• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮೈನಸ್‌-ಟು-ಪ್ಲಸ್‌...’ ಬಹಳ ಉಪಯುಕ್ತ ಲೇಖನ !

By Staff
|
ವ್ಯಕ್ತಿತ್ವ ವಿಕಸನ ಮಾರ್ಗದರ್ಶಿಯಾಗಿ ಬರೆದ ವಿಚಿತ್ರಾನ್ನ ಲೇಖನವನ್ನು ಮೆಚ್ಚಿ ತುಂಬ ಮಂದಿ ಬರೆದಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ಎರಡು ವಾರಗಳ ಹಿಂದೆ ಬಂದ ಮಂಡಕ್ಕಿ-ಪ್ರತಿಕ್ರಿಯೆಗಳ ಬಗ್ಗೆ ಒಂದು ಆತ್ಮೀಯ ಪ್ರತಿಕ್ರಿಯೆ ಪತ್ರ ಬಂದಿದೆ. ಅದನ್ನೂ ಇಲ್ಲಿ ಪ್ರಕಟಿಸಲಾಗಿದೆ. ಹಾಗೆಯೇ ಸಿಂಹ-ಕುರಿ ಜಾಣ್ಮೆಲೆಕ್ಕದ ಉತ್ತರ ಕೆಲವರಿಗಿನ್ನೂ ಕನ್ವಿನ್ಸ್‌ ಆಗಿಲ್ಲವೆಂದು ತೋರಿದ್ದರಿಂದ ಇನ್ನೂ ವಿಸ್ತೃತವಾಗಿ ಅದನ್ನೂ ಈ ಪುಟದ ಕೊನೆಯಲ್ಲಿ ಕೊಡಲಾಗಿದೆ (ಇಂಗ್ಲಿಷ್‌ನಲ್ಲಿದೆ). ವಿಚಿತ್ರಾನ್ನದ ಇಂಟರಾಕ್ಟಿವ್‌ನೆಸ್‌ಅನ್ನು ಪರಿಣಾಮಕಾರಿಯಗಿ ಅರ್ಥೈಸಿ, ಉಪಯೋಗಿಸುತ್ತಿರುವ ಎಲ್ಲ ಸ್ನೇಹಿತರಿಗೂ ಇನ್ನೊಮ್ಮೆ ‘ಥ್ಯಾಂಕ್ಯೂ’!

- ಶ್ರೀವತ್ಸ ಜೋಶಿ.

ವಿಚಿತ್ರಾನ್ನದ 82ನೇ ಕಂತು ತುಂಬ ಚೆನ್ನಾಗಿ ಮೂಡಿ ಬಂದಿದೆ. ವ್ಯಕ್ತಿತ್ವ ವಿಕಸನದ ಈ ರೀತಿಯ ಲೇಖನಗಳು ಕೇವಲ ಸ್ವಾಗತಾರ್ಹವಷ್ಟೇ ಅಲ್ಲ ಅಪೇಕ್ಷಣೀಯ ಕೂಡ. ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಿರುವುದರಿಂದ ಇಂತಹ ಒಂದು ಲೇಖನ ವಿದ್ಯಾರ್ಥಿಗಳ ಅದರಲ್ಲೂ ಪರೀಕ್ಷೆಯಲ್ಲಿ ವಿಫಲರಾಗಿ ಅನವಶ್ಯಕ ನೇತ್ಯಾತ್ಮಕ ಆಲೋಚನೆಗೆ ಒಳಗಾಗಬಹುದಾದವರಿಗೆ ಧೈರ್ಯ ಕೊಡುವಂತಹ ಪೂರಕ ಲೇಖನ ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ಇಂದು ಪತ್ರಿಕೆಗಳಲ್ಲಿ ಬಂದಿರುವ ಸಮಾಚಾರಗಳ ಪ್ರಕಾರ ಪರೀಕ್ಷೆಯ ಅಂಕಗಳಿಕೆಯನ್ನು ಗಣಕೀಕರಣಗೊಳಿಸುವಾಗ ಸಂಭವಿಸಿರುವ/ ಸಂಭವಿಸಬಹುದಾದ ಪ್ರಮಾದಗಳಿಂದ ಉತ್ತಮ ವಿದ್ಯಾರ್ಥಿಗಳ ಫಲಿತಾಂಶ ಸಹ ತಪ್ಪಾಗಿ ಪ್ರಕಟಗೊಂಡಿದೆ. ಇಂತಹ ಸಾಧ್ಯತೆಯಿಂದಾಗಿ ಈ ಲೇಖನ ಸಮಯೋಚಿತವಾಗಿ ಬಂದಿದೆ. ನನ್ನ ಒಂದು ವಿನಂತಿ ಏನೆಂದರೆ ಈ ಲೇಖನವನ್ನು ವಿಜಯಕರ್ನಾಟಕ ಹಾಗೂ ಸಾಧ್ಯವಾದರೆ ಇತರೆ ಪತ್ರಿಕೆಗಳಲ್ಲೂ ಪ್ರಕಟಿಸಿ ಅಂತಹ ವಿಧ್ಯಾರ್ಥಿಗಳಿಗೆ ಧೈರ್ಯ ತುಂಬಬಹುದು.

- ಬ.ನ. ಅರವಿಂದ; ತ್ಯಾಗರಾಜನಗರ, ಬೆಂಗಳೂರು

* * *

ಈ ಪ್ರಬಂಧ ಬಲು ಸೊಗಸಾಗಿದೆ. ಮುಂದೆಯೂ ಇಂತಹ ಲೇಖನಗಳನ್ನು ವಿಚಿತ್ರಾನ್ನ ರೂಪದಲ್ಲಿ ಹಂಚುತ್ತಿರಿ.

- ಬಸಪ್ಪ ಮೃತ್ಯುಂಜಯ; ಊರು?

* * *

ಬಹಳ ಒಳ್ಳೆಯ ಲೇಖನ. ಆದರೆ...

ಮೇಲ್ನೋಟಕ್ಕೆ ‘ಅಸತೋ ಮಾ ಸದ್ಗಮಯ’ದಂತೇ ಇರುವ ನಿಮ್ಮ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ. ಯಾಕೆನ್ನುತ್ತೀರಾ? ಎಲ್ಲವೂ, ಶೀರ್ಷಿಕೆಯಲ್ಲಿರುವ ‘ಪ್ಲಸ್‌ ಓ’ ಎನ್ನುವುದರಲ್ಲಿರುವ ‘ಓ’ ಮಾಡುತ್ತಿರುವ ತಪ್ಪು. ಹೇಗೆ? ವಿಶ್ಲೇಷಿಸೋಣ.

ಆಸತೋ = ಅಸತ್ಯದಿಂದ

ಮಾ = ನನ್ನನ್ನು

ಸತ್‌ = ಸತ್ಯದೆಡೆಗೆ

ಗಮಯ = ಕರೆದೊಯ್ಯೈ

ಹಾಗೇ

ಮೈನಸ್‌ ಓ = ಮೈನಸ್‌ ನಿಂದ

ಮಾ = ನನ್ನನ್ನು

ಪ್ಲಸ್‌ ಓ = ಪ್ಲಸ್‌ ನಿಂದ (ಪ್ಲಸ್‌ ಗೆ ಎಂದಿರಬೇಕಿತ್ತು)

ಗಮಯ = ಕರೆದೊಯ್ಯೈ

ಅರ್ಥ ಏನಾಯಿತು? ನನ್ನ ಪ್ರಕಾರ ‘ನನ್ನನ್ನು ಮೈನಸ್‌ನಿಂದಲೂ ಪ್ಲಸ್‌ನಿಂದಲೂ ಕರೆದೊಯ್ಯೈ’! ನನಗೆ ಈ ಅರ್ಥ ಅತಿ ಪ್ರಿಯವೂ ಹೌದು. ‘ಮೈನಸ್‌’ ಮತ್ತು ‘ಪ್ಲಸ್‌’ಗಳೆಂಬ ದ್ವಂದ್ವದಿಂದ ದೂರ ಕರೆದೊಯ್ಯೈ ಎನ್ನುವುದು ಅತ್ಯುತ್ತಮ ಮಂತ್ರವಾದೀತು! ಅನೀರೀಕ್ಷಿತವಾದರೂ ಉಪನಿಷತ್ಪ್ರತಿಪಾದ್ಯ ಸತ್ಯವನ್ನೇ ನುಡಿದಿದ್ದೀರಿ!

- ಕಿರಣ; ಮೈಸೂರು

(ಅಂಕಣಕಾರನ ಪ್ರತಿಕ್ರಿಯೆ: ನಿಮ್ಮ ಕೂಲಂಕಷ ವಿಮರ್ಷೆ, ವ್ಯಾಖ್ಯಾನ ಬಹಳ ಸಂತಸ ತಂದಿತು. ನಿಮ್ಮ ಪತ್ರವನ್ನು ಓದುಗರ ಓಲೆಯಲ್ಲಿ ಪ್ರಕಟಿಸುತ್ತೇನೆ. ಸೋದಾಹರಣವಾಗಿ ನೀವು ನಿರೂಪಿಸಿದ ಸ್ಪಷ್ಟ ಅರ್ಥ ಎಲ್ಲರಿಗೂ ತಿಳಿಯುತ್ತದೆ.

ಅಂದಹಾಗೆ ನಾನು ಯಾಕೆ ಆ ಶೀರ್ಷಿಕೆ ಕೊಟ್ಟೆ ?

‘ಮೈ-ಮನಸ್ಸಿನ ವೈಮನಸ್ಯ ತೊಡೆದು ಹಾಕುವುದು ಹೇಗೆ?’ ಎಂದು ಮೊದಲು ಶೀರ್ಷಿಕೆ ಕೊಟ್ಟಿದ್ದೆ. ಕೊನೆ ಗಳಿಗೆಯಲ್ಲಿ, ಶೀರ್ಷಿಕೆ ಇನ್ನೂ ಸ್ವಲ್ಪ ಆಕರ್ಷಕ (catchy) ಯಾಗಿದ್ದರೆ ಇನ್ನೂ ಹೆಚ್ಚು ಜನ ಓದಿ ಲೇಖನದ ಲಾಭ ಪಡೆಯುವ ಸಾಧ್ಯತೆಯಿದೆಯೆಂದುಕೊಂಡೆ; ಬದಲಾಯಿಸಿದೆ. catchy ಯೇನೋ ಆಯ್ತು, ಜತೆಯಲ್ಲೇ ಒಂದು ಸಂಕೀರ್ಣ ಅರ್ಥವನ್ನೂ ನೀವು ಕ್ಯಾಚ್‌ಇಸಿ ಅನಾವರಣ ಮಾಡಿದಂತಾಯಿತು. ತುಂಬಾ ಧನ್ಯವಾದಗಳು. - ಶ್ರೀವತ್ಸ ಜೋಶಿ)

* * *

ಈ ನೆಗೆಟಿವ್‌ - ಪಾಸಿಟಿವ್‌ ಲೇಖನ ತುಂಬಾನೇ ಚೆನ್ನಾಗಿತ್ತು. ಇನ್ನು ಮುಂದೆಯೂ ಈ ಥರ ಉಪಯುಕ್ತ ಸಂಗತಿಗಳು ನಮ್ಮನ್ನು ತಲುಪಲಿ ಎಂದು ತುಂಬು ಹೃದಯದ ಪಾಸಿಟಿವ್‌ ವಂದನೆಗಳು!

- ಜಗದೀಶ್‌ ಬಾಬು; ಊರು?

* * *

ನಿಮ್ಮ ಇವತ್ತಿನ ಲೇಖನ ‘ಮೈನಸೋಮಾ ಪ್ಲಸ್ಸೋಗಮಯ’ ಬಹಳ ಚೆನ್ನಾಗಿದೆ. ಮನಸಿಗೆ ತುಂಬ ಹಿಡಿಸಿತು. ಇದು ಖಂಡಿತ ನನ್ನ ಇವತ್ತಿನ ‘ಮಾನಸಿಕ ಶಕ್ತಿಯ ಟಾನಿಕ್‌’. ಈ ಲೇಖನವನ್ನು ನನ್ನ ಕಂಪ್ಯೂಟರ್‌ನಲ್ಲಿ ಸೇವ್‌ ಮಾಡಿಟ್ಟಿರುವುದರಿಂದ, ಮುಂದೆಯೂ ಈ ಎಕ್ಸ್‌ಪೈರಿ ಡೇಟ್‌ ಇಲ್ಲದ ಟಾನಿಕ್‌, ನನಗೆ ‘ಮೈನಸ್‌’ಗಳಿಂದ ಬಳಲಿದಾಗ ಉಪಯೋಗವಾಗುತ್ತದೆ. ಧನ್ಯವಾದಗಳು. ಹೀಗೇ ಬರೆಯುತ್ತಿರಿ.

- ಸುಬ್ರಹ್ಮಣ್ಯ ನಾಗಲಾಪುರ; ಫಿಲಡೆಲ್ಫಿಯಾ

* * *

ಇಂಗ್ಲಿಷ್‌ನಲ್ಲಿ ಇಂಥ ಲೇಖನಗಳನ್ನು ಅದೆಷ್ಟೋ ಓದಿದ್ದರೂ ನನಗೆ ಈ ರೀತಿಯ ವಿಷಯಗಳನ್ನು ಕನ್ನಡದಲ್ಲಿ ಓದಿದರೆ ಇನ್ನೂ ಹೆಚ್ಚು ಸುಲಭವಾಗಿ ಅರ್ಥ ಆಗುತ್ತೆ ಮತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಈ ರೀತಿಯ ಲೇಖನಗಳು ವಿಚಿತ್ರಾನ್ನದಲ್ಲಿ ಸ್ವಾತಾರ್ಹವೇ ಎಂದು ಕೇಳಿದ್ದೀರಿ. ನಾನು ಹೇಳುವುದಾದರೆ, ಖಂಡಿತ ಸ್ವಾಗತವಿದೆ.

- ಗುರುಪ್ರಸಾದ್‌; ಇನ್ಫೋಸಿಸ್‌, ಲಂಡನ್‌

* * *

ಗಂಭೀರವಾದ ವಿಷಯವನ್ನು ಕೂಡ ಸರಳ, ಸರಸ ಶೈಲಿಯಲ್ಲಿ ಬರೆಯುವ ನಿಮ್ಮ ಕೌಶಲ್ಯ ನನಗೆ ಬಹಳ ಮೆಚ್ಚುಗೆಯಾಗಿದೆ.

- ನಳಿನಿ ಮೈಯ; ಡೇರಿಯನ್‌, ಇಲಿನಾಯ್‌

* * *

ಮಂಡಕ್ಕಿಯಿಂದ ನೆನಪಾದ ‘ಕಾಕ’...

ಮಂಡಕ್ಕಿ ಮಹಾತ್ಮೆಗೆ ಬಂದ ಎಲ್ಲ ಪತ್ರಗಳನ್ನೂ ಓದಿದೆ. ಆದರೆ ಯಾರೂ ನಮ್ಮ ಬಸವನಗುಡಿ ನ್ಯಾಷನಲ್‌ ಕಾಲೇಜಿನ ಹತ್ತಿರ ‘ಕಾಕ’ ಮಾರುತ್ತಿದ್ದ ಪುರಿಯ ಬಗ್ಗೆ ಬರೆಯದೆ ಇದ್ದದ್ದು ಒಂದು ಕೊರತೆ ಎನ್ನಿಸಿತು. ಕಾಕ ಸೈಕಲ್‌ ಮೇಲೆ ಮಂಡಕ್ಕಿಪುರಿ ಇಟ್ಟು ಮಾರುವವ. ಮಸಾಲಪುರಿ ರುಚಿ ಎಂದರೆ ಅದು ನೋಡಿ ಮಾರಾಯ್ರೆ. ನಾವೆಲ್ಲ , ‘ಕಾಕ, ಇನ್ನೂ ಸ್ವಲ್ಪ ಖಾರ ಹಾಕು...’ ಎಂದು ಮೆಣಸಿನಕಾಯಿ ಚಟ್ನಿ ಹಾಕಿಸಿಕೊಂಡು ಆ ಖಾರ ತಡೆಯಲಾಗದೆ, ಬರೀ ಪುರಿ ಕೊಳ್ಳಲು (ಬಾಯಿಯಲ್ಲಿನ ಖಾರ ನೀಗಿಸಲು) ಬೇರೆ ದುಡ್ಡು ಇಲ್ಲದೆ ಕರ್ಮಕಾಂಡ ಮಾಡಿಕೊಂಡ ನೆನಪು ಇನ್ನೂ ಹಸಿರಾಗಿದೆ. ಆದರೆ ಆ ಕಾಕ ಪುರಿಯ ಸವಿ ಯಾರಿಗುಂಟು ಯಾರಿಗಿಲ್ಲ ! ನೆನಪಿನಾಳಕ್ಕೆ ತಳ್ಳಿದ್ದಕ್ಕೆ ಧನ್ಯವಾದಗಳು.

ಕಾಕ ಪುರಿ... ಹಿಪ್‌ ಹಿಪ್‌ ಹೂರ್ರೆ....

- ಶೈಲಜಾ ಗುಂಡೂರಾವ್‌; ಮೇರಿಲ್ಯಾಂಡ್‌

* * *

Yes! a hearty welcome to such articles, which help us sweep away our -ve thinking.

- Leena P; Bangalore

* * *

"Minusssoma Plusogamaya..." was very very good.

- Narasimha Somayaji; Los Angeles

* * *

Just now read the plusso gamaya... essay in thatskannada.com. It is very nice and useful (especially for people like us who spend most of the time in between these four walls being a housewife). Thank you very much. Most welcome, from my side for this kind of articles.

Vrinda; Kansas City

* * *

It is real tonic anybody can/want to have once in a while. Vichithranna built around pros and cons of positive and negative thinking/attitude in real life will make much more sense! Thanks for the good article in kannada.

- N AnanthaKrishna; Wipro, Bangalore

* * *

The article was very refreshing and I am sure many people (like me) felt swinging from the -ve side to +ve side as we read it. I cant say what is it, but I felt something inside me moving ..... I guess I can say "I was moved" by this article. Really great.

- Gopi; St.Louis

* * *

I like your todays article. It is really mind opening.I like to read articles like this more often.

- Indu Vasudevan; New Jersey

* * *

I read todays article. Nice, bit different too! But i also have something to add. Even if you are somewhere in minus area, you learn a lot about life. One should take care not to stay there for long thats it. Of course, its my personal opinion. But by experience and observation I can say that if one is exposed to negative aspects, one also learns how NOT to be :) and how to come OUT of that, to zero, to plus, whatever. That way even minus has its plus points ;-)

What do you say?

- Jayashree H.R; Bangalore

* * *

I liked this weeks Vichitranna. Excellent analogy to convey a complicated but very simple learning of life. Keep it up -:)

- Uday Hegde; HP, Texas

* * *

I liked your this weeks article.... It is very thoughtful. Those 15 points are wonderful. Thanks for such nice article.

- Narendra Narayana; Miami, Florida

* * *

I liked the way you have put things in your article today. Very simple, meaningful and yet has the punch!.

- Dr.Guruprasad R Kaginele MD; Minnesota

* * *

More "mathematical"convincing answer for those who found Lion-Sheep puzzle still puzzling....

Heres the reasoning:

Consider a scenario with just one lion and one sheep: The lion will eat the sheep. Why? Because after he eats it and turns into a sheep himself, there arent any lions on the island to eat him, so he is happy.

Now look at a scenario with 2 lions and 1 sheep. Here the sheep would remain unharmed. Why? Because if any one of them eats it, and turns into a sheep himself, he knows that he awaits certain death because he will then be a sheep and the other lion will be the only lion on the island and nothing will stop him from eating the sheep.

So now we know for a fact 1 lion and 1 sheep - sheep gets eaten. 2 lions and 1 sheep - sheep doesnt get eaten.

We can now make a conclusion about 3 lions and 1 sheep: the sheep will definitely be eaten, because the lion that eats it will know that by eating he leaves behind 2 lions and 1 sheep (himself). And as we already know 2 lions and 1 sheep is a situation where the sheep survives.

You can use the same logic to go on to 4 lions and 1 sheep, and then all the way to 100 or 1000, but it will always be true that with an odd number of lions the sheep gets eaten and with an even number the sheep doesnt.

This is called "Mathematical Induction"(proving something for X or X+1 and assuming that it holds good for X+2 as well).

Of course as mentioned in my write-up, first of all we are assuming those lions are special brainy lions. Unfortunately there in no nobel prize for mathematics, else all 100 lions would have been ideal candidates for a Nobel in Math :-)

- Srivathsa Joshi

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more