ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೊಟೊ ಕ್ವಿಜ್‌ ಸ್ಪರ್ಧೆಯ ಫಲಿತಾಂಶ !

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

‘ಇವರು ಯಾರು ಬಲ್ಲೆಯೆನು? ಇವರ ಹೆಸರ ಹೇಳಲೇನು?’ ಎಂದು 16 ಮಂದಿ ಪ್ರಖ್ಯಾತ ಕನ್ನಡಿಗರ ಭಾವಚಿತ್ರಗಳನ್ನು ಪ್ರಕಟಿಸಿ ಅವರೆಲ್ಲರನ್ನು ಗುರುತಿಸಿ ಹೆಸರನ್ನು ಬರೆಯುವಂತೆ ಏರ್ಪಡಿಸಿದ್ದ ಸ್ಪರ್ಧೆ ಇದುವರೆಗಿನ ಎಲ್ಲ ಸ್ಪರ್ಧೆಗಳಲ್ಲೇ ಅತಿ ಹೆಚ್ಚು (ನೂರಕ್ಕೆ ನಾಲ್ಕೇ ಕಮ್ಮಿ) ಪ್ರವೇಶಪತ್ರಗಳನ್ನು ಪಡೆಯಿತು. 96 ಮಂದಿಯ ಪೈಕಿ, ಎಲ್ಲ ಹದಿನಾರು ಸರಿಯುತ್ತರಗಳನ್ನು ಕಳಿಸಿದವರು ಒಟ್ಟು 74 ಮಂದಿ. ಉಳಿದವರು ಒಂದೋ ಎರಡೋ ಮುಖಗಳನ್ನು ತಪ್ಪಾಗಿ ಗುರುತಿಸಿದ್ದಾರೆ ಅಥವಾ ಗುರುತಿಸುವಲ್ಲಿ (ಸುಳಿವುಗಳನ್ನು ನೀಡಿದ್ದರೂ) ವಿಫಲರಾಗಿದ್ದಾರೆ. ಸರಿ-ತಪ್ಪು ಏನೇ ಇರಲಿ ಪರಮಾವಧಿ ಸಂತೋಷವನ್ನಂತೂ ಈ ಕ್ವಿಜ್‌ನಲ್ಲಿ ಭಾಗವಹಿಸಿದವರೆಲ್ಲರೂ ಗಳಿಸಿಕೊಂಡಿದ್ದಾರೆ. ಮೂಲ ಉದ್ದೇಶವೂ ಅದೇ ಹೊರತು ಜ್ಞಾನಪರೀಕ್ಷೆ , ಮೌಲ್ಯಮಾಪನಗಳಲ್ಲ.

ಉತ್ತರಗಳ ಹುಡುಕಾಟಕ್ಕಾಗಿ ಗೂಗಲ್‌.ಕಾಮ್‌ ಅವಲಂಬಿಸಿದವರು ಕೆಲವರಾದರೆ ಆಫೀಸಲ್ಲೇ ಉತ್ತರಗಳನ್ನು ಬರೆಯುವಾಗ ಹೊಳೆಯದಿದ್ದ ಒಂದೆರಡು ಹೆಸರುಗಳನ್ನು ‘ಲೈಫ್‌ ಲೈನ್‌’ ಎಂದು ಮನೆಯಲ್ಲಿ ಅತ್ತೆಗೆ ಫೋನ್‌ ಮಾಡಿ ಕಂಡುಕೊಂಡವರೊಬ್ಬರೂ ಇದ್ದಾರೆ! ಉಲ್ಲೇಖನೀಯ ಅನಿಸಿಕೆಗಳಲ್ಲಿ ಕೆಲವನ್ನು ಕೊಟ್ಟಿದ್ದೇನೆ. ಉತ್ತರಗಳನ್ನು ಕಳಿಸುವಾಗ ವೆಬ್‌-ಪುಟದ ಮೂಲಕ ಕಳಿಸಿದ್ದರೆ ನಿಮ್ಮ ಕಂಪ್ಯೂಟರ್‌ನಲ್ಲಿನ ಬ್ರೌಸರ್‌, ಈಮೈಲ್‌ ಸೆಟ್ಟಿಂಗ್‌ಗಳಿಂದಾಗಿ ಅದು ನನಗೆ ತಲುಪದೇ ಇರುವ ಅಲ್ಪಸ್ವಲ್ಪ ಸಾಧ್ಯತೆಗಳೂ ಇವೆ. ಯಾರಾದರೂ 16 ಉತ್ತರಗಳನ್ನು ಸರಿಯಾಗಿ ಬರೆದು ಕಳಿಸಿಯೂ ಅವರ ಹೆಸರು ಪಟ್ಟಿಯಲ್ಲಿ ನಮೂದಾಗಿರದಿದ್ದರೆ ಅವರು ಸಹೃದಯತೆಯಿಂದ ಮರ್ಫಿ-ನಿಯಮವನ್ನು ಜಪಿಸಿ ನನ್ನನ್ನು ಶಪಿಸಿ ಸುಮ್ಮನಾಗುತ್ತಾರೆಂದುಕೊಳ್ಳುತ್ತೇನೆ.

ಪ್ರತ್ಯೇಕ ವಿಭಾಗಗಳಾಗಿ ಫಲಿತಾಂಶದ ಎಲ್ಲ ವಿವರಗಳೂ ಇವೆ. ಇದೇ ಈ ವಾರದ ವಿಚಿತ್ರಾನ್ನ!

ಅ) ಸರಿಯುತ್ತರಗಳು :

1. ಗುಂಡಪ್ಪ ಆರ್‌ ವಿಶ್ವನಾಥ್‌ (ಭಾರತೀಯ ಕ್ರಿಕೆಟ್‌ನ ಇಬ್ಬರು ‘ಲಿಟ್ಲ್‌ ಮಾಸ್ಟರ್‌’ಗಳೂ ಭಾವ-ಮೈದುನರೂ ಆಗಿರುವ ಜೋಡಿಯಲ್ಲಿನ ಸ್ಕ್ವೇರ್‌ ಕಟ್‌, ಸ್ಕ್ವೇರ್‌ ಡ್ರೈವ್‌ ಪ್ರವೀಣ.)

2. ಪಿ ಕಾಳಿಂಗರಾವ್‌ (ಬಾರಯ್ಯ ಬೆಳದಿಂಗಳೆ..., ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು... ಇತ್ಯಾದಿ ಹಲವಾರು ಹಾಡುಗಳ ಖ್ಯಾತಿಯ ಸುಗಮಸಂಗೀತಗಾರ.)

3. ಶಕುಂತಲಾ ದೇವಿ (ಕಂಪ್ಯೂಟರ್‌ಗಿಂತಲೂ ವೇಗವಾಗಿ ಲೆಕ್ಕಾಚಾರ ಮಾಡಬಲ್ಲ ಮಾನವ-ಕಂಪ್ಯೂಟರ್‌.)

4. ಉಡುಪಿ ರಾಮಚಂದ್ರ ರಾವ್‌ (ಚಂದ್ರಲೋಕಕ್ಕೆ ಹೋದರೂ ಅಲ್ಲೊಂದು ಉಡುಪಿ ಹೊಟೇಲ್‌ ಕಾಣಸಿಗುತ್ತದೆ... ಎನ್ನುವ ತಮಾಷೆ ಮಾತು ಹೇಗೇ ಇರಲಿ; ಆರ್ಯಭಟ, ಭಾಸ್ಕರಾದಿ ಉಪಗ್ರಹಗಳ ಉಡ್ಡಯನ ಮತ್ತು ಭಾರತದ ಅಂತರಿಕ್ಷ ಕಾರ್ಯಕ್ರಮಗಳ ಯಶಸ್ಸಿನ ಹಿಂದಿನ ಶಕ್ತಿ , ಮೂಲತಃ ಉಡುಪಿಯವರಾದ ಈ ಬಾಹ್ಯಾಕಾಶ ವಿಜ್ಞಾನಿ!)

5. ಆರ್‌ ಕೆ. ಲಕ್ಷ್ಮಣ್‌ (ಟೈಮ್ಸ್‌ ಆಫ್‌ ಇಂಡಿಯಾದ ವ್ಯಂಗ್ಯಚಿತ್ರಗಳಲ್ಲಿ ಹರಕು ಪಂಚೆಯ ಶ್ರೀಸಾಮಾನ್ಯನನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಕೈಚಳಕ.)

6. ಪಂಡರಿಬಾಯಿ (ಡಾ।ರಾಜ್‌ಗೆ ಬೇಡರಕಣ್ಣಪ್ಪದಲ್ಲಿ ನಾಯಕಿಯಾಗಿ ಆಮೇಲೆ ಎಷ್ಟೋ ಚಿತ್ರಗಳಲ್ಲಿ ಅದೆಷ್ಟೋ ನಾಯಕರ ಅಮ್ಮನಾಗಿ ಅಭಿನಯಿಸಿದ ಪಾಂಡುರಂಗ-ಭಕ್ತೆಯ ಕೊನೆಯದಿನಗಳು ಅತಿ ಶೋಚನೀಯವಾಗಿದ್ದುವು.)

7. ವಿದ್ಯಾಭೂಷಣ (ಮಠಾಧಿಪತಿಯಾಬ್ಬರು ಸನ್ಯಾಸವನ್ನು ಬಿಟ್ಟು ಮರಳಿ ಗೃಹಸ್ಥಾಶ್ರಮ ಸ್ವೀಕರಿಸಿದ ಅಪರೂಪದ ಉದಾಹರಣೆ. ಭಕ್ತಿಗೀತೆಗಳ ಗಾಯನದ ಸ್ವರಮಾಧುರ್ಯಕ್ಕೆ ಅಪಾರ ಜನಮನ್ನಣೆ.)

8. ಬಿ ಕೆ ಸುಮಿತ್ರಾ (‘ಸಂಪಿಗೆ ಮರದ ಹಸಿರೆಲೆ ನಡುವೆ...’ ಹಾಡಿದ ಕೋಗಿಲೆ ಕಂಠ ನೂರಾರು ಜನಪದ ಗೀತೆಗಳ ಮೂಲಕವೂ ನಮ್ಮನ್ನು ರಂಜಿಸಿದೆ.)

9. ಜಿ.ಪಿ ರಾಜರತ್ನಂ (ನಾಯಿಮರಿಗೆ ತಿಂಡಿಬೇಕೆ ಎಂದು ಕೇಳಿದ ಕವಿ, ಬ್ರಹ್ಮನಿಗೆ ಹೇಳಿದ್ದು ಹೆಂಡ ಮುಟ್ಟಿದ ಕೈನ ಜೋಡಿಸ್ತೇನಂತ.)

10. ಸೈಯದ್‌ ಕಿರ್ಮಾನಿ (ಬಿಸಿಸಿಐ ಆಯ್ಕೆ ಸಮಿತಿಯ ಪ್ರಸಕ್ತ ಅಧ್ಯಕ್ಷ; 1983ರ ವರ್ಲ್ಡ್‌ ಕಪ್‌ ವಿಜಯದಲ್ಲಿ ಗಣನೀಯ ಪಾತ್ರವಹಿಸಿದ್ದ ಅತಿ ಶ್ರೇಷ್ಠ ‘ಗೂಟ ರಕ್ಷಕ’!)

11. ಎಚ್‌ ನರಸಿಂಹಯ್ಯ (ನ್ಯಾಷನಲ್‌ ಕಾಲೇಜಲ್ಲಿ ಭೌತಶಾಸ್ತ್ರ ಪ್ರಾಧ್ಯಾಪನ, ಸ್ವಾತಂತ್ರ್ಯಯೋಧ, ಗಾಂಧಿವಾದಿ, ಶಿಕ್ಷಣತಜ್ಞ, ಬೆಂಗಳೂರು ವಿವಿ ಮಾಜಿ ಉಪಕುಲಪತಿ, ಪದ್ಮಭೂಷಣ ಪ್ರಸಸ್ತಿ - ಇವೆಲ್ಲಕ್ಕೂ ಸಾಮಾನ್ಯ ಅಂಶ ಈ ಸರಳತೆಯ ಸಾಕಾರಮೂರ್ತಿ.)

12. ಸಾಲುಮರದ ತಿಮ್ಮಕ್ಕ (ಅಜರಾ‘ಮರ’ ಖ್ಯಾತಿ ಬಂದಿದ್ದು ಮರಗಳನ್ನೇ ದತ್ತು ತೆಗೆದುಕೊಂಡು ಪೋಷಿಸಿ, ಪರಿಸರಕ್ಕೆ ಹಸಿರುಡುಗೆ ತೊಡಿಸಿ ದಾರಿಹೋಕರಿಗೆ ನೆರಳಾಗಿಸಿ, ಮಣ್ಣಿನ ಮಗಳಾಗೇ ಇದ್ದದ್ದರಿಂದ. ಇವರ ಹೆಸರಿನಲ್ಲಿ ಕ್ಯಾಲಿಫೋರ್ನಿಯಾದಲ್ಲೊಂದು ಪರಿಸರ ಸಂರಕ್ಷಣಾ ವೇದಿಕೆಯಿದೆಯೆಂಬ ವಿಷಯ ನಿಮಗೆ ಗೊತ್ತಿದೆಯೇ?)

13. ಕದ್ರಿ ಗೋಪಾಲನಾಥ್‌ (ಬಿಬಿಸಿ ಪ್ರೊಮನೇಡ್‌ ಕನ್ಸರ್ಟ್‌ನಲ್ಲಿ ಭಾಗವಹಿಸಲು ಆಹ್ವಾನಿತರಾದ ಪ್ರಪ್ರಥಮ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ; ನುಡಿಸುವುದು ಮಾತ್ರ ಪಾಶ್ಚಾತ್ಯ ಸಂಗೀತಕ್ಕೆ ಹೇಳಿಮಾಡಿದ ವಾದ್ಯವನ್ನು.)

14. ಬಿ ವಿ ಕಾರಂತ್‌ (ಹಯವದನ, ಸತ್ತವರ ನೆರಳು, ಜೋಕುಮಾರಸ್ವಾಮಿ ಇತ್ಯಾದಿ ನಾಟಕಗಳ, ಚೋಮನ ದುಡಿ ಸಿನೆಮಾದ ನಿರ್ದೇಶನ; ಕಾಳಿದಾಸ್‌ ಸಮ್ಮಾನ್‌, ಸಂಗೀತ ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಇತ್ಯಾದಿ ಅನೇಕ ಗೌರವಗಳು.)

15. ಎಂ ವಿ ಕಾಮತ್‌ (ಈ ಸಲದ ಗಣರಾಜ್ಯೋತ್ಸವದ ವೇಳೆ ಪದ್ಮಭೂಷಣ ಪ್ರಶಸ್ತಿ ಗಳಿಸಿದ ಧೀಮಂತ ಪತ್ರಕರ್ತ; ‘ಪ್ರಸಾರ ಭಾರತಿ’ಯ ಈಗಿನ ಅಧ್ಯಕ್ಷರೂ ಹೌದು.)

16. ಅಶ್ವಿನಿ ನಾಚಪ್ಪ (ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕನ್ನಡದ ‘ಚಿಗರೆ’. ಕ್ರೀಡಾಸಾಧನೆಗೆ ಅರ್ಜುನ ಪ್ರಶಸ್ತಿಯ ಬೆಡಗು. ಹುಟ್ಟೂರು ಕರ್ನಾಟಕದ ಕೊಡಗು! )

ಆ) ಸರಿಯುತ್ತರಗಳನ್ನು ಕಳಿಸಿದವರು:

1. ಶ್ರೀಧರ ಎಸ್‌; ಬೆಂಗಳೂರು
2. ಮುಕುಂದ ತೇಜಸ್ವಿ; ಬೆಂಗಳೂರು
3. ಕೃಷ್ಣಮೂರ್ತಿ ಭಟ್‌; ಬೆಂಗಳೂರು
4. ರಂಗನಾಥ ಪಿ ಕಶ್ಯಪ್‌; ಬೆಂಗಳೂರು
5. ಮಹೇಂದ್ರ ನಂಜುಂಡಯ್ಯ; ಬೆಂಗಳೂರು
6. ತ್ಯಾಗರಾಜ ಮೂರ್ತಿ; ಬೆಂಗಳೂರು
7. ಗಿರೀಶ್‌ ಎಸ್‌ ಜಗಜಂಪಿ; ಬೆಂಗಳೂರು
8. ಸಾವಿತ್ರಿ ಪಿ .ಎಸ್‌; ಬೆಂಗಳೂರು
9. ಗುರುಪ್ರಸಾದ್‌ ವೆಂಕಟರಾಮು; ಟೊಕಿಯೋ, ಜಪಾನ್‌
10. ಜನಾರ್ಧನ ಚನ್ನಗಿರಿ; ಬೆಂಗಳೂರು
11. ಜಯಶ್ರೀ ಎಚ್‌ ಆರ್‌; ಬೆಂಗಳೂರು
12. ಹರ್ಷವರ್ಧನ ಪಾಲ್ತಾಡಿ; ಪುತ್ತೂರು (ದ.ಕ)
13. ಎಸ್‌ ಆರ್‌ ಶ್ರೀನಾಥ್‌; ದುಬೈ, ಯು ಎ ಇ
14. ವಾದಿರಾಜ ನರಸಿಂಹ; ಬಾಸ್ಟನ್‌
15. ಕೆ ತ್ರಿವೇಣಿ ರಾವ್‌; ಇಲ್‌ನಾಯ್‌
16. ವಿಶ್ವಾಸ್‌ ರಾವ್‌; ಬೆಂಗಳೂರು
17. ರವೀಂದ್ರ ಹೆಗ್ಡೆ; ಜೊಹಾನ್ಸ್‌ಬರ್ಗ್‌; ದಕ್ಷಿಣ ಆಫ್ರಿಕಾ
18. ಭಾಸ್ಕರ್‌ ತಲ್ಲಿಗೇರಿ; ನ್ಯೂಯಾರ್ಕ್‌
19. ಸಂಜೀವ್‌ ಕುಲಕರ್ಣಿ; ಇಂಡಿಯಾನಾಪೊಲಿಸ್‌
20. ಕೆ ಎಸ್‌ ನಾಗಭೂಷಣ; ಜರ್ಮನಿ
21. ಮಹೇಶ್‌ ಹೆಗಡೆ; ಚೆಮ್ಸ್‌ಫಾರ್ಡ್‌, ಮೆಸ್ಸಾಚ್ಯುಸೆಟ್ಸ್‌
22. ಅಶ್ವಿನ್‌ ಎಸ್‌ ಎನ್‌; ಊರು?
23. ಸಂಜಯ್‌ ಎಸ್‌ ರಾವ್‌; ವರ್ಜೀನಿಯಾ
24. ವಾಸುದೇವ ಕಲ್ಯ; ಡೆನ್ವರ್‌, ಕೊಲರಾಡೊ
25. ವಂದನಾ ಪಟ್ಟಣಶೆಟ್ಟಿ; ಫೋರ್ಟ್‌ಕಾಲಿನ್ಸ್‌, ಕೊಲರಾಡೊ
26. ಸುಬ್ರಹ್ಮಣ್ಯ ನಾಗಲಾಪುರ; ಪೆನ್ಸಿಲ್ವೇನಿಯಾ
27. ಪೂರ್ಣಿಮಾ ಸುಬ್ರಹ್ಮಣ್ಯ; ಗೈಥರ್ಸ್‌ಬರ್ಗ್‌, ಮೇರಿಲ್ಯಾಂಡ್‌
28. ಪದ್ಮಾ ಎಸ್‌; ಬೆಂಗಳೂರು
29. ರಾಜೇಶ್‌ ರಾಮಚಂದ್ರ; ಬೆಂಗಳೂರು
30. ರವಿ ಶಾಸ್ತ್ರಿ; ದುಬೈ, ಯು ಎ ಇ
31. ಹೃಷಿಕೇಶ ಬಸವರಾಜಪ್ಪ ; ಬೆಂಗಳೂರು
32. ಅನಂತ ಕೃಷ್ಣ ; ಬೆಂಗಳೂರು
33. ಪಿ ಆರ್‌ ವಾಗೀಶ ತೀರ್ಥ; ಬೆಂಗಳೂರು
34. ಗುರುರಾವ್‌ ಕುಲಕರ್ಣಿ; ಬೆಂಗಳೂರು
35. ಮಂಜುನಾಥ ಗೌಡ; ಲಿಮಾಸೊಲ್‌, ಸೈಪ್ರಸ್‌
36. ಸ್ವರ್ಣಾ ರಾಜೇಂದ್ರ; ಬೆಂಗಳೂರು
37. ಗಿರೀಶ್‌ ಸಾಹುಕಾರ್‌; ಶಿಕಾಗೊ
38. ದಿನೇಶ್‌ ನೆಟ್ಟರ್‌; ನ್ಯೂ ಜೆರ್ಸಿ
39. ಅರವಿಂದ ಶ್ರೀನಿವಾಸ್‌; ನೆದರ್‌ಲ್ಯಾಂಡ್ಸ್‌
40. ಶ್ರೀಲಕ್ಷ್ಮಿ ಹೊನ್ನವಳ್ಳಿ; ಮಿನೆಸೊಟ
41. ಭಾರ್ಗವಿ ಕಡಸೂರ್‌; ಫೀನಿಕ್ಸ್‌
42. ಅನುಪಮಾ ಭಾಗವತ್‌; ಬೆಂಗಳೂರು
43. ಎಸ್‌ ವಿ ವೆಂಕಟೇಶ್‌; ಸಿಂಗಾಪುರ್‌
44. ಸುನಿಲ್‌ ಪಾಟೀಲ್‌; ವೆಸ್ಟ್‌ಮಿನ್‌ಸ್ಟರ್‌, ಕೊಲರಾಡೊ
45. ಕೆ ರಾಧಾ; ಬೆಂಗಳೂರು
46. ಪ್ರಸಾದ್‌ ಕಶ್ಯಪ್‌; ನಾರ್ತ್‌ ಕೆರೊಲಿನಾ
47. ದತ್ತಾತ್ರೇಯ ಕುಲಕರ್ಣಿ; ಮೆಲ್ಬೋರ್ನ್‌, ಆಸ್ಟ್ರೇಲಿಯಾ
48. ಅನುರಾಧಾ ಆರ್‌ ಕೆ; ಬೆಂಗಳೂರು
49. ಕೆ ಜೆ ಗೋಪಾಲಕೃಷ್ಣ; ಮೈಸೂರು
50. ದೇವಿ ಪುರಾಣಿಕ್‌; ಸಾಂಟಾಕ್ಲಾರಾ, ಕ್ಯಾಲಿಫೋರ್ನಿಯಾ
51. ಜಯಂತಿ ಎಚ್‌ ವಿ; ಬೆಂಗಳೂರು
52. ಬಾಬು ಕಿರಣ್‌; ಬೆಂಗಳೂರು
53. ಆನಂದ ರಾಮಮೂರ್ತಿ; ಸಾನ್‌ ಹೋಸೆ, ಕ್ಯಾಲಿಫೋರ್ನಿಯಾ
54. ಸತೀಶ್‌ ಹಿರೇಮಗಳೂರ್‌; ಸಾನ್‌ ಹೋಸೆ, ಕ್ಯಾಲಿಫೋರ್ನಿಯಾ
55. ಶಾಮ್‌ ಹಾರೋಹಳ್ಳಿ; ಸೆಂಟರ್‌ವಿಲ್‌, ವರ್ಜೀನಿಯಾ
56. ಪ್ರವೀಣ್‌ ಬಿ ಎಸ್‌; ಬೆಂಗಳೂರು
57. ರಾಜು ಬಾಣಂದೂರ್‌; ಬಿಡದಿ, ಬೆಂಗಳೂರು
58. ಶುಭಶ್ರೀ ಎಚ್‌ ಎಸ್‌; ಬೆಂಗಳೂರು
59. ಕಿರಣ್‌ ರತ್ನಾಕರ್‌; ಡಬ್ಲಿನ್‌, ಐರ್‌ಲ್ಯಾಂಡ್‌
60. ಇಂದಿರಾ ರೆಡ್ಡಿ; ಓಕ್ಲಹೊಮಾ
61. ರಾಮಣ್ಣ ದತ್ತಾತ್ರಿ; ಕ್ಯಾಲಿಫೋರ್ನಿಯಾ
62. ಚಂದ್ರಪ್ರಭಾ ತಮ್ಮಯ್ಯ; ಲೌರೆಲ್‌, ಮೇರಿಲ್ಯಾಂಡ್‌
63. ಲಕ್ಷ್ಮಿ ಶ್ರೀನಾಥ್‌; ಕ್ಯಾಲಿಫೋರ್ನಿಯಾ
64. ಪ್ರಹ್ಲಾದ್‌ ಇಬ್ರಾಂಪುರ್‌; ಸಿಂಗಾಪುರ
65. ಜ್ಯೋತಿ ಕಾರಂತ್‌; ಬೆಂಗಳೂರು
66. ಅನುಪಮಾ ನಾಗನೂರ್‌; ಬೆಂಗಳೂರು
67. ಫಣಿಶ್ರೀ ನಾರಾಯಣ್‌; ಸಿಲ್ವರ್‌ಸ್ಪ್ರಿಂಗ್‌, ಮೇರಿಲ್ಯಾಂಡ್‌
68. ವೀಣಾ ಕಶ್ಯಪ್‌; ನಾರ್ತ್‌ ಕೆರೊಲಿನಾ
69. ಎಸ್‌ ಎ ಬಾಲಸುಬ್ರಹ್ಮಣ್ಯ; ಬೆಂಗಳೂರು
70. ಎಮ್‌ ಆರ್‌ ಲಕ್ಷ್ಮೀನಾರಾಯಣ; ಬೆಂಗಳೂರು
71. ಅಶೋಕ್‌; ಫ್ರೆಮಾಂಟ್‌, ಕ್ಯಾಲಿಫೋರ್ನಿಯಾ
72. ಚಂದ್ರಶೇಖರ್‌ ಬಿ ಎಚ್‌; ಬೆಂಗಳೂರು
73. ಮಧುಸೂದನ ಶೇಷಾದ್ರಿ; ನ್ಯೂಯಾರ್ಕ್‌
74. ಮಂಜುನಾಥ ವಿ; ಬೆಂಗಳೂರು

ಇ) ಅನಿಸಿಕೆಗಳು:

  • ‘ಕನ್ನಡಿಗರಿಗೆ ಕನ್ನಡದ ಪರಿಚಯ ಮಾಡಿಸಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು.’
  • ‘ಕನ್ನಡ ನಾಡಿನ ಈ ಎಲ್ಲ ಪ್ರತಿಭೆಗಳಿಗೆ ನಮೊ ನಮಃ’
  • ‘ಒಳ್ಳೆಯ ಕೆಲಸ. ಇದರಿಂದ ಜನರಿಗೆ ಎಷ್ಟು ಜ್ಞಾನವರ್ಧನೆ ಆಗ್ತದೊ ಗೊತ್ತಿಲ್ಲ . ಆದರೆ ಒಬ್ಬರಿಗೆ ಬಹುಮಾನ ಸಿಗುತ್ತೆ ! ಇದರಲ್ಲಿ ಒಂದು ನ್ಯೂನತೆ ಅಂದ್ರೆ ಕರ್ನಾಟಕದ ಎಲ್ಲ ಕಡೆಯ ಜನರನ್ನು ಇದರಲ್ಲಿ ಸೇರಿಸಬೇಕಿತ್ತು. ಅದೇ ಹಳೆಯ ಸಮಸ್ಯೆ - ಇಲ್ಲಿ ಇರುವ ಎಲ್ಲರೂ ಬೆಂದಕಾಳೂರು, ಮೈಸೂರು, ಮಂಗಳೂರು ಕಡೆಯವರು. ಉತ್ತರ ಕರ್ನಾಟಕದ ಜನರು ಯಾರಿಗೂ ಕಾಣೋದೆ ಇಲ್ಲ, ಅದ್ಯಾಕೊ ನಾ ಕಾಣೆ!!’
  • ‘ಕ್ವಿಜ್‌ ಬಹಳ ಚೆನ್ನಾಗಿದೆ. ತಲೆಗೆ ಸ್ವಲ್ಪ ಕೆಲಸವನ್ನೂ ಕೊಟ್ಟಿದೆ. ಹಲವಾರು ಮುಖಗಳನ್ನು ಮತ್ತೆ ನೆನಪಿಗೆ ತಂದಿದೆ. ಮತ್ತೊಂದು ವಿಶೇಷ ಏನೆಂದರೆ, ಸಾಲುಮರದ ತಿಮ್ಮಕ್ಕ ಆಲದ ಮರಗಳನ್ನು ನೆಟ್ಟ ಮಾರ್ಗ ಕುದೂರು-ಹುಲಿಕಲ್‌ ಇದೆಯಲ್ಲಾ, ಈ ಕುದೂರ್‌ ನನ್ನ ತವರು. ಅಷ್ಟು ಸಾಕಲ್ಲ ನಿಮಗೆ ನನ್ನ ಆತ್ಮೀಯ ಧನ್ಯವಾದಗಳನ್ನು ತಿಳಿಸಲು!’
  • ‘ಮತ್ತೊಮ್ಮೆ ಅದ್ಭುತವಾದ ಕ್ವಿಜ್‌! ನಿಜವಾಗ್ಲೂ ಹೆಸ್ರು ಗೊತ್ತಿರುತ್ತೆ, ಮುಖ ಪರಿಚಯವೇ ಇರೊಲ್ಲ . ಎಷ್ಟೋ ಫೆಮಸ್‌ ಪರ್ಸನಾಲಿಟೀಸ್‌ದು! ಸ್ವಲ್ಪ ಕಷ್ಟ ಪಡ್ಬೇಕಾಯ್ತು ಉತ್ರ ಕೊಡೊದಕ್ಕೆ.’
  • ‘ಯೋಚಿಸುವಂತೆ ಮಾಡಿದ್ದು ಶ್ರೀ ಕದ್ರಿ ಗೋಪಾಲ್‌ನಾಥ್‌ ಅವರ ಆಗಿನ ಭಾವಚಿತ್ರಕ್ಕೂ ಈಗಿನ ಭಾವಚಿತ್ರಕ್ಕೂ ಇರುವ ವ್ಯತ್ಯಾಸ.’
  • "Made me think about great Kannadigas, when I am staying thousands of miles away from Karnataka."
  • "Good to see these stalvarts!! it is very easy as I took less than a minute to identify all except M.V. Kamath for which I used clue!!"
  • "I tried my maximum. I feel really sorry for my poor performance."
  • "You could have included some historic personalities...Krishna Devaraya ityadi Vijaya nagar Arasaru, Mysore Arasaru etc. Another set of people missing in the list are : Khaakhi, Khaadi and Kaavi...Not a single Police or Military Officer ( Kariappa, Thimmaih!). Politicians...people like Kanthi, Nijalingappa, Kengal Hanumantaih etc would have been tricky. Similarly ...sharanaru, Dasaru, swamijis, anubhavigaLu...Ranade, Shishunala Sharif, SiddharooDharu, Kanaka, Purandar etc..would have made it more colourful." "I cannot tell in words how much more I learnt about these people while making sure I was identifying them correctly."
ಈ) ಬಹುಮಾನ

ಅಮೆರಿಕನ್‌ ಡಾಲರ್‌ 20ರ ಮೊತ್ತದ ಚೆಕ್‌, ಗಿಫ್ಟ್‌ ಕೂಪನ್‌ ಅಥವಾ ಭಾರತೀಯ ಕರೆನ್ಸಿಯಲ್ಲಿ ತತ್ಸಮಾನ ಮೊತ್ತದ ಚೆಕ್‌.

ಉ) ಬಹುಮಾನದ ಪ್ರಾಯೋಜಕರು

ರಸಪ್ರಶ್ನೆ ಪ್ರಕಟಿಸುವಾಗ ಬಹುಮಾನ ಏನು ಮತ್ತು ಪ್ರಾಯೋಜಕರಾರು ಎಂಬುದನ್ನು ಸಸ್ಪೆನ್ಸಲ್ಲಿಡಲಾಗಿತ್ತು. ವಿಶೇಷ ಕಾರಣಗಳಿಂದೇನೂ ಅಲ್ಲ , ಹೀಗೇ ಸುಮ್ನೆ! ಈಗ ಪ್ರಾಯೋಜಕರ ಪರಿಚಯದ ಸಮಯ.

ಈತ ರಘು ನರೇಂದ್ರುಲ ಎಂಬ ಹೆಸರಿನ ನನ್ನ ಸಹೋದ್ಯೋಗಿ. ಆಂಧ್ರಪ್ರದೇಶದ ಕಡಪಾ ಪ್ರಾಂತ್ಯದವನು. ಹಾಸನ ಮಲ್ನಾಡ್‌ ಕಾಲೇಜಲ್ಲಿ ಇಂಜಿನಿಯರಿಂಗ್‌ ಮಾಡಿದ್ದು ಬಿಟ್ಟರೆ ಉಳಿದಂತೆ ಕರ್ನಾಟಕದ, ಕನ್ನಡದ ಗಂಧಗಾಳಿ ಅಷ್ಟಕ್ಕಷ್ಟೆ. ಸದ್ರಿ ರಘು ಮಹಾರಾಜನಿಗೆ ನನ್ನ ವೆಬ್‌-ಜರ್ನಲಿಸಂ ಖಯಾಲಿಯ ಬಗ್ಗೆ ವಿಶೇಷ ಕುತೂಹಲ. ಎರಡು ವರ್ಷಗಳ ಹಿಂದೆ Let us know US ಸರಣಿಯಲ್ಲಿ ರಸಪ್ರಶ್ನೆ ನಡೆಸಿದ್ದಾಗಲೇ ತಾನೊಂದು ಸ್ಪರ್ಧೆಗೆ ಬಹುಮಾನ ನೀಡಲು ಮುಂದಾಗಿದ್ದ. ಈಗ ‘ವಿಚಿತ್ರಾನ್ನ’ ಅಂಕಣದಲ್ಲೂ ರಸಪ್ರಶ್ನೆ ಏರ್ಪಡಿಸಿದ್ದನ್ನು ಕೇಳಿ ಬಹುಮಾನದ ಪ್ರಾಯೋಜಕತ್ವದ ಮೂಲಕ ಈ ಚಟುವಟಿಕೆಯನ್ನು ಹುರಿದುಂಬಿಸಿದ್ದಾನೆ.

ಇನ್ನೊಂದು ವಿಷಯ. ರಘು ವಿಚಿತ್ರಾನ್ನ ಓದುಗನಲ್ಲ. ಆದರೆ ‘ಬರಹ’ ತಂತ್ರಾಂಶದಲ್ಲಿ ನಾನು ಲೇಖನ ಟೈಪಿಸುವುದು ಕಂಡು ಬರಹ ತಂತ್ರಾಂಶದ ಬಗ್ಗೆ, ಅದನ್ನು ರಚಿಸಿದ ಶೇಷಾದ್ರಿವಾಸು ಬಗ್ಗೆ, ಆ ತಂತ್ರಾಂಶದಿಂದಾಗಿ ವಿಶ್ವದೆಲ್ಲೆಡೆಯ ಕನ್ನಡಿಗರು ಅಂತರ್ಜಾಲದಲ್ಲಿ ಕನ್ನಡದಲ್ಲಿ ವ್ಯವಹರಿಸುತ್ತಿರುವ ಬಗ್ಗೆ, ಬರಹದ ಮುಂದಿನ ಆವೃತ್ತಿಯಲ್ಲಿ ತೆಲುಗು ಕೂಡ ಸೇರಲಿದೆ ಎಂದು ವಾಸು ಉವಾಚವನ್ನು ನಾನವನಿಗೆ ತಿಳಿಸಿದ ಬಗ್ಗೆ ಬಹಳ ಹೆಮ್ಮೆ. ಅದೇ ಮುಖ್ಯ ಕಾರಣ ಆತ ಈ ಬಹುಮಾನವನ್ನು ಪ್ರಾಯೋಜಿಸುವುದಕ್ಕೆ. ಇಲ್ಲಿ ನೀವು ಸ್ವಾಭಿಮಾನ, ಸಹಾನುಭೂತಿಯ ಭೂತಕನ್ನಡಿ ಹಿಡಿದು ನೋಡುವುದಿಲ್ಲ ಎಂದು ಪ್ರಾಮಿಸ್‌ ಕೊಟ್ಟರೆ ಒಂದು ಸ್ವಾರಸ್ಯಕರ ಅಂಶ ತಿಳಿಸುತ್ತೇನೆ - ತಮಿಳು ಮಾತೃಭಾಷೆಯ ಶೇಷಾದ್ರಿವಾಸು ರಚಿಸಿದ ಬರಹ ಕನ್ನಡ ತಂತ್ರಾಂಶ, ಮರಾಠಿ ಮಾತೃಭಾಷೆಯ ಶ್ರೀವತ್ಸ ಜೋಶಿ ಅದರ ಬಳಕೆದಾರ; ಸ್ಪರ್ಧೆಯ ಬಹುಮಾನ ಪ್ರಾಯೋಜಕ ತೆಲುಗು ಮಾತೃಭಾಷೆಯ ರಘು ನರೇಂದ್ರುಲ. ದಯವಿಟ್ಟು ಹುಬ್ಬೇರಿಸಬೇಡಿ, ಇಲ್ಲಿ ಭಾಷೆ ಒಂದು ನೆಪ, ನಿಮಿತ್ತ ಮಾತ್ರ. ನಡೆದಿರುವುದು ಜೀವನಪ್ರೀತಿಯ, ಮನೋಲ್ಲಾಸದ ಒಂದು ಸುಂದರ ಚಟುವಟಿಕೆ.

ರಘುಗೆ ಕೃತಜ್ಞತಾ ರೂಪದಲ್ಲಿ ಅವನಿಂದಲೇ ಲಾಟರಿ ಮೂಲಕ (ಕಂಪ್ಯೂಟರ್‌ನಲ್ಲಿ random number generated) ವಿಜೇತರ ನಿರ್ಣಯ.

ಯಾಹ್‌...ಊ...) ಬಹುಮಾನ ವಿಜೇತರು!

48. ಅನುರಾಧಾ ಆರ್‌ ಕೆ; ಬೆಂಗಳೂರು

* * *

ಬಹುಮಾನ ವಿಜೇತರಾದ ಅನುರಾಧಾ (ಬೆಂಗಳೂರಲ್ಲಿ ಲುಸೆಂಟ್‌ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ) ಅವರಿಗೆ ಹಾರ್ದಿಕ ಅಭಿನಂದನೆಗಳು. ಸರಿಯುತ್ತರಗಳನ್ನು ಕಳಿಸಿದ ಇತರ ಎಲ್ಲರಿಗೂ, ಅಂತೆಯೇ ರಸಪ್ರಶ್ನೆಯಲ್ಲಿ ಭಾಗವಹಿಸಿದ ಸಮಸ್ತ ಸಭ್ಯರಿಗೂ ಸಪ್ರೇಮ ವಂದನೆಗಳು. ನಿಮ್ಮ ಉತ್ಸಾಹ ಪ್ರೋತ್ಸಾಹ ಹೀಗೆಯೇ ಮುಂದುವರೆಯುತ್ತದೆಯೆಂಬ ಆಶಯದೊಂದಿಗೆ, [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X