• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವತ್ತು ‘ಅಂಗಾರಕಿ’ ಸಂಕಷ್ಟ ಚತುರ್ಥಿ

By * ಶ್ರೀವತ್ಸ ಜೋಶಿ
|

ವಿಚಿತ್ರಾನ್ನ ಅಂಕಣದ, ಅಂಕಣಕಾರನ ಮತ್ತು ಅನೇಕ ಮಂದಿ ಓದುಗರ ಆರಾಧ್ಯದೈವ ಗಣೇಶ. ಪ್ರಪ್ರಥಮ ಕಂತಿನಲ್ಲಿ ಗಣೇಶವಂದನೆ (ಗಣೇಶನಿಗೆ ಒಂದಾಣೆ) ಸೇರಿದಂತೆ ವಿಘ್ನನಿವಾರಕನ ಸ್ಮರಣೆಯನ್ನು ಆಗೊಮ್ಮೆ ಈಗೊಮ್ಮೆ ಈ ಅಂಕಣದಲ್ಲಿ ಮಾಡುತ್ತಲೇ ಬಂದಿದ್ದೇವೆ. ಇವತ್ತು 'ಅಂಗಾರಕಿ ಸಂಕಷ್ಟ ಚತುರ್ಥಿ" ; ಅದರ ಪ್ರಯುಕ್ತ ವಿಶೇಷ ಸಂಚಿಕೆಯಿದು. ಗಣೇಶ ನಿನ್ನ ಮಹಿಮೆ ಅಪಾರ... ಗಣೇಶ ನಿನ್ನ ಶಕ್ತಿ ಅಪಾರ... ಭಕ್ತವತ್ಸಲ ಕರುಣಾಸಾಗರ... ರಕ್ಷಿಸುರಕ್ಷಿಸು ವಿಘ್ನೕಶ್ವರ.

ವಿನಾಯಕಿ ಚತುರ್ಥಿ - ಸಂಕಷ್ಟ ಚತುರ್ಥಿ

ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಪ್ರತಿ ತಿಂಗಳೂ ಶುಕ್ಲಪಕ್ಷದ ಚತುರ್ಥಿಗೆ (ಅಮಾವಾಸ್ಯೆಯ ನಂತರ ಬರುವಂಥದ್ದು) ವಿನಾಯಕಿ ಚತುರ್ಥಿಯೆಂದೂ ಕೃಷ್ಣಪಕ್ಷದ ಚತುರ್ಥಿಗೆ (ಹುಣ್ಣಿಮೆಯ ನಂತರ ಬರುವಂಥದ್ದು) ಸಂಕಷ್ಟಚತುರ್ಥಿಯೆಂದೂ ಹೆಸರು. ಚುಟುಕಾಗಿ 'ಸಂಕಷ್ಟಿ" ಎಂದೂ ಹೇಳುವುದುಂಟು. ಹುಣ್ಣಿಮೆಯ ತರುವಾಯ ನಾಲ್ಕನೇದಿನ ಗಣೇಶಶಕ್ತಿಯ ತೇಜೋತರಂಗಗಳು ಭೂಮಂಡಲದಲ್ಲಿ ಗರಿಷ್ಠಪ್ರಮಾಣದಲ್ಲಿ ಇರುತ್ತವಂತೆ. ಆ ಕಾರಣದಿಂದ ಅವತ್ತು ಗಣೇಶಾರಾಧನೆಗೆ ಮಹತ್ವ. ಸಂಕಷ್ಟಚತುರ್ಥಿಯ ವ್ರತ ಕೈಗೊಂಡವರು ಆ ದಿನವಿಡೀ ಉಪವಾಸ ಮಾಡಿ ಗಣೇಶನಿಗೆ ಪೂಜೆಯ ನಂತರ ಚಂದ್ರದರ್ಶನ ಮಾಡಿ ಆಮೇಲಷ್ಟೆ ಪ್ರಸಾದ ಸ್ವೀಕರಿಸುವರು. ಶ್ರೀ ಗಣಪತ್ಯಥರ್ವಶೀರ್ಷವನ್ನು 21 ಸಲ ಪಠಿಸಿ, ಗಣೇಶನಿಗೆ ಷೋಡಷೋಪಚಾರಗಳಿಂದ ಪೂಜಿಸಿ 21 ದೂರ್ವಾಂಕುರ ಅರ್ಪಿಸಿ ಮೋದಕ ಭಕ್ಷ್ಯನೈವೇದ್ಯ ಮಾಡಬೇಕೆಂದು ಸಂಕಷ್ಟಿ ವ್ರತದ ಆಚರಣಾ ನಿಯಮಗಳು ತಿಳಿಸುತ್ತವೆ.

ಕರ್ನಾಟಕ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮಹಾರಾಷ್ಟ್ರದಲ್ಲಿ ಸಂಕಷ್ಟಿ ವ್ರತಧಾರಿಗಳ ಸಂಖ್ಯೆ ಅಧಿಕ. ಪ್ರತಿ ತಿಂಗಳ ಸಂಕಷ್ಟಿಯಂದು ಉಪವಾಸ ಮಾಡಿ ಭಕ್ತಿ-ಶ್ರದ್ಧೆಗಳಿಂದ ಗಣೇಶನನ್ನು ಆರಾಧಿಸಿ ಸಂಕಷ್ಟ (ಸಂಕಟ)ಗಳೆಲ್ಲ ನಿರ್ನಾಮವಾಗಿ ಇಷ್ಟಾರ್ಥಸಿದ್ಧಿಯಾಗುವಂತೆ ಕೇಳಿಕೊಳ್ಳುತ್ತಾರೆ. ಉತ್ತರಭಾರತದಲ್ಲಿ 'ಕಡ್‌ವಾ ಚೌತ್‌" ಎಂಬ ಆಚರಣೆ ಸಂಕಷ್ಟಚತುರ್ಥಿಯಂದೇ, ಹೆಚ್ಚುಕಡಿಮೆ ಅದೇ ಮಾದರಿಯಲ್ಲಿ (ದಿನವಿಡೀ ಉಪವಾಸ, ರಾತ್ರಿ ಚಂದ್ರನನ್ನು ನೋಡಿದ ಮೇಲೆ ಊಟ... ಇತ್ಯಾದಿ) ಇದೆ; ಆದರೆ ಅದು ಕಾರ್ತೀಕ ಮಾಸದ (ಶರದ್‌ ಪೂರ್ಣಿಮಾ ನಂತರದ) ಸಂಕಷ್ಟಚತುರ್ಥಿಯಂದು ಮಾತ್ರ.

ಅಂಗಾರಕಿ ಸಂಕಷ್ಟಚತುರ್ಥಿ

ಸಂಕಷ್ಟ ಚತುರ್ಥಿಯು ಮಂಗಳವಾರದಂದು ಬಂದರೆ ಅದಕ್ಕೆ 'ಅಂಗಾರಕಿ" ಎಂಬ ವಿಶೇಷ ಮಹತ್ವ. ಅಂಗಾರ ಅಂದರೆ ಸಂಸ್ಕೃತದಲ್ಲಿ ಕೆಂಡ ಎಂದರ್ಥ. ಕೆಂಡದಂತೆ ನಿಗಿನಿಗಿ ಹೊಳೆಯುವುದು ಅಂಗಾರಕ - ಮಂಗಳಗ್ರಹ. ಮಂಗಳನನ್ನು ಭೂಮಿಪುತ್ರನೆಂದೂ ಪುರಾಣಗಳು ಹೇಳುತ್ತವೆ. ಭೂಮಿಪುತ್ರನಾದ್ದರಿಂದ ಭೌಮ. ಮಂಗಳವಾರಕ್ಕೆ ಭೌಮವಾರವೆಂದೂ ಹೆಸರಿದೆ. ಭೂಲೋಕಕ್ಕೆ ಗಣೇಶ ಅಧಿದೇವತೆಯಾಗಿರುವಂತೆಯೇ ಮಂಗಳಕ್ಕೂ ಕೂಡ. ಅದಕ್ಕೆಂದೇ ಮಂಗಳವಾರ ಸಂಕಷ್ಟಿ ಬಂದರೆ ಅದಕ್ಕೆ 'ಅಂಗಾರಕಿ"ಯೆಂಬ ವಿಶೇಷ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Angaraki Sankashta Chaturthi by Srivathsa Joshi : Vichitranna-95, this episode of vichitranna is dedicated to all those ganesha devotess who observe sankashti with bhakt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more