• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೂರರ ನಂತರ ಸಂಪತ್ತುಗೆ ಏನಾಯ್ತು ?

By Staff
|

(ವಿಚಿತ್ರಾನ್ನದಲ್ಲಿ ಸಂಪತ್ತುವಿನ ಹಾಡು ಮತ್ತು ಹಣ್ಣಿನತೋಟದ ಭೇಟಿ ಬಗ್ಗೆ ಓದಿ ಸಂಪತ್ತುವಿನ ಪ್ರಾಯದ ಬಾಲ್ಯದ ನೆನಪುಗಳಿಗೆ ಜಾರಿದವರು ಕೆಲವರಾದರೆ ಒಬ್ಬ ಓದುಗರು ಸಂಪತ್ತು ನೂರಾದ ಮೇಲೆ ಏನು ಮಾಡಿದ, ಏನಾಯ್ತು ಅವನಿಗೆ ಎಂದು ‘ಬ್ಯಾಕ್‌ ಟು ದ ಫ್ಯೂಚರ್‌’? ಇಮ್ಯಾಜಿನಿಸಿದ್ದಾರೆ! ಪತ್ರ ಬರೆದವರಿಗೆಲ್ಲ ಥಾಂಕ್ಯೂ ‘ಬೆರ್ರಿ’ ಮಚ್‌!

- ಶ್ರೀವತ್ಸ ಜೋಶಿ.)

Around the world in a basket of Berry!ನಮಸ್ಕಾರ ಜೋಶಿಯವರೇ!

ಕೊಯ್ದು ತಿಂದ ಹಣ್ಣು ರುಚಿ ಎಂದು ಬರೆದಿದ್ದೀರಿ. ಪದ್ಯದ ಸಂಪತ್ತುವಿನಂತೆ ಚಿಕ್ಕಂದಿನಲ್ಲಿ ಸಾಹಸ ಮಾಡಿ (ಕದ್ದು ಕೊಯ್ದು) ತಿಂದಹಣ್ಣುಗಳು ಇನ್ನೂ ರುಚಿ ಎಂದು ಒಪ್ಪಿಕೊಂಡಿದ್ದೀರಿ! ನಿಮ್ಮಂತೆ ಹಳ್ಳಿಯಲ್ಲಿ ಹುಟ್ಟಿ ಬೆಳೆಯುವ ಪುಣ್ಯ ಈಗ ಎಷ್ಟು ಮಕ್ಕಳಿಗೆ ಇದೆ? ‘ಇಂಗ್ಲಿಷ್‌ ಮೀಡಿಯಂ ವಿದ್ಯಾಭ್ಯಾಸ’ ಎಂಬ ಮರೀಚಿಕೆಯ ಬೆನ್ಹತ್ತಿ, ಹಳ್ಳಿಯ ಮಕ್ಕಳಲ್ಲಿ ಹಲವರು ಪಟ್ಟಣದ ಶಾಲೆಗಳನ್ನು ಸೇರಿಬಿಡುತ್ತಿದ್ದಾರೆ. ಅವರಿಗೆಲ್ಲಿ ಕಾಡು ಗುಡ್ಡಗಳ ಹಣ್ಣುಗಳ ಪರಿಚಯ? ಪಟ್ಟಣಗಳಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಮರಗಿಡಗಳನ್ನು ಪರಿಚಯ ಮಾಡಿ ಕೊಡುವ ‘ಬಟ್ಲರ್ಸ್‌ ಒರ್ಚರ್ಡ್‌’ ತರಹದ ಗಾರ್ಡನ್‌ಗಳು ನಮ್ಮ ಪಟ್ಟಣಗಳ ಬಳಿಯೂ ಶುರುವಾದರೆ ಒಳ್ಳೆಯದೇನೊ? ಬಟ್ಲರ್ಸ್‌ ಒರ್ಚರ್ಡ್‌ ತರಹದ ತೋಟಗಳ ಕಾನ್ಸೆಪ್ಟನ್ನು ಪರಿಚಯಿಸಿದ ಲೇಖನಕ್ಕೆ ಧನ್ಯವಾದಗಳು.

- ಎಸ್‌. ಮಧುಸೂದನ ಪೆಜತ್ತಾಯ; ಬೆಂಗಳೂರು

*

ನೂರಾದ ಮೇಲೆ? (ಆಗಿನ್ನು ಮನೆ ಸೇರಿದ್ದ ಸಂಪತ್ತು ಮಾಡಿದ್ದಾದರೂ ಏನು? ನನ್ನ ಹಾಗೆ ಸಾಫ್ಟ್‌ವೇರ್‌ ರಿಲೀಸ್‌ ಜಂಜಾಟದಲ್ಲಿ ಮುಳುಗಿದನೆ? ಏನು ಕಥೆ?

ನೂರಿಗೆ ಹತ್ತು ನೂರ್ಹತ್ತು

ಸಂಪತ್ತು ಬೆಳೆದದ್ದಾಗಿತ್ತು!

ಅದಕಿನ್ಹತ್ತು ನೂರಿಪ್ಪತ್ತು

ಆಫೀಸ್‌ ಫೋನ್‌ಕಾಲ್‌ ಬಂದಿತ್ತು!

ಹತ್ತನು ಸೇರಿಸಿ ನೂರ್ಮೂವ್ವತ್ತು

ಆಫೀಸ್‌ಗೆ ವಾಪಸ್‌ ಬಂದಾಯ್ತು

ನೂರ್ಮುವ್ವತ್ತಾಯ್ತು ನೂರ್ನಲ್ವತ್ತು

ಸಂಪತ್‌ಗೆ ಮೋಕ್ಷ ಕಾದಿತ್ತು ;-)

ನೂರ್ನಲ್ವತ್ತಾಗಲು ನೂರೈವತ್ತು

ಸಾಫ್ಟ್‌ವೇರ್‌ ರಿಲೀಸ್‌ನ ಗೋಳಿತ್ತು!

ಮೇಲ್ಹತ್ತು ಸೇರಿಸಿ ನೂರರ್ವತ್ತು

ಸುಸ್ತಿಗೂ ಅಷ್ಟೇ ವಯಸಾಯ್ತು :)

ಇನ್ನ್ಹತ್ತು ಕೂಡಲು ನೂರೆಪ್ಪತ್ತು -

ಸಂಪತ್ತು ಹಣ್ಣನು ಮರೆತಾಯ್ತು

ನೂರೆಪ್ಪತ್ತು ಹತ್ತು ನೂರೆಂಬತ್ತು -

ಸಂಪತ್ತು ತಲೆಯೇ ಹಣ್ಣಾಯ್ತು :)

ಹತ್ತೊಂದು ಸೇರಿಸೆ ನೂರ್ತೊಂಬತ್ತು

ಹೆಣಗಿದ ಗೊಣಗಿದ ಸಂಪತ್ತು!

ಇನ್ನಹತ್ತು ಸೇರಿಸೆ ಇನ್ನೂರು !

ಸಾಕಪ್ಪ ಸಾಕು ಸಾಫ್ಟ್‌ವೇರು :)

- ಜಯಶ್ರೀ ಎಚ್‌ ಆರ್‌; ಬೆಂಗಳೂರು

*

ಇಂದು 29 ಜೂನ್‌ ಮಂಗಳವಾರ ನಿಮ್ಮ ‘ಹಣ್ಣಿನ ತೋಟ’ದ ವಿಚಿತ್ರಾನ್ನ ಬಂದ ದಿನ ದೇವಶಯನಿ ಏಕಾದಶಿ (ಆಷಾಢ ಮಾಸದ ಪ್ರಥಮೈಕಾದಶಿ) ಅಲ್ವೆ? ನಿಮ್ಮ ಜೊತೆ ಬಟ್ಲರ್ಸ್‌ ಒರ್ಚರ್ಡ್‌ನಿಂದ ನಮಗೆಲ್ಲ ಹಣ್ಣಿನ ಸೇವನೆ ಮಾಡಿಸಿದಿರಿ. (ನಾನೋ ಓದುತ್ತ ಓದುತ್ತ ನಿಜವಾಗಲೂ ಪಪ್ಪಾಯಿ ತಿಂತಾ ಇದ್ದೆ)! ನಮಗೂ ನೀವು ಬಾಲ್ಯದ ದಿನಗಳನ್ನು ನೆನಪಿಸುವದರ ಜತೆಗೆ, ಏಕಾದಶಿಗೆ ಹಣ್ಣು ತಿನ್ನಿಸಿದಿರಿ. ತುಂಬ ಸಿಹಿಯಾಗಿತ್ತು. ನಾನು ಸಂಪತ್ತುವಿಗೂ ಥಾಂಕ್ಸ್‌ ಹೇಳ್ತೀನಿ. ಮರೆತು ಹೋಗಿದ್ದ ಕವಿತೆಯನ್ನು ನಮಗೆ ನೀಡಿದ್ದಕ್ಕೆ ಧನ್ಯವಾದಗಳು.

ನಾವು ಗುಬ್ಬಿ ಎಂಜಲು ಮಾಡಿ ಹಂಚಿಕೊಳ್ಳುತ್ತಿದ್ದೆವು. ಧಾರವಾಡ ಕಡೆ ಒಂದು ಥರ ಏಲಚಿ ಹಣ್ಣು ಅಂತಾರೆ, ಅದನ್ನು ತಿಂದು, ಅದರ ತೆಳುವಾದ ಸಿಪ್ಪೆ ಬಿಡಿಸಿ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಬೆಳಿಗ್ಗೆ ದುಡ್ಡು ಸಿಕ್ಕುತ್ತೆ ಎಂದು ನಂಬಿ ಹಾಗೆ ಪಾಲಿಸುತ್ತಿದ್ದ ಬಾಲ್ಯದ ಸುದಿನಗಳನ್ನು ಮರೆಯಲುಂಟೆ?

ನಿಮ್ಮ ಕಡೆ ಊರಿನ ಹಬ್ಬ ಹರಿದಿನಗಳ ಬಗ್ಗೆಯೂ ಪರಿಚಯಿಸಿ, ಹಾಗೆಯೇ ಸ್ಪೆಷಲ್‌ ಅಡಿಗೆ ತಿಂಡಿ ಇತ್ಯಾದಿ ಕೂಡ.

- ರೇಣುಕಾ ಶಾಮ್‌ ನಿಡಗುಣಿ; ನವದೆಹಲಿ

(ವಿಚಿತ್ರಾನ್ನದ ಹಳೆ ಸಂಚಿಕೆಗಳನ್ನು (http://www.thatskannada.com/column/vichitranna/index.html) ತಿರುವಿದರೆ ಅದರಲ್ಲಿ ದ.ಕ ಅಡುಗೆಯ ಕೆಲವು ಪ್ರಾತಿನಿಧಿಕ ಸ್ಯಾಂಪಲ್‌ - ಉಡುಪಿಊಟ, ಪತ್ರೊಡೆ, ಬನ್ಸ್‌, ಸುರ್ನೋಳಿ, ಪಂಚಾಮೃತ ಇತ್ಯಾದಿಯೆಲ್ಲ ತಿನ್ನಲು ಸಿಗುತ್ತದೆ ನಿಮಗೆ. ಮುಂದೆಯೂ ಆವಾಗಾವಾಗ ಸಾಂದರ್ಭಿಕವಾಗಿ ಬರೆಯುವ ಪ್ರಯತ್ನ ಮಾಡುತ್ತೇನೆ -ಜೋಶಿ.)

*

ನಿಮ್ಮ ಲೇಖನ ಓದಿದೆ ‘ತೋಟಕೆ ಹೋದ ಸಂಪತ್ತು...’. ನಿಮ್ಮ ನೆನಪುಗಳನ್ನು ಸುಲಲಿತವಾಗಿ ಬರವಣಿಗೆಗೆ ಇಳಿಸ್ತೀರ ನೀವು! ನಾವೂ ನಿಮ್ಮ ಬರಹದ ಮೂಲಕ ನಮ್ಮ ಬಾಲ್ಯದ ದಿನಗಳ ಅಂಗಳಕ್ಕೆ ಹೋಗುವ ಹಾಗಾಯ್ತು. ಅಂದಹಾಗೆ ‘ಹಣ್ಣು ಮಾರುವವನ ಹಾಡಿನ’ ಸಾಹಿತ್ಯ ನಿಮ್ಮಲ್ಲಿದ್ದರೆ ತಿಳಿಸುತ್ತೀರಾ? ನನ್ನ ಅಣ್ಣನ ಮಗಳಿಗೆ ಮತ್ತು ಅಕ್ಕನ ಮಗನಿಗೆ ಆ ಹಾಡನ್ನು ಕಲಿಸಿಕೊಡಬೇಕೆಂದಿದ್ದೇನೆ.

- ರಾಧಿಕಾ ಎಂ ಜಿ; ಬೆಂಗಳೂರು

(ಹಣ್ಣು ಮಾರುವವನ ಹಾಡಿನ ಸಾಹಿತ್ಯ ಹೀಗಿದೆ, ನೋಟ್‌ ಮಾಡಿಟ್ಟುಕೊಳ್ಳಿ. ಬರೆದ ಕವಿ ಯಾರೆಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಬಹುದು. -ಜೋಶಿ.)

ನಂಜನಗೂಡಿನ ರಸಬಾಳೆ

ತಂದಿಹೆ ಕೊಡಗಿನ ಕಿತ್ತೀಳೆ

ಬೀದರ ಜಿಲ್ಲೆಯ ಸೀಬೆಯ ಹಣ್ಣು

ಬೆಂಗಳೂರಿನ ಸೇಬಿನ ಹಣ್ಣು

ಕೊಳ್ಳಿರಿ ಹಿಗ್ಗನು ಹರಿಸುವವು

ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ

ಬೆಳವಲ ಬಯಲಿನ ಸಿಹಿಲಿಂಬೆ

ಬೆಳಗಾವಿಯ ಸವಿ ಸಪೋಟ

ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು

ದೇಹದ ಬಲವನು ಬೆಳೆಸುವವು

ಗಂಜಾಮ್‌ ಅಂಜೀರ್‌

ತುಮಕೂರ್‌ ಹಲಸು

ಧಾರವಾಡದ ಆಪೂಸು

ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ

ಕನ್ನಡ ನಾಡಿನ ಹಣ್ಣುಗಳ

*

ಶಂಕುಸ್ಥಾಪನೆ ಕುರಿತು...

ನನ್ನ ಬಳಿ ಪ್ರೊ।ಜಿ.ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ’ ನಿಘಂಟಿನ ಪ್ರತಿ ಇದೆ. ‘ಶಂಕುಸ್ಥಾಪನೆ’ ಪದದ ಬಗ್ಗೆ ಅವರು ಆ ಪುಸ್ತಕದಲ್ಲಿ ಹೀಗೆಂದಿದ್ದಾರೆ -

ಶಂಕು ಎಂಬ ಶಬ್ದವು ಸಂಸ್ಕೃತದ್ದು. ಅದಕ್ಕೆ ಅನೇಕ ಅರ್ಥಗಳಿವೆ. ಶಂಕುಸ್ಥಾಪನೆ ಎಂಬ ಶಬ್ದದಲ್ಲಿ ಅದಕ್ಕೆ ಸ್ತಂಭ - ಕಂಬ ಎಂಬುದು ಮುಖ್ಯವಾದ ಅರ್ಥ. ವಾಸ್ತುಶಾಸ್ತ್ರದಲ್ಲಿ ದೇವಾಲಯ, ಕಟ್ಟಡ ಮುಂತಾದವುಗಳ ನಿರ್ಮಾಣದ ಪ್ರಾರಂಭದಲ್ಲಿ ಒಂದು ಸ್ತಂಭದ ಸ್ಥಾಪನೆ ಮಾಡುವುದು ಸಂಪ್ರದಾಯ. ಇದಕ್ಕೆ ಮೂಲಸ್ತಂಭ ಎಂಬ ಪ್ರಯೋಗವು ಪ್ರಚಾರದಲ್ಲಿದೆ. ಆನೇಕ ಶಾಸನಗಳ ಪ್ರಾರಂಭದ ಶ್ಲೋಕದಲ್ಲಿ ‘ತ್ರೈಲೋಕ್ಯ ನಗರಾಂಭ ಮೂಲಸ್ತಂಭಾಯ ಶಂಭವೇ’ ಎಂಬ ಪ್ರಾರ್ಥನೆಯ ಮಾತು ಬರುತ್ತದೆ. ಅದೇ ಶಂಕುಸ್ಥಾಪನೆ. ಈಗ ಅದಕ್ಕೆ ತಳಪಾಯ, ಅಡಿಗಲ್ಲು ಹಾಕುವುದು ಎಂಬ ಅರ್ಥವಿದೆ.

- ಭಾಸ್ಕರ್‌ ತೈಲಿಗೆರಿ; ವ್ಹೈಟ್‌ ಪ್ಲೈನ್ಸ್‌, ನ್ಯೂಯಾರ್ಕ್‌

*

ಶಂಕು ಅಂದರೆ ಈಟಿ, ಗೂಟ ಎನ್ನುವಂತಹ ಅರ್ಥ ಇದೆ. ಆದ್ದರಿಂದ ಶಂಕುಸ್ಥಾಪನೆ ಎಂದರೆ ಕಟ್ಟಡಗಳನ್ನು ಕಟ್ಟಲು ಪ್ರಾರಂಭ ಮಾಡುವಾಗ ಗೂಟ ನೆಡುವ, ಪೂಜಿಸುವ ಕೆಲಸಕ್ಕೆ ಹೆಸರಾಗುತ್ತದೆ ಎಂದು ಕಾಣುತ್ತದೆ.

ನಿಮ್ಮ ಬರಹಗಳನ್ನು ಓದುತ್ತಿರುತ್ತೇನೆ. ಈಚೆಗೆ ಬೇರೆ ಕೆಲಸಗಳ ಮಧ್ಯೆ ಬರೆಯಲು ಹೆಚ್ಚಾಗಿ ಆಗುತ್ತಿಲ್ಲ. ಅಂದ ಹಾಗೆ ಈ ವಾರದ ಸಂಪತ್ತು ಮೇಲಿನ ಹಾಡಿಗೆ, ಇನ್ನೂ ಅನೇಕ ವಿಷಯಗಳಂತೆ ನಾವು ಕೃತಜ್ಞರಾಗಿರಬೇಕಾದದ್ದು ಜಿ.ಪಿ. ರಾಜರತ್ನಂ ಅವರಿಗೆ!

- ಕೃಷ್ಣಪ್ರಿಯ; ಕುಪರ್ಟಿನೊ, ಕ್ಯಾಲಿಫೋರ್ನಿಯಾ

*

I appreciate your language, and the way of writing, to remember childwood days.

- Nagarathna Nanjundappa; Bangalore

*

Your article on fruits, along with nursery rhyme, is Simply good! I am very happy about your interest in kannada!

- Raghavendra H; Bangalore

*

Part 1: I enjoyed reading about your visit to the nearby orchards. So cool. Come years, your son will remember these visits like how we do now.

Part 2: Second leg of the journey taking all of us (Free trip) to the orchards down memory lane is even more cool.

- Sham; Bangalore

*

Even though I didnot/ coudnot enjoy living in a village, attacking someones totas, I did enjoy stealing Seebe Kai and mavina kai from our rear house when I was a kid. Our rear house had these two huge trees (easily accessible from my house) which they never cared for. So in every summer my friends and I used to pluck all the fruits and distribute among the entire neighborhood. Even till today anyone in the neighborhood wants mavinakai for chutney, or mavina soppu during festivals they come to our house thinking that the tree belongs to us :))

I donot know about others but through your vichitranna I often go back to my childhood and enjoy the memories.

Regards,

- Rashmi Gopalakrishna; Virginia

*

We are in Sydney from 8 yrs. We live in Liverpool area where you can see lot of Bangalore people.

I dont miss any of your article, I will be waiting for wednesday (for us here in Australia) since I can read your Vichithranna. I cannot wait until my lunch time, I will be reading it part by part at my morning coffee break. Your articles are very informative. Beleive me or not, after I found this website, I dont feel homesick at all. I take printouts of your article for my husband also, since we dont have time at home to browse.

I visited India during April 2004 with my daughter. I told my amma that now I can read news on internet. she was surprised and she was very happy since I was fond of Sudha and Tharanga magazines and sometimes we use to fight for magazines!

Can you give us one Vichithranna episode on Time Management?

Abhimani,

- Anitha Shashidhar; Sydney, Australia

*

Namma BangaaLi friendge berry berry iShTavaada haNNu andare berry-berry. Berry ge sambandhavillada rOga: beriberi (Beriberi literally means "I cant, I cant" in Singhalese, which reflects the crippling effect it has on its victims.)

I had planted strawberries in my backyard over 10 years ago, and it kept growing wild. Even though it is a popular fruit, I dont like them so much, too mildly sweet, get spoiled very quickly and hardly any aroma. Now we have blackberries in the backyard, but I am the only one who eats them.

In 2001, we went on a long trip (over 2000 miles driving) around the National Parks in Arizona, Utah. At one place, driving in a canyon parallel to a small stream, we saw a sign: Pick your own apples and peaches. Surprising sign, since much of the surrounding area is a desert, and it is desolate. There was an apple orchard with a small gate. Inside, the apples were ripe, peaches not yet. But no person! Just a scale near the gate, and a box to put the money. You pick, you weigh, you pay ($0.50 per pound), go!

Here is a fact that you might not have known:

Strawberries are not really berries or fruit in the "botanical" sense (i.e., the end result of a fertilized plant ovum). A strawberry is actually an "aggregate fruit" -- the "real" fruit are the objects we think of as the "strawberry seed" -- properly called "achenes" -- which are fruits in the same way that a raw sunflower seed with its tough shell is a fruit. The "berry" is actually an "enlarged receptacle" and is not reproductive material. As a result, strawberries must be picked at full ripeness, as they cannot not ripen once picked. The strawberry plant has seeds on the outside skin rather than having an outer skin around the seed, as most berries do.

Compare that with Cashew, which is also NOT a nut, and the cashew fruit is not the fruit. This is somewhat obvious when the cashew is very young and the stem (which becomes the apple) is small, and short. Fruit: is a 1 inch nut, shaped like a small boxing glove, hanging below a fleshy, swollen peduncle (receptacle) called the "cashew apple". Fruit borne singly or in small clusters. Fruit matures in 60-90 days. Apple is 2-4.5 inches in length, pear-shaped, yellow or red skin covering the fibrous, juicy, astringent yellow pulp.

- Dinesh Nettar; New Jersey

*

I read the vichitranna abt sampattu! It was nice. nanna tamma USnalli iddaga neevu bareda place annu visit maadidante tilisidda nenapu.

- Sandhya Shamji; Hyderabad

*

I liked this article as I am very fond of fruits and fruits bearing trees. Its such a good habit to eat fruits as every fruit is always rich in some vitamins or other. And the best thing with fruits is, they are always pure and do not get contaminated. Its a good habit to teach children to develop a liking for fruits. Its much better compared to chocolates or crisps or any other junk food. In our home, its a house rule for children to eat a portion of fruits every day when they return from school.

Its very true, eating fruits from the source is always a special feeling. Its a good idea for those of us who have the facility to plant a fruit bearing plant or tree. I have planted strawberry plants in my back garden. I also have planted an apple tree and a plum tree. It is a pleasure to see these plants bearing nice fruits.

This article appeared at most appropriate time when I was exchanging ideas about growing fruits bearing trees in front / back garden with a friend of mine who now lives in New Zealand. He has grown an avocado tree in his garden and was telling me what a pleasure it is to pluck the required quantity of avocado from their own tree when ever required. And on same day, this article appeared and I explained this to my friend, though he does not read Kannada, he has liked the article and the ideas expressed within.

Our late father was so fond of bruits bearing trees, he has planted literally every possible fruit bearing tree in and around our house. I remember an incident when he travelled to Mumbai, he planted seeds of jackfruit near our brothers apartment and really hoped for it to grow in to a big tree there! I have named the apple tree in our front garden with his initials, there is a JRB name tag on the tree. There are about 10 to 15 apples on the tree, these are still tender now. I am sure in next couple of years the tree will give hundreds of apples.

- Narahari Joshi; Leeds, England

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more