• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಲಿ ಹಾಡುಗಳ ಲೇಖನ ಲಾಲಿ ಕೇಳಿದಷ್ಟೇ ಮುದ ಕೊಟ್ಟಿತು

By Super
|

ತ್ರಿವೇಣಿಯವರಿಗೆ ನಮಸ್ಕಾರ!

ಲಾಲಿ ಲೀಲೆ ಚೆನ್ನಾಗಿದೆ! ಪುರಂದರದಾಸ ರಚಿತ ಬಹುಪ್ರಖ್ಯಾತ

‘‘ಜೋ ಜೋ ಶ್ರೀಕೃಶ್ಣ ಪರಮಾನಂದ

ನಂದ ಗೋಪಿಯ ಕಂದ ಬಾಲ ಮುಕುಂದ... ಜೋ ಜೋ ।।

ಪಾಲುಗಡಲೊಳು ಪವಡಿಸಿದವನೆ ಆಲದೆಲೆಯೆ ಮೇಲೆ ಮಲಗಿದ ಶಿಶುವೆ

ಶ್ರೀಲಲಿತಾಂಗಿಯರ ಚಿತ್ತವಲ್ಲಭನೆ ಬಾಲ ನಿನ್ನನು ಪಾಡಿ ತೂಗುವೆನಯ್ಯ....''

ಲಾಲಿಹಾಡನ್ನು ಸೇರಿಸಬಹುದಾಗಿತ್ತು.

ಇತಿ

- ಶ್ರೀವತ್ಸ ಜೋಶಿ

*

ತ್ರಿವೇಣಿಯವರಿಗೆ,

ನಿಮ್ಮ ‘ಲಾಲಿಹಾಡುಗಳು' ಲೇಖನ ಓದಿದೆ. ನಿಮ್ಮನ್ನು ಅಭಿನಂದಿಸಲು ಈ ಪತ್ರ ಬರೆಯುತ್ತಿದ್ದೇನೆ. ಹಳೆಯ ಗೀತೆಗಳನ್ನು ಆಧರಿಸಿ ಬರೆದ ನಿಮ್ಮ ಪ್ರಬಂಧ ತುಂಬಾ ಚೆನ್ನಾಗಿದೆ. ನೀವು ಬರೆದಿರುವ ಒಂದೊಂದು ಗೀತೆಯೂ, ಅದರಲ್ಲೂ ದಾಸರ ಪದಗಳಲ್ಲಿ ಬರುವ ಕೃಷ್ಣನ ಹಾಡುಗಳು ನಮಗೆಲ್ಲ ತುಂಬಾ ಮೆಚ್ಚಿಕೆಯಾಯಿತು.

ನೀವು ದೂರದೇಶದಲ್ಲಿದ್ದುಕೊಂಡು, ಹಳೆಯ ಸಂಪ್ರದಾಯದ ಹಾಡುಗಳನ್ನು ನೆನಪಿಸಿಕೊಂಡು, ಇಷ್ಟು ರಸವತ್ತಾಗಿ ಬರೆದಿರುವುದು ನಮಗೆಲ್ಲಾ ಹೆಮ್ಮೆ ತರುವ ವಿಷಯ.

ನನ್ನ ಹತ್ತಿರ ಹಾಡುಗಳ ದೊಡ್ಡ ಸಂಗ್ರಹವೇ ಇದೆ. ಅದರಲ್ಲಿ ಭಾವಗೀತೆ, ಜನಪದಗೀತೆ, ವಚನಗಳು, ಭಜನೆಗಳು, ನಮ್ಮ ತಾಯಿ ಹಾಡುತ್ತಿದ್ದ ಸಂಪ್ರದಾಯ ಹಾಡುಗಳು ಎಲ್ಲಾ ಇವೆ. ಅದನ್ನು ನಿಮಗೆ ಕಳಿಸಿಕೊಡುತ್ತೇನೆ. ನಮ್ಮ ನಾಡಿನ ಹೆಮ್ಮೆಯ ಕವಿಗಳು, ಪರಮ ಭಾಗವತರುಗಳಾದ ದಾಸವರೇಣ್ಯರ ಮೇರು ಕೃತಿಗಳು, ಕಸ್ತೂರಿಯ ಸುಗಂಧದಂತೆ ಎಲ್ಲೆಡೆ ಪಸರಿಸಲಿ ಎಂಬುದೇ ನನ್ನ ಹಾರೈಕೆ. ಅದಕ್ಕಾಗಿ ಇದು ನನ್ನ ಪುಟ್ಟ ಕಾಣಿಕೆ.

ನಿಮ್ಮಿಂದ, ಇನ್ನೂ ಇಂತಹ ಅನೇಕ ಬರಹಗಳು ಮೂಡಿಬರಲಿ ಎಂದು ಹಾರೈಸುತ್ತೇನೆ.

- ಪ್ರಸನ್ನ ಪಾರ್ವತಿ, ಬೆಂಗಳೂರು

*

ತ್ರಿವೇಣಿ,

ನನ್ನ ತಮ್ಮ ಚಿಕ್ಕವನಿದ್ದಾಗ ಅಮ್ಮ ಅವನಿಗೆ ಹಾಡುತ್ತಿದ್ದ ಕೇಳುತ್ತಾ ನಾನೇ ನಿದ್ದೆ ಮಾಡಿದ್ದಿದೆ. ಆ ಜೋಗುಳದಲ್ಲಿ ನನಗೆ ನೆನಪಿರುವ ಕೆಲವು ಸಾಲುಗಳು ಇಲ್ಲಿವೆ -

ಜೋ ಜೋ ಜಾನಕಿರಮಣ, ಜಗದೋದ್ಧಾರ ವಾಸ, ಯಾಕೆ ಕಿರಿಕಿರಿ ಮಾಡುತೀ? ನಾರದ ಮುನಿಗೆ ನಾ ಹೇಳಿ ಕಳುಹಲೇನು? ಮಾಯದ ಕಪ್ಪು ತರಿಸಿ ಮಾರಿಗೆ ಬಳಿಯಲೇನು? ಯಾಕಿ ಕಿರಿಕಿರಿ ಮಾಡುತೀ?, ಬೂಚಿ ಬಂದಿದೆ ರಂಗಾ ಬೂಚಿ ಬಂದಿದೆ, ಚಾಚಿ ಕುಡಿದು ಸುಮ್ಮನೆ ಪಾಚಿಕೊಳ್ಳೊ ರಂಗಾ..,ಜೋ ಜೋ ಶ್ರೀಕೃಷ್ಣ ಪರಮಾನಂದ, ತೂಗಿರೇ ರಂಗನ ತೂಗಿರೇ ಕೃಷ್ಣನ,ತೂಗಿರೆ ಅಚ್ಯುತಾನಂತನ, ಆಡಲೋಗೋಣು ಬಾಬಾರೋ ರಂಗಾ ಕೂಡಿ ಆಡೋಣು ಬಾ..

ಕೆಲವು ಜನಪದ ಜೋಗುಳಗಳು -

ಅತ್ತು ಕಾಡುವವನಲ್ಲ ಮತ್ತೆ ಬೇಡುವವನಲ್ಲ,

ಮೆತ್ತನೆ ಎರಡು ಅತಿರಸ ಕೊಟ್ಟರೆ

ಗಪ್ಪುಚಿಪ್ಪಾಗಿ ಮಲಗ್ಯಾನು

ಯಾತರ್ಯಾತರ ಗಾಳಿ

ಎಳೆಯ ತೋಟದ ಗಾಳಿ, ಸುತ್ತಲೂ ಗಾಳಿ ಸುಳಿಗಾಳಿ

ಸುತ್ತಲೂ ಗಾಳಿ ಸುಳಿಗಾಳಿ ಕಂದಮ್ಮಾ

ನಿನ್ನ ತೊಟ್ಟಿಲ ಗಾಳಿ ಮನೆತುಂಬಾ

ನನ್ನಯ್ಯನಂತೋರು ಹನ್ನೆರಡು ಮಕ್ಕಳು

ಹೊಂಗೆಯ ಮರದಡಿ ಆಡುವಾಗ

ಸನ್ಯಾಸಿ ಜಪವ ಮರೆತಾನು

ಮಾಳಿಗೆ ಮನೆ ಬೇಕು

ಜೋಳಿಗೆ ಹಣ ಬೇಕು

ರಾಮದೇವರಂತ ಮಗ ಬೇಕು

ನಮ್ಮನಿಗೆ ಜಾನಕಿಯಂತ ಸೊಸೆ ಬೇಕು

ಉಪ್ಪರಿಗೆ ಮನೆ ಬೇಕು

ಕೊಪ್ಪರಿಗೆ ಹಣ ಬೇಕು

ಕೃಷ್ಣದೇವರಂತ ಮಗ ಬೇಕು

ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕು

- ಇದೇ ತರದ ತುಂಬಾ ಹಾಡುಗಳನ್ನು ನಮ್ಮಮ್ಮ ಹಾಡುತ್ತಿದ್ದರು. ಇಂತಹ ಹಾಡುಗಳು ಈಗ ಮರೆಯಾಗಿ ಹೋಗಿರುವುದು ನಿಜವಾಗಿಯು ದು:ಖದ ಸಂಗತಿ. ಈಗಿನ ಕಂದಮ್ಮಗಳಿಗೆ ಇವೆಲ್ಲ ಮರೀಚಿಕೆ ಅನ್ನಿಸುತ್ತದೆ.

- ಮೀರಾ, ಕ್ಯಾಲಿಫೋರ್ನಿಯಾ

*

ತ್ರಿವೇಣಿಯವರಿಗೆ ನಮಸ್ಕಾರ.

ತುಳಸಿವನಕ್ಕೆ ಭೇಟಿ ನೀಡಿದ್ದೆ. ನಿಮ್ಮ ಲೇಖನಗಳನ್ನು ಓದಿದೆ. ‘‘ನೋಡುವ ದೃಷ್ಟಿ ಸಮಗ್ರವಾಗಿರಬೇಕು. ಭಾವನೆ ಸೂಕ್ಷ್ಮವಾಗಿರಬೇಕು. ಭಾಷೆ ಸರಳವಾಗಿರಬೇಕು. ಅದೇ ಸಂಪೂರ್ಣ ಸಾಹಿತ್ಯ'' ಎನ್ನುವಂತಿದೆ ನಿಮ್ಮ ಬರಹಗಳು.

ನೀವು ಬರೆಯುತ್ತಿರಿ. ನಾವು ಓದಿ ಆನಂದಿಸುತ್ತೇವೆ. ಅನುಭವಿಸುತ್ತೇವೆ.

ಧನ್ಯವಾದಗಳು.

- ಅಂಜಲಿ ರಾಮಣ್ಣ, ಬೆಂಗಳೂರು

*

ತ್ರಿವೇಣಿಯವರಿಗೆ ನಮಸ್ಕಾರ,

ನಿಮ್ಮ ಲಾಲಿಹಾಡುಗಳ ಲೇಖನವು ಲಾಲಿ ಕೇಳಿದಷ್ಟೇ ಮುದ ಕೊಟ್ಟಿತು. ಮಕ್ಕಳು ಹಟ ಮಾಡಿದರೆ ಎಗರಿ ಬೀಳುವ ಮಾತೆಯರೇ ಹೆಚ್ಚು. ಮಕ್ಕಳು ಗಲಾಟೆ ಮಾಡದೆ ಇರಬೇಕು. ದೊಡ್ಡವರು ಹರಟೆ ಹೊಡೆದುಕೊಂಡು ಇರಬೇಕು. ಹೀಗಿದೆ ಇಂದಿನ ಜೀವನ. ಪ್ಲೇ ಗ್ರೂಪ್‌ ಅಂತ ಮಾಡಿಕೊಂಡು ಅಮ್ಮಂದಿರು ಆಟ ಆಡುತ್ತಿರುತ್ತಾರೆ. ಮಕ್ಕಳು ಮುದ್ದಿಸಲು ಮಾತ್ರ ಬೇಕು, ಅತ್ತರೆ ಮಕ್ಕಳು ಯಾಕಾದರೂ ಹುಟ್ಟಿದರೋ ಎಂಬಂತೆ ಮಾತನಾಡುತ್ತಾರೆ ಇಂದಿನ ಜನ.

ನಮ್ಮ ಮಗನಿಗೂ ಕನ್ನಡದ ಹಾಡುಗಳೆಂದರೆ ಬಹಳ ಇಷ್ಟ. ಆದರೆ ನಮಗೆ ಹಾಡಲು ಬರುವುದಿಲ್ಲ. ನಾವೇ ಹಾಡುಗಾರರಲ್ಲದಿದ್ದರೆ, ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಗಾಯಕರ ಹಾಡುಗಳ ಸಿಡಿಯನ್ನು ತಂದು ಮಕ್ಕಳಿಗೆ ಕೇಳಿಸಬಹುದು.

ಉದಯ ಟೀವಿಯ ಹಾಸ್ಯ ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡರು ಒಂದು ತಮಾಷೆಯ ಲಾಲಿಹಾಡನ್ನು ಹಾಡಿದರು. ಅದರಲ್ಲಿ ಮಗುವಿನ ಪಾಲಕರು ಹೇಳುವುದೇನೆಂದರೆ - ''ನಮಗೆ ಕೆಲಸ ಮಾಡಿ ಸಾಕಾಗಿದೆ. ನೀನೇ ತೊಟ್ಟಿಲಲ್ಲಿ ಮಲಗಿ ಸ್ವಿಚ್‌ ಹಾಕಿಕೊಂಡು ತೂಗಿಕೋ. ಇನ್ನೊಂದು ಸ್ವಿಚ್‌ ಹಾಕಿಕೊಂಡು ಲಲ್ಲಬಿ ಹಾಕಿಕೋ'' ಎಂದು.

ಮಕ್ಕಳ ಮನಸ್ಸು ಯಾರಿಗೆ ಅರ್ಥವಾಗಬೇಕು? ನೆನೆಸಿಕೊಂಡರೆ ತುಂಬಾ ಬೇಸರವಾಗುತ್ತದೆ.

ಧನ್ಯವಾದಗಳು.

- ಆನುರಾಧ ಅರುಣ್‌, ಇಲಿನಾಯ್‌ು

*

ತ್ರಿವೇಣಿಯವರಿಗೆ,

ನಿಮ್ಮ ‘‘ಲಾಲಿ ಲಾಲಿ'' ಲೇಖನ ಅತ್ಯುತ್ತಮವಾಗಿದೆ.

ಭಾವಗೀತೆ, ಚಿತ್ರಗೀತೆ, ಜನಪದ ಗೀತೆ, ದಾಸರ ಪದಗಳು ಮುಂತಾದ ವಿವಿಧ ಪ್ರಕಾರಗಳಲ್ಲಿನ ಲಾಲಿ ಹಾಡುಗಳನ್ನು ಮೆಲುಕು ಹಾಕುವಂತೆ ಮಾಡಿದ್ದೀರಿ.

ಅತ್ಮೀಯ ಧನ್ಯವಾದಗಳು

- ಸಂಪಿಗೆ ಶ್ರೀನಿವಾಸ, ಬೆಂಗಳೂರು

*

ತ್ರಿವೇಣಿಯವರಿಗೆ,

‘‘ಲಾಲಿಹಾಡು'' ಲೇಖನ ತುಂಬಾ ಇಷ್ಟವಾಯಿತು.

- ಹೇಮಲತಾ, ತುಮಕೂರು

*

Dear Triveni,

It was a pleasure reading this article of yours just the way I enjoyed your other previous ones. You sure are lucky to be able to write as well as you do. I love Kannada and its literature.

Your contribution is very valuable. I am glad at least I am able to enjoy others writing though unable to compose. Best wishes and look forward to reading many more of your literature.

- Sheela Kadambi J

*

Triveni avare,

I enjoy reading all your articles. Sorry, I do not have Baraha and am writing in English. Thank you for the article. It took me back to when my mother-in-law was alive and she would sing these amazing Laali songs to my son (who is 19 now!). Some of my favorite:

aLuva kandana tuTiyu havaLadaa kuDi hanga kuDi hubbu bevinaa yesaLhanga kuDi hubbu bevinaa yesaLhanga, kaNNoTa shivana kaiyalagu hoLedhanga.

haalbeDi haridatta

neerbeDi nintatta

mosarbeDi kesara tuLidatta,

mosarbeDi kesara tuLidatta, kandammage

kenehaalu mosaraa koTTenu

aLuburuku guLuburuku idu enta maguvamma

uNagodadu roTTi sudagodadu

uNagodadu roTTi sudagodadu, kandammana

ettikomboru yaarilla.

Then she would turn around and sing.

Attaare aLalavva ee koosu namagirali

keTTare kedali manegelasa

keTTare kedali manegelasa, kandammana

ettikombantha bhaagya namagirali.

I would always make fun of her. I miss her. Anyway, thanks for bringing back her memories.

- Meena Jois, North Potomac - MD

*

Triveni,

I read your article ...laali. good article from you. Nowadays "Laali haadu"has become very rare to hear but articles such as yours are good ways to help us remember them. Of lately, Kannadi--gas & the language Kannada are becoming less in Bangalore.

People of Blore are speaking other languages more than Kannada. But I hope to see & hear about more people such as you, who, though staying away from your motherland, speak in Kannada,write articles to Kannada paper & dont hesitate to praise Kannada & its literature(coz there are many people who dont like to talk in Kannada as they feel it spoils their status).Please continue your good work.

Hope to see many articles from you.

- Sudha, Bangalore

*

Dera Madam,

Namaskara.

Nimma article Odide. It is really good.Its most unfortunate that we are loosing out our culture. The songs are so much close to us but because of English medium todays children have to study poems which they cannot enjoy and cant go that paradigm.Its really unfortunate.

Imkeep reading your articles.They are very good.

Regards,

- Bharath, Bangalore

*

namaskaara trivEniyavarige,

I just got the time to read your laali article. chennagi baMdide.

- Anu, Illinois

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thatskannada readers responses to K. Triveni Srinivasa Raos Lullaby article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more