• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರುದೋಸೆ ನೀರೂರಿಸಿತು, ನಕ್ಕುನಲಿದಾಡಿಸಿತು...

By Staff
|

ಬಾಯಲ್ಲಿ ನೀರೂರಿದ್ದು ನಿಜ ಮಾರಾಯರೇ!

ನಮ್ಮಮ್ಮ ಕರಾವಳಿಯವರು. ಮದುವೆಯಾದ ನಂತರ ಕೋಲಾರ ಜಿಲ್ಲೆಗೆ ಬಂದವರು. ನಮ್ಮ ಮನೆಯ ಅಡುಗೆ ಈಗಲೂ ದಕ್ಷಿಣಕನ್ನಡದ ಸ್ಟೈಲೇ (ಆದರೆ ತೆಂಗಿನೆಣ್ಣೆ ಮಾತ್ರ ಬಳಸೋಲ್ಲ, ಕೋಲಾರದಲ್ಲಿ ಕಡ್ಲೆಎಣ್ಣೆ ಉಪಯೋಗಿಸುತ್ತೇವೆ). ನಾನು ಹೈಸ್ಕೂಲ್‌ ಮುಗಿಸಿದ ನಂತರ ಬೆಂಗಳೂರಿಗೆ ಹೋದೆ. ತಿಂಗಳಿಗೊಮ್ಮೆ ಊರಿಗೆ ಬಂದಾಗ ಪ್ರತಿ ಬಾರಿಯೂ ಮೊದಲನೇ ದಿನದ ಬೆಳಗಿನ ಉಪಹಾರಕ್ಕೆ ನೀರುದೋಸೆ ಇರುತ್ತಿತ್ತು. ಈಗ ವರ್ಷಕ್ಕೊಮ್ಮೆ ಭಾರತಕ್ಕೆ ಪ್ರಯಾಣ. ಆದರೆ ಮೊದಲ ದಿನದ ಬ್ರೇಕ್‌ಫಾಸ್ಟ್‌ ಮೆನು ಇನ್ನೂ ಬದಲಾಗಿಲ್ಲ!

ಬಯಲುಸೀಮೆಯಲ್ಲಿ ನೀರುದೋಸೆ ಇಲ್ಲ. ನಮ್ಮ ಮನೆಯಲ್ಲಿ ಇದರ ರುಚಿ ನೋಡಿದ ಗೆಳೆಯರು, ಅವರ ಅಮ್ಮಂದಿರು ಇವರಿಗೆಲ್ಲಾ ಆ ದೋಸೆಗಳು ಮಾತ್ರ ಚೆನ್ನಾಗಿ ಜೀರ್ಣ ಆಗುತ್ತಿದ್ದರೂ 'ಬರೀ ಅಕ್ಕಿ ಹಾಗೂ ನೀರಿನ ದೋಸೆ’ಯ ಕಾನ್ಸೆಪ್ಟ್‌ ಜೀರ್ಣಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ!

ಶಿವ-ಪಾರ್ವತಿ ಸಲ್ಲಾಪದ ಸ್ಟೈಲು ನೀರುದೋಸೆಯಷ್ಟೇ ಸಕತ್ತಾಗಿತ್ತು ಕಣ್ರೀ.

- ಪ್ರಕಾಶ್‌ ದೇವೇಂದ್ರ; ಡಬ್ಲಿನ್‌, ಐರ್ಲ್ಯಾಂಡ್‌

* * *

ನೀವು ಬರೆದಿರುವ ನೀರ್‌ದೋಸೆ ಸವಿಯಲು, ನಮ್ಮ ಕನ್ನಡಿಗ ಡಾ. ಕುಸುಮಾಧರ ಗೌಡರ ಮನೆಗೆ ಹೋಗಬೇಕು! ರುಚಿಯಾದ ದೋಸೆಯ ಜೊತೆಗೆ ನೆಂಚಲು ಪರಿಕರಗಳು, ಮತ್ತು ಅದನ್ನೆಲ್ಲ ವಿಶ್ವಾಸದಿಂದ ಬಡಿಸುವ ಡಾಕ್ಟ್ರು, ಅವರ ಅರ್ಧಾಂಗಿ ವಿಜಯಲಕ್ಷ್ಮಿ. (ಶಿವ, ಪಾರ್ವತಿಯ ಹಾಗೆ)! ತಿಂದೇ ಮೆಚ್ಚಬೇಕು ನೀರ್‌ದೋಸೆಯ ಸವಿಯ! ಧನ್ಯವಾದಗಳು.

- ಶೈಲಜಾ ಗುಂಡೂರಾವ್‌; ಮೇರಿಲ್ಯಾಂಡ್‌


* * *

ಪಾಕ ಪ್ರವೀಣ ಜೋಶಿಯವರಿಗೆ ನಮೊನಮಃ !

- ಅನಂತಕೃಷ್ಣ; ವಿಪ್ರೊ, ಬೆಂಗಳೂರು

* * *

ನೀರುದೋಸೆ ಲೆಕ್ಚರ್‌ (ಅಥವಾ ಏಕಾಂಕ ನಾಟಕ?) ಓದಿದೆ. ಬಾಯಲ್ಲಿ ನೀರೂರಿದ್ದಂತೂ ನಿಜ. ಆದ್ರೆ ಗಂಡಸರಿಗೆ ಅಡಿಗೆ ಬರಲ್ಲ ಅಂತ ಗೊತ್ತಿತ್ತು, ಪರಶಿವನಿಗೂ ಬರಲ್ಲ ಅಂತ ಗೊತ್ತಿರ್ಲಿಲ್ಲ :-) ಮತ್ತೆ, ಮೂರು ಲೋಟ ಅಕ್ಕಿಗೆ ಅದೂ ಜಾಸ್ತಿ ನೀರು ಹಾಕಿ ದೋಸೆ ಮಾಡುವಾಗ ಚಿಟಿಕೆ ಉಪ್ಪು ಹಾಕಿದ್ರೆ ಸಾಕಾಗಲ್ಲ. ನಿಮಗೆ ಪಾ.ಪ ಕನ್ವರ್ಸೇಷನ್‌ ಕೇಳಲಿಕ್ಕೆ ಆಯ್ತು ಅಂದ್ರೆ ಪಾ.ಪ ಗೂ ನಿಮಗೂ ಕಾಂಟಾಕ್ಟ್‌ ಇದೆ ಅಂತ ಆಯ್ತು! ಸೋ, ಪ್ಲೀಸ್‌ ಹೇಳ್ಬಿಡಿ ಪಾ.ಪ ಗೆ ಸ್ವಲ್ಪ ಜಾಸ್ತಿ ಉಪ್ಪು ಹಾಕ್ಲಿಕ್ಕೆ. ಇಲ್ಲ ಅಂದ್ರೆ ಪತಿಯೇ ಪರದೈವ ಅಂಥ ಪಾ ಚಿಟಿಕೆ ಉಪ್ಪು ಹಾಕ್ತಾಳೆ. ಆಮೇಲೆ ಪ ಗೂ ತಿನ್ನಲಿಕ್ಕೆ ಆಗಲ್ಲ , ಪಾ ಗೂ ತಿನ್ನಲಿಕ್ಕೆ ಅಗಲ್ಲ. ಇಬ್ಬರೂ ದಿನಾ ರುಚಿಯಾದ ತಿಂಡಿ ಹುಡುಕಿ ಭೂಲೋಕಕ್ಕೆ ಬರಬೇಕಾದೀತು! ಕೈಲಾಸದಿಂದ ಭೂಲೋಕಕ್ಕೆ ಟ್ರಾವೆಲ್‌ ಮಾಡೋದು ಅವರಿಗೆ ತುಂಬಾ ಸುಸ್ತಾಗಬಹುದು!

- ಸ್ಮಿತಾ; ಬೆಂಗಳೂರು

('ತಾಂಡವನೃತ್ಯ’ದ ಇನ್ಸಿಡೆಂಟಿನ ನಂತರ ಪರಮೇಶ್ವರನಿಗೆ ಬ್ಲಡ್‌ಪ್ರೆಷರ್‌ ಜಾಸ್ತಿ ಇದೆಯಂತ ತಿಳಿದಮೇಲೆ ಡಾ।ಅಶ್ವಿನಿದೇವತೆಗಳು ಪರಮೇಶ್ವರನಿಗೆ ಜಾಸ್ತಿ ಉಪ್ಪು ತಿನ್ನಬಾರದೆಂದು ಎಡ್ವೈಸಿದ್ದರು. ಹಾಗಾಗಿ ಪ ಬೇಕಂತಲೇ ಚಿಟಿಕೆ ಉಪ್ಪು ಹಾಕುವಂತೆ ಹೇಳಿದ್ದು. ಪಾ ಕೂಡ ಆಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಮೊದಲ ಒಂದೆರಡು ದೋಸೆ ಹೇಗೂ ಸರಿಯಾಗಿ ಏಳದೆ ತುಂಡುತುಂಡಾಗುತ್ತದೆ, ಆಗ ಅದರ ರುಚಿನೋಡಿ ಉಪ್ಪು ಕಡಿಮೆಯಿದ್ದರೆ ಬೇಕಿದ್ದರೆ ಹಾಕಿಕೊಂಡೇನು ಅಂತ ಅಂದ್ಕೊಂಡಿದ್ಲು. ಇದು ಕೈಲಾಸದಿಂದ ತಡವಾಗಿ ಬಂದ ವರದಿ, ವಿಚಿತ್ರಾನ್ನ ಪಾಕಶಾಲೆಯಿಂದ ಮರುಪ್ರಸಾರ :-) ಶ್ರಿ)

* * *

ನೀರುದೋಸೆ ಅದ್ಭುತವಾಗಿದೆ. ಒಂದೆರಡು ಬಾರಿ ನನ್ನ ಸ್ನೇಹಿತರ ಮನೆಯಲ್ಲಿ ನೀರುದೋಸೆ ರುಚಿ ನೋಡಿದ್ದರೂ ನಿಮ್ಮ ಲೇಖನದ ನೀರುದೋಸೆ ತಿಂದ ಅನುಭವ ಆಗಿರಲಿಲ್ಲ. ಒಳ್ಳೆ ರುಚಿಯಿಂದ ಕೂಡಿದೆ ನೀವು ಬಡಿಸಿದ ದೋಸೆ. ಮೊದಲನೆ ಪಂಕ್ತಿಯಲ್ಲೇ ಕುಳಿತು ಚೆನ್ನಾಗಿ ಊಟಮಾಡಿದ್ದೇನೆ!

ಹೀಗೆಯೇ ವಿವಿಧ ರುಚಿಗಳನ್ನು ನೀಡುತ್ತಿರಿ.

- ರಘುನಾಥ್‌ ಪಿ ಜಿ; ಬೆಂಗಳೂರು

* * *

ಶಿವ-ಪಾರ್ವತಿ ಸಂಭಾಷಣೆಯ ಮೂಲಕ ನೀರುದೋಸೆಯ ಹೊಸರುಚಿ! ಅದೆಷ್ಟು ಚೆನ್ನಾಗಿ ಬರೆದಿದ್ದೀರಿ! ಬಹಳ ಖುಶಿಯಾಯ್ತು ಓದಲು.

- ತಿಪ್ಪೇರುದ್ರ ಹೊಸಹಳ್ಳಿ; ಬೆಂಗಳೂರು

* * *

ನೀರುದೋಸೆ ಇಲ್ಲಿ ಮೈಸೂರಲ್ಲಿ ನಮ್ಮ ಮನೆಯಲ್ಲೂ ಮಾಡುತ್ತೇವೆ. ಚೆನ್ನಾಗಿರುತ್ತೆ.

- ಹಂಸವೇಣಿ; ಮೈಸೂರು

* * *

ನೀರು ದೋಸೆಗಿಂತಲೂ, ಪರಮೇಶ್ವರ ಪಾರ್ವತಿಗೆ ಅದನ್ನು ಹೇಳಿಕೊಟ್ಟ ರೀತಿಯೇ ರುಚಿಯಾಗಿತ್ತು!!

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

* * *

ಬೊಂಬಾಟಾಗಿದೆ ಸ್ವಾಮಿ... ಇವತ್ತು ಇಲ್ಲಿ ಜಡಿಮಳೆ, ಆದ್ದರಿಂದ ಸಂಜೆ ತಿಂಡಿಗೆ ನೀರ್‌ದೋಸೆ, ಟೊಮೆಟೊ ಚಟ್ನಿ, ಕಾಫಿ.... ಆಹಾ! ಆದ್ರೆ ಈ ನೌಕ್ರಿ ಅಡ್ಡ ಬಂದಿದೆ :-((

- ಶ್ರೀನಿ ರಾವ್‌; ಚಿಕಾಗೊ

* * *

ನೀರ್‌ದೋಸೆ ರೆಸಿಪಿ ಚೆನ್ನಾಗಿ ಬರೆದಿದ್ದೀರಿ. ನೀರ್‌ದೋಸೆ ಜೊತೆ ಕಾಂಬಿನೇಶನ್‌ ಏನು ಗೊತ್ತಾ? ಬಾಳೆಹಣ್ಣಿನ ರಸಾಯನ ತುಂಬ ಚೆನ್ನಾಗಿರುತ್ತೆ. ಒಮ್ಮೆ ಟ್ರೈ ಮಾಡಿ.

- ಅನುರಾಧಾ ಕಲ್ಯಾಣಿ; ಮಿಲ್ವಾಕಿ, ವಿಸ್ಕಾನ್ಸಿನ್‌

* * *

ದಾನೆ ಬಟ್ರೆ, ಎಂಕ್ಲೆನ ನೀರ್‌ತೆಳ್ಳಾವುದಾ ಸಂಗತಿ ಮಾತ ಬರೇತಾರೇ, ಎಡ್ಡೆ ಆಂಡ್‌. ಆಯ್ಕ್‌ ಬ್ರಾಣೇರ್‌ನಕ್ಕುಲು ಮಾತ್ರ ಸೀಪೆದ ಚಟ್ಣಿ ಪಾಡುವೇರ್‌, ಎಂಕ್ಳು ಮಾತ ಕೋರಿದ ಕಜಿಪು ಪಾಡುನೆ.

ಇನ್ನೊಂದು ಸೈಡ್‌ ವಿಷಯ: ಈ ಶಿವ ಪಾರ್ವತಿ ಇಷ್ಟೊಂದು ಸ್ವಲ್ಪ ಬಟ್ಟೆ ಹಾಕಿಕೊಂಡು ಆ ಚಳಿ ಪ್ರದೇಶದಲ್ಲಿ ಹೇಗೆ ಇದ್ದರು? ಸಾಧ್ಯವೇ ಇಲ್ಲ. ಇವರಿಬ್ಬರಿಗೂ ದಪ್ಪಗಿನ ಭಲ್ಲೂಕಚರ್ಮದ ಉದ್ದ ಅಂಗಿ ಹಾಕಿ!

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

* * *

ನೀವು ಒಂದುಕಡೆ ದೋಸಾ ಅಂತಲೂ ಮತ್ತು ಇನ್ನೊಂದು ಕಡೆ ದೋಸೆ ಅಂತಲೂ ಕರೆದಿದ್ದೀರ, ಕೆಲವರು ದೋಸೈ ಅಂತ ಕರಿತಾರೆ, ಹಳ್ಳಿಕಡೆ ದ್ವಾಸೆ ಅಂತಾರೆ - ಈ ಫರ್ಮೆಂಟೆಡ್‌ ಲೆಂಟಿಲ್‌ ಕ್ರೀಪ್ಸ್‌ಗೆ ಸರಿಯಾದ ಪದ ಯಾವುದು?

- ಶ್ರೀನಿಧಿ ಅಂಬಿನಕುಡಿಗೆ; ಊರು?

* * *

ನೀರ್‌ದೋಸೆ ವ್ಯಾಖ್ಯಾನ (ನಾಟಕ) ಓದಿದೆ. ಚೆನ್ನಾಗಿ ನಿರೂಪಣೆ ಮಾಡಿದ್ದೀರ. ಒಂದ್‌ಸಲ ನಾನು ನನ್ನ ಫ್ರೆಂಡ್‌ ಮನೆಗೆ (ಪುತ್ತೂರು, ದ.ಕ) ಹೋದಾಗ ಅವರ ಮನೆಯಲ್ಲಿ ಬೆಳಿಗ್ಗೆ ತಿಂಡಿಗೆ ನೀರ್‌ದೋಸೆ ಮಾಡಿದ್ರು. ಅದೇ ಮೊದಲು ನಾನು ನೀರ್‌ದೋಸೆ ತಿಂದಿದ್ದು. ನಿಮ್ಮ ಲೇಖನ ಓದಿದ ಮೇಲೆ ಮತ್ತೆ ನೀರ್‌ದೋಸೆ ತಿನ್ನೋಣ ಅಂತ ಅನ್ನಿಸ್ತು!

- ಯಶವಂತ ಬಿ ಎಸ್‌; ಹೈದರಾಬಾದ್‌

* * *

ನೀರ್‌ದೋಸೆ ಲೇಖನ ಸೂಪರ್‌!

- ದತ್ತಾತ್ರಿ ರಾಮಣ್ಣ ; ಕ್ಯಾಲಿಫೋರ್ನಿಯಾ

* * *

ನಿಮ್ಮ ನೀರುದೋಸೆ ಲೇಖನ ತುಂಬಾ ಹಾಸ್ಯಮಯವಾಗಿದೆ. ಬಹಳ ಇಷ್ಟ ಆಯಿತು.

- ರೇಖಾ ಆರ್‌; ಸಿಯಾಟಲ್‌

* * *

ನೀರ್‌ದೋಸೆ ಮಾಡಲು ಒಂದೆರಡು ಸಲ ಪ್ರಯತ್ನಿಸಿದ್ದುಂಟು. ಚೆನ್ನಾಗಿ ಬರಲಿಲ್ಲ. ಏನಾದರೂ ಟಿಪ್ಸ್‌ ಇದ್ದರೆ ತಿಳಿಸಿ.

- ರೇಣುಕಾ ಶಾಮ್‌; ನವದೆಹಲಿ

* * *

ನೀರ್‌ದೋಸೆ ಮಾಡಿ ಚಿಕನ್‌ ಪಲ್ಯದ ಜತೆ ತಿಂತೇವೆ ನಾವು. ಬಾಳೆಹಣ್ಣಿನ ರಸಾಯನ ಕೂಡ ಚೆನ್ನಾಗಿರುತ್ತದೆ. ಅಂದಹಾಗೆ, ನಾನು ನಾನ್‌-ಸ್ಟಿಕ್‌ ಕಾವಲಿಯಲ್ಲೂ ಚೆನ್ನಾಗಿಯೇ ನೀರ್‌ದೋಸೆ ಮಾಡುತ್ತೇನೆ, ಏನೂ ತೊಂದರೆಯಿಲ್ಲ. ಹಿಟ್ಟುಹಾಕುವ ಮೊದಲು ಕಾವಲಿಗೆ ಎಣ್ಣೆ ಹಚ್ಚಬೇಕು, ಅಷ್ಟೆ.

- ಸುಚಿತ್ರಾ ಶೆಟ್ಟಿ; ಯು.ಕೆ

* * *

ತುಂಬ ಚೆನ್ನಾಗಿದೆ ನಿಮ್ಮ ಲೇಖನ. ಓದುತ್ತ ಇದ್ರೆ ಒಂದು ಕಲಾಕ್ಷೇತ್ರದಲ್ಲಿ ನಾಟಕ ನೋಡುತ್ತ ಇರುವಹಾಗೆ ಅನುಭವವಾಯಿತು. ನಗು ಉಕ್ಕಿಬರುತ್ತಿತ್ತು. ಈ ನೀರುದೋಸೆ, ಶಿವ-ಪಾರ್ವತಿಯರ ಸಂಭಾಷಣೆ ಓದಿ ನನ್ನ ಹಾಗೆ ಎಷ್ಟೊಂದು ಜನ ಓದುಗರಿಗೆ ಸಂತೋಷ ಕೊಟ್ಟಿದ್ದೀರ. ಈ ಸಂಭಾಷಣೆಯಲ್ಲಿ ಏನೆಲ್ಲ ಅಡಗಿದೆ, ನಿಜವಾಗ್ಲೂ ನೀವು ನಮ್ಮ ಡಲ್‌ ಡೇ ನ ಎಂಜಾಯೆಬಲ್‌ ಆಗಿ ಮಾಡಿದಿರಿ!

- ಗಿರಿಜಾ ಮೇಘನಾಥ್‌; ನಾರ್ತ್‌ ಕೆರೊಲಿನಾ

* * *

Todays Vichitranna was so funny, I really laughed so hard, started getting stomachache! May be I should make Neer Dosa and eat just to ease my ache (I mean it, the article is extremely fun-filled). Sorry I cant do that since I am at work. But it is very informative too, now everybody can learn how to make Neer Dose.

Here in US, what rice could we substitute for Belthige Akki? I use regular long grain Mahatma Rice. Thanks for this one.

- Usha Bhat; Florida

* * *

It is very nice to know that Shiva and Parvati have been discussing Dakshina Kannada, neeru dosa, and Tulu nadigaru. The article is well written and full of humor. It was a pleasure to read and gave me plenty of laughs. I agree that neeru dosa is the best and my two boys love it. Its their favorite dosa. I had no idea that people in DakshinaKannada celebrate birthdays of babies every month for first 6 months.

- Asha Shetty; Miami, FL

* * *

I read your article, it was good. So you dont have awards here like your previous article which dosa is nominated more gets a prize, some new invention of Dosa gets a prize etc etc. Anyhow whatever you say no other Dosa can beat Mysore masala Dosa.

I rarely send comments for articles just read and keep quite but got a very prompt reply from you last time which prompted me to write again.

- Vanitha Belur; Milpitas, California

* * *

My wife Aruna Dongre has read article written by you. She also prepares neerdose seekarane at least 2-3 times in a year. seekarane with coconut milk and jaggery. She reads your column regularly and enjoys it. keep it up. All the Best!

- Vijay Dongre; Pune

* * *

We really enjoyed Neer dosa. As directed by Parameshwara, it was very very tasty!

- Padmanabha Kakathkar; Pune

* * *

The taste of Neer Dose was excellent. Related to this I have 2 memories.

1. Net Banians always used to remind me roast neerdose due to the perforations!

2. During school days while returning home we were often witnessing rainy evenings where smell of NeerDose was attacking our nose with smoke trying to ooz out through the roofs of nearby thathed huts !

- Chidambar Kakathkar; Mangalore

* * *

I read your "Neer Dosa" column in thatskannada.com. It is just wonderful. Conversation between PaPa really made me to laugh to the hell. Thank you very much for the wonderful column. Expecting the new columns like this in future.

With warm regards,

- Shwetha Nadig; City?

* * *

I read your nIrudOse article, Want to try one of these days.

- Dr Mysore Nataraja; Potomac, Maryland

* * *

Article is as tasty as Neerdosa. I really enjoyed it amidst my busy schedule in the office. Article will be hit as dose HIT :-)

Congratulations!

- Soory Haardalli; Bangalore

* * *

I did read your dosa article & have this to say:

ದೋಸಾಯಣದ ಧನ್ಯತೆಯನು ತಿಳಿಸಿದ ನಿಮಗೆ ಧನ್ಯವಾದಗಳು. ಬಾಯಲ್ಲಿ ನೀರೂರಿಸಿದ ನೀರುದೋಸೆ ತಿನ್ನಲು ದಕ್ಕದಿದ್ದರೂ ಇಂಟರ್ನೆಟ್‌ನಲ್ಲಿ ಚಿತ್ರನೋಡಿ ಧನ್ಯರಾದೆವು!

- Dr.Meena B. Subbarao; California

* * *

I am Ravi, also from BDT (97 E&C) working in Simi Valley, CA. I am a regular reader of Thatskannada.com (of course your Vichitranna too). When ever I feel like missing home, I just log on to Thatskannada and spend sometime with it. I think I have seen you in my college. I was thinking of writing to you for long.

And coming back to Neer dose purana, ಅದು ದಕ್ಷಿಣಕನ್ನಡದಲ್ಲಿ ಮಾತ್ರ ಅಲ್ಲಾ ಮಾರಾಯರೆ, ಮಲೆನಾಡಿನಲ್ಲೂ ಮಾಡ್ತಾರೆ ! By the way I am from Thirthahalli and people of malenadu are cooking Neerudose from, I do not know when. But whatever, neerdose ge jawab nahi. It tastes good with coconut chutney and ghee too.

- Raviraj J.S; Simi Valley, CA

* * *

Mouthwatering stuff explained in innovative style!

- Naganur Shivanand; Bangalore

* * *

Your recent Shiva-Paravati sallApa regarding nIru dOse was nice.

- Dr Shrivatsa Desai; Doncaster, UK

* * *

Neerdose article is very informative and also very humorous at some places. I liked the term "pa, paa" for Parameshwara and Parvathi. I’ve already mentioned to you, you are very good with words :-)

- Pushpalatha; Bangalore

* * *

Super! Super! Super! I have tasted neerdose once when I had been to my friend’s place in Udupi. It’s so nice!

- Malli Sannappanavar; South Carolina

* * *

Neerdose episode of vichitranna is one of the best youve written. Simply superb!

- Shrilatha P; Bangalore

English summary
Vichitranna readers responses to Neer Dosa, A mouthwatering dish from Dakshina Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X