• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಪಿಂಗ್‌ ಕಾರ್ಟ್‌, ಈ ಪರಿ, ರಿಸೊಲ್ಯೂಷನ್ಸ್‌, ದಶಾವತಾರ - ಸಂಚಿಕೆಗಳಿಗೆ ಬಂದ ಪ್ರತಿಕ್ರಿಯೆಗಳು. ಪತ್ರ ಬರೆಯುವ ವಿಚಿತ್ರಾನ್ನ ಅಭಿಮಾನಿಗಳಿಗೆಲ್ಲ ವಿಶೇಷ ಕೃತಜ್ಞತೆಗಳು.

By Staff
|

ಈ-ಪರಿಯ ಸೊಬಗಾವ ‘ಕಾಲಮ್ಮು’ ‘ಕಲಮ್‌’ಲಿ ಕಾಣೆ

ಚಾಣಾಕ್ಷ ಪದವಿನೋದದ ‘ವಿಚಿತ್ರಾನ್ನ’ದಲಿ ಅಲ್ಲದೆ

ಮನಮೋಹಕ ರಾಗ ಮೋಹನಾಲಾಪವು ಬೇಕೆ

ಲಾಂಛನ ಜ್ಞಾನವ ಪಡೆದು ಸುರ್ನೋಳಿ ಮೆಲಬೇಕೆ

ಅಗೋಳಿ ಮಂಜಣ್ಣ ಬಿರುಕು ಮಡಕೆ ಕಥೆ ಬೇಕೆ

ಆನಂದಬಾಷ್ಪವನೆ ಸುರಿಸುವ ಪರಿ ಬೇಕೆ

‘ಕಂಠಲಂಗೋಟಿ’ಯನು ಕುರಿತು ಮಾಹಿತಿ ಬೇಕೆ

ಗಾದೆ-ತಗಾದೆಗಳ ಓದುತ್ತ ನಗಬೇಕೆ

ಚಂದದ ಛಂದಸ್ಸಿನ ಷಟ್ಪದಿಗಳು ಬೇಕೆ

ರಾಮನಾಮ ಪಾಯಸದ ಗೋಡಂಬಿ ದ್ರಾಕ್ಷಿ ಬೇಕೆ

- ಸಂಧ್ಯಾ ರವೀಂದ್ರನಾಥ್‌; ಕ್ಯಾಲಿಫೋರ್ನಿಯಾ

*

‘ಈ ಪರಿಯ ಸಂಬಳವನಾವ ವೃತ್ತಿಯಲಿ ನಾ ಕಾಣೆ... ಐ.ಟಿ/ಬಿ.ಟಿ ಯಲ್ಲದೆ...’

‘ಈ ಪರಿಯ ಮಾನಸಿಕಹಿಂಸೆಯನಾವ ವೃತ್ತಿಯಲಿ ನಾ ಕಾಣೆ... ಐ.ಟಿ/ಬಿ.ಟಿ ಯಲ್ಲದೆ...’

‘ಈ ಪರಿಯ ಸುರಕ್ಷತೆಯ ಅನುಭವವ ನಾ ಕಾಣೆ ಅಮ್ಮನ ಅಪ್ಪುಗೆಯಲಲ್ಲದೆ...’

- ವಸಂತ ಕುಮಾರ್‌ ವಿ; ವಿಪ್ರೋ, ಬೆಂಗಳೂರು.

*

‘ಈ ಪರಿಯ ಭಕ್ತಿ ಬೇರಾರಲ್ಲೂ ನಾ ಕಾಣೆ ಪಾಂಡುರಂಗ ಪ್ರಿಯ ಭಕ್ತ ಕುಂಬಾರಗಲ್ಲದೆ...’

- ಚಂದ್ರಪ್ರಭಾ ತಮ್ಮಯ್ಯ; ಮೇರಿಲ್ಯಾಂಡ್‌

*

ಈ ಜಗಕೆ ಸದಾ ಹೊಸತು ಕಾಣುವ ತವಕ

ಈ-ಮಯವಾಗಿರುವ ಈ ಮಾಯ ಲೋಕ!

ಈ ಜನರ ಮೆದುಳೊಳಗೆ ಈ ಹುಳ ಹೊಕ್ಕು

ಈ ಬುದ್ಧಿಗೆ ಇಲ್ಲಿ ಹಿಡಿದಿದೆಯೆ ತುಕ್ಕು!

- ಶಿವಮೂರ್ತಿ; ನವದೆಹಲಿ

*

ನನ್ನ ‘ನೆಚ್ಚಿನ’ ರಾಜಕಾರಣಿಗಳಿಂದ ಪ್ರೇರಣೆ ಪಡೆದು ನಾನು ಬರೆದದ್ದು:

ಈ ಪರಿಯ ಸೊಬಗಾವ ದೇಶದಲಿ ನಾ ಕಾಣೆ

ಕೋತೀ ಕೋಣರ ತಲೆಯ ನೇತಾರರಿಲ್ಲಿರೇ...

‘ಒಳ್ಳೆಯ ಫಿಗರ್‌’ಗಳನ್ನು ನೋಡುವ ಖಯಾಲಿ (ನನ್ನಂತೆ) ಇದ್ದವರಿಗೆ:

ಈ ಪರಿಯ ಸೊಬಗಾವ ದೇಹದಲಿ ನಾ ಕಾಣೆ

ಜಾತೀ ಹಲಸಿನ ಅಳತೆ ಮರಿಯಾನೆ ಛಾಪಿದೇ...

- ಗೋಪಿನಾಥ ರಾವ್‌; ದುಬೈ

*

‘ಈ ಪರಿಯ ಭೀಕರತೆ ಇನ್ನಾವ ಮಾನವನಲು ಕಾಣೆ

ನರ ಹಂತಕರ ಪ್ರಿಯ ಸದ್ದಾಮ ನಲ್ಲದೆ...’

- ಶ್ರೀನಾಥ್‌ ಭಲ್ಲೆ; ರಿಚ್‌ಮಂಡ್‌, ವರ್ಜೀನಿಯಾ

*

‘ಈ ಪರಿಯ ಪ್ರಕೃತಿ ಸೊಬಗು ಇನ್ನಾವ ಕಡೆಯೂ ಕಾಣೆ

ಕನ್ನಡ ನಾಡಿನ ಕಾಶ್ಮೀರ ಕಾರವಾರದಲ್ಲಲ್ಲದೆ...’

ಸರ್ವರಿಗೂ ಪ್ರಿಯವಾದ ಸೊಬಗಿನ ತಾಣ ಕರಾವಳಿ ಕಡಲ ತೀರ. ಕಾರವಾರ, ಸಿರಸಿ, ಸೋದೆ, ಯಾಣ... ಬಹಳ ಸುಂದರವಾದ ಸ್ಥಳಗಳು.

- ಗಾಯಿತ್ರಿ ಶೇಷಾಚಲ; ಲಾಸ್‌ ಏಂಜಲೀಸ್‌

*

ಇಂದು ತಾನೆ ಪ್ಯಾರಿಸ್‌ ಪ್ರವಾಸದಿಂದ ವಾಪಸ್‌ ಬಂದೆ. ಹೋದವಾರದ ನಿಮ್ಮ ವಿಚಿತ್ರಾನ್ನ ಓದುತ್ತಿದ್ದಂತೆ ನೆನಪಾದದ್ದು ಕೆಳಗಿನ ಸಾಲುಗಳು...

‘ಈ ಪಾರಿ ಸ್‌ ಯ ಸೊಬಗು (ನಾ ಕಂಡ) ಇನ್ನಾವ ಊರಲೂ ಕಾಣೆ... ಐಫೆಲ್ಲೂ, ಲೌರೆಯೂ, ರೆನೈಸೆನ್ಸ್‌ ಮತ್ತು (ಮದ್ಯದ್ದು) + ಅಧರ(ಪ್ರೇಮಿಗಳದ್ದು) ದಿವಿನಾದ ವೈನೂ...’

ಈ ಪದ್ಯವನ್ನು ಇನ್ನೂ ಮುಂದುವರೆಸುವ ಯೋಚನೆ ಇದೆ; ಸದ್ಯಕ್ಕೆ ಇಷ್ಟೇ ಇರಲಿ.

- ಶಿವ ವೆಂಕಟೇಷ್‌; ಬೆಂಗಳೂರು.

*

ನಿಮ್ಮ ಇತ್ತೀಚಿನ ವಿಚಿತ್ರಾನ್ನದ ‘ಈ’ ಲೇಖನ ತುಂಬಾ ಚೆನ್ನಾಗಿತ್ತು. ಎಂದಿನಂತೆ ಹೊಸತನ್ನು ಪರಿಚಯಿಸುವ ನಿಮ್ಮ ಈ ಯತ್ನದಲ್ಲಿ ಒಳಗೊಂಡ ಲವಲವಿಕೆ, ಉತ್ಸಾಹಗಳು, ಲೇಖನವನ್ನು ಓದಿದ ಎಲ್ಲರನ್ನೂ ಮುದಗೊಳಿಸಿರಬಹುದು ಎಂದು ನನ್ನ ಊಹೆ. ಅಂತೂ ಈ- ಕಿಟಕಿಯಲ್ಲಿ ಅಂಕುರಿಸಿದ ಆ ಜೋಡಿಯ ಪ್ರೀತಿ, ಎಲ್ಲ ಎಡರು ತೊಡರುಗಳನ್ನು ತೊಡೆದು ಮದುವೆಯಲ್ಲಿ ಸಾಕಾರಗೊಂಡದ್ದು ಮನಕ್ಕೆ ನೆಮ್ಮದಿ ತಂದ ಸಂಗತಿ. ಅದನ್ನು ಓದಿಯಾದ ಮೇಲೆ ನೀವು ಕೇಳಿದ ಸವಾಲಿಗೆ ಇಲ್ಲಿ ನನ್ನ ಚಿಕ್ಕ ಕಲ್ಪನೆಯಲ್ಲಿ ಮೂಡಿಬಂದ ಎರಡು ಸಾಲುಗಳನ್ನು ಹೇಳುತ್ತೇನೆ. ದೇವರ ದೇವ ಈಶ್ವರನ ಕಡುಕೋಪದ ವಿಷಯ ಎಲ್ಲರಿಗೂ ವಿದಿತ ಎಂಬ ಹಿನ್ನೆಲೆಯಲ್ಲಿ ಮೂಡಿ ಬಂದ ಕಲ್ಪನೆ ಇದು.

ಈ ಸಾಲುಗಳನ್ನು ದೇವತೆ ಪಾರ್ವತಿಯು ಕಡು ಹೆಮ್ಮೆಯಿಂದ, ಏಕೆಂದರೆ ಸ್ತ್ರೀಯರು ತಮ್ಮ ಪ್ರಿಯಕರನ ಅವಗುಣಗಳನ್ನು ಹೇಳುವಾಗಲೂ ಅವಕ್ಕೆ ಹುಸಿ ನಿಂದನೆಯ ಲೇಪ ಕೊಟ್ಟು ತನ್ನ ಇನಿಯನೇ ಮೇಲು ಎಂದು ತೋರಿಸಿಕೊಳ್ಳುವ ಕಲೆಗಾರರು. ಈ-ಮಾನಸಿಕ ಸ್ಥಿತಿಯಲ್ಲಿ ದೇವತೆ ಪಾರ್ವತಿಯು ತನ್ನ ಸಹವರ್ತಿ, ಅಂತರಂಗದ ಗೆಳತಿ ಲಕ್ಷ್ಮಿಯಲ್ಲಿ ಹೇಳುತ್ತಾಳೆ,

‘ಈ-ಪರಿಯ ಸುಡುಕೋಪ ಇನ್ನಾರ ಪತಿಯರೊಳು ನಾ ಕಾಣೆ, ಓ ಜಾಣೆ,ನಾನೊಲಿದ ಜಗದೊಡೆಯ ಈ-ಈಶನನ್ನಲ್ಲದೇ!!’

- ವಿದ್ಯಾ ಗದಗ್‌ಕರ್‌; ಡೇಟನ್‌, ಓಹಯಾ

*

ನಿಮ್ಮ ಚಿತ್ರಾನ್ನದ ರುಚಿ ಹಚ್ಚಿಸಿಕೊಂಡು, ಪ್ರತಿವಾರವೂ ಕಾದು ಓದುವವರಲ್ಲಿ ನಾನೂ ಒಬ್ಬಳು. ನಿಮ್ಮ ಈ-ಚಿತ್ರಾನ್ನದ ಕೊನೆಯಲ್ಲಿ ಕೊಟ್ಟಿರುವ ಈ ಪರಿಯ ಸೊಬಗಿನ ಆಹ್ವಾನಕ್ಕೆ ಈ ಮೂರು ಸಾಲು(ನೀವು ಕೇಳಿದ್ದು ಎರಡೇ ಸಾಲಾದರೂ!).

ಈ ಪರಿಯ ಚಿತ್ರಾನ್ನವ ಇನ್ನೆಲ್ಲೂ ನಾಕಾಣೆ

ಒಲೆ, ಒರಳು, ಒಗ್ಗರಣೆ ಒಂದೂ ಬೇಡದ ಈ ನಳಪಾಕವ

ಇನ್ಯಾರು ಮಾಡುವರು, ಜೋಶಿಯವರಲ್ಲದೆ!

ಹೊಸ ವರ್ಷದ ಶುಭಾಷಯಗಳೊಂದಿಗೆ,

- ಮೀರಾ ಪಿ.ಆರ್‌; ಅಮೆರಿಕ

*

‘ಈ ಪರಿಯ ರುಚಿಯಾದ ಅಡುಗೆಯನು ನಾ ಕಾಣೆ... ಶ್ರೀವತ್ಸಜೋಶಿಯವರ ವಿಚಿತ್ರಾನ್ನವಲ್ಲದೆ...’

- ರಾಧಾ ಕೆ; ಬೆಂಗಳೂರು

- ಪೂರ್ಣಿಮಾ ಸುಬ್ರಹ್ಮಣ್ಯ; ಮೇರಿಲ್ಯಾಂಡ್‌

- ಶೈಲಜಾ ವಳಕಟ್ಟೆ; ನ್ಯೂಜೆರ್ಸಿ

- ವಂದನಾ ಪಟ್ಟಣಶೆಟ್ಟಿ; ಕೊಲರಾಡೋ

- ಆರ್‌ ನಟರಾಜ; ಸಿಡ್ನಿ, ಆಸ್ತ್ರೇಲಿಯಾ

- ಲಕ್ಷ್ಮಿ ಶ್ರೀನಾಥ್‌; ಕ್ಯಾಲಿಫೋರ್ನಿಯಾ

- ರಶ್ಮಿ ಶ್ರೀಧರ್‌; ದುಬೈ

- ಬಿ ಎನ್‌ ಜನಾರ್ಧನ; ಬೆಂಗಳೂರು

- ಮೃಣಾಲಿನಿ ಉದಯಕುಮಾರ್‌; ನ್ಯೂಜೀಲ್ಯಾಂಡ್‌

- ಮಮತಾ ಮೆಹೆಂದಳೆ; ಬೆಂಗಳೂರು

*

ನಿಮ್ಮ ವಿಚಿತ್ರಾನ್ನ ಓದಿದೆ..ಬಹಳ ಚೆನ್ನಾಗಿದೆ.. ನಿಜಕ್ಕು ಆ ಹೊಸವರ್ಷದ ನಿರ್ಧಾರಗಳಲ್ಲಿ ಕೆಲವನ್ನು ಎಲ್ಲರೂ ಆಚರಿಸಿದರೂ ಈ ಭೂಮಿ ಸ್ವರ್ಗ ಆಗುವುದರಲ್ಲಿ ಸಂದೇಹವಿಲ್ಲ... ಹೊಸ ವರ್ಷ ಸುಖ ಹರ್ಷ ಆಗಲಿ ಎಂದು ನನ್ನ ಹಾರೈಕೆ...

- ಜ್ಯೋತಿ ಕಾರಂತ; ಬೆಂಗಳೂರು

*

ನಿಮ್ಮ ಹೊಸ ವರ್ಷದ ವಿಚಿತ್ರಾನ್ನದಲ್ಲಿ ಶ್ರೀಹರಿಯ ಭಜನೆಗಳನ್ನು ನೋಡಿ ತುಂಬ ಸಂತೋಷವಾಯಿತು. ಪ್ರಚಲಿತ ದಿನಗಳಲ್ಲಿ ದೈವಭಕ್ತಿ ಎಂಬುದು ಮಾಧ್ಯಮಗಳಲ್ಲಿ ಮತ್ತು ಅಂಕಣಕಾರರಲ್ಲಿ ಅಸಹನೀಯ ಅಂಶವಾಗಿರುವಾಗ ನಿಮ್ಮ ನಿಸ್ಸಂಕೋಚ ದೈವಸ್ತುತಿಯನ್ನು ಓದಿ ನಿರಾಳವೆನಿಸಿತು. ಒಂದು ತರಹ, ನೀವು ನಮ್ಮಂತಹ ಓದುಗರ ಪರವಾಗಿ ಇದ್ದೀರೆನಿಸಿತು. ದಶಾವತಾರವನ್ನೇ ಆಯ್ದುಕೊಂಡದ್ದರ ಹಿನ್ನೆಲೆ ಏನೆಂದು ಕೇಳಬಹುದೇ?

- ಡಾ। ಭರತ್‌ ಶಾಸ್ತ್ರಿ; ಕಾರ್ಡಿಫ್‌, ಯುನೈಟೆಡ್‌ ಕೀಂಗ್‌ಡಮ್‌

*

ಇವತ್ತು ದಶಾವತಾರ ವರ್ಣನೆಯ ವಿಚಿತ್ರಾನ್ನ ಓದಿದೆ. ತುಂಬಾ ಸುಂದರವಾಗಿ ಬಂದಿದೆ. ನೀವು ಸಂಗ್ರಹಿಸಿದ ಗೀತೆಗಳು ಎಲ್ಲವೂ ನನಗೆ ತುಂಬಾ ಮೆಚ್ಚುಗೆಯಾದವು. ಅದರಲ್ಲೂ ಲಕ್ಷ್ಮಿ-ಪಾರ್ವತಿಯರ ಸಂವಾದದ ಗೀತೆ ಅಪರೂಪವಾದದ್ದು. ನನಗೆ ಬಹಳ ಹಿಡಿಸಿತು. ಅಪರೂಪದ ಗೀತೆಗಳನ್ನು ಹುಡುಕಿ, ಸಂಗ್ರಹಿಸಿ, ಅವುಗಳಿಗೆ ಒಂದು ಸುಂದರ ರೂಪ ಕೊಟ್ಟು ನಮಗೆಲ್ಲಾ ಒದಗುವಂತೆ ಮಾಡಿದ ಭಕ್ತಿ ಪ್ರಧಾನ ವಿಚಿತ್ರಾನ್ನಕ್ಕೆ ನನ್ನ ಭಕ್ತಿಯುಕ್ತ ಧನ್ಯವಾದಗಳು. ಮಂಗಳವಾಗಲಿ ಎಲ್ಲರಿಗೂ.

- ವಿದ್ಯಾ ಗದಗ್‌ಕರ್‌; ಡೇಟನ್‌, ಓಹಯಾ

*

ಶ್ರೀ ವಾದಿರಾಜರ ಮತ್ತು ಶ್ರೀ ಪುರಂದರದಾಸರ ಮನಮೋಹಕ ಗೀತೆಗಳನ್ನು ಉದ್ಧರಿಸಿದ್ದೀರಿ. ಶ್ರೀ ಪುರಂದರರ ರುಕ್ಮಿಣೀ ಪಾರ್ವತಿಯವರ ‘ಉರುಟಣೆ’ ಅದೆಷ್ಟು ಸುಂದರ! ನನ್ನ ಅಜ್ಜಿ ಆಗಾಗ ಹಾಡಿ ಕೊಳ್ಳುತ್ತಿರುವಾಗ ಈ ಪದ್ಯ ಕೇಳಿದ ನೆನಪು. ಆಮೇಲೆ, ಹತ್ತುಅವತಾರದಲ್ಲೇ ಅಡಕವಾದ ಡಾರ್ವಿನರ ವಿಕಾಸವಾದ! ಬೈಬಲ್ಲಿನಲ್ಲಿ ಕೂಡಾ ಡಾರ್ವಿನರ ವಿಕಾಸವಾದದ ಭವಿಷ್ಯವಾಣಿ.

ಈ ವಿಚಾರ ಎಲ್ಲೂ ಇದುವರೆಗೆ ನಾನೆಲ್ಲೊ ಕೇಳಿಲ್ಲ.

ದೂರದ ಮೇರಿಲ್ಯಾಂಡಿನಲ್ಲಿ ಕುಳಿತು ಲೇಖನದಲ್ಲಿನ ಪದ್ಯಗಳನ್ನೆಲ್ಲಾ ಹೇಗೆ ಸಂಪಾದಿಸಿದಿರಿ? ನಿಮ್ಮ ಮಸ್ತಕದಿಂದಲೇ ಅಲ್ಲವೆ? ಚಿಕ್ಕಂದಿನಲ್ಲಿ ಕಲಿತ ಹಾಡು ಭಜನೆ ನೀವು ಮರೆತಿಲ್ಲ. ಚಿಕ್ಕಂದಿನಲ್ಲಿ ಕಲಿತುದು ಹಸಿ ಗೋಡೆಯ ಮೇಲಿನ ಛಾಪಿನಂತೆ! ಮಾನವನು ಮರೆಯುವುದೇ ಇಲ್ಲವಂತೆ. ನಿಮ್ಮ ಮಾತೃಶ್ರೀಯವರು, ಅಜ್ಜಿಯವರು ಮತ್ತು ಪ್ರಾಥಮಿಕ ಶಾಲಾ ಗುರುಗಳು ಹೇಳಿಕೊಟ್ಟುದನ್ನು ನೀವು ಮರೆತಿಲ್ಲ. ಅವರಿಗೆ ನನ್ನ ನಮನ ಅರ್ಪಿಸುವೆ.

ನಾನಾದರೋ ಜೀವನದ ಜಂಜಡದ ಮಧ್ಯೆ ಬಾಲ್ಯದ ಪದ್ಯಗಳೆಲ್ಲವನ್ನೂ ಮರೆತು ಬಿಟ್ಟಿದ್ದೇನೆ. ನಿಮ್ಮ ಲೇಖನ ಓದಿದೊಡನೆ, ಬೇಗ ಬೇಗನೆ ‘ಜಲದಲಿ ಚಲಿಸುವ ಮತ್ಸ್ಯನಿಗೆ...’ ಪುನಃ ಪುನಃ ಪಠಣ ಮಾಡಿ, ನನ್ನ ಬಾಲ್ಯದ ಮೆಚ್ಚುಗೆಯ ಭಜನೆಯ ‘ಮಂಗಳಹಾಡು’ ಗಟ್ಟಿ ಮಾಡಿಕೊಂಡು ಬಿಟ್ಟೆ! ಇದರಿಂದ ಏನೋ ಒಂದು ಸಂತೋಷ!

ನನ್ನ ರೀತಿ ಈ ವಾರದ ‘ವಿಚಿತ್ರಾನ್ನ ಉಂಡು’ ನನ್ನಂತೆ ಹಲವರು ಸಂತೋಷ ಪಡಬಹುದು. ಈ ಕಾರಣಕ್ಕೆ ಇದೋ ನಿಮಗೊಂದು ‘ಸಲಾಮ್‌!’

- ಎಸ್‌. ಎಂ. ಪೆಜತ್ತಾಯ; ಬೆಂಗಳೂರು

*

ದಶಾವತಾರದ ಹಿಂದೆ ಜೀವವಿಕಾಸ ಥಿಯರಿಯ ಬಗ್ಗೆ ಓದಿ ನನಗೆ ಇನ್ನೊಂದು ಹೊಳೆಯಿತು. ಇದು ಕಮ್ಯುನಿಕೇಷನ್‌ (ಸಂಪರ್ಕ ಸಾಧನಗಳ) ದಶಾವತಾರ. ನೋಡಿ ಹೀಗಿದೆ!

1. ‘ರ್ರ್‌... ಉಉಉ... ಮ್ಮ್‌ ಮ್‌.... ಗ್ಗ್‌ ಗ್‌....’ (ಮರ್ಕಟ ಭಾಷೆ).

2. ‘ಇಲ್ಲಿ.. ಅಲ್ಲಿ .. ತಿನ್ನು .. ನೀನು ...’ (ಕಾಡು ಮಾನವ ಭಾಷೆ).

3. ‘ತಾವು ನಮ್ಮ ಗುಡಿಸಲಿಗೆ ಬಂದು ...’ (ಮಾನವ ಭಾಷೆ - ಮಾತು ಮಾತ್ರ, ಬರಹ ಇಲ್ಲ).

4. ‘ಕಾಜನೂರಿನ ಮಹಾರಾಜ ಶ್ರೀ ಶ್ರೀ ... ಶುಕ್ಲ ಅಷ್ಟಮಿಯಂದು ... ಕೊಟ್ಟ .. 1 ಪುಟ = 50 ತೊಲ ಓಲೆಗರಿಯ ಮೇಲೆ ಕಂಠಪ್ರಹಾರ... ‘ಏನು, ಬರಿಬೇಕೆ? ಇರಿ, ಮರ ಹತ್ತಿ ತಾಳೆ ಸೋಗೆ ತೆಗಿಸ್ತೇನೆ...!’ (ಶಿಲಾಶಾಸನ, ತಾಳೆಗರಿ ಬರಹ).

5. ‘ತರುವಾಯ ಉಭಯ ಕುಶಲೋಪರಿ ಸಾಂಪ್ರತ ... ನೀವು ಈ ಹಣವನ್ನು ಕೊಡದಿದ್ದರೆ ನಿಮ್ಮ ಮೇಲೆ ದಾವೆ ಹೂಡಲಾದೀತು...!’ (ಕಾಗದ, ಪುಸ್ತಕ)

6. ‘ಈ ವಾರ್ತೆಗಳನ್ನು ಆಕಾಶವಾಣಿಯಿಂದ ಕೇಳುತ್ತಿದ್ದೀರಿ...’ (ರೇಡಿಯೋ, ಟಿವಿ, ಸಿನೆಮಾ)

7. "CTRL+ SHIFT+ a ALT+101 N i ..." (Microsoft Word 1.0)

8. Internet, e-mail Click, double click, download, detach, attach,......

9. Cell phone (cant even go to bathroom!), cellphone camera ..SMS ... "R U cmng 2 r hs on W?"

10. (ಇನ್ನೂ ಬಂದಿಲ್ಲ ಈ ಅವತಾರ): ನೀವು ನನ್ನನ್ನ ಯೋಚಿಸಿಕೊಂಡಿರಾ!? ನನ್ನ Thought-phoneನಲ್ಲಿ ಬಂತು... ರ್ರ್‌... ಉಉಉ... ಮ್ಮ್‌ ಮ್‌.... ಗ್ಗ್‌ ಗ್‌....... ಎಂದಿರಾ???

ಅಷ್ಟಾಗುವಾಗ ಪ್ರಳಯ ಆಗುತ್ತದೆ!

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

English Section

Read your article about shopping cart today. It is very nice. Felt like expressing my experiences.

When I did my first shopping here in Germany I too was carried away with the magic of the shopping cart. I added everything to which I was attracted, into the cart. Then I realised it was too much to carry back home. Also I realised, I had to pay for the plastic hand bags when I payed the bill. I finally payed for two plastic hand bags and filled in all the stuff I had put into the cart. Even then there was plenty left behind in the cart. I filled it inside my shirt, jacket and pockets. I walked till my home like a pregnant woman!

Now I take care that I do not exceed my shopping for more than two hand bags, but nevertheless it somehow becomes very heavy at the end.

- Raghavendra; Germany.

*

Your article about Shopping cart is clear and complete. During my last visit to U.S.A, I had spent a lot unknowingly. It may due to "SHOPPING CART" :-)

- Athresh Kumar B.S; Bangalore

*

Shopping Cart vichitranna was really an interesting article. I think, it would be interesting to know more about the Great Depression if you can devote one whole vichitraanna for that.

- Lakshmi Shrinath; Sunnyvale, CA

*

Shopping cart article was quite interesting!

- S. Krishna Murthy (Kaveri Krishnamurthy); Potomac, Md

*

I just came back from India and took up reading a few of your articles on thatskannada. The one on "Shopping Carts" is really cool. What I like about your writings is the very subjects which you choose. They are so different and unique. Keep up the good work.

Fun Always !

- Sukumar Raghuram; California

*

This "ee" vichitranna is... Joshi-Fun-Tastic. You engage the reader every minute of his/her stay on the page. Wow!

- S.K.Shamasundara; Editor, thatskannada.com

*

I just saw your E vichitranna served on thatskannada.com. It was very thoughtful and nicely written. I was amazed how you could come up with the short story about E using Kannada film hits from all the times. Great. Please keep it up. It was absorbing to read. Good work.

- Ananth Swamy; Maryland

*

Collection of new years resolution is excellent. Thanks a lot for sharing it

- N anantha Krishna; Bangalore

*

I liked the list of resolutions you provided in vichitranna article. I want to forward that to all of my friends.

- Dr. Halebid Swamy; Bangalore

*

Thanks for the new year resolutions list. Definitely helpful. Actually now to think of it, hoda varsha ivugalalli ondashtu naanu maadikondidde...resolutions anthaa...yesterday i was trying so hard to remember them ...!!!

- Shravani; City?

*

I went thru the Resolutions List. Very nice. Want to follow at least a few. Thanks a lot for the good collection

- Aravinda Mundakana: Bangalore

*

Yestarday I was listening to one of the song by purandara dasaru. Song name is "naguvarallo rangayya ninnatava kandu". The song is full of dashavathara varnanae. I thought I will just share this with you.

- Krishnarao Sreepadarju; USA

*

I liked your article in this weeks vichitraanna about dashavatara. Seems very apt to start a new year in such a good way. I was also remembering the song that my mother used to sing when I was a kid called Kodanda rama - neerolu thoori paathaala sEri.. with all the significance of dashaavatara. It was very kid friendly bhajan. I wish that I can remember all the verses to teach my sons. You seem to know the pulse of your

readers. Keep up the good work.

- Jayu Nyayachavadi; USA

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more