ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟಿಯಾಖ್ಯಾನದಿಂದ ಸಂತುಷ್ಟರಾದವರು...

By Staff
|
Google Oneindia Kannada News
ಗಣೇಶ ತುಂಬಾಮಂದಿಯ ಇಷ್ಟದೈವ. ಆದ್ದರಿಂದಲೇ ಅಂಗಾರಕಿ ಸಂಕಷ್ಟಿ ದಿನದಂದು ಗಣೇಶ ವಿಶೇಷ ಸಂಚಿಕೆ ಎಲ್ಲರಿಗೆ ಇಷ್ಟವಾಯಿತು. ಗಣಪನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಒದಗಿಸಿ ಪತ್ರ ಬರೆದವರೆಲ್ಲರಿಗೂ ಧನ್ಯವಾದಗಳು. ಜೈ ಗಣೇಶ್‌!! - ಶ್ರೀವತ್ಸ ಜೋಶಿ.

Sri Ganeshaya Namaha ಅಂಗಾರಕಿ ಸಂಕಷ್ಟ ಚತುರ್ಥಿ ಲೇಖನ ಒದಿ ಅದರ ಬಗ್ಗೆ ವಿವರವಾಗಿ ತಿಳಿಯಿತು. ಅದಕ್ಕಾಗಿ ನಿಮಗೆ ಧನ್ಯವಾದಗಳು. ಪ್ರತಿ ಮಂಗಳವಾರ ಬೆಳಗಿನ ವಾಕ್‌ನಿಂದ ಬಂದ ತಕ್ಷಣ ವಿಚಿತ್ರಾನ್ನವನ್ನು ಊಟ ಮಾಡೋದು ನನ್ನ ಕ್ರಮ. ಈದಿನ ಬೇರೆ ಕೆಲಸ ಮಾಡುತ್ತ ಮಧ್ಯಾಹ್ನದ್ಹೊತ್ತಿಗಷ್ಟೇ ಕಂಪ್ಯೂಟರ್‌ ಆನ್‌ ಮಾಡಿದೆ. ನನ್ನ ಬೆಳಗಿನ ಉಪಾಹಾರ ಮುಗಿದಿತ್ತು. ನನ್ನ ಮಗಳು ಸಹ ಆಫೀಸಿಂದ ಫೋನ್‌ ಮಾಡಿ ‘ಈಗತಾನೆ ವಿಚಿತ್ರಾನ್ನ ಲೇಖನವನ್ನು ಊಟ ಮಾಡುತ್ತ ಓದಿದೆ, ಎಂಥ ಕೆಲಸ ಆಯ್ತು - ಉಪವಾಸ ಮಾಡಬಹುದಿತ್ತು, ನಾಲ್ಕು ಸ್ಪೂನ್‌ ತಿಂದಿದ್ದೆ ಅಲ್ಲಿಗೇ ನಿಲ್ಲಿಸಿದೆ’ ಎಂದು ಹೇಳಿದಳು! ನಾವು ರೆಗ್ಯುಲರ್‌ ಆಗಿ ಸಂಕಷ್ಟ ಚತುರ್ಥಿ ಆಚರಿಸದ ಕಾರಣ ಈದಿನ ಗೊತ್ತಾಗಿರಲಿಲ್ಲ. ಸಂಜೆ ಮನೆಯಲ್ಲಿ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಹೋಗೋಣ ಎಂದು ನನ್ನ ಅಳಿಯ ಅವರಿಗೆ ಫೋನ್‌ ಮಾಡಿದೆ. ಆದ್ದರಿಂದ ಈದಿನದ ಪೂಜೆಯ ಫಲ ನಿಮಗೆ ಸೇರಬೇಕು!

ಗಣೇಶ ಬ್ರಹ್ಮಚಾರಿ ಎಂದು ಗೊತ್ತು. ಅವನಿಗೆ ಹೆಂಡತಿ ಮಕ್ಕಳು ಇದ್ದಾರೆ ಹೆಸರ್ಹೇಳಿ ಎಂದು ನಮ್ಮ ಮಂಡೆಗೆ ಕೆಲಸ ಕೊಟ್ಟಿದ್ದೀರಾ, ವಿಚಾರ ಮಾಡಿ ತಿಳಿದರೆ ಉತ್ತರಿಸುತ್ತೇನೆ.

- ಚಂದ್ರಪ್ರಭಾ ತಮ್ಮಯ್ಯ; ಲೌರೆಲ್‌, ಮೇರಿಲ್ಯಾಂಡ್‌

*

‘ಅಂಗಾರಕಿ ಸಂಕಷ್ಟಿ’ ಲೇಖನದಿಂದ ನನಗೆ ಗೊತ್ತಿಲ್ಲದ ಹಲವು ವಿಚಾರಗಳು ತಿಳಿದುವು. ಧನ್ಯವಾದಗಳು. ನಮ್ಮಲ್ಲಿ ಗಣೇಶನನ್ನು ಬ್ರಹ್ಮಚಾರಿಯೆಂದು ಪರಿಗಣಿಸಿ ಅಂತೆಯೇ ವ್ರತದಂದು ಒಂಟಿ ಮೂರೆಳೆಯ ಯಜ್ಞೋಪವೀತ ಹಾಕಿ ಪೂಜಿಸುತ್ತೇವೆ. ಮದುವೆ ಆಗಿದ್ದರೆ ಹಲವು ಮಣ್ಣಿನ ಮೂರ್ತಿಗಳಲ್ಲಿ ತೋರಿಸುವಂತೆ ಇಕ್ಕೆಲಗಳಲ್ಲಿ ಸಿದ್ಧಿ, ಬುದ್ಧಿಯರಿದ್ದಾರೆ. ಬ್ರಹ್ಮನ ಮಾನಸ ಪುತ್ರಿಯರಿರಬಹುದು! ಅಲ್ಲದೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿಃ, ಪ್ರಾಕಾಮ್ಯಾ, ಈಶತ್ವ ಮತ್ತು ವಶಿತ್ವ ಈ ಅಷ್ಟಸಿದ್ಧಿಗಳನ್ನು ಕೊಟ್ಟು ಗಣೇಶನಿಗೆ ವಿವಾಹ ಮಹೋತ್ಸವ ನಡೆಯಿತು ಎಂದು ಪುರಾಣದಲ್ಲಿದೆ.

ಹಲವು ವಿವಿಧ 21 ರೂಪದ ಗಣಪತಿ ಆರಾಧನೆ ಮತ್ತು ಪೂಜೆಗೆ ಯೋಗ್ಯವೆಂದು ಗ್ರಹಿಸಿದೆ. ಅವು ಹೀಗಿವೆ.

1) ವೀರ ಗಣಪತಿ : ಭೇತಾಳ, ಶಕ್ತಿ, ಧನುರ್ಬಾಣ, ಖಡ್ಗ, ಮುದ್ಗರ, ಗದಾ, ಅಂಕುಶ, ನಾಗಪಾಶ, ಶೂಲ, ಹರಳು ಧ್ವಜಾದಿಗಳನ್ನು ಹೊಂದಿದ 12 ಕೈಗಳು.
2) ಉಚ್ಚಿಷ್ಟ ಗಣಪತಿ : ಎಕ್ಕದ ಬೇರಿನದು, ವಿಪತ್ಕಾರ್ಯಕ್ಕೆ.
3) ಸಂಪದ್ರೀಯ ಗಣಪತಿ : ಕುಂಭ ಪಾಶಾದಿಗಳನ್ನು ಹಿಡಿದ 6 ಕೈಗಳು.
4) ಭುವನ ಗಣಪತಿ : ಕೊಡಲಿ, ತಾವರೆ, ಕಬ್ಬಿನಬಿಲ್ಲು ಹಿಡಿದ ಮೂರ್ತಿ.
5) ಮಹಾಗಣಪತಿ : ಕಲ್ಹಾರಾದಿಗಳನ್ನು ಧರಿಸಿದ ಸುಂದರ ಮೂರ್ತಿ.
6) ಲಕ್ಷ್ಮೀ ಗಣಪತಿ : ಕುಂಭಾದಿ ಧರಿಸಿದ ಐಶ್ವರ್ಯಪ್ರದ.
7) ಕರುಣ ಗಣಪತಿ : ಪಾಶ, ಅಂಕುಶ ಮೋದಕಾದಿ ಧರಿಸಿದ ಮೂರ್ತಿ.
8) ಭಕ್ತಿ ಗಣಪತಿ : ತೆಂಗಿನಕಾಯಿ, ಮಾವು ಧರಿಸಿದ ಮೂರ್ತಿ.
9) ಚತುರ್ಥಿ ಗಣಪತಿ : ಗದಾಪಾಶಾದಿಗಳಿಂದ ಕೂಡಿದ ಸಿದ್ಧಿಪ್ರದ.
10) ಪಿಂಗಳ ಗಣಪತಿ : ಮಾವು ಧರಿಸಿದ, ಹಳದಿವಸ್ತ್ರ ಧರಿಸಿದ ಮೂರ್ತಿ.
11) ದ್ವಿಜ ಗಣಪತಿ : ಪುಸ್ತಕದಂಡ ಧರಿಸಿದ ಮೂರ್ತಿ.
12) ಬಾಲ ಗಣೇಶ : ಬಾಳೆ, ಮಾವು ಧರಿಸಿದ ಬಾಲರೂಪಿ.
13) ಊರ್ಧ್ವ ಗಣೇಶ : ಕಲ್ಹಾರ(ತಾವರೆ), ಮುಸುಕಿನ ಜೋಳ ಧರಿಸಿದ ಮೂರ್ತಿ.
14) ಹೇರಂಬ ಗಣಪತಿ : 5 ಮುಖದ, ಸಿಂಹಾಸನ, ಅಕ್ಷರ ಮಾಲೆ ಪರಶು ಹಿಡಿದ ಮೂರ್ತಿ.
15) ಪಲ್ಲವ ಗಣಪತಿ : ಪದ್ಮಾಸನಸ್ಥಿತ, ದಾಳಿಂಬೆ ಹಿಡಿದ ಮೂರ್ತಿ.
16) ಸಿದ್ಧಿ ಬುದ್ಧಿ ಗಣಪತಿ : ತ್ರಿಶೂಲ, ಗದೆ ಧರಿಸಿದ, ಸಿದ್ಧಿ ಬುದ್ಧಿ ಯಿಂದಲೂ ಕೂಡಿದವ.
17) ಸ್ಕಂದಪ್ರಿಯ ಗಣಪತಿ : ಕುಮಾರಸ್ವಾಮಿಯನ್ನು ಒಡಗೂಡಿದ ಬಾಲರೂಪಿ.
18) ಆದಿ ಗಣೇಶ : ಸರ್ಪ ಭೂಷಣ, ಪಾಶಾಂಕುಶ ಹಿಡಿದವ.
19) ನರ್ತನ ಗಣೇಶ : ನಾಗ ಪಾಶ ಹಿಡಿದ ನಾಟ್ಯ ಭಂಗಿಯ ಮೂರ್ತಿ.
20) ಪಿಳ್ಳೇರಾಯ ಗಣೇಶ : ಗರಿಕೆ ಹುಲ್ಲಿನಿಂದಾದ ಮೂರ್ತಿ.
21) ಜ್ಞಾನರೂಪಿ ಗಣೇಶ : ಮಹಾಭಾರತ ಗ್ರಂಥ ಬರೆದ ಮೂರ್ತಿ.

ಗಣೇಶ ಸ್ವಾಮಿಯನ್ನು ಈದಿನ ಈಗತಾನೇ ವಿಶೇಷವಾಗಿ ಪೂಜೆಮಾಡಿ ಮಂಗಳಾರತಿ ಬೆಳಗಿ ಸಮಸ್ತರಿಗೂ ಸುಖ ಶಾಂತಿ, ಆಯುರಾರೋಗ್ಯ ದಯಪಾಲಿಸೆಂದು ಕೇಳಿಕೊಂಡೆ.

ನಿಮ್ಮ ಶ್ರೇಯೋಭಿಮಾನಿ,

- ಶಾಂತಾ ಮೂರ್ತಿ; ಸಿಯಾಟಲ್‌, ವಾಷಿಂಗ್ಟನ್‌

*

ಈ ಸಲದ ವಿಚಿತ್ರಾನ್ನ ಅಂಗಾರಕ ಸಂಕಷ್ಟಿ ಚತುರ್ಥಿಯ ಬಗ್ಗೆ ಹಲವಾರು ಮಾಹಿತಿಗಳನ್ನು ಒದಗಿಸಿತು. ನಾನೂ ಯಾವಾಗಲೂ ತುಳುವಿನ ಹಿಟ್‌ ಭಜನೆ ‘ಎಂಚಿತ್ತಿ ಮಗನ್‌.. ಪಡೆಯಲ್‌ ಪಾರ್ವತೀ...’ ಎನ್ನುವ ಭಜನೆಯನ್ನು ಗುಣುಗುಣಿಸುತ್ತಾ ಇರುತ್ತೇನೆ. ಅಂದಹಾಗೆ ನಾನು ಮೂಡಿಗೆರೆಯಲ್ಲಿ ಒಂದು ಕೊಂಕಣಿಯವರ ಮನೆಯಲ್ಲಿ ಪೇಯಿಂಗ್‌ ಗೆಸ್ಟ್‌ ಆಗಿರುವಾಗಲೇ ನನಗೆ ಸಂಕಷ್ಟಿ- ಅಂಗಾರಕ ಸಂಕಷ್ಟಿ ಎಂಬುದೇನೆಂದು ಗೊತ್ತಾದದ್ದು. ಅಲ್ಲಿ ನಾನೂ ಅವರೊಂದಿಗೆ ಸಂಕಷ್ಟಿ ಉಪವಾಸವನ್ನು ಆಚರಿಸುತ್ತಿದ್ದೆ. ಆದರೆ ಮಧ್ಯಾಹ್ನ ನನಗಾಗಿ ದೋಸೆ ಮಾಡಿ ಕೊಡುತ್ತಿದ್ದರು. ಸಂಜೆ ನಾನೂ ಚಂದ್ರನನ್ನು ನೋಡಿದ ಮೇಲೆ ಎಲೆಯಲ್ಲಿ ಊಟ ಮಾಡುತ್ತಿದ್ದೆ. ಹಾಗೂ ಮಂಗಳವಾರ ಸಂಕಷ್ಟಿ(ಅಂಗಾರಕ) ಬಂತೆಂದರೆ ಪಾಯಸ ಮಾಡುತ್ತಿದ್ದರು ರಾತ್ರಿ ಊಟಕ್ಕೆ. ನಿಮ್ಮ ಬರಹ ಓದಿದಾಗ ನಾನೊಮ್ಮೆ ಆ ಕೊಂಕಣಿಯವರ ಮನೆಯಲ್ಲಿ (ಬಾಳಿಗ ಮಾಮ ಮತ್ತವರ ಹೆಂಡತಿ - ನಾನು ಅವರನ್ನು ಅಮ್ಮ ಎನ್ನುತ್ತಿದ್ದು ಅವರ ಹೆಸರು ಕೇಳಿಲ್ಲ ನನಗೆ ಗೊತ್ತೂ ಇಲ್ಲ) ಕಳೆದ ದಿನಗಳನ್ನು ನೆನಪಿಸಿಕೊಂಡೆ.

ಹ್ಞಾಂ, ನಿಮ್ಮ ಪ್ರಶ್ನೆಗೆ ಉತ್ತರ ದೊರೆಯಿತು. ಗಣಪತಿಯ ಹೆಂಡತಿಯರ ಹೆಸರು ಸಿದ್ಧಿ ಮತ್ತು ಬುದ್ಧಿ ಅಲ್ಲವೇ? ಆದರೆ ಬೋನಸ್‌ ಅಂಕ ಗಳಿಸಲು ನನಗಾಗಲಿಲ್ಲ.

ಧನ್ಯವಾದಗಳೊಂದಿಗೆ,

- ಪ್ರಕಾಶ್‌ ಶೆಟ್ಟಿ ಉಳೆಪಾಡಿ; ಮಂಗಳೂರು

*

ಗಣೇಶನ ಬಗ್ಗೆ ಬಹಳ ಇಂಟೆರೆಸ್ಟಿಂಗ್‌ ಲೇಖನ. ಸಂಕಷ್ಟಿಗೆ ಸಹಜವಾಗಿಯೆ ಮಹಾರಾಶ್ಟ್ರ ಕಡೆ ಜಾಸ್ತಿ ಪ್ರಾಮುಖ್ಯ. ನಮ್ಮ ಕಡೆ ಚೌತಿ ಹೆಚ್ಚಾಗಿ ಬ್ರಾಹ್ಮಣರ ಹಬ್ಬ. ಬ್ರಾಹ್ಮಣೇತರ ವರ್ಗಕ್ಕೆ ಅಷ್ಟಮಿ (ತುಳುವಲ್ಲಿ ‘ಅಟ್ಟೆಮಿ’) ಬಹಳ ಇಂಪಾರ್ಟೆಂಟ್‌.

ಇನ್ನೊಂದು ವಿಷಯ. ಗಣೇಶನ ಚಿತ್ರದಲ್ಲಿ ಹೆಚ್ಚಾಗಿ ಒಂದು ಮೂಲಭೂತ ತಪ್ಪು ಇರುತ್ತದೆ, ಏನು ಗೊತ್ತೇ? ಅವನಿಗೆ ಹೊಕ್ಕುಳು ಇರಲು ಹೇಗೆ ಸಾಧ್ಯ? ತಾಯಿಯ ಹೊಟ್ಟೆಯಿಂದ ಹುಟ್ಟಿದವನಲ್ಲವಲ್ಲ ?

ಗಣೇಶನ ಬಗ್ಗೆ ಸ್ವಾರಸ್ಯಕರ ಮಾಹಿತಿ ಲಭ್ಯವಿರುವ ಒಂದು ಪುಟ ಇಲ್ಲಿದೆ- http://www.shashitharoor.com/articles/folklore.htm

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

*

ಸಂಕಷ್ಟಿ ಚತುರ್ಥಿಯ ಬಗ್ಗೆ ಇಷ್ಟೊಂದು ಮಾಹಿತಿ ಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು. ಅಮೇರಿಕದಲ್ಲೂ ಈ ವ್ರತಾಚರಣೆ ಮಾಡೋ ಕನ್ನಡಿಗರು ಇದ್ದಾರೆಯೇ ಅಂತ ಆಶ್ಚರ್ಯವೆನಿಸಿತು. ಗಣೇಶನ ಹೆಂಡತಿಯರು ಸಿದ್ಧಿ-ಬುದ್ಧಿ ಎಂದು. ಅವರು ಯಾರ ಪುತ್ರಿಯರು ಅಂತ ಮಾತ್ರ ಗೊತ್ತಿಲ್ಲಾ. ಇನ್ನು ಉತ್ತರಭಾರತದ ‘ಕರವಾ ಚೌತ’ ಬಗ್ಗೆ ನನಗೆ ತಿಳಿದ ಮಟ್ಟಿಗಿನ ಮಾಹಿತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.


ಕಾರ್ತಿಕಮಾಸದಲ್ಲಿ ಬರುವ ಸಂಕಷ್ಟಿಚೌತಿ, ಉತ್ತರಭಾರತದಲ್ಲಿನ ಹೆಣ್ಣುಮಕ್ಕಳಿಗಿದು ತುಂಬಾ ವಿಶೇಷವಾದ ದಿನ. ಕರವಾ ಅಂದರೆ ಮಣ್ಣಿನ ಚಿಕ್ಕ ಕುಡಿಕೆ. ಈ ಪೂಜೆಯಲ್ಲಿ ಇದರ ಬಳಕೆ ವಿಶೇಷವಾಗಿರುವದರಿಂದ ಇದನ್ನು ‘ಕರವಾ ಚೌತ’ ಅನ್ನುತ್ತಾರೆ. ಪತಿಯ ಆಯುರಾರೋಗ್ಯದ ಕಾಮನೆಯಿಂದ ವ್ರತ ಕೈಗೊಳ್ಳುತಾರೆ. ಈ ಕುಡಿಕೆಯಲ್ಲಿ ಧಾನ್ಯ (ಗೋಧಿ ಇತ್ಯಾದಿ) ತುಂಬಿ ಮೇಲಿನ ಮುಚ್ಚಳದಲ್ಲಿ ಬೆಲ್ಲವಿಡುತ್ತಾರೆ, ಒಂದು ತುಪ್ಪದ ದೀಪ, ಯಥಾಶಕ್ತಿ ದಕ್ಷಿಣೆ, ಎನಾದರೂ ‘ಬಾಗಿನ’ ಕೊಡುವ ವಸ್ತು ಇಟ್ಟು ಸಾಯಂಕಾಲ ಪೂಜೆ ಕಥೆ ಕೇಳಿ ಅದನ್ನು ಕಥೆ ಹೇಳಿದ ಪಂಡಿತಪತ್ನಿಗೆ ಕೊಡುತ್ತಾರೆ. ಸಂಜೆ ಚಂದ್ರನ ದರ್ಶನ ಜರಡಿಯಲ್ಲಿ ಮಾಡಿದ ನಂತರ ಪತಿಯ ದರ್ಶನ ಮಾಡಬೇಕು. ನಂತರ ಚಂದ್ರನಿಗೆ ಅರ್ಘ್ಯ ಬಿಡುವದು - ಭೋಜನ ಇತ್ಯಾದಿ. ಆ ದಿನ ಹೆಂಗಳೆಯರು ಮದುವಣಗಿತ್ತಿಯಂತೆಯೇ ಸಿಂಗರಿಸಿಕೊಳ್ಳುತ್ತಾರೆ. ಬೆಳಿಗ್ಗೆ 4 - 5 ಘಂಟೆಗೆದ್ದು ಹಾಲಿನಲ್ಲಿ ಶ್ಯಾವಿಗೆ ಮಾಡಿ ಉಣ್ಣುತ್ತಾರೆ. ಅದನ್ನು ‘ಸುರಗಿ’ ಅನ್ನುವದು. ನಂತರ ಇಡೀ ದಿನ ಉಪವಾಸವಂತೆ - ಹನಿ ನೀರು ಕುಡಿಯುವದಿಲ್ಲವಂತೆ. ಕೊನೆಗೆ ಗಣಪನನ್ನು ಬೇಡಿಕೊಳ್ಳುತ್ತಾರೆ. ಇಲ್ಲಿ ದೂರ್ವಾ, ಗರಿಕೆ ಹುಲ್ಲಿನ ಉಪಯೋಗವಿಲ್ಲಾ. ಕೆಂಪುದಾಸವಾಳವೂ ಪ್ರಧಾನ ಇಲ್ಲ.

ಇನ್ನು ರಾಜಸ್ಥಾನದ ಬ್ರಾಹ್ಮಣರಾದರೆ ನಮ್ಮಂತೆಯೇ ಇಡೀ ದಿನ ಉಪವಾಸ ಮಾಡಿ , ಸಂಜೆ ಗಣಪನೊಂದಿಗೆ ‘’ಚೌತ ಮಾತಾ’ಳನ್ನು ಪೂಜಿಸುತ್ತಾರೆ. ಅವರ ಕಥೆ ಬೇರೆ. ಹೀಗೆ ವೈವಿಧ್ಯತೆಯಲ್ಲಿ ಗಣಪನ ಪೂಜೆ, ಸಂಕಟ ನಿವಾರಣಾರ್ಥವಾಗಿ ಪ್ರಾರ್ಥನೆ ವಿವಿಧ ಪಂಗಡಗಳಲ್ಲಿ, ಪ್ರದೇಶಗಳಲ್ಲಿ ನಡೆದುಬಂದಿದೆ.

- ರೇಣುಕಾ ಶ್ಯಾಮ್‌; ನವದೆಹಲಿ

*

ಗಣೇಶನ ಬಗ್ಗೆ ವಿಚಿತ್ರಾನ್ನ ತುಂಬಾ ಚೆನ್ನಾಗಿತ್ತು. ಅಂಗಾರಕಿ ಸಂಕಷ್ಟಿ ಬಗ್ಗೆ ತಿಳಿದಿರಲಿಲ್ಲ. ಎಂದಿನಂತೆ ‘’ಪನ್‌’ನಿಂದ ಕೂಡಿದ, ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ನಿಮಗೆ ಧನ್ಯವಾದಗಳು. ಗಣೇಶನ ಅನುಗ್ರಹ ನಿಮ್ಮ ನಮೆಲ್ಲರ ಮೇಲಿರಲಿ ಅಂತ ಹಾರೈಸುತ್ತೇನೆ. ಇನ್ನು ವಾರದ ಪ್ರಶ್ನೆಗೆ ಉತ್ತರ - ಗಣೇಶನ ಇಬ್ಬರು ಹೆಂಡಿರು - ಸಿದ್ಧಿ, ಬುದ್ಧಿ (ರಿದ್ಧಿ ಅಂತಲೂ ಕರೆಯುತ್ತಾರೆ). ಇವರು ಪ್ರಜಾಪತಿ ವಿಶ್ವಬ್ರಹ್ಮನ ಮಕ್ಕಳು.

- ಪ್ರಸನ್ನ ಕೆ ವೆಂಕಟರಮಣ; ಕ್ಲಿಯರ್‌ವಾಟರ್‌, ಫ್ಲೋರಿಡಾ

*

ಇಂದಿನ ವಿಚಿತ್ರಾನ್ನ ಚೆನ್ನಾಗಿತ್ತು. ಎಲ್ಲರಿಗೂ ಹೆಚ್ಚುಕಡಿಮೆ ಗೊತ್ತಿರೊ ವಿಚಾರವನ್ನೇ ಬೋರ್‌ ಹೊಡಿಸದೆ ಬರವಣಿಗೆಯಿಂದಲೇ ಇಂಟೆರೆಸ್ಟಿಂಗ್‌ ಆಗಿ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರಶ್ನೆಗೆ ಉತ್ತರಗಳು: ನಮ್ಮ ಗಣೇಶನ ಹೆಂಡತಿಯರು - ಸಿದ್ಧಿ, ಬುದ್ಧಿ. ನಮ್ಮ ಗಣೇಶನ ಮಾವ - ವಿಶ್ವರೂಪ ಬ್ರಹ್ಮ.

- ಪ್ರಶಾಂತ್‌; ಟೊಕಿಯಾ, ಜಪಾನ್‌

*

ಸಿದ್ಧಿ ಮತ್ತು ಬುದ್ಧಿ ಗಣಪತಿಯ ಹೆಂಡಿರು. ಅವರು ಯಾರ ಮಕ್ಕಳು ಎಂದು ಉತ್ತರಿಸಿ ಬೋನಸ್‌ ನಾನೇ ತಗೊಂಡ್ರೆ ಬೇರೆಯವ್ರಿಗೆ ಮಾರ್ಕ್ಸ್‌ ಸಿಗಲ್ಲ, ಹಾಗಾಗಿ ಹೇಳೊಲ್ಲ :-)

ಲೇಖನವನ್ನೋದುತ್ತ ನನ್ನ ಕಾಲೇಜ್‌ ದಿನಗಳು ನೆನಪಾದುವು. ಹಾಸ್ಟೆಲ್‌ನಲ್ಲಿ ಹುಡುಗಿಯರೆಲ್ಲ ಸಂಕಷ್ಟಿ ಮಾಡ್ತಿದ್ರು. ಹಾಗೆ ನಾನೂ ಸ್ಟಾರ್ಟ್‌ ಮಾಡ್ಕೊಂಡೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಏನೂ ತಿಂತಿರ್ಲಿಲ್ಲ. ರಾತ್ರಿ ಆದ ತಕ್ಷಣ ಚಂದ್ರನ ಬರವು ಕಾಯೋದು. ಚಂದ್ರನಿಗೂ ಸ್ವಲ್ಪ ಕೊಬ್ಬು ನೋಡಿ - ಎಲ್ಲ ಕಾಯ್ತಾ ಇರ್ತಾರೆ ಅಂತ ಲೇಟ್‌ ಆಗಿ ಬರ್ತಿದ್ದ! ರಾತ್ರಿ ಮಹಡಿ ಮೇಲೆ ಹೋಗಿ ಚಂದ್ರನ ನೋಡ್ಲಿಕ್ಕೆ ಹಾಸ್ಟೆಲಲ್ಲಿ ಪರ್ಮಿಷನ್‌ ಬೇರೆ ಕೇಳ್ಬೇಕಿತ್ತು. ಆದ್ರೆ ತುಂಬ ಹುಡಿಗೀರು ಮಾಡ್ತ ಇದ್ವಿ ಹಾಗಾಗಿ ಚಂದ್ರನ ಕಾಯ್ತಾ ಅದೂ-ಇದೂ ಮಾತಾಡಿ, ತಂಪಾದ ಗಾಳಿ ಸೇವಿಸಿ ಆಮೇಲೆ ಊಟ ಮಾಡ್ತಿದ್ವಿ. ನಿಮ್ಗೆ ಗೊತ್ತಾ ಕೆಲ್ವೊಮ್ಮೆ ಚಂದ್ರ ಮೋಡದಲ್ಲಿ ಮರೆಯಾಗಿ ಕಾಯುತ್ತಿರುವವರಿಗೆ ಕಾಣಿಸೊದಿಲ್ಲ. ಆವಾಗಲೂ ಚಂದ್ರನ್ನ ನೋಡದೆ ಊಟ ಮಾಡೊ ಹಾಗಿಲ್ಲ, ಅದಕ್ಕೆ ಶಿವನ ತಲೆ ಮೇಲಿರೊ ಚಂದ್ರನ ಪೂಜಿಸಿ ಊಟ ಮಾಡ್ತಾ ಇದ್ವಿ. ಇದು ಯಾವ ಪುರಾಣ ಪುಣ್ಯಕಥೆಗಳಲ್ಲಿದೆ ಗೊತ್ತಿಲ್ಲ , ಆದ್ರೆ ನಾವಂತೂ ಹಾಗೆ ಮಾಡ್ತಾ ಇದ್ದೆವು.

- ಸ್ಮಿತಾ; ಬೆಂಗಳೂರು

*

ಗಣೇಶಗಾಥೆ ಸೊಗಸಾಗಿತ್ತು. ಅವನ ಹೆಂಡಿರು ಸಿದ್ಧಿ-ಬುದ್ಧಿ; ಅವರೀರ್ವರೂ ಬ್ರಹ್ಮನ ಮಕ್ಕಳು.

ಅಂದಹಾಗೆ ನಾನು ನಿಮಗೆ ಅಪರಿಚಿತಳಾದರೂ ನೀವು ನಿಮ್ಮ ಬರಹಗಳಿಂದಾಗಿ ನಮಗೆಲ್ಲ ಚಿರಪರಿಚಿತರು. ನಿಮ್ಮ ಅಂಕಣದ ರಸಪ್ರಶ್ನೆಗಳಲ್ಲಿ ಹುರುಪಿನಿಂದ ಪಾಲ್ಗೊಂಡಿದ್ದೇವೆ, ದಾಸರ ಪದ್ಯಗಳನ್ನು ವಿಶ್ಲೇಷಿಸಿ ವಿಶಿಷ್ಟವಾಗಿ ನೀವು ಬರೆದ ವಿಚಿತ್ರಾನ್ನದ ಪಾಯಸದ ಭಕ್ಷ್ಯಗಳನ್ನು ತಿಂದು ಸಂತೋಷ ಪಟ್ಟಿದ್ದೇವೆ. ನಿಮ್ಮ ಲೇಖನಗಳಲ್ಲಿ ಹೊಸತನವಿರುತ್ತದೆ, ಒಂದು ತರಹದ ಸೊಗಡಿರುತ್ತದೆ. ಇದು ಮೆಚ್ಚುಗೆಯ ಮಾತು. ನಿಮ್ಮ ಬರಹ ಹೀಗೆಯೆ ಮುಂದುವರಿಯಲಿ ಎಂದು ಆಶಿಸುತ್ತೇವೆ. ನಮ್ಮೆಲ್ಲರ ಪ್ರೋತ್ಸಾಹ ಸದಾ ನಿಮಗಿರುತ್ತದೆ. ಅಲ್ಲದೆ ಮನುಷ್ಯನ ಮನಸ್ಸನ್ನು ಮುಟ್ಟುವ-ತಟ್ಟುವ, ಮತ್ತು ಮಂದಹಾಸ ಮಿನುಗಿಸುವ ಕಲೆ ಬರಹಗಾರರಿಗೇ ಸಾಧ್ಯ. ಅದು ಪುಣ್ಯದ ಕೆಲಸ ಕೂಡ. ಕೀಪ್‌ ಇಟ್‌ ಅಪ್‌!

- ವಿಜಯಾ ಚಲಪತಿ; ಇಂಡಿಯಾನಾಪೊಲಿಸ್‌

*

ನಿಜಕ್ಕೂ ಉತ್ತಮ ಮಾಹಿತಿ ನೀಡಿದ್ದೀರಿ. ತಿಂಗಳಿಗೊಮ್ಮೆ ಬರುತ್ತೆ ಸಂಕಷ್ಟ ಚತುರ್ಥಿ, ಜನರು ಮುಗಿಬಿದ್ದು ಅವತ್ತು ಗಣಪತಿ ದೇವಸ್ಥಾನಕ್ಕೆ ಹೋಗ್ತಾರೆ ಅಷ್ಟೆ ನನ್ನ ಅಬ್ಸರ್ವೇಷನ್‌ ಆಗಿತ್ತು. ಆದ್ರೆ ಅದರ ಹಿನ್ನೆಲೆ, ಮಂಗಳವಾರದ ಮಹತ್ವ ತಿಳಿದುಕೊಂಡು ಸಂತೋಷವಾಯ್ತು. ವಿಚಿತ್ರವೆಂದರೆ ಕೆಲವು ವರ್ಷಗಳ ಹಿಂದೆ ಅಂದ್ರೆ 7-8 ವರ್ಷಗಳ ಹಿಂದೆ ಜನಸಮುದಾಯ ಗಣೇಶಹಬ್ಬ ಮಾಡ್ತಿತ್ತೇ ಹೊರತು ಸಂಕಷ್ಟಿಯನ್ನಲ್ಲ. ಈ ಅಮೋಘ ಬದಲಾವಣೆ ಆಗಿದ್ದು ಹೇಗೆ ಅಂತ ನನಗೆ ಆಶ್ಚರ್ಯವಾಗುತ್ತೆ !

ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ನಾನೂ ಹೋಗಿದ್ದೆ. ನೀವು ಹೇಳಿದಂತೆ ಜನಸಂದಣಿ ಹೆಚ್ಚು ಆದ್ರೂ ಅವರು ಮೇನೇಜ್‌ ಮಾಡ್ತಾರೆ! ಮುಂಬೈನಲ್ಲಿ ಜನರಿಲ್ಲದ ಜಾಗ ಕನಸಿನಲ್ಲೂ ಸಿಗದು! ಆದ್ರೆ ಮುಂಬೈನಲ್ಲಿ ಎಲ್ಲವೂ ಕಮರ್ಷಿಯಲ್‌ ಅನ್ಸುತ್ತೆ. ದೇವರನ್ನು ಕಣ್ತುಂಬಾ ನೋಡುವ ಅವಕಾಶ ಕಡಿಮೆ. ಒಂದು ವಿಷಯ ನಾನು ಗಮನಿಸಿದ್ದೆಂದರೆ, ಮುಂಬಯಿ ಮತ್ತೆ ಪುಣೆಯಲ್ಲಿ ನಾನು ನೋಡಿದ ಗಣೇಶನ ದೇವಸ್ಥಾನಗಳೆಲ್ಲವೂ ಬಲಮುರಿ ಗಣಪತಿಯವು! ಅದಕ್ಕೆ ಕಾರಣ ಏನು? ಬಲಮುರಿ ಗಣಪತಿ ವಿಗ್ರಹ ಮನೆಯಲ್ಲಿಟ್ಟು ಪೂಜೆ ಮಾಡ್ಬಾರ್ದು ಅಂತಾರೆ. ಅದ್ಕೆ ಏನಾದ್ರೂ ಹಿನ್ನೆಲೆ ಇದ್ಯಾ? (ಓಹ್‌, ಪತ್ರ ಬರೀತಾ ಬರೀತಾ ಸ್ವಲ್ಪ ಜಾಸ್ತಿನೇ ಕೊರೆದೆ ಅನ್ಸುತ್ತೆ!)

ಇನ್ನು ನಿಮ್ಮ ವಾರದ ಪ್ರಶ್ನೆಗೆ ಉತ್ತರ - ಸಿದ್ಧಿ, ಬುದ್ಧಿ. ಯಾರ ಮಕ್ಕಳೋ ಗೊತ್ತಿಲ್ಲ!

- ರಾಧಿಕಾ ಎಂ ಜಿ; ಬೆಂಗಳೂರು

*

ಲೇಖನ ತುಂಬ ಚೆನ್ನಾಗಿತ್ತು. ನಿನ್ನೆ ದಿನದ ಮಹತ್ವ ಗೊತ್ತಿರ್ಲಿಲ್ಲ. ಗೊತ್ತಿದ್ರೂ ಅಷ್ಟೆಲ್ಲ ಸೀರಿಯಸ್‌ ಆಗಿ ತಗೊತಾ ಇರ್ಲಿಲ್ಲ. ಗಣೇಶನ ಬಗ್ಗೆ ಅಷ್ಟೆಲ್ಲ ಮಾಹಿತಿ ತಿಳಿಸಿಕೊಟ್ಟದ್ದಕ್ಕೆ ತುಂಬಾ ಥ್ಯಾಂಕ್ಸ್‌.

- ಪುಷ್ಪಾ ; ಬೆಂಗಳೂರು

*

ಗಣೇಶನ ಅರ್ಧಾಂಗಿಯರು ಸಿದ್ಧಿ-ಬುದ್ಧಿ(ರಿದ್ಧಿ) ಮತ್ತು ಅವರಿಬ್ಬರು ಪ್ರಜಾಪತಿ ಬ್ರಹ್ಮನ ಪುತ್ರಿಯರೆಂಬ ಸರಿಯುತ್ತರ ಬರೆದ ಇತರರು :

- ಕೃಷ್ಣಮೂರ್ತಿ ಭಟ್‌ ಬಸ್ರೂರು; ಬೆಂಗಳೂರು
- ಹಂಸಾವತಿ; ಮೈಸೂರು
- ರಶ್ಮಿ; ಬೆಂಗಳೂರು
- ವೀಣಾ ಎನ್‌; ಊರು?
- ಶ್ರೀನಿವಾಸ ಪಶುಪತಿ; ಬೆಂಗಳೂರು
- ಆನಂದ್‌ ರಾಮಮೂರ್ತಿ; ಸ್ಯಾನ್‌ಹೊಸೆ
- ಉಷಾ ಅಶ್ವಥ್‌; ಕೊಲಂಬಸ್‌, ಒಹಯಾ
- ನೀಲಕಂಠೇಶ್ವರ ಸ್ವಾಮಿ; ಊರು?
- ಪ್ರಶಾಂತ್‌; ಹ್ಯೂಸ್ಟನ್‌, ಟೆಕ್ಸಸ್‌
- ರಾಜೇಶ್‌ ಚೆಲುವ; ಕನಕನಕಟ್ಟೆ (ಕನೆಕ್ಟಿಕಟ್‌)
- ಗೀತಾ ಸಾಗರ್‌; ಫೀನಿಕ್ಸ್‌, ಅರಿಜೋನಾ
- ರಾಜೇಶ್ವರಿ ಎಚ್‌; ಸ್ಯಾನ್‌ಹೊಸೆ
- ಶ್ರೀಧರ್‌ ಕೆ ಎನ್‌; ಸಿಂಗಾಪುರ್‌
- ನಾಗಲಕ್ಷ್ಮಿ ಇನಾಂದಾರ್‌; ಊರು?
- ಡಾ। ಕುಸುಮ್‌ ಭಟ್‌; ಕ್ಯಾಲಿಫೊರ್ನಿಯಾ
- ಅನಿಲ್‌ ವ್‌ ಗಂಗುರ್‌; ವಿಪ್ರೊ, ಬೆಂಗಳೂರು
- ಜಯಶ್ರೀ ಎಚ್‌ ಆರ್‌; ಬೆಂಗಳೂರು
- ವಿಶ್ವನಾಥ ಬಿ ಆರ್‌; ವಿಪ್ರೊ, ಬೆಂಗಳೂರು
- ಭಾರ್ಗವಿ ಕಡಸೂರ್‌; ಫೀನಿಕ್ಸ್‌, ಅರಿಜೋನಾ
- ಮಲ್ಲಿ ಸಣ್ಣಪ್ಪನವರ್‌; ಸೌತ್‌ ಕೆರೊಲಿನಾ
- ಡಾ। ಸೋಮೇಶ್ವರ ನಾರಪ್ಪ; ಬೆಂಗಳೂರು

*

Vichitraanna article about Samkashta Chathurthi was excellent. I wonder how you manage to live up to your theme infotainment every time! I didnt know about mitigation of shaapa & hence devotees have to do chandradarshana on samkashti. Thanks for good info. Answer for your questuion: Ganeshas wives are Siddhi & Buddhi. But I dont know whose daughters they are. I guess its Brahma.

- Shrilatha P; Bangalore

*

I thoroughly enjoyed your article on Angaraki Chaturthi. It was very informative and it provided a wonderful insight on our ancient and precious customs and rituals. The answers to your questions: Wives of Lord Ganesha are Siddhi and Buddhi. They are the daughters of Divine Architect Vishwakarma. Thanks and Keep up the great work.

- Jagdeep Shiroor; New Jersey

*

Hello sir, How are you? Your article about Lord Ganesha was very good. Hope that Ganesha brings peace to everyone this year. Here is the answer to your question (I googled as usual :-) Riddhi and Siddhi. Siddhi is the consort of Siddhas, and thus identifies with Brahmani(Sarasvati), while Riddhi is none but the bountiful harvest of Lakshmi.

- Roshan Shetty; New Jersey

*

I read your article today. It was very good, Recently only I started reading thatskannada. Answer for your question is Siddi & Buddi, I hope it is right.

Rashmi DA ; Los Angeles

*

Ganesha sankashti article in Vichitranna is very interesting. I dont know this much of importance and matters behind sankashti. You gave more information regarding this rare angaraki sankasti. I really am impressed by this article. Today my friends who are on sankashti fast, if I show this article to them they also will like it. Thanks ones again.

- Tipperudra Hosahalli; Bangalore

ಇವತ್ತು ‘ಅಂಗಾರಕಿ’ ಸಂಕಷ್ಟ ಚತುರ್ಥಿ


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X