ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟು ಬೈ ಫೋರ್‌ ಕಾಫಿಗೆ ನಾವು 24 ಅಂತೇವೆ...!

By Staff
|
Google Oneindia Kannada News
24 ಸಂಖ್ಯೆಯ ಬಗ್ಗೆ ಇನ್ನಷ್ಟು ಆಸಕ್ತಿಕರ ವಿಶೇಷತೆಗಳನ್ನು ತುಂಬಾ ಮಂದಿ ಓದುಗಮಿತ್ರರು ಬರೆದು ತಿಳಿಸಿದ್ದಾರೆ. ಪತ್ರ ಬರೆದವರಿಗೆಲ್ಲ 24 ನಮಸ್ಕಾರಗಳು! - ಶ್ರೀವತ್ಸ ಜೋಶಿ.

On a lighter note – and quick one that I could get just after reading through this weeks vichitranna about the number 24.

In our college canteen, generally 4 of us used to go in group and have tea/coffee. Whenever there were girls around in the canteen, feeling hesitant to order two-by-four, we coined this concept of saying 24 tea (or 24 coffee based on mood). Canteen person understood it correctly as two-by-four. That’s a lot of importance for number 24 right, b’coz I remember lot of people used to get surprised that we 4 of us were ordering 24 tea/coffee – and we get 4 half cups in return!

One more: You have written this article in the year 2004. Considering that zeroes don’t have any value, even this year becomes 24. Hows that? :-)

Shall think more and let you know.

- Girish Jagajampi; Bangalore

* * *

It was interesting to read a nice discussion on 24. However, I have one question on a point made there. You mentioned there are 24 time zones split with a difference of 15 degree longitude. In which case there should have been time zones only in increments of 1 right? For Eg: if we start from GMT, there should have been GMT + 1 to GMT + 12 and GMT - 12. However India has GMT + 5:30, Can you explain this? Also, if I check my windows desktop there are more than 24 time zones, Would you like to explain this too?

As always, I enjoyed reading this weeks Vichitraanna too. Thanking you

- Uday Hegde; Texas (Originally from UttaraKannada, Karnataka)

* * *

This is an excellent article on number 24. You have researched a lot and put together everything around 24 in a highly presentable way.

Also, Congratulations on your century!

- Vishvanath Hulikal; California

* * *

I read "24 special" article. Very nice. I have some special memory with 24 which I share with my fiance and wanted him to read this article. But on his PC there is some fonts problem, thatskannada webpages are not opening. Can you please please send me this article word or pdf or whichever form that I can send to him? Please.

- Shraavani; Columbus, Ohio (Originally from Bangalore)

* * *

Todays edition of Vichitranna was very good. It is really great as to how you get all this information at one place and put it together like a properly baked dish. I never miss vichitranna on Tuesdays. How do you manage to get so much information? do you decide on the topic first and then look into the information or process the information you have and then come up with a topic. Anyway it is a amazing thing what you are doing.

Keep up your good work, continue serving us tasty topics. Lets at least learn a new thing every week.

- Ashwin S N; Dallas, Texas. (Orginially from Shimoga, Karnataka)

* * *

Vichithranna about number 24 was pretty neat!

- Diwakar Phadke, Kansas City. (Originally from Dakshina Kannada, Karnataka)

* * *

ನಿಮ್ಮ ಲೇಖನ ಓದಿದೆ. 24 ರ ಮಹತ್ವ 24 ಗಂಟೆಗಳಾಚೆ ತಿಳ್ದಿರಲಿಲ್ಲ. ತುಂಬ ಥ್ಯಾಂಕ್ಸ್‌! ನಿಮ್ಮ ಆರ್ಟಿಕಲ್ಸ್‌ ಓದಲಿಕ್ಕೆ ಶುರು ಮಾಡಿದ್ಮೇಲೆ ಅನೇಕ ವಿಷಯಗಳು ತಿಳೀತಾ ಇವೆ. ವಿಚಿತ್ರಾನ್ನ ಅಂದರೆ ನನಗಂತೂ ಜ್ಞಾನದ ಆಗರ ಅಂದ್ರೂ ತಪ್ಪಿಲ್ಲ!

- ರಾಧಿಕಾ ಎಂ ಜಿ; ಕೆನಡಾ (ಮೂಲತಃ ಬೆಂಗಳೂರು)

* * *

ವಿಚಿತ್ರಾನ್ನ 103ನೆ ಸಂಚಿಕೆಯನ್ನು ಒದಿದೆ. ಸಂಖ್ಯೆ 24 ಮತ್ತು ಅದರ ಸಂಕೇತ(ಮಹತ್ವ)ವನ್ನು ಚೆನ್ನಾಗಿ ವಿವರಿಸಿದ್ದೀರಿ. ಗಾಯತ್ರಿ ಮಂತ್ರ, ವಿಷ್ಣು ನಾಮಗಳ ಜೊತೆ 24 ಸಂಖ್ಯೆಯನ್ನು ಸೊಗಸಾಗಿ ಲಿಂಕ್‌ ಮಾಡಿದ್ದೀರಿ.

ಅಂದಹಾಗೆ 24ರ ಮಹತ್ವದ ಬಗ್ಗೆ ನನಗೊಂದು ಹೊಳೆಯಿತು! ಪಶ್ಚಿಮ ಬಂಗಾಲದಲ್ಲಿ ‘24 ಪರಗಣ ಜಿಲ್ಲೆ’ ಅಂತ ಒಂದು ಇದೆಯಲ್ಲವೇ !?

- ಯಶವಂತ್‌ ಬಿ ಎಸ್‌; ಹೈದರಾಬಾದ್‌

* * *

ಸಂಖ್ಯಾ ಶಾಸ್ತ್ರದ ಬಗ್ಗೆ ಮಾಹಿತಿ ಓದಿ ತುಂಬಾ ಖುಶಿಯಾಯಿತು. ಯಾಕೆ ಗೊತ್ತಾ? ನನ್ನ ಹುಟ್ಟುಹಬ್ಬದ ದಿನಾಂಕವೂ 24 ಆಗಿದ್ದು, ಅಬ್ಬಾ ಇಷ್ಟೆಲ್ಲ ಮಹತ್ವ ಈ ಸಂಖ್ಯೆಗೆ ಇದೆಯಲ್ಲ ಅಂತ ಸಂತೋಷಪಟ್ಟೆ. ನಿಮಗೆ ನ್ಯೂಮರಾಲಜಿ ಬಗ್ಗೆ ಇನ್ನಷ್ಟು ಗೊತ್ತಿದ್ದರೆ ತಿಳಿಸಿ.

- ರೇಣುಕಾ ಶ್ಯಾಮ್‌; ನವದೆಹಲಿ (ತವರೂರು - ಧಾರವಾಡ)

(24ರಂದು ಹುಟ್ಟುಹಬ್ಬವಿರುವ ಪ್ರಖ್ಯಾತರು ತುಂಬ ಮಂದಿ ಇದ್ದಾರೆ. ನಮ್ಮ ವರನಟ ಡಾ।ರಾಜಕುಮಾರ್‌; ಕ್ರಿಕೆಟ್‌ ಕಲಿಗಳಾದ ಸಚಿನ್‌ ತೆಂಡುಲ್ಕರ್‌, ಮೊಹಿಂದರ್‌ ಅಮರನಾಥ್‌; ಸ್ವಾತಂತ್ರ್ಯಸಮರದಲ್ಲಿ ಪಾಲ್ಗೊಂಡ ಮೇಡಮ್‌ ಭಿಕಾಜಿ ಕಾಮಾ (ಜರ್ಮನಿಯಲ್ಲಿ ತಿರಂಗಾ ಧ್ವಜವನ್ನು ಹಾರಿಸಿದ ದಿಟ್ಟ ಮಹಿಳೆ)... ಇತ್ಯಾದಿ. ಹಾಗೆಯೇ ವಿಶ್ವಸಂಸ್ಥೆಯ ಉದಯವಾದದ್ದು ಅಕ್ಟೋಬರ್‌ 24ರಂದು; ಧರ್ಮಸ್ಥಳದ ಪ್ರಸಕ್ತ ಧರ್ಮಾಧಿಕಾರಿ ಡಾ।ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕವಾದದ್ದು ಅಕ್ಟೋಬರ್‌ 24ರಂದು. - ಶ್ರೀವತ್ಸ ಜೋಶಿ.)

* * *

24 ರ ಲೇಖನ ಚೆನ್ನಾಗಿದೆ. ಅಂತೆಯೇ 108 ಸಹ ಆಗಬಹುದು ಎಂದು ನನ್ನ ಅನಿಸಿಕೆ.

- ಪ್ರಕಾಶ್‌ ಬಿ ವಿ; ಬೆಂಗಳೂರು

* * *

ಬಹಳ ಒಳ್ಳೆಯ ಲೇಖನ. ಓದಿ ನನಗೆ ಭಾರಿ ಖುಶಿಯಾಯ್ತು. 24ರ ಹಾಗೆಯೇ 18 ಸಂಖ್ಯೆಯೂ ಭಾರತೀಯ ಶಾಸ್ತ್ರ-ಪುರಾಣಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಅದರ ಬಗ್ಗೆಯೂ ನೀವು ಒಂದು ಲೇಖನ ಬರೆಯಬಹುದು.

- ಸತ್ಯನಾರಾಯಣ ಗುಡೂರು; ಹೈದರಾಬಾದ್‌

* * *

ಇಪ್ಪತ್ನಾಲ್ಕರ ಮಹತ್ವವನ್ನು ತಿಳಿಸಿದ ಈ ವಾರದ ವಿಚಿತ್ರಾನ್ನ ಬಹಳ ಚೆನ್ನಾಗಿತ್ತು. ಭರತನಾಟ್ಯದಲ್ಲೂ ಈ ಸಂಖ್ಯೆಗೆ ವಿಶಿಷ್ಟ ಸ್ಥಾನವಿದೆ (ನಾನೊಬ್ಬ ನೃತ್ಯ ವಿದ್ಯಾರ್ಥಿನಿ). ಸಂಯುತ ಹಸ್ತಗಳು, ಅಂದರೆ ಎರಡೂ ಕೈಗಳನ್ನು ಪ್ರಯೋಗಿಸಿ ಸೂಚಿಸುವ ಮುದ್ರೆಗಳ ಸಂಖ್ಯೆ 24. ಗುರು-ಹಿರಿಯರಿಗೆ ನಮಸ್ಕರಿಸಲು ಬಳಸುವ ‘ಅಂಜಲಿ’ ಹಸ್ತವೂ ಇದರಲ್ಲಿ ಒಂದು. ನಂದಿಕೇಶ್ವರನ ’ಅಭಿನಯ ದರ್ಪಣ’ ಎಂಬ ಗ್ರಂಥದಲ್ಲಿ ಎಲ್ಲಾ ಹಸ್ತಪ್ರಕಾರಗಳ ಸವಿಸ್ತಾರ ವರ್ಣನೆಯಿದೆ.

- ರೋಹಿಣಿ; ಫಿಲಡೆಲ್ಫಿಯಾ

* * *

24ರ ಮಹಾತ್ಮೆ ಸೊಗಸಾಗಿದೆ.

24 = (2ರ ಘಾತ 4 + 2 * 4) = (4ರ ಘಾತ 2 + 4 * 2)

24 = 1 * 2 * 3 * 4

24 = ಒಂದು ಚಾಂದ್ರಮಾನ ವರ್ಷದಲ್ಲಿನ ಪಕ್ಷಗಳು (ಈ ವರ್ಷ ಅಧಿಕಮಾಸವಿದ್ದುದರಿಂದ 26 ಪಕ್ಷಗಳು)

ಒಂದು ದಿನದಲ್ಲಿ ನಿಜವಾಗಿ ಎಷ್ಟು ಗಂಟೆ? ಎಂಬುದರ ಬಗ್ಗೆ ಸ್ವಲ್ಪ ವಿವರಣೆ:

1 ಸೈಡೀರಿಯಲ್‌ ಡೇ (ನಕ್ಷತ್ರಗಳು ಕಂಡ ಹಾಗೆ) = 23 ಗಂಟೆ 56 ನಿಮಿಷ 4 ಸೆಕೆಂಡು (ಅಂದರೆ, ಒಂದು ನಕ್ಷತ್ರವು ನಮಗೆ ಆಕಾಶದಲ್ಲಿ ಎಕ್ಸಾಕ್ಟ್‌ ಆಗಿ ಅದೇ ಜಾಗದಲ್ಲಿ ತೋರಿ ಬರಲು ತಗಲುವ ಅವಧಿ). 1 ಸೋಲಾರ್‌ ಡೇ (ಸೂರ್ಯ ಕಂಡ ಹಾಗೆ) = 24 ಗಂಟೆ 0 ನಿಮಿಷ 0 ಸೆಕೆಂಡು (ಸರಾಸರಿ ಒಂದು ವರ್ಷಕ್ಕೆ)

ಇವೆರಡಕ್ಕೆ ಯಾಕೆ ವ್ಯತ್ಯಾಸ ಎಂದರೆ: ನಮ್ಮ ಭೂಮಿ ತನ್ನ ಸುತ್ತ ತಿರುಗುತ್ತಿರುವ ಸಮಯದಲ್ಲೇ (23 ಗಂಟೆ 56 ನಿಮಿಷ 4 ಸೆಕೆಂಡು) ಸೂರ್ಯನ ಸುತ್ತಲೂ ಕೂಡ ತಿರುಗುತ್ತದೆ. ಒಂದು ದಿನದಲ್ಲಿ ಸೂರ್ಯ 1 ಡಿಗ್ರಿಯಷ್ಟು ಹಿಂದೆ ಬೀಳುತ್ತಾನೆ. ಆ ಡಿಗ್ರಿಯನ್ನ ‘ಕ್ಯಾಚ್‌ ಅಪ್‌’ ಮಾಡಲು 3 ನಿಮಿಷ 56 ಸೆಕೆಂಡು (= 1440 ನಿಮಿಷ/365) ಬೇಕಾಗುತ್ತದೆ. ಆದ್ದರಿಂದ ಒಂದು ದಿನ (ಸೂರ್ಯನ ಪ್ರಕಾರ) ದಲ್ಲಿ ಭೂಮಿ 361 ಡಿಗ್ರಿ ತಿರುಗುತ್ತದೆ!

24ಕ್ಕೆ ಸಂಬಂಧಿಸಿದಂತೆ ಇನ್ನೊಂದು ಸ್ಪೆಷಲ್‌ ಗೇಂ ಇದೆ. ಇಲ್ಲಿ ನೋಡಿ. ಅದರ ನಿರ್ಮಾತೃ ಕಂಪೆನಿಯ ವೆಬ್‌ಸೈಟ್‌ ಇದು.

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ (ಮೂಲತಃ ದಕ್ಷಿಣಕನ್ನಡ, ಕರ್ನಾಟಕ)

ಈವರೆಗಿನ ಪ್ರತಿಕ್ರಿಯೆಗಳಿಗೆ ಕಾರಣವಾದ ಲೇಖನ - ಸಂಖ್ಯೆ ಮತ್ತು ಸಂಕೇತವಾಗಿ ‘24’

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X