• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಠಾರವು ಚೆನ್ನ! ವಠಾರದ ಬದುಕೂ ಚೆನ್ನ!!

By Staff
|
ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್‌ ಅವರಿಗೆ ನಮಸ್ಕಾರಗಳು.

‘ಬಂಗಲೆಯಲ್ಲೇನಿದೆ ಬದುಕು? ಬಾ ವಠಾರದಲ್ಲಿ ಹುಡುಕು’, ಬಹಳ ಸ್ವಾರಸ್ಯ ಮತ್ತು ಭಾವೋದ್ರೇಕ ಉಂಟು ಮಾಡುವಂತಹ ನಿಮ್ಮ ಲೇಖನ, ನನ್ನನ್ನು ಅನೇಕ ವರ್ಷಗಳ ಹಿಂದಕ್ಕೆ ಕರೆದೊಯ್ಯಿತು. ಅದೇಕೆಂದರೆ ನನಗೂ ರಂಗರಾವ್‌ ರಸ್ತೆಯು ಬಹಳ ಪರಿಚಯ. ನ್ಯಾಷನಲ್‌ ಮಿಡ್ಲ ಸ್ಕೂಲಿನಲ್ಲಿ ಓದುತಿದ್ದ ನನ್ನ ಅನೇಕ ಸಹಪಾಠಿಗಳು ಆ ರಸ್ತೆಯಲ್ಲಿದ್ದ ವಠಾರಗಳಲ್ಲಿ ವಾಸಮಾಡುತ್ತಿದ್ದರು. ನಮ್ಮ ಮನೆ ನಮ್ಮ ಶಾಲೆಯ, ಬಸವನಗುಡಿಯ, ಇನ್ನೊಂದು ಭಾಗದಲ್ಲಿದ್ದರೂ ನನ್ನ ಸಂಗಡಿಗರೊಡನಾಡಲು ನಾನು ರಂಗರಾವ್‌ ರಸ್ತೆಗೆ ಹೋಗುತ್ತಿದ್ದೆನು. ಅಲ್ಲಿದ್ದ ರಸ್ತೆಯ ಕಲ್ಲಿನ ನಾಮಪಲಕವನ್ನು ಇದ್ದಿಲಿನಿಂದ ತಿದ್ದಿ ‘ರಂಗರಾವ್‌ ರಸ್ತೆ’ ಯನ್ನು ‘ಠಠಠಠಾಪ ಠಸ್ತೆ’ಗೆ ಪರಿವರ್ತಿಸಿದ್ದರಲ್ಲಿ ನನ್ನ ಕೈವಾಡವೂ ಇತ್ತು!

ಇತಿ ನಮಸ್ಕಾರ,

- ರಾಜಾರಾಮ ಕಾವಳೆ, ಹ್ಯಾಂಪ ಶೈರ, ಇಂಗ್ಲೆಂಡ್‌

*

ತ್ರಿವೇಣಿ ಅವರೇ,

ವಠಾರದ ಜೀವನ ಒಂದು ಸಾಮೂಹಿಕ ಜೀವನ. ಎಲ್ಲಾ ಸಂಕಷ್ಟಗಳು ಮತ್ತು ಎಲ್ಲಾ ಸಂತೋಷಗಳು ಅಲ್ಲಿ ನೆಲೆಯೂರಿರುತ್ತವೆ. ಪರಸ್ಪರ ವೈರ - ಪೈಪೋಟಿಗಳು ಇದ್ದರೂ, ನೀವು ಹೇಳಿದ ರೀತ್ಯಾ ಅವು ನೀರಗುಳ್ಳೆಯಂತೆ ಕರಗುವ ಕ್ಷಣಗಳೇ ಹೆಚ್ಚು. ಕಷ್ಟಕ್ಕೆ ಸಹಾಯವಾಗುವ ನೆರೆಹೊರೆಯವರುಳ್ಳ ಜೀವನವನ್ನು ನಾವು ವಠಾರಗಳಲ್ಲಿ ಮಾತ್ರ ಕಾಣಬಹುದು.

ಜೀವನದ ಕಷ್ಟ ಸುಖಗಳೊಂದಿಗೆ, ಅಡುಗೆಯನ್ನೂ ಹಂಚಿಕೊಳ್ಳುವ ತಾಣವೇ ವಠಾರ. ‘ಪಕ್ಕದ ಮನೆಯ ಹುಡುಗನಿಗೆ ಓದಲು ಉಪದ್ರವಾಗುತ್ತೆ! ’ ಎಂದು ಟೀವಿ ಹಾಕದ ಸಂಸಾರಗಳೆಷ್ಟೊ! ಒಂದು ಮನೆಯವರಿಗೆ ಕಾಯಿಲೆ ಆದರೆ, ಅಡುಗೆ ಪಕ್ಕದಮನೆಯಿಂದ ಬರುವುದು ಅಲ್ಲಿ ಒಂದು ವಿಚಿತ್ರ ಅಲ್ಲ!

ಚಿಕ್ಕ ಮಕ್ಕಳನ್ನು ಪಕ್ಕದ ಮನೆಯಲ್ಲಿ ಬಿಟ್ಟು, ಆರಾಮಾಗಿ ಸಿನೆಮಾ ನೋಡಿ ಬರುವ ಸಂಸಾರಗಳನ್ನು ಇಲ್ಲಿ ನೋಡಬಹುದು. ‘ಒಂದೇ ನಲ್ಲಿ - ಒಂದೇ ಮೀಟರ ’ ಆದರೇನು? ‘ನಾವೆಲ್ಲ ಒಂದೇ ’ ವಠಾರದವರು ಎಂಬ ಭಾವನೆ ಎಲ್ಲ ಕಷ್ಟಗಳನ್ನೂ ಮರೆಸುತ್ತವೆ.

ಈ ವಠಾರದಲ್ಲಿನ ಜೀವನ ಒಂದು ಅವಿಭಕ್ತ ಕುಟುಂಬದ ಜೀವನ ಇದ್ದಂತೆ. ಆದರೆ, ನೀವೆಂದಂತೆ ಈಗ ವಠಾರಗಳ ಯುಗ ಮಾಯವಾಗಿ, ಅಪಾರ್ಟಮೆಂಟ್‌ ಯುಗ ಶುರು ಆಗಿದೆ! ಒಮ್ಮೆ ವಠಾರದಲ್ಲಿ ವಾಸ ಮಾಡಿದವರು, ಅವುಗಳಲ್ಲಿ ಜೀವಿಸಿದವರು ಜೀವನ ಪರ್ಯಂತ ಮರೆಯುವಂತಿಲ್ಲ.

ಉತ್ತಮ ಲೇಖನಕ್ಕೆ ವಂದನೆಗಳು!

- ಎಸ್‌ . ಎಂ. ಪೆಜತ್ತಾಯ, ಬೆಂಗಳೂರು

*

ತ್ರಿವೇಣಿ ಆವರೆ,

ನಿಮ್ಮ ‘ವಠಾರ’ ಲೇಖನ ಓದಿದೆವು. ಚೆನ್ನಾಗಿತ್ತು. ನಮ್ಮ ತಂದೆಯವರು (ಕಡೂರು ರಾಮಸ್ವಾಮಿಯವರು) ಓದಿದರು.

- ಸುಮ ಕಡೂರು, ಕ್ಯಾಲಿಫೋರ್ನಿಯಾ

*

ತ್ರಿವೇಣಿ ಅವರಿಗೆ,

ನಿಮ್ಮ ಲೇಖನ ಓದಿದೆ. ವಠಾರದ ಜೀವನವನ್ನು ಸರಳವಾಗಿ ವರ್ಣಿಸಿದ್ದೀರಿ. ಈಗಿನ ಕಾಲದಲ್ಲಿ, ಅದರಲ್ಲೂ ಅಮೆರಿಕದಲ್ಲಿ ವಾಸ ಮಾಡುವವರಿಗೆ ವಠಾರದ ಜೀವನದ ನೆನಪು ಮುದ ನೀಡುತ್ತದೆ. ಅಲ್ಲಿ ಸಿಗುವ ಪ್ರೀತಿ, ವಾತ್ಸಲ್ಯ, ಒಗ್ಗಟ್ಟು, ಪರಸ್ಪರ ಸಹಾಯ ಇಲ್ಲಿ ನಮಗೆ ಮರೀಚಿಕೆ ಇದ್ದಂತೆ. ನಾವು ಚಿಕ್ಕವರಿದ್ದಾಗ ನಮ್ಮ ಕಾಂಪೌಂಡಿನಲ್ಲಿ ಇನ್ನೊಂದು ಕುಟುಂಬ ವಾಸಿಸುತ್ತಿತ್ತು. ನಮ್ಮ ಅಮ್ಮನಿಗೆ ಹುಷಾರಿಲ್ಲದಿದ್ದಲ್ಲಿ, ಅಲ್ಲಿದ್ದ ಆಂಟಿನೇ ಅಡಿಗೆ ಮಾಡಿ, ನಮಗೆ ತಲೆಗೆ ನೀರು ಕೂಡ ಹಾಕುತ್ತಿದ್ದರು. ನಮ್ಮ ತಂದೆ ತಾಯಿ ಬೇರೆ ಊರುಗಳಿಗೆ ಹೋದರೆ ನಮ್ಮನ್ನ ಅವರ ನೇತೃತ್ವದಲ್ಲಿ ಬಿಟ್ಟು ಹೋಗುತ್ತಿದ್ದರು.

ಈಗ ನಾನೇನಾದರೂ ಒಂದೇ ಒಂದು ನಿಮಿಷ ಪುಟ್ಟ ಕೆಲಸದ ಮೇಲೆ ಹೊರಗೆ ಹೋಗುವ ಪರಿಸ್ಥಿತಿ ಬಂದರೆ, ನನ್ನ ಎರಡು ಪುಟ್ಟ ಕಂದಮ್ಮಗಳು ಮಲಗಿದ್ದರೂ, ಅವರನ್ನು ಎಬ್ಬಿಸಿ ರೆಡಿ ಮಾಡಿ, ಅವರಿಗೆ ಇಷ್ಟವೋ ಇಲ್ಲವೋ ಕರೆದುಕೊಂಡು ಹೋಗಬೇಕು! ಅಂತಹ ಸಮಯಗಳಲ್ಲಿ, ನಾನು ಎಷ್ಟು ಬಾರಿ ನಮ್ಮ ವಠಾರದ ಮನೆಯನ್ನು ನೆನೆಸಿಕೊಂಡಿರಬಹುದು ಎಂದು ನೀವೇ ಊಹೆ ಮಾಡಬಹುದು!

- ಅನುಪಮಾ, ಇಲಿನಾಯ್‌

*

ಲೇಖನ ತುಂಬಾ ಚೆನ್ನಾಗಿದೆ. ನೀನು ಬರೆದಿರುವುದು ನಿಜ. ಅರಮನೆಯಲ್ಲಿರುವ ಸುಖಕ್ಕಿಂತ ವಠಾರದಲ್ಲಿರುವವರ ಬದುಕು ನಿಜಕ್ಕೂ ಚೆನ್ನ. ಅಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಇರುತ್ತದೆ, ಶ್ರೀಮಂತಿಕೆಯ ಹಮ್ಮು ಕೂಡ ಇರುವುದಿಲ್ಲ. ನನಗೆ ಖ್ಯಾತ ಲೇಖಕಿ ಎಂ.ಕೆ.ಇಂದಿರಾ ಅವರ ‘ಟು-ಲೆಟ್‌’ ಕಾದಂಬರಿ ನೆನಪಿಗೆ ಬಂದಿತು. ಅದನ್ನು ಓದಿದಾಗ ತುಂಬಾ ನಗು ಬರುತ್ತದೆ. ಅಲ್ಲಿಯ ಬದುಕು, ಜೀವನದ ಬಗೆಗೆ ಬಹಳ ಸುಂದರವಾದ ಚಿತ್ರಣವನ್ನು ನೀಡಿದ್ದಾರೆ ಇಂದಿರಾ ಅವರು!

ನಮ್ಮ ದೊಡ್ಡಪ್ಪ ವಠಾರದಲ್ಲಿ ವಾಸ ಮಾಡುತ್ತಿದ್ದರು. ಅವರು ಪ್ರಕಾಶ ನಗರ, ಸುಬ್ರಹ್ಮಣ್ಯ ನಗರ, ಗವಿಪುರ, ಗುಟ್ಟಹಳ್ಳಿಯ ವಠಾರಗಳಲ್ಲಿ ಇದ್ದಾಗ, ಅಲ್ಲಿ ಇರುವ ಯೋಗ ನನಗೂ ಬಂದಿತ್ತು, ನಮ್ಮ ಮೌಸಿ(ದೊಡ್ಡಮ್ಮ) ಅಂದರೆ ನಮಗೆಲ್ಲ ತುಂಬ ಇಷ್ಟ ಇತ್ತು.(ಈಗ ಅವರಿಲ್ಲ) ನಾವು ಬೆಂಗಳೂರಿಗೆ ಬಂದಾಗೆಲ್ಲ ಅವರ ಮನೆಯಲ್ಲೇ ಠಿಕಾಣಿ! ಸೂಪರ್‌ ಲೈಫ ಅದು!

ಒಟ್ಟಿನಲ್ಲಿ ನಿಮ್ಮ ಲೇಖನದ ಮೂಲಕ ಗತಕಾಲದ ವೈಭವವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.

- ಮೀರಾ ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯಾ

*

ಮಾನ್ಯ ಶ್ರೀಮತಿ ತ್ರಿವೇಣಿರಾವ್‌ರವರೇ,

ತಾವು ಹಾಗೂ ತಮ್ಮ ಕುಟುಂಬದವರೆಲ್ಲರೂ ಸುಖ ಸಂತೋಷದಿಂದಿರುವಿರಾಗಿ ತಮ್ಮ ವಠಾರ ಲೇಖನ ಓದಿದಾಗಲೇ ತಿಳಿಯಿತು. ಸದಾ ತಮ್ಮ ಕುಟುಂಬದಲ್ಲಿ ಸುಖ ಶಾಂತಿ ನೆಲೆಸಲಿ ಎಂದು ಹಾರೈಸುವೆ. ಇನ್ನು ತಮ್ಮ ಬಂಗಲೆಯಲ್ಲೇನಿದೆ ಬದುಕು, ಬಾ ವಠಾರದಲ್ಲಿ ಹುಡುಕು ಲೇಖನ ಸರಳವಾಗಿ ಮನಮುಟ್ಟುತ್ತದೆ.

ನನ್ನ ಅನುಭವಕ್ಕೆ ಬಂದಂತೆ ಮನೆ, ಮನ, ಮಡದಿ, ಮಮತೆ, ತಾಯಿ, ತಾಯ್ನಾಡು ಇವುಗಳ ಬಗ್ಗೆ ಎಷ್ಟು ಬರೆದರೂ ಇನ್ನೂ ಏನಾದರೂ ತಿಳಿಯಬಹುದಾದುದು, ಬರೆಯಬಹುದಾದುದು ಇದ್ದೇ ಇರುತ್ತದೆ ಎಂಬುದಕ್ಕೆ ತಮ್ಮ ಲೇಖನವೂ ಕೂಡ ಸಾಕ್ಷಿ. ನಿಜವಾಗಲೂ ತಾವು ತಿಳಿಸಿರುವಂತೆ ಈಗಿನ ಬಂಗಲೆಗಳಲ್ಲಿ ಕೇವಲ ಜನ ವಾಸಿಸುತ್ತಿರಬಹುದು, ಆದರೆ ಅಲ್ಲಿ ಯಾವುದೇ ಸತ್ವ ಕಾಣಲು ಸಿಗುವುದಿಲ್ಲ. ಬಂಗಲೆಗಳಲ್ಲಿ ಅಲಂಕಾರಿಕ ವಸ್ತುಗಳು ಹೆಚ್ಚಾದಂತೆ ಅಲ್ಲಿ ವಾಸಿಸುವ ಜನರೂ ಸಹ ಕೇವಲ ಅಲಂಕಾರಕ್ಕೆ ಅಲ್ಲಿ ವಾಸಿಸುವಂತಿರುತ್ತದೆ. ಅಲ್ಲಿ ಯಾವುದೇ ತರಹದ ಸಂಬಂಧಗಳೂ ಬದುಕಿರುವುದಿಲ್ಲ. ಅವೆಲ್ಲವೂ ಅಲ್ಲಿ ನೆಲಕ್ಕೆ ಹಾಸಿರುವ ಗ್ರಾನೈಟೋ, ಮಾರ್ಬಲ್ಲೋ, ಟೈಲ್ಸೋ ಇವುಗಳನ್ನು ಹಾಸಲು ಬಳಸಿರುವ ಸಿಮೆಂಟ್‌ನೊಂದಿಗೆ ಸೇರಿ ತಳಸೇರಿರುತ್ತದೆ.

ತಂದೆ, ತಾಯಿ, ಗಂಡ ಹೆಂಡತಿ, ಮಕ್ಕಳು ಇವೆಲ್ಲವೂ ಬಂಗಲೆಯಲ್ಲಿ ವಾಸಿಸುವ ಅಲಂಕಾರಿಕ ಜೀವಸತ್ತ ಬೊಂಬೆಗಳಾಗಿರುತ್ತವೆ. ಹಿಂದೆ ಸಗಣಿ ಸಾರಿಸಿದ ಮನೆಗಳಲ್ಲಿಯೋ ಇಲ್ಲಾ ಹುಲ್ಲುಮುಚ್ಚಿದ ಚಾವಣಿಗಳಲ್ಲಿ ವಾಸಿಸುತ್ತಿದ್ದಾಗ ಇದ್ದಂತಹ ಪ್ರೀತಿ, ವಾತ್ಸಲ್ಯ, ಒಡನಾಟ, ನಂಬಿಕೆ ಇವುಗಳೆಲ್ಲವೂ ಈಗಿನ ಹೆಚ್ಚಿನಂಶ ಬಂಗಲೆಗಳಲ್ಲಿ ಕಾಣಲು ಸಿಗುವುದಿಲ್ಲ. ಹಿಂದಿನ ಮನೆಗಳಲ್ಲಿ ಗುಬ್ಬಚ್ಚಿಗಳು ಧಾರಾಳವಾಗಿ ಓಡಾಡಿಕೊಂಡಿರುತ್ತ ಆ ಮನೆ ಸದಾ ಗಿಜಿಗಿಜಿ ಗುಡುತ್ತಿತ್ತು. ಆದರೆ ಈಗಿನ ಬಂಗಲೆಗಳಲ್ಲಿ ಗುಬ್ಬಚ್ಚಿಗಳೂ ಸಹ ಒಳಗಡೆ ಹೋಗಲು ಹೆದರುತ್ತವೆ ( ಅವು ಉಳಿದ್ದಿದ್ದರೆ ತಾನೆ ?) ಎಲ್ಲಿ ಪ್ರೀತಿ ಪ್ರೇಮ ಇರುವುದಿಲ್ಲವೋ ಅಲ್ಲಿ ಗುಬ್ಬಚ್ಚಿಗಳೂ ಸಹ ಹೋಗಲಾರವು ಎನ್ನುವುದಕ್ಕೆ ಈಗಿನ ನಮ್ಮ ಬಂಗಲೆಗಳು ಸಾಕ್ಷಿ.

ಅದೇ ಅಲ್ಲೋ ಇಲ್ಲೋ ಉಳಿದಿರುವ ವಠಾರಗಳನ್ನು ನೋಡಿ, ಇನ್ನು ಅಲ್ಪ ಸ್ವಲ್ಪ ಮನುಷ್ಯತ್ವ ಅಲ್ಲಿ ಕಾಣ ಸಿಗುತ್ತದೆ. ಏನೇ ಕಷ್ಟ ಸುಖವಾದರೂ ಹಂಚಿಕೊಳ್ಳಲು ವಠಾರದಲ್ಲಿ ಸಾಕಷ್ಟು ಮಾನವೀಯತೆ ಇರುವ ಜನ ಸಿಗುತ್ತಾರೆ, ಅದೇ ಬಂಗಲ್ಲೆಗಳಲ್ಲಿ ನೋಡಿ ಒಂದು ಸಾವು ಸಂಭವಿಸಿದರೂ ಆ ಮನೆಯವರಿಗೆ ಸಾಂತ್ವನ ಹೇಳಲು ಅಕ್ಕ ಪಕ್ಕದ ಯಾರ ಸುಳಿವೂ ಅಲ್ಲಿರುವುದಿಲ್ಲ. ಅಲ್ಲಿ ಕೇವಲ ಒಂದು ಹೆಣ, ಅದರ ಸುತ್ತಲೂ ಕಣ್ಣೀರಿಲ್ಲದ ಮನಸತ್ತ ನಾಲ್ಕಾರು ಜನವಷ್ಟೇ ಅಲ್ಲಿ ಕಾಣಬಹುದು. ಇದು ಇಂದಿನ ಪರಿಸ್ಠಿತಿ, ನಾವೇ ಬಯಸಿ ಬಯಸಿ ಅಂದವಾಗಿ ಕಟ್ಟಿಕೊಂಡದ್ದು, ನಾವೇ ಅನುಭವಿಸಬೇಕಲ್ಲವೆ.

ವಂದನೆಗಳು,

- ರಘುನಾಥ್‌.ಪಿ.ಜಿ., ಬೆಂಗಳೂರು.

*

Dear Triveni,

Really memorable Article. I also remembering my past golden days, when I was in NR Colony, Bangalore. The same type of Vataras and happenings over there, nearer to my room. Writing was Pure practical one.

Anyhow Thanks for article.

Thanks & Regards,

- B.Ramachandrda Adiga, GERMANY

*

Dear TriveNi,

I read your article on TK. It was a good subject to write. You have explained the scenes adding a personal touch to it(As usual) with a positive flavour to it. Honestly I have never stayed in vaTaara, though lived in 2 different rented houses. I would also vote for these rented houses for giving me good neighbours & childhood friends.

naanu vaTaaravannu bari cinema dalli noDiruvudu ashTe(Not even watched NagathihaLLis mega serial vaTaara on Udaaya TV). cinema dRushyagaLalli vaTaarada negative part gaLannu torisiddare, people not minding their own business instead they sadistically satisfy themself kindling others with very obvious & personal questions which is not right, idu satyava nanage tiLidilla. I dont know whether Is it worth to ignore such things just because of the fact of securtiy/aathmiyate we get in vaTaara? This is just a word about vaTaara & not about your article :-)

Added to your lines, I think the Apartment complexes now can be compared to the vaTaara, because your neighbours door opens into your balcony isnt it? Apartment complex bagge ondu joke nenpige bantu, If you say you own a flat unless you belong to the ground floor or the top floor both your floor & the terace is somebody elses terace & floor respectively :-) vaTaaradalli mahaDigaLu iruttadeya tiLidilla :-)

nimmavara vaTaarakke indiruguva aase pooraisali yendu haaraisutta viramisuve.

Take Care,

- Veena Shivanna, Bangalore.

*

Trivieniyavaree,

I enjoyed reading your writing on "Lets live together in Vathara". We use to live in Vathara when I was toddler. I still remember my old neighbors.

It is nice to have good memories.

I live in Virginia, I came from Bangalore. I like to read kannada stories, poems. Looking forward to read more articles in thatskannada.com

- Bhargavi, Virginia

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more