ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರ್ದರ್ನ್‌ ಐರ್ಲ್ಯಾಂಡ್‌ - ಹವಳ ದ್ವೀಪದ ಕಿರೀಟ

By ಪ್ರಕಾಶ್‌ ದೇವೇಂದ್ರ ರಾವ್‌; ಐರ್ಲ್ಯಾಂಡ್‌
|
Google Oneindia Kannada News

Ireland Dairy by Prakash Devendra Rao
ಇಂಗ್ಲೇಂಡ್‌, ಗ್ರೇಟ್‌ ಬ್ರಿಟನ್‌, ಯು.ಕೆ ಗೆ ಸಂಬಂಧಿಸಿದಂತೆ ಇರುವ ಗೊಂದಲವನ್ನು ವಿವರಿಸುವಲ್ಲಿ ಶ್ರೀವತ್ಸ ಜೋಶಿಯವರು ವಿಚಿತ್ರಾನ್ನ ಲೇಖನ ದಲ್ಲಿ, ಮಾಡಿದ ಪ್ರಯತ್ನಕ್ಕೆ, ಪ್ರಸ್ತುತ ಐರ್ಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ನಾನು ಒಂದೆರಡು ಮಾತುಗಳನ್ನು ಸೇರಿಸಬಯಸುತ್ತೇನೆ.

ಐರ್ಲ್ಯಾಂಡನ್ನು Emerald Island ಅಂತ ಕರೀತಾರೆ. ಇದು ವರ್ಷ ಪೂರ್ತೀ ಹಸಿರಿನಿಂದ ಕಂಗೊಳಿಸುವ ನಾಡು.

ಸುಪ್ರಸಿದ್ಧ ಹಡಗು 'ಟೈಟಾನಿಕ್‌' ನಿರ್ಮಾಣ ಆದದ್ದು ನಾರ್ದರ್ನ್‌ ಐರ್ಲ್ಯಾಂಡಿನ Belfast ನಗರದಲ್ಲಿ ಅಂತ ನಿಮಗೆಲ್ಲ ಗೊತ್ತಿರಬೇಕಲ್ಲಾ? ಕೇವಲ ಎರಡು ಮಿಲಿಯನ್‌ ಜನರೂ ಇಲ್ಲದ (2003 ರಲ್ಲಿ 1.7 ಮಿಲಿಯನ್‌)ಪುಟ್ಟ ದೇಶವಾದರೂ ಆಗಿಂದಾಗ್ಗೆ ಸುದ್ದಿಯಲ್ಲಿರುತ್ತಲೇ ಬಂದಿದೆ. ಸುಮಾರು 3 ದಶಕಗಳ ಕಾಲದ ಆಂತರಿಕ ಕಲಹ ಹಾಗೂ IRA ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ?

Irish weather has all four seasons in a day ಅನ್ನುವುದು ಅಪ್ಪಟ ಸತ್ಯಕ್ಕೆ ತುಂಬಾ ಹತ್ತಿರದಲ್ಲಿದೆ!

ನಾವು ಇಂಗ್ಲೆಂಡ್‌ ಕ್ರಿಕೆಟ್‌ ಟೀಮು ಅಂತೀವಲ್ಲ ಅದು ವಾಸ್ತವವಾಗಿ ಇಂಗ್ಲೆಂಡ್‌ ಪ್ಲಸ್‌ ವೇಲ್ಸ್‌ ಜೊತೆಯಾಗಿ ಮಾಡಿಕೊಂಡ ತಂಡ! ಸ್ಕಾಟ್ಲ್ಯಾಂಡಿನವರಿಗೆ ತಮ್ಮದೇ ಒಂದು ದಾರಿ. ಐರ್ಲ್ಯಾಂಡ್‌ ಮತ್ತೂ ವಿಚಿತ್ರ; ಇಲ್ಲಿ ಎರಡು ಐರ್ಲ್ಯಾಂಡ್‌ ದೇಶಗಳು ಸೇರಿ ಒಂದೇ ತಂಡವಾಗಿ ಭಾಗವಹಿಸುತ್ತವೆ! (Republic of Ireland and Northern Ireland) ರಗ್ಬಿ ಹಾಗೂ ಗೇಲಿಕ್‌ ಆಟಗಳಿಗೂ ಸಹಾ ಇದೇ ವ್ಯವಸ್ಥೆ. ಇವೆರಡು ದೇಶಗಳು ಬೇರೆಯಾಗಿ 80 ವರ್ಷದ ಮೇಲಾಯಿತು. ನಾರ್ದರ್ನ್‌ ಐರ್ಲ್ಯಾಂಡ್‌ ಈಗ UK ಭಾಗವಾಗಿದ್ದರೂ Republic of Ireland ಜೊತೆಗಿನ ಬಾಂಧವ್ಯ ಬಿಟ್ಟಿಲ್ಲ. ಈ ಎರಡೂ ದೇಶಗಳ ನಡುವೆ uncontrolled border ಇದೆ.

ಇತರ ಯೂರೋಪಿಯನ್ನರಂತೆ UK ಜನರಿಗೂ ಫುಟಬಾಲ್‌ ಹುಚ್ಚು. ನಾಲ್ಕೂ ದೇಶಗಳದ್ದೂ ಬೇರೆ ಬೇರೆ ತಂಡಗಳು. ಒಲಂಪಿಕ್ಸ್‌ ಗೆ ಹೋಗುವಾಗ ಮಾತ್ರ ಗ್ರೇಟ್‌ ಬ್ರಿಟನ್ನಿನ 3 ದೇಶಗಳೂ ಒಂದಾಗಿ Northern Ireland ನ್ನು ಏಕಾಂಗಿಯಾಗಿ ಹೋರಾಡಲು ಬಿಡುತ್ತಾರೆ!

ಇಲ್ಲಿ ಸರ್ಕಾರಿ ರಜಾ ದಿನಗಳ ಕಥೆಯೇ ಒಂದು ಮಜಾ! ಈ ರಜೆಗಳಿಗೆ ಇಲ್ಲಿ ಕರೆಯುವ ಹೆಸರು 'ಬ್ಯಾಂಕ್‌ ಹಾಲಿಡೇಸ್‌' ಅಂತ. ಸೂರ್ಯನ ಬಿಸಿಲಿಗೆ ಹಪಹಪಿಸುವ ಇಲ್ಲಿನ ಜನರು ಪ್ರತಿ ವರ್ಷದ ಮೇ, ಜೂನ್‌, ಆಗಸ್ಟ್‌, ಅಕ್ಟೋಬರ್‌ ತಿಂಗಳಲ್ಲಿ ತಲಾ ಒಂದೊಂದು ದಿನವನ್ನು ರಜೆ ಅಂಥ ಘೋಷಣೆ ಮಾಡಿಬಿಟ್ಟಿದ್ದಾರೆ. ಈ ರಜೆಗಳು ಯವಾಗಲೂ ಸೋಮವಾರವಾದ್ದರಿಂದ ಜನರಿಗೆ 'ಲಾಂಗ್‌ ಹಾಲಿಡೇ' ಸೌಲಭ್ಯ. ಉಳಿದಂತೆ ಧಾರ್ಮಿಕ ಹಬ್ಬಗಳು ಇದ್ದದ್ದೇ. ಈ ದೇಶಗಳ ನಡುವಣ ವೈರುಧ್ಯ ಇಲ್ಲಿಯೂ ಉಂಟು. ಮಾರ್ಚ್‌ 17ರ ಸೇಂಟ್‌ ಪ್ಯಾಟ್ರಿಕ್‌ ದಿನಾಚರಣೆಯು ಐರ್ಲ್ಯಾಂಡಿನಲ್ಲಿ ಪ್ರಮುಖ ಹಬ್ಬವಾದರೆ ಉಳಿದ ಮೂರು ದೇಶಗಳಲ್ಲಿಲ್ಲ. ಏಪ್ರಿಲ್‌ ತಿಂಗಳಲ್ಲಿ ಇಂಗ್ಲೆಂಡಿನವರಿಗೆ ಸೇಂಟ್‌ ಜಾರ್ಜ್‌ ದಿನಾಚರಣೆ ಉಂಟು, ಉಳಿದ ದೇಶಗಳಲ್ಲಿಲ್ಲ. ಆಗಸ್ಟ್‌ ತಿಂಗಳ ರಜೆಯ ಪ್ರಯುಕ್ತ ಮೊದಲ ಸೋಮವಾರದಂದು ಸ್ಕಾಟ್ಲ್ಯಾಂಡ್‌ ಕುಣಿದಾಡುವುದು ಆದರೆ ಇಂಗ್ಲೆಂಡಿನವರು ಅದೇ ತಿಂಗಳ ಕೊನೆಯ ಸೋಮವಾರದವರೆಗೂ ಕಾಯುತ್ತಾರೆ. ಎಲ್ಲರಿಗೂ ತಿಳಿದಂತೆ ಮೇ 1ರಂದು ವಿಶ್ವ ಕಾರ್ಮಿಕರ ದಿನ. ಯುಕೆ ವಾಸಿಗಳು ಆಚರಿಸುವುದು ಮಾತ್ರ ಮೇ ಮಾಸದ ಪ್ರಥಮ ಸೋಮವಾರದಂದು!

ಅಂದ ಹಾಗೆ, ಸ್ಕಾಟ್ಲ್ಯಾಂಡ್‌ ದೇಶದಲ್ಲಿ ರಜೆ ಅಂದರೆ ರಜೆ ಆಗಲೇಬೇಕಿಲ್ಲ (The law does not give statutory rights to time off on bank holidays or to extra pay. Employees should check the position with their employer. Similarly Parents and students are advised to check with their local authority regarding the closure of schools and colleges). ಪ್ರತೀ ವರ್ಷವೂ ಅಲ್ಲಿನ ಪ್ರಾಂತೀಯ ಅಧಿಕಾರಿಗಳು ಅಧಿಕೃತಗೊಳಿಸಿದಲ್ಲಿ ಮಾತ್ರ ಅವರಿಗೆ ರಜೆ. ಪಾಪ!

ಬ್ರಿಟಿಷ್‌ ಏರ್‌ ವೇಸ್‌, ಬ್ರಿಟಿಷ್‌ ಸಮ್ಮರ್‌ ಟೈಮ್‌ , ಬ್ರಿಟಿಷ್‌ ಬ್ರಾಡ್‌ ಕಾಸ್ಟಿಂಗ್‌ ಕಾರ್ಪೊರೇಶನ್‌ (BA, BST, BBC) ಇತ್ಯಾದಿ ಪದಗಳು ಬಳಕೆಯಲ್ಲಿರುವುದರಿಂದ ಬ್ರಿಟಿಷ್‌ = ಯುಕೆ = ಓಕೆ ಆಗಿದೆ ಅಂತ ಕಾಣುತ್ತೆ. ಅದಕ್ಕೇ ಬ್ರಿಟನ್‌-ಯುಕೆ ಗೊಂದಲಗಳ ಆಗರ. ಒಟ್ಟಿನಲ್ಲಿ ಎಲ್ಲವೂ ಕಸುಮೇಲೋಗರ!

English summary
Ireland Dairy by Prakash Devendra Rao
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X