• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಕ್ರಿಯೆ : ಸುನಾಮಿಗೂ ಉಂಟು ಸಲಾಮು

By Staff
|
ಮಾನ್ಯ ಸಂಪಾದಕರೆ,

ತ್ರಿವೇಣಿ ಶ್ರೀನಿವಾಸರಾವ್‌ ಅವರು ಬರೆದ ‘ನಾನೇ ಸುನಾಮಿ’ ಎಂಬ ಪದ್ಯ, ಭಗವದ್ಗೀತೆಯಲ್ಲಿ ವಿಷ್ಣು ಅರ್ಜುನನಿಗೆ ಹೇಳಿದ ವಾಕ್ಯವನ್ನು ಜ್ಞಾಪಕಕ್ಕೆತರುತ್ತದೆ. ವಿಷ್ಣುವು ಪ್ರತ್ಯಕ್ಷನಾದಾಗ ಅವನ ಆಕಾರವನ್ನು ನೋಡಿ ದಿಗ್ಭ್ರಾಂತನಾದ ಅರ್ಜುನನಿಗೆ ಭಗವಂತನು ಹೀಗೆ ಹೇಳುತ್ತಾನೆ:

ಕಾಲೋಸ್ಮಿ ಲೋಕಕ್ಷಯ ಕೃತ್ಪ್ರ ವೃದ್ಧೋ

ಲೊಕಾನ ಸಮಾಹರ್ತುಮಿಹ ಪ್ರವೃತ್ತಃ

ಋತೇ ‘ಪಿ ತ್ವಾಂ ನ ಭವಿಷ್ಯಂತಿ ಸರ್ವೇ

ಯೇ’ ವಸ್ಥಿತಾಃ ಪ್ರತ್ಯನೀಕೇಷು ಯೋಧಾಃ

ನನಗೆ ಈ ಸಂಸ್ಕೃತ ಪದಗಳನ್ನು ಸರಿಯಾಗಿ ಭಾಷಾಂತರಿಸಲು ಆಗದಿದ್ದರೂ ಅವುಗಳ ಅರ್ಥ ಹೀಗಿದೆಯೆಂದು ನನ್ನ ಭಾವನೆ.

ನಾನು ಕಾಲನಾಗಿರುವೆನು, ಲೋಕಗಳನ್ನು ಸೃಷ್ಟಿಸುವವನೂ ನಾನು, ಲೋಕಗಳನ್ನು ನಾಶಗೊಳಿಸುವವನೂ ನಾನು. ನೀನು ಯುದ ್ಧ ಮಾಡುವುದಿಲ್ಲ ಎಂದರೂ ಯುದ್ಧಕ್ಕಾಗಿ ಬಂದಿರುವ ಯೋಧರೆಲ್ಲರೂ ಎಂದೂ ಬದುಕುವವರಲ್ಲ.

ಅಣುಬಾಂಬನ್ನು ಮೊದಲು ತಯಾರಿಸಿದ ವಿಜ್ಞಾನಿಗಳಲ್ಲೊಬ್ಬನಾದ ಜೆ. ರಾಬರ್ಟ ಓಪ್ಪನ ಹೈಮರನು, ಮೊದಲನೆಯ ಪ್ರಾಯೋಗಿಕ ಅಣುಬಾಂಬು ಸ್ಫೋಟನೆಯಾದಾಗ ದಿಗ್ಭ್ರಾಂತನಾಗಿ ಈ ಶ್ಲೋಕವನ್ನು ಹೇಳಿದನೆಂದು ಪ್ರತೀತಿ ಇದೆ.

ಭಗವಂತನು ಸೃಷ್ಟಿಸುವುದಕ್ಕೂ ಮತ್ತು ನಾಶಗೊಳಿಸುವದಕ್ಕೂ ಹೊಣೆ ಎಂದು ಗೀತೆ ಹೇಳುತ್ತದೆ. ಇತರ ಧರ್ಮಗಳ ಪ್ರಕಾರ ದೇವರು ಸೃಷ್ಟಿಸುತ್ತಾನೆ ಮತ್ತು ಸೇಟನ್ನನು ಅವುಗಳನ್ನು ನಾಶಗೊಳಿಸುತ್ತಾನೆ ಎಂಬ ಹೇಳಿಕೆಯನ್ನು, ಗೀತೆಯು ಪ್ರತಿಪಾದಿಸುವುದಿಲ್ಲ.

- ರಾಜಾರಾಮ ಕಾವಳೆ, ಹ್ಯಾಂಪಶೈರ (ಯು. ಕೆ.)

(ಕಾವಳೆಯವರೆ, ನನ್ನ ಕವಿತೆಗೆ ಆಧ್ಯಾತ್ಮದ ಸ್ಪರ್ಶ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.- ತ್ರಿವೇಣಿ)

*

ನಿಮ್ಮ ಸುನಾಮಿ ಕವನ ಚೆನ್ನಾಗಿದೆ. ಆದರೆ ನೀವಾಗಬೇಡಿ ಸುನಾಮಿ (ನಾನೇ ಸುನಾಮಿ ಅಂದಿದ್ದರಿಂದ).

- ರಘುನಾಥ ಪಿ.ಜಿ. , ಬೆಂಗಳೂರು

(ನಾನೇ ಸುನಾಮಿಯಾದರೂ ನಿಮ್ಮಂತಹ ಆತ್ಮೀಯ ಓದುಗರಿಗೆ ನನ್ನಿಂದ ಯಾವ ಹಾನಿಯೂ ಆಗದು :-)

*

ಸುನಾಮಿಯ ಸಾಧ್ಯತೆಗಳ ವಿಸ್ತರಿಸುವ ‘ನಾನೇ ಸುನಾಮಿ’ ಕವಿತೆ ಚೆನ್ನಾಗಿದೆ. ನಿರ್ಲಿಪ್ತತೆ ಮೇಲುಗೈಸಾಧಿಸಿದ ಭಾವುಕತೆ ನನಗಿಷ್ಟ.

- ರಘು

*

ಪ್ರೀತಿಯ ವೇಣಿಯವರೆ,

ನಿಮ್ಮ ಕವನ ಓದಿದೆ, ಸುನಾಮಿಯ ಬಗ್ಗೆ ಯೋಚಿಸಿದರೆ ಮೈನಡುಗುತ್ತದೆ. ನಾವೆಲ್ಲ 2000 ದಲ್ಲಿ ಪ್ರಳಯ ಆಗುತ್ತೆ, ಇಡೀ ಭೂಮಿಯೇ ಜಲಮಯವಾಗುತ್ತೆ ಅಂತ ಕೇಳಿ ಕೇಳಿ ದೊಡ್ಡವರಾದೆವಲ್ಲ ? 2000ರಲ್ಲಿ ಭುಜ ಭೂಕಂಪ, ಈಗ ಸುನಾಮಿ. ಹೀಗೆ ಪ್ರಕೃತಿದೇವಿ ಆಗಾಗ ತಾನೇ ಬ್ಯಾಲೆನ್ಸ್‌ ಮಾಡ್ತಾ ಇರುತ್ತಾಳೆ ಅನ್ನಿಸುತ್ತೆ. ಆದರೆ ಬಲಿಯಾದವರೆಲ್ಲ , ನಾವು ಬದುಕುಳಿಯಲೆಂದೇ ಬಲಿಯಾದರೇನೋ ಅನ್ನಿಸಿಬಿಡುತ್ತದೆ ಒಮ್ಮೊಮ್ಮೆ.........!!!

ವಂದನೆಗಳು.

- ರೇಣುಕಾ ಶ್ಯಾಮ್‌, ನವದೆಹಲಿ

*

ಸುನಾಮಿ ಕವನ ತುಂಬಾ ಚೆನ್ನಾಗಿದೆ. ಇನ್ನು ಇಂತಹ ಕವನಗಳನ್ನು ಬರೆಯಲು ಆ ದೇವರು ನಿಮಗೆ ಸ್ಫೂರ್ತಿ ಮತ್ತು ಚೈತನ್ಯವನ್ನು ಕೊಡಲಿ.

- ಮಾನಿನಿ, ಬೆಂಗಳೂರು

*

ನಾನು ನಿಮ್ಮ ಕವಿತೆ ಓದಿದೆ. ನನಗೆ ತುಂಬಾ ಇಷ್ಟವಾದ ಸಾಲು ಅಂದರೆ ‘ಕ್ಷಮಯಾಧರಿತ್ರಿಯಲ್ಲ : ಬದಲಾಗಿದೆ ನಾಮ, ನಾನೀಗ ಸುನಾಮಿ’!

ಹೀಗೇ ಬರೆಯುತ್ತೀರಿ.

- ಬಾಬು, ಬಳ್ಳಾರಿ.

*

ನಿಮ್ಮ ‘ಸುನಾಮಿ’ ಕವಿತೆ ನನಗೆ ಬಹಳ ಹಿಡಿಸಿತು.

- ವಾಣಿ ಅರವಿಂದ, ಆಸ್ಟಿನ್‌- ಟೆಕ್ಸಾಸ್‌.

*

Hello,

I read u r kavana about tsunami really its touching and very nice , me too had same feeling . yes, now no need to be a "kshamaya darithri", One should "kalidurga" but not for innocent people but to those who are human devil. isn’t it?

Thx for such a nice kavana.

with love,

- suchitra shetty,

London – UK.

(ಹೌದು. ಈ ಕವನ ಬರೆಯುವ ಹೊತ್ತಿನಲ್ಲಿ, ನನ್ನ ಮನಸ್ಸಿನಲ್ಲಿಯೂ ತ್ರಿಶೂಲ ಹಿಡಿದು ನರ್ತಿಸುತ್ತಿರುವ ಶಕ್ತಿದೇವತೆಯ ಚಿತ್ರವೇ ಇತ್ತು!)

*

Hi,

It really feels that mother earth exploded after taking a lot of abuse from all us. But looks like mom was not choosy the way she exploded. She lost control, as all of us do at times. Great poem!

- Sheela Kadambi, USA.

(ನಿಮಗೆ ಬರೆದ ಪತ್ರ ನನಗೇ ಹಿಂತಿರುಗಿ ಬಂದಿತು)

*

Shrimati trivENiyavare,

Nimma patra Odi, kShaNakAla nAnu BhAvaparavaSanAde. Hattu sAvira mailugaLAce obba amErikannaLige iruva kaLakaLi nammavarigE illivAgideyalla eMdu saMkaTavAyitu.(family mart prakaraNa). eMtaha oLLe suddi koTTiri. tuMbA dhanyavAdagaLu.

- Rohit R

*

Naane Sunami a poem by K.Triveni is fantastic and well thought piece.

Although the poem is written from Illinois US ,it gives a feeling that its origin is from the ravaged beaches of Nagapattinum or karaikal. Good keep it up.

- Narain Gadagkar, Bangalore

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more