• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪಮಾನವಾದರೆ ಒಳ್ಳೆಯದು!

By Staff
|

ಅಪಮಾನವನ್ನು ನಕಾರಾತ್ಮಕವಾಗಿ ತೆಗೆದುಕೊಂಡು ನಾಶವಾದ ಮಹಾಭಾರತದ ದುರಂತ ನಾಯಕ ಸುಯೋಧನನದು ಇನ್ನೊಂದು ಕಥೆ.

ದ್ರೌಪದಿಯಿಂದ ತನಗಾದ ಅವಮಾನಕ್ಕೆ ಪ್ರತೀಕಾರ ಬಯಸಿ, ಅವಳ ಮಾನಭಂಗಕ್ಕೆಳಸಿ ತನ್ನ ಸಾವನ್ನು ತಾನೇ ಆಹ್ವಾನಿಸಿಕೊಂಡವನು. ಆದಿ ಕವಿ ಪಂಪನಿಂದ ‘ಛಲದೊಳ್ ದುರ್ಯೋಧನಂ" ಎಂದು ಹೊಗಳಿಸಿಕೊಂಡ ಮಹಾಮಾನಿ. ರನ್ನ ತನ್ನ ಗದಾಯುದ್ಧದಲ್ಲಿ ದುರ್ಯೋಧನನನ್ನು "ಅಭಿಮಾನಧನ" ಎಂದು ಕರೆದಿದ್ದಾನೆ. ಅತಿಯಾದ ಆತ್ಮಾಭಿಮಾನ ಹೇಗೆ ವ್ಯಕ್ತಿಯ ಅವನತಿಗೆ ಕಾರಣವಾಗಬಹುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ನಿಲ್ಲುತ್ತಾನೆ ಕೌರವಾಗ್ರಜ.

"ಅಪಮಾನವಾವಾದರೆ ಒಳ್ಳೆಯದು" ಎಂಬುದು ಪುರಂದರದಾಸರ ಒಂದು ದೇವರನಾಮ. ಏನು? ಅಪಮಾನವಾದರೆ ಒಳ್ಳೆಯದೇ? ಅದು ಹೇಗೆ? ಕುತೂಹಲಕ್ಕೆ ಈ ಕೀರ್ತನೆಯಲ್ಲೇ ಉತ್ತರವಿದೆ. ಅಲ್ಪರಿಂದ ಅಪಮಾನಕ್ಕೀಡಾದಾಗ ಮನಸ್ಸಿಗೆ ಸಾಂತ್ವನ ನೀಡುವ ಚಿನ್ನದಂತಹ ಸಾಲುಗಳಿವು-

"ಮಾನದಿಂದ ಅಭಿಮಾನ ಹುಟ್ಟುವುದು, ಮಾನದಿಂದ ತಪ ಹಾನಿಯಾಗುವುದು, ಮಾನಿ ಕೌರವಗೆ ಹಾನಿಯಾಯಿತು, ಏನು ಬೇಡವೋ ಎನಗೆ ಅಪಮಾನವೇ ಇರಲಿ!"

ಅಪಮಾನದ ಬಗ್ಗೆ ಬರೆಯುತ್ತಿದ್ದಂತೆ ನನಗೆ ಚಿಕ್ಕಂದಿನಲ್ಲಿ ನಾನು ಕಂಡ ಒಂದು ಘಟನೆ ನೆನಪಾಗುತ್ತಿದೆ. ಅದೊಂದು ಅಪಮಾನದ ಪ್ರಸಂಗ. ಆದರೆ ನಿರುದ್ದೇಶದಿಂದ ನಡೆದಿದ್ದು. ಬಂಧುಗಳ ಮನೆಯ ಮದುವೆಯ ಸಂದರ್ಭವದು. ಹಳ್ಳಿಯಲ್ಲಿ ನಡೆದ ಮದುವೆಯಾದ್ದರಿಂದ ಮನೆಯಂಗಳದಲ್ಲೇ ಮದುವೆಯ ವ್ಯವಸ್ಥೆ ಮಾಡಲಾಗಿತ್ತು. ಧಾರೆ ಮುಗಿಯುವ ಹೊತ್ತಿಗಾಗಲೇ ನಡು ಮಧ್ಯಾಹ್ನ. ಊಟಕ್ಕೆ ಎಲೆ ಹಾಕಿ, ಬಡಿಸಿದ್ದೂ ಮುಗಿದಿತ್ತು. ಮೊದಲ ಪಂಕ್ತಿಯಲ್ಲಿ ಕುಳಿತವರ ಊಟ ಪ್ರಾರಂಭವಾಯಿತು.

ಅದೇ ಹೊತ್ತಿಗೆ ಅಲ್ಲಿಗೆ ಕೋಪದಿಂದ ಧಪ-ಧಪ ಹೆಜ್ಜೆಗಳನ್ನಿಡುತ್ತಾ ಬ್ರಾಹ್ಮಣರೊಬ್ಬರ ಪ್ರವೇಶವಾಯಿತು. ಹಸಿವು, ಸಿಟ್ಟು ಎರಡೂ ಸೇರಿ ಉಗ್ರವಾಗಿದ್ದ ಆ ಮುಖ ಪೌರಾಣಿಕ ಚಿತ್ರಗಳಲ್ಲಿ ವಿಷ್ಣುವಿನ ಎದೆಗೊದೆಯುವ ದೂರ್ವಾಸ ಮುನಿಯನ್ನು ನೆನಪಿಸುವಂತಿತ್ತು. ಎಲ್ಲರೂ ಉಣ್ಣಲು ಮರೆತವರಂತೆ, ಏನೋ ಅಪರಾಧವೆಸಗಿದವರಂತೆ, ದಿಗ್ಭ್ರಮೆಯಿಂದ ಬಂದವರನ್ನೇ ನಿಟ್ಟಿಸುತ್ತಾ, ಮುಂದೇನು ಕಾದಿದೆಯೋ ಎಂದು ದಿಗಿಲಿನಿಂದ ಉಸಿರುಗಟ್ಟಿ ಕುಳಿತುಬಿಟ್ಟರು.

ಅಲ್ಲೊಂದು ಅಚಾತುರ್ಯ ನಡೆದುಹೋಗಿತ್ತು. ಆ ವೃದ್ಧ ಬ್ರಾಹ್ಮಣರಿಗೆ ಮದುವೆಗೆ ಆಹ್ವಾನವಿತ್ತು. ಇಳಿ ವಯಸ್ಸಿನ ಅವರು ಮುಂಚಿತವಾಗಿ ಬರಲು ಸಾಧ್ಯವಾಗದೆಂಬ ಕಾರಣಕ್ಕೆ, ಭೋಜನ ಪ್ರಾರಂಭವಾಗುವ ಹೊತ್ತಿಗೆ ಸರಿಯಾಗಿ ಕರೆ ಕಳಿಸುವುದಾಗಿ ಆಶ್ವಾಸನೆಯನ್ನೂ ಕೊಡಲಾಗಿತ್ತು. ಆದರೆ ಕೆಲಸಗಳ ಗಡಿಬಿಡಿಯಲ್ಲಿ ಆ ವಿಷಯವೇ ಸಂಬಂಧಪಟ್ಟವರಿಗೆ ಮರೆತುಹೋಗಿತ್ತು. ಊಟಕ್ಕೆ ಮೊದಲು ಹನಿ ನೀರೂ ಕುಡಿಯದ ನಿಷ್ಠಾವಂತರಾದ ಅವರು ಕಾಯುವಷ್ಟು ಕಾದು, ಕೊನೆಗೆ ತಾವೇ ಹೊರಟು ಬಂದು ನೋಡಿದರೆ ಇಲ್ಲಿ ಅವರನ್ನು ಬಿಟ್ಟು ಊಟ ಪ್ರಾರಂಭವಾಗಿ ಹೋಗಿದೆ!

ಈ ತಪ್ಪು ಉದ್ದೇಶಪೂರ್ವಕವಲ್ಲವೆಂದು ಬಗೆಬಗೆಯಾಗಿ ಮನವರಿಕೆ ಮಾಡಿಕೊಟ್ಟರೂ ಆ ಹಿರಿಯರ ಕೋಪ ಶಾಂತವಾಗದು. ಅವರನ್ನು ಅವಮಾನಿಸಲೆಂದೇ ಈ ರೀತಿ ಮಾಡಲಾಗಿದೆಯೆಂದು ಅವರ ವಾದ. ಅತಿಥಿ ಮತ್ತು ಆತಿಥೇಯರ ಒಳಪಂಗಡಗಳಲ್ಲಿ ವ್ಯತ್ಯಾಸವಿದ್ದಿದ್ದರಿಂದ ಅವರ ವಾದಕ್ಕೆ ಸೂಕ್ತ ಸಮರ್ಥನೆಯೂ ಸಿಗುವಂತಿತ್ತು. ನಡುಮಧ್ಯಾಹ್ನದ ಉರಿಬಿಸಿಲು ಆ ಸಂದರ್ಭಕ್ಕೆ ವಿಚಿತ್ರ ಗಾಂಭೀರ್ಯವನ್ನು ತಂದುಕೊಟ್ಟಿತ್ತು. ವಯೋವೃದ್ಧರನ್ನು ಹಸಿವಿನಿಂದ ಕಾಯುವಂತೆ ಮಾಡಿದ್ದಕ್ಕಾಗಿ ಮೊದಲೇ ಪರಿತಪಿಸುತ್ತಿದ್ದ ಆತಿಥೇಯರು ಮುಂದಾಗಬಹುದಾದ ಹಗರಣ ನೆನೆದು ಕಂಗಾಲಾಗಿ ಹೋಗಿದ್ದರು.

ತಮಗೆ ಅಪಮಾನವಾಗಿದೆಯೆಂದು ಹಾರಾಡುತ್ತಿದ್ದ ಆ ಹಿರಿಯರಿಗೆ ಅದೇನನ್ನಿಸಿತೋ, ತಕ್ಷಣ ತಣ್ಣಗಾಗಿ, ಅಲ್ಲೇ ಇದ್ದ ಖಾಲಿ ಎಲೆಯೊಂದರ ಮುಂದೆ ಕುಳಿತರು. ಎಲೆಗೆ ಪರಿಸಿಂಚನ ಮಾಡಿ ಎಲ್ಲರಿಗೂ ಊಟ ಮುಂದುವರೆಸುವಂತೆ ಸನ್ನೆ ಮಾಡಿ ತಾವು ಪ್ರಾರಂಭಿಸಿಯೇಬಿಟ್ಟರು. ತಪ್ಪು ಮಾಡುವುದು ಮಾನವ ಗುಣ, ಕ್ಷಮೆ ದೈವ ಗುಣ ಎಂಬ ಮಾತಿಗೆ ಜೀವಂತ ಸಾಕ್ಷಿಯಾಗಿಬಿಟ್ಟರು. ಹತ್ತರಲ್ಲಿ ಹನ್ನೊಂದಾಗಿ ಮರೆತುಹೋಗಬಹುದಾಗಿದ್ದ ಸಮಾರಂಭವೊಂದನ್ನು ತಮ್ಮ ದೊಡ್ಡಗುಣದಿಂದಾಗಿ ಅವಿಸ್ಮರಣೀಯವಾಗಿಸಿದರು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more