• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಪ್ರೇಮಿಗಳ ದಿನಪ್ರೀತಿ ಏಕೆ ಭೂಮಿ ಮೇಲಿದೆ?

By Staff
|

ಪ್ರೇಮಿಗಳೆ.. ಇದು ನಿಜ ತಾನೆ? ನಾವು ಪ್ರೇಮದ ನೆಪ ಹೇಳಿ ಪ್ರೇಮಿಯನ್ನು ನಮ್ಮಿಚ್ಛೆಯಂತೆ ತಿದ್ದಿಕೊಳ್ಳಲು ಬಯಸುತ್ತೇವೆ. ನಿನಗೆ ನನ್ನಲ್ಲಿ ಪ್ರೀತಿ ಇದ್ದರೆ ಅದು ಮಾಡು, ಇದು ಮಾಡು, ನೀನು ಹೀಗಿರು, ಹಾಗಿರು - ಇತ್ಯಾದಿಯಾಗಿ ಆಣೆ, ಪ್ರಮಾಣಗಳ ಮೂಲಕ ಪ್ರೇಮವನ್ನೂ ನಾವು ಒಂದು ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ!

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

sritri@gmail.com

ಆಗ ಕಾಳಿದಾಸನ ಶಾಕುಂತಲೆಯೂ ಇರುತ್ತಿರಲಿಲ್ಲ, ಬಾಣನ ಕಾದಂಬರಿ, ಮಹಾಶ್ವೇತೆಯರಿಗೆ ಜೀವ ಬರುತ್ತಿರಲಿಲ್ಲ. ರೊಮಿಯೋ, ಜ್ಯೂಲಿಯೆಟ್‌ ಪತ್ತೆಯೇ ಇರುತ್ತಿರಲಿಲ್ಲ. ದೇವದಾಸ, ಪಾರ್ವತಿಯರಿಗೆ ಕೆಲಸ ಇರುತ್ತಿರಲಿಲ್ಲ. ಒಟ್ಟಿನಲ್ಲಿ ಬದುಕಿಗೆ ಬಣ್ಣವೇ ಇರುತ್ತಿರಲಿಲ್ಲ. ಆದರೆ ಹಾಗಾಗದೆ, ಬದುಕಿಗೆ ಅಗತ್ಯವಾದ ಗಾಳಿ, ನೀರುಗಳಿರುವಂತೆಯೇ ಪ್ರೀತಿ ಕೂಡ ಈ ಭೂಮಿ ಮೇಲಿದೆ. ಸದ್ಯ! ನಾವು ಪುಣ್ಯವಂತರು, ನಾವು ಪುಣ್ಯವಂತರು!

ದುಃಖ ಕೂಡ ಪ್ರೀತಿಯಂತೆ ಒಂದು ಭಾವನೆಯೇ. ನಾಣ್ಯದ ಇನ್ನೊಂದು ಮುಖ. ಆದರೆ ಮಾನವ ಅದನ್ನೇ ಬಹಳ ಕಾಲ ಅನುಭವಿಸಿಕೊಂಡಿರಲಾರ. ಅವನಿಗೆ ತನ್ನ ನೋವು ಮರೆಯುವುದು ಬೇಕು. ನೊಂದು ಮುದುಡಿ ಹೋದ ಹೃದಯ ಮತ್ತೆ ಅರಳಿ ನಗಲು ಬೇಕೇ ಬೇಕು ಪ್ರೀತಿ. ಅದೇ ಬದುಕಿನ ರೀತಿ. ಅದು ಅತ್ಯುತ್ತಮ ಬದುಕೊಂದು ಮೈಗೂಡಿಸಿಕೊಳ್ಳಲೇಬೇಕಾದ ನೀತಿ.

ಒಂದನ್ನೇ ಬಹಳ ಹೊತ್ತು ಓದಲಾರೆವು. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳಲಾರೆವು. ಹೇಳಿದ್ದನ್ನೇ ಯಾರಾದರೂ ಮತ್ತೆ ಮತ್ತೆ ಹೇಳಿದರೆ ‘ಹಾಡಿದ್ದೇ ಹಾಡೋ ಕಿಸಬಾಯಿ ದಾಸ’ ಎಂದು ರೇಗುತ್ತೇವೆ. ಆದರೆ ಪ್ರೇಮದ ಮಟ್ಟಿಗೆ ಮಾತ್ರ ಇದು ಅನ್ವಯವಾಗುವುದಿಲ್ಲ. ನೀವೇ ನೋಡಿ, ಇವತ್ತಿಗೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳಲ್ಲಿ ಪ್ರೇಮ ಕಥೆಗಳದೇ ಸಿಂಹಪಾಲು! ಹೊಸ ನಾಯಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಮೊದಲು ಹುಡುಕುವುದು ಪ್ರೇಮ ಕಥೆಯನ್ನೇ. ಇವತ್ತಿನ ದಿನ ಚೂರುಪಾರು ಗೆಲುವಿನ ಮುಖ ನೋಡುತ್ತಿರುವುದು ಕೂಡ ಇಂಥಹ ಪ್ರೇಮಕಥೆಗಳನ್ನು ಹೊಂದಿರುವ ಚಿತ್ರಗಳೇ. ಒಟ್ಟಿನಲ್ಲಿ ಪ್ರೇಮವೇ ಬಾಳಿನ ಬೆಳಕು, ಬಾ ಹುಡುಕು!

ಹುಡುಕುವುದು ಎಂದರೆ ಅದೇನು ? ಪ್ರೇಮ, ಪ್ರೀತಿ ಎರಡೂ ಒಂದೆಯೋ? ಬೇರೆಯೋ? ಅದೊಂದು ಬಗೆಹರಿಯದ ಗೊಂದಲ. ಮೊದಲಿಗೆ ಏನಿದು ಈ ಪ್ರೇಮ? ಇದನ್ನು ಕಂಡವರು ಯಾರಾದರೂ ಇದ್ದಾರೆಯೇ? ಎಂಬ ಪ್ರಶ್ನೆ ಕಾಡುವುದು ಸಹಜ. ಪ್ರೀತಿ ಕಣ್ಣಿಗೆ ಕಾಣಿಸದ ವಸ್ತುವಾದ್ದರಿಂದ ಹೇಳಿದ್ದನ್ನು ಮಾತ್ರ ನಂಬಬೇಕಾದ ಪರಿಸ್ಥಿತಿ ನಮ್ಮದು. ‘ಇದೇ ನಿಜವಾದ ಪ್ರೀತಿ’ ಎಂದು ಅದರ ಗುಣ ಲಕ್ಷಣಗಳನ್ನು ನಿಖರವಾಗಿ ಬಣ್ಣಿಸುವ ಸಾಹಿತ್ಯ ರಾಶಿಯೇ ಈವರೆಗೆ ನಮ್ಮಲ್ಲಿ ಸೃಷ್ಟಿಯಾಗಿದೆ. ಅದರ ಗಾತ್ರ ಎಷ್ಟು ಅಗಾಧವಾಗಿದೆ ಎಂದು ತಿಳಿಸಲು ಒಂದು ಉದಾಹರಣೆ :

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಯಾಂದರ ವಿಶೇಷವೇನೆಂದರೆ, ಈ ಧಾರಾವಾಹಿ ಪ್ರತಿ ದಿನವೂ ಪ್ರೀತಿಯ ಕುರಿತಾದ ಒಂದು ಸುಂದರ ಉಕ್ತಿಯಾಂದಿಗೆ ಪ್ರಾರಂಭವಾಗುತ್ತದೆ. ಈಗಾಗಲೇ ವರ್ಷದಿಂದ ಪ್ರಸಾರವಾಗುತ್ತಿರುವ ಈ ಸೀರಿಯಲ್‌, ಚ್ಯೂಯಿಂಗ್‌ ಗಮ್ಮಿನಂತೆ ಮತ್ತಷ್ಟು ನೂರುಗಳವರೆಗೆ, ಮತ್ತೆಷ್ಟೋ ದೂರದವರೆಗೆ ಎಳೆಯುವುದಂತೂ ನಿಸ್ಸಂದೇಹ. ಹಾಗಿದ್ದ ಮೇಲೆ, ಈ ಧಾರಾವಾಹಿಯ ನಿರ್ದೇಶಕರಲ್ಲಿ, ಕವಿ, ಸಾಹಿತಿಗಳು ಪ್ರೀತಿ, ಪ್ರೇಮದ ಕುರಿತು ಬರೆದಿರುವ, ಕೊರೆದಿರುವ ಮತ್ತೆಷ್ಟು ಕೊಟೇಶನ್‌ಗಳ ಸಂಗ್ರಹವಿರಬಹುದೋ ನೀವೇ ಲೆಕ್ಕ ಹಾಕಿಕೊಳ್ಳಿ.

ಪ್ರೀತಿಯ ಬಗ್ಗೆ ಬರೆಯದ ಕವಿಯೇ ಇಲ್ಲ ಎಂದರೂ ತಪ್ಪಾಗದೇನೋ. ಯಾರೂ ಏನಾದರೂ ಬರೆದಿರಲಿ, ಎಲ್ಲವೂ ಎಲ್ಲರಿಗೂ ಮೆಚ್ಚಿಗೆಯಾಗಬೇಕು ಎಂದೇನಿಲ್ಲ. ಕೆಲವು ಓದಿದೊಡನೆ ಮನಸ್ಸನ್ನು ಮುಟ್ಟುತ್ತವೆ. ಇದು ನಮ್ಮದೇ ಅನ್ನಿಸುವಂತೆ ಹೃದಯದ ಬಾಗಿಲನ್ನು ಮೆದುವಾಗಿ ತಟ್ಟುತ್ತವೆ. ಕೆ.ಎಸ್‌.ನರಸಿಂಹಸ್ವಾಮಿಯವರ ಅನೇಕ ಕವಿತೆಗಳಂತೂ ’ಪ್ರೇಮಿಗಳ ದಿನಕ್ಕೆ’ ಉಡುಗೊರೆ ಕೊಡಲೆಂದೇ ಬರೆದಂತಿದೆ! ಈ ರೀತಿ ನನಗೆ ಇಷ್ಟವಾಗಿರುವ ಪ್ರೇಮ ಕವನಗಳ, ಹಾಡುಗಳ ದೊಡ್ಡ ರಾಶಿಯೇ ಇದೆ. ಅವುಗಳಲ್ಲಿ ಬಹಳ ಇಷ್ಟವಾಗಿರುವ ಕೆಲವು ಸಾಲುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರೀತಿ ಉಂಟಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more