• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿ ಏಕೆ ಭೂಮಿ ಮೇಲಿದೆ?

By Staff
|

‘ರಸವೇ ಜನನ, ವಿರಸ ಮರಣ, ಸಮರಸವೇ ಜೀವನ’’ ಎಂದು ಬದುಕಿನ ಸಾರವನ್ನೇ ಹೀರಿ ಮೂರು ಸಾಲಿನಲ್ಲಿ ಹಿಡಿದಿಟ್ಟಿರುವ, ‘ಒಲವೇ ನಮ್ಮ ಬದುಕು’ ಎಂದು ಹಾಡಿ ನಲಿದ ಬೇಂದ್ರೆಯವರದು. ಆಂಗ್ಲದ ಲವ್ವೇ ಇರಲಿ, ಕನ್ನಡದ ಒಲವೇ ಇರಲಿ, ಆ ಪದದ ಮಹತ್ವ ಅರ್ಥವಾಗಬೇಕಿದ್ದರೆ ಬೇಂದ್ರೆಯವರ ಈ ಕವನವನ್ನೊಮ್ಮೆ ಮೊದಲು ಓದಿಕೊಳ್ಳಬೇಕು. ಬೆವರ ಹನಿಯಲಿ, ಕಣ್ಣೀರಿನಲಿ, ನೆತ್ತರಿನಲಿ ಬರೆದ, ಚಿತ್ರಚಿತ್ರಾಕ್ಷರಗಳ ಲಕ್ಷ ಪತ್ರಗಳುಳ್ಳ ಒಲವೆಂಬ ಹೊತ್ತಿಗೆ ಓದಬಯಸಿದರೆ, ಅದು ಅಷ್ಟು ಸುಲಭವಾಗಿ ಸಿಕ್ಕೀತಾದರೂ ಹೇಗೆ?

ಒಲವೆಂಬ ಹೊತ್ತಿಗೆಯನೋದಬಯಸುತ ನೀನು

ಬೆಲೆ ಎಷ್ಟು ಎಂದು ಕೇಳುತಿಹೆ ಹುಚ್ಚ

ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆವೆಚ್ಚ!

ನನ್ನನ್ನು ಮೋಡಿ ಮಾಡಿದ ಚಿತ್ರಗೀತೆಗಳ ಸಾಲು ಬಹಳ ದೊಡ್ಡದಾಗಿದೆ. ಅದರಲ್ಲೊಂದು ಇದು. ಇವು ಚಿತ್ರಸಾಹಿತಿ ಹಂಸಲೇಖರ ಲೇಖನಿಯಿಂದ ಮೂಡಿ ಬಂದಿರುವ ಮನಮೋಹಕ ಸಾಲುಗಳು. ಪ್ರೇಮಿಯ ಕುಂದುಕೊರತೆಗಳನ್ನೆಲ್ಲಾ ಮರೆಸಿ, ಮೈಮರೆಸಿ, ಮನ ತಣಿಸುವ ಪ್ರೀತಿಯನ್ನು ಬಣ್ಣಿಸಲು ಇದಕ್ಕಿಂತ ಸರಳ ಸುಂದರ ವ್ಯಾಖ್ಯಾನ ಬೇರೆನಿದ್ದೀತು?

ಓರೆಗಳನ್ನು ಕೋರೆಗಳನ್ನು

ಮನ್ನಿಸಿ ಮುದ್ದಿಸಿ

ಎಲ್ಲಾ ಸುಂದರವೆಂದು ನೋಡೋ

ಒಳಗಣ್ಣೇ ಪ್ರೀತಿ!

ಪ್ರೇಮಿಗಳೆ.. ಇದು ನಿಜ ತಾನೆ? ನಾವು ಪ್ರೇಮದ ನೆಪ ಹೇಳಿ ಪ್ರೇಮಿಯನ್ನು ನಮ್ಮಿಚ್ಛೆಯಂತೆ ತಿದ್ದಿಕೊಳ್ಳಲು ಬಯಸುತ್ತೇವೆ. ನಿನಗೆ ನನ್ನಲ್ಲಿ ಪ್ರೀತಿ ಇದ್ದರೆ ಅದು ಮಾಡು, ಇದು ಮಾಡು, ನೀನು ಹೀಗಿರು, ಹಾಗಿರು - ಇತ್ಯಾದಿಯಾಗಿ ಆಣೆ, ಪ್ರಮಾಣಗಳ ಮೂಲಕ ಪ್ರೇಮವನ್ನೂ ನಾವು ಒಂದು ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ. ಪ್ರೇಮಪತ್ರದಲ್ಲಿರುವ ಚಿತ್ತುಗಳು,ತಪ್ಪುಗಳು ಕೂಡ ಪ್ರೇಮಿಗೆ ಅಚ್ಚುಮೆಚ್ಚಾಗುವಂತೆ, ಪ್ರೇಮಿಯಲ್ಲಿರುವ ಲೋಪದೋಷಗಳನ್ನು ಕೂಡ ಸುಂದರವಾಗಿ ತೋರಿಸುವುದೇ ನಿಜವಾದ ಪ್ರೀತಿ ಎನ್ನುವುದು ಕೂಡ ಸುಂದರ ಕಲ್ಪನೆ.

‘ಪ್ರೇಮ ಬರಹ ಕೋಟಿ ತರಹ’ ಎನ್ನುವುದು ನಿಜ. ಪ್ರೇಮ ಮಧುರಾಕ್ಷರ! ಪ್ರೇಮ ಅಜರಾಮರ! ಅಷ್ಟೇ ನಿಜ. ಇವತ್ತಿನ ದಿನವಾದರೂ ನಮ್ಮ ಕಣ್ಣು ಪ್ರೇಮದ ಹೊಸ ಮಿಂಚಿನಿಂದ ಹೊಳೆದರೆ, ಮನಸ್ಸಿನಲ್ಲಿ ಪ್ರೇಮಕ್ಕೊಂದು ಹೊಸ ಅರ್ಥ ಗೋಚರಿಸಿದರೆ, ಅಲ್ಲಿಗೆ ಈ ಪ್ರೇಮಿಗಳ ದಿನಾಚರಣೆ ಸಾರ್ಥಕವಾದಂತೆ! ಇಲ್ಲದಿದ್ದರೆ, ಅರ್ಥ ತಿಳಿಯದೆ ಅನುಸರಿಸುವ ನಮ್ಮ ನೂರೆಂಟು ಆಚರಣೆಗಳಲ್ಲಿ ಇದೂ ಒಂದಾಗುತ್ತದೆ. ಕುವೆಂಪು ನುಡಿದಂತೆ - ‘ನಾ ನಿನಗೆ, ನೀ ನನಗೆ ಜೇನಾಗುವಾ - ರಸ ದೇವಗಂಗೆಯಲ್ಲಿ ಮೀನಾಗುವಾ’ಎಂಬುದು ನಮ್ಮ ಬದುಕಿನ ಧ್ಯೇಯವಾಕ್ಯವಾಗಿರಲಿ. ಆ ದಿವ್ಯ ಗುರಿಯತ್ತ ನಮ್ಮೆಲ್ಲರ ಪ್ರೇಮ ಪಯಣ ನಿರಂತರ ಸಾಗುತ್ತಿರಲಿ.

ಆತ್ಮೀಯ ಓದುಗರಿಗೆಲ್ಲರಿಗೂ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more