ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಗನಾಮ ಫಲಾನುಭವಿಗಳ ಉವಾಚ...!

By Staff
|
Google Oneindia Kannada News

Readers reactions to PangaNaama!ಪಂಗನಾಮ ಪುರಾಣ ಸೊಗಸಾಗಿದೆ. ಭಲೆ!!

ನಿಮ್ಮ ಪಂಗಾಯಣದ ವಿವರಣೆಯ ನೀತಿ ವಾಕ್ಯ ಇಂತಿರಬಹುದಿತ್ತೇನೊ- ‘ಈ ಪಂಗನಾಮ ಪುರಾಣವನ್ನು ಓದಿದವರಿಗೂ, ಕೇಳಿದವರಿಗೂ ಸಕಲ ಆನಂದ ಸುಖ ಲಭ್ಯವಾಗುವುದಲ್ಲದೆ ಅವರುಗಳು ಜಗದೇಕೈಕ ಪಂಗ ಸ್ವೀಕೃತರಲ್ಲವೆಂಬ ಮನವರಿಕೆಯಾಗಲಿ’.

ಸರ್ವೇಸಾಮಾನ್ಯವಾಗಿ ಎಲ್ಲಾ ಜೀವಿತಗಳೂ ಒಂದಲ್ಲ ಒಂದು ರೀತಿಯಲ್ಲಿ ಪಂಗ ಸ್ವೀಕೃತರೋ ಇಲ್ಲ ಪಂಗ ವಿತರಕರೋ ಆಗಿರುತ್ತಾರೆ. ಅಂತೆಯೇ ಶ್ರೀಮನ್ನಾರದ ಮಹಾಶಯರಲ್ಲಿ ಎಲ್ಲ ಜೀವಜಂತುಗಳು ತಲೆಬಾಗಿ ಸಾಷ್ಟಾಂಗ ನಮಸ್ಕಾರವೆರಗಿ, ಇವೆಲ್ಲ ಕಾರಣ ವಿವರ ತಿಳಿಯಪಡಿಸಿ, ಅವರ 61ನೇ ಮಕ್ಕಳ ಹೆಸರು ‘ಪಂಗ’ವೆಂದು ಆಗಬೇಕೆಂದು ಬೇಡಿಕೊಳ್ಳೋಣ.

ಇನ್ನೊಂದು ವಿಷಯ. ಪ್ರವಾಸಿ ವರ್ಷ, ಸ್ತ್ರೀ ವರ್ಷ, ಜನ್ಮಶತಾಬ್ದಿ ವರ್ಷ ಇಂತೆಲ್ಲಾ ಇರುವಂತೆ, 2005ನೇ ಇಸವಿಯನ್ನು ನಾವು ‘ಪಂಗನಾಮ’ ಸಂವತ್ಸರವೆಂದು ಘೋಷಿಸಿದರೆ ಹೇಗೆ !!?

- ಅನಂತ ಸ್ವಾಮಿ; ಮೇರಿಲ್ಯಾಂಡ್‌

* * *

ನನ್ನ ಪಂಗನಾಮದ ಕಥೆಗಳು ಒಂದೇ ಎರಡೇ?? ಬಹುಷಃ ಅವುಗಳದೊಂದು ಸಂಕಲನವನ್ನೇ ಪ್ರಕಟಿಸಬಹುದೇನೊ. ಒಂದು ಸಣ್ಣ ಉದಾಹರಣೆ... ನಾನು ಒಮ್ಮೆ ಬೆಂಗಳೂರಿನ ಪ್ರಸಿದ್ಧ (ಆಗ ಪ್ರಸಿದ್ಧವಾಗಿತ್ತು; ಈಗಿದೆಯೋ ಇಲ್ಲವೋ ಗೊತ್ತಿಲ್ಲ) ಎಂ.ಎಂ ಸಾಫ್ಟೆಕ್‌ ಇನ್ಸ್ಟಿಟ್ಯೂಟ್‌ ಅನ್ನುವಲ್ಲಿ 5 ದಿನ Advanced Visual Basic ಕೋರ್ಸ್‌ ಕಲಿಸಲು ಹೋಗಿದ್ದೆ. 6000 ರುಪಾಯಿ ಕೊಡೋದು ಅಂತ ಮಾತಾಗಿತ್ತು. ನಾಲ್ಕನೇ ದಿನ ಸಡನ್ನಾಗಿ ಅವರೆಲ್ಲರಿಗೂ ಜ್ಞಾನೋದಯವಾಯ್ತು ; ಇದೆಲ್ಲ ನಮಗೆ ಮೊದಲೇ ಬರ್ತಾ ಇತ್ತು, ಇವನಿಗೆ ಯಾಕೆ 6000 ಕೊಡಬೇಕು ಅಂತ ಹೇಳಿ ಐದನೇ ದಿನ (ಕೊನೆಯ ದಿನ) ಕಂಪೆನಿಯ ಮಾಲೀಕನ ಹೆಂಡತಿಯೇ ನನ್ನನ್ನು ಚೇಂಬರ್‌ಗೆ ಕರೆದು- "We are very disappointed with these past 5 days, we wanted an expert and you are not one so we cannot pay you anything" ಅಂತ ಹೇಳಿ ನನ್ನನ್ನು ಪಾಪ ತುಂಬಾ ಪ್ರೀತಿಯಿಂದ ಮನೆಗೆ ಕಳಿಸಿಕೊಟ್ರು.

ತದನಂತರ ನನ್ನ ಅರ್ಧಾಂಗಿ ಪಟ್ಟು ಬಿಡದೆ 50% ಆದ್ರೂ ವಸೂಲಿ ಮಾಡಿದ್ಲು ಅಂತ ಇಟ್ಟುಕೊಳ್ಳಿ....

ಈ ತರಹ ನಾಮ ಹಾಕಿಸಿಕೊಂಡ ನನ್ನ ಪ್ರಕರಣಗಳ ಸರಮಾಲೆ ಸಾಕಷ್ಟು ಇವೆ. ಚೆನ್ನಾಗಿರೋ ಐದಾರು ಘಟನೆಗಳನ್ನು ನನ್ನಾಕೆ ಬಣ್ಣಿಸಬಹುದೇನೊ ನೋಡೋಣ :-))

You always make my day bright and cheerful. Thanks a lot!

- ಶ್ರೀನಿ ರಾವ್‌, ಚಿಕಾಗೊ

* * *

ನಿಮ್ಮ ‘ಪಂಗನಾಮ’ದ (ನೀವು ಬರೆದದ್ದು, ಹಾಕಿದ್ದಲ್ಲ) ಕಥೆ ನಮ್ಮನೆ ಕಥೆ, ಅಥವಾ ಮನೆ ಮನೆ ಕಥೆ! ನೀನ್ಯಾಕೋ? ನಿನ್ನ ಹಂಗ್ಯಾಕೋ? ನಿನ್ನ ‘ನಾಮದ ಬಲ’ ಒಂದಿದ್ದರೆ ಸಾಕು! ಎಂದು ಬಲವಾಗಿ ನಂಬಿದವರು ನಾವು. ಅದಕ್ಕೆ, ಪಂಗನಾಮ ಹಾಕಿಸಿಕೊಳ್ಳಬಾರದು ಎಂದು ನಾವೆಷ್ಟೇ ಹುಷಾರಾಗಿದ್ದರೂ, ನಾಮ ಹಾಕೋರು ನಮಗಿಂತ ಬಹಳ ಜಾಣರು! ಹೇಗಾದರೂ ನಾಮ ಹಾಕಿಯೇ ಹಾಕುತ್ತಾರೆ. ಅದರಲ್ಲೂ ನನ್ನ ಯಜಮಾನರಂತೂ, ಇಂತಹ ನಾಮ ಹಾಕುವವರಿಗೆಂದೇ, ಹಣೆಯನ್ನು ಯಾವಾಗಲೂ ತಯಾರಾಗಿ ಇಟ್ಟುಕೊಂಡಿರುತ್ತಾರಾ ಎಂದು ನನಗೆ ಅನೇಕ ಸಲ ಅನುಮಾನ ಬಂದಿದೆ!

ಸಂಪುಟ ವಿಸ್ತರಣೆ ಮಾಡ್ತೀನಿ..... ಮಾಡ್ತೀನಿ ಅಂತ ಧರ್ಮಸಿಂಗ್‌, ದೇವೇಗೌಡ ಮತ್ತು ಸಂಗಡಿಗರಿಗೆ ಹಾಕುತ್ತಿರುವುದು ಬಹುಶಃ ಇತ್ತೀಚೆಗೆ ಕಂಡು ಬಂದ ಅತಿ ದೊಡ್ಡ ನಾಮ. ಹೊಸ ಗಾದೆ - ‘ಎಲ್ಲಿಯವರೆಗೆ ನಾಮ ಹಾಕಿಸಿಕೊಳ್ಳುವವರು ಇರುತ್ತಾರೋ, ಅಲ್ಲಿಯವರೆಗೆ ನಾಮ ಹಾಕುವವರೂ ಇದ್ದೇ ಇರುತ್ತಾರೆ’!

ವಂದನೆಗಳು.

- ತ್ರಿವೇಣಿ ಎಸ್‌ ರಾವ್‌; ಚಿಕಾಗೊ

* * *

ಪಂಗ ನಾಮ! ಹಾಕಿಕೊಂಡವರಿಗಿಂತ ಹಾಕಿಸಿಕೊಂಡವರೇ ಹೆಚ್ಚು ಈ ಜಗತ್ತಿನಲ್ಲಿ! ಅವನ ನಾಮದ ಬಲದಿಂದ ‘ಮೂಕಂ ಕರೋತಿ ವಾಚಾಲಂ, ಪಂಗುಮ್‌ ಲಂಘಯತೇ ಗಿರಿಮ್‌’ ಎಂದು ಒಂದು ಸಂಸ್ಕೃತ ಶ್ಲೋಕವಿದೆ. ಅವನ ಹೆಸರಿನಲ್ಲಿ ಪಂಗ ನಾಮ ಹಾಕಿದವರು ಕಡಿಮೆ ಸಂಖ್ಯೆಯಲ್ಲಿಯೇ?

ನನ್ನ ಅನುಭವವ ಕೇಳುತ್ತೀರಾ?

ಧಾರವಾಡದಲ್ಲಿ ಚುನಾವಣೆ !

ಶಾಲೆಯ ಅಥವಾ ಕ್ಲಾಸಿನ ಚುನಾವಣೆಯೆಂದರೆ ಹೆಚ್ಚು ಸೂಕ್ತವೆನ್ನಿ. ನಾನು ಆಗ ತಾನೆ ತಮಿಳುನಾಡಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಧಾರವಾಡದ ಆ ಮಾಧ್ಯಮಿಕಶಾಲೆಗೆ ಸೇರಿದ್ದೆ. ಇನ್ನೂ ಸಹಪಾಠಿಗಳ ಮೈತ್ರಿಯ ಗಳಿಸಲಾರಂಭಿಸಿದ್ದೆ. ಒಬ್ಬ ಮಾತ್ರ ಕೇವಲನಾಗಿದ್ದ. ನನಗೆ ‘ಗಳಸ್ಯ ಕಂಠಸ್ಯ’ ಅಂದುಕೊಂಡಿದ್ದೆ. ಕೆಲದಿನಗಳ ನಂತರ ಒಂದು ದಿನ ಮಾಸ್ತರರು ‘ಇಂದು ಕ್ಲಾಸ್‌ ಮಾನಿಟರನ ಚುನಾವಣೆ’ ಎಂದು ಘೋಷಿಸಿದರು. 12 ವರ್ಷದ ‘ಹಸುಳೆ’ ನನಗೆ ಅದು ಹೊಸ ಅನುಭವ. ಓದಿನಲ್ಲೇನೋ ಮುಂದಿದ್ದೆನಾದರೂ ವ್ಯವವಹಾರದಲ್ಲಿ ಸ್ವಲ್ಪ ಹಿಂದೇನೇ!

Na ನಾಯಕರು!

ಐವರು ಸ್ಪರ್ಧಾಳುಗಳು. ಮೂವರು ಅತಿರಥಿ ಮಹಾರಥಿ ಹುದ್ದರಿಗಳೊಂದಿಗೆ ನನ್ನ ಮಿತ್ರ ಮತ್ತು ನನ್ನ ನಾಮಪತ್ರಗಳೂ ಸೇರಿಕೊಂಡವು. ಮುಂದೆ ದೇಶದ ನಾಯಕರಾಗುವ (ಅ)ಯೋಗ್ಯತೆಯುಳ್ಳ ಅವರೆಲ್ಲಿ? ನಾಯೀವ (Na) ಅನಿಸಿಕೊಳ್ಳುವ ನಾವೆಲ್ಲಿ? ನಮಗೆ ಕೊನೆಯ ಸ್ಥಾನ ಖಚಿತವೇ ಆದರೂ, ‘ಪರಾಜಯ ನನ್ನ ಜನ್ಮ ಸಿಧ್ಧ ಹಕ್ಕು’ ಎಂಬಂತೆ ಹುಚ್ಚು ಹುಮ್ಮಸಿನಿಂದ ಚುನಾವಣೆಯಲ್ಲಿ ಧುಮುಕಿದ್ದೆವು!

ಚುನಾವಣೆ ಒಪ್ಪಂದ!

ನಮ್ಮಿಬ್ಬರಿಗೂ ನಮ್ಮ ಅಪಜಯದ ಸುಳಿವು ಇತ್ತೇನೋ. ಕೈಯಲ್ಲಿ ಚುನಾವಣಾಪತ್ರ ಹಿಡಿದು ಪಕ್ಕದಲ್ಲೇ ಕುಳಿತ ನನ್ನ ಮಿತ್ರ ನನ್ನ ಕಿವಿಯಲ್ಲಿ ಪಿಸುಮಾತಿನಲ್ಲಿ ಉಸುರಿ ಒಪ್ಪಂದ ಮಾಡಿಕೊಂಡ, ‘ನೋಡು, ನಮಗೆ ನಾವೇ ವೋಟು ಕೊಡುವದು ಚಂದವಲ್ಲ. ನನ್ನ ಮತ ನಿನಗೆ, ನಿನ್ನ ಮತ ನನಗೆ, ಸರಿ ತಾನೆ’ ಎಂದು ಅವನಂದಾಗ ಅವನ ಔದಾರ್ಯಕ್ಕೆ, ಅವನ ಉದಾತ್ತ ವಿಚಾರಕ್ಕೆ, ಆದರ್ಶಕ್ಕೆ, ಮಾರು ಹೋದೆ.

ಶೂನ್ಯ ಸಂಪಾದನೆ!

ಅರ್ಧ ಗಂಟೆಯಲ್ಲಿ ಚುನಾವಣೆ ಮುಗಿದು ಹೋಯಿತು. ನಮ್ಮ ಚಿಕ್ಕ ಕ್ಲಾಸಿನಲ್ಲಿ ಇಪ್ಪತ್ತೆರಡೇ ವಿದ್ಯಾರ್ಥಿಗಳು. ಹತ್ತೇ ನಿಮಿಷದಲ್ಲಿ ಮತಗಳ ಎಣಿಕೆ ಪೂರೈಕೆ ಮಾಸ್ತರರಿಂದ. ಯಾರು ಗೆದ್ದರೆಂಬ ವಿಷಯದಲ್ಲಿ ನೀವು ಕುತೂಹಲ ತೋರಿಸುವದರಲ್ಲಿ ಅರ್ಥವಿಲ್ಲ. ‘ಪುಢಾರಿ’ ಗೆದ್ದುದರಲ್ಲಿ ಆಶ್ಚರ್ಯವೇನಿಲ್ಲ. ಮುಂಚೂಣಿಯ ಅಭ್ಯರ್ಥಿಗಳಲ್ಲಿ 20 ಮತಗಳು ಹಂಚಿ ಹೋಗಿದ್ದವು. ಹಿಂದುಳಿದ ಎರಡು ಅಭ್ಯರ್ಥಿಗಳ ಅಂದರೆ ಈ ಇಬ್ಬರು ಮಿತ್ರರ ಕಥೆಯೇ ಹೆಚ್ಚು ಸ್ವಾರಸ್ಯಕರವೆನ್ನಿ. ಮತಗಳ ಎಣಿಕೆ ಮುಗಿದಾಗ ನನ್ನ ಮಿತ್ರನಿಗೆ ಎರಡು ಮತಗಳು. ನನಗೆ ಶೂನ್ಯ! ‘ಎಲಾ ಬೆರ್ಕಿ, ಪ್ರಾಮಾಣಿಕನಾಗಿ ಮಾತು ಕೊಟ್ಟಂತೆ ನನ್ನ ವೋಟು ಗಿಟ್ಟಿಸಿದ್ದುದಲ್ಲದೆ ನಿನ್ನ ವೋಟನ್ನೂ ನಿನಗೇ ಹಾಕಿ ಕೊಂಡೆಯಾ, ಚಾಂಡಾಳ, ಹರಿಯ ಮತದವ, ಹರಿಯ ನಾಮ ಹೊತ್ತವನಲ್ಲೋ, ನೀನು ನನಗೆ ಪಂಗ ನಾಮ ಹಾಕಿದೆಯಲ್ಲೋ’ ಎಂದು ಮನಸ್ಸಿನಲ್ಲೇ ಅಂದುಕೊಂಡೆ! ‘ಗಳಸ್ಯ ಕಂಠಸ್ಯ’ದಿಂದ, ಕತ್ತು ಹಿಸುಕುವಷ್ಟು ಅತಿರೇಕಕ್ಕೆ ಹೋಗಿತ್ತು ನಮ್ಮ ಮೈತ್ರಿ!

- ಡಾ. ಶ್ರೀವತ್ಸ ದೇಸಾಯಿ ; ಡೋಂಕಾಸ್ಟರ್‌, ಯು.ಕೆ.

* * *

ಯಾರಿಗಾದರೂ ಪಂಗನಾಮ ಹಾಕುವ ‘ಛಾತಿ ಮತ್ತು ಚತುರತೆ ’ ನನಗೆ ಒಗ್ಗಿ ಬಂದಿಲ್ಲ. ಆದರೆ, ಜೀವನದಲ್ಲಿ ಹಲವು ಬಾರಿ ಪಂಗನಾಮ ಹಾಕಿಸಿಕೊಂಡ ಅನುಭವ ಮಾತ್ರ ನನಗೆ ಇದೆ.

‘ಪಂಗನಾಮ ಹಾಕಿಸಿಕೊಳ್ಳುವಷ್ಟು ಭೋಳೆತನ ನನ್ನಲ್ಲಿ ಇದೆ’ ಎಂದು ನನಗೆ ನಾಮ ಹಾಕುವವರು ನನ್ನನ್ನು ನೋಡಿ, ಮೊದಲೇ ಅಂದಾಜು ಮಾಡಿರುತ್ತಾರೆ. ಒಂದು ಸಲ ತಿರುಪತಿಯಲ್ಲೇ ನಾನು ಪಂಗನಾಮ ಹಾಕಿಸಿಕೊಂಡ ನೆನಪು ಬರುತ್ತಾ ಇದೆ.

ಹೊಸದಾಗಿ ಮಾರುತಿ ಜಿಪ್ಸಿ ಜೀಪ್‌ ಕೊಂಡಿದ್ದೆ. ನನ್ನ ಯುವ ಮಿತ್ರರಾದ ಶಂಕರ ಎಂಬ ಮೈನಿಂಗ್‌ ಎಂಜಿನೀಯರ್‌ ಮತ್ತು ಉದಯ ಎಂಬ ಮಾಸ್ಟರ್‌ ಮೆಕ್ಯಾನಿಕ್‌ ಇವರ ಜತೆಗೆ ನಾವು ತಿರುಪತಿಗೆ ಪ್ರಯಾಣ ಬೆಳೆಸಿದೆವು. ಸ್ಪೆಷಲ್‌ ದರ್ಶನದ ಸಾಲಿಗೆ ಸೇರುವ ಮೊದಲು ನಮಗೆ ಅರ್ಧ ಗಂಟೆಯ ಬಿಡುವು ಇತ್ತು. ದೇವಸ್ಥಾನದ ಎದುರಿನಲ್ಲಿರುವ ಅಂಗಡಿಗಳಿಗೆ ನನ್ನ ಮಡದಿ ಮತ್ತು ಮಕ್ಕಳು ಧಾಳಿ ಇಟ್ಟರು. ನಾವು ಮೂರು ಜನ ಗಂಡಸರು ಕೆಲಸ ಇಲ್ಲದೆ ಅಲ್ಲೇ ನಿಂತಿದ್ದಾಗ ಒಬ್ಬ ಪಂಗನಾಮ ಬಳಿಯುವ ಸರದಾರ ನಮ್ಮ ಹತ್ತಿರಕ್ಕೆ ಬಂದ. ಒಳ್ಳೆಯ ಇಂಗ್ಲಿಷ್‌ ಮಾತನಾಡುತ್ತಾ ‘ನಿಮ್ಮ ಹಣೆಗಳ ಮೇಲೆ ತಿರುಪತಿ ತಿಮ್ಮಪ್ಪನ ತಿರು ನಾಮವನ್ನು ಬರೆಸಿಕೊಂಡು ದೇವರ ದರ್ಶನ ಮಾಡಿ’ ಎಂಬ ವರಾತ ಹಚ್ಚಿದ. ಮೊದಲು ನಾವು ನಮಗೆ ನಾಮ ಬೇಡವೇ ಬೇಡ ಎಂದೆವು.

ಆಗ ಅವನು ‘ನಾನು ಗ್ರಾಜುವೇಟ್‌ ಸಾರ್‌! ನನಗೆ ಸಹಾಯ ಮಾಡಿ! ನಾನು ಬಹಳ ಹೈಜೀನಿಕ್‌ ಆಗಿ ತಮಗೆ ನಾಮ ಧಾರಣೆ ಮಾಡಿಸುತ್ತೇನೆ. ನೋಡಿ, ಸಾರ್‌! ನಾನು ಸ್ಟೆರೈಲ್‌ ಕಾಟನ್‌ ಬಳಸಿ ಕ್ಲೆನ್ಸಿಂಗ್‌ ಲೋಷನ್‌ನಿಂದ ತಮ್ಮಗಳ ಹಣೆ ಕ್ಲೀನ್‌ ಮಾಡಿ, ಪ್ರತಿಯಾಬ್ಬರಿಗೂ ಬೇರೆ ಬೇರೆ ಹೊಸಾ ಬ್ರಶ್‌ ಬಳಸಿ ನಾಮ ಹಾಕುತ್ತೇನೆ. ಬರೇ ಹತ್ತು ರೂಪಾಯಿ ಸಾರ್‌!’ ಎಂದು ಗೋಗರೆದ. ಕೊನೆಗೂ ಅವನ ವರಾತಕ್ಕೆ ಸೋತು ನಾನು ಮತ್ತು ಶಂಕರ ನಾಮ ಹಾಕಿಸಿಕೊಂಡು ದೇವರ ದರ್ಶನಕ್ಕೆ ಹೋಗಲು ಒಪ್ಪಿದೆವು.

ನಾಮ ಹಾಕುವ ಯುವಕನು ತನ್ನ ಹಡಪ ಬಿಚ್ಚಿ ಒಳ್ಳೆಯ ಸರ್ಜನ್‌ ತರಹ ಚಾಕಚಕ್ಯತೆಯಿಂದ ಮೊದಲು ಶಂಕರನಿಗೆ, ಆ ಮೇಲೆ ನನಗೆ ತಿರುಪತಿ ವೆಂಕಟರಮಣನ ನಾಮ ಬರೆದ. ನಾಮ ಬರೆಯಬೇಕಾದರೆ ನಾನು ನನ್ನ ಕನ್ನಡಕ ತೆಗೆಯಲೇ ಬೇಕಾಗಿತ್ತು. ಕನ್ನಡಕವನ್ನು ತೆಗೆದು ಕೈಯ್ಯಲ್ಲಿ ಹಿಡಿದು, ಆ ಉರಿಬಿಸಿಲಿನಲ್ಲಿಯೇ ಆತನು ಹಾಕಿಕೊಟ್ಟ ಪ್ಲಾಸ್ಟಿಕ್‌ ಸ್ಟೂಲ್‌ ಮೇಲೆ ಆಸೀನನಾಗಿ ನಾಮ ಬಳಿಸಿಕೊಳ್ಳುತ್ತಿದ್ದೆ. ಶಂಕರ ನನಗಿಂತ ಮೊದಲು ತನ್ನ ನಾಮವನ್ನು ಪ್ರದರ್ಶಿಸಲು ಉದಯನ ಜತೆಗೆ ನನ್ನ ಮಕ್ಕಳು ಇದ್ದಲ್ಲಿಗೆ ಹೊರಟು ಹೋದ. ನನ್ನ ನಾಮವನ್ನು ಬಹಳ ಮುತುವರ್ಜಿಯಿಂದಲೇ ಹಾಕಿ ಮುಗಿಸಿದ ನಾಮ ಹಾಕುವ ಆಸಾಮಿಯು ‘ಸರ್‌! ಇನ್ನು ಐದು ನಿಮಿಷ ತಾವು ಕನ್ನಡಕ ಧರಿಸಬೇಡಿರಿ! ಅಷ್ಟರ ಒಳಗೆ ತಮ್ಮ ನಾಮ ಒಣಗಿ ಬಿಡುತ್ತೆ! ಆ ಮೇಲೆ ಕನ್ನಡಕವನ್ನು ಧರಿಸಿಕೊಳ್ಳಬಹುದು!’ ಎಂದ. ಬಿಸಿಲಿನಲ್ಲಿಯೇ ತನ್ನ ಕನ್ನಡಿಯನ್ನು ನನ್ನ ಮುಖದ ಎದುರು ಝಳಪಿಸಿ ತಮ್ಮ ನಾಮದ ಚೆಂದ ನೋಡಿ ಎಂದ. ಆ ಪ್ರಖರವಾದ ಬೆಳಕಿಗೆ ನನ್ನ ಮುಖವೇ ನನಗೆ ಕಾಣಲಿಲ್ಲ.

ಜೀವನದಲ್ಲಿ ಮೊದಲನೇ ಬಾರಿ ಶ್ರೀ ತಿರುಪತಿ ತಿಮ್ಮಪ್ಪನ ನಾಮ ಧರಿಸಿದ್ದೆ! ನನ್ನ ಮನಸ್ಸಿಗೆ ಏನೋ ಒಂದು ಬಗೆಯ ತೃಪ್ತಿಯಾಗಿತ್ತು! ನನ್ನ ಮಡದಿ ಮಕ್ಕಳು ನನ್ನ ವಿಚಿತ್ರ ನಾಮವನ್ನು ನೋಡಿ ನಗುವರಾದರೂ, ಪರ ಊರಾದ ತಿರುಪತಿಯಲ್ಲಿ ನನ್ನನ್ನು ಗೇಲಿಮಾಡುವ ಪರಿಚಿತರಾರೂ ಇಲ್ಲವಲ್ಲ! ಎಂದು ಸಂತೋಷ ಪಟ್ಟೆ. ನಾಮ ಹಾಕುವವನ ಸೇವೆಯಿಂದ ನಾನು ಸಂತುಷ್ಟನಾಗಿಬಿಟ್ಟಿದ್ದೆ. ನಾನು ಅವನ ಸೇವೆಗೆ ಮೆಚ್ಚಿ ‘ನಿನಗೆ ಇಪ್ಪತ್ತು ರೂಪಾಯಿಯ ಮೇಲೆ ಎಂಬತ್ತು ರೂಪಾಯಿ ಭಕ್ಷೀಸು ಕೊಡುವೆ!’ ಎಂದು ನನ್ನ ಪರ್ಸ್‌ ಬಿಚ್ಚಿ ಆತನಿಗೆ ನೂರರ ನೋಟು ನೀಡಿದೆ. ಪರ್ಸಿನಲ್ಲಿ ಒಂದು ಐನೂರರ ನೋಟು ಮತ್ತು ನೂರರ ಒಂದು ನೋಟು ಮಾತ್ರ ಇದ್ದುವು. ನನ್ನ ಬಳಿಯಿದ್ದ ದೊಡ್ಡ ಮೊತ್ತದ ಹಣವನ್ನು ಮುಂಜಾಗ್ರತೆಯಿಂದ ನನ್ನ ಯಜಮಾನತಿಯ ದೊಗಲೆ ಜಂಬದ ಚೀಲದಲ್ಲಿ ‘ಸೇಫ್‌ ಕಸ್ಟಡಿ’ ಗೋಸ್ಕರ ಆ ಮೊದಲೇ ಇರಿಸಿದ್ದೆ. ಆಗ ಆ ಗ್ರಾಜುವೇಟ್‌ ನಾಮ ಹಾಕುವವನು ‘ಸಾರ್‌! ಈ ಐನೂರರ ನೋಟ್‌ ಯಾಕೆ ಕೊಡುತ್ತಿದ್ದೀರಿ? ನೂರರ ನೋಟ್‌ ಕೊಟ್ಟರೆ ನಾನು ತಮಗೆ ಬಹು ಆಭಾರಿ!’ ಎಂದು ವಿನಯದಿಂದ ಬೇಡಿಕೊಂಡ. ನನಗೆ ಆ ಬಿಸಿಲಿನ ಝಳದಲ್ಲಿ ಕಣ್ಣು ಸರಿಯಾಗಿ ಕಾಣಿಸುತ್ತಾ ಇರಲಿಲ್ಲ. ಅದಲ್ಲದೇ, ಕೆಲವೇ ಸೆಕೆಂಡುಗಳ ಹಿಂದೆ ನನ್ನ ಕಣ್ಣೆದುರು ಅವನ ಕನ್ನಡಿ ಬೇರೆ ಕಣ್ಣು ಕುಕ್ಕಿಸುವಷ್ಟು ಪ್ರಕಾಶ ಬೀರಿತ್ತು! ಅವನ ಸಾಚಾತನವನ್ನು ಮನದಲ್ಲೇ ಪ್ರಶಂಸಿಸುತ್ತಾ, ನನ್ನ ಪರ್ಸಿನಲ್ಲಿದ್ದ ಇನ್ನೊಂದು ನೋಟನ್ನು ಆತನಿಗೆ ನೀಡಿ, ಮೊದಲು ಕೊಟ್ಟ ನೋಟನ್ನು ಪಡೆದು ಅವನಿಗೆ ‘ಥ್ಯಾಂಕ್ಸ್‌’ ಎಂದೆ! ಆತ ನನಗೆ ನಮಸ್ಕರಿಸಿ ಪದೇ ಪದೇ ‘ತುಂಬಾ ಉಪಕಾರವಾಯಿತು!’ ಎನ್ನುತ್ತಾ ಹೊರಟು ಹೋದ.

ನಾನು ನಿಧಾನವಾಗಿ ನಡೆದು ಅಂಗಡಿಗಳ ಬಳಿ ಇದ್ದ ನಮ್ಮ ಗುಂಪನ್ನು ಸೇರಿದೆ. ನನ್ನ ತಿರುಪತಿ ನಾಮವನ್ನು ನೋಡಿ ನನ್ನ ಸಂಸಾರದವರು ಮನಸಾರೆ ನಕ್ಕರು. ನಾನೂ ಪ್ರತಿಯಾಗಿ ತೃಪ್ತಿಯಿಂದ ನಕ್ಕೆ! ನಾವು ಅಲ್ಲೇ ಇದ್ದ ಜೂಸ್‌ ಅಂಗಡಿಯಲ್ಲಿ ಮೋಸಂಬಿ ಜೂಸ್‌ ಸೇವಿಸಿದೆವು. ಅಷ್ಟರಲ್ಲಿ ಐದು ನಿಮಿಷ ಕಳೆದಿರಬಹುದೇನೊ. ನಾನು ಪುನಃ ಕನ್ನಡಕ ಧರಿಸಿದೆ. ಜೂಸ್‌ ಅಂಗಡಿಯವನಿಗೆ ಚಿಲ್ಲರೆ ಬೇಕೆಂದು ನನ್ನ ಐನೂರು ರೂಪಾಯಿಯ ನೋಟ್‌ ಕೊಡಲು ಪರ್ಸ್‌ ಬಿಚ್ಚಿದೆ. ಅದರಲ್ಲಿ ಐನೂರು ರೂಪಾಯಿಯ ನೋಟಿನ ಬದಲು ನೂರು ರೂಪಾಯಿನ ನೋಟ್‌ ಮಾತ್ರ ಇದ್ದಿತು! ನನಗೆ ನಾಮಹಾಕಿದ ‘ಬುದ್ಧಿವಂತ ’ ಜನ ಜಂಗುಳಿಯಲ್ಲಿ ಮರೆಯಾಗಿದ್ದ!

ನಾನು ಅಂದು ಹಾಕಿಸಿಕೊಂಡ ತಿರುಪತಿ ನಾಮದ ನೆನಪನ್ನು ಇನ್ನೂ ಮರೆತಿಲ್ಲ!

- ಎಸ್‌. ಮಧುಸೂದನ ಪೆಜತ್ತಾಯ; ಬೆಂಗಳೂರು

* * *

ನಿಮ್ಮ ಲೇಖನ ‘ಪಂಗನಾಮವೂ...’ ಸೊಗಸಾಗಿದೆ ಮತ್ತು ಬಹಳಷ್ಟು ಮಾಹಿತಿದಾಯಕವೂ ಆಗಿದೆ. (ಇವತ್ತು ತಾನೆ ತಿರುಪತಿ ಪ್ರವಾಸ ಮುಗಿಸಿ ಬಂದಿದ್ದೆ. ನಿಮ್ಮ ಲೇಖನ ಖುಶಿ ಜೊತೆಗೆ ಮಾಹಿತಿ ಕೊಟ್ಟಿತು.) ಒಂದು ವಿಧವಾಗಿ ಯೋಚಿಸಿದರೆ, ನಾಮಧಾರಿಗಳೇ ಹಲವರು ಎನ್ನಬಹುದು. (‘ನಾಮ್ಧಾರಿ ಪಂಥ’ ಅಂತ ಇತ್ತಂತೆ, ಅದರ ಬಗ್ಗೆ ನನಗೆ ಸರಿಯಾಗಿ ತಿಳಿಯದು).

ಒಮ್ಮೆ ನನ್ನ ಸ್ನೇಹಿತನಿಗೆ ಆದ ಅನುಭವ ಹೀಗಿದೆ. ನಾನು ಮತ್ತು ಸ್ನೇಹಿತ ಇಬ್ಬರೂ 2-3 ವರ್ಷಗಳ ಹಿಂದೆ ತಿರುಪತಿಗೆ ಹೋಗಿದ್ದಾಗಿನದು. ಸ್ನೇಹಿತ ಮುಡಿ ಕೊಟ್ಟು ಪುಷ್ಕರಿಣಿ ಕೊಳದಲ್ಲಿ ಸ್ನಾನ ಮುಗಿಸಿ ಬರುವಾಗ, ವರಾಹ ಸ್ವಾಮಿಯ ದೇವಾಲಯದ ಎದುರು ಇರುವ ಪುಟ್ಟ ಗುಡಿಯ ಬಳಿ ‘ದಾಸಯ್ಯ’ ನಂಥವನೊಬ್ಬ ಸ್ನೇಹಿತನಿಗೆ ಅಕ್ಷರಶಃ ನಾಮ ಹಾಕಿದ್ದ. ಹೇಗೆಂದರೆ, ಆತ ‘ಸ್ವಾಮೀ, ನಾಮಂ ಪೆಟ್ಕೋಂಡಿ... ದರ್ಶನಂ ಚೇಯಂಡಿ’ ಎಂದ. ಅದಕ್ಕೆ ಸ್ನೇಹಿತ ಹೂಂ... ಅಂದ. ನಂತರ ಕುತ್ತಿಗೆಗೆ ಒಂದು ಕರಿದಾರದ ಜೊತೆಯ ಡಾಲರ್‌ ಕೂಡ ಹಾಕಿದ ಆತ ಅಮೇಲೆ ದುಡ್ಡು ಕೊಡಬೇಕೆಂದು ಪೀಡಿಸತೊಡಗಿದ! ಹೀಗೆ ನಾಮ್ಧಾರಿ ಆದ ಪ್ರಸಂಗ ಈಗಲೂ ನೆನಪಾಗುತ್ತದೆ.

- ಚಂದ್ರು; ಬೆಂಗಳೂರು

* * *

ನಿಮ್ಮ ಈ ವಾರದ ಅಂಕಣ ಓದಿ ಸಾರ್ಥಕವಾಯ್ತು. ಹೀಗಾದರೂ ಶ್ರೀಹರಿಯ ನಾಮ ಪಠಿಸುವುದಕ್ಕೆ ಸಹಾಯ ಆಯ್ತು. ಈ ಕ್ಷಣದಲ್ಲಿ 2 ಹಾಡುಗಳು ನೆನಪಿಗೆ ಬಂತು. ನಿಮಗೆ ಸಂಗೀತದ ಮೇಲೆ ಆಸಕ್ತಿ ಎಷ್ಟು ಇದೆ ಗೊತ್ತಿಲ್ಲ, ‘ಕಲಿಯುಗದಲಿ ಹರಿ ನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೊ ರಂಗ...’ ಮತ್ತು ‘ನೀನ್ಯಾಕೊ ನಿನ್ನ ಹಂಗ್ಯಾಕೊ, ನಿನ್ನ ನಾಮದ ಬಲವೊಂದಿದ್ದರೆ ಸಾಕು...’ ಈ ಹಾಡುಗಳನ್ನು ಕನ್ನಡಆಡಿಯಾ.ಕಾಂ (ಅಂತರ್ಜಾಲ ರೇಡಿಯಾ)ದಲ್ಲಿ ಕೇಳುವ ಅವಕಾಶ ಸಿಕ್ಕಿತು. I did not feel the stress of my work at all. Thanks for all this (happened because of your article).

I also surfed thro your article 24ರ ಸಂಖ್ಯೆ. I loved it for more reasons. Just to mention a few, I am a fan of Gayatri manthra, I feel it is one of a kind & therefore as said already ಮಂತ್ರಗಳಲ್ಲಿ ಆದಿ, complete - ಶ್ರೇಷ್ಠವಾದದ್ದು. ಅದರಿಂದಲೇ although people say ಹೆಂಗಸರು ಗಾಯತ್ರಿ ಮಂತ್ರ ಹೇಳಬಾರದು ಅಂದರೂ, ನಾನು ದಿನಾ ಹೇಳಿದ್ದುಂಟು. ಹಾಗೆಯೇ ಕೇಶವಾದಿ ನಾಮವನ್ನು ಹೇಳುವ ಮೂಲಕ ನನ್ನ ಗಾಯತ್ರಿ ಮಂತ್ರವನ್ನು ಕಂಪ್ಲೀಟ್‌ ಆಗಿ ಪ್ರತಿದಿನವೂ ನನ್ನ ಮಗಳಿಗೆ ರಾತ್ರಿ ಹೇಳುವುದುಂಟು. ಕೇಶವಾದಿ ನಾಮದ ಲಿರಿಕ್ಸನ್ನು ಬರೆದಿದ್ದಕ್ಕೆ ಧನ್ಯವಾದಗಳು. I would like to add last lines for that. My mom used tO end that with these words ‘ಸುವ್ವಿ ಕೇಶವಾದಿ ಸುವ್ವಿ ಸುವ್ವಿ ಶ್ರೀ ಕೃಷ್ಣ ಸುವ್ವಿ ಕೇಶವಾದಿ ಕೃಷ್ಣ ಸುವ್ವಿ ಸುವ್ವಲಾಲಿ...’

I have not read all your articles yet I have to catch up on those. As always nimage Dhanyavadagalu.

With regards,

- Dr. Meena B. Subbarao; California (Originally of Kadur Distt, Chikmagalur)

* * *

I like your articles very much. This one on "Vaishnava Nama" was very informative. Many People who belong to other castes wear this "naam" in various other forms like "onti nama" and I have seen some people using "kaadige" also. If you know something about such practices please enlighten us. Sorry I could not write using Baraha, I will do so next time.

Regards,

- Rajkeerthy Ramesh; San Jose, CA

* * *

Namastubhayam, Sreevathsa Joshigaaru:

Your article "Panga Namayo Pundara Namayo" is very interesting.This is my addition to your article on what you have written on NAMA. In your article you provide reference to state that if one does religious rituals with out nama, one does not get its benefit or Pala. Our Sanathan Dharma says One can do religious rituals in any form or state but one should have Bhakthi and one has to do "Sankalpa". Without Sankalpa the pooja pala will not be attained. For this reason, One has to do Sankalpa in a proper way to get pooja pala more than to have Panaga nama.

Thanks,

- Krishnamurthy Jois; McLean, Virginia

* * *

Srivatsa Joshi avarigae Namaskaragalu.

On this Thanksgiving day, I am truly thankful for the pleasure of reading your essays every week and learning from them. You have recently made lemonade out of lemon, kept me thinking for 24 hours on your "24 number mahatme." and todays Punga nama was much fun to read and I had guessed it would be the subject for your record breaking 111th essay.

It was such a pleasure meeting you in person at the Kannada Sammaelana at Orlando.

Best wishes to you and your family.

- G.S.Satya; California

ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X