• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಶ್ರೀನಿವಾಸ ನಾಯಕ’ನೇ ಪುರಂದರದಾಸರಾದದ್ದು !

By Staff
|
(ವಿಚಿತ್ರಾನ್ನದಲ್ಲಿ ಮೃಷ್ಟಾನ್ನ ಭೋಜನ ರೂಪದಲ್ಲಿದ್ದ ‘ಪುರಂದರ ನಮನ’ ತುಂಬ ಮಂದಿಗೆ ಇಷ್ಟವಾಗಿದೆ. ಪುರಂದರದಾಸರ ಪೂರ್ವಾಶ್ರಮ ನಾಮಧೇಯವನ್ನೂ ಹೆಚ್ಚಿನವರು ಪರ್ಫೆಕ್ಟಾಗಿ (ಕೆಲವರು ಅರೆ-ಪರ್ಫೆಕ್ಟಾಗಿ) ಉತ್ತರಿಸಿದ್ದಾರೆ. ಶ್ರೀನಿವಾಸ ನಾಯಕ ಸರಿಯುತ್ತರ. ಶ್ರೀಮಂತನೂ ಜಿಪುಣಾಗ್ರೇಸರನೂ ಆದ ಶ್ರೀನಿವಾಸ ನಾಯಕನಿಗೆ ‘ನವಕೋಟಿ ನಾರಾಯಣ’ ಎಂಬ ಬಿರುದು ಇದ್ದದ್ದು ಹೌದು. ಹಾಗಾಗಿ ನವಕೋಟಿ ನಾರಾಯಣ ಉತ್ತರವನ್ನು ಸೆಕೆಂಡ್‌ ಕ್ಲಾಸ್‌ ಪಾಸ್‌ (!?) ಎಂದು ಪರಿಗಣಿಸಬಹುದೇ? ಅಂದಹಾಗೆ ದಾಸರು ಬಡಿಸಿದ ಭಕ್ಷ್ಯಭೋಜ್ಯಗಳನ್ನು ಬಹುತೇಕ ಮಂದಿ ಮನಸಾರೆ ಸವಿದಿದ್ದಾರಾದರೂ ಒಬ್ಬ ಓದುಗರು ಮಾತ್ರ, ತಿಂಡಿ-ತಿನಿಸಿನ ಉಲ್ಲೇಖದ ನೆಪದಲ್ಲಿ ದಾಸವರೇಣ್ಯರನ್ನು ತೀರಾ ಹಗುರವಾಗಿ ಟ್ರೀಟ್‌ ಮಾಡಿದಂತಾಯ್ತು ಎಂದು ಆಕ್ಷೇಪಿಸಿದ್ದಾರೆ. ಪತ್ರ ಬರೆದು ತಿಳಿಸಿದ ಎಲ್ಲ ಸ್ನೇಹಿತರಿಗೂ ಹೃತ್ಪೂರ್ವಕ ವಂದನೆಗಳು.

- ಶ್ರೀವತ್ಸ ಜೋಶಿ.)

Responses to Food items in Purandara krutigaLu...ದಾಸರನ್ನು ಬಹಳ ಸೊಗಸಾಗಿ ಚಿತ್ರಿಸಿದ್ದೀರ. ಆದರೆ ಈಗಿನ ಕಾಲದ ಡಯಟಿಂಗ್‌ಗೆ ತದ್ವಿರುದ್ಧ ! ದಾಸರು ತಮ್ಮ ಪದಗಳ ಮೂಲಕ ಗಾಯಕರುಗಳಿಗೆ ಸಹಾಯವಿತ್ತಂತೆ ಲೇಖಕರುಗಳು, ಭೋಜನ ರಸಿಕರು ಹಾಗೂ ಸಾಹಿತ್ಯ ಪ್ರೇಮಿಗಳಿಗೂ ಒಳ್ಳೇ ಇನ್‌ಗ್ರೇಡಿಯೆಂಟ್‌ ಆಗಿರುವುದು ನಿಮ್ಮ ಬರಹವೇ ಸಾಕ್ಷಿ! ದಾಸರ ಮೊದಲ ಹೆಸರು ಶ್ರೀನಿವಾಸಯ್ಯ.

ವಿಚಿತ್ರಾನ್ನ ದೋಣಿ ಸಾಗಲಿ... ಇಂತೆಯೇ ಮುಂದುವರಿಯಲಿ.

- ಅನಂತ್‌; ಮೇರಿಲ್ಯಾಂಡ್‌

*

‘ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ... ’ ದಾಸರು ಈ ಪದ ಯಾಕೆ ಬರೆದಿದ್ದರು? ಯಾಕಂದ್ರೆ ಇಷ್ಟೊಂದು ತಿಂಡಿ ತಿನಿಸು ತಿಂದರೆ ಕುಡಿಯಲು ಏನು? ಬರೀ ನೀರು! ಹಾಗೆಯೇ ತಿಂಡಿಯನೆಲ್ಲ ಮುಕ್ಕಿದವರನ್ನು ನೋಡಿಯೇ ದಾಸರು ಅಂದಿರಬೇಕು - ’ಆನೆ ಬಂತೊಂದಾನೆ, ಮರಿಯಾನೆ ... ತೊಲಗಿರಿ ತೊಲಗಿರಿ ...’

ಇನ್ನೊಂದು ವಿಷಯ. ಪುರಂದರದಾಸರು ಒಳ್ಳೆಮೆಣಸು (= ಕಾಳುಮೆಣಸು = ಪೆಪ್ಪರ್‌) ಬಗ್ಗೆ ಹೇಳಿರಬಹುದು; ಆದರೆ, ಮೆಣಸಿನಕಾಯಿ (=ಚಿಲ್ಲಿ) ಬಗ್ಗೆ ಹೇಳಿರಲು ಸಾಧ್ಯವಿಲ್ಲ. ಅದನ್ನು ಭಾರತಕ್ಕೆ ತಂದವರು ಪೋರ್ಚುಗೀಸರು.

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

*

ನೀವು ಉಣಬಡಿಸುವ ವಿಚಿತ್ರಾನ್ನ ಭೋಜನಕ್ಕಾಗಿ ಇಡೀ ವಾರ ಕಾಯುತ್ತ ಇರುತ್ತೇವೆ. ಇಂದು ಭೂರಿಭೋಜನವುಂಡೆವು. ಸಂಗೀತ ಸ್ಪರ್ಧೆಯಲ್ಲಿ ನಾವು ಹಾಡುತ್ತಿದ್ದ ಪುರಂದರ ದಾಸರ ಹಾಡುಗಳು ಮರೆತೇ ಹೋಗಿವೆ. ಎಲ್ಲವನ್ನೂ ನೆನಪಿಟ್ಟುಕೊಂಡು ನಮಗೂ ನೆನಪುಬರುವಂತೆ ಮಾಡುತ್ತೀರಲ್ಲಾ , ನಿಮಗೆ ನೂರೊಂದು ಥಾಂಕ್ಸ್‌ ! ದಾಸರ ಪೂರ್ವಾಶ್ರಮ ನಾಮ ಶ್ರೀನಿವಾಸ ನಾಯಕ.

- ರೇಣುಕಾ ಶ್ಯಾಮ್‌; ನೆವದೆಹಲಿ

*

ಜೀವನದಲ್ಲಿ ಇದುವರೆಗೆ ಎರಡು ಬಾರಿ ಮಂಡಿಗೆ ತಿಂದಿದ್ದೇನೆ. ಇಂದು ನಿಮ್ಮ ಲೇಖನ ಓದಿ ಇನ್ನೊಮ್ಮೆ ಮಂಡಿಗೆ ತಿಂದಷ್ಟು ಸಂತೋಷವಾಯಿತು. ಪಾಯಸಕ್ಕೆ ಸಕ್ಕರೆ ಬೆರೆಸಿದರೆ ಹೇಗಿರುತ್ತೊ ಹಾಗೆ ಆಯಿತು. ಮೊದಲು ಪುರಂದರದಾಸರಿಗೆ, ಆಮೇಲೆ ನಿಮಗೆ ಧನ್ಯವಾದಗಳು. ಹೀಗೆಯೇ ರುಚಿಕರವಾಗಿ ಬರಲಿ ವಿಚಿತ್ರಾನ್ನ.

- ಮಧುಸೂದನ ಪೆಜತ್ತಾಯ; ಬಾಳೆಹೊಳೆ

*

ಈ ವಾರದ ವಿಚಿತ್ರಾನ್ನದಲ್ಲಿ ಪುರಂದರದಾಸರ ಬಗ್ಗೆ ಲೇಖನ ನನಗೆ ಬಹಳ ಹಿಡಿಸಿತು. ಸಾಮಾನ್ಯ ಮನುಷ್ಯರಿಗೆ ಚೆನ್ನಾಗಿ ಅರ್ಥವಾಗುವಂತೆ ತಿಳಿಸಲು ಸರಳವಾಗಿ ಬರೆದಿರುವ ಅವರ ಹಾಡುಗಳನ್ನು ನೀವು ವಿಚಿತ್ರಾನ್ನಕ್ಕೆ ಹೊಂದುವಂತೆ ಚೆನ್ನಾಗಿ ಪೋಣಿಸಿದ್ದೀರಿ. ಇನ್ನು ಪ್ರಶ್ನೆಗುತ್ತರ - ಪುರಂದರದಾಸರ ಜನ್ಮ ನಾಮ ಶ್ರೀನಿವಾಸ ನಾಯಕ.

- ಮೀನಾ ಜೋಯಿಸ್‌; ಮೇರಿಲ್ಯಾಂಡ್‌

*

ವ್ಹಾ! ಇದು ನಿಜಕ್ಕೂ ಮೃಷ್ಠಾನ್ನ ಭೋಜನ! ಧನ್ಯವಾದಗಳು.

- ಶ್ರೀಕಾಂತ್‌ ಮಿಶ್ರಿಕೋಟಿ; ಊರು?

*

ದಾಸರ ಪದಗಳ ಸಕ್ಕರೆ-ತುಪ್ಪ

ಭಕ್ತಿಯ ನದಿಯಲಿ ತೇಲಲು ತೆಪ್ಪ,

ಜೋಶಿಯು ಬಡಿಸಲು ವಿಚಿತ್ರಾನ್ನ

ನಮಗೆಲ್ಲ ಅದುವೇ ಮೃಷ್ಟಾನ್ನ!

ನನಗೆ ನೀವು ವಿಚಿತ್ರಾನ್ನಕ್ಕೆ ಆರಿಸಿಕೊಳ್ಳುವ ವಿಷಯಗಳ ರೇಂಜ್‌ ತುಂಬಾ ಖುಷಿ ಕೊಡುತ್ತೆ. ಒಂದಕ್ಕಿಂತ ಒಂದು ಭಿನ್ನ. ಅದೇ ವಿಚಿತ್ರಾನ್ನದ ಸ್ಪೆಷಾಲಿಟಿ ಅಲ್ವೆ? ಈ ವಾರದ ವಿಚಿತ್ರಾನ್ನದ ಪ್ರಶ್ನೆಗೆ ಉತ್ತರ - ಶ್ರೀನಿವಾಸ ನಾಯಕ, ಸರಿಯೆ?

- ಸುಬ್ರಹ್ಮಣ್ಯ ನಾಗಲಾಪುರ (ಸುಬ್ಬು); ಫಿಲಡೆಲ್ಫಿಯಾ

*

ಪ್ರಶ್ನೆಗೆ ಉತ್ತರ ಗೊತ್ತಿಲ್ಲ. ಆದರೆ ಚೆನ್ನಾಗಿ ಬರೆದಿರುವ ನಿಮ್ಮ ಲೇಖನ ಓದುವ ಹೊತ್ತಿಗೆ ಬಾಯಲ್ಲಿ ನೀರೂರಿತ್ತು !

- ಪ್ರಕಾಶ್‌ ಬಿ ವಿ; ಬೆಂಗಳೂರು

*

ಸೂಪರ್‌ ಐಟಂ ಸಾರ್‌.... ಬಾಯಲ್ಲಿ ನೀರು ಊರಿಸಿಕೊಂಡೇ ಓದಿದೆ... ಸೂಪರ್‌!

- ಶ್ರೀನಿ ರಾವ್‌; ಚಿಕಾಗೊ

*

ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಲೇಖನ. ನಿಮ್ಮ ಮೃಷ್ಟಾನ್ನ ಭೋಜನ ಓದಿ ಜ್ಞಾನದ ಹಸಿವು ಜಾಸ್ತಿಯಾಗಿದೆ, ಹ್ಯಾಗೆ ತಣಿಸುತ್ತೀರಿ?

- ಅಕ್ಕಿಕಾಳು ವೆಂಕಟೇಶ್‌; ಚಿಕ್ಕಮಗಳೂರು

*

ಈ ವಿಚಿತ್ರಾನ್ನವನ್ನು ದಾಸರಿಗೆ ಡೆಡಿಕೇಟಿಸಿರುವುದು ತುಂಬಾ ಸಂತೋಷ. ಎಲ್ಲಾ ಭೋಜನಗಳ ಅರಿವಿದ್ದ ನಮ್ಮ ‘ಶ್ರೀನಿವಾಸ ನಾಯಕರಿಗೆ’ ಪಾಪ ವಿಚಿತ್ರಾನ್ನದ ಬಗ್ಗೆ ಗೊತ್ತಿರಲಿಲ್ಲವಲ್ಲ ? ಗೊತ್ತಿದ್ದರೆ ಇನ್ನೊಂದಿಷ್ಟು ಪದಗಳು ಇರುತ್ತಿದ್ದವೇನೋ!

- ರೇಖಾ ಆರ್‌; ಊರು?

*

ಇವತ್ತು ನಿಮ್ಮ ಲೇಖನ ಓದಿದೆ. ಚೆನ್ನಾಗಿದೆ. ಪುರಂದರ ದಾಸರ ಕೃತಿಗಳ ಒಳ್ಳೆ ಪರಿಚಯ ಇದೆ ನಿಮಗೆ ಅನ್ಸುತ್ತೆ. ಅಂದಹಾಗೆ ಪುರಂದರದಾಸರು ಬರೆದಿರುವ ‘ಚಿಂತೆ’ ಬಗ್ಗೆ ಒಂದು ಹಾಡಿದೆಯಲ್ಲ ಅದು ಗೊತ್ತಾ ನಿಮಗೆ? ಮನುಷ್ಯನಿಗೆ ಏನಿದ್ರೂ, ಇಲ್ದೇ ಇದ್ರೂ ಚಿಂತೆ ಅಂತ ಅದರ ಸಾರಾಂಶ. ಒಂದ್ಸಾರಿ ಪುರಂದರದಾಸರ ಆರಾಧನೆಯಲ್ಲಿ ಕೇಳಿದ ನೆನಪು. ಹಾಂ! ನಿಮ್ಮ ಪ್ರಶ್ನೆಗೆ ಉತ್ತರ ಶ್ರೀನಿವಾಸ ನಾಯಕ.

- ರಾಧಿಕಾ ಎಂ.ಜಿ; ಬೆಂಗಳೂರು

*

ಶ್ರೀನಿವಾಸ ನಾಯಕ ಎಂಬ ಉತ್ತರ ಬರೆದವರು:

- ಕೃಷ್ಣಮೂರ್ತಿ ಭಟ್‌ ಬಸ್ರೂರು; ಬೆಂಗಳೂರು

- ಭಾಸ್ಕರ ತೈಲಿಗೇರಿ; ನ್ಯೂಯಾರ್ಕ್‌

- ಶಕ್ತಿಪ್ರಸಾದ್‌; ಊರು?

- ಗುರುರಾಜ್‌ ಪೂಜಾರಿ; ಊರು?

- ವೀಣಾ ಕುಮಾರಿ; ಊರು?

ನವಕೋಟಿ ನಾರಾಯಣ ಎಂಬ ಉತ್ತರ ಬರೆದವರು:

- ಡಿ.ಎಂ ಸಾಗರ್‌; ನೆದರ್‌ಲ್ಯಾಂಡ್ಸ್‌

- ವಾಣಿ ರಾಮದಾಸ್‌; ಸಿಂಗಾಪುರ್‌

*

The real name of Purandara Daasaru was Srinivaasa Naayaka. The article is very good. I really enjoyed. Thanks for giving some food for thought for us always through Quiz and similar things. I am reading your articles regularly for a long time. I also attempted to answer your quiz earlier but never finished and sent it back to you :-( Also I have tried couple of the recipes posted by you and they are good!

- Kusuma Aralere, Centreville, Virginia

*

I am a regular reader of thatskannada.com, vichitranna is wonderful article I enjoy reading it, This weeks Daasara Padagalali Bakshyabojagallu is very intresting, Answer for tht question is Navakoti Narayana, Hope this answer is right, Vichitrannake Jai!!!

- Prathibha; Foster City, California

*

The poorvankita name of Sri Purandaradasaru was Sreenivasa Naayaka. I am very much impressed by and enjoyed your write-up in Vichitraanna this time too. Thank you very much. May God give you the strength and ability to write more.

- Shanta Murthy; Seattle, Washington

*

Thanx nimagu and sri purandara Daasarigu[aka Srinivaasa Nayaka?] What a refreshingly delicious meal you served! CHEERS

- Prakash Rajarao; Auckland, Newzealand

*

I guess the name of purandara dasa was Narayana shetty. I am sure about "shetty" (I just tried to grasp from my primary school kannada lesson). And after enjoying the write-up, I think I will prepare "paayasa" this weekend!

- Anitha Shashidhar; Sydney, Australia

*

Iam a regular reader of your Column. This weeks article was very good I enjoyed reading it. Former name of Purandara Dasa was Srinivasa Naik.

- Satish Sagar; Bangalore

*

Answer to your question of Purandara Dasas POOR(VASHRAMA)NAME. It is NAVAKOTI NARAYANA.

If you ask ARALU MALLIGE PARTHASARATHY (who is doing a research in dasa-sahitya) I believe he was more richer than todays billgates or ... I dont know how he calculated, since he is a professor with so many degrees I cant question him ;)

- Srivatsa (Yes, my name is also Srivatsa); Bangalore

*

We enjoyed your dasas tindi- tinisugalu. Srinivasa Nayaka is the answer for your question.

-the bellaves; Australia

*

I enjoyed Bhojana very much! ( I read it on Friday our weekly holiday here in Jordan). Hotte tumbitu! Keep sending such stuff, its really different and enjoyable.

- Dinesh Mehendale; Jordan

*

Vichitranna on Shri.Purandara Dasa is superb. I really enjoyed. The answer is "Shrinivasa Naayaka"

- K Radha; Bangalore

*

The answer to your recent question( the maiden name of purandara dasa) is Srinivasa nayaka. I ran into your website recently. I liked your vichitranna, especially the brain teasers. Its been over two years since I left India and I still miss my favorite kannada magazines- Taranga and Mayura. Now Thatskannada.com proved to be a very good substitute. I was pleasantly surprised to browse thatskannada.com; on the other hand I was also sad because I had been missing all this fun for two years! Keep up your good work.

- Rohini; USA.

*

I read your article. Ooooooooooo!! It was a mouth watering one! Excellent. Even though I decided to read it with the intended meaning what Dasaru thought about, I could not control relishing the dishes all the way! In these days of Pizza, burger, coke and Pepsi, this should have relished quite a lot of souls and people who stay out of their home would have cursed you for reminding them such delicious items.

I am fortunate for the fact that all these dishes are made at my home by my mother and my aunts even today! We keep enjoying the dishes. Be it Athirasa, Appa, Huggi, Holige, etc….

Thanks again for taking us through these wonderful dishes and some of the real memorable lines from Dasa Sahithya. Coming to the answer to your question, his name was naranappa. He was known as Navakoti Narayana.

- Ramesh GururajRao; Bangalore

*

I read the articles in your website quite often. Today I read the article about Purandara Dasaru in vichitranna.

It is good that you have mentioned about so many songs of Purandara Dasaru. But I didnt like the way the article was written. It is written in a way to entertain people. Purandara Dasaru is such a great devotee of Lord Sri Krishna. He is written those songs for common people to understand how should we think of Krishna in daily life. How to remember Krishna always. His songs shows the nectar of devotional service to Krishna. How one can become purified by becoming a devotee. And one more thing is, Krishna should not be considered as a comman man. He is the supreme Personality of GodHead. The article is written in a very entertaining way considering Krishna very lightly. People may enjoy the article taking it in a mood of fun. Instead of that you could have written how Purandara Dasaru has explained the devotion to Lord Krishna in such a wonderful way so that even comman man can understand how he/she can relish the taste of Bhakti to Lord Sri Krishna. He has explained in his songs, the loving service to Krishna is sweeter than all the sweet dishes you can make.

Please exuse me if I have offended you by writing this reply. But I really appreciate, if you could write an article about Purandara Dasaru in a devotional way. Especially younger generation in the west need more details of devotional service. More details about great devotees in India. It really helps them a lot.

- Meenkshi Shekar; city?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more