• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಡಲು ಮೋಡ, ಹೆಣೆಯಲು ಹಾವು, ಏನದು ಹೇಳು?

By Staff
|

ಚೇಳ್‌ ಕೊಂಡಿಯಂಥ ಜಡೆ, ಮೋಟು ಜಡೆ, ಚೋಟು ಜಡೆ, ಚಿಕ್ಕವರ ಚಿನ್ನ ಜಡೆ, ಮಲ್ಲಿಗೆಯ ಕಂಪು ಜಡೆ, ಕೇದಗೆಯ ಹೆಣೆದ ಜಡೆ, ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ...

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

sritri@gmail.com

Indian women hair styles and poetical notesಭಾರತೀಯ ನಾರಿಯರ ಕೇಶವಿನ್ಯಾಸ ಕೇವಲ ಅಲಂಕಾರದ ಸಾಧನವಲ್ಲ...ಅದರೊಳಗೊಂದು ಶಪಥವಿದೆ, ಕಣ್ಣೀರ ಕೋಡಿಯಿದೆ..ರಸಕಾವ್ಯದ ಲಹರಿಗಳಿವೆ..ಮುಂಗುರುಳಿಗೆ ಮನಸೋಲುವ ಗಂಡಿನ ಹೊಂಗನಸುಗಳಿವೆ.. ಬಿಡಿಸಲಾಗದ ಕಗ್ಗಂಟುಗಳೂ ಒಪ್ಪವಾಗಿ ಹೆಣೆದುಕೊಂಡಿವೆ..

‘ಹರಡಲು ಮೋಡ, ಹೆಣೆಯಲು ಹಾವು, ಏನದು ಹೇಳು?’ - ಇದು ಒಂದು ಚಿತ್ರಗೀತೆಯಲ್ಲಿ ಬರುವ ಒಗಟು. ನೀವು ಚಿತ್ರಗೀತೆಗಳನ್ನು ಕೇಳುವ ಅಭ್ಯಾಸವಿದ್ದವರಾದರೆ, ಅದರಲ್ಲೂ ಹಳೆಯ ಚಿತ್ರಗಳ ಅಭಿಮಾನಿಯಾಗಿದ್ದರೆ ಈ ಒಗಟಿಗೆ ಉತ್ತರ ಈಗಾಗಲೇ ತಿಳಿದು ಹೋಗಿರುತ್ತದೆ. ಜೊತೆಗೆ ಈ ಲೇಖನದ ವಿಷಯವೂ! ಒಗಟಿಗೆ ಸರಿಯುತ್ತರ ಹೂವಲ್ಲ, ಹಾವೂ ಅಲ್ಲ, ಜಡೆ!

ಸೀರೆಯಂತೆಯೇ ಜಡೆ ಕೂಡ ಹೆಣ್ಣನ್ನು ಸೂಚಿಸಲು ಉಪಯೋಗಿಸುವ ಒಂದು ಪದ. ’ನೂರು ಜುಟ್ಟು ಸೇರಿದರೂ ಎರಡು ಜಡೆ ಒಂದೆಡೆ ಸೇರದು’ ಎಂಬ ಗಾದೆಯಲ್ಲಿ ಜಡೆಯನ್ನು ಹೆಣ್ಣಿಗೆ, ಜುಟ್ಟನ್ನು ಗಂಡಿಗೆ ಪರ್ಯಾಯವಾಗಿ ಬಳಸಲಾಗಿದೆ. ಹಿಂದೆಲ್ಲ ಗಂಡಸರೂ ಹೆಂಗಸರಂತೆ ಉದ್ದ ಕೂದಲನ್ನು ಬೆಳೆಸಿಕೊಳ್ಳುವ ರೂಢಿಯಿತ್ತು. ಗಂಡಸರು ತಮ್ಮ ಕೂದಲನ್ನು ಹೆಂಗಸರಂತೆ ಹೆಣೆಯದೆ ಸುತ್ತಿ ಕಟ್ಟಿಕೊಳ್ಳುವುದಿತ್ತು. ಜುಟ್ಟು, ಜಡೆಗಳ ನಡುವೆ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ, ಋಷಿ,ಮುನಿಗಳ ಜಟೆಯೇ ಜಡೆಯ ಮೂಲ. ಗಂಗೆಯನ್ನು ತನ್ನ ಜಟೆಯಲ್ಲಿ ಹಿಡಿದಿಟ್ಟುಕೊಂಡಿರುವ ಜಟಾಧಾರಿ ಶಿವನ ಅಚ್ಚುಮೆಚ್ಚಿನ ಹೇರ್‌ ಸ್ಟೈಲ್‌ ಇದು.

ಆಧುನಿಕ ವೇಷಭೂಷಣಗಳಿಗೆ ತಲೆಬಾಗಿ ಜುಟ್ಟುಗಳು ‘ವೇಣಿಸಂಹಾರ’ ವಾದುದು ಮನೆಯಂಗಳದಲ್ಲಿ ನಡೆದ ಕ್ರಾಂತಿಕಾರಿ ಅಧ್ಯಾಯವೆನ್ನಬಹುದು. ತೀನಂಶ್ರೀಯವರ ಜುಟ್ಟನ್ನು ಅವರು ನಿದ್ದೆಯಲ್ಲಿದ್ದಾಗ ಕತ್ತರಿಸಿ ಹಾಕಿದ ತಮ್ಮ ತುಂಟತನದ ಕಥೆಯನ್ನು ಎ.ಎನ್‌.ಮೂರ್ತಿರಾಯರು ‘ಸಂಜೆಗಣ್ಣಿನ ಹಿನ್ನೋಟ’ದಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ. ಈಗಲೂ ಮಡಿವಂತರ ಮನೆಗಳಲ್ಲಿ ಕ್ರಾಪುಧಾರಿಗಳಿಗಿಂತ ಜುಟ್ಟು ಇಟ್ಟುಕೊಂಡವರಿಗೆ ಸಿಗುವ ಮರ್ಯಾದೆ ಸ್ವಲ್ಪ ಹೆಚ್ಚು. ಕೆಲವರು ಜುಟ್ಟನ್ನೂ ಕಳೆದುಕೊಳ್ಳದೆ, ಕ್ರಾಪನ್ನೂ ಬಿಟ್ಟು ಕೊಡದೆ ‘ಟೂ-ಇನ್‌-ಒನ್‌’ ಆಗಿ ಶೋಭಿಸುವುದೂ ಉಂಟು.

ಅದೊಂದು ವಯಸ್ಸು. ಬೇಕಿದ್ದರೆ ಅದನ್ನು ಹುಚ್ಚುಖೋಡಿ ವಯಸ್ಸು ಎಂದುಕೊಳ್ಳಿ. ಈ ವಯಸ್ಸಿನಲ್ಲಿ ಹೆಣ್ಣು,ಗಂಡುಗಳಿಗೆ ತಮ್ಮ ಕೇಶ ಸಿಂಗಾರದ ಬಗೆಗೆ ಎಲ್ಲಿಲ್ಲದ ವ್ಯಾಮೋಹ. ಕನ್ನಡಿ ಮುಂದೆ ನಿಂತರೆ ಜಗತ್ತಿನ ಪರಿವೆಯೇ ಇಲ್ಲ. ಹುಡುಗರಿಗೆ ತಲೆಗೂದಲನ್ನು ವಿವಿಧ ವಿನ್ಯಾಸಗಳಲ್ಲಿ ಬಾಚಿ ಸಿಂಗರಿಸಿಕೊಳ್ಳುವ ಸಂಭ್ರಮ. ಹೆಣ್ಣುಮಕ್ಕಳದೂ ಇನ್ನೂ ಹೆಚ್ಚಿನ ಸಡಗರ. ಉದ್ದವಾದ, ನಯವಾದ ಕೇಶ ಸಂಪತ್ತನ್ನು ಹೊಂದಲು ಇನ್ನಿಲ್ಲದ ಪೋಷಣೆ. ವಾರಕ್ಕೊಮ್ಮೆ ಮೆಂತ್ಯ, ಮೆಹಂದಿಯ ಲೇಪ. ಸೀಗೆಪುಡಿ, ಚಿಗರೆ ಪುಡಿಗಳನ್ನು ಬಳಸಿ ಎಣ್ಣೆ ನೀರಿನ ಸ್ನಾನ. ನೆಲ್ಲಿಕಾಯಿ ಹಚ್ಚಿದರೆ ಒಳ್ಳೆಯದಂತೆ ಎಂದು ಯಾರೋ ಅಂದರೆ ಸಾಕು. ಸರಿ, ಅರೆದು ತಲೆಗೆ ಸವರುವುದೇ. ಒಂದೆರಡು ಕೂದಲು ಹೆಚ್ಚು ಉದುರಿದರೆ ಸಾಕು, ಅದೇನೋ ಭಾರಿ ಭಯಾನಕ ಸಮಸ್ಯೆ ಎಂದೇ ಭಯಪಡುವ ಪ್ರಾಯವದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X