• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋಹನ ಗಾನ, ಮಜ್ಜಿಗೆ ಪಾನ - ವಿಚಿತ್ರಾನ್ನ ಜೈತ್ರಯಾನ

By Staff
|

Srivathsa Joshiವಿಚಿತ್ರಾನ್ನದಲ್ಲಿ ನೀವು ಬರೆದ ನಿಮ್ಮ ಹಾಗೂ ಮೋಹನ ರಾಗದ ಸಂಬಂಧ ನನ್ನನ್ನು ನನ್ನ ಬಾಲ್ಯಕ್ಕೆ ಕರೆದೊಯ್ದಿತು. ಬಾಲ್ಯದಲ್ಲಿ ನನ್ನ ಸಂಗೀತಾಭ್ಯಾಸವೂ ಮೋಹನ (ಭೂಪ) ರಾಗದಲ್ಲಿಯೇ ಪ್ರಾರಂಭವಾಗಿ, ಅದೇ ರಾಗದಲ್ಲಿ ಮುಂದುವರೆದು ಮತ್ತೆ ಅದೇ ರಾಗದಲ್ಲಿಯೇ ಕೊನೆಯೂಗೊಂಡಿದ್ದು! ಎಷ್ಟೋ ವರ್ಷಗಳ ನಂತರ ಮತ್ತೆ ಸಂಗೀತ ಕಲಿಕೆಯನ್ನು ಬೇರೇ ರಾಗಗಳಿಂದ ಪ್ರಾರಂಭಿಸಿದ್ದರೂ, ಮೋಹನ ರಾಗದ ಸ,ರೆ,ಗ,ಪ,ಧ,ಸಾ ಸ,ಧ,ಪ,ಗ,ರೆ,ಸ ಮನಸ್ಸಿನಲ್ಲಿ ಉಳಿದಂತೆ ಬೇರೆ ರಾಗದ ಅವ. ಆರೋ. ಸ್ವರಗಳು ಮನದಲ್ಲಿ ನಿಂತಿಲ್ಲ. ನಿಮ್ಮ ಲೇಖನ ಓದಿ, ನನ್ನ ಬಾಲ್ಯದ ಮೋಹನ ರಾಗದ ಕಲಿಕೆಯು ನೆನಪಿಗೆ ಬಂತು. ಲೇಖನ ಚೆನ್ನಾಗಿದೆ.

ಮಜ್ಜಿಗೆ ವೃತ್ತಾಂತವೂ ನನಗೆ ತುಂಬಾ ಮೆಚ್ಚುಗೆಯಾಯ್ತು! ಸ್ವಾತಿ ನಕ್ಷತ್ರದ ಮಳೆಯ ಹನಿಗಳಿಂದ ಹೆಪ್ಪನ್ನು ನವೀಕರಿಸುವ ಮಾಹಿತಿ ಹಾಗೂ ಅದರ ವಿಧಾನ ನನಗೆ ಹೊಸತು; ಸ್ವಾರಸ್ಯಕರವಾಗಿವೆ. ಓದಿ ಖುಷಿಪಟ್ಟೆ. ‘ಕಲ್ಚರ್‌ಡ್‌’ ನ್ನು ಸುಸಂಸ್ಕೃತ ಎಂದು ವ್ಯಾಖ್ಯಾನಿಸಿದ್ದೂ ಇಷ್ಟವಾಯಿತು. ಮುಂದಿನ ರಂಜನೀಯ ಬರಹಗಳನ್ನು ಎದುರು ನೋಡುವೆ.

- ವಿದ್ಯಾ ಗದಗ್‌ಕರ್‌; ಡೇಟನ್‌, ಓಹಯಾ

* * *

ನಿಮ್ಮ ಲೇಖನದಲ್ಲಿ ಮೋಹನ-ಭೂಪ್‌ ರಾಗದ ಬಗ್ಗೆ ಒದಿದೊಡನೆ ಈ ವಿಚಾರವೊಂದು ಬಂದೇ ಬಿಟ್ಟಿತು:

ಗೋಪಾಲಕೃಷ್ಣ ಅಡಿಗರ ಕವಿತೆ ಹೀಗಿಲ್ಲ: ‘ಯಾವ ಭೂಪ ಮುರಳಿ ಕರೆದನೋ ದೂರ ತೀರಕೆ ನನ್ನನು....’! ಇವರು ಕರ್ನಾಟಕ ಸಂಗೀತಪ್ರಿಯರು. ಆದರೆ ಕುಮಾರ ವ್ಯಾಸನು ಹಿಂದುಸ್ತಾನಿ ಪ್ರಿಯನು, ಏಕೆಂದರೆ ಅಲ್ಲಲ್ಲಿ ‘.... ಭೂಪ ಕೇಳೆಂದ ।। ಭೂಪ ಕೇಳೈ ....’ ಎಂದಿದ್ದಾನೆ. ಆವಾಗಲೇ ಈ ರಾಗ ಬಹಳ ಪ್ರಸಿದ್ಧಿ ಪಡೆದಿತ್ತು, ಮತ್ತು ಅವನಿಗೆ ಬಹಳ ಇಷ್ಟವಿತ್ತು!

ಮಜ್ಜಿಗೆ ಪ್ರಸಂಗ ಚೆನ್ನಾಗಿತ್ತು. ದೊಡ್ಡ ಪ್ರಶ್ನೆ: ಮೊಸರಿನಿಂದ ಬೆಣ್ಣೆ ತೆಗೆದ ಮೇಲೆ ಸಿಗುವುದು ಮಜ್ಜಿಗೆ. ಇದರ ಹೆಸರು ‘ಬಟರ್‌ಲೆಸ್‌ ಮಿಲ್ಕ್‌’ ಎಂದು ಇರಬೇಕು. ‘ಬಟರ್‌ಮಿಲ್ಕ್‌’ ಹೇಗೆ ಸರಿ? ತಮಿಳಿನಲ್ಲಿ/ಮಲಯಾಳದಲ್ಲಿ ಮೋರ್‌, ತೆಲುಗಿನಲ್ಲಿ ಮಜ್ಜಿಗ, ತುಳುವಿನಲ್ಲಿ ಅಳೆ. ಸರ್ವಸಾಧಾರಣ ವಸ್ತುವಿಗೆ ಯಾಕೆ ಹೀಗೆ ಬೇರೆಬೇರೆ ಹೆಸರು? (ಎಲ್ಲ ಭಾಷೆಯಲ್ಲೂ ಪಾಲ್‌, ನೀರು ...). ಉತ್ತರ ಭಾರತದಲ್ಲಿ ಮಜ್ಜಿಗೆಗೆ ಏನೊಂದೂ ಮರ್ಯಾದೆ ಇಲ್ಲ. ಏಕೆಂದರೆ ಅದರಲ್ಲೇನೂ ಸತ್ವ ಇಲ್ಲ, ಮಧ್ಯಮ ವರ್ಗದವರಿಗೆ ಬೇಡವಾದದ್ದು, ಬಡವರ ಪಾನೀಯ ಎಂಬ ಧೋರಣೆ. ಲಸ್ಸಿ ಕೂಡಾ ಮಾಡುವುದು ಮೊಸರಿನಿಂದ. ನಮ್ಮ ಅಜ್ಜಿ ಮನೆಯಲ್ಲಿ ಕಡಗೋಲು ಇರಲಿಲ್ಲ. ಬಿದಿರಿನ ಒಂದು ದೊಡ್ಡ ಅಂಡೆ (2.5 ಅಡಿ ಎತ್ತರ, 8 ಇಂಚು ವ್ಯಾಸ) ಯಲ್ಲಿ ಮೊಸರು ಹಾಕಿ, ಹಿಡಿಕೆ ಹಿಡಿದು, ಒಂದು ಅಡಕೆಮರದ ಕೋಲಿಗೆ ಕೊನೆಯಲ್ಲಿ ಲಂಬಕೋನದಲ್ಲಿ ಸಿಕ್ಕಿಸಿದ ತೆಂಗಿನ ಚಿಪ್ಪಿನಿಂದ ಪಿಸ್ಟನ್‌ನಂತೆ ಬಡಿಯುವುದು. ಒಳ್ಳೆ ಎಕ್ಸರ್ಸೈಜ್‌! ನಿಂತುಕೊಂಡೇ ಮಾಡುವ ಕೆಲಸ, 100% ಪ್ರಾಕೃತಿಕ (ಬಿದಿರು, ಅಡಕೆ ಕೋಲು, ತೆಂಗಿನ ಚಿಪ್ಪು) ನಮ್ಮ ಮನೆಯಲ್ಲಿ ಸಜ್ಜಿಗೆ ಕಂಪ್ಲೆಂಟ್‌ - ಮಜ್ಜಿಗೆ ಕಥೆ ಬಂದಿದೆ, ನನ್ನ ಕಥೆ ಎಲ್ಲಿ?

- ದಿನೇಶ್‌ ನೆಟ್ಟರ್‌; ನ್ಯೂಜೆರ್ಸಿ

* * *

ಐವತ್ತೊಂದನೇ ವಿಚಿತ್ರಾನ್ನ ಬಲು ಸವಿಯಾಗಿತ್ತು. ಮೊದಲಬಾರಿಗೆ ಮೋಹನ ರಾಗದ ಬಗ್ಗೆ ತಿಳಿಯಿತು. ‘ವರವೀಣಾ ಮೃದುಪಾಣೀ ...’ ಮೋಹನ ರಾಗದಲ್ಲಿದೆ ಎಂದು ಮೊತ್ತಮೊದಲಿಗೆಗೆ ನನ್ನ ಅರಿವಿಗೆ ಬಂತು. ಚಿಕ್ಕಂದಿನಲ್ಲಿ ನನ್ನ ಸಂಗೀತ ಪಾಠ ಮೇಲಿನ ಕೀರ್ತನೆಯಾಂದಿಗೆ ಕೊನೆಗೊಂಡಿತು. ‘ಸಂಗೀತ ಕಲಿತಿಲ್ಲ’ ಎಂಬ ಚಿಂತೆ ನನ್ನನ್ನು ಬಹುವಾಗಿ ಕಾಡದಿದ್ದರೂ ಈಗ ‘ಮೋಹನ ರಾಗದವರೆಗೆ ಕಲಿತಿದ್ದೇನೆ’ ಎಂದು ಜಂಭ ಕೊಚ್ಚಿಕೊಳ್ಳಬಹುದಲ್ಲವೇ? ಇದಕ್ಕೋಸ್ಕರ ನಿಮಗೆ ವಂದನೆ. ಆಡು ಮುಟ್ಟದ ಸೊಪ್ಪಿಲ್ಲ - ಶ್ರೀವತ್ಸ ಜೋಶಿ ಮೇಯದ ಹೊಲ(= ಫೀಲ್ಡ್‌) ಇಲ್ಲ?

ವಿಚಿತ್ರಾನ್ನದ ಜತೆಗೇ ಬಾಯಾರಿದವಗೆ ಮಜ್ಜಿಗೆ ಕೂಡ ಕೊಟ್ಟು ಸತ್ಕರಿಸಿದಿರಿ. ವಿಚಿತ್ರಾನ್ನ ದಾತೋ ಸುಖೀ ಭವ! ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಅಲ್ಲದೇ, ಇನ್ನೊಂದು ಗಾದೆ ಇದೆ ನೋಡಿ: ‘ಹೆಸರು ಕ್ಷೀರಸಾಗರ ಭಟ್ಟ - ಮನೆಯಲ್ಲಿ ಮಜ್ಜಿಗೆಗೂ ತತ್ವಾರ...’!

- ಎಸ್‌ ಎಂ ಪೆಜತ್ತಾಯ; ಬೆಂಗಳೂರು

* * *

ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ ರಾಗದ ಬಗ್ಗೆ ಬರೆದಿರುವ ನಿಮಗೆ ಅನೇಕ ಧನ್ಯವಾದಗಳು. ಮೋಹನ ರಾಗವನ್ನು ಅಳವಡಿಸಿಕೊಂಡಿರುವ ಅನೇಕ ಗೀತೆಗಳ ಬಗ್ಗೆ ತುಂಬ ಚೆನ್ನಾಗಿ ಬರೆದಿದ್ದೀರಿ. ಅಂದಹಾಗೆ, ನಿಮಗೆ ಗೊತ್ತಿರಬಹುದು, ನಮ್ಮ ಚಿತ್ರಗೀತೆಗಳಲ್ಲಿ, ಇನ್ನೂ ಒಂದು ರಾಗದ ಹಾಡುಗಳು ಬಹಳ ಜನಪ್ರಿಯವಾಗಿವೆ. ಅದು ‘ಶಿವರಂಜನಿ’. ಈ ರಾಗವನ್ನು ಅಳವಡಿಸಿರುವ ಬಹುತೇಕ ಎಲ್ಲ ಹಾಡುಗಳು ಅಪಾರ ಜನಪ್ರಿಯತೆ ಗಳಿಸಿವೆ. ರಾಜ್‌ಕಪೂರ್‌ನಿಂದ ಹಿಡಿದು ಈಗಿನವರೂ ಕೂಡ ಶಿವರಂಜನಿಯ ಹಿಂದೆ ಬಿದ್ದಿದ್ದಾರೆ - ಈ ರಾಗದ ಮಹಾತ್ಮೆಯೇ ಅಂಥದು. ‘ಜಾನೆ ಕಹಾಂ ಗಯೆ ವೊ ದಿನ್‌...’, ‘ಜೀನಾ ಯಹಾಂ ಮರ್‌ನಾ ಯಹಾಂ...’ ಮುಂತಾದ ಅನೇಕ ರಾಜ್‌ಕಪೂರ್‌ ಗೀತೆಗಳು, ‘ತೆರೆ ಮೆರೆ ಬೀಚ್‌ ಮೆಂ... ’(ಏಕ್‌ ದುಜೆ ಕೆ ಲಿಯೆ), ‘ಮೇರೆ ನೈನಾ ಸಾವನ್‌ ಭಾದೋಂ...’ (ಮೆಹಬೂಬ್‌), ಕನ್ನಡದಲ್ಲಿ ‘ನೀ ಮೀಟಿದ ನೆನಪೆಲ್ಲವು...’(ನೀ ಬರೆದ ಕಾದಂಬರಿ), ‘ಶಿಲೆಗಳು ಸಂಗೀತವ ಹಾಡಿವೆ...’ (ರಥಸಪ್ತಮಿ) ಇತ್ಯಾದಿ. ಇಲ್ಲಿ ಒಂದು ಗಮನಿಸಬೇಕಾದ ಅಂಶವೆಂದರೆ, ಈ ಎಲ್ಲ ಹಾಡುಗಳಲ್ಲೂ ಒಂದು ರೀತಿ ನೋವನ್ನು ವ್ಯಕ್ತಪಡಿಸುವ ಧಾಟಿ ಇದೆ. ಅದಕ್ಕೆ ಈ ರಾಗವು ನಿರಾಯಾಸವಾಗಿ ಬಳಕೆಯಾಗುವುದು. ನೋವಿನ ಹಾಡೆಂದರೆ ಸಾಕು, ಶಿವರಂಜನಿಯ ಮೊರೆಹೊಕ್ಕರೆ, ಮಿಕ್ಕಿದ್ದೆಲ್ಲವನ್ನೂ ಅದೇ ನೋಡಿಕೊಳ್ಳುತ್ತದೆ. ಹೀಗೆಯೇ ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಅನೇಕ ರಾಗಗಳಿಗೂ ತಮ್ಮ ಹೆಸರಿನಂತೆಯೇ ಅನೇಕ ಮಹಿಮೆಗಳಿವೆ. ಉದಾಹರಣೆಗೆ ಅಮೃತವರ್ಷಿಣಿ, ದರ್ಬಾರ್‌, ಕಲ್ಯಾಣಿ ಇತ್ಯಾದಿ. ಒಂದೊಂದು ರಾಗಕ್ಕೂ ತನ್ನದೇ ಅದ ಒಂದು ರಸ ಅಥವಾ ಭಾವನೆ ಇದೆ ಅಲ್ಲವೆ? ಇವೆಲ್ಲ ನಿಜಕ್ಕೂ ಅದ್ಭುತ ಅಲ್ಲವೆ? ವಿಪರ್ಯಾಸವೆಂದರೆ, ಇದರಲ್ಲೆಲ್ಲ ತಿಳಿಯುವುದು ನಮಗೆ ಬೇಕಾದಷ್ಟಿದೆ! ಇನ್ನು ಸಾಮಾನ್ಯ ಜನರಿಗೆ, ನಮ್ಮ ನಾಡಿನಾಚೆಯ ಜನರಿಗೆ ಇವೆಲ್ಲ ತಿಳಿಯುವುದು ಹೇಗೆ? ಯಾವಾಗ?

- ಚೈತನ್ಯ ರಾಮ್‌; ಬೆಂಗಳೂರು

* * *

ಮಜ್ಜಿಗೆ ಲೇಖನ ಚೆನ್ನಾಗಿ ಮೂಡಿಬಂದಿದೆ. ನನಗೆ ತಿಳಿದ ಕೆಲವು ಮಜ್ಜಿಗೆ ಉಲ್ಲೇಖದ ಗಾದೆಗಳು ಇಂತಿವೆ:

1) ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ...

2) ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ...

3) ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ - ಕೆಡೊಲ್ಲ...

- ಕಿರಣ್‌; ಡಬ್ಲಿನ್‌, ಐರ್‌ಲ್ಯಾಂಡ್‌

* * *

ನಿಮ್ಮ ಮಜ್ಜಿಗೆ ಪುರಾಣ ಛಲೋ ಅದೆ! ‘ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ’ ಎಂಬುದು ನಿಮ್ಮ ಇಂಗಿತ. ಆದರೆ, ನನಗೆ ತಕ್ಷಣ ಹೊಳೆದದ್ದು, ‘ಅಂಕೆಯಲ್ಲಿಟ್ಟ ಹೆಣ್ಣು, ಮಜ್ಜಿಗೆಯಲ್ಲಿಟ್ಟ ಬೆಣ್ಣೆ, ಎಂದಿಗೂ ಕೆಡುವುದಿಲ್ಲ’!

- ಡಾ। ಮೈ.ಶ್ರೀ.ನಟರಾಜ; ಗೈಥರ್ಸ್‌ಬರ್ಗ್‌, ಮೇರಿಲ್ಯಾಂಡ್‌

* * *

ನಾನು ಪ್ರತಿದಿನವೂ ದಟ್ಸ್‌ಕನ್ನಡ ಓದುವವರಲ್ಲಿ ಒಬ್ಬಳು. ನಿಮ್ಮ ಮೋಹನರಾಗದ ಚಿತ್ರಗೀತೆಗಳು ಮತ್ತು ಮಜ್ಜಿಗೆಯ ಬಗ್ಗೆ ಲೇಖನ ಚೆನ್ನಾಗಿವೆ. ನೀವು ಸಾಧ್ಯವಾದರೆ ಇನ್ನೂ ಬೇರೆಬೇರೆ ರಾಗದ ಚಿತ್ರಗೀತೆಗಳು ತಿಳಿದಿದ್ದರೆ ಬರೆಯಿರಿ. ನಾನು ಸ್ವಲ್ಪ ಸಂಗೀತ ತಿಳಿದಿದ್ದೇನೆ. ಇನ್ನು ಮಜ್ಜಿಗೆಯ ಗಾದೆಮಾತು ನನಗೆ ನೆನಪಾಗಲಿಲ್ಲ, ನೀವೆ ತಿಳಿಸಿ.

- ಗಾಯಿತ್ರಿ ಶೇಷಾಚಲ; ಲಾಸ್‌ ಏಂಜಲೀಸ್‌

* * *

ಮಜ್ಜಿಗೆ ಬರಹ ಮಜಾ ಕೊಟ್ಟಿತು. ಇಲ್ಲಿ ಜಪಾನಿನಲ್ಲಿ ಹಾಲಿನ ಡಬ್ಬಕ್ಕೂ, ಮಜ್ಜಿಗೆ ಡಬ್ಬಕ್ಕೂ ವ್ಯತ್ಯಾಸವೇ ತಿಳಿಯುವುದಿಲ್ಲ (ಭಾಷೆ ಬೇರೆ ಬರುವುದಿಲ್ಲ). ಹೊಸದಾಗಿ ಬಂದ ಬಹಳ ಮಂದಿ ಮಜ್ಜಿಗೆ ಖರೀದಿಸಿ, ಒಲೆಯ ಮೇಲಿಟ್ಟು ಕಾಯಿಸಿ, ಕಾಫಿ ಮಾಡುವ ಅಚಾತುರ್ಯ ನಡೆಯುತ್ತಲೇ ಇರುತ್ತದೆ. ಅಂದಹಾಗೆ, ನಿಮ್ಮ ಪ್ರಶ್ನೆಗೆ ಉತ್ತರ ‘ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ’.

- ಗುರುಪ್ರಸಾದ್‌; ಟೋಕಿಯಾ, ಜಪಾನ್‌

* * *

ಸ್ವಾತಿ ನಕ್ಷತ್ರದ ಸಮಯದಲ್ಲಿ ಹೆಪ್ಪಿನ ನವೀಕರಣದ ವಿಷಯ ನನಗೆ ಗೊತ್ತಿರಲಿಲ್ಲ. ಬಹಳ ಸ್ವಾರಸ್ಯವಾದ ವಿಚಾರ. ಚೆನ್ನಾಗಿ ಬರೆದಿದ್ದೀರಿ.

- ದತ್ತಾತ್ರಿ ರಾಮಣ್ಣ; ಕ್ಯಾಲಿಫೋರ್ನಿಯಾ

* * *

ತುಂಬ ದಿನಗಳಾಯ್ತು ನಿಮಗೆ ಪತ್ರ ಬರೆದು. ನಿಮ್ಮ ‘ಸುಸಂಕೃತ ಮಜ್ಜಿಗೆಯೂ ನಮ್ಮ ಸಂಸ್ಕೃತಿಯೂ’ ಓದಿದ ಮೇಲೆ ಬರೆಯಬೇಕೆನಿಸಿತು. ‘ಮಜ್ಜಿಗೆ’ ಎಂದ ತಕ್ಷಣ ನನಗೆ ‘ಹುಳಿಮಜ್ಜಿಗೆ’ಯೇ ನೆನಪಾಗುವುದು. ಆದರೂ ನಿಮ್ಮ ಲೇಖನ ಓದಿದಾಗ ಸಿಹಿ ಅನುಭವ ಆಯಿತು. ‘ಹೆಪ್ಪಿನ ನವೀಕರಣ’ ಅನ್ನುವ ಕಾನ್ಸೆಪ್ಟ್‌ ನನಗೆ ಗೊತ್ತೇ ಇರಲಿಲ್ಲ. ಐಡಿಯಾ ತುಂಬ ಚೆನ್ನಾಗಿದೆ. ನಮ್ಮ ಮನೆಯಲ್ಲಿ ಮಜ್ಜಿಗೆ ಬಗ್ಗೆ ಇನ್ನೊಂದು ರೂಢಿಯಿದೆ. ಅದೇನೆಂದರೆ ಮಜ್ಜಿಗೆ ‘ಲಕ್ಷ್ಮಿ’ಗೆ ಸಮಾನ, ಆದ್ದರಿಂದ ಯಾರಾದರೂ ಸಂಜೆಹೊತ್ತು ಮಜ್ಜಿಗೆ ಕೇಳಿದ್ರೆ ಬರೀ ಮಜ್ಜಿಗೆ ಕೊಡೋದಿಲ್ಲ, ಅದ್ರಲ್ಲಿ ಒಂದು ಕೆಂಪು ಮೆಣಸಿನಕಾಯಿಯ ಪೀಸ್‌ ಹಾಕಿ ಕೊಡ್ತಾರೆ. ಅಂದ್ರೆ ಬರೀ ಲಕ್ಷ್ಮಿ ಕೊಡಲ್ಲ ‘ಖಾರ ಲಕ್ಷ್ಮಿ’ ಕೊಡ್ತೀವಿ ಅಂತನೋ ಏನೊ ನನಗೆ ಗೊತ್ತಿಲ್ಲ :) ಅಮೆರಿಕದಲ್ಲೂ ಭಾರತೀಯರಿಗೆ ಮಜ್ಜಿಗೆ ಸೆಂಟಿಮೆಂಟ್ಸ್‌ ಇದೆ ಅಂತ ಗೊತ್ತಾಯ್ತು. ನಿಮ್ಮ ರಸಪಾಕ ಹೀಗೆಯೇ ಮುಂದುವರೆಯಲಿ!

- ಸಂಧ್ಯಾರಾಣಿ; ಬೆಂಗಳೂರು

* * *

ವಿಚಿತ್ರಾನ್ನದಲ್ಲಿ ಮಜ್ಜಿಗೆಯ ಬಗ್ಗೆ ಬರೆದ ವ್ಯಾಖ್ಯೆ ಬಹಳ ಚೆನ್ನಾಗಿದೆ. ಅಲ್ಲಿ ಕೊನೆಯಲ್ಲಿ ಬರೆದಿರುವ ಪದ್ಯದಂತೆಯೇ ಒಂದು ಪದ್ಯವನ್ನು ನಮ್ಮ ತಾತ (ನಮ್ಮ ಮನೆ ಮಕ್ಕಳಿಗೆಲ್ಲಾ ಸಂಸ್ಕೃತ ಹೇಳಿಕೊಟ್ಟ ಮೊದಲ ಗುರು) ಹೇಳುತ್ತಿದ್ದರು. ಅದು ನನಗೆ ಈಗ ಪೂರ್ತಿ ನೆನಪಿಲ್ಲವಾದರೂ ಇಲ್ಲಿ ಬರೆಯುತ್ತೇನೆ. ನನ್ನ ತಂಗಿ ಅಥವಾ ತಮ್ಮಂದಿರಿಗೆ ನೆನಪಿರಬಹುದೇನೋ.

ನಿಂಬೂರಸಸುಸಮ್ಯುಕ್ತಂ ಕಿಂಚಿಲ್ಲವಣಮಿಶ್ರಿತಂ ।

ತಕ್ರಂ ಶಕ್ರಸ್ಯ ದುರ್ಲಭಂ ।।

ಇದನ್ನು ಈಗ ಕನ್ನಡದಲ್ಲಿ ಹೀಗೆ ಬರೆಯಬಹುದು:

ನಿಂಬೇರಸವ ಕೂಡಿರ್ಪ ಸ್ವಲ್ಪವೇ ಉಪ್ಪನಿಟ್ಟಿಹ ।

ಕರಿಬೇವಿನ ಸೊಪ್ಪುಳ್ಳ (ಅಥವಾ ಹಸಿಶುಂಠಿಯುಳ್ಳಂಥ) ಮಜ್ಜಿಗಿಂದ್ರಂಗೂ ದುರ್ಲಭ ।।

ಇದನ್ನು ನಮ್ಮ ತಾತನವರು ಹಾಲು, ಮೊಸರು, ಬೆಣ್ಣೆ ಇಲ್ಲವಲ್ಲಾ ಎಂದು ಕೊರಗವುದಕ್ಕೆ ಹೇಳದೆ, ಮಜ್ಜಿಗೆಯೇ ಅವೆಲ್ಲಕ್ಕಿಂತ ಉತ್ಕೃಷ್ಟವಾದುದು ಎಂಬ ಅಭಿಪ್ರಾಯ ತರಿಸಿದ್ದರು. ಅಲ್ಲದೆ, ಮನೆಯಲ್ಲಿ ಮೊಸರಿದ್ದರೂ ರಾತ್ರಿಯ ಊಟದಲ್ಲಿ ಮಜ್ಜಿಗೆಯನ್ನವನ್ನೇ ತಿನ್ನಬೇಕೆಂಬ ಶಾಸ್ತ್ರ. ವೈದ್ಯರಾಗಿದ್ದ ನಮ್ಮ ತಂದೆ, ಅಕ್ಕರೆಯಿಂದ ವಿಶೇಷವಾಗಿ ನಮ್ಮಮ್ಮ ತೆಗೆದಿಟ್ಟು ಮೊಸರನ್ನು ರಾತ್ರಿಯೂಟಕ್ಕೆ ಹಾಕಿದರೆ, ಅದಕ್ಕೆ ತಟ್ಟೆಯಲ್ಲಿ ಸ್ವಲ್ಪ ನೀರನ್ನು ಸೇರಿಸಿಕೊಂಡೇ ತಿನ್ನುತ್ತಿದ್ದರು. ನಮಗೆ ಇದರ ಅರ್ಥ ತಿಳಿದದ್ದು ಅನೇಕ ವರ್ಷಗಳ ನಮ್ತರವೇ - ಕೊಲೆಸ್ಟ್ರಾಲ್‌ ಕಾನ್ಷಿಯಸ್‌ನೆಸ್‌ ಈಗ ಸುಮಾರು ಇಪ್ಪತ್ತು ವರ್ಷಗಳಿಂದ ತಾನೆ! ಇಷ್ಟೇ ಅಲ್ಲದೆ ಇದರಲ್ಲಿ ಮತ್ತೊಂದು ಅಂತರಾರ್ಥವನ್ನೂ ನಾವು ಕಾಣಬಹುದು. ಶ್ರೀಕೃಷ್ಣನು ಭಗವದ್ಗೀತೆಯ ಎರಡನೆಯ ಅಧ್ಯಾಯದ 38ನೆಯ ಪದ್ಯದಲ್ಲಿ ಅರ್ಜುನನಿಗೆ,

ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।

ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಂ ಅವಾಪ್ಸ್ಯಸಿ ।।

ಎಂದು ಹೇಳಿದ ತತ್ವವೂ ನೆನಪಿಗೆ ಬರುತ್ತದೆ. ಇದನ್ನು ಕನ್ನಡದಲ್ಲಿ

ಒಂದಾಗಿಸಿ ಸುಖಮ್‌ ದುಃಖಮ್‌ ಲಾಭಮ್‌ ನಷ್ಟಮ್‌ ಜಯಾಜಯಮ್‌ ।

ಪೋರಿಡಲ್‌ ತೊಡಗೈ ಪಾರ್ಥ ಪಾಪವನ್ನಂತು ಪೊಂದೆ ನೀ ।।

ಎಂದು ಭಾಷಾಂತರಿಸಬಹುದು. ಮೊಸರು ಬೆಣ್ಣೆ ಇತ್ಯಾದಿಗಳು ಸುಖವೇ ಇರಬಹುದು. ಮಜ್ಜಿಗೆಯು ದುಃಖವೇ ಇರಬಹುದು. ಆದರೂ ಮಜ್ಜಿಗೆಯು ಇಂದ್ರನಿಗೂ ದೊರಕದ ಸುಖವೇ ಎಂದು ಇದ್ದುದರಲ್ಲೇ ತೃಪ್ತಿಪಟ್ಟು ಜೀವನದಲ್ಲಿ ಸಂತೋಷವಾಗಿರಬೇಕೆಂಬ ಅಭಿಪ್ರಾಯ.

- ಹಂ. ಕ. ರಾಮಪ್ರಿಯನ್‌; ಮೇರಿಲ್ಯಾಂಡ್‌

* * *

ರಾವಣನ ಹೊಟ್ಟೆಗೆ ಕಾಸು ಮಜ್ಜಿಗೆಯನ್ನು ಸುರಿಯುವುದು ಗೊತ್ತಿದ್ದವರು:

- ಅಶೋಕ್‌ ಎಚ್‌ ಎಸ್‌; ಬೆಂಗಳೂರು

- ಮೀನಾ ಜೋಯಿಸ್‌; ಮೇರಿಲ್ಯಾಂಡ್‌

- ಸಿದ್ದರಾಮೇ ಗೌಡ; ಊರು?

- ಶೇಷಾದ್ರಿವಾಸು ಚಂದ್ರಶೇಖರ್‌; ನ್ಯೂಜೆರ್ಸಿ

- ಗಣೇಶ್‌; ಊರು?

* * *

ಹೇಗಿದ್ದೀರಿ ? ನಾವು ಚೆನ್ನಾಗಿ ಇದ್ದೀವಿ. ನಾವು ಮೊನ್ನೆ ಚಿಕ್ಕದೊಂದು ಟ್ರಿಪ್‌ ಮಾಡಿ ಬಂದ್ವಿ. ಹೊರನಾಡು, ಶೃಂಗೇರಿ, ಕೊಲ್ಲೂರು, ಉಡುಪಿ, ಮರವಂತೆ(ಬೀಚ್‌) ಹೋಗಿ ಬಂದ್ವಿ. ಛಲೊ ಆತು ಟೂರ್‌. ನಾವು ಹೆಬ್ರಿ ಮತ್ತು ಉಡುಪಿಯಲ್ಲಿ ಬನ್ಸ್‌ (ಬೇಕರಿಯ ಬನ್‌ ಅಲ್ಲ) ತಿಂದ್ವಿ, ತುಂಬ ಹಿಡಿಸ್ತು. ಹಾಗೆ ಸುರ್ನೋಳಿ ದೋಸೆ ಕೇಳಿದ್ವಿ, ಇರ್ಲಿಲ್ಲ.

ನನ್ನಾಕೆ ಮನೇಲಿ ಬನ್ಸ್‌ ಪ್ರಯೋಗ ಮಾಡ್ಬೇಕು ಅಂತಿದ್ದಾಳೆ...

- ಶಿವಾನಂದ್‌ ನಾಗನೂರ್‌; ಬೆಂಗಳೂರು

* * *

ದಟ್ಸ್‌ಕನ್ನಡ.ಕಾಂ ದಲ್ಲಿ ಚೌತಿಯ ಸಂದರ್ಭ ವಿಚಿತ್ರಾನ್ನದಲ್ಲಿ ಗಣೇಶ ಅಥರ್ವಶೀರ್ಷ ಮಂತ್ರ ನೋಡಿ ಖುಶಿ ಆಯ್ತು. ನಾನು ಸಹ ನಿತ್ಯವೂ ರುದ್ರ, ಸೂಕ್ತ, ಚಮಕ ಮಂತ್ರಗಳನ್ನು ಪಾರಾಯಣ ಮಾಡುತ್ತೇನೆ. ಬೆಂಗಳೂರಿನಲ್ಲಿ ಕೋರಮಂಗಲದಲ್ಲಿ ನಮ್ಮದೊಂದು ಸಂಘ ಇದೆ - ‘ಶಂಕರ ಸೇವಾ ಸಮಿತಿ’ ಎಂದು. ನಮ್ಮ ಸಂಘದ ಸದಸ್ಯರೆಲ್ಲ ನಿಮ್ಮ ಮಂತ್ರ ಓದಿ ಸಂತೋಷಪಟ್ಟಿದ್ದಾರೆ. ಯಾಕೆಂದರೆ ಹೊರ ದೇಶದಲ್ಲಿ ನಮ್ಮ ಮಂತ್ರಗಳನ್ನು, ನೆನಪಿಸಿಕೊಳ್ಳುವವರು ಇದ್ದಾರೆ ಎಂದು ಅವರಿಗೆ ಆಶ್ಚರ್ಯ ಅಗಿದೆ. ದೇವರು ನಿಮಗೆ ಒಳ್ಳೆಯದು ಮಾಡಲಿ. ನಾನು ಅಮೆರಿಕದಲ್ಲಿ ನನ್ನ ಮಗನ ಮನೆಗೆ ಈಗ ಬಂದಿದ್ದೇನೆ.

- ಶೇಷಾಚಲ; ಲಾಸ್‌ ಏಂಜಲೀಸ್‌

* * *

I read your "Manamohaka Raaga Mohana" article. Even though you say that you have less music knowledge/experience - but the info you have written on geethes/kritis on Mohana Raaga article indicates that you know lot more than what you think/say in it. It reminded me of the Sangitha Saritha show we did last year with playback singer Sangeetha katti. When Sangitha Katti had come last year, in our house concert we had done a " Karaoke Sangeetha Saritha FUSION Musical Night show". In this show we did medley songs based on both Carnatic and Hindustani Raagas (starting song in classical/Hindustani famous kritis like - NaguMomu which is Abheri Raaga in carnatic, Bheem palaas in Hindusthaani, then relating that raaga to semi classical or filmy song examples in various Indian languages and did a medley songs like hoovu cheluvella, Viraha, naTavara ganghaadhara etc., in kannada film songs, Telusa manasa in Telugu film song, even katharnaakh Hindi songs like thoo cheesu baDi hai mast mast etc., :-). It was a very nice interactive show we had with audience that focused to educate normal audience who may not have music knowledge at all, but could relate to day to day heard Desi film songs as to all of those songs are based on one or the other Raagas. So, towards the end of that show, audience started singing film songs they knew and could answer the questions on the related raagas by listening itself.

Mohana was also one of my favorite Raagas when I was a little girl learning carnatic music. My favorite kriti shudhaamayi, in bhakthi geethe of course mella mellane, in kannada filmsongs Baanallu neene..., in Tamil - ninnu kori etc., I also love singing film songs based on multiple raagas - like Saakashaathkaara, Kuhu Kuhu Bole koyaliya... etc. As a matter of fact I have written lyrics for Kuhu Kuhu song tune in Kannada since this song was not done in Kannada but in Hindi, Tamil, and Tulugu. Enough of my passion towards music!!. You are doing an "EXCELLENT ARTICLE(s)" work not only in Music but also in other areas. Keep it Up!!

- Vasantha Shashi; New Jersy

* * *

I read the Mohana raaga article. It is good and interesting.

- Ram Rao; Germantown, Maryland

* * *

Your article regarding Mohana raga attracted me since I am also a fan of that particular Raga. Its counter part in Hindustani is Bhopali. It is an evening Raga. Your article can be a bridge between the music experts and layman (like me) who are interested in the classical music.

Thanks for the nice article.

- D.M.Sagar; Netherlands

* * *

Nice subject for your vichithranna. heppina naveekaraNa was interesting as I never heard about that before. I remember my childhood days when my Mom used to churn the buttermilk. Things have changed in the past decade and she started using her Sumeeth mixie for the same job!

"rAvaNana hoTTege are kAsina majjige". uththara sariya? :-)

- Prakash Devendra; Dublin, Irelnad

* * *

I find your articles on Vichitranna very interesting to read. I guess the answer to this weeks riddle is "rAvanana hottege arekaasina majjige"

Out of curiosity, I googled on the web and found this website which has the list of proverbs in Kannada http://www.cs.toronto.edu/~kulki/kannada/gaade.html. On this site, I found couple of proverbs related to buttermilk 1. ankeyallidda heNNu, majjigeyallidda beNNe keDulla

2. Eechala maradha kelage kulithu majjige kudidha hage

I look forward for many more such articles in future.

- Suhas Subramanya; City?

* * *

I see packets of Smiths Butter milk in Vichitranna. I remember having consumed a lot of US made butter milk in the US. I remember the taste was quite agreeable. I preferred it to plain yogurt any day. Now, in India we have terta pack butter milk. We have tetra packed masala butter milk too! Yes! They are available at a cost. Now, because of Operation Flood milk is available in plenty every where. Even the so called Villagers ( who watch latest DVD movies before the city guys do) buy mother dairy milk and prepare Mosaru only. majjige is non- existent in rural area as the number of cattle have dwindled. Most of the Lalaneyaru ( young ladies ) of the villages do not know how to churn majjige. As a result old hags of my age eat lots of mosaru and end up with high cholesterol. Usual drink offered in the villages too is coffee, tea or a bottled drink ( Kolaahala ). No one has patience to make a glass of sherbet for the guest. The so called super fast guys offer a pint bottle of King Fisher - because, the latest Ad by the funky guy ( movie actor ) Upendra who shouts in every hoard in the villages - - " cool drink Yaake ? ".

Sitting in D. C. you should have some idea of our village life these days.

- Madhusudana Pejathaya; Bangalore

* * *

How could we forget "UDUPI OOTA WITH NEERUMAJJIGE"? Nice article. Yes, gaade is "RAVANANA HOTTEGE KASINA MAJJIGE"?

- Tripuranand Varamballi; Hongkong

* * *

It was niece reading your article on Buttermilk. In fact buttermilk is distributed on many fesitvals like Ramanavami in temples and which is also very good for health. My answer to your question is " Ravanasurana Hottegay Aru Kassina Maggige". Iam from Bangalore right now working in Canton in China for Aptech Worldwide Limited as a Business Consultant. I basically have an Engineering background but now Iam into Business Development and Marketing Consultation.I have travelled countries like South Korea, Kenya and now Iam in China from the past 1 year. My hobbies are surfing the internet, writing peoms in kannada, photography and reading philosophy,history and Culture. Iam also intersted in the current affairs around the world and India in paticular. Although Iam away from India for the past 3 years Iam always in touch with our motherland thru internet.I have made many kannada friends here in my city, we always get together and we always speak kannada at home and also outside. It is good to see people here have not forgotten their mother land and mother tongue. I enjoy reading articles in kannada on various websites.

- Satish Sagar; Canton, China

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more