ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾಲಕ್ಕೆ ತಕ್ಕ ಕೋಲ’ ‘ಪಾತ್ರಕ್ಕೆ ತಕ್ಕ ವೇಷ’ ‘ವಿಚಿತ್ರಾನ್ನಕ್ಕೆ ತಕ್ಕ ಗಾದೆ’

By Staff
|
Google Oneindia Kannada News

ಶ್ರೀವತ್ಸ ಜೋಷಿಯವರಿಗೆ ನಮಸ್ಕಾರ!

ಇಲ್ಲಿದೆ ನೋಡಿ ಕೆಲವು ವಿಚಿತ್ರಾನ್ನಕ್ಕೆ ತಕ್ಕ ಗಾದೆಗಳು.

1. ವಿಚಿತ್ರಾನ್ನದಲ್ಲಿ ಸುರ್ನೋಳಿ ಬಗ್ಗೆ ಓದಿದ್ರೆ ಮನೇಲಿ ತಿಂಡಿ ಮಾಡೋದು ತಪ್ಪೀತೇ? (ರಾಜನಿಗೆ ರಾಜ್ಯ ಸಿಕ್ಕಿದ್ರೆ ನಮಗೆ ರಾಗಿ ಬೀಸೋದು ತಪ್ಪೀತೇ)

2. ಆಫೀಸಲ್ಲಿ ಸಾಫ್ಟ್‌ವೇರ್‌ ಜಾಣ ಅದ್ರೂ ವಿಚಿತ್ರಾನ್ನಕ್ಕೆ ಅಡಿಗೆಭಟ್ಟ! (ಊರಿಗೆ ರಾಜ ಅದರೂ ತಾಯಿಗೆ ಮಗ)

3. ವಿಚಿತ್ರಾನ್ನ ಓದಕ್ಕೆ ಅಂತ ಅರ್ಧರಾತ್ರೀಲಿ ಕಂಪ್ಯೂಟರ್‌ ಆನ್‌ ಮಾಡಿದ ಹಾಗೆ ( ಅರ್ಧರಾತ್ರೀಲಿ ಕೊಡೆ ಹಿಡಿದ ಹಾಗೆ)

4. ವಿಚಿತ್ರಾನ್ನ ಒಳಗೊಳ್ಳದ ವಿಷಯವಿಲ್ಲ (ಆಡು ಮುಟ್ಟದ ಸೊಪ್ಪಿಲ್ಲ)

5. ವಿಚಿತ್ರಾನ್ನ ರಸಪ್ರಶ್ನೆಗೆ ತಕ್ಷಣ ಉತ್ತರಿಸು ( ಗಾಳಿ ಬಂದಾಗ ತೂರಿಕೊ)

6. ಎಲ್ಲಾ ಸರಿಯುತ್ತರ ಬರೆಯೋರಾದ್ರೆ ಬಹುಮಾನ ಕೊಡೋರಾರು? ( ಎಲ್ಲರೂ ಹಸೆಮಣೆ ಮೇಲಿದ್ರೆ ಆರತಿ ಬೆಳಗೋರಾರು?)

7. ಹತ್ತು ಹಾಸ್ಯಬರಹಗಳಿಗಿಂತ ಒಂದು ವಿಚಿತ್ರಾನ್ನ ಮೇಲು ( ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟಿ ನೋಡು)

8. ಪ್ರತೀವಾರ ವಿಚಿತ್ರಾನ್ನ ಓದಿ ‘ಜೋಷಿ’ ಯಾರು ಅಂತ ಕೇಳಿದ ಹಾಗೆ ( ರಾತ್ರಿಯೆಲ್ಲಾ ರಾಮಾಯಣ ಕೇಳಿ ರಾಮ ಯಾರು ಅಂದ ಹಾಗೆ)

9. ಪಂಚಭಕ್ಷ್ಯ ಪರಮಾನ್ನಕ್ಕಿಂತ ಒಂದು ವಿಚಿತ್ರಾನ್ನವೇ ಮೇಲು (ಹಂಗಿನರಮನೆಗಿಂತ ಇಂಗಿತದ ಗುಡಿ ಲೇಸು)

10. ವಿಚಿತ್ರಾನ್ನ ತಯಾರಿಯಲ್ಲಿ ‘ಅಮೆರಿಕಾ ಬಗ್ಗೆ ತಿಳಿಸುವ’ ಸೈಟ್‌ ಬಡವಾಯ್ತು (ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು !)

ಸದ್ಯಕ್ಕೆ ಇಷ್ಟು ಸಾಕಲ್ಲವಾ?

ವಂದನೆಗಳು,

- ತ್ರಿವೇಣಿ ಶ್ರೀನಿವಾಸರಾವ್‌
ಇಲಿನಾಯ್‌

ಪೂರಕ ಓದಿಗೆ-

ಗಾದೆ ತಗಾದೆ, ನಗೋದೆ?


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X