Dhanyavadagalondige,

- Rajendra S; Mumbai

* * *

I read your Vichitranna. The information you have given about Jack fruit is amazing. You have a good taste for food. By taste I mean literary taste and by food I mean food for thought. Keep it up. I am waiting for your 100th article. Then the much awaited book. This will provide new taste to the Kannada readers.

I am going to Dharwad tomorrow. I will be visiting Hubli, Bangalore and Mysore. I will meet Sri Harihareshwara there.

- Jeevi (Dr.G.V) Kulkarni; Mumbai

* * *

Jack fruit vendor in BangkokThe article is lovely and correctly guessed about making it feel nostalgic. Surprised to read that the origin was DK because when I was in Thailand two years ago, I did see a lot of Halasina Hannu there. I even bought some toLe in the market and many of friends around me were surprised with the purchase but then appreciated it afterwards. I am attaching a picture I took there, with due permission from the lady who sold jackfruit there. In the picture you will see a small Plastic thaily, which has the stuff I bought for 20 Baht ( about 15 Rupees )!

In UK we get lot of Tins (Thailand Exported) both ripe one as well as raw one, some how the taste is not the same as in our village. It can never be the same! Kudos to the article.

- Narahari Joshi; Leeds, UK

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more