• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚಿತ್ರಾನ್ನ ಪ್ರಿಯರ ಒಂದೆರಡು ಮಾತುಗಳು

By oneindia staff
|

ಛಂದಸ್ಸಿನ ಚಂದವ ಮೆಚ್ಚಿ ಚಂಡೆ ನೆನಪಾಯಿತು...

ಈಗ ನಮಗೆಲ್ಲ ಮತ್ತೆ ಶಾಲೆಪಾಠ ಎಲ್ಲ ಮರುಕಳಿಸುವಂತೆ ಮಾಡಿದ್ದೀರಿ. ಭಾಮಿನಿ ಷಟ್ಪದಿಗಳ ನನ್ನದೊಂದಿಷ್ಟು:

ಭಾಮಿನೀ,

ಸಿಟ್ಟು ಪಡಿ ಅಲ್ಲಾ, ಸಿಟ್ಟು ಪಡಬೇಡಿ,

ಇದು ಬರೇ ಷಟ್ಪದಿ,‘ಷಟ್‌ ಅಪ್‌’ ಅದಿ ಲೇದು!

ನಿನ್ನೊಟ್ಟಿಗೆ ನಡೆದಿದ್ದು ಸಪ್ತಪದಿ.

ಭಾಮಿನಿ ಷಟ್ಪದಿಯ ಮಾತ್ರಾಗಣಗಳು ಹೀಗಿರಬೇಕು. (ಇದನ್ನು ನೀವೇ ಹಾಡಿ ನೋಡಿ, ಮನಸ್ಸಿನಲ್ಲೇ ಚಂಡೆ ಶಬ್ದವನ್ನೂ ಊಹಿಸಿಕೊಳ್ಳಿ):

3434

3434

3434 34 ಗುರು ।।

ಒಂದನೇ ಷಟ್ಪದಿಯಲ್ಲಿ ಮೂರನೇ ಸಾಲಿನಲ್ಲಿ ‘ಛಂದಸ್ಸು’ ಎಂಬುದು ಸರಿಯಾಗಿಲ್ಲ. ಅದನ್ನು ‘ಛಂದ ಕಲಿಸಿದ ...’ ಎಂದು ಹಾಡಿನೋಡಿ, ಸರಿಯಾಗೇ ಕೇಳುತ್ತದೆ.

ಹಾಗೆಯೇ ಮೂರನೇ ಷಟ್ಪದಿಯಲ್ಲಿ ಎರಡನೇ ಸಾಲಿನಲ್ಲಿ ಒಂದು ಲಘು ಮಾತ್ರೆ ಲೋಪವಾಗಿದೆ. ನೀವು ಮಾತ್ರೆ ಲೆಕ್ಕ ಎಲ್ಲಾ ಸರಿಯಾಗಿಲ್ಲ ಅಂತ ಹೇಳಿದ್ದು ಗೊತ್ತಿದ್ದರೂ, ಅದನ್ನು ಓದುವಾಗ ಹಾಡಿಕೊಂಡೆ, ಆವಾಗಲೇ, ಮಾತ್ರೆ ತಪ್ಪು ಸುಲಭವಾಗೇ ಕಂಡಿತು, ಸುಮ್ಮನಿರಲಿಕ್ಕೆ ಸಾಧ್ಯವಿಲ್ಲ.

ನಾನು 7ನೇ-8ನೇ ಕ್ಲಾಸಿನಲ್ಲಿದ್ದಾಗ ಕಲಿತದ್ದು (ಶಾಲೆಯಲ್ಲಿ ಅಲ್ಲ):

ಕಾಪಿ ಕುಡಿದಾರ್ಭಟಿಸಿ ತನ್ನಯ

ಚಾಪೆಯನು ತರಹೇಳಿ ಮಲಗಿದ

ಕೋಪದಲಿ ಕೈಕಾಲ ಬಡಿದನು ಭೂಪ ಕೇಳೆಂದಾ ।।

- ದಿನೇಶ ನೆಟ್ಟರ್‌; ನ್ಯೂಜೆರ್ಸಿ

*

ಅಗಸನಕಟ್ಟೆ (ವಾಷಿಂಗ್‌ಟನ್‌)ಯ ಬಳಿಯಿರುವ ಜೋಶಿಯವರಿಗೆ, ಕನಕನಕಟ್ಟೆ (ಕನೆಕ್ಟಿಕಟ್‌) ಯಿಂದ ರಾಜೇಶ್‌ ಚೆಲುವ ಮಾಡುವ ನಮಸ್ಕಾರಗಳು.

ನಿಮ್ಮ ಈ ಸಲದ ವೈವಿಧ್ಯಮಯವಾದ ವಿಚಿತ್ರಾನ್ನ ಚೆನ್ನಾಗಿತ್ತು, ಅದ್ರಲ್ಲಿ ನನಗೆ ಇಷ್ಟವಾದ ‘ಯಮಾತಾರಾಜಭಾನಸಲಗಂ’ ನೋಡಿ ಸಂತೋಷವಾಯಿತು. ಹತ್ತನೆ ಕ್ಲಾಸ್‌ನಲ್ಲಿದ್ದಾಗ ಹೆಗ್ಡೆ ಮಾಷ್ಟ್ರು ಇದನ್ನು ನೆನಪಿಟ್ಕೊಳ್ಳೊದಿಕ್ಕೆ ದಿನ ಒತ್ತಿಒತ್ತಿ ಹೇಳ್ತಿದ್ರು, ಇದು ಕೊನೆ ಪಾಠಗಳಲ್ಲೊಂದು. ಪ್ರಿಪರೇಟರಿ ಪರೀಕ್ಷೆ ಹತ್ರ ಇದ್ದಾಗ ಪಾಠ ಮಾಡಿದ್ರು, ಹುಡುಗ್ರಿಗೆ ಅರ್ಥ ಆಗ್ತಿರ್ಲಿಲ್ಲ , ಅವ್ರು ಬಿಡ್ತಿರ್ಲಿಲ್ಲ. ಗುರು ಲಘು ಬರೆಯೋದು ನನ್ಗೆ ಹಾಗೂ ನನ್ನ ಕೆಲವು ಮಿತ್ರರಿಗೆ ಇಷ್ಟ ಆಗಿತ್ತು. ನಂನಮ್ಮಲ್ಲೇ ಪೈಪೋಟಿ. ಯಾರು ಮೊದ್ಲು ಮುಗಿಸ್ತಾರೋ ಅಂತ. ಈಗ ಎಲ್ಲ ಮರೆತು ಹೊಗಿದೆ, ವಿಚಿತ್ರಾನ್ನ ಒದಿ ನೆನಪು ಮರುಕಳಿಸ್ತು.

ಅಂದಹಾಗೆ ಮೊನ್ನೆ ವಿಚಿತ್ರಾನ್ನ ಒದುವಾಗ, ‘ಯಮಾತಾರಾಜಭಾನಸಲಗಂ’ ಅಂದ್ರೆ ಏನೊ ಅಂತ ನನ್ನ ಮಿತ್ರನೊಬ್ನಿಗೆ ಕೇಳ್ದೆ, ಅವ್ನು ಪಕ್ದಲ್ಲೇ ತನ್ನ ಲಾಪ್‌ಟಾಪ್‌ ಕಂಪ್ಯೂಟರ್‌ ಮುಂದೆ ಕೂತು ಅಂತರ್ಜಾಲವಿಹಾರದಲ್ಲಿ ತಲ್ಲೀನನಾಗಿದ್ದ. ನನ್ನ ಈ ಪ್ರಶ್ನೆ ಕೇಳಿ, ಸ್ವಲ್ಪ ಯೋಚ್ಸಿ ತಲೆ ಎತ್ತಿ ಉತ್ರ ಕೊಟ್ಟ, ಎನು ಗೊತ್ತ? ‘ಯಮ ಮಹಾರಾಜ ಆಕಾಶದಲ್ಲಿ ಆನೆಯಾಂದಿಗೆ ಯುದ್ಧ ಮಾಡುತ್ತಿದ್ದಾನೆ..’ ಅಂತ! ಹೇಗಿದೆ ತರ್ಜುಮೆ...!?

- ರಾಜೇಶ್‌ ಚೆಲುವ; ಕನೆಕ್ಟಿಕಟ್‌ (ಕನಕನಕಟ್ಟೆ)

*

ನಾನು ಯಾವ ಛಂದಸ್ಸಿಗೂ ಕಟ್ಟುಬೀಳದೇ ಸ್ವಚ್ಛಂದವಾಗಿ ಬರೆದು ಗೀಚುವವ. ಆದರೆ, ನಿಮ್ಮ ಷಟ್ಪದಿಗಳನ್ನೋದಿ ಉತ್ಸಾಹದಿಂದ ನನ್ನ ಜೀವನದ ಮೊಟ್ಟ ಮೊದಲ ಷಟ್ಪದಿಯನ್ನು ರಚಿಸುತ್ತಾ ನಿಮ್ಮ ವಿಚಿತ್ರಾನ್ನಕ್ಕೆ ನನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದೇನೆ, ಇದೋ ಸ್ವೀಕರಿಸಿ!

ವಿಚಿತ್ರ-ಷಟ್ಪದಿ?

‘ಅದುವೆಕನ್ನಡ’ದಲ್ಲಿ ಉಂಡೆನು ಭೌಮವಾರದ ಭವ್ಯ ಬೆಳಗಲಿ

ಹದವಾದ ಖಾರದ ಉಪ್ಪು ಹುಳಿಗಳ ಕಲಸಿದೋಗರವ

ಮುದವಾದ ಒಗ್ಗರಣೆಯಲಿ ಮೆರೆಸಿದ ಕರಿಬೇವ ಘಮದಲಿ

ಮೆದುಳ ಕುಣಿಸುವ ಪದವಿನೋದದ ಕೊಂಡಿಬಂಡಿಗಳ

ವಿಧವಿಧದ ವಿಚಾರಸರಣಿಯ ವಿಪುಲ ವಿಷಯಗಳಿಂದಕೂಡಿದ

ಮಧುರನುಡಿಗಳ ಶಿಷ್ಟ ಶೈಲಿಯ ವಿಚಿತ್ರಾನ್ನ ಭೋಜನವ...

- ಮೈ.ಶ್ರೀ.ನಟರಾಜ; ಗೈಥರ್ಸ್‌ಬರ್ಗ್‌, ಮೇರಿಲ್ಯಾಂಡ್‌

*

ನಲವತ್ತು ವಾರಗಳ ಕಾಲ ವಿಚಿತ್ರಾನ್ನದ ಮೂಲಕ ನಮಗೆಲ್ಲಾ ರಸಗವಳವನ್ನು ಉಣಬಡಿಸಿದ ನಿಮಗೆ ಅಭಿನಂದನೆಗಳು...(ಆದ್ರೆ ನಾನು ವಿಚಿತ್ರಾನ್ನ ಓದಲು ಶುರು ಮಾಡಿದ್ದು ಕೇವಲ 4/5 ವಾರಗಳ ಹಿಂದೆ...!)

ನಿಮ್ಮ ಷಟ್ಪದಿ, ಗುರು ಲಘು ಎಲ್ಲಾ ನೋಡಿ, ಛಂದಸ್ಸು ಎನ್ನುವ ಪದವನ್ನೇ ಮರೆತಿದ್ದ ನನ್ನಂತಹ (ಹುಸಿ)ಕನ್ನಡಿಗರಿಗೆ ಒಳ್ಳೆ ಷಾಕ್‌-ಟ್ರೀಟ್‌ಮೆಂಟ್‌ ಆದ ಹಾಗೆ ಆಯ್ತು...! ‘ಜಾನೆ ಕಹಾ ಗಯೇ ವೊ ದಿನ್‌...’ ಎಂದು ಹಾಡುತ್ತಾ ನಾನು ನನ್ನ ಹೈಸ್ಕೂಲ್‌ ಕನ್ನಡ ಕ್ಲಾಸ್‌ಗೆ ಹೋಗ್ಬಿಟ್ಟೆ....

- ಅಶೋಕ್‌ ಎಚ್‌.ಎಸ್‌; ಬೆಂಗಳೂರು

*

ನಿಮ್ಮ ಈ ವಾರದ ವಿಚಿತ್ರಾನ್ನದ ಅಂಕಣವನ್ನು ಓದಿದೆ, ಬಹಳ ಕುತೂಹಲಕಾರಿಯಾಗಿತ್ತು. ನೀವು ಬರೆದಿರುವ ಷಟ್ಪದಿಗಳಲ್ಲಿ ಇರುವ ನಿಯಮ ನೋಡಿ ನನಗೆ ಡಿವಿಜಿ ಅವರ ಕಗ್ಗ ನೆನಪಾಯಿತು. ಕಗ್ಗದಲ್ಲೂ ಇದೇ ನಿಯಮವನ್ನು ಪಾಲಿಸಿದ್ದಾರೆ ಅನ್ಸುತ್ತೆ. ಈ ನಿಯಮದ ಹಿಂದೆ ಏನಾದರೂ ಮಹತ್ವ ಇದೆಯೆ? ಕುಮಾರವ್ಯಾಸ ತನ್ನ ಷಟ್ಪದಿಗಳಲ್ಲಿ ಇದೇ ನಿಯಮ ಪಾಲಿಸಿದ್ದನೆ?

ಅಂದಹಾಗೆ, ನಿಮ್ಮ ವಿಚಿತ್ರಾನ್ನದಲ್ಲಿ ಒಮ್ಮೆ ಡಿವಿಜಿ ಅವರ ಕಗ್ಗ, ಅದರ ಮಹತ್ವ, ಮತ್ತೆ ಇತ್ತೀಚೆಗೆ ಅದರ ಕಾಪಿರೈಟ್‌ ಉಲ್ಲಂಘನೆಯ ವಿವಾದ ಬರೀಬೇಕು ಅಂದುಕೊಂಡಿದ್ದೀರ? ಬರೆಯಿರಿ.

- ಶ್ರೀಧರ್‌ ಕೆ ಎನ್‌; ಸಿಂಗಾಪೂರ್‌

*

ನಿಮ್ಮ ಅರೆಬರೆ ಛಂದಸ್ಸು, ಅಸಲೀ ಛಂದಸ್ಸಿಗಿಂತಲೂ ಚೆಂದಾಗಿ ಮೂಡಿ ಬಂದಿದೆ! ಓದಿ ತುಂಬಾನೆ ಖುಶಿಯಾಯಿತು.

- ಶಿವಮೂರ್ತಿ; ನವದೆಹಲಿ

*

ವಾಹ್‌ ವಾಹ್‌, ಚೆನ್ನಾಗಿದೆ ಚೆನ್ನಾಗಿದೆ!

- ಡಾ।ಅನಿಲ್‌ (ಮಕ್ಕಳ ತಜ್ಞ); ಲೂಸಿಯಾನಾ

*

ದಟ್ಸ್‌ಕನ್ನಡ.ಕಾಮ್‌ನ ನಿತ್ಯ ಓದುಗ ನಾನು. ದಿನಪತ್ರಿಕೆಯನ್ನು ಓದಲು ಕೂಡ ಸಮಯ ಸಿಗದ ಇಂದಿನ ಗಡಿಬಿಡಿಯ ಜೀವನದಲ್ಲಿ, ಕನ್ನಡ ಲೇಖನಗಳಿಗಾಗಿ ಅಂತರ್ಜಾಲದ ಮೊರೆ ಹೊಕ್ಕಿರುವ ಅಸಂಖ್ಯಾತ ಕನ್ನಡಿಗರಲ್ಲಿ ನಾನೂ ಒಬ್ಬ. ಈ ನಿಟ್ಟಿನಲ್ಲಿ ದಟ್ಸ್‌ಕನ್ನಡ.ಕಾಮ್‌ನ ಪ್ರಯತ್ನ ಶ್ಲಾಘನೀಯ. ಆದರಲ್ಲೂ ನಿಮ್ಮ ವಿಚಿತ್ರಾನ್ನ ಅಂಕಣವಂತೂ ನಮಗೆ ಚಿತ್ರ ವಿಚಿತ್ರ ಸಚಿತ್ರ ರಂಜನೆಯ ಮಹಾಪೂರವನ್ನೇ ಹರಿಸುತ್ತಿದೆ. ವಿಚಿತ್ರಾನ್ನವನ್ನು ಮೆಚ್ಚಿದ ಅಸಂಖ್ಯಾತ ಕನ್ನಡಿಗರಲ್ಲಿ ನಾನೂ ಒಬ್ಬ. ಪ್ರತಿ ವಾರವೂ ನಿಮ್ಮ ಅಂಕಣಕ್ಕಾಗಿ ಕಾದಿರುತ್ತೇನೆ. ವಿಚಿತ್ರಾನ್ನ ಮಾಲಿಕೆಯಲ್ಲಿ ನನ್ನ ಮೆಚ್ಚಿನ ಲೇಖನವೆಂದರೆ ‘ಹಾಸ್ಯಾಸ್ಪದ ಸಬ್ಜೆಕ್ಟಿನ ಸಬ್ಜೆಕ್ಟಿವ್‌ ಎಗ್‌ಜಾಮ್‌’. ಪ್ರಚಲಿತ ವಿದ್ಯಮಾನಗಳಿಗೆ ತಿಳಿಹಾಸ್ಯದ ಲೇಪನವನ್ನು ಮಾಡಿ ನೀವು ತಯಾರಿಸಿದ್ದ ಆ ವಿಚಿತ್ರಾನ್ನದ ಮುಂದೆ ನಮ್ಮ ದರ್ಶಿನಿಯ ಚಿತ್ರಾನ್ನ ರುಚಿಯಿಲ್ಲದಂತಾಗಿತ್ತು. ನಿಮ್ಮ ಕನ್ನಡಸೇವೆ ಹೀಗೆಯೇ ಮುಂದುವರೆಯಲಿ. ನಮ್ಮಂಥ ಲಕ್ಷಾನುಲಕ್ಷ ಕನ್ನಡಿಗರ ಹೃದಯಕ್ಕೆ ಸಂತಸವನ್ನು ತರಲಿ. ನಿಮ್ಮ ಎಲ್ಲ ಕಾರ್ಯಗಳಿಗೂ ನನ್ನ ಶುಭಕಾಮನೆಗಳು.

- ಮಧುಸೂದನ (ರಾಹುಲ್‌ ದ್ರಾವಿಡ್‌ ಅಭಿಮಾನಿ); ಬೆಂಗಳೂರು

*

ವಿಚಿತ್ರಾನ್ನದ ಎಲ್ಲ ಲೇಖನಗಳು ಚೆನ್ನಾಗಿ ಮೂಡಿಬರುತ್ತಿವೆ. ನನಗೆ ಒಂದು ಬೇಸರದ ಸಂಗತಿಯೆಂದರೆ ನಿಮ್ಮ-ನಮ್ಮ ಜಿಲ್ಲೆಯ ಒಂದು ವಿಶಿಷ್ಟ ಕಲೆ ಯಕ್ಷಗಾನದ ಬಗ್ಗೆ ವಿಚಿತ್ರಾನ್ನ ಇದುವರೆಗೆ ಮೂಡಿಬರದೆ ಇರುವುದು! ಭೂತಾರಾಧನೆಯ ಹಾಗೆ ಯಕ್ಷಗಾನದ ಬಗ್ಗೆಯೂ ವಿಚಿತ್ರಾನ್ನ ಬಡಿಸಿರಿ ಎಂದು ನಿಮ್ಮಲ್ಲಿ ‘ಈ’ ಮೂಲಕ ಕೇಳಿಕೊಳ್ಳುತ್ತಿದ್ದೇನೆ.

-ಇತಿ ನಿಮ್ಮ ವಿಚಿತ್ರಾನ್ನಪ್ರಿಯ

ರಾಘವೇಂಧ್ರ ಬಾಯರಿ; ಉಡುಪಿ

*ENGLISH SECTION

*

Thanks for your kind words and column. I consider the column to be dedicated to Chandassu, for that is the real focus. naanu kEvala nimitta maatra. The credit should really go to the great poets of haLegannada.

Your column is nice, informative, funny and at the same time thought provoking.

Dr. K R S Murthy; California

*

I am really thrilled to know your poetic talent, which I had not noticed much earlier. Probably as we ware together only once in a while during some functions or ceremonies in our native place during your School or college days or may be you never passed on any of your such works to me. This writeup on chandassu is really offbeat compared to all previous writeups of yours I have read in the past. Congratulations and Keep up the Great Show!

Purushotham Joshi; Mumbai

*

vichitranna40 was nice !

K Rajalakshmi; Bangalore

ಚಂದಕಿಂತ ಚಂದ ಛಂದಸ್ಸಿನ ಛಂದ...

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more