ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುರುಮುರಿ... ನೆನಪು ನಲಿದವು ಗರಿಕೆದರಿ...

By Staff
|
Google Oneindia Kannada News
Mandakki yane Churumuriಮಂಡಕ್ಕಿ ಮಹಾತ್ಮೆ ಸಂಚಿಕೆಗೆ ಬಂದ ಪ್ರತಿಕ್ರಿಯೆಗಳು ಇಲ್ಲಿ-ವೆ. ಮೂಲ ಲೇಖನದಲ್ಲಿ ಮಂಡಕ್ಕಿಯ ಪ್ರಾದೇಶಿಕ ಸೊಗಡಿನ ಅಲ್ಪಸ್ವಲ್ಪ ಪರಿಚಯ ಮಾಡಿಕೊಟ್ಟದ್ದಕ್ಕೆ ಪೂರಕವಾಗಿ ಓದುಗರು ಮಂಡಕ್ಕಿ ಮಂಥನದ ಮೂಲಕ ‘ಕರ್ನಾಟಕ ದರ್ಶನ’ವನ್ನೇ ಮಾಡಿಸಿದ್ದಾರೆ! ಪತ್ರ ಬರೆಯುವ ವಿಚಿತ್ರಾನ್ನ ಅಭಿಮಾನಿಗಳಿಗೆಲ್ಲ ವಿಶೇಷ ಕೃತಜ್ಞತೆಗಳು
- ಶ್ರೀವತ್ಸ ಜೋಶಿ.

ನನ್ನ ಫೇವರಿಟ್‌ ತಿಂಡಿ ಮಂಡಕ್ಕಿಯನ್ನು ವಿಚಿತ್ರಾನ್ನದಲ್ಲಿ ಬಡಿಸಿದ್ದಕ್ಕೆ ಖುಶಿಯಾಯ್ತು. ಮಂಡಕ್ಕಿ ಹೊಟ್ಟೆ ತುಂಬೊ ಪದಾರ್ಥ ಅಲ್ಲ ಅಲ್ವಾ, ಅದಕ್ಕೇ ರಾಜಮರ್ಯಾದೆ ಸಿಕ್ಕಿಲ್ಲ. ಆದರೆ ಬಾಯಿ ಚಪಲದ ಪದಾರ್ಥ ಇದ್ರಲ್ಲಿ ತಯಾರಾಗೊದ್ರಿಂದ ಮನಸ್ಸಿನಲ್ಲಿ ಮಹತ್ವದ ಸ್ಥಾನ ಇದಕ್ಕೆ ರಿಸರ್ವ್‌ ಅಗಿದೆ. ನೀವು ಮಂಡಕ್ಕಿ ಅಂದ ಕೂಡ್ಲೆ ಒಂದೇ ಏಟಿಗೆ ಓದಿ ಮುಗಿಸಿದೆ. ನೀವು ಮಂಗಳೂರಿನ ಕುರ್ಲು ಪಚ್ಚಡಿ ಅಂತ ಹೇಳಿದ್ದನ್ನು ನಾವು ಶಿವಮೊಗ್ಗದಲ್ಲಿ ‘ಮಸಾಲಾ ಮಂಡಕ್ಕಿ’ ಅಂತ ಕರಿತೀವಿ. ನಮ್ಮೂರಿನ ಆಂಜನೇಯ ದೇವಸ್ಥಾನ ಎದ್ರಿಗೆ ಇರೊ ರಾಗು ಅಂಗಡಿಲಿ ಸಿಗೊ ಮಂಡಕ್ಕಿ ಗಮ್ಮತ್ತೇ ಬೇರೆ. ಎಷ್ಟು ವೆರೈಟಿ ಅದ್ರಲ್ಲಿ ಗೊತ್ತಾ ! ಜನ ಅಲ್ಲಿ ಕ್ಯೂ ನಿಂತು ಮಂಡಕ್ಕಿ ತಿಂದು ಬರ್ತಾರೆ. ಅಯ್ಯಾ ತುಂಬ ದಿನ ಆಯ್ತು ಮಸಾಲಾ ಮಂಡಕ್ಕಿ ತಿಂದು, ಒಂದ್ಸರ್ತಿ ಊರಿಗೆ ಹೋಗ್ಬೇಕು ಅಂದುಕೊಳ್ಳೊಷ್ಟು ಸವಿಯಾಗಿರುತ್ತೆ ನಮ್ಮೂರ ಮಂಡಕ್ಕಿ.

ಮಂಡಕ್ಕಿ ನನ್ನ ಓದಿನ ದಿನಗಳ ಸಂಗಾತಿ ಅಂದ್ರೆ ತಪ್ಪಲ್ಲ. ನಮ್ಮಮ್ಮ ಒಗ್ಗರಣೆ ಹಾಕಿಟ್ಟಿರುತ್ತಿದ್ದ ಮಂಡಕ್ಕೀನ, ಓದ್ಕೊಬೇಕಾದ್ರೆ ಬಾಯಾಡಿಸ್ತಾ ಇದ್ರೇನೆ ಓದಿದ್ದು ತಲೆಗೆ ಹತ್ತುತ್ತಿತ್ತು ನನ್ಗೆ. ಸಂಜೆ ಹೊತ್ತು ಹೊಟ್ಟೆ ಚುರುಗುಟ್ಟಿದ್ರೆ, ಮಂಡಕ್ಕಿಗೆ ಮಜ್ಜಿಗೆ ಹಾಕಿಕೊಂಡು ತಿಂದು ನೋಡಿ. ವಾಹ್‌! ಎಷ್ಟು ತಂಪಾಗಿರುತ್ತೆ ಅಂತೀರಾ!

ಮಂಡಕ್ಕಿನ ಬೆಳಗಿನ/ಸಂಜೆಯ ತಿಂಡಿಗೂ ಮಾಡ್ತಾರೆ ಕೆಲವೊಮ್ಮೆ. ಅದು ಹೀಗೆ: ಮಂಡಕ್ಕಿಯನ್ನು ನೀರಲ್ಲಿ ಒಂದು ಸರ್ತಿ ಅದ್ದಿ ತೆಗೆದಿಟ್ಟುಕೊಳ್ಳಿ. ತೆಂಗಿನಕಾಯಿ ತುರಿದದ್ದು, ಹಸಿಮೆಣಸಿನ ಕಾಯಿ 2-3, ಕೊತ್ತಂಬರಿ ಸೊಪ್ಪು ಸ್ವಲ್ಪ, ಜೀರಿಗೆ 1/2 ಸ್ಪೂನ್‌ ಎಲ್ಲ ಸೇರಿಸಿ ರುಬ್ಬಿಕೊಳ್ಳಿ. ಸ್ವಲ್ಪ ಎಣ್ಣೆ ಇಟ್ಟು ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಇಂಗು ಒಗ್ಗರಣೆ ಮಾಡಿಕೊಂಡು ಮೇಲಿನ ಮಿಶ್ರಣವನ್ನು ಅದಕ್ಕೆ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಇದಕ್ಕೆ ನೆನೆಸಿದ್ದ ಮಂಡಕ್ಕೀನ ಮಿಕ್ಸ್‌ ಮಾಡಿ. ರುಚಿರುಚಿಯಾಗಿ ಇರುತ್ತೆ.

ಹೌದು ಜೋಶಿಯವರೆ, ಮಂಡಕ್ಕಿ ಹೇಗೆ ಮಾಡ್ತಾರೆ (ಅಕ್ಕಿಯಿದ್ದದ್ದು ಮಂಡಕ್ಕಿ ಹೇಗಾಗ್ತದೆ) ಅಂತ ನೀವು ತಿಳಿಸಿದ್ರೆ ಚೆನ್ನಾಗಿರ್ತಿತ್ತು.

ಆಗಿರಲಿ ರಾಜ ಅರಳು-ಅಕ್ಕಿ
ಕಡಿಮೆ ಏನಲ್ಲ ನಮ್ಮ ಮಂಡಕ್ಕಿ
ಅಮ್ಮ ಮಾಡೊ ಒಗ್ಗರಣೆ ಮಂಡಕ್ಕಿ
ರಾಗುವಿನ ಕೈಚಳಕದ ಮಸಾಲಾ ಮಂಡಕ್ಕಿ
ಜೋಶಿಯವರ ವಿಚಿತ್ರಾನ್ನದಲ್ಲೂ ಮಂಡಕ್ಕಿ
ಇದೆಲ್ಲ ನನ್ನ ಒಂದೇ ಜನ್ಮದಲ್ಲಿ ಸಿಕ್ಕಿ
ಓಹೊ ಆಹಾ ನಾನೇ ಲಕ್ಕಿ ಲಕ್ಕಿ ಲಕ್ಕಿ!!

ಹೌದಲ್ವೇ ಜೋಶಿಯವರೆ :-)

- ಅನುರಾಧಾ ಆರ್‌ ಕೆ ; ಬೆಂಗಳೂರು.

* * *

ರಾಯಚೂರಿನ ಮಂಡಾಳ ವಗ್ಗರ್ಣಿ (ಬೆಳ್ಳುಳ್ಳಿ ವಗ್ಗರ್ಣಿ) + ಮೆಣಸಿನ ಪುಗ್ಗಿ ( = ಮಿರ್ಚಿ ಭಜಿ )+ ಕಡಕ್‌ ಚಾಯ್‌. ಇದು ರುಚಿಬಲ್ಲ ಮನುಜನ ಜೀವನದ ಅವಿಭಾಜ್ಯ ಅಂಗ.

ಅಂದಹಾಗೆ, ಮಂಗಳೂರಿನ ಬಾವುಟಗುಡ್ಡೆಯ ಮಂಡಕ್ಕಿ ಉಪ್ಕರಿ ಯಾನೆ ಚುರ್ಮುರಿಗೆ ಎಳೇ ಮಾವಿನ ಕಾಯಿ (ಸೀಜನ್‌ನಲ್ಲಿ ಮಾತ್ರ) ಲೇಸಾಗಿ ‘ಲೇಸ್‌’ ಮಾಡಿಕೊಡುತ್ತಾನೆ. ಇದನ್ನು ತಿಂದು ಒಂದು ಲೋಟ ಕಬ್ಬಿನಹಾಲು ಕುಡಿದರೆ ಮಂಗಳೂರೇ ಸ್ವರ್ಗ! ನೀವೇನಂತೀರಿ ? ಬೆಂಗಳೂರಲ್ಲಿ ಕೂಡಾ ಇದೆ. ವಿಧಾನ ಸೌಧದ ಮುಂದೆ - ಕ್ಯಾರೆಟ್‌ ಮತ್ತು ಸೌತೆಕಾಯಿ ಬೆರಸಿದ ಮಂಡಕ್ಕಿ! ಬನ್ನಿ ಒಮ್ಮೆ ರುಚಿ ನೋಡಿ.

- ಮಧುಸೂದನ ಪೆಜತ್ತಾಯ; ಬೆಂಗಳೂರು

* * *

ಭೇಷ್‌ ಸ್ವಾಮಿ ಭೇಷ್‌. ಸೂಪರ್‌ ಲೇಖನ ಮಂಡಕ್ಕಿ ಬಗ್ಗೆ ಲೇಖನ. ಮಾರಾಯ್ರೇ, ಎಂತಾ ಒಳ್ಳೇ ವಿಷಯದ ಬಗ್ಗೆ ಬರೆದಿದ್ದೀರಿ! ಇವತ್ತು ಸಂಜೆ ‘ಮಾಮ್ರ’(ಇಲ್ಲಿನ ಗುಜರಾತಿ ಸ್ಟೋರ್‌ನಲ್ಲಿ ಸಿಗುವ ಮಂಡಕ್ಕಿ)+ ಹುರಿದ ಕಡಲೇಕಾಯಿ+ ಉಪ್ಪು+ ಅಚ್ಚ ಖಾರದ ಪುಡಿ+ ಕರೀಬೇವು ಗ್ಯಾರಂಟೀ. ನೀವು ಕೂಡ ನಮ್ಮೊಂದಿಗಿದ್ದರೆ ಎಂಥಾ ಮಜಾ!!

ಇನ್ನೊಂದು ವಿಷಯ ನಿಮ್ಮ ಹತ್ರ ಹೇಳಿಕೊಳ್ತಿನಿ.....(ನಂಬಿ ಅಥವಾ ಬಿಡಿ) ನಾನು ಸುಮಾರು 26 ವರ್ಷ ‘ಕಡ್ಲೇಪುರಿ’ ನೋಡಿದ್ನೇ ಹೊರತು ತಿಂದಿರಲಿಲ್ಲ ! ಯಾಕೇಂದ್ರೆ ನಮ್ಮೆನೇಲಿ ತುಂಬಾ ‘ಮಡಿ’! ಕಡ್ಲೆಪುರಿ ತರ್ತಾ ಇರಲಿಲ್ಲ. ಗೃಹಸ್ಥನಾದ ಮೇಲೆ ‘ನನ್ನ ಹೊಸ್ಯಾಕೆ’ (ಆಗ) ನೋಡಲು ಕಡೂರಿಗೆ ಹೋದಾಗ ತಿಂದಿದ್ದು. ಹ ಹ್ಹಾ!

- ಶ್ರೀನಿ ರಾವ್‌; ಚಿಕಾಗೊ

* * *

ನಿಮ್ಮ ಲೇಖನ ಓದಿ ಈಗಲೇ ಮಂಡಕ್ಕಿ ತಿನ್ನಬೇಕೆನಿಸುತ್ತಿದೆ. ನಾನು ಧಾರವಾಡ ಗಿರ್ಮಿಟ್‌ ತಿಂದು ಈಗ ಅಮೆರಿಕದ ಬಾಸ್ಟನ್‌ ನಗರದಲ್ಲಿ ಮಂಡಕ್ಕಿಗಾಗಿ ಹುಡುಕುವಂತೆ ಮಾಡಿದ್ದೀರಾ. ತುಂಬ ಚೆನ್ನಾಗಿತ್ತು.

ಅಂದಹಾಗೆ ನನ್ನ ಊರು ಗಂಗಾವತಿ (ಕೊಪ್ಪಳ ಜಿಲ್ಲೆ), ಧಾರವಾಡದ ಕಿಟ್ಟೆಲ್‌ ಕಾಲೇಜಲ್ಲಿ ಓದಿದ್ದು. ಅಲ್ಲಿ ನಮ್ಮ ಹಾಸ್ಟೆಲ್‌ ಎದುರಿಗೇ ಒಂದು ಗಿರ್ಮಿಟ್‌ ಶಾಪ್‌ ಇತ್ತು. ಇಲ್ಲಿ ಕುಳಿತಲ್ಲಿಂದಲೇ ಅದರ ನೆನಪಾಯಿತು! ಧನ್ಯವಾದಗಳು.

- ಬಸವರಾಜ ಮುದೆನುರ್‌; ಬಾಸ್ಟನ್‌

* * *

ಮಂಡಕ್ಕಿ ಪುರಾಣ ಇಷ್ಟ ಆಯ್ತು. ಖಾರ-ಮಂಡಕ್ಕಿ ನೆನಪಿಸಿಕೊಂಡಾಗ ನನ್ನ ಬಾಯಲ್ಲಿ ನೀರು ಬಂತು! ಮಂಡಕ್ಕಿ ಬಗ್ಗೆ ನನಗೆ ತಿಳಿದಿರುವ ಇನ್ನೂ ಕೆಲವು ವಿಚಾರಗಳೆಂದರೆ:

  • ಮಂಡಕ್ಕಿ = ಪುರಿ (ಕಲ್ಲೆ-ಪುರಿ). ತುಮಕೂರು, ಬೆಂಗಳೂರು ಕಡೆ ಇದನ್ನು ಬಳಸುತ್ತಾರೆ.
  • ಭಡಂಗ್‌ ಅನ್ನೋ ತಿಂಡಿ (ಮಂಡಕ್ಕೀದು) ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಾರೀ ಫೇಮಸ್‌.
  • ಶವಯಾತ್ರೆಯಲ್ಲಿ ಮಂಡಕ್ಕಿಯನ್ನೂ ಶವದ ಮೇಲೆ ಹಾಕುತ್ತಾರೆ! ಯಾಕಿರಬಹುದು? (ಬೆಂಗಳೂರಿನ ಹರಿಶ್ಚಂದ್ರ ಘಾಟ್‌ ರಸ್ತೆಯಲ್ಲಿ ಕೆಲವೊಮ್ಮೆ ಗಮನಿಸಿದ್ದೇನೆ!)
  • ಚಿಕ್ಕವರಿದ್ದಾಗ ಮಂಡಕ್ಕಿಯನ್ನು ಕೋರೆ ಹಲ್ಲಿನ ಥರ ಬಾಯಲ್ಲಿ ಸಿಕ್ಕಿಸಿಕೊಂಡು ರಾಕ್ಷಸ ಆಟ ಆಡಿದ್ದು ನೆನಪಿದೆ!
ಅದೇನೆ ಇರಲಿ. ನಿಮ್‌ ಆರ್ಟಿಕಲ್ಸ್‌ ಯಾವಾಗ್ಲೂ ಮಜಾ ಕೊಡುತ್ವೆ, ಮತ್ತೆ ಕೆಲವೊಮ್ಮೆ ಬಾಲ್ಯದ ನೆನಪು ಮಾಡುತ್ತೆ.

- ಯಶವಂತ್‌ ; ಹೈದರಾಬಾದ್‌ (ಮೂಲ: ಬೆಂಗಳೂರು)

* * *

ವಿಚಿತ್ರಾನ್ನದಲ್ಲಿ ಮಂಡಕ್ಕಿ ಬಗ್ಗೆ ಓದಿದೆ. ಇನ್ನೊಂದು ಬಗೆಯ ಪುರಿ (ಅವಲಕ್ಕಿ ಪುರಿ)ಯಲ್ಲಿ ನಾವು ಸಿಹಿ, ಖಾರ ಮಾಡುತ್ತೇವೆ. ಶುಭಕಾರ್ಯಗಳಲ್ಲಿ ಅವಲಕ್ಕಿಪುರಿ ಉಂಡೆ ಮಾಡಿ ಬಾಗಿನ ಹಾಕುತ್ತೇವೆ. ಅಕ್ಕಿಯಷ್ಟೇ ರಾಜಮರ್ಯಾದೆ ಅವಲಕ್ಕಿ ಪುರಿಗೂ ಇದೆ. ಆದರೆ, ಮಂಡಕ್ಕಿ ಚುರ್ಮುರಿ, ಖಾರದ ಕಡ್ಲೆಪುರಿ ಎಲ್ಲ ಬೇಗ ಮಾಡಿ ತಿನ್ನ ಬಹುದು. ಯಾವಾಗಲೂ ಮನೆಯಲ್ಲಿ ಸ್ಟಾಕ್‌ ಇರುತ್ತದೆ. ಅಕಸ್ಮಾತ್‌ ಯಾರಾದರೂ ಬಂದಾಗ ದಿಢೀರನೆ ಕಾಫಿ ಅಥವಾ ಟೀ ಮಾಡಿ, ಜೊತೆಗೆ ಖಾರದ ಮಂಡಕ್ಕಿ ಕೊಡಬಹುದು.

ನಮ್ಮ ಕಾಲೇಜು ದಿನಗಳಲ್ಲಿ (ಹೋಮ್‌ ಸೈನ್ಸ್‌ ಕಾಲೇಜು, ಗಾಂಧಿನಗರ) ನಾವು ಬೆಂಗಳೂರಿನ ಮೈಸೂರ್‌ಬ್ಯಾಂಕ್‌ ಸರ್ಕಲ್‌ನಲ್ಲಿ ಶನಿ-ಭಾನುವಾರಗಳಂದು ಭೇಲ್‌ಪುರಿ ರುಚಿ ನೋಡ್ತಾ ಇದ್ವಿ. ನಿಮ್ಮ ವಿಚಿತ್ರಾನ್ನ ಓದಿ ನನಗೆ ಆ ದಿನಗಳ ನೆನಪಾಯಿತು.

- ಗಾಯಿತ್ರಿ ಶೇಷಾಚಲ; ಲಾಸ್‌ ಏಂಜಲೀಸ್‌

* * *

ಇದನ್ನು ಓದಿದ ಮೇಲೆ. ಭೇಲ್‌ ಪುರಿ ತಿನ್ನಲೇ ಬೇಕಾಗಿದೆ! ಒಳ್ಳೆಯ -ಲೇಖನ.

- ಕೆ.ಎಸ್‌ ನವೀನ್‌; ಬೆಂಗಳೂರು

* * *

ವಿಚಿತ್ರಾನ್ನದ ನಳಪಾಕದಿಂದ ನೀವು ಬಹುಜನ ಪ್ರಿಯರೆಂದು ತಿಳಿದಿತ್ತು , ಈಗ ಭೋಜನ ಪ್ರಿಯರೂ ಎಂದು ಖಾತ್ರಿಯಾಯಿತು. ಮಂಡಕ್ಕಿಯ ನಿಮ್ಮ ಲೇಖನ ಬಾಯಲ್ಲಿ ನೀರೂರಿಸಿತು. ಚಿಕ್ಕಂದಿನಲ್ಲಿ (1970-72ರಲ್ಲಿ) ನಾನು ದಾವಣಗೆರೆಯಲ್ಲಿದ್ದೆ. ಅಲ್ಲಿ ತಿಂದಿದ್ದ ಮಂಡಕ್ಕಿ ಉಸಲಿ, ಮೆಣಸಿನಕಾಯಿ ಭಜಿ ತಿನ್ನಲು ಮತ್ತೆ ನಾನು ದಾವಣಗೆರೆಗೆ ಹೋಗಬೇಕಾಗುವುದೇನೋ?

ವಿಶ್ವಾಸದೊಂದಿಗೆ,

- ವಾಣಿ; ಸಿಂಗಾಪೂರ್‌

* * *

ಈ ಸಲದ ವಿಚಿತ್ರಾನ್ನದಲ್ಲಿ ‘ಮಂಡಕ್ಕಿ’ ವಿಷಯ ತುಂಬಾ ಇಂಟೆರೆಸ್ಟಿಂಗ್‌ ಆಗಿತ್ತು. ಕಳೆದ ವಾರವಷ್ಟೆ ನನಗೆ ಸಡನ್ನಾಗಿ ‘ಮಂಡಾಳ ವಗ್ಗರಣೆ’ ನೆನಪಾಗಿತ್ತು. ಇಲ್ಲಿನ ಇಂಡಿಯನ್‌ ಸ್ಟೋರ್ಸ್‌ನಲ್ಲಿ ಹುಡುಕಿ, ಮಂಡಕ್ಕಿ ತಂದು ನನ್ನ ಅಲ್ಪಸ್ವಲ್ಪ ಪಾಕಕೌಶಲ್ಯವನ್ನು ಪಯೋಗಿಸಿ ನಾನೇ ತಯಾರಿಸಿಕೊಂಡೆ. ಆ ದಿನವಿಡೀ ನನಗದೇ ಆಹಾರ ಎಂದು ಬೇರೆ ಹೇಳಬೇಕಿಲ್ಲವಷ್ಟೆ ! ರಾಯಚೂರ ಕಡೆ ಇದನ್ನ ‘ಮಂಡಾಳ’ ಅಂತಿವಿ. ‘ಮಂಡಾಳ ವಗ್ಗರಣೆ’ ನನ್ನ ಫೇವರಿಟ್‌ಗಳಲ್ಲೊಂದು. ಇದನ್ನು ಬಿಜಾಪುರ ಕಡೆಗೆ ಸೂಸಲಾ ಅಂತಾರೆ.

ಧಾರವಾಡದ ಗಿರ್ಮಿಟ್‌ ವಿಥ್‌ ಬಿಸಿ ಬಿಸಿ ಮಿರ್ಚಿ ಬಗ್ಗೆ ಓದುತ್ತಿದ್ದಂತೆ ಮತ್ತೆ ಕಾಲೇಜು ದಿನಗಳು ನೆನಪಾದುವು :-)

ಅಂದಹಾಗೆ ನೀವೂ ಮಂಡಾಳ ವಗ್ಗರ್ಣೆ ಮಾಡಿದ್ರೆ ನನ್ನನ್ನು ಕರೆಯಲು ಮರೆಯಬೇಡಿ!

- ಜಯಕುಮಾರ್‌; ಲೂಯಿವಿಲ್‌, ಕೆಂಟಕಿ

***

ವಿಚಿತ್ರಾನ್ನದಲ್ಲಿ ಮಂಡಕ್ಕಿ ಬಗ್ಗೆ ಓದಿ ಕೆಲವು ಸಾಲುಗಳನ್ನು ಬರಿಯಬೇಕೆನಿಸಿತು.

ಗರಿ ಗರಿ ಮಂಡಕ್ಕಿ
ಕುರು ಕುರು ಮಂಡಕ್ಕಿ

ಕರಿದ ಮಂಡಕ್ಕಿ
ಬೇಯಿಸಿದ ಮಂಡಕ್ಕಿ
ಏನೇ ಮಾಡಿದ್ರೂ ಬಲುರುಚಿ ಮಂಡಕ್ಕಿ

ಬಾಯಲಿಟ್ಟರೆ ಕರಗುವುದು
ನೋಡಿದ್ರೆ ತಿನ್ನಬೇಕೆನಿಸುವುದು
ಯಾವುದೇ ರೂಪದಲ್ಲಿ ಬಲುರುಚಿ ಮಂಡಕ್ಕಿ!

- ಸ್ಮಿತಾ; ಬೆಂಗಳೂರು

***

English Section

I was happy to see Dharwads name on Vichitranna.

- Surekha A; New Jersey

* * *

Today after reading your Vichitranna-79, my mind definitely went back to those days when I used to visit my Doddammas house during Dasara holidays when I was a kid. Being born and brought up in Bangalore, almost every Dasara holidays my mother and I used to visit my doddamma who lived and still lives in Mysore. Her only daughter and me are very close cousins and in each and every visit, we definitely planned to go near Dodda gadiara in mysore and eat Churmuri from one of those cart vendors. In one of my very short stays, our parents objected us to go that far to eat Churmuri, so that evening me and my cousin said we will go to the library to return the books and my cousin took me to the nearby churmuri gadi and thus we did not miss our favourite churmuri.

In my recent visit to India, I made it a point to go to my favourite place near Dodda Gadiara and enjoyed churmuri. But my cousin now married, living in Bangalore, always says that she misses mysore a lot for many reasons including our favourite Churmuri

- Rashmi Gopalakrishna; Virginia

* * *

I am from Dharwad, and your article really made me nostalgic about the girmitt and churamuri - chaha breakfast. Feel like eating them here too....

Aadre illi churamurige mugga vasani irtadri!!! (You should have included this in the article :-))

Thanks,

- Rashmi Kulkarni; USA

* * *

Your Mundakki article definitely reminds me of the good days we had in last years camping. We should plan it again this year in summer i.e. before we go to India. I cannot wait. Thanks for the nice reminder. Your article is really good.

- Shalini Srinagesh; Germantown, Maryland

* * *

The article is very nice! A surprise for us by mentioning our name in it! Your vichitraanna section is becoming more and more popular. Good Luck.

- Meena & Sanjay Rao; Herndon, Virginia

* * *

Thanks for reminding us the NICE moments we shared at our summer camping last year. It was wonderful experience. We all enjoyed it very much. Still remember our long walk, taking shower in the water falls and coming back totally exhausted.

It was GOOD fun!

- Harish Hiremath; Frederick, Maryland

* * *

You wont believe this. I made one bag full of Mandakki yesterday! I mixed groundnut, kadale, red pepper, garlic, chillie powder, turmeric and salt. It came out very nice. For the last one month this is my third attempt. This is a low calorie snack that is not fried and is very tasty. It is way better than chips and other high calorie snacks from the store. It will be fresh if you make it.

- Suresh Ramachandra; Maryland

* * *

I read the article in thatsKannada.com and would like to thank you for the same. Sorry, I have not yet introduced myself. My name is Vishwas and I belong to Hubli. I have been working for ETV for the last 4 years, in Hyderabad, and have been to Hubli only twice.

I used to enjoy GIRMITT with my friends then, but am missing them since. GIRMITT is one of my favorites, and I used to enjoy it a lot. When I read about GIRMITT, my mouth started watering and I couldnot help it. For a moment I was back with my friends on Nrupatunga Betta in Hubli.

I thank you once again for reminding me about GIRMITT. It really is a favorite to all the people who stay, used to stay or had been to HUBLI-DHARWAR in the past. I have many friends, who keep on talking about HUBLI-DHARWAR and specially about GIRMITT and Pedha, here in Hyderabad.

I have a lot of memories back home with friends who keep on calling me but every time I used to say that I am busy. But the very next time I get a chance to go to Hubli I will take a long leave and enjoy GIRMITT with my friends back on Nrupatunga Betta, and would like to meet you in personal too. Thank you once again for reminding us about our city.

- Vishwas; Hyderabad

* * *

My mouth is watering now. I am going straight to Subzi Mandi, to pick up a packet and prepare at home. Lemon, tomato, onions, uppu, khara everything is there. If you mix kadle and coconut pieces it tastes great too.

I was a big churumuri fan, had it daily with friends, I think every town has one famous person who can make churumuri perfect.

- Roshan Shetty; New Jersey

ಮಂಡಕ್ಕಿ, ಚುರುಮುರಿ, ಕುರ್ಲರಿ... ಬಾಯಲ್ಲಿ ನೀರೂರಿ!


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X