ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲವಿನ ಋಣವ ತೀರಿಸಲೆಂತೋ?

By Staff
|
Google Oneindia Kannada News


ಋಣಗಳನ್ನು ಕಳೆದುಕೊಳ್ಳಲಾರೆವೆಂದು ಗೊತ್ತಿದ್ದರೂ ಋಣಮುಕ್ತರಾಗುವ ಹಂಬಲ ನಮಗೇಕೆ? ಒಂದಲ್ಲಾ ಒಂದು ವಿಧದಲ್ಲಿ ಪ್ರತಿಯೊಬ್ಬರೂ ಹಲವು ಋಣಗಳನ್ನು ಹೊತ್ತ ಚಿರಋಣಿಗಳು!

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

    [email protected]
Enough?ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ. ಈ ಪ್ರಶ್ನೆಗೆ ಥಟ್ಟೆಂದು ಉತ್ತರಿಸುವ ಅಗತ್ಯವಿಲ್ಲ. ಇದೇನು ‘ಚಂದನ ’ ಚಾನಲ್‌ನಲ್ಲಿ ನಾ. ಸೋಮೇಶ್ವರ ಅವರು ನಡೆಸಿಕೊಡುವ ಕಾರ್ಯಕ್ರಮವಲ್ಲ ! ನಿಧಾನವಾಗಿಯೇ ಉತ್ತರಿಸಿ. ಈ ಪ್ರಶ್ನೆಯನ್ನು ಒಮ್ಮೆ ನಿಮಗೆ ನೀವೇ ಮತ್ತೊಮ್ಮೆ ಕೇಳಿಕೊಳ್ಳಿ. ಉತ್ತರ ಮಾತ್ರ ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿರಲಿ. ನಾನು ಕೇಳಲಿರುವುದು ಅಂತಹ ಯಕ್ಷಪ್ರಶ್ನೆಯೇನೂ ಅಲ್ಲ. ಒಂದು ಅತಿ ಸರಳವಾದ ಪ್ರಶ್ನೆ - ‘ನೀವು ಜೀವನದಲ್ಲಿ ಒಮ್ಮೆಯೂ ಸಾಲಗಾರರಾಗಿಲ್ಲವೇ? ಯಾರಿಗೂ ನೀವು ಋಣಿಯಾಗಿಲ್ಲವೇ? ’

ಈ ಪ್ರಶ್ನೆಗೆ ನಿಮ್ಮ ಉತ್ತರ ‘ಇಲ್ಲ’ ಎಂದಾದರೆ ನನ್ನ ಅಭಿನಂದನೆಗಳನ್ನು ಸ್ವೀಕರಿಸಿ. ‘ಹೌದು’ ಎಂದಾದರೆ ಚಿಂತೆ ಬೇಡ. ನೀವು ಈ ಜಗತ್ತಿನಲ್ಲಿ ಸಾಲ ಮಾಡದೇ ಇರುವ ಏಕಮಾತ್ರ ವ್ಯಕ್ತಿ ಏನಲ್ಲ. ನಿಮ್ಮ ದೋಣಿಯಲ್ಲಿ ತೇಲುತ್ತಿರುವ ಪಯಣಿಗರು ಬಹಳ ಜನರಿದ್ದಾರೆ! ಅಷ್ಟೇಕೆ ಬೃಹತ್‌ ರಾಷ್ಟ್ರಗಳೇ ವಿಶ್ವಬ್ಯಾಂಕಿನ ಸಾಲದಲ್ಲಿ ಬಿದ್ದಿವೆಯೆಂದ ಮೇಲೆ ನಮ್ಮದೇನು ಮಹಾ?

ಜಗತ್ತಿನ ಶ್ರೀಮಂತ ದೇವರಲ್ಲೊಬ್ಬ ತಿರುಪತಿ ತಿಮ್ಮಪ್ಪ ಬ್ಯಾಂಕರ್‌ ಕುಬೇರನಲ್ಲಿ ತೆಗೆದುಕೊಂಡಿರುವ ದೊಡ್ಡ ಮೊತ್ತದ ಸಾಲದ ಮುಂದೆ ನಮ್ಮದು ಬರೀ ಜುಜುಬಿ ಸಾಲ. ಕ್ರೆಡಿಟ್‌ ಕಾರ್ಡುಗಳು ಬಳಕೆಗೆ ಬಂದಮೇಲಂತೂ, ಒಂದಲ್ಲಾ ಒಂದು ವಿಧದಲ್ಲಿ ಎಲ್ಲರೂ ಇಲ್ಲಿ ಸಾಲಗಾರರೇ ಆಗಿದ್ದೇವೆ. ಈ ದೃಷ್ಟಿಯಿಂದ ನೋಡಿದಾಗ, ಸಾವಿಲ್ಲದ ಮನೆಯಂತೆ, ಸಾಲವಿಲ್ಲದ ಮನೆ ಸಿಗುವುದೂ ಕೂಡ ಕಷ್ಟವೆ. ಸಾಲದು ಎನ್ನುವ ಹಪಾಹಪಿಯಿಂದ ಹುಟ್ಟಿಕೊಳ್ಳುವ ಸಾಲದ ಬಗ್ಗೆ ಒಂದೆರಡು ಸಾಲು ಇಲ್ಲಿವೆ.

ಸಾಲದ ಪ್ರಸ್ತಾಪ ಬಂದಾಗ ಸರ್ವಜ್ಞನ ಜನಪ್ರಿಯ ವಚನ ‘ ಸಾಲವನು ಕೊಂಬಾಗ ಹಾಲೋಗರವುಂಡಂತೆ’ ನೆನೆಯದೆ ಮುಂದೆ ಸಾಗುವಂತಿಲ್ಲ. ಸಾಲ ತೆಗೆದುಕೊಳ್ಳುವಾಗಿನ ಸಂತೋಷ ಕ್ಷಣಿಕವಾಗಿದ್ದು, ನಂತರ ಪ್ರಾರಂಭವಾಗುವ ಸಂಕಷ್ಟಗಳ ಸರಮಾಲೆಯನ್ನು ‘ಕಿಬ್ಬದಿಯ ಕೀಲು ಮುರಿದಂತೆ’ ಎಂಬ ಒಂದು ಪುಟ್ಟ ಸಾಲಿನಲ್ಲಿ ಹಿಡಿದಿಟ್ಟುಬಿಟ್ಟಿದ್ದಾನೆ ಸರ್ವಜ್ಞ. ಮನೆಮಠಗಳ ಹಂಗಿಲ್ಲದೆ ಅವಧೂತನಂತೆ ಊರೂರು ಅಲೆಯುತ್ತಿದ್ದ ಸರ್ವಜ್ಞನಿಗೆ ಈ ವಚನ ಬರೆಯಲು ಸ್ವಾನುಭವವಂತೂ ಕಾರಣವಾಗಿರಲಾರದು. ತನ್ನ ಸುತ್ತಮುತ್ತಲಿದ್ದ ಜನರು ಸಾಲ ಮಾಡಿ ಪಡುತ್ತಿದ್ದ ಪರಿಪಾಟಲು ಕಂಡು ಹೊರಹೊಮ್ಮಿದ ಅನುಕಂಪ ಅವನಿಂದ ಈ ವಚನ ಮೂಡಿಸಿರಬಹುದು. ಆಲಕ್ಕೆ ಹೂವಿಲ್ಲ, ಸಾಲಕ್ಕೆ ಕೊನೆಯಿಲ್ಲ ಎಂಬ ನಾಣ್ಣುಡಿಯಂತೆ ( ಸರೋಜಾದೇವಿ ಅಭಿನಯದ ‘ಕಿತ್ತೂರು ರಾಣಿ ಚೆನ್ನಮ್ಮ’ ಚಿತ್ರದ ಗೀತೆ ಕೂಡ ) ಸಾಲದ ಸುಳಿಯಲ್ಲಿ ಒಮ್ಮೆ ಸಿಕ್ಕಿಬಿದ್ದವರು ಹೊರಬರುವುದು ಕಠಿಣವೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X