• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಬ್ಲಿಕ್‌ ರೋಡಿನಲಿ ಜಿಂಕೆ ಬಂದೈತಲ್ಲೋ...!

By Staff
|
Srivathsa Joshi *ಶ್ರೀವತ್ಸ ಜೋಶಿ

A Deer happily walking on a Roadನಿಂಬೆಹಣ್ಣಿನಂಥ ಹುಡುಗಿ ಬಂತು ನೋಡು... ರವಿಚಂದ್ರನ್‌ ‘ಪ್ರೇಮಲೋಕ’ದಲ್ಲಿ ಜೂಹಿ ಚಾವ್ಲಾಳ ಮೇಲೆ ಚಿತ್ರೀಕರಿಸಿದ ಹಾಡಿನಲ್ಲಿ ಬರುವ ಸಾಲು ಈ ವಾರದ ವಿಚಿತ್ರಾನ್ನದ ಶೀರ್ಷಿಕೆ. ಆದರೆ ವಿಷಯ ಮಾತ್ರ ರವಿಚಂದ್ರನ್‌, ಜೂಹಿಚಾವ್ಲಾ, ಪ್ರೇಮಲೋಕ - ಇದಾವುದಕ್ಕೂ ಸಂಬಂಧಿಸಿದ್ದಲ್ಲ. ಜಿಂಕೆ - ಅದೂ ಅಮೆರಿಕದ ಜಿಂಕೆ - ಈ ವಾರದ ಟಾಪಿಕ್‌!

ಮಾರೀಚ ಬಂಗಾರದ ಜಿಂಕೆಯಾಗಿ (ಮಾರೀಚ ಒಬ್ಬ ‘ಮಹಾ ರಿಚ್‌’ ಆಗಿದ್ದರಿಂದ ಬಂಗಾರದ ಜಿಂಕೆಯಾಗಿ ಪರಿವರ್ತನೆಯಾಗುವುದು ಅವನಿಗೆ ಸಾಧ್ಯವಾಗಿರಬಹುದಲ್ಲವೇ?) ಸೀತೆಯ ಮುಂದೆ ಸುಳಿದು, ಸೀತೆ ಅದನ್ನು ತಂದುಕೊಡುವಂತೆ ರಾಮನನ್ನು ಕೇಳಿ, ರಾಮ ಅದನ್ನು ಹಿಂಬಾಲಿಸಿಕೊಂಡು ಹೋಗಿ ಅದೊಂದು ದೊಡ್ಡ ‘ರಾಮಾಯಣ’ ಆದದ್ದನ್ನು ನಾವೆಲ್ಲ ಓದಿದ್ದೇವೆ.

ಮಾರೀಚನಂತೆ ಮಾಯಾವಿ ವೇಷದಲ್ಲಿ ಅಲ್ಲವಾದರೂ ಜಿಂಕೆಗಳು ಆಗಾಗ ಕಾಣಿಸಿಕೊಳ್ಳುವುದಿದೆ ಅಮೆರಿಕದ ರಸ್ತೆಗಳಲ್ಲಿ ! ಅದರಲ್ಲೂ ಜನಸಾಂದ್ರತೆಯಿರದ ಉಪನಗರಗಳ, ಹೊರವಲಯದ ರಸ್ತೆಗಳಲ್ಲಿ ಕಾರು ಡ್ರೈವ್‌ ಮಾಡುತ್ತಿರಬೇಕಾದರೆ ಹಠಾತ್ತಾಗಿ ಹರಿಣಗಳು ಬಂದು ಡಿಕ್ಕಿ ಹೊಡೆಯುವುದು ಸರ್ವೇ ಸಾಮಾನ್ಯ ಸಂಗತಿ.

Deers Crossing (XING) Signboardಪ್ರತಿ ವರ್ಷ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಏನಿಲ್ಲೆಂದರೂ 15 ಲಕ್ಷದಷ್ಟು ‘ಡೀರ್‌-ಕಾರ್‌ ಕೊಲಿಷನ್‌ ಕೇಸ್‌’ಗಳು ದಾಖಲಾಗುತ್ತವೆ. 30000 ಜನ ಗಾಯಗೊಳ್ಳುತ್ತಾರೆ; ಸುಮಾರು 200ರಷ್ಟು ಜನ ಪ್ರಾಣಕಳೆದುಕೊಳ್ಳುತ್ತಾರೆ. 5 ರಿಂದ 10 ಲಕ್ಷದಷ್ಟು ಜಿಂಕೆಗಳು ಸಾವಿಗೀಡಾಗುತ್ತವೆ. ಅಮೆರಿಕದ ಉತ್ತರ/ ಈಶಾನ್ಯ ರಾಜ್ಯಗಳಲ್ಲಿ ಜಿಂಕೆಗಳ ಹಾವಳಿ ಜಾಸ್ತಿ. ಮಿಷಿಗನ್‌ ರಾಜ್ಯದಲ್ಲಂತೂ ಸರಾಸರಿಯಗಿ ಪ್ರತಿ ಎಂಟು ನಿಮಿಷಕ್ಕೊಂದರಂತೆ ಜಿಂಕೆ-ಕಾರು ಡಿಕ್ಕಿ ಸಂಭವಿಸುತ್ತದೆ - ಬಹುತೇಕವಾಗಿ ಜಿಂಕೆಗೆ/ಕಾರಿಗೆ/ಕಾರುಚಾಲಕನಿಗೆ ಅಥವಾ ಮೂರಕ್ಕೂ ಅಪಾಯಕಾರಿಯಾಗಿ ! ಕಳೆದ ವರ್ಷ ಡೆಟ್ರಾಯಿಟ್‌ ಕನ್ನಡ ಸಮ್ಮೇಳನಕ್ಕೆ ವಾಷಿಂಗ್‌ಟನ್‌ ಡಿಸಿಯಿಂದ ಡ್ರೈವ್‌ ಮಾಡಿಕೊಂಡು ಹೋದಾಗ ನಾನು ಎಷ್ಟೋ ಕಡೆ ಹೈವೇಯ ಮೇಲೆ ಜಿಂಕೆ ಸತ್ತು ಬಿದ್ದಿರುವುದನ್ನು ನೋಡಿದ್ದೇನೆ. ಹಾಗಾಗಿ ಈ ಅಂಕಿಅಂಶಗಳನ್ನು ನಾನು ನಂಬುತ್ತೇನೆ.

ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ (ಜಿಂಕೆಗಳ ಸಂತಾನೋತ್ಪತ್ತಿಯ ಕಾಲ) ಸಹಜವಾಗಿಯೇ ಜಿಂಕೆಗಳ ಚಟುವಟಿಕೆ ಜಾಸ್ತಿಯಿದ್ದು ಅವು ರಸ್ತೆಗಳ ಮೇಲಿಳಿಯುವ ಸಾಧ್ಯತೆ ಹೆಚ್ಚು. ವಸಂತಕಾಲದಲ್ಲಿ ಹುಲ್ಲು ಚಿಗುರಿದಾಗ ಮತ್ತೆ ಜಿಂಕೆಗಳು ಪ್ರತ್ಯಕ್ಷವಾಗುತ್ತವೆ! ಜಿಂಕೆಗಳ ಉಪಟಳದ ಬಗ್ಗೆ ಎಲ್ಲ ರಾಜ್ಯಗಳೂ ಎಷ್ಟು ‘ಪಬ್ಲಿಕ್‌ ಅವೇರ್‌ನೆಸ್‌’ ಮೂಡಿಸಿದರೂ ಅಪಘಾತಗಳನ್ನು ತಪ್ಪಿಸುವುದು ಸಾಧ್ಯವಾಗುತ್ತಿಲ್ಲ. ಜಿಂಕೆಗಳ ನಿಯಂತ್ರಣಕ್ಕೆ ವಿವಿಧ ರಾಜ್ಯಗಳಲ್ಲಿ, ರಸ್ತೆಬದಿಗೆ ಬೇಲಿಗಳು, ಪ್ರತಿಫಲನ ಕಂಬಗಳು, ಜಿಂಕೆಗಳ ಹಿಂಡು ಹೆಚ್ಚಾಗಿರುವಲ್ಲಿ ರಸ್ತೆಯ ಕೆಳಗೆ ಸುರಂಗ ಅಥವಾ ಮೇಲ್ಸೇತುವೆ (ಜಿಂಕೆಗಳಿಗಾಗಿ) - ಇತ್ಯಾದಿ ಎಷ್ಟೋ ಕ್ರಮಗಳನ್ನು ಕೈಗೊಳ್ಳಲಾಗಿದೆಯಾದರೂ ಸಾವಿಗೀಡಾಗುವ ಜಿಂಕೆಗಳ ಸಂಖ್ಯೆ ಕಡಿಮೆಯಾಗಿಲ್ಲ.

Beware of Deers for Next 2 Miles..ಹೈವೇಗಳ ಪಕ್ಕದಲ್ಲಿ ‘ಮುಂದಿನ 2 ಮೈಲುಗಳ ಉದ್ದಕ್ಕೆ ಜಿಂಕೆಗಳು ರಸ್ತೆಮೇಲೆ ಬರಬಹುದು; ಜಾಗರೂಕತೆಯಿಂದಿರಿ!’ ಎಂದು ಅರ್ಥ ಬರುವ ಬೋರ್ಡ್‌ಗಳನ್ನು ಹಾಕಿರುತ್ತಾರೆ (ಚಿತ್ರವನ್ನು ನೋಡಿ). ನಮಗೇನೋ 2 ಮೈಲು ಎಂದರೆ ಎಲ್ಲಿಂದ ಎಲ್ಲಿಯವರೆಗೆ ಎಂಬ ಅಂದಾಜು ಇರುತ್ತದೆ; ಪಾಪ, ಜಿಂಕೆಗಳು ದೂರಮಾಪನ ಕಲಿತಿರುವುದಿಲ್ಲವಲ್ಲ ! ಎರಡು ಮೈಲುಗಳ ನಂತರವೂ ರಸ್ತೆ ದಾಟಬಾರದೆಂದು ಅವುಗಳಿಗೆ ಹೇಗೆ ಗೊತ್ತಾಗಬೇಕು? ಆದರೆ ಕೆಲವು ಜಿಂಕೆಗಳು ‘ಎಜುಕೇಟೆಡ್‌’ ಆಗಿರುವವೋ ಏನೋ, ಈ ಚಿತ್ರದಲ್ಲಿ ನೋಡಿ - ‘ಜಿಂಕೆಗಳ ಕ್ರಾಸಿಂಗ್‌’ ಬೋರ್ಡ್‌ನ ಹತ್ತಿರವೇ ರಸ್ತೆ ದಾಟುವ ಸುಭಗತನವನ್ನು ಪ್ರದರ್ಶಿಸಿವೆ!

ಜಿಂಕೆ ಸಾಮ್ರಾಜ್ಯದಲ್ಲಿ ಡ್ರೈವಿಂಗ್‌ ಬಗ್ಗೆ ಅಧಿಕಾರಿಗಳು ಕೊಡುವ ಕೆಲವು ಟಿಪ್ಸ್‌ :

  • ಬೆಳ್ಳಂಬೆಳಗ್ಗೆ ಮತ್ತು ಮುಸ್ಸಂಜೆಯ ಅವಧಿ ಹೆಚ್ಚು ಅಪಾಯಕಾರಿ.
  • ಜಿಂಕೆಗಳು ರಸ್ತೆಯಲ್ಲಿರಬಹುದೆಂಬ ಮಾನಸಿಕ ಸಿದ್ಧತೆ ಮತ್ತು ಜಾಗ್ರತೆ ಸದಾ ನಿಮ್ಮಲ್ಲಿರಲಿ.
  • ಒಂದು ಜಿಂಕೆಯನ್ನು ನೋಡಿದೊಡನೇ ವೇಗ ತಗ್ಗಿಸಿ. ಹತ್ತಿರದಲ್ಲೆ ಇನ್ನೂ ಕೆಲವು ಜಿಂಕೆಗಳಿರುವ ಸಂಭವ ಹೆಚ್ಚು.
  • ಹೈ-ಬೀಮ್‌ ಹೆಡ್‌ಲೈಟ್ಸ್‌ ಉಪಯೋಗಿಸಿ.
  • ಒಂದೊಮ್ಮೆ ಜಿಂಕೆ ನಿಮ್ಮ ಕಾರಿಗೆ ಇನ್ನೇನು ಅಪ್ಪಳಿಸಿಯೇ ಬಿಡುತ್ತದೆ ಎಂದಾದರೆ ಸಡನ್ನಾಗಿ ಸ್ಟೀರಿಂಗ್‌ ತಿರುಗಿಸಿ ಜಿಂಕೆಯನ್ನು ತಪ್ಪಿಸಲು ಹೋಗುವುದಕ್ಕಿಂತ ಅದಕ್ಕೆ ಡಿಕ್ಕಿಹೊಡೆಯುವುದೇ ಸುರಕ್ಷಿತ - ಆಫ್‌ ಕೋರ್ಸ್‌ ಜಿಂಕೆಗಲ್ಲ, ನಮಗೆ :-(

ರಸ್ತೆಗಳ ಮೇಲೆ ಜಿಂಕೆಗಳು ಕಾಣಿಸುವುದಿರಲಿ, ಇಲ್ಲಿ ಮೇರಿಲ್ಯಾಂಡ್‌ ಪ್ರದೇಶದಲ್ಲಿ ಒಬ್ಬ ಮಹಿಳೆ ತನ್ನ ಅಪಾರ್ಟ್‌ಮೆಂಟ್‌ನೊಳಕ್ಕೇ ಒಂದು ಜಿಂಕೆ ಬಂದು ಅವಾಂತರ ಮಾಡಿದ ಘಟನೆಯನ್ನು ‘ವಾಷಿಂಗ್‌ಟನ್‌ ಪೋಸ್ಟ್‌’ ಓದುಗರೊಂದಿಗೆ ಹೃದಯಸ್ಪರ್ಶಿಯಾಗಿ ಹಂಚಿಕೊಂಡಿದ್ದರು. ಇಲ್ಲಿದೆ ಓದಿ, ಆ ಚಿತ್ರವನ್ನು ಮನದಲ್ಲೇ ಊಹಿಸಿ!

Deers Crossing the Road right next to Deer-Crossing SignMid-June 2002 had brought sweltering weather to Washington. As I eagerly unlocked my air-conditioned apartment in Bethesda, I glanced down: blood everywhere. Before I could form a coherent thought, I heard a noise. Standing in the middle of my living room was a fawn. We locked eyes for a moment, then the young deer leapt down the hall into my bedroom.

The apartment looked as if a butcher had slaughtered a large animal, then tangoed around on its entrails for a bit. Before I could catch my breath, the deer reappeared in the living room, and began running at the window, full speed, hurling its body into the glass. An ineffective frenzy outside my door ensued, involving my neighbors, my roommate and the police -- all of whom asked me, Are you sure its a deer? But nobody knew quite how to lead the frightened animal out the front door.

Finally, the deer, which had entered, and injured itself, by crashing through my bedroom window, exited the same way, fleeing back into Rock Creek Park. I still look for it when I visit there. Id like to see it again, healed and grown, but preferably, not in my living room.

- Elissa Petruzzi; Bethesda, Maryland

*

ಜಿಂಕೆಗಳ ಬಗ್ಗೆ ಇಷ್ಟೆಲ್ಲ ಓದಿದ ಮೇಲೆ, ನಿಮ್ಮ ಕನ್ನಡ ಶಬ್ದಭಂಡಾರದ ಪರೀಕ್ಷೆಗಾಗಿ ಒಂದು ಪ್ರಶ್ನೆ. ನಿಮಗೆಲ್ಲ ಗೊತ್ತೇ ಇದ್ದಂತೆ ಐಹಿಕ ವ್ಯಾಮೋಹ, ಸುಖ ಸಿಗುತ್ತದೆಂಬ ಭ್ರಮೆ ಇವೆಲ್ಲ ಒಂದು ಬಂಗಾರದ ಜಿಂಕೆಯಿದ್ದಂತೆ. ಸುಮ್ಮನೇ ಅವನ್ನರಸಿ ಎಲ್ಲೆಲ್ಲೋ ಹೋಗಿ ಕಷ್ಟಕ್ಕೆ ಸಿಲುಕುತ್ತೇವೆ. ಅದಿರಲಿ, ಪ್ರಶ್ನೆ ಏನೆಂದರೆ ಈ ರೀತಿಯ ಸುಖ ಸಂಪತ್ತಿನ ಭ್ರಮೆಗೆ, ‘ಮ’ ದಿಂದ ಆರಂಭವಾಗುವ ಒಂದು ಪದ ಮತ್ತು ‘ಮಾ’ ದಿಂದ ಆರಂಭವಾಗುವ ಒಂದು ಪದ ನಿಮಗೆ ಗೊತ್ತೇ? ಎರಡೂ ನಾಲ್ಕಕ್ಷರದವೇ! ಅನುಕ್ರಮವಾಗಿ ತ್ರೇತಾಯುಗದ ಮಾರೀಚ ಮತ್ತು ಕಲಿಯುಗದ ಸೀತಾರಾಮ (ಕನ್ನಡ ಚಲನಚಿತ್ರ ನಿರ್ದೇಶಕ ಟಿ.ಎನ್‌.ಸೀತಾರಾಂ) ನಿಮಗೆ ‘ಕ್ಲೂ’ ಆಗಿ ನೆರವಾಗಬಹುದು!

ಉತ್ತರವಾಗಿ ಆ ಎರಡು ಪದಗಳನ್ನು ವಿಳಾಸಕ್ಕೆ ಬರೆದು ಕಳಿಸಿ: srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more