• search

ಏನಿಲ್ಲ ಏನುಂಟು... ಜಾಲಾಡಿಸಿದ್ದರಲ್ಲಿ ನೂರೆಂಟು!

By ಶ್ರೀವತ್ಸ ಜೋಶಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವರಾತ್ರಿ ಕಳೆಯಿತು; ರಾಜ್ಯೋತ್ಸವವೂ ನಿನ್ನೆ ಆಯ್ತು. ಇನ್ನು ಮುಂದಿನ ವಾರ ದೀಪಾವಳಿ. ಒಟ್ಟಿನಲ್ಲಿ ಈಗ ಎಲ್ಲೆಡೆಯೂ ಹಬ್ಬದ ಸಂಭ್ರಮದ ವಾತಾವರಣ. ಶುಭಾಶಯ, ಉಡುಗೊರೆ, ಸಿಹಿತಿಂಡಿಗಳ ವಿನಿಮಯ, ವಿತರಣೆ. ವಿಚಿತ್ರಾನ್ನ ಓದುಗಮಿತ್ರರಿಗೆಲ್ಲ , ಅಂಕಣವು ನೂರು ವಾರಗಳ ಪೂರೈಸಿ ಮುನ್ನಡೆಯಲು ಪ್ರೋತ್ಸಾಹವಿತ್ತವರಿಗೆಲ್ಲ , ಹಬ್ಬದ ಸಡಗರದಲ್ಲಿ ಹೊಸದೇನನ್ನಾದರೂ ಅರ್ಪಿಸಬೇಕೆಂಬ ಯೋಚನೆಯ ಫಲವೇ ಇವತ್ತಿನ ಸಂಚಿಕೆ. ಇದು ಸ್ವಲ್ಪ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಇದೆ.

  ಈ ಸಲ ಯಾವೊಂದು ವಿಷಯದ ಮೇಲೂ ವ್ಯಾಖ್ಯಾನವಿಲ್ಲ , ವಿಮರ್ಶೆಯಿಲ್ಲ. ಅಂತರ್ಜಾಲಮಥನದಿಂದ, ಸರಪಣಿ ವಿ-ಅಂಚೆಗಳಿಂದ ನನ್ನ ಸಂಗ್ರಹಕ್ಕೆ ಸೇರಿರುವ ಎಷ್ಟೊ ಸಂಗತಿ-ವಿಷಯ-ವಸ್ತುಗಳ ರಾಶಿಯಿಂದ ಆಯ್ದ ನೂರೆಂಟನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಯಾವೊಂದೂ ಪ್ರಭೇದ-ಪ್ರವರ್ಗವಾಗಿ ವಿಂಗಡಿಸದೆ ಎಲ್ಲವನ್ನೂ ಅನುಕ್ರಮ ಸಂಖ್ಯೆಯಾಂದಿಗೆ ಪಟ್ಟಿ ಮಾಡಿದ್ದೇನೆ. ಉಪಯುಕ್ತತೆಯವು ಕೆಲವಾದರೆ ಮನರಂಜನೆಯವು ಇನ್ನು ಕೆಲವು. ಪ್ರತಿಯಾಂದು ಸಂಖ್ಯೆಯ ಹೈಪರ್‌ಲಿಂಕ್‌ ಕ್ಲಿಕ್ಕಿಸಿದರೆ ಪ್ರತ್ಯೇಕ ಪುಟದಲ್ಲಿ ಆ ವಸ್ತು/ಸಂಗತಿ/ವಿಷಯ/ವಿಚಾರ ಮೂಡಿಬರುತ್ತದೆ. ಈ ಸಂಗ್ರಹವು ಬಹುಮಾಧ್ಯಮ (ಮಲ್ಟಿಮೀಡಿಯಾ) ರೂಪದಲ್ಲಿದೆ. ಸಂಖ್ಯೆಯ ಪಕ್ಕಕ್ಕೆ ನಕ್ಷತ್ರ ಗುರುತು (*) ಇದ್ದರೆ ಆ ಹೈಪರ್‌ಲಿಂಕ್‌ ಮೇಲೆ ಮೌಸ್‌ನ ರೈಟ್‌ಕ್ಲಿಕ್‌ ಮಾಡಿ ' Save target as...’ ಮೆನು ಆಯ್ಕೆ ಮಾಡಿ ನಿಮ್ಮ ಗಣಕಕ್ಕೆ ಅದನ್ನು ಅವರೋಹಿಸಿಕೊಳ್ಳಬಹುದು.

  ನೂರೆಂಟು ನಮನಗಳೊಂದಿಗೆ ನಿಮಗಿದೋ ನೂರೆಂಟು ನಮೂನೆಯ ಉಡುಗೊರೆಗಳು. ಬೇಕಾದ್ದನ್ನು ಅಥವಾ ಎಲ್ಲವನ್ನೂ ಆಯ್ದುಕೊಳ್ಳಿ!

  108 gifts for ThatsKannada-Vichitranna readers

  * * *

  001. ಒಂದು ಪೈಸೆ ಎರಡು ಪೈಸೆ ನಾಣ್ಯಗಳನ್ನು ನೋಡಬೇಕೇ? ರಿಸರ್ವ್‌ ಬ್ಯಾಂಕಿನ ವೆಬ್‌ ಪುಟದಲ್ಲೊಂದು ನಾಣ್ಯಗಳ ಮ್ಯೂಸಿಯಂ.

  002. ಈ ಪುಟದಲ್ಲಿನ ಪುಟ್ಟ ಕರಡಿಗೊಂಬೆಗಳ ಪೈಕಿ ಯಾವುದರ ಮೇಲಾದರೂ ನಿಮ್ಮ ಮೌಸನ್ನು ಪಾರ್ಕ್‌ ಮಾಡಿನೋಡಿ!

  003. ರಾಸಾಯನಶಾಸ್ತ್ರದಲ್ಲಿ ಆವರ್ತಕೋಷ್ಟಕ (ಪೀರಿಯಾಡಿಕ್‌ ಟೇಬಲ್‌) ಕಲಿತ ನೆನಪಿದೆಯೇ?

  004. ಆಕರ್ಷಕ ಅನಿಮೇಷನ್‌ ಕ್ಲಿಪ್ಪುಗಳು ನಿಮಗಿಲ್ಲಿ ಲಭ್ಯ.

  005. ಕಾರ್‌ ಖರೀದಿಯ ಪೂರ್ವಭಾವಿ ತಯಾರಿಗೆ ಉಪಯುಕ್ತ ತಾಣ.

  006. ಸ್ವಸಹಾಯ ಯೋಜನೆಗಳಿಗೆ ಮಾರ್ಗದರ್ಶಿ.

  007. ರೀಡರ್ಸ್‌ ಡೈಜೆಸ್ಟ್‌ ನಿಮಗೆ ಗೊತ್ತು ; ರೈಟರ್ಸ್‌ ಡೈಜೆಸ್ಟ್‌ ಬಗ್ಗೆ ಗೊತ್ತಿತ್ತೇ?

  008. ಅ ಆ ಇ ಈ ಕನ್ನಡದ ಅಕ್ಷರಮಾಲೆ...

  009. ಶಬ್ದಾರ್ಥವನ್ನು ಮಾತ್ರವಲ್ಲದೆ ಉಚ್ಚಾರವನ್ನೂ ತಿಳಿಸುವ ಒಂದು ಇಂಗ್ಲಿಷ್‌ ನಿಘಂಟು.

  010. ಮೈಲಿಯಿಂದ ಕಿ.ಮೀಗೆ, ಗ್ಯಾಲನ್‌ನಿಂದ ಲೀಟರ್‌ಗೆ ಇತ್ಯಾದಿ ಕನ್ವರ್ಟಿಸಲು ಒಂದು ಸಿದ್ಧಸೂತ್ರ.

  011. ಅಖಿಲ ಭಾರತೀಯ ಟೆಲಿಫೋನ್‌ ಡೈರೆಕ್ಟರಿ.

  012. ಯಾವ ಏರ್‌ಲೈನ್ಸ್‌ನಲ್ಲಿ ಎಷ್ಟು ಚೀಪಾಗಿ ಟಿಕೆಟ್‌ ಇವೆ...

  013. ಅಮುಲ್‌ ಕಂಪೆನಿಯ ಇದುವರೆಗಿನ ಎಲ್ಲ ಹೋರ್ಡಿಂಗ್‌ ಜಾಹೀರಾತುಗಳ ಸಂಗ್ರಹ.

  014. ಅಮೆಜಾನ್‌ ಹೊರತಾಗಿ ಅಂತರ್ಜಾಲದಲ್ಲಿ ಪುಸ್ತಕ ಖರೀದಿ.

  015. ಪ್ರಪ್ರಥಮ ಕನ್ನಡ ಅಂತರ್ಜಾಲ ರೇಡಿಯಾ ಸ್ಟೇಷನ್‌ (24 ಗಂಟೆಯೂ ಪ್ರಸಾರ!)

  016. ಗೂಗಲ್‌ನ ಕೂಲ್‌ ಲೊಗೊ ಅವತಾರಗಳು.

  017. ಕನ್ನಡ ವಿಶ್ವಕೋಶ. ಇದಕ್ಕೆ ನೀವೂ ಮಾಹಿತಿಯನ್ನು ಸೇರಿಸಬಹುದು!

  018. ಮಕ್ಕಳನ್ನು ಹೊತ್ತು, ಹೆತ್ತು, ಸಲಹಿ, ಸಾಕಲು ಸಂಪೂರ್ಣ ಮಾರ್ಗದರ್ಶಿ.

  019. ಯಾವ ಟೆಲಿಫೋನ್‌ ನಂಬರ್‌ ಎಲ್ಲಿಯದು ಕಂಡುಹಿಡಿಯಬಹುದಿಲ್ಲಿ ಕ್ಷಣಾರ್ಧದಲ್ಲಿ!

  020. ಮಾನ-ಪ್ರಮಾಣಗಳನ್ನು ಪರಸ್ಪರ ವರ್ಗಾಯಿಸಿಕೊಳ್ಳುವುದು ಇಲ್ಲಿ ಮೌಸ್‌ಕ್ಲಿಕ್‌ನಷ್ಟು ಸುಲಭ!

  021. ಆಯುರ್ವೇದದ ಕುರಿತು ಕೆಲವು ಕಿರುಟಿಪ್ಪಣಿಗಳು.

  022. ಚಿತ್ರಗಳಲ್ಲಿ ಹಣ್ಣು-ಹಂಪಲು.

  023. ವಿಧವಿಧದ ಬೆಂಕಿಪೊಟ್ಟಣ ಲೇಬಲ್‌ ಸಂಗ್ರಹ.

  024. ಸಸ್ಯಾಹಾರಿ ಔತಣ, ಯಾವ ದೇಶದ ಕ್ಯುಸಿನ್‌ ಬೇಕೊ ಆಯ್ಕೆಮಾಡಿ.

  025. ಇಂಗ್ಲಿಷ್‌ ಬರವಣಿಗೆಯಲ್ಲಿ ತಪ್ಪು-ಒಪ್ಪು.

  026. ಡೈಲಿ ಡೋಸ್‌ ಆಫ್‌ ಕಾರ್ಟೂನ್ಸ್‌.

  027. ನೀವು ಟೈಪಿಸಿದ್ದನ್ನು ಮಾತಾಡಿ ಕೇಳಿಸುತ್ತದೆ ಈ ವೆಬ್‌ಪುಟ!

  028. ಇಂಟರ್ನೆಟ್‌ ತಂತ್ರಜ್ಞಾನದ ಬಗ್ಗೆ ಪ್ರಾಥಮಿಕ ವಿದ್ಯಾಭ್ಯಾಸ.

  029. ' ಹೇಗೆ ಕೆಲ್ಸ ಮಾಡುತ್ತದೆ?’ ಎಂಬ ಪ್ರತಿಯಾಂದು ಅಚ್ಚರಿಗೂ ಉತ್ತರ.

  030. ಭಾರತೀಯ ವಿದ್ಯಾಭವನದ ಪ್ರಸ್ತುತಿ - ' ಡಿಂಡಿಮ’.

  031. ಅಮರ ಚಿತ್ರ ಕಥಾ ಅಂತರ್ಜಾಲ ತಾಣ.

  032. ಪತ್ರಿಕೋದ್ಯಮದಲ್ಲೇ ಶ್ರೇಷ್ಠ ಪುಲಿಟ್ಜರ್‌ ಪ್ರಶಸ್ತಿಯ ಬಗ್ಗೆ ಮಾಹಿತಿ.

  033. ಕಾಲ್ಕ್ಯುಲೇಟರ್‌ಗಳು ನಡೆದು ಬಂದ ದಾರಿ.

  034. ವರ್ಚ್ಯುವಲ್‌ ಹಾಸ್ಪಿಟಲ್‌ (ಆರೋಗ್ಯಮಾಹಿತಿಯ ಡಿಜಿಟಲ್‌ ಲೈಬ್ರರಿ).

  035. ಒಂದು ಡಾಲರ್‌ಗೆ ಎಷ್ಟು ರುಪಾಯಿ? ಒಂದು ಯೂರೋ ಗೆ ಎಷ್ಟು ಡಾಲರ್‌?

  036. ಅಮೆರಿಕದ ಅತ್ಯಂತ ಪ್ರಾಚೀನ ಪಂಚಾಂಗ (ಓಲ್ಡ್‌ ಫಾರ್ಮರ್ಸ್‌ ಆಲ್ಮನಾಕ್‌).

  037. ಇಂಟರ್ನೆಟ್‌ ಪಬ್ಲಿಕ್‌ ಲೈಬ್ರರಿ.

  038. ಅಟ್ಲಪಿಡಿಯಾ (ಅಟ್ಲಸ್‌ + ಎನ್ಸೈಕ್ಲೊಪೀಡಿಯ).

  039. ರೇಡಿಯಾ ನಿಯಂತ್ರಿತ ಗಡಿಯಾರಗಳು, ಅವುಗಳ ಕಾರ್ಯಕ್ಷಮತೆ.

  040. ಡೇ ಲೈಟ್‌ ಸೇವಿಂಗ್‌ ಟೈಮ್‌ ಕುರಿತಂತೆ ಮಾಹಿತಿ.

  041. ಇಂಟರ್ನೆಟ್‌ನಲ್ಲಿ ಚೈನ್‌ಮೈಲ್‌ ಮೂಲಕ ಹರಡುವ ವದಂತಿಗಳ ಬಗ್ಗೆ 'ಇದಮಿತ್ಥಂ’.

  042. ಗಿನ್ನೆಸ್‌ ದಾಖಲೆಗಳ ಸಮಗ್ರ ಮಾಹಿತಿ.

  043. ಬರೆವಣಿಗೆಯ ಕೌಶಲ್ಯಕ್ಕೆ ಮಾರ್ಗದರ್ಶಿ.

  044. ಶ್ವೇತ ಭವನದ ಅಧಿಕೃತ ವೆಬ್‌ಸೈಟ್‌.

  045. ಇಂಟರ್ನೆಟ್‌ ತಂತ್ರಜ್ಞಾನದ ಮಾಧ್ಯಮಿಕ ಶಿಕ್ಷಣ.

  046. ಯಾವ ದಿನಕ್ಕೆ ಏನು ಮಹತ್ವ? ಇಲ್ಲಿ ನೋಡಿ.

  047. ಯಾವ ಏರ್‌ಲೈನ್‌ನಲ್ಲಿ ಹೇಗೆ ಆಸನ ವ್ಯವಸ್ಥೆ ಇರುತ್ತದೆ?

  048. ಸಂಪೂರ್ಣ ನವಗ್ರಹ ಯಾತ್ರೆ.

  049. ಎಟಿಎಂ ಎಲ್ಲಿದೆ? ಪ್ರಪಂಚದಾದ್ಯಂತದ ಎಟಿಎಂ ವಿಳಾಸಸೂಚಿ.

  050. ಇಸ್ಪೀಟಾಟದ ಜ್ಞಾನಗಂಗೋತ್ರಿ.

  051. ಯಾವ ವಿಮಾನ ಎಲ್ಲಿಂದ ಹೊರಟಿದೆ ಮತ್ತು ಯಾವಾಗ ತಲುಪುತ್ತದೆ?

  052. ಅಮೆರಿಕದ ಎಲ್ಲ ಕಂಪೆನಿಗಳ ಸಂಕ್ಷಿಪ್ತ ಜಾತಕ.

  053. ವಿಶ್ವವಿಖ್ಯಾತ ಉತ್ಪನ್ನಗಳ (ಬ್ರಾಂಡ್‌ಗಳ) ಚರಿತ್ರೆ.

  054. ಮಿದುಳಿಗೆ ಗ್ರಾಸ ಒದಗಿಸುವ ಒಗಟು, ತರ್ಕ, ಸಮಸ್ಯೆಗಳ ಸಂಗ್ರಹ.

  055. ನೋಡಿ ತಿಳಿದು ಮಾಡಿ ಕಲಿಯಲು ಕೈಪಿಡಿ.

  056. ಜಂಕ್‌ ಮೈಲ್‌ ರೆಡ್ಯೂಸಿಸುವುದು ಹೇಗೆ?

  057. ಹಿಂದೂ ಧರ್ಮದ ಬಗ್ಗೆ ಹಿಂದೂಮಹಾಸಾಗರದಷ್ಟು ವಿವರ.

  058. ಅಮೆರಿಕದಲ್ಲಿ ಹಿಂದೂ ದೇವಾಲಯಗಳ ವಿಳಾಸಸೂಚಿ.

  059. ಭಾರತದಲ್ಲಿನ ದೇವಸ್ಥಾನಗಳ ಬಗ್ಗೆ ಕೈಪಿಡಿ.

  060. ಪ್ರಪಂಚದಾದ್ಯಂತದ ಇಂಡಿಯನ್‌ ರೆಸ್ಟೋರೆಂಟ್‌ಗಳ ವಿಳಾಸಸೂಚಿ.

  061. ಪ್ರಪಂಚದ ಅತಿದೊಡ್ಡ ಲೈಬ್ರರಿ.

  062. ಸಂಗೀತಲೋಕವಿಹಾರದ ಮೂಲಕ ನಿರ್ವಾಣ.

  063. ವನ್‌ ಟು ಬಕಲ್‌ ಮೈ ಷೂ; ಕ್ಲಿಕ್‌ ದಿಸ್‌ ಟು ಗೆಟ್‌ ನರ್ಸರಿರ್ಹೈಮ್ಸ್‌ ಫಾರ್‌ ಯೂ!

  064. ಈಸೊಪನ ನೀತಿ ಕಥೆಗಳು.

  065. ದೇಶ ಸುತ್ತದೆ ಕೋಶ ಓದದೆ ಮೌಸ್‌ ಕ್ಲಿಕ್ಕಿಸಿ ಪ್ರಪಂಚ ಪರ್ಯಟನೆ.

  066. ಪ್ರಪಂಚದ ಏಳು ಅದ್ಭುತಗಳು.

  067. ಅಮೆರಿಕದಲ್ಲಿ ವಿದೇಶಿಯರ ಜೀವನಕ್ಕೆ ಮಾರ್ಗದರ್ಶಿ ಕೈಪಿಡಿ.

  068. ಓಬಿರಾಯನ ಕಾಲದ ಗೋಡೆ ಗಡಿಯಾರಗಳು.

  069. ಆಧ್ಯಾತ್ಮ, ಧಾರ್ಮಿಕ ವಿಷಯದ ಮಾಹಿತಿ ಭಂಡಾರ.

  070. ಮೌಸ್‌ಪ್ಯಾಡ್‌ಗಳದೂ ಒಂದು ಮ್ಯೂಸಿಯಂ!

  071. * ಸುಖಾರೋಗ್ಯಕ್ಕೆ 27 ಸೂತ್ರಗಳು.

  072. * ಏಳು ಕನ್ನಡಿಗನೇ, ಏಳು ಕನ್ನಡ ಗೀತೆಗಳ ಒಂದು ಕಾಮನಬಿಲ್ಲ ನೋಡು!

  073. ಇತ್ತೀಚಿನ ದಿನಗಳಲ್ಲಿ ಭಾರಿ ಬಟವಾಡೆಯಾದ ಚಿತ್ರಾನ್ನ ಲಗ್ನಪತ್ರಿಕೆ.

  074. ದೋಣಿ ಸಾಗಲಿ ಮುಂದೆ ಹೋಗಲಿ... ಜತೆಗೇ ಬಾಳನೀತಿಯನು ಕಲಿಸಲಿ.

  075. * 'ಮಿಲೆ ಸುರ್‌ ಮೇರಾ ತುಮ್ಹಾರಾ...’ ರಾಷ್ಟ್ರೀಯ ಭಾವೈಕ್ಯತೆ ಸಾರಲು ದೂರದರ್ಶನದಲ್ಲಿ ಬರುತ್ತಿದ್ದ ಹಾಡಿನ ದ್ವನಿಮುದ್ರಿಕೆ.

  076. * ' ಮಿಲೆ ಸುರ್‌ ಮೇರಾ ತುಮ್ಹಾರಾ...’ ಹಾಡನ್ನು ಕಂಠಪಾಠ ಮಾಡಬೇಕೆನಿಸಿದರೆ ಅದರ ಸಾಹಿತ್ಯ ಇಲ್ಲಿದೆ ಕನ್ನಡ ಲಿಪಿಯಲ್ಲಿ !

  077. * ' ಮಿಲೆ ಸುರ್‌... ’ ಭಾವೈಕ್ಯಗಾನವನ್ನು ಕೇಂಬ್ರಿಡ್ಜ್‌ನ ಎಂಐಟಿ ವಿದ್ಯಾರ್ಥಿಗಳು ಮರುಚಿತ್ರೀಕರಣ ಮಾಡಿರುವುದನ್ನು ನೋಡಿದ್ದೀರಾ? (10 ಎಂಬಿ ಸೈಜಿನ ವಿಡಿಯಾ ಫೈಲ್‌; ಸಾಧ್ಯವಿದ್ದರೆ ಮಾತ್ರ ಇಳಿಸಿಕೊಳ್ಳಿ).

  078. ವರ್ಕ್‌ಲೋಡ್‌ ಸಿಕ್ಕಾಪಟ್ಟೆ ಇದೆ ಅಂತ ದೂರುವವರು ಇದನ್ನು ನೋಡಲಿ.

  079. ದೃಷ್ಟಿಛಲ (ಇಲ್ಯೂಷನ್‌)ದಿಂದಾಗಿ ಈ ಚಿತ್ರದಲ್ಲಿನ ಚಕ್ರಗಳು ತಿರುಗುತ್ತಿರುವಂತೆ ಭಾಸವಾಗುತ್ತಿದೆಯೇ?

  080. * ರೈಲು ಪ್ರವಾಸದ ಕನಸು ಎಂಬ ಶಿಶುಗೀತೆ.

  081. * ಭಾವನಾತ್ಮಕ ಬುದ್ಧಿಶಕ್ತಿಯ ಉಪಯೋಗದ ಬಗ್ಗೆ ಒಂದು ಪ್ರೌಢ ಪ್ರಬಂಧ.

  082. ಕನ್ನಡ ಲಿಪಿಯಲ್ಲಿ ದೇವರ ಸ್ತೋತ್ರಗಳ ಸಂಗ್ರಹ.

  083. ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಸಸ್ಯ ಶ್ಯಾಮಲೆ - ಭತ್ತದಗದ್ದೆ, ಅಡಿಕೆತೋಟ.

  084. ಹರ್ಷಿ ಚಾಕೋಲೆಟ್‌ ಫಾಕ್ಟರಿ ಟ್ರಿಪ್‌ನಲ್ಲೊಂದು ಹರ್ಷ!

  085. ರಂಗೋಲಿ ಹುಡಿಯಲ್ಲಿ ಮೂಡಿದ ಗಣಪ

  086. ಗಣೇಶನ ದ್ವಾದಶ ರೂಪಗಳು.

  087. 'ಐ ಸ್ಕಿೃೕಮ್‌’ ಎಂದರೆ ನಾನು ಚೀರುತ್ತೇನೆ. ಐಸ್‌ಕ್ರೀಮ್‌ ಎಂದರೆ?

  088. ಐಸ್‌ಕ್ರೀಮ್‌ ತಿಂದ ಬಾಯಿಗೆ ಕೊಂಚ ಗರಂ ಗರಂ ಏನಾದ್ರೂ...

  089. * ಯುನಿಕೋಡ್‌ನಲ್ಲಿ ಕನ್ನಡ!

  090. ನಾವು-ನೀವೆಲ್ಲ ಬಾಲ್ಯದಲ್ಲಿ ಬಿನಾಕಾ ಗೀತ್‌ಮಾಲಾ ಕೇಳಿದ ರೇಡಿಯಾ ಇದೇನಾ?

  091. * 'ಗಂಗಾವತಿ ಬೀಚಿ’ ಪ್ರಾಣೇಶ್‌ ಮಿಮಿಕ್ರಿಯ ಒಂದು ಧ್ವನಿತುಣುಕು.

  092. ಛಲ ಬಿಡದ ರಾಜಾ ತ್ರಿವಿಕ್ರಮನು ಶವವನ್ನು ಹೊತ್ತುಕೊಂಡು ಹೋಗುವ ಚಿತ್ರ(ಚಂದಮಾಮ)!

  093. * ಕನ್ನಡ ಧ್ವನಿ ಸಂಪುಟಗಳದೊಂದು ಅಂಗಡಿ ಕ್ಯಾಲಿಫೋರ್ನಿಯದಲ್ಲಿ. ಅವರ ಕ್ಯಾಟಲಾಗ್‌.

  094. * ಉತ್ತಮ ಬದುಕಿಗೆ ಸಾಮಾನ್ಯ ವಿವೇಕದ ಮಾರ್ಗದರ್ಶಿ ಪುಸ್ತಕ.

  095. ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ಎನ್ನುತ್ತಾರಲ್ಲ? ಇವೇ ಆ ಅಡಕತ್ತರಿಗಳು!

  096. ನಾಕೊಂದ್ಲ ನಾಲ್ಕು ನಾಕೆರಡ್ಲ ಎಂಟು... ಕಲಿಯಲು ಮಗ್ಗಿ ಪುಸ್ತಕ.

  097. ಬದುಕಿನ ಪಟದಲ್ಲೂ ಎಷ್ಟೊಂದು ಹಾವುಗಳು, ಏಣಿಗಳು... ಎಲ್ಲ ಅವರವರ ಅದೃಷ್ಟ!

  098. ಕನ್ನಡ ನಾಡಿನ ಗುಡ್ಡಬೆಟ್ಟಗಳಲ್ಲಿ ಕಾಣಸಿಗುವ ಈ ಹೂವು ನಿಮಗೆ ಪರಿಚಿತವಿರಬಹುದು.

  099. ಬೆಕ್ಕಿಗೆ ನಾನೇ ಗಂಟೆ ಕಟ್ಟಬಲ್ಲೆ ಎಂದು ಬೀಗುತ್ತಿರುವ ಇಲಿ!

  100. ' ಬರಹ’ಗಾರನ ಅಕ್ಕಪಕ್ಕದಲ್ಲಿ ಬರಹದ ಬಳಕೆದಾರರು...

  101. ಆಪರೇಟಿಂಗ್‌ ಸಿಸ್ಟಮ್‌ ಪಠ್ಯಪುಸ್ತಕವೊಂದರ ರಕ್ಷಾಕವಚ.

  102. ಮರದ ಕೆಳಗೆ ಕುಳಿತವನು ಯಾರು? ಆತ ಋಷಿ... ಕನ್ನಡಭಾರತಿ ಪಠ್ಯದ ಸಾಲುಗಳು!

  103. * ರಾಧಿಕೆ ನಿನ್ನ ಸರಸವಿದೆನೆ... ಚಿತ್ರಗೀತೆಯ ಗೀತಸಾಹಿತ್ಯ.

  104. ಭಾಷಾಂತರ ಸೇವೆ, ನಿಮಗಾಗಿ ಇಲ್ಲಿ ಲಭ್ಯವಿದೆ!

  105. ಜಗತ್ತಿನ ಎಲ್ಲ ಧರ್ಮಗಳ ನಂಬಿಕೆ, ನಡವಳಿಕೆಗಳ ಬಗ್ಗೆ ಮಾಹಿತಿ.

  106. ಕಂಪ್ಯೂಟರ್‌ 'ಜಾರ್ಗನ್‌’ನ ವ್ಯಾಖ್ಯೆ - ಅತಿ ಸರಳ ಭಾಷೆಯಲ್ಲಿ.

  107. ಇದಕ್ಕಿಂತ 'ಫನ್ನಿಯೆಸ್ಟ್‌’ ಬೇರೇನೂ ಸಿಗಲಿಕ್ಕಿಲ್ಲ!

  108. ಸಂಖ್ಯೆ 108ರ ಮಹತ್ವ ಕುರಿತಂತೆ ಒಂದು ಸಂಗ್ರಹ.

  * * *

  ನೂರೆಂಟರಲ್ಲಿ ಒಂದಿಷ್ಟಾದರೂ ನಿಮಗಿಷ್ಟವಾಗುತ್ತವೆಂದುಕೊಂಡಿದ್ದೇನೆ. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿರುವ ಈ ಹಂಚುವಿಕೆಯ ಕಾರ್ಯದಲ್ಲಿ ನಿರೀಕ್ಷಿಸುವುದು ನಿಮ್ಮ ಮೊಗದಲ್ಲಿ ಒಂದು ಸ್ಮೈಲು ಮಾತ್ರ! ಮಿನುಗಿದ ಇಸ್ಮೈಲನ್ನು ಒಂದು ಇಮೈಲ್‌ ಬರೆದು ತಿಳಿಸಿ. ವಿಳಾಸ - srivathsajoshi@yahoo.comಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  A Gift Basket : 108 Holiday/Festival gifts for ThatsKannada-Vichitranna readers by Srivathsa Joshi

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more