ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನ : ವಿಚಿತ್ರಾನ್ನದ ಮೈಲಿಗಲ್ಲುಗಳು (ವಿಚಿತ್ರಾನ್ನದಲ್ಲಿ ಕಲ್ಲುಗಳು?)

By Staff
|
Google Oneindia Kannada News

Shivamurthy, New Delhi(ವಿಚಿತ್ರಾನ್ನದ ಕಂತು ತೊಂಬತ್ತು ಪೂರೈಸಿದ ಈ ಸಂದರ್ಭದಲ್ಲಿ, ಇಲ್ಲಿಯವರೆಗೆ ಪ್ರಕಟವಾದ ವಿಚಿತ್ರಾನ್ನದ ವಿಷಯಗಳನ್ನು ಹೆಕ್ಕಿ ಪುಟ್ಟ ಕವನವೊಂದನ್ನು ಹೆಣೆದಿದ್ದೇನೆ. ಇಲ್ಲಿ ಮೊದಲೆರಡು ಸಾಲುಗಳನ್ನು ಬಿಟ್ಟು ಉಳಿದ ಸಾಲುಗಳಲ್ಲಿ ಮೊದಲ ಸಾಲು ಕಂತಿನ ನಂಬರ್‌ ಹೇಳಿದರೆ, ಎರಡನೆ ಸಾಲು ಆ ಕಂತಿನಲ್ಲಿ ಪ್ರಸ್ತಾಪವಾದ ವಿಷಯವನ್ನು ಹೇಳುತ್ತೆ. ರುಚಿಕಟ್ಟಾದ ಅಡುಗೆಯನ್ನು ಉಣಬಡಿಸುತ್ತಿರುವುದಕ್ಕೆ ಜೋಶಿಯವರಿಗೆ ಧನ್ಯವಾದಗಳು.
- ಶಿವಮೂರ್ತಿ; ನವದೆಹಲಿ, [email protected])

ಗಜಮುಖನಿಗೆ ವಂದಿಸಿ ಶುರುವಾಗಿತ್ತು
ವಿಚಿತ್ರ ಸೆಳೆತವು ಎಲ್ಲರ ಅತ್ತ ಎಳೆದಿತ್ತು
ನಗಿಸುತ ನಲಿಸುತ ಹತ್ತಕ್ಕೆ ಬೆಳೆದಿತ್ತು
ಸಂಗೀತದ ಸರಿಗಮವ ನುಡಿಸಿತ್ತು
ಕಿರಿಕಿರಿ ಕ್ರಿಕೆಟ್‌ ಬ್ಯಾಟ್‌ ಹಿಡಿದು ಬಂದಿದ್ದು ಇಪ್ಪತ್ತು
ಆಲೌಟಾದರೂ ನಾಟೌಟ್ಯಾರೆಂದು ಕೇಳಿತ್ತು
ಅತ್ತ ಇತ್ತ ಸುತ್ತಿ ಸುತ್ತಿ ಸೇರಿತ್ತು ಮುವತ್ತು
ಕಾಲರೂಪಿಯ ಕಾಲೆಳೆಯಲು ಕೈ ಚಾಚಿತ್ತು
ಮುವತ್ತರ ಹರಯ ಮುಗಿದರೆ ನಲವತ್ತು
ಛಂದಸ್ಸಿಗಿಂತ ಕಂತು ಚಂದವೆನಿಸಿತ್ತು
ಓಡಿ ಬಂದಿಲ್ಲಿ ನಿಂತಾಗ ಐವತ್ತು
ಬಂದ ದಾರಿಯ ತಿರುಗಿ ನೋಡಿತ್ತು
ಅರಳು ಮರುಳಿನ ಅರವತ್ತು, ಮೃತ್ಯುಂಜಯ-
-ಮಂತ್ರದಿ ಮುಳ್ಳುಸೌತೆಯ ಹುಡುಕಿತ್ತು
ಅರವತ್ತರಿಂದ ಹಾರಿ ತಲುಪಿತ್ತು ಎಪ್ಪತ್ತು
ಹೃದಯದ ಮಾತುಗಳನು ಹೇಳಿತ್ತು
ಅಂಬಿನಂತೆ ತೂರಿ ಸೇರಿತ್ತು ಎಂಬತ್ತು
ಓಡಿಸುತ ಓದಿಸುತ ಮುಂದಕ್ಕೆ ಸಾಗಿತ್ತು
ಎಂಬತ್ತು ಹತ್ತು ಹತ್ತಿದರೆ ತೊಂಬತ್ತು
ಹಣ್ಣನು ಕದ್ದು ತಿಂದಿದ್ದ ಸಂಪತ್ತು

ಒಂದರಿಂದ ಇಲ್ಲಿಯವರೆಗೆ ತೊಂಬತ್ತು
ವಿಚಿತ್ರಾನ್ನದ ರುಚಿ ಎಲ್ಲೆಡೆ ಹರಡಿತ್ತು
ರುಚಿಸಿದವರ ಬಾಯಲ್ಲಿ ನೀರೂರಿತ್ತು
ಜೋಶಿಯವರ ವಿಚಿತ್ರಾನ್ನಕ್ಕೆ ಕಾವೇರಿತ್ತು.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X