• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಣ್ಮೆಲೆಕ್ಕದಲ್ಲಿ ಕುರಿ ಯಾಕೆ ಬದುಕುಳಿಯುತ್ತದೆ?

By Staff
|

ಬಹುಶಃ ಲೇಖನದಲ್ಲಿ ಪ್ರಶ್ನೆಯನ್ನು ಸರಿಯಾಗಿ ವಿವರಿಸಿಲ್ಲವೇನೋ ಎಂದು ನನಗನಿಸಿದೆ. ಪ್ರಶ್ನೆಯೇನೆಂದರೆ, ‘ದ್ವೀಪದಲ್ಲಿ ಮೊದಲಿಗೆ ಇದ್ದ ಆ ಒರಿಜಿನಲ್‌ ಕುರಿ ಬದುಕುಳಿಯುತ್ತದೋ ಇಲ್ಲವೋ ? ಯಾಕೆ ?’ ಎಂಬುದು. (ಕೆಲವು ಓದುಗರು, ‘ಕೊನೆಯಲ್ಲಿ ಆ ದ್ವೀಪದಲ್ಲಿ ಎಷ್ಟು ಕುರಿ ಉಳಿಯುತ್ತವೆ?’ ಎಂದು ಪ್ರಶ್ನೆಯನ್ನು ಅರ್ಥೈಸಿಕೊಂಡಿದ್ದಾರೆ. ಅದಲ್ಲ ಪ್ರಶ್ನೆ).

ಸರಿ, ಈಗ ಉತ್ತರವನ್ನು ವಿಶ್ಲೇಷಿಸೋಣ.

ಕುರಿ ಮತ್ತು 1 ಸಿಂಹ ಮಾತ್ರ ಇದ್ದಿದ್ದರೆ ಆ ಸಿಂಹವು ಒರಿಜಿನಲ್‌ ಕುರಿಮರಿಯನ್ನು ತಿಂದುಬಿಡುತ್ತಿತ್ತು. ಆಮೇಲೆ ತಾನು ಸ್ವತಹ ಕುರಿಯಾದರೂ ತೊಂದರೆ ಇಲ್ಲ , ಏಕೆಂದರೆ ಆ ಕುರಿಯನ್ನು ತಿನ್ನಲು ಮತ್ತಾವುದೇ ಸಿಂಹ ಇಲ್ಲವಲ್ಲ ! (ಲೇಖನದಲ್ಲಿ ಏನು ಹೇಳಿತ್ತೆಂದರೆ ಸಿಂಹಗಳಿಗೆ, ಕುರಿಯಾಗಿ ಮಾರ್ಪಾಡಾಗುವುದು ಅಭ್ಯಂತರವಿಲ್ಲ, ಆದರೆ ಇನ್ನೊಂದು ಸಿಂಹದಿಂದ ಹತನಾಗುವುದು ಇಷ್ಟವಿಲ್ಲ).

ಕುರಿ ಮತ್ತು 2 ಸಿಂಹ ಇದ್ದಿದ್ದರೆ ಏನಾಗುತ್ತಿತ್ತು ? ಆ ಎರಡೂ ಸಿಂಹಗಳೂ ಒರಿಜಿನಲ್‌ ಕುರಿಯನ್ನು ತಿನ್ನಲು ಬಯಸುವುದಿಲ್ಲ. ಯಾಕೆ ಗೊತ್ತೇ? ಒಂದುವೇಳೆ ಒಂದನೇ ಸಿಂಹವು ಒರಿಜಿನಲ್‌ ಕುರಿಯನ್ನು ತಿನ್ನುತ್ತದೆಯೆಂದುಕೊಳ್ಳೋಣ, ಆಗ ಆ ಸಿಂಹವೇ ಕುರಿಯಾಗಿ ಹುಟ್ಟುತ್ತದೆ ತಾನೆ? ಆ ಕುರಿಯನ್ನು ಎರಡನೇ ಸಿಂಹ ತಿನ್ನಬಹುದಲ್ಲವೇ? ಹಾಗಾಗಿ ಎರಡು (ಅಥವಾ ಸಮಸಂಖ್ಯೆಯಲ್ಲಿ) ಸಿಂಹಗಳಿದ್ದಾಗ ಒರಿಜಿನಲ್‌ ಕುರಿಯನ್ನು ಮುಟ್ಟಲೂ ಹೋಗುವುದಿಲ್ಲ ಅವು!

ಒಟ್ಟಿನಲ್ಲಿ ,

ಬೆಸಸಂಖ್ಯೆಯಲ್ಲಿ ಸಿಂಹಗಳಿದ್ದರೆ- ಒರಿಜಿನಲ್‌ ಕುರಿ ಸತ್ತು ಹೋಗಿರುತ್ತದೆ.

ಸಮ ಸಂಖ್ಯೆಯಲ್ಲಿ ಸಿಂಹಗಳಿದ್ದರೆ- ಒರಿಜಿನಲ್‌ ಕುರಿ ಬದುಕಿ ಉಳಿಯುತ್ತದೆ.

ಕೊಟ್ಟಿರುವ ಲೆಕ್ಕದಲ್ಲಿ ನೂರು (ಸಮಸಂಖ್ಯೆ) ಸಿಂಹಗಳಿರುವುದರಿಂದ ಒರಿಜಿನಲ್‌ ಕುರಿ ಬದುಕುಳಿಯುತ್ತದೆ!

(ಸಿಂಹಗಳಿಗೆ ಅತ್ಯದ್ಭುತ ಯೋಚನಾಶಕ್ತಿ , ಗಣಿತಜ್ಞಾನ ಇರುವುದು ಈ ಕಥೆಯಲ್ಲಿ ಮಾತ್ರ ಎಂಬುದನ್ನು ಒಪ್ಪಿಕೊಳ್ಳೋಣ).

- ಶ್ರೀವತ್ಸ ಜೋಶಿ


ಪ್ರತಿಕ್ರಿಯೆಗಳು :

ಏನ್‌ ಮಾರಾಯ್ರೆ, ಉತ್ರ ಹೇಳ್ದಿದ್ರ ತಲೆ ಹೋಗೋದಿಲ್ಲಿಲ್ರಿ ! (ಬೇತಾಳನ ಕಥೆಯಂಗ).

ಸಿಂಹ ಸಿಂಹ ಆಗಿ ಉಳಿಬೇಕಾದ್ರ ಕುರಿ ತಿನ್ನಬೇಕ. ತಿಂದ ಮ್ಯಾಲ ಏನ್‌ ಬೇಕಾದ್ದ ಆಗ್‌ವೊಲ್ದಾಕ. ಹುಲ್ಲ ತಿಂದ್ರ ಸಿಂಹ ಅಂತ ಯಾಕ ಅನಬೇಕ. ಒಂದೇ ಇರಲಿ, ಎರಡೇ ಇರಲಿ, ನೂರ ಇರಲಿ ಇಲ್ಲಾ ಬೆಸನ ಇರಲಿ ಸರಿನೇ ಇರಲಿ ಏನಿದ್ದರೂ ಕೊನೆಗೆ ಒಂದು ಕುರಿ ಮರಿ ಮಾತ್ರ ಉಳಿತೈತಿ.

ಈಗ ಸದ್ಯ ನಮ್ಮ ಸ್ಥಿತಿ ಸಿಂಹದಂಗ ಐತಿ. ಹುಲ್ಲ ತಿಂದ್ರೂ ಅಷ್ಟ ! ಕುರಿಮರಿ ತಿಂದ್ರೂ ಅಷ್ಟ. ನಾವ್‌ ಕುರಿ ಆಗೂದಂತೂ ತಪ್ಪಸಾಕ ಆಗದಂಥ ಇಕ್ಕಟ್ಟು !

ಈ ಚುನಾವಣಾ ಸಂದರ್ಭಕ್ಕ ಅಗದೀ ಸೂಕ್ತ ಐತಿ.

- ಚಂದ್ರಗೌಡ ಕುಲಕರ್ಣಿ; ಕಡದಳ್ಳಿ

* * *

ವಿಚಿತ್ರಾನ್ನದಲ್ಲಿನ ಸಿಂಹ-ಕುರಿ ಲೇಖನವನ್ನು ಮನೆಮಂದಿ ಎಲ್ಲ ಇಷ್ಟಪಟ್ಟೆವು. 100 ಸಿಂಹಗಳಲ್ಲಿ ಎಲ್ಲವೂ ಮತ್ತೊಂದು ಸಿಂಹದಿಂದ ತಿನ್ನಲ್ಪಡಲು ಇಷ್ಟಪಡದಿರುವುದರಿಂದ, ಅವು ಕುರಿಯನ್ನು ತಿನ್ನದೇ ಇರಬಹುದೆಂದು ನಮ್ಮೆಲ್ಲರ ಅಭಿಪ್ರಾಯ. ಅದರ ಸರಿ ಉತ್ತರ ಏನೆಂದು ತಿಳಿದುಕೊಳ್ಳಲು ನಾವು ಬಹಳ ಆಸಕ್ತಿಯಿಂದ ಇದ್ದೇವೆ.

ಇನ್ನೇನು ಶತಮಹೋತ್ಸವ ಆಚರಿಸಲು ಬಹಲ ಹತ್ತಿರದಲ್ಲೇ ಇದೆ ವಿಚಿತ್ರಾನ್ನ. ಶುಭಾಶಯಗಳು.

- ಗಿರಿಜಾ ಮೇಘನಾಥ್‌; ಕೆನಡಾ

* * *

ಏನೂ ಆಗುವುದಿಲ್ಲ. ಏಕೆಂದರೆ ಈ ಸಿಂಹಗಳಿಗೆ ಸ್ವಾಭಿಮಾನ ಹೆಚ್ಚು. ಹುಲ್ಲಾದರೂ ತಿಂದಿರುತ್ತವೆಯೇ ವಿನಹ ಕುರಿತಿಂದು ಮತ್ತೆ ತಾವೇ ಕುರಿಯಾಗಿ ಬೇರೆ ಸಿಂಹಗಳಿಂದ ತಿನ್ನಲ್ಪಡುವುದು ಸುತರಂ ಇಷ್ಟವಿಲ್ಲ. ಹಾಗಾಗಿ ಏನೂ ಬದಲಾವಣೆ ಆಗುವುದಿಲ್ಲ.

- ಶಾಂತಾ ಮೂರ್ತಿ, ಪೋರ್ಟ್‌ಲ್ಯಾಂಡ್‌, ಒರೆಗಾನ್‌

* * *

ಸಾಟಿಯಿಲ್ಲದ ಸಿಂಹದ ಸಿಂಹಾವಲೋಕನ...ವಿಚಿತ್ರಾನ್ನದ ‘ಮಸಾಲೆ ಬೆಂದಿಲ್ಲ’

ಪ್ರಿಯ ಜೋಶಿಯವರೇ,

ನಿಮ್ಮಂತಹ ‘ಬಾಣಸಿಗ’ರ ನಳ ಪಾಕವನ್ನು ತಿಂದುಂಡ ನಮ್ಮಂತಹ ‘ಬಕಾಸುರ’ರಿಗೆ ಇನ್ಯಾರ ಚಿತ್ರ, ವಿಚಿತ್ರಾನ್ನಗಳು ಹಿಡಿಸಿಯಾವು ಹೇಳಿ.

ನಿಮಗೆ ಗೊತ್ತೇ ನನ್ನ ಅಮ್ಮ ಅಡಿಗೆಯಲ್ಲಿ ತುಂಬಾ ಪ್ರಸಿದ್ಧಿ ಪಡೆದವರು.. ಆದರೂ ಸ್ಪೆಷಲ್‌ ಅಡಿಗೆ ಮಾಡಿದಾಗ ಮೊತ್ತ ಮೊದಲು ಅದನ್ನು ರುಚಿಸಲು ಕೊಡುವುದು ನನಗೆ, ನನಗೆ ರುಚಿಸಿತೆಂದರೆ ಅದು ಚೆನ್ನಾಗಿದೆಯೆಂದೇ ಅವರ ಅಭಿಪ್ರಾಯ, ಆದರೂ ಕೆಲವೊಂದು ಸಲ ನಾನು ಉಪ್ಪು ಖಾರ,ಹುಳಿ ಹೆಚ್ಚು-ಕಡಿಮೆ ಎಂದು ಹೇಳುವುದುಂಟು.

ಅದೇ ರೀತಿ ನಿಮ್ಮ ಅಡಿಗೆಯೂ ನನಗೆ ತುಂಬಾ ಹಿಡಿಸಿದೆ, ಆದರೆ ಈ ಸಲದ ‘ವಿಚಿತ್ರಾನ್ನ’ದಲ್ಲಿ ಯಾವುದೋ ಒಂದು ಮಸಾಲೆ ಕಡಿಮೆಯಾಗಿದೆಯೆಂದು ನನಗೆ ಅನ್ನಿಸುತ್ತಿದೆ.. ಇದು ನನ್ನ ರುಚಿಗೆ ತಕ್ಕಂತೆ ಇರಲೂಬಹುದು.. ಬೇರೆಯವರಿಗೆ ರುಚಿಸಲೂ ಬಹುದು. ನಿಜ ಹೇಳುತ್ತೇನೆ ಈ ಸಲದ ‘ವಿಚಿತ್ರಾನ್ನ’ ವನ್ನು ನೋಡಿದಾಗ ನನಗೆ ಅದನ್ನು ಓದಲು ಮನಸ್ಸೇ ಆಗಲಿಲ್ಲ.. ಯಾಕೆಂದು ಗೊತ್ತಾಗಲಿಲ್ಲ.. ಆದರೂ ಅದನ್ನು ನ್ಯೂ ವಿಂಡೊ ದಲ್ಲಿ ಓಪನ್‌ ಮಾಡಿ ಇಟ್ಟೆ ಸಾಧಾರಣ ಒಂದು ಒಂದೂವರೆ ಗಂಟೆಯನಂತರ ನಿಮ್ಮ ಅಭಿಮಾನದಿಂದಲೋ ಏನೋ ಓದಿದೆ.. ಆದರೆ ಓದುತ್ತಾ ಹೋದಂತೆ ಕೊನೆಯ ಚರಣಗಳು ಸ್ವಲ್ಪ ಖುಷಿ ಕೊಟ್ಟವು..

ಯಾಕೆ ಹೀಗಾಯಿತು ಎಂದು ಯೋಚಿಸುತ್ತಿದ್ದೆ.. ಹಾಗೂ ಕೊನೆಗೆ ಕೆಳಗಿರುವಂತೆ ಒಂದು ಲಿಸ್ಟ್‌ ಮಾಡಿದೆ-

1. ಮೊದಲ ಪ್ಯಾರಾಗಳು ಅಷ್ಟೊಂದು ಎಟ್ರಾಕ್ಟಿವ್‌ ಆಗಿ ಗೋಚರಿಸದಿರುವುದು..

2. ಚಿತ್ರಗಳು ಗಂಭೀರವಾಗಿ ಕಂಡದ್ದು..

3. ಹಾಸ್ಯದ ಬೇಳೆ ಬೇಯದಿರುವುದು..

4. ನನ್ನಂತಹ ಬುದ್ದು ಮಂಡೆಗೆ ಸಂಸ್ಕೃತ ಅರ್ಥವಾಗದಿರುವುದು..

ಇನ್ಯಾವುದೂ ಹೊಳೆಯಲಿಲ್ಲ..

ಕೊನೆಗೆ ಸಿಂಹ ಕುರಿಗಳ ಲೆಕ್ಕದಲ್ಲಿ ಟೈಂ ಪಾಸ್‌ ಆಯ್ತು....

- ಪ್ರಕಾಶ್‌ ಶೆಟ್ಟಿ ಉಳೆಪಾಡಿ ; ಮಂಗಳೂರು

* * *

I couldnt analyze, think and wait to find out the answer for the sheep-lion problem. (but I did try for more than 10-15 minutes, stupid me!!!.) Finally I searched the google and found the answer. The roadblock for me I guess was being not able to decide whether it is "that particular sheep" or "a sheep" that could survive.

Thanks for the puzzle.

- Ravi Reddy; California

* * *

The answer to the simha kuri problem is that, there will always be One kuri left out at the END...whether the number if lions are even are odd doesnt matter.

- Manjunath NArasimhaswamy; City?

* * *

One Kuri will be left out in the end what ever happens!!

- N Anantha Krishna: Bangalore

* * *

It will be there always because after the last lion eats the sheep.. it will be a sheep and no lion to eat that last sheep...

:)

is that true ..?? if not tell me the answer

- Sharath; City?

* * *

The way I understand is wrong. I never thought that Shima can also think wisely. Story was interesting. Thanks for the nice stories.

- Prashanth B C; Tanzania

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more