ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಂಛನ ಜ್ಞಾನ ಸ್ಪರ್ಧೆಯ ಫಲಿತಾಂಶ

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Vichitranna Logo quiz results are out ಲೋಗೋ ವಿಭಿನ್ನ ರುಚಿಃ... ಎಂದು ಹನ್ನೆರಡು ವಿವಿಧ ಲಾಂಛನಗಳನ್ನು ತೋರಿಸಿ ಅವನ್ನು ಗುರುತಿಸುವಂತೆ ಒಂದು ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ಉತ್ತರ ಕಳಿಸುವಿಕೆಗೆ ಪ್ರತ್ಯೇಕ ವೆಬ್‌-ಪುಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಎಂದಿನಂತೆ ಉತ್ಸಾಹದಿಂದ ಭಾಗವಹಿಸಿದವರು ತುಂಬ ಮಂದಿ. ಬೆಂಗಳೂರಿಗರಂತೂ ಆರಾಮಾಗಿ ಎಲ್ಲ ಲಾಂಛನಗಳನ್ನೂ ಸುಲಭವಾಗಿ ಐಡೆಂಟಿಫೈ ಮಾಡಿದ್ದಾರೆ. ಉತ್ತರ ಕಳಿಸಿದವರ ಪಟ್ಟಿ ಓದಿದಾಗ ಎಸ್ಸೆಸ್ಸೆಲ್ಸಿ ರ್ಯಾಂಕ್‌ ವಿಜೇತರ ಪಟ್ಟಿ ಇದ್ದಂತೆ ‘ಬೆಂಗಳೂರು ಸಿಂಹಪಾಲನ್ನು ಪಡೆದಿದೆ’! ಇತ್ತ ಅಮೆರಿಕದ ಓದುಗರು ಅದರಲ್ಲೂ ಕರ್ನಾಟಕ ಬಿಟ್ಟು ದಶಕಗಳೇ ಕಳೆದವರು ಸರಿಯುತ್ತರಗಳಿಗೆ ಸ್ವಲ್ಪ ತಡಕಾಡಿದ್ದಾರೆ. ಮೊನ್ನೆ ಭೇಟಿಯಾಗಿದ್ದ ಡಿ.ಆರ್‌.ಕೃಷ್ಣಮೂರ್ತಿ (ವರ್ಜೀನಿಯಾ) ಅವರಂತೂ ‘ಏನ್‌ ಸ್ವಾಮೀ, ಇಷ್ಟು ಕಷ್ಟ ಪ್ರಶ್ನಪತ್ರಿಕೆ ಯಾಕೆ ಕೊಟ್ಟಿದ್ದೀರಿ?’ ಎಂದು ಕೇಳಿಯೇಬಿಟ್ಟರು. ಇರಲಿ, ಎಲ್ಲರೂ ಈ ಹೊಸ ನಮೂನೆಯ ಕ್ವಿಜ್‌ಅನ್ನು ಆನಂದಿಸಿದ್ದಂತೂ ನಿಜ.

ಫಲಿತಾಂಶ ತಿಳಿಯುವ ಮುನ್ನ ಸರಿಯುತ್ತರಗಳತ್ತ ಕಣ್ಣಾಡಿಸಿ.

ಅ) ಸರಿಯುತ್ತರಗಳು :

1. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೂಡ ಸರಿಯುತ್ತರವೇ)
2. ವಿಜಯಾ ಬ್ಯಾಂಕ್‌
3. ಮೈಸೂರು ಸಾಂಡಲ್‌ ಸೋಪ್‌ (ಕರ್ನಾಟಕ ಸೋಪ್ಸ್‌ ಏಂಡ್‌ ಡಿಟರ್ಜೆಂಟ್ಸ್‌)
4. ರಾಮಕೃಷ್ಣ ಆಶ್ರಮ
5. ಕುದುರೆಮುಖ ಕಬ್ಬಿಣ ಅದಿರು ಉತ್ಪಾದನಾ ಸಂಸ್ಥೆ
6. ಎಂಟಿಆರ್‌ ಆಹಾರ ಉತ್ಪನ್ನಗಳು
7. ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ (ಪ್ರಜಾವಾಣಿ, ಸುಧಾ, ಮಯೂರ, ಡೆಕ್ಕನ್‌ ಹೆರಾಲ್ಡ್‌)
8. ಸೈಕಲ್‌ ಬ್ರಾಂಡ್‌ ಅಗರಬತ್ತಿ (ಎನ್‌ ರಂಗರಾವ್‌ ಏಂಡ್‌ ಸನ್ಸ್‌)
9. ನಂದಿನಿ ತುಪ್ಪ ಮತ್ತಿತರ ಹೈನೋತ್ಪನ್ನಗಳು
10. ಕರ್ನಾಟಕ ವಾರ್ತೆ ಮತ್ತು ಪ್ರಚಾರ ಇಲಾಖೆ
11. ಬೆಂಗಳೂರು ವಿಶ್ವವಿದ್ಯಾಲಯ
12. ವಿಜಯ ಕರ್ನಾಟಕ ದೈನಿಕ

ಆ) ಸರಿಯುತ್ತರಗಳನ್ನು ಕಳಿಸಿದವರು:

1. ರಂಗನಾಥ ಪಿ ಕಶ್ಯಪ್‌; ಬೆಂಗಳೂರು
2. ಲೋಕೇಶ್‌ ಬಿ ಎಸ್‌; ಬೆಂಗಳೂರು
3. ಗುರುಪ್ರಸಾದ್‌ ವೆಂಕಟರಾಮು; ಟೋಕಿಯಾ, ಜಪಾನ್‌
4. ಶಿವಾನಂದ ನಾಗನೂರು; ಬೆಂಗಳೂರು
5. ನರಸಿಂಹ ಶಾಸ್ತ್ರಿ; ಸಿಂಗಾಪುರ್‌
6. ಅಂಬಾಪ್ರಸಾದ್‌ ಜಿ; ಬೆಂಗಳೂರು
7. ಮಂಜುನಾಥ ತಿಪ್ಪೇಸ್ವಾಮಿ; ಬೆಂಗಳೂರು
8. ಸಂಜೀವ ಕುಲಕರ್ಣಿ; ಇಂಡಿಯಾನಾಪೊಲಿಸ್‌
9. ಗಾಯಿತ್ರಿ ಶೇಷಾಚಲ; ಲಾಸ್‌ ಏಂಜಲೀಸ್‌
10. ಸಂಜತಾ ಶೃಂಗೇರಿ; ಯೂನಿಯನ್‌ ಸಿಟಿ, ಕ್ಯಾಲಿಫ‚ೋರ್ನಿಯಾ
11. ಶ್ರೀಲತಾ ಪಿ; ಬೆಂಗಳೂರು
12. ಕೃಷ್ಣಮೂರ್ತಿ ಭಟ್‌ ಬಸ್ರೂರು; ಬೆಂಗಳೂರು
13. ಶುಭಶ್ರೀ ಎಚ್‌ ಎಸ್‌; ಬೆಂಗಳೂರು
14. ಓಂಪ್ರಕಾಶ್‌; ಬಳ್ಳಾರಿ
15. ಮಹಾವೀರ್‌ ಕುಮಾರ್‌ ಎಚ್‌ ವಿ; ಬೆಂಗಳೂರು
16. ಸಾವಿತ್ರಿ ಪಿ ಎಸ್‌; ಬೆಂಗಳೂರು
17. ಅತ್ರೇಶ್‌ ಕುಮಾರ್‌ ಬಿ ಎಸ್‌; ಬೆಂಗಳೂರು
18. ಗುರುರಾಜ ಕುಲಕರ್ಣಿ; ಬೆಂಗಳೂರು
19. ರಾಜೇಂದ್ರ ಪ್ರಸಾದ್‌; ಬೆಂಗಳೂರು
20. ಪ್ರಕಾಶ್‌ ಎಂ ಎಂ; ಊರು?
21. ಶೇಷಾದ್ರಿ ಪಿ ವಿ; ಬೆಂಗಳೂರು
22. ಮುಕುಂದ್‌ ಆರ್‌ ಎಸ್‌; ಬೆಂಗಳೂರು
23. ನಟರಾಜ್‌ ಎಚ್‌ ಕೆ; ಪುಣೆ
24. ಗಿರೀಶ್‌ ಸಾಹುಕಾರ್‌; ಚಿಕಾಗೋ
25. ಬಾಲಸುಬ್ರಹ್ಮಣ್ಯ ಎಸ್‌ ಎ; ಬೆಂಗಳೂರು
26. ನಾಗಿ ತಿಮ್ಮಯ್ಯ; ಬೆಂಗಳೂರು
27. ರಾಘವೇಂದ್ರ; ತುಮಕೂರು
28. ಶೈಲಜಾ ವಲಕಟ್ಟೆ; ನ್ಯೂ ಜೆರ್ಸಿ
29. ವೀಣಾ ಜಿ; ಬೆಂಗಳೂರು
30. ಪ್ರವೀಣ್‌ ಬಿ ಎಸ್‌; ಬೆಂಗಳೂರು
31. ಆನಂದ್‌ ವಡಿವೇಲು; ಬೆಂಗಳೂರು
32. ಲೀನಾ; ಬೆಂಗಳೂರು
33. ಚಂದ್ರಶೇಖರ್‌ ಬಿ ಎಚ್‌; ಬೆಂಗಳೂರು
34. ವಾಗೀಶ ಪಿ ಆರ್‌; ಬೆಂಗಳೂರು
35. ನಾಗರಾಜ ವೈ ಎಸ್‌; ಬೆಂಗಳೂರು
36. ದಿನೇಶ್‌ ನೆಟ್ಟರ್‌; ನ್ಯೂ ಜೆರ್ಸಿ
37. ತ್ರಿವೇಣಿ ಶ್ರೀನಿವಾಸ್‌ ರಾವ್‌; ಮೌಂಟ್‌ ಪ್ರಾಸ್ಪೆಕ್ಟ್‌, ಇಲಿನಾಯ್‌
38. ಚಂದ್ರಶೇಖರ್‌ ನೆಲೋಗಲ್‌; ಡ್ರಾಕಟ್‌, ಮೆಸ್ಸಾಚ್ಯುಸೆಟ್ಸ್‌
39. ಜಯಶ್ರೀ ಎಚ್‌ ಆರ್‌; ಬೆಂಗಳೂರು
40. ಜಯಂತಿ ಎಚ್‌ ವಿ; ಬೆಂಗಳೂರು
41. ನಾಗವೇಣಿ; ಬೆಂಗಳೂರು
42. ಕಿರಣ್‌ ರತ್ನಾಕರ್‌; ಡಬ್ಲಿನ್‌, ಐರ್‌ಲ್ಯಾಂಡ್‌
43. ಆನಂದ್‌ ಎ ಆರ್‌; ಮೈಸೂರು
44. ಚೈತನ್ಯ ರಾಮ್‌, ಡಾಲಸ್‌, ಟೆಕ್ಸಾಸ್‌
45. ಶ್ರೀದೇವಿ ಕುಲಕರ್ಣಿ; ಮಿನ್ನೆಸೊಟ
46. ದರ್ಶನ್‌ ಬೀರೂರ್‌; ಒಟ್ಟಾವ, ಕೆನಡಾ
47. ರಾಜು; ಬೆಂಗಳೂರು
48. ಅನುರಾಧಾ ಆರ್‌ ಕೆ; ಬೆಂಗಳೂರು
49. ಲಕ್ಷ್ಮೀನಾರಾಯಣ ಎಂ ಆರ್‌; ಬೆಂಗಳೂರು
50. ಫಣಿಶ್ರೀ ನಾರಾಯಣ್‌; ಸಿಲ್ವರ್‌ಸ್ಪ್ರಿಂಗ್‌, ಮೇರಿಲ್ಯಾಂಡ್‌

* * *

ಇ) ಬಹುಮಾನ ವಿಜೇತರು:

50 ಹೆಸರುಗಳ ಪಟ್ಟಿಯಿಂದ ಚೀಟಿಯೆತ್ತಿ ಅದೃಷ್ಟಶಾಲಿಯನ್ನು ನಿರ್ಧರಿಸುವ ಕೆಲಸದಲ್ಲಿ ನೆರವಾದವರು ಸಿಇಒ ಬಿ.ಜಿ. ಮಹೇಶ್‌.

Shailaja Valakatte, Winner of Logo Contest2004ರ ಆಕರ್ಷಕ ಡೈರಿ ಬಹುಮಾನವನ್ನು ಗೆದ್ದವರು- ಶೈಲಜಾ ವಲಕಟ್ಟೆ , ನ್ಯೂಜೆರ್ಸಿ.

ವಿಜೇತರಿಗೆ ಹಾರ್ದಿಕ ಅಭಿನಂದನೆಗಳು. ಶೈಲಜಾ ಅವರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ವಿಳಾಸವನ್ನು ಪಡೆದು ಬಹುಮಾನವನ್ನು ತಲುಪಿಸಲಾಗುವುದು.

ಭಾಗವಹಿಸಿದ ಮತ್ತು ಪ್ರಶಂಸೆ-ಪ್ರೋತ್ಸಾಹದ ಮಾತುಗಳನ್ನು ಬರೆದು ಕಳಿಸಿದವರೆಲ್ಲರಿಗೂ ಧನ್ಯವಾದಗಳು.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X