• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿತ್ತಳೆ ತೊಳೆ ತೊಳೆ ಚಪ್ಪರಿಸಿದ ಓದುಗರು..

By Staff
|
ವಿಚಿತ್ರಾನ್ನದ ಇತರ ಕಂತುಗಳಂತೆ ಕಿತ್ತಳೆ ಆಖ್ಯಾನವೂ ಓದುಗಮಿತ್ರರಿಗೆ ಇಷ್ಟವಾಗಿದೆ. ಕಿತ್ತಳೆ ಕಂತಿನ ಕೊನೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಹಾಗೂ ಕಿತ್ತಳೆಪ್ರಿಯರ ಪ್ರತಿಕ್ರಿಯೆಗಳು ಇಲ್ಲಿವೆ. ಚಪ್ಪರಿಸಿಕೊಳ್ಳಿ.

-ಶ್ರೀವತ್ಸ ಜೋಷಿ

ಮೊದಲನೆಯದಾಗಿ ರಂಗಣ್ಣನ ಮಗನು ಹಣ್ಣುಪೆಟ್ಟಿಗೆಗಳ ಹಣೆಪಟ್ಟಿಗಳನ್ನು ಸರಿಪಡಿಸಬೇಕಾಗಿ ಬಂದ ಸಮಸ್ಯೆಗೆ ಉತ್ತರ: ಕಿತ್ತಳೆ+ಸೇಬು ಎಂದು ಬರೆದಿರುವ ಪೆಟ್ಟಿಗೆಯಿಂದ ಒಂದು ಹಣ್ಣನ್ನು ತೆಗೆದುನೋಡಬೇಕು.

ಅ) ಅದು ಒಂದು ಕಿತ್ತಳೆಯಾಗಿದ್ದರೆ:

- ಆ ಪೆಟ್ಟಿಗೆಯಲ್ಲಿ ಕಿತ್ತಳೆ ಮಾತ್ರ ಇದೆ ಎಂದು ಅರ್ಥ. ಹಾಗಾಗಿ ಅದರ ಸರಿಯಾದ ಲೇಬಲ್‌ ‘ಕಿತ್ತಳೆ’

- ‘ಕಿತ್ತಳೆ’ ಎಂದು ಮೊದಲು ಬರೆದಿರುವ ಪೆಟ್ಟಿಗೆಯಲ್ಲಿ ಸೇಬು ಇವೆ ಎಂದರ್ಥ

- ‘ಸೇಬು’ ಎಂದು ಬರೆದಿರುವುದರಲ್ಲಿ ಕಿತ್ತಳೆ+ಸೇಬು ಇವೆ ಎಂದು ತಿಳಿಯತಕ್ಕದ್ದು.

ಆ) ಒಂದು ವೇಳೆ ಅದು ಸೇಬು ಆಗಿದ್ದರೆ :

- ಆ ಪೆಟ್ಟಿಗೆಯಲ್ಲಿ ಸೇಬು ಮಾತ್ರ ಇದೆ ಎಂದು ಅರ್ಥ.

- ‘ಸೇಬು’ ಎಂದು ಬರೆದಿರುವ ಪೆಟ್ಟಿಗೆಯಲ್ಲಿ ಕಿತ್ತಳೆ ಇವೆ ಎಂದರ್ಥ

- ‘ಕಿತ್ತಳೆ’ ಎಂದು ಬರೆದಿರುವುದರಲ್ಲಿ ಸೇಬು+ಕಿತ್ತಳೆ ಎರಡೂ ಇವೆ ಎಂದು ತಿಳಿಯತಕ್ಕದ್ದು!

* *

ಅಲ್ಲಾ, ನೀವು ‘ಡೋಂಟ್‌ ಮಿಕ್ಸ್‌ ಆಪಲ್ಸ್‌ ಏಂಡ್‌ ಒರೆಂಜಸ್‌...’ ಎಂಬ ಗಾದೆ ಕೇಳಲಿಲ್ಲವೇ ? ಆದ್ದರಿಂದ, ಆ ಪೆಟ್ಟಿಗೆಯನ್ನೇ ಮೊದಲು ತೆರೆಯಬೇಕು, ಅಲ್ಲಿ ಒಂದು ಸೇಬು ಸಿಗುತ್ತದೆ (ಅಥವಾ ನಾರಂಗ). ಈಗ ಸೇಬಿನ ಪೆಟ್ಟಿಗೆಯಲ್ಲಿ ಕಿತ್ತಳೆಯೂ, ಕಿತ್ತಳೆಯ ಪೆಟ್ಟಿಗೆಯಲ್ಲಿ ಎರಡೂ ಸಿಗುತ್ತವೆ (ಅಥವಾ ಸೇಬಿನ ಪೆಟ್ಟಿಗೆಯಲ್ಲಿ ಎರಡೂ, ಕಿತ್ತಳೆಯ ಪೆಟ್ಟಿಗೆಯಲ್ಲಿ ಸೇಬು) (120 ಡಿಗ್ರೀ ತಿರುಗಿಸಿ). ಹೀಗೆ ‘ನಾ ರಂಗ’ಣ್ಣನಿಗೆ ತಿಳಿಸಬಹುದು!

ಇಷ್ಟೊಂದು ವಿಷಯ ವಿವರಿಸಿದ್ದೀರಲ್ಲ ಮಾರಾಯ್ರೇ, ಬಹಳ ಸ್ವಾರಸ್ಯವಾಗಿದೆ. ಸಂಸ್ಕೃತದಿಂದ ಅರಬ್ಬಿಗಾಗಿ, ಫ್ರೆಂಚ್‌ಗಾಗಿ, ಇಂಗ್ಲೀಷ್‌ಗೆ ಬರುವಾಗ ಆ ನಾರಂಗ ಹೋಗಿ ‘ಎನ್‌ ಓರೆಂಜ್‌’ ಆಗೋಯ್ತು ಎಂದು ಈಗತಾನೆ ತಿಳಿಯಿತು! ಅಂದಹಾಗೆ ಕಿತ್ತಳೆ ಎಂಬ ಪದ ಎಲ್ಲಿಂದ ಬಂತು? ‘ಕಿತ್ತರೆ ತೊಳೆ’ ಇರಬಹುದೇ ?

- ದಿನೇಶ್‌ ನೆಟ್ಟರ್‌; ನೀವು ಜಾರಿಸಿ (ಕಿತ್ತಳೆ ಸಿಪ್ಪೆ) (ನ್ಯೂ ಜೆರ್ಸಿ)

ಸರಿಯುತ್ತರವನ್ನು ‘ಪಕ್ಕಾ ಸಾಫ್ಟ್‌ವೇರ್‌ ಅನಾಲಿಸ್ಟ್‌’ಗಳಂತೆ ವಿಶ್ಲೇಷಣಾತ್ಮಕವಾಗಿ ಕಳಿಸಿದ ಇತರರು:

--ಅಶೋಕ್‌ ಎಚ್‌.ಎಸ್‌; ಬೆಂಗಳೂರು

-ದೇವೇಂದ್ರ ಪ್ರಕಾಶ್‌; ಡಬ್ಲಿನ್‌, ಐರ್‌ಲ್ಯಾಂಡ್‌

-ಶ್ರೀಧರ್‌ ಎ ಎಸ್‌; ಊರು?

- ಗುರುರಾಜ ಕುಲಕರ್ಣಿ; ಬೆಂಗಳೂರು

-ಪುರುಷೋತ್ತಮ ರಾವ್‌ ಉಡುಪಿ; ಗೈಥರ್ಸ್‌ಬರ್ಗ್‌, ಮೇರಿಲ್ಯಾಂಡ್‌

* *

ನಿಮ್ಮ ಅಂಕಣ-ಲೇಖನ ‘ತಂದಿಹೆ ಕೊಡಗಿನ ಕಿತ್ತೀಳೆ’ ಬಗ್ಗೆ ಒಂದೆರಡು ಮಾತು.

‘ಕಿತ್ತೀಳೆ’ ಎಂಬ ಪದ ಹಾಡಿನ ಅನುಕೂಲಕ್ಕಾಗಿ ಮಾಡಿಕೊಂಡ ರೂಪ ಅಲ್ಲ. ಅದೇ ಕಿತ್ತಳೆಗಿಂತ ಹಳೆಯ ರೂಪ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಪದದ ಮೂಲ ರೂಪ ಈಳೆ(ಇಳ್ಳೆ, ಹಿರಳೆ). ಇದರಿಂದ ಒದಗಿರುವ ಪದಗಳು ಹೇರೀಳೆ (ಹಳೆಗನ್ನಡದಲ್ಲಿ ಪೇರ್‌ ಈಳೆ, ಅಥವಾ ದೊಡ್ಡ ಈಳೆ), ಕಿತ್ತೀಳೆ(ಕಿತ್ತು, ಅಥವಾ ಚಿಕ್ಕ ಈಳೆ). ಇವುಗಳಿಂದ ನಮ್ಮ ಕಾಲದ ಕನ್ನಡದಲ್ಲಿ ಹೇರಳೆ, ಕಿತ್ತಳೆ ಎಂದಾಗಿವೆ. ಹೇರಳೆ ಎಂಬುದು ಕಿತ್ತಳೆಗಿಂತ ದೊಡ್ಡ, ಇನ್ನೂ ಕಹಿಯಾದ, ಉಪ್ಪಿನಕಾಯಿ ಹಾಕಲು ಉಪಯೋಗಿಸುವ ಹಣ್ಣು. ಇದು ನಮ್ಮ (ಅಂದರೆ ಹಳೆಯ ಮೈಸೂರು ರಾಜ್ಯದ ಹೆಬ್ಬಾರ್‌ ಅಯ್ಯಂಗಾರ್ರು ಮಾತನಾಡುವ) ತಮಿಳಿನಲ್ಲಿ ‘ನಾರ್ತಂಗಾ’, ಬಹುಶಃ ಸಂಸ್ಕೃತದ ನಾರಂಗದ ನಮ್ಮ ರೂಪ. ಪದದ ಕೊನೆಯ ಗಾ ತಮಿಳಿನ ಕಾಯಿ, ತೇಂಗಾ(ತೆಂಗಿನಕಾಯಿ), ಮಾಂಗಾ(ಮಾವಿನಕಾಯಿ) ಇವುಗಳಲ್ಲಿ ಬರುವಂತೆ. ನಾರ್‌ ಎನ್ನುವುದು ಘಮ ಎಂಬ ಅರ್ಥವಿರುವ ಪದ. ಆದ್ದರಿಂದ ನಾರ್ತಂಗಾ, ಘಮವಿರುವ ಹಣ್ಣು ಎಂದಿರಬಹುದು. ಸಂಸೃತಕ್ಕೆ ದ್ರಾವಿಡ ಭಾಷೆಗಳಿಂದ ಈ ಪದ ಹೋಗಿರಬಹುದು.

ಮಾಸ್ತಿಯವರ ‘ನಮ್ಮ ನುಡಿ’ ಪುಸ್ತಕದಲ್ಲಿ , ಕಿಟ್ಟೆಲ್‌ ನಿಘಂಟುವಿನಲಿ ್ಲ, ಇದರ ಬಗ್ಗೆ ಇನ್ನೂ ಸ್ವಲ್ಪ ಓದಬಹುದು. ಒಂದು ಚಿಕ್ಕ ಪದ ಇಲ್ಲವೆ ವಾಕ್ಯ ಹಿಡಿದು ಅದರಲ್ಲೇನಿದೆ ಎಂದು ಹುಡುಕಲು ಪ್ರಾರಂಭಿಸುವುದು, ಏನೆಲ್ಲಾ ಚಿಂತನೆಗಳಿಗೆ ಒಯ್ಯುತ್ತದೆ ಎಂದು ತೋರಿಸುತ್ತದೆ, ಮಾಸ್ತಿಯವರ ‘ನಮ್ಮ ನುಡಿ’. ನಿಮ್ಮ ಹತ್ತಿರ ಈ ಪುಸ್ತಕ ಇಲ್ಲದಿದ್ದರೆ, ತರಿಸಿಕೊಂಡು ಓದಿ, ಖಂಡಿತ ಇಷ್ಟವಾಗುತ್ತದೆ.

ಕಿಟ್ಟೆಲ್‌ ಪ್ರಕಾರ ನಿಂಬೆಹಣ್ಣಿನ ತುಳು ರೂಪ ನಾರಂಗಾಯ್‌; ಇದು ಸರಿಯೋ ಅಲ್ಲವೋ, ನನಗಿಂತ ನಿಮಗೆ ಚೆನ್ನಾಗಿ ತಿಳಿದಿರುತ್ತದೆ.

- ಹಂ.ಕ. ಕೃಷ್ಣಪ್ರಿಯ ; ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾ

* *

ಈ ವಾರದ ವಿಚಿತ್ರಾನ್ನದ ‘ತಂದಿಹೆ ಕೊಡಗಿನ ಕಿತ್ತೀಳೆ’ ಓದಿದೆ. ಬಹಳ ಸ್ವಾರಸ್ಯಕರ, ಉಪಯುಕ್ತವಾದ ಮಾಹಿತಿ ಒದಗಿಸಿಕೊಟ್ಟಿದ್ದೀರಿ. ಧನ್ಯವಾದಗಳು. ಬೇಸರದ ಸಂಗತಿ ಎಂದರೆ ಜಾಣ್ಮೆಯ ಲೆಕ್ಕ ಉತ್ತರಿಸಲು ನನ್ನಿಂದ ಆಗದುದಕ್ಕಾಗಿ. ಉತ್ತರಕ್ಕಾಗಿ ಕಾಯುತ್ತಿದ್ದೇನೆ.

ಹಾಗೆಯೆ ನೀವು (ವಿಚಿತ್ರಾನ್ನದ ಅಂಕಣಕಾರರು) ರವಿ ಬೆಳಗೆರೆ (ಹಾಯ್‌ ಬೆಂಗಳೂರು ಪತ್ರಿಕೆಯ ಸಂಪಾದಕರು) ಯವರಿಗೆ ಬರೆದ ಪತ್ರ ಓದಿದೆ. ನೀವಿಬ್ಬರೂ ಕನ್ನಡಿಗರು. ಒಬ್ಬ ಕನ್ನಡಿಗ ಇನ್ನೊಬ್ಬ ಕನ್ನಡಿಗನಿಗೆ, ಅದೂ ಕನ್ನಡ ಬರವಣಿಗೆಗಾರರು ವ್ಯವಹರಿಸಲು ಇಂಗ್ಲೀಷ್‌ ಬಳಸಿದ್ದೀರಿ. ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಕನ್ನಡದ ಬರಹ ಬಳಸಬಹುದಾಗಿತ್ತು, ಅಲ್ಲವೆ ? ಮುಂದೆ ಇಂತಹ ಅಚಾತುರ್ಯವಾಗದಂತೆ ನೋಡಿಕೊಳ್ಳಿ. ಈತರಹ ಕನ್ನಡ ಭಾಷೆಯವರು ಮಾತ್ರ ಮಾಡುತ್ತಾರೆ. ನಾನು ಕಂಪ್ಯೂಟರ್‌ನಲ್ಲಿ ಕನ್ನಡದಲ್ಲಿ ಬರೆಯಲು ಬೇರೆಯವರನ್ನು ಅವಲಂಬಿಸಬೇಕು. ಬರಹ ತಂತ್ರಾಂಶ ನನಗೆ ಸರಿಯಾಗಿ ತಿಳಿಯದು. ಅದ್ದರಿಂದ ಇನ್ನೂ ಉಪಯೋಗಿಸಲು ಆಗುತ್ತಿಲ್ಲ. ಇಲ್ಲಿ ಅಮೆರಿಕದಲ್ಲಿ ಮಗಳ ಮನೆಯಲ್ಲಿರುವಾಗ ಗಣಕಯಂತ್ರ ಇರುವುದರಿಂದ ಪ್ರತಿದಿನ ಉಪಯೋಗಿಸುತ್ತಿದ್ದೇನೆ. ಬೆಂಗಳೂರಿಗೆ ಹಿಂದಿರುಗಿದಮೇಲೆ ಹೊರಗಡೆ (ಸೈಬರ್‌ ಕೆಫೆಗೆ) ಹೋಗಿ ನಿಮ್ಮೊಡನೆ ಪತ್ರವ್ಯವಹಾರ ಮಾಡಬೇಕು!

ಮತ್ತೊಮ್ಮೆ ನಮಸ್ಕಾರಗಳು,

- ಸನತ್ಕುಮಾರ್‌ ಗುಪ್ತಾ ; ಟೆಕ್ಸಾಸ್‌

ENGLISH SECTION

I read the recent vichitranna on Oranges. Innu joraagi haakbekittu punch annsatte..

It is a fact that Prof. Emil Fisher(considered father of carbohydrate chemistry) recommended people to have one orange a day for 3 months to get rid of all the common diseases for life. Even today Germans prefer to have just oranges when they have cold. Surprising enough? Surprised also to know how can a man who worked on carbohydrate make a statement on vitamin C ? The reason is simple. Vitamin C is a carbohydrate too! It is called ascorbic acid, and the name comes from anti scurvy (used for the treatment of the disease scurvy).

I learnt in Karnataka these orange plants are grown randomly to give shade and also to retain a small percentage of water in soil of coffee plantations. I am not sure how far it is true but since Kodagu is also known for its coffee plantation, I can believe it.

- Kyatanahalli Nagabhushana: Germany

ತಂದಿಹೆ ಕೊಡಗಿನ ಕಿತ್ತೀಳೆ...

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more