• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರ್ತಾವಾಚಕ ವಿಚಿತ್ರಾನ್ನ ನಿಜ್ವಾಗ್ಲೂ ರೋಚಕ!

By Staff
|

Readers responses to VaartegALu.. Oduttiruvavaruವಿಚಿತ್ರಾನ್ನ ಅಂಕಣದ ‘ವಾರ್ತೆಗಳು...’ ಸಂಚಿಕೆಯಲ್ಲಿ ಕೇಳಿದ್ದ ಪ್ರಶ್ನೆಗೆ ಸರಿಯುತ್ತರ ಹೀಗಿದೆ: ದಿನಕ್ಕೆ ಮೂರು ಸಲ (0735, 1310 ಮತ್ತು 1935 ಗಂಟೆಗಳಿಗೆ) ದೆಹಲಿ ಕೇಂದ್ರದಿಂದ ಕನ್ನಡದಲ್ಲಿ ವಾರ್ತೆಗಳು ಪ್ರಸಾರವಾಗುತ್ತವೆ.

ಕರಾರುವಾಕ್ಕಾಗಿ ಉತ್ತರಿಸಿದ ಅಭಿನಂದನಾರ್ಹರು:

- ಶಿವರಾಮ ರಾವ್‌; ಬೆಂಗಳೂರು

- ಯಶವಂತ ಬಿ ಎಸ್‌; ಹೈದರಾಬಾದ್‌

- ದತ್ತ ಹೆಗಡೆ; ಜರ್ಮನಿ

- ರುದ್ರಮೂರ್ತಿ; ಬೆಂಗಳೂರು

- ಮಹೇಶ್‌ ದಿಂಡಗೂರ್‌; ಆಸ್ಟಿನ್‌, ಟೆಕ್ಸಸ್‌

- ಕೃಷ್ಣದತ್ತ ರಾಮರಾವ್‌; ಫೀನಿಕ್ಸ್‌, ಆರಿಜೋನಾ

- ಬಾಲಚಂದ್ರ ಪಾಟೀಲ್‌; ಬೆಂಗಳೂರು

- ಲಕ್ಷ್ಮೀ ಶ್ರೀನಾಥ್‌; ಕ್ಯಾಲಿಫೋರ್ನಿಯಾ

- ಗಣಪತಿ ಪಂಡಿತ್‌; ಫೀನಿಕ್ಸ್‌, ಆರಿಜೋನಾ

- ವಿನೋದ್‌ ಗಡ್‌ಗೊಲಿ; ಮೆಲ್ಬೋರ್ನ್‌, ಆಸ್ಟ್ರೇಲಿಯಾ

***

ನಾನು ಸ್ಕೂಲ್‌/ಕಾಲೇಜಿಗೆ ಹೋಗುವ ದಿನಗಳಲ್ಲಿ ನಮ್ಮ ಮನೆಯಲ್ಲಿ ದಿನಾ ಬೆಳಿಗ್ಗೆ 6 ಗಂಟೆಗೆ ರೇಡಿಯಾ ಹಾಕೋರು. ನಮ್ಮ ಫೇವರಿಟ್‌ ಭದ್ರಾವತಿ ಸ್ಟೇಷನ್‌, ನೀವು ಹೇಳಿದ ಸಂಸ್ಕೃತ ನ್ಯೂಸ್‌ರೀಡರ್‌ (ಬಲದೇವಾನಂದ ಸಾಗರಃ) ನಮಗೆ ಸುಪ್ರಭಾತ ಹಾಡೋರು, ಪ್ರದೇಶ ಸಮಾಚಾರ ರೀಡರ್‌(ನಾಗೇಶ ಶಾನುಭಾಗ್‌) ನಮಗೆ ಕಾಫಿಟೈಮ್‌! ಮತ್ತೆ ದೆಹಲಿಯಿಂದ ಬರೊ ಕನ್ನಡ ವಾರ್ತೆ ನಮ್ಮ ಬೆಳಿಗ್ಗೆ ತಿಂಡಿ ಟೈಮ್‌! ಕನ್ನಡ ನ್ಯೂಸ್‌ ಆದ್ಮೇಲೆ ಮೊದಲ ಚಿತ್ರಗೀತೆ ಪಲ್ಲವಿ ಹಾಡ್ಕೊತ ಸ್ಕೂಲ್‌ಗೆ ಹೋಗ್ತಾ ಇದ್ವಿ... ಈಗ ನೆನೆಸಿಕೊಂಡ್ರೆ ಲೈಫ್‌ ಇನ್ನೂ ಅಲ್ಲೇ ನಿಂತಿದ್ರೆ, ಚೆನ್ನಾಗಿರ್ತಾ ಇತ್ತು ಅನ್ಸುತ್ತೆ!

- ಯಶವಂತ ಬಿ ಎಸ್‌; ಹೈದರಾಬಾದ್‌

* * *

ವಾರ್ತಾಪ್ರಸಾರದ ಸಂಚಿಕೆ ಓದಿ ಹಳೆಯ ನೆನಪುಗಳು ಬಂದವು. ನಮ್ಮ ಮನೆಯಲ್ಲಿ ಇದ್ದದ್ದು ಹಳೆಯ ವಾಲ್ವ್‌ ರೇಡಿಯೋ. ಸುಮಾರು 2 ಅಡಿ ಅಗಲ ಹಾಗೂ 2 ಅಡಿ ಉದ್ದದ್ದು. ನನಗೆ 5-6 ವರ್ಷವಿದ್ದಾಗ ಎಲ್ಲರ ಜೊತೆ ನಾನೂ ಕುತೂಹಲದಿಂದ ರೇಡಿಯೋ ಕೇಳುತ್ತಿದ್ದೆ( ನೋಡುತ್ತಿದ್ದೆ?) ಆಗ ನಾನಂದುಕೊಡಿದ್ದು- ವಾರ್ತೆ ಓದುವವರು ಆ ರೇಡಿಯೋದ ಒಳಗೆ ಕೂತು ಓದುತ್ತಾರೆ ಎಂದು. ಈ ಬಗ್ಗೆ ದೊಡ್ಡವರನ್ನು ಕೇಳಿದರೆ ಸಿಕ್ಕ ಉತ್ತರದಿಂದ ಸಮಾಧಾನವಾಗಲಿಲ್ಲ (ಅರ್ಥವಾಗಲಿಲ್ಲ). ಸರಿ, ನಾನೇ ನೋಡಿದರಾಯ್ತೆಂದುಕೊಂಡೆ. ರೇಡಿಯೋ ಮಕ್ಕಳ ಕೈಗೆ ಸಿಗಬಾರದೆಂದು ಎತ್ತರದ ಜಾಗದಲ್ಲಿ ಇಟ್ಟಿದ್ದರು. ಯಾರೂ ಇಲ್ಲದ ಸಮಯ ನೋಡಿ ಹೇಗೋ ಮಾಡಿ ಹತ್ತಿದೆ. ಸ್ಪೀಕರ್‌ನ ತೂತುಗಳಿಂದ ನೋಡಿದೆ. ಒಳಗೆ ಕಪ್ಪು ಕತ್ತಲೆ. ನೋಡಿ, ಆಗಲೇ ಆಯತಪ್ಪಿ ಕೆಳಗೆ ಬಿದ್ದೆ. ಕೆಳಗೆ ಮೊಳೆಯಂಥ ವಸ್ತು ಇತ್ತು ಅನಿಸುತ್ತದೆ. ತಲೆಗೆ ಗಾಯವಾಯ್ತು. ಈಗಲೂ ಅದರ ಕಲೆ ಇದೆ. ನಾನು ಮೇಲಕ್ಕೆ ಹತ್ತಿದ ಕಾರಣ ಕೇಳಿದ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಈಗ ನನಗೂ ನಗು ಬರುತ್ತದೆ!

ಮತ್ತೆ ನಿಮ್ಮ ಲೇಖನದ ಕೊನೆಗಿದ್ದ ಲಿಂಕ್‌ ಮೂಲಕ ಹಳೆ ಸಂಚಿಕೆಯನ್ನೂ ಓದಿದೆ. ನಾಯಿಮರಿ ಪದ್ಯವನ್ನು ಚೆನ್ನಾಗಿ ಭಾಷಾಂತರಿಸಿದ್ದೀರಿ. ನಿಮಗೆ ಒಂದು ವಿಷಯ ಗೊತ್ತೇ? ಸಂಸೃತ ಭಾರತಿಯವರು ಹೊರತಂದ ಶಿಶುಗೀತೆಗಳ ಸಂಕಲನದಲ್ಲಿ ಈ ಹಾಡು ಅಲ್ಲದೇ ಬೆಕ್ಕೇ ಬೆಕ್ಕೇ ಮುದ್ದಿನಸೊಕ್ಕೇ ಇತ್ಯಾದಿ ಹಾಡುಗಳ ಭಾಷಾಂತರ ಇದೆ.

ಶುನಕ ಶುನಕ ಏಹಿ ಏಹಿ

ಕಿಮಿವ ರೋಚತೇ.

ಖಾದ್ಯಮಹೋ ಪೇಯಮಹೋ

ಸರ್ವಮಿಷ್ಯತೇ...

ಮಾರ್ಜಾಲಾರೇ... ಮಾರ್ಜಾಲಾ

ಕುತ್ರ ಗತೋಸಿ ತ್ವಂ

ಅತ್ರೈವಾಸ್ಮಿ ಆಗತೋಸ್ಮಿ

ರಾಜಗೃಹಾದೇವಂ... ಇತ್ಯಾದಿ.

- ವೇದಾ ಆಠವಳೆ; ಬೆಂಗಳೂರು

* * *

ನೆನಪಿನ ದೋಣಿ ಭರದಿಂದ ಸಾಗಿತು! ರಾಮಕೃಷ್ಣ, ಶುಭಾ ದಾಸ್‌, ಕೆ ಎಸ್‌ ಪುರುಶೋತ್ತಮ್‌, ನಾಗಮಣಿ... ಇವರೆಲ್ಲ ಕನ್ನಡದ ಅವಿಭಾಜ್ಯ ಕುಟುಂಬಸದಸ್ಯರುಗಳು ಎಂಬಂತಿತ್ತು. ಕೆಲವೊಮ್ಮೆ, ಗೌರವ(?) ಸೂಚನೆಯ ರಾಷ್ಟ್ರಿಯ ಶೋಕಾಚರಣೆ ಬಂದಾಗಂತೂ ಈ ವಾರ್ತಾವಾಚಕರೇ ಐಸ್‌-ಬ್ರೇಕರ್ಸ್‌ ಇದ್ದ ಹಾಗೆ! ಆದರೆ ಕ್ರಿಕೆಟ್‌ ಕಾಮೆಂಟರಿ ಇದ್ದಾಗ ಭೋಜನಾನಂತರದ ಆಟದ ವೇಳೆ ನಡುವೆ ‘‘ವಾರ್ತೆಗಳಿಗಾಗಿ’’ ವೀಕ್ಷಕವಿವರಣೆಯ ಪ್ರಸಾರ ನಿಂತಾಗ ಈ ವಾರ್ತೆಗಳೇ ಇಲ್ಲದಿದ್ದರೆ ಸಾಕು ಎನ್ನುವಂತಿತ್ತು!! ಅದು ಒಂದು ಸಮಯ. ವಾರ್ತೆ ಕೇಳುವ ಸೊಗಸು ಸಂಬಂಧವಿದ್ದರೂ ಇಲ್ಲದಿದ್ದರೂ ದೈನಂದಿನ ಪರಿಪಾಠ. ಇದೇ ರೀತಿ ವಿಚಿತ್ರಾನ್ನದಲ್ಲಿ ಹೊಸ ಹೊಸ ವಾರ್ತೆಗಳನ್ನು ನಮ್ಮ ಕೈಲಿ ಓದಿಸುತ್ತಿರಿ. ನಿಮಗೆ ಒಳ್ಳೆಯದಾಗಲಿ.

- ಅನಂತ ಸ್ವಾಮಿ; ಮೇರಿಲ್ಯಾಂಡ್‌

* * *

ವಾರ್ತೆಗಳು ಓದುತ್ತಿರುವವರು... ಲೇಖನ ಓದಿದ್ದು ನಿಜಕ್ಕೂ ಒಂದು ಅಪೂರ್ವ ಅನುಭವ! ವಾರ್ತಾವಾಚಕರ ಆ ಚಿರಪರಿಚಿತ ಹೆಸರುಗಳು ಅವರ ಧ್ವನಿಯ ನೆನಪನ್ನು ಹೊತ್ತು ತಂದವು. ಈಗಂತೂ ಬೆಂಗಳೂರಲ್ಲಿ ಎಫ್‌.ಎಂ ವಾಹಿನಿಗಳ ಅಬ್ಬರದಲ್ಲಿ ಮೀಡಿಯಂ ವೇವ್‌ ಟ್ರಾನ್ಸ್ಮಿಷನ್‌ ಕಳೆದೇ ಹೋಗಿದೆ, ಅಪರೂಪದ ನೆನಪು ಕೊಟ್ಟಿದ್ದಕ್ಕೆ ಧನ್ಯವಾದಗಳು.

ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕೆಲವು ಕಾರ್ಯಕ್ರಮಗಳ ಟೈಟಲ್‌ ಮ್ಯೂಸಿಕ್‌ ನಿಜಕ್ಕೂ ಎಷ್ಟು ಚೆನ್ನಾಗಿ ಇರುತ್ತಿತ್ತು! ಕಾರ್ಮಿಕರಿಗಾಗಿ, ಕೃಷಿರಂಗ, ಯುವವಾಣಿ, ಭಾನುವಾರದ 10 ಗಂಟೆಯ ಮಕ್ಕಳ ಕಾರ್ಯಕ್ರಮ (ಅದರ ಹೆಸರು ಮರೆತು ಹೋಗಿದೆ), ಜಯಮಾಲಾ... ಇತ್ಯಾದಿ. ನಿಮ್ಮ ಲೇಖನ ಓದುವಾಗ ಆ ಸುಮಧುರ ಮೆಲೊಡಿಗಳು ನೆನಪಿಗೆ ಬಂದವು. ಈ ಕಾರ್ಯಕ್ರಮಗಳು ಈವಾಗ ಪ್ರಸಾರ ಆಗುತ್ತಿವೆಯೋ ಇಲ್ಲವೋ ಗೊತ್ತಿಲ್ಲಾ. ನೋಡಿ, ಆ ಟೈಟಲ್‌ ಮ್ಯೂಸಿಕ್‌ಗಳೇ ವಿಚಿತ್ರಾನ್ನದ ಹೂರಣವಾಗಬಹುದು!! ಸಾಧ್ಯವಾದರೆ, ಅವುಗಳ ಬಗ್ಗೆ, ಅವುಗಳ ಒರಿಜಿನಲ್‌ ಟ್ಯೂನ್‌ಗಳೊಂದಿಗೆ ಒಂದು ಲೇಖನವನ್ನು ನಿರೀಕ್ಷಿಸೋಣವೇ?

- ರುದ್ರಮೂರ್ತಿ; ಬೆಂಗಳೂರು

* * *

ನನ್ನ ಊರು ಗೋಕರ್ಣ, ಬೆಳೆದದ್ದು ಗ್ರಾಮೀಣ ಪರಿಸರವಾದ ಕಾರಣ ರೇಡಿಯಾ ಮೂಲಕ ಸಮಯ ಪಾಲನೆ ಆಗ್ತ ಇತ್ತು, ವಿಶೇಷವೆಂದರೆ ಟಿವಿ ಬಂದನಂತರ ಕೂಡ ಮನೆಯಲ್ಲಿ ರೇಡಿಯಾ ಬಳಕೆ ಇತ್ತು. ಧಾರವಾಡದಲ್ಲಿ ಎಂಜಿನಿಯರಿಂಗ್‌ ಓದುವಾಗ ವಿವಿಧಭಾರತಿಯೇ ನನ್ನ ಮನರಂಜನಾ ಮಾಧ್ಯಮ. ವಾರ್ತೆಗಳಿಗಾಗಿ ಆಕಾಶವಾಣಿ ಧಾರವಾಡ. ಮೇಲೆ ತಿಳಿಸಿದ ಕಾರಣಗಳಿಂದಾಗಿ ರೇಡಿಯಾ ಬಗ್ಗೆ ಸ್ವಲ್ಪ ಜ್ಞಾನವಿತ್ತು/ಇದೆ. ನಾನು ಒಬ್ಬ ಗಣಕತಂತ್ರಜ್ಞ, ಕೆಲ್ಸ ಮಾಡ್ತಾ ಇದ್ದದ್ದು ಬೆಂಗಳೂರಿನಲ್ಲಿ, ಅಲ್ಲಿರುವಾಗ ಕೂಡ ಎಫ್‌.ಎಂ ವಾಹಿನಿಗಳೆಲ್ಲದರ ಕೇಳುಗನಾಗಿದ್ದೆ. ಈಗ ಕೆಲಸದ ನಿಮಿತ್ತ ಸ್ಕಾಟ್ಸ್‌ಡೇಲ್‌(ಫೀನಿಕ್ಸ್‌, ಆರಿಜೊನ)ದಲ್ಲಿ ಇದ್ದೇನೆ.

ವಿಚಿತ್ರಾನ್ನಕ್ಕೆ ಮೊದಲ ಬಾರಿ ಬರೆದರೂ, ಅದನ್ನ ಬಹಳ ಸಮಯದಿಂದ ಬಿಡದೆ ಓದ್ತಾ ಬಂದಿದ್ದೇನೆ. ತುಂಬಾ ಚೆನ್ನಾಗಿ ಬರೆಯುತ್ತೀರ. ಹೀಗೇ ಮುಂದುವರೆಸಿ.

ಪತ್ರದ ಮೂಲಕ ಸಂಪರ್ಕವಿರಲಿ.

- ಗಣಪತಿ ಪಂಡಿತ್‌; ಆರಿಜೋನಾ

* * *

ಇವತ್ತಿನ ಲೇಖನ ನನಗೆ ತುಂಬ ಇಷ್ಟ ಆಯ್ತು, ಗಡಿಯಾರ ನೋಡ್ದೆ ಬರೀ ರೇಡಿಯಾ ಕೇಳಿ ಟೈಮ್‌ ಕೀಪ್‌ಅಪ್‌ ಮಾಡ್ತಿದ್ದ ನೆನಪು, ಈಗಲೂ ಮಾಡ್ತೀನಿ ಆದ್ರೆ ಮೊದಲಿನಷ್ಟು ಇಲ್ಲ.

- ಹಂಸವೇಣಿ; ಮೈಸೂರು

* * *

ಅಮಿತಾಭ್‌ ಬಚ್ಚನ್‌ ‘ವಾರ್ತಾವಾಚಕ’ ಹುದ್ದೆಯ ಸಂದರ್ಶನದಲ್ಲಿ ಫೇಲಾದ ವಿಚಾರ ನಿಮ್ಮ ಲೇಖನದಿಂದಲೇ ತಿಳಿದದ್ದು. ವಾರವಾರವೂ ಹೊಸಹೊಸ ಲೇಖನ ವಿಷಯಕ್ಕೆ ಅದೆಷ್ಟು, ಅದೆಲ್ಲಿಂದ ರಿಸರ್ಚ್‌ ನಡೆಸ್ತೀರಾ !?

- ಉಮಾ ರಾಜಶೇಖರ್‌; ಮೇರಿಲ್ಯಾಂಡ್‌

* * *

ತುಂಬಾ ಖುಷಿಯಾಯಿತು. ವಾರ್ತೆಗಳಷ್ಟೇ ಅಲ್ಲ, ರೇಡಿಯಾ ಬಿತ್ತರಿಸುವ ಎಲ್ಲ ಕಾರ್ಯಕ್ರಮಗಳೂ ನಮ್ಮ ಅಲಾರ್ಮ್‌ಗಳಂತಿತ್ತು. ಅದೊಂದು ಕಾಲ. ಈಗಲೂ ನನ್ನ ಹೆಂಡತಿಗೆ ಗೀತಾರಾಧನ, ರೈತರಿಗೆ ಸಲಹೆ, ಪ್ರದೇಶ ಸಮಾಚಾರಗಳೇ ಎಚ್ಚರಿಕೆಯ ಗಂಟೆಗಳು. ಇದೀಗ ಎಫ್‌.ಎಮ್‌ ವಾಹಿನಿಗಳೂ ಡ್ರೈವಿಂಗ್‌ ಸಂಗಾತಿಗಳು. ಇವೆಲ್ಲಕ್ಕೂ ಮಿಗಿಲಾಗಿ ವಾರ್ತಾವಾಚಕರ ಬಗ್ಗೆ ನೆನಪುಗಳು ಹಸಿರಾಗಿವೆ. ಕನ್ನಡ ಪದಗಳನ್ನು ಅದೆಷ್ಟು ತಪ್ಪುಗಳೊಂದಿಗೆ ಉಚ್ಚರಿಸುತ್ತಾರೆಂದು ಗುರುತಿಸುವ ಹವ್ಯಾಸವಿತ್ತು (ಹೆಚ್ಚಾಗಿ ದಿಲ್ಲಿಯಿಂದ ಪ್ರಸಾರವಾಗುತ್ತಿದ್ದ ಬೆಳಗ್ಗೆ 7:35ರ ವಾರ್ತೆಗಳಲ್ಲಿ). ಪ್ರಜಾವಾಣಿಯ ವಾಚಕರ ವಾಣಿಗೆ ಪತ್ರ ಬರೆಯುವ ಹವ್ಯಾಸ ಹುಟ್ಟಿಸಿದ್ದೇ ಆಕಾಶವಾಣಿಯ ವಾರ್ತೆಗಳು. ಆಕಾಶವಾಣಿಯ ಬಗ್ಗೆ ಇನ್ನೂ ಹೆಚ್ಚು ಕೇಳುವ (ಅಲ್ಲಲ್ಲ ಓದುವ) ಅವಕಾಶ ಲಭಿಸಲಿ.

- ಸುಧೀಂದ್ರ ಹಾಲ್ದೊಡ್ಡೇರಿ; ಬೆಂಗಳೂರು

* * *

Thanks for the article... it brought back old memories. ‘ವಾರ್ತೆಗಳು. ಓದುತ್ತಿರುವವರು ಉಪೇಂದ್ರ ರಾವ್‌’ is still in my memory!

- ಯಾಗೇಶ್‌ ದೇವರಾಜ್‌; ಕ್ಯಾಲಿಫೋರ್ನಿಯಾ

* * *

ನಿಮ್ಮ ವಿಚಿತ್ರಾನ್ನ ಅಂಕಣ ಲೇಖನಗಳನ್ನು ಓದಿ ಸ್ವಲ್ಪ ದಿವಸಗಳೇ ಆಗಿವೆ. ಈ ಸಲದ ಲೇಖನ ಚೆನ್ನಾಗಿ ಮೂಡಿ ಬಂದಿದೆ. Short, crisp and no-nonsense. Just like a news clip. NPR ರೇಡಿಯಾದ hourly news ಸಾಕಷ್ಟು ಚೆನ್ನಾಗಿ ಕವರ್‌ ಮಾಡುತ್ತಾರೆ. ಅದರಲ್ಲಿ ಓದುವ Carl Cassel, Laxmi Singh ಮುಂತಾದವರು ಹೇಗಿದ್ದಾರೆ ಅನ್ನುವ ಕುತೂಹಲ ನನಗೂ ಕೂಡ. ಅದಲ್ಲದೆ ಘಕ್ಕ ನ ಬಾಸ್ಟನ್‌ ಸ್ಟೇಷನ್‌ ಗಆಖ್ಕಿ ನಡೆಸಿಕೊಡುವ ಕೆಲವು ಕಾರ್ಯಕ್ರಮಗಳ Hosts ್ಸ ಹೇಗಿದ್ದಾರೆ ಅನ್ನುವ ಕುತೂಹಲ ಇನ್ನೂ ಇದೆ. The connection ನಡೆಸಿಕೊಡುವ Dick Gordon, On-point ನಡೆಸಿಕೊಡುವ Tom Ashbrook ನನ್ನ ಫೇವರಿಟ್‌.

Dick Gordon ಅವರನ್ನು ಒಮ್ಮೆ ಭೇಟಿಯಾಗಿದ್ದೆ. ಅವರ ಧ್ವನಿ ಅಷ್ಟೊಂದು impress ಮಾಡಲಿಲ್ಲ ಆದರೆ ಅವರ ಸ್ವಭಾವ ಬಹಳ ಹಿಡಿಸಿತು. ಅವರು WRNI (Providence, Rhode Island) ನಲ್ಲಿ Indo-Pak relations ಬಗ್ಗೆ BBCಯ correspondents ್ಸ ಜೊತೆಗೆ ಮಾತುಕತೆ ನಡೆಸಿದ್ದರು. ಅದಕ್ಕೆ ಕೇಳುಗರಿಗೆ ಆಹ್ವಾನವೂ ಇತ್ತು. Well, this was just to share my experiences with the NPR station. Now, I definitely miss WBUR. I have recently moved to Austin, Texas and The local NPR station here carries predominantly music.

- & Chandrashekhar Nelogal; Austin, Texas

* * *

’ವಾರ್ತೆಗಳು’ - ನಿಮ್ಮ ವಿಚಿತ್ರಾನ್ನ - I enjoyed most. Its simply superb! Directly I could relate it to my childhood as well as the present day to day life. ಅದೆಷ್ಟೋ ಜನರ ಧ್ವನಿ ಕೇಳಿಯೇ ನಾವು ಅವರ ’ಫನ್‌’ ಆಗೋದು ಎಷ್ಟು ನಿಜ ಅಲ್ಲವೇ? ಎಂಬತ್ತರ ದಶಕದ ಕೊನೆಯಲ್ಲಿ ಸಂಜೆ 5:50ರ ಸುಮಾರಿಗೆ ಬೆಂಗಳೂರು ಕೇಂದ್ರದಿಂದ ಸಿನೆಮಾ ಹಾಡುಗಳು ಬರುತ್ತಿದ್ದವು, ಅನೌನ್ಸ್‌ ಮಾಡುತ್ತಿದ್ದ ಒಬ್ಬ ಪುರುಷಧ್ವನಿಯ ಹುಚ್ಚು ನನಗೆ ಎಷ್ಟು ಇತ್ತೆಂದ್ರೆ - (ಹೆಸರು ನನಗೆ ಕೊನೆಗೂ ಗೊತ್ತಾಗಲೇ ಇಲ್ಲ) - ಪ್ರತಿ ಸಲ ಅವರ ಧ್ವನಿ ಕೇಳಿದಾಗ - I wanted desparetely to see that person! ಕೇವಲ ಧ್ವನಿಯನ್ನು ಕೇಳಿಯೇ ಆ ಮನುಷ್ಯ ನೋಡಲಿಕ್ಕೆ ಹೀಗಿರಬಹುದು/ಹಾಗಿರಬಹುದು (ಇದಂತೂ ಸರಿಯೆ ಸರಿ) ಮನೆಯಲ್ಲಿ ಹೀಗೆ ಬಿಹೇವ್‌ ಮಾಡ್ತಿರಬಹುದು... ಸ್ವಭಾವ ಹೀಗೇ (!) ಇರಬಹುದು ಅಂತ ನಾವ್‌ನಾವೇ ಡಿಸ್ಕಸ್‌ ಮಾಡ್ತಿದ್ದದ್ದು ನೆನಪಾಗಿ... ಸ್ವಲ್ಪ ಹೊತ್ತು I went back to my teenage (thank you for the same!)... & enjoyed.

ನೀವು ಲೇಖನದಲ್ಲಿ ಬರೆದಂತೆ ಇವತ್ತಿಗೂ ನಮ್ಮ ಮನೆಯಲ್ಲಿ ಬೆಳಗ್ಗೆ 6:30ರಿಂದ ನಾವು ಆಫೀಸ್‌ಗೆ ಹೊರಡೊ ತನಕ ರೇಡಿಯಾ ಮೊಳಗುತ್ತಲೇ ಇರುತ್ತದೆ. ಮಧ್ಯೆ ಸ್ವಲ್ಪ ಹೊತ್ತು ಅಂದರೆ 7:30ರಿಂದ 7:45ರ ತನಕ ವಿವಿಧಭಾರತಿಗೆ ಶಿಫ್ಟ್‌ ಆಗಿರ್ತೇವೆ (ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಆಧಾರಿತ ‘ಸಂಗೀತ್‌ ಸರಿತಾ’ ಕಾರ್ಯಕ್ರಮ ಕೇಳಲು ಇಷ್ಟದ ಮನರಂಜನೆಯ ಜೊತೆಯಲ್ಲಿ ಸಮಯ ಪ್ರಜ್ಞೆಯೂ ಜಾಗ್ರತವಾಗಿರುತ್ತದೆ.

ನಿಮ್ಮ ಅರ್ಟಿಕಲ್‌ ಓದಿ ಈಗಲೆ ಮೈಲಿಸೋಣ ಅಂತ ಟೈಪಿಸಿದೆ (ಎಷ್ಟೊ ಸಲ ಪೋಸ್ಟ್‌ಪೋನ್‌ ಮಾಡಿ, ನಂತರ ಕಳಿಸಲು ಆಗೋದೆ ಇಲ್ಲ). ಇನ್ನು ಬರಲೆ?

- ಸಂಧ್ಯಾ ಶಾಮ್‌ಜೀ; ಹೈದರಾಬಾದ್‌

* * *

ನಿಮ್ಮ ಅಂಕಣ ಓದಿ ತುಂಬಾ ಖುಶಿಪಟ್ಟೆ. ದಯವಿಟ್ಟು, ಇದುವರೆಗಿನ ಎಲ್ಲ ಲೇಖನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ, ಕೊಂಡು ಓದುತ್ತೇವೆ, ಅತ್ಮೀಯರಿಗೆ ಉಡುಗೊರೆಯಾಗಿ ಕೊಡುತ್ತೇವೆ.

- ದಿವ್ಯಾ ರಾಜೇಶ್‌; ಸಿಂಗಾಪುರ

* * *

I wonder from where do you collect all the related information !

Now we have free DTH service of Prasar Bharati beaming 35 TV channels and 12 Radio Channels round the clock with digital clarity. I too have got installed one especially for Radio Channels which include Vividh Bharati, FM Gold, FM Rainbow and all Indian Language Channels like AIR Bangalore etc. Now we too are at par with Metro Cities ! Thanks to new technology.

- Chidambar Kakathkar; Mangalore

* * *

One important area of Radio listening in India you left out is the Short Wave broadcasts which are as good as dead. Until the late 80s when international cricket and international news were yet to be taken over by the TV channels in India, enthusiasts in India had to rely solely on BBC and Radio Australia (and even Radio Pakistan!) to get to know whats happening in international cricket matches through their ball-by-ball commentaries. Due to shrinking budgets at these radio corporations, and also due to a changed technological order of life since 90s, there are no more cricket commentaries on BBC World Service and Radio Australia. I have spent so many days waking up at 5:30AM to catch the matches in Australia from the first ball! and stayed long enough into the night for the last ball to be commentated upon from England!

Well, these are still available on internet but its not the same as Radio. Is it? The other important part of these short wave radio stations were the news, current affairs and the documentaries that were broadcast. It really did give me so much of knowledge about the western world that the day I landed in London for my first overseas visit, I completely felt at home. Everything my eyes had imagined through these radio broadcasts was in front of me as it should be!

Anyway, thanks for rekindling fond memories of an era bygone.

- Krishnadutt Ramarao; Arizona

* * *

I really got nostalgic reading this article. I used to listen to Akashavani all the time during my college days and after listening to all the melodious songs played in Brindavana, I would leave to college. Good old carefree days they were!! These days, I listen to Radio City FM 91, which also has quite a few good RJs. However, after reading your article, I may go back to listening good old Akashavani!

- Ragini; Bangalore

* * *

I read the article fully. Wow! How did you remember all those details, names, events? Amazing! Your memory is great. Actually you dont need a hard disk to your computer; you can just memorize all the bits and bytes in it! Thanks for making me read a very nice article in this morning.

Surely, it was nostalgic...

- Janardhana Swamy; California

ವಾರ್ತೆಗಳು.... ಓದುತ್ತಿರುವವರು....

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more