• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಡುಗೆಯಲ್ಲಿ ಯಾರು ಮೇಲು? ಮೇಲು? ಫೀಮೇಲು?

By Staff
|
ನಮಸ್ಕಾರ ತ್ರಿವೇಣಿಯವರಿಗೆ,

ಅಡಿಗೆ ಮಾಡುವುದು ಗಂಡಸರಿಗೆ ವಿಶೇಷ ಅರ್ಹತೆ ಮಾತ್ರ, ಮಹಿಳೆಯರಿಗೆ ಅದು ಅನಿವಾರ್ಯ ಎಂಬ ನಿಮ್ಮ ಮಾತು ಸತ್ಯವಾದ ಮಾತಾಗಿದೆ. ಇಂದು ಹೆಣ್ಣೂ ಕೂಡ ಮನೆಯ ಹೊರಗೆ ದುಡಿಯುವ ಪರಿಸ್ಥಿತಿ ಬಂದಿರುವಾಗ, ಅಡಿಗೆ ಮಾಡುವುದರ ಜೊತೆಗೆ, ಮನೆಯ ಇತರ ಕೆಲಸಗಳಲ್ಲೂ ಹೆಂಡತಿಯ ಜೊತೆಗೆ ಗಂಡನೂ ಭಾಗಿಯಾಗಬೇಕಾಗಿರುವುದು ನ್ಯಾಯ ಎಂದು ನನ್ನ ಅನಿಸಿಕೆ.

ನನಗೇನೊ ಅಡಿಗೆ ಮಾಡುವುದೆಂದರ ಬಹಳ ಇಷ್ಟ. ನೀವು ಹೇಳಿದಂತೆ ಒಂದು ಅಂದಾಜಿನಲ್ಲಿ ಉಪ್ಪು, ಹುಳಿ, ಖಾರ ಹಾಕುವ ವಿದ್ಯೆ ಎಲ್ಲರಿಗೂ ಬರುವುದಿಲ್ಲ. ಈ ವಿದ್ಯೆ ನಾನು ಸ್ವಲ್ಪ ಕಲಿತಿದ್ದೇನೆ ಎಂಬುದೇ ನನಗೆ ಖುಷಿ. ಒಟ್ಟಿನಲ್ಲಿ ಅಡಿಗೆ ಮಾಡಲು ತಾಳ್ಮೆ ಬೇಕೇಬೇಕು.

ನನಗೇನೋ ಕೆಲಸ ಬಿಟ್ಟು ಹೆಂಡತಿಯನ್ನು ಕೆಲಸಕ್ಕೆ ಕಳುಹಿಸಿ, ಮನೆಯಲ್ಲಿ ಅಡಿಗೆ ಮಾಡಿಕೊಂಡಿರುವುದೇ ಇಷ್ಟ :-) ಆದರೆ ಈ ಆಸೆ ಈಡೇರುವ ಹಾಗೆ ಕಾಣಿಸೊಲ್ಲ :(

ವಂದನೆಗಳು.

- ಸಂಪಿಗೆ ಶ್ರೀನಿವಾಸ, ಬೆಂಗಳೂರು

*

ನಮಸ್ಕಾರ 3ವೇಣಿ ಮೇಡಮ್‌,

ನಿಮ್ಮ ಲೇಖನ ಓದಿ ಖುಷಿ ಆಯಿತು. ಅಮ್ಮ ಮಾಡಿದ ಶಾವಿಗೆ ಉಪ್ಪಿಟ್ಟು ತಿನ್ನುತ್ತಾ ನಿಮ್ಮ ಅಂಕಣ ಓದಿದೆ. ತುಂಬಾ ರುಚಿಯಾಗಿತ್ತು.

‘ಅನ್ನವೇ ದೇವರು’ ಎಂದು ಬಿಜಾಪುರದ ಸಿದ್ಧೇಶ್ವರ ಸ್ವಾಮಿಗಳು ಹೇಳುತ್ತಿರುತ್ತಾರೆ. ಅಂತಹ ಅನ್ನವನ್ನು ರುಚಿ,ಶುಚಿಯಾಗಿ ‘ಅಡುಗೆ’ ಮಾಡಿ, ಬಡಿಸಿ ಪುಣ್ಯ ಕಟ್ಟಿಕೊಳ್ಳುವ ಭಾಗ್ಯ ನನಗಿಲ್ಲವಲ್ಲಾ! ಕೇವಲ ತಿನ್ನುವುದಷ್ಟೇ ನನ್ನ ಕೆಲಸ. ಇರಲಿ ಬಿಡಿ. ಇನ್ನೂ ಬ್ಯಾಚುಲರ್‌ ನಾನು. ಮುಂದೆ ಕಲಿಯುತ್ತೇನೆ.

ನೀವು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳ ಬಗ್ಗೆ ಕೇಳಿರಬೇಕು. ಅವರ ಹತ್ತಿರ ಒಬ್ಬ ಬಡ ಹೆಣ್ಣುಮಗಳು ಬಂದು ನನ್ನ ಹತ್ತಿರ ಕೇವಲ ಒಂದು ರೂಪಾಯಿ ಇದೆ. ಆದರೆ ನನಗೆ ಸಾಯುವ ಮೊದಲು ಇಲ್ಲಿ ಸೇರಿರುವ ಭಕ್ತರಿಗೆಲ್ಲ ಭೋಜನ ಹಾಕಿಸಬೇಕೆಂಬ ಮಹದಾಸೆ ಇದೆ ಎಂದು ಕೇಳಿಕೊಂಡಳಂತೆ. ಆಗ ಸ್ವಾಮಿಗಳು - ‘ಹಾಗೇ ಆಗಲಿ’ ಎಂದು ಹೇಳಿ, ಆ ಒಂದು ರೂಪಾಯಿಂದ ಕೊತ್ತುಂಬರಿ ಸೊಪ್ಪನ್ನು ತರಿಸಿ, ಆಗಲೇ ತಯಾರಾಗಿದ್ದ ಒಂದು ದೊಡ್ದ ಡಬರಿ ಸಾರಿನಲ್ಲಿ ಅದನ್ನು ಹಾಕಿ, ‘ಈಗ ನಿನ್ನ ಆಸೆಯಂತೆ, ಇಲ್ಲಿರುವವರೆಲ್ಲರಿಗೂ ಭೋಜನ ಮಾಡಿಸಿದ ಪುಣ್ಯ ನಿನ್ನದಾಗುವುದು’ ಎಂದರಂತೆ!

ಇಂತಹ ಪುಣ್ಯಭೂಮಿಯಲ್ಲಿ ನಾವಿದ್ದೇವೆಲ್ಲಾ ಎಂಬುದೇ ಹೆಮ್ಮೆ. ನೀವು ಇಂತಹ ಲೇಖನಗಳನ್ನು ಇನ್ನೂ ಬರೆಯಿರಿ.

ಶುಭವಾಗಲಿ.

- ಪ್ರಶಾಂತ್‌, ಹುಬ್ಬಳ್ಳಿ

*

ತ್ರಿವೇಣಿ ಅವರಿಗೆ ನಮಸ್ಕಾರ,

ನಿಮ್ಮ ಅನುಭವದಡುಗೆ ಬಹಳ ರುಚಿಯಾಗಿತ್ತು. ಈ ಸಂದರ್ಭದಲ್ಲಿ, ನಮ್ಮ ತಾಯಿಯವರ ಹಾಗೂ ಅಜ್ಜಿಯವರ ನೆನಪು ಇನ್ನೂ ಹೆಚ್ಚಾಯಿತು. ನೀವು ಬೆಳೆದಿರುವಂತಹ ವಾತಾವರಣದಲ್ಲಿಯೇ ನಾನೂ ಬೆಳೆದಿರುವುದು ಎಂದು ತಿಳಿಸಲು ಬಹಳ ಹೆಮ್ಮೆ ಅನ್ನಿಸುವುದು. ಕಳೆದ ವಾರವಷ್ಟೇ ಒಂದು ಲೇಖನದಲ್ಲಿ ಎಂ.ಟಿ.ಆರ್‌.ಪದಾರ್ಥಗಳ ಪ್ರಭಾವ ನಮ್ಮ ಗೃಹಿಣಿಯರ ಮೇಲಾಗಿದೆ ಎಂದೂ, ಯಾರು ಅಡುಗೆ ಮನೆ ಕಡೆ ತಲೆ ಹಾಕಬಯಸುವುದಿಲ್ಲವೋ ಅವರ ಜೀವನ ಸಾರ್ಥಕವಾಗಲೆಂದೇ ಈ ರೆಡಿ-ಟು-ಈಟ್‌ ಪದಾರ್ಥಗಳು ಬಂದಿವೆ ಎಂದೆಲ್ಲಾ ಓದಿದ್ದೆ. ಈ ವಾರ ನಿಮ್ಮ ಲೇಖನ ವಾಸ್ತವಿಕ ಲೋಕಕ್ಕೆ ಕರೆದು ತಂದಿದೆ.

ಹೊರಗೆ ಕೆಲಸ ಮಾಡುವವರು, ಸಮಯದ ಅಭಾವವಿರುವವರು ಇಂತಹ ಪದಾರ್ಥಗಳ ಮೊರೆ ಹೊಕ್ಕರೆ ಸರಿ. ಆದರೆ ಮದುವೆಯಾಗಿ ಹತ್ತು-ಹದಿನೈದು ವರ್ಷಗಳೇ ಕಳೆದಿದ್ದರೂ ‘ನನಗೆ ಅಡುಗೆ ಬರುವುದಿಲ್ಲ’ ಎಂದು ಹೇಳುವುದು ಏನು ಚಂದ?

ನನ್ನದೊಂದು ಅನುಭವ ಕೇಳಿ - ಹೊಸ ವರುಷದ ದಿನ ನಮ್ಮ ಒಬ್ಬ ಗೆಳೆಯರ ಮನೆಯಲ್ಲಿ ‘ಪಾಟ್‌ ಲಕ್‌’ ಭೋಜನಕೂಟವಿತ್ತು. ಒಬ್ಬೊಬ್ಬರು ಒಂದೊಂದು ರೀತಿಯ ಅಡುಗೆಯನ್ನು ತರುವುದೆಂದು ತೀರ್ಮಾನಿಸಲಾಗಿತ್ತು. ಅದರಂತೆ ನಾವು ತೆಗೆದುಕೊಂಡು ಹೋಗಿದ್ದೆವು. ಅವರ ಅಡುಗೆ ಮನೆಯನ್ನು ತೊಳೆದು ಸ್ವಚ್ಚ ಮಾಡಿ, ಪಾಟ್‌ ಲಕ್‌ ತಿಂಡಿಗಳಿಗೆ ಜಾಗ ಮಾಡಲಾಗಿತ್ತು. ಆದರೆ ಅವರ ಮನೆಯಲ್ಲಿ ಅಡುಗೆ ಮಾಡಿದ ಸೂಚನೆಯೇ ಇರಲಿಲ್ಲ. ನನ್ನನ್ನು ನೋಡಿದಾಕ್ಷಣ ಮನೆಯೊಡತಿ - ‘ಸ್ವಲ್ಪ ಇಡ್ಲಿ ಮಾಡಲು ಸಹಾಯ ಮಾಡು’ ಎಂದಳು. ಇಡ್ಲಿ ಹಿಟ್ಟು ಹೇಗೆ ತಯಾರಿಸಿದ್ದರೋ ಗೊತ್ತಿಲ್ಲ, ಇಡ್ಲಿ ಕಲ್ಲಿನಂತಾಯಿತು. ಅದಕ್ಕೆ ಸ್ವಲ್ಪ ನೀರು ಸೇರಿಸಿ, ರಿಪೇರಿ ಮಾಡಿ ಇಡ್ಲಿ ಮಾಡಿದ್ದಾಯಿತು.

ಎಲ್ಲರೂ ಬಂದಾದ ಮೇಲೆ ಮನೆ ಯಜಮಾನನೂ ಬಂದ. ಅವನು ಅಷ್ಟು ಹೊತ್ತಿಗೇ ಚೆನ್ನಾಗಿ ಗುಂಡೇರಿಸಿದ್ದವನಾಗಿ, ಉರ್ದು ಶಾಯರಿ ಶುರುಮಾಡಿದ. ನೀವು ಚೆನ್ನಾಗಿ ಅಡುಗೆ ಮಾಡುತ್ತೀರ ಎಂದೇ ಈ ದಿನ ನಿಮ್ಮನ್ನು ಇಲ್ಲಿಗೆ ಕರೆದಿದ್ದೇವೆ ಎಂದು ನನ್ನ ಗುಣಗಾನ ಪ್ರಾರಂಭಿಸಿದ. ಇದು ಇಂದಿನ ಆಧುನಿಕ ಬದುಕಿನ ಚಿತ್ರಣ. ಇದೇ ರೀತಿ ಮುಂದುವರೆದರೆ ನಮ್ಮ ಸಂಸ್ಕೃತಿ ಸರ್ವನಾಶವಾಗುವುದರಲ್ಲಿ ಸಂದೇಹವಿಲ್ಲ.

ಧನ್ಯವಾದಗಳು.

- ಅನುರಾಧ ಅರುಣ್‌, ಶಿಕಾಗೋ

*

ಹಾಯ್‌ು ವೇಣಿ ಅಕ್ಕ,

ಹೇಗಿದ್ದೀರಾ? ಅಂತೂ ತುಂಬ ದಿನ ಕಳೆದು ಒಳ್ಳೆಯ ವಿಷಯ ಆರಿಸಿಕೊಂಡಿದ್ದೀರಾ ನಿಮ್ಮ ಲೇಖನಕ್ಕೆ. ನಾನು ನನ್ನ ಗಂಡ ರವಿಗೆ ಅದನ್ನೇ ಹೇಳುತ್ತಿದ್ದೆ... ನಿಮಗೆ ಹೆಂಡತಿ ಎಲ್ಲಾ ಮಾಡಿ ಕೊಡುತ್ತಾಳೆ ತಿನ್ನೋದಕ್ಕೆ, ಉಣ್ಣೋದಕ್ಕೆ...! ನನಗೂ ಒಂದು ಹೆಂಡತಿ ಇದ್ದರೆ ಎಷ್ಟು ಒಳ್ಳೆಯದು ಅಂತ!

ಛೆ! ನಾವು ಏನೆಲ್ಲ ಮಿಸ್‌ ಮಾಡ್ತಾ ಇದ್ದೀವಿ ಅಲ್ವಾ ವೇಣಿಯಕ್ಕಾ..?!

- ಅನು, ಮಿನಿಯಾಪೋಲಿಸ್‌

*

ತ್ರಿವೇಣಿ,

ಈಗಿನ ಸಮಾಜದಲ್ಲಿ ಹೆಣ್ಣು ಗಂಡು ಒಟ್ಟಿಗೆ ದುಡಿಯುತ್ತಿರುವಾಗ, ಗಂಡಸು ಕೂಡ ಅಡುಗೆ ಮನೆಯಲ್ಲಿ ಹೆಂಡತಿಯ ಜೊತೆ ಸೇರಿ ಅವಳಿಗೆ ಸಹಾಯ ಮಾಡುವುದಲ್ಲದೆ, ನಳಪಾಕವನ್ನೂ ಇಳಿಸುವ ದೃಶ್ಯ ನೋಡುತ್ತೇವೆ. ಹಿಂದಿನ ಕಾಲವಲ್ಲ ಇದು. ನಾನೂ ದುಡಿಯುತ್ತಿದ್ದೇನೆ, ನಾನೊಬ್ಬಳೇ ಯಾಕೆ ಕಷ್ಟಪಡಬೇಕು? ನೀನೂ ಅಡುಗೆ ಮಾಡು.. ಅನ್ನುವ ಹುಡುಗಿಯರೂ ಇದ್ದಾರೆ.

ಗಂಡನಿಗೆ ತಿನ್ನುವ ಹಂಬಲ ಇದ್ದು, ಹೆಂಡತಿ ಸೋಂಬೇರಿ ಆದರೆ, ಗಂಡನ ನಳಪಾಕವೇ ಗತಿ ಆ ಮನೆಯಲ್ಲಿ... ಹಾಗಾಗಿ, ಈ ಕಾಲದಲ್ಲಿ ಅಡುಗೆ ಬರಿಯ ಹೆಣ್ಣಿನ ಕೆಲಸವಾಗಿ ಉಳಿದಿಲ್ಲ!

ನೀವು ಕೋಟ್‌ ಮಾಡಿರುವ ಹಾಡುಗಳು, ಗಾದೆಗಳು ಈ ವಿಷಯಕ್ಕೆ ಬಹಳ ಹೊಂದುತ್ತವೆ. ಚೆನ್ನಾಗಿದೆ ವಿವರಣೆ.

- ಅನುಪಮ, ಇಲಿನಾಯ್‌ು

*

ತ್ರಿವೇಣಿಯವರಿಗೆ,

ಎಲ್ಲಾ ಚೆನ್ನಾಗಿದೆ, ಲೇಖನದ ವಸ್ತು, ವಿನ್ಯಾಸ ಮತ್ತು ವಿವರಣೆ.

ಆದರೆ,

ಒಂದು ಕಡೆ ‘ಜೆರ್ಕ್‌’ ಅನುಭವ. ಎಲ್ಲಿ ಗೊತ್ತಾ? ‘‘ಕೂಡಿಹಾಕಿಕೊಳ್ಳದೆ ಬೇರೆ ವಿಧಿಯೇ ಇರಲಿಲ್ಲ.’’ ಪ್ಯಾರಾಗ್ರಾಫ್‌ ಮುಗಿದ ಮೇಲೆ ‘‘ಹಸಿಮಾಂಸ..’’ ಅಂತ ಇನ್ನೊಂದು ಶುರು ಆಗುತ್ತಲ್ಲ? ಅಲ್ಲಿ. ಏನಪ್ಪ ಇದು ಅವಾಂತರ ಅನಿಸುವಷ್ಟು!

ಬಹುಶ: ನೀವು ಲೇಖನದ ಬೇರೆಬೇರೆ ಭಾಗಗಳನ್ನು ಬೇರೆಬೇರೆ ದಿನಗಳಲ್ಲಿ ಬರೆದಿದ್ದರೆ ಹಾಗಾಗಿರಬಹುದು.

ಇತಿ,

- ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌

*

Dear Thriveni,

I enjoyed reading your article in Thatskannada.com. I really appreciate your ability to write as well as you do to bring out the emotions. You mirrored my emotions that could not have been stated any better. Ours was a joint family too, my aunt had nine children, we were six and our other aunt was on her way to have many children, who had two. Older girls were getting married and moving out. Older sons of the family also got married and moved away from the home town to make a life elsewhere. Eventually we all scattered. To be precise, we are sixty first cousins; some of the older cousins were older than our parents. Most of them are no more.

Coming to the fact of cooking, you are so right about the "Madi" and not letting any outsiders into the kitchen. Even we (children) were considered outsiders. My mother was so tiny, she would pull the fire out of the firewood stove or she would pour cold water on it to turn off the heat. Some of the pots were taller and heavier than her. That was a joke in the house.

Best regards,

- Sheela Kadambi

*

Hello,

I read your article "anubhavadadugeya maadi.. anubhavigalu bandu neevella koodi" in ThatsKannanda.com. It is really nice one. Earlier to this I read some of your articles in Vijaya Karnataka Daily.

The way you unwrap the subject is simply superb. Also references are very relevent like Dr. G.S. Shivarudrappas "stree andare ashte saake" in above article. I am really pleased to read your articles.

Thank you. Regards,

- Basavaraj, Bangalore

*

Hello Triveni

I feel good reading your articles.you put your heart and write those articles.keep it up!

Regards,

- Sahana S Joshi

*

Aathmeeya Triveniyavare,

May be due to work pressure the present young women are not able to meet the standard of old generation who exclusively belonged to the kitchen, in terms of ruchi, adaratithya, preeti... The gas stove too has failed in competition with the older soude olegalu. Soude oleya mele madida rotti ruchi is something different. But, I do not agree with your view that cooking knowledge for a man is added qualification. My friend has 3 sisters and none of them knew even how to prepare tea, coffee before marriage and my friend used to do that. This is the case with many families. We can say, cooking knowledge for a girl is added advantage qualification these days.

Excellent but faministic article.

Regards,

- Prasad Naik, Bangalore

*

Namaskara Triveni avare,

Your article seems to be infleuenced by feministic views, which is fine with me.

You claim that "If men know cooking it is an "additional" qualification, however for women its a necessity".

This is also true with regard to job. If women are working/doign a job it will be an additional quality for her, whereas for men it is simply a necessity, Generally speaking!

Regards and thanks

- Drs.D.M.Sagar, The Netherlands

*

Mrs. Triveni,

Namaskara. I read your article in Thatskannada about cooking and wanted to write some lines about that.

First of all, article is excellent. I could remember my childhood in Gokak, Raibag, and Kulgod (Belgaum District). Also my bachelor days in Germany as a student for 2 years. As you said in your article, now i have completely stopped cooking, when i came to india.

I do agree with you, that, it is a plus point, if a guy knows cooking, but should not be mentioned, while he is getting married. otherwise, the girl says "YES", soon :-)

Again, Thanks for this exquisite article. by the way, my father is also a well known writer in kannada, by the name H. S. BHAIRNATTI, and also a scientific story writer, along with DR. BHOOSNOORMATH.

Waiting for your next article in thatskannada. Have a nice day.

- Balappa Bhairnatti, Bombay

*

Dear Madam,

Thank you very much for the article, anubhavadadugeya Madi..., I agree with your view.

Kind regards,

- (Soory Hardalli) Sooryanarayana Kedlaya H, Bangalore

*

Hello Triveni,

Me Suma from Bangalore, I read ur Cooking article. Its a really nice one. Its a current situation happening in our daily life. Thanks 4 ur nice article.

Regards,

- Suma, Bangalore

ಪೂರಕ ಓದಿಗೆ-

ಅನುಭವದಡುಗೆಯ ಮಾಡಿ...ಅನುಭವಿಗಳು ಬಂದು ನೀವೆಲ್ಲ ಕೂಡಿ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more