ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳಸಿ ಘಮದಿಂದ ಕೆಂಡಸಂಪಿಗೆವರೆಗೆ...

By Staff
|
Google Oneindia Kannada News
ಶ್ರೀಮತಿ ತ್ರಿವೇಣಿಯವರಿಗೆ,

ನೀವು ದಟ್ಸ್‌ ಕನ್ನಡದಲ್ಲಿ ‘ತುಳಸಿವನ’ ಅಂಕಣ ಬರೆಯುತ್ತಿರುವುದು ಬಹಳ ಸಂತೋಷ. ಹೀಗೊಂದು ನೆನಪಿನ ತುಣುಕು- ‘ನನ್ನ ಬಾಲ್ಯದಲ್ಲಿ ನಮ್ಮ ಅಜ್ಜಿ ತುಳಸಿಕಟ್ಟೆಗೆ ಸುತ್ತಿಬರುತ್ತಿದ್ದರೆ, ಅವರ ಕೈಯಲ್ಲಿರುತ್ತಿದ್ದ ಪಂಚವಾಳದ ತಟ್ಟೆಯಲ್ಲಿನ ವೀಳ್ಯದ ಮೇಲಿರುತ್ತಿದ್ದ ಸಕ್ಕರೆಯನ್ನು ನಮ್ಮ ಕಣ್ಣುಗಳು ಸುತ್ತಿಬರುತ್ತಿದ್ದವು!’

ನಿಮ್ಮ ಅಂಕಣದಲ್ಲಿ ನಮ್ಮಂತಹ ಓದುಗರದ್ದೇ ಸ್ವಂತ ಅನುಭವವೇನೋ ಎಂಬಂತಹ ಲೇಖನಗಳು ಬರುತ್ತಿರಲಿ. ನಮ್ಮ ನಿಮ್ಮ ವಿಚಾರಗಳ ಪರಿಧಿ ಹಿಗ್ಗುತ್ತಾ ಸಾಗಲಿ!

ನಮ್ಮ ಎಸ್‌.ಕೆ ಶಾಮಿ ಅವರ ಭೇಟಿಯ ಬಗ್ಗೆ ವರದಿ ಚೆನ್ನಾಗಿತ್ತು! ಪೂರ್ವ-ಪಶ್ಚಿಮಕ್ಕೆ ಮುಖ ಮಾಡಿ ಕುಳಿತಿದ್ದೆ. ತೆರೆದ ಬಾಗಿಲು ಕೈ ಬೀಸಿ ಕರೆಯುತ್ತಿದೆ, ಪುಟ ತಿರುವಿದರೆ, ತುಳಸಿಯ ಘಮ ಮೂಗಿಗೆ ಬಡಿಯುವುದೋ, ಕೆಂಡ ಸಂಪಿಗೆ ಕೈಗೆ ಸಿಗುವುದೋ...? ರವಿಯ ಸೂರ್ಯಶಿಕಾರಿ ಕೆಲವೊಮ್ಮೆ ಅಕ್ಷರ ರೂಪದ ಸ್ವಪ್ರಶಂಸೆಯೇನೋ ಅನ್ನಿಸಿ ಕಕ್ಕಾಬಿಕ್ಕಿಯಾಗಿದ್ದೇನೆ!

ಏನೋ ಲಹರಿಗೆ ಬಿದ್ದು ಬಡಬಡಿಸಿದೆ ಅನ್ನಿಸುತ್ತೆ, ಕ್ಷಮಿಸಿ!

-ನ. ಹರ್ಷವರ್ಧನ
ಕನಕನ ಕಟ್ಟೆ -ಅಮೆರಿಕಾ

*

ನಮಸ್ಕಾರ ತ್ರಿವೇಣಿಯವರೆ,

ನಾನು ರಜನಿ ಭಟ್‌, ಬಿಲ್ಲರಕೋಡಿ. ನಿಮ್ಮ ಎಲ್ಲಾ ಲೇಖನಗಳು ತುಂಬಾ ಚೆನ್ನಾಗಿ ಬರುತ್ತಿವೆ. ಹೀಗೆ ಬರೆಯುತ್ತಿರಿ.

ವಂದನೆಗಳೊಂದಿಗೆ,

-ರಜನಿ ಭಟ್‌, ಶಾರ್ಜಾ

*

ತ್ರಿವೇಣಿಯವರಿಗೆ ನಮಸ್ತೆ,

ಬರವಣಿಗೆಯಲ್ಲಿ ‘ನಿಮ್ಮತನ’ವನ್ನು ಯಶಸ್ವಿಯಾಗಿ ಗುರುತಿಸಿಕೊಂಡಿದ್ದಕ್ಕೆ ನನ್ನ ಅಭಿನಂದನೆಗಳು.

-ಸತೀಶ್‌ ಕುಮಾರ್‌, ನ್ಯೂಜೆರ್ಸಿ

*

ಹಲೋ ತ್ರಿವೇಣಿ ಅವರೆ,

ಈ ವಾರದ ‘ತುಳಸಿವನ’ ಚೆನ್ನಾಗಿ ಬಂದಿದೆ. ನಿಮ್ಮ ಹಾಗೆ ಶಾಂತರಾಮ ಸೋಮಯಾಜಿ ಅವರ ಕಥೆಗಳನ್ನು ಓದಿದ ಅಭಿಮಾನಿಯಾಗಿ, ಅನಿಸಿಕೆಗಳನ್ನು ಹಂಚಿಕೊಳ್ಳಲು ಸಂತಸವಾಗುತ್ತದೆ. ಜೊತೆಗೆ ಕನ್ನಡ ಅಭಿಮಾನದ ಬಗೆಗೆ ನೀವು ಬರೆದ ಮಾತು ಅಕ್ಷರಶಃ ನಿಜ.

ವಂದನೆಗಳು,

-ಉದಯ ಹೆಗಡೆ, ಟೆಕ್ಸಾಸ್‌

*

ಹಲೋ ತ್ರಿವೇಣಿ ಅವರೆ,

ನಮಸ್ಕಾರ ! ನಿಮ್ಮ ಲೇಖನದಲ್ಲಿ ಶಾಂತಾರಾಮ ಸೋಮಯಾಜಿಯವರ ಬಗ್ಗೆ ಓದಿದ ನಂತರ ಈ ತಿಂಗಳ ಮಯೂರದಲ್ಲಿ ಅವರ ‘ಪವಾಡ ಪುರುಷರು’ ಕತೆ ಓದಿದೆ. ಹಿಂದೆ ತುಂಬಾ ಓದಿದ್ದೆನಾದರೂ ಅಷ್ಟು ನೆನಪಿಲ್ಲ. ನನಗೂ ಅವರೊಂದಿಗೆ ಮಾತಾಡುವ ಬಯಕೆ. ನೀವು ನನಗೆ ಅವರ ಇಮೈಲ್‌ ಐಡಿ ಕೊಟ್ಟರೆ ಉಪಕಾರವಾಗುತ್ತದೆ.

-ರೇಣುಕಾ ಶ್ಯಾಮ್‌, ನವದೆಹಲಿ

*

ವ್ಯಥೆಗಳ ಕಳೆಯುವ ಕಥೆಗಾರ!- ತುಳಸೀವನದಲ್ಲಿ ಪ್ರಕಟವಾದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು -

ನಮಸ್ಕಾರ! ತುಳಸೀವನದ ತುಳಸಿಯಕ್ಕ ಶ್ರೀಮತಿ ತ್ರಿವೇಣಿಯವರಿಗೆ!

ತಾವು ಸೋಮಯಾಜಿಗಳ ಭಗೀರಥ ಪ್ರಯತ್ನದ ಬಗ್ಗೆ ಬರೆದದ್ದು ಸಮಯೋಚಿತ!

ಹೌದು! ನಾವು ಕನ್ನಡಿಗರು! ಕನ್ನಡ ಸಾಹಿತ್ಯ ಪ್ರೇಮಿಗಳು! ಪಕ್ಕದ ಮನೆಯವರಿಂದ ಪೇಪರ್‌ ಇಸಿದು ಕೊಂಡು ಓದುವ ‘ಪರಿಸರ’ಪ್ರೇಮಿಗಳು!

ಪುಸ್ತಕ ಕ್ರಯಕೊಟ್ಟು ಕೊಳ್ಳದೇ, ‘ಫ್ರೀ’ ಸಿಕ್ಕಾಗ ಮಾತ್ರ ಸಾಹಿತ್ಯ ಓದುವ ನಾವು ಸಜ್ಜನರು! ತಮ್ಮ ‘ಕರೀ ಬೆಕ್ಕನ್ನು ಬಿಳಿ ಮಾಡುವ ‘ನಾಯಿ ಬಾಲ ನೆಟ್ಟಗೆ ಮಾಡುವ’ ಪ್ರಯತ್ನ ಶ್ಲಾಘನೀಯ! ತಮ್ಮ ಈ ಸಾಹಸಕ್ಕೆ ಜಯವನ್ನು ಹಾರೈಸುತ್ತೇನೆ.

ಒಳ್ಳೆಯ ಕೆಲಸ ಮಾಡಲು ಹೊರಟ ನಮ್ಮ ಸುಸಂಸ್ಕೃತ ಬರಹಗಾರ ಸೋಮಯಾಜಿಯವರಿಗೆ ಆದ ಭ್ರಮನಿರಸನದ ಗಾತ್ರವನ್ನು ನನಗೆ ಊಹಿಸಲೂ ಅಸಾಧ್ಯ.

ತಾವು, ತಮ್ಮಂತಹ ಕೈಬೆರಳಷ್ಟು ಮಂದಿ ಬರಹಗಾರರು, ಕೆಲವೇ ಕೆಲವು ಓದುಗರು ಮತ್ತು ದಟ್ಸ್‌ಕನ್ನಡ- ಎಲ್ಲರೂ ಸೇರಿ ಸೋಮಯಾಜಿಗಳ ಯೋಜನೆಗಳಿಗೆ ತುಂಬು ಪ್ರೋತ್ಸಾಹ ಕೊಟ್ಟಿರುವಿರಿ. ಆದರೆ ಕನ್ನಡ ಸಾಹಿತ್ಯ ಪ್ರೇಮಿಗಳು ಅದನ್ನು ಸ್ವಾಗತಿಸಲೇ ಇಲ್ಲ!.

‘ಶ್ರೀ ಸೋಮಯಾಜಿಗಳಿಗೆ ಸಾಂತ್ವನ ಹೇಳಲು ಹುಟ್ಟಾ ಕನ್ನಡಿಗನಾದ ನನಗೆ ಯೋಗ್ಯತೆ ಇದೆಯೇ?’ ಎಂದು ನನ್ನ ಮನಸ್ಸು ನನ್ನನ್ನು ಹಲವು ಬಾರಿ ಪ್ರಶ್ನಿಸುತ್ತದೆ. ಏನೇನೋ ಬರೆದೆ! ನಾನು ತಪ್ಪು ಅಭಿಪ್ರಾಯ ಪ್ರಕಟಿಸಿದ್ದರೆ ನನ್ನನ್ನು ಕ್ಷಮಿಸಿರಿ.

ನಮಸ್ಕಾರಗಳು

-ಎಸ್‌. ಮಧುಸೂದನ ಪೆಜತ್ತಾಯ, ಬೆಂಗಳೂರು

*

ನಮಸ್ಕಾರ,

‘ಕ್ರೆೃಂ ಸ್ಟೋರಿ’ಬಗ್ಗೆ ನಿಮ್ಮ ಲೇಖನ ಓದಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಪೋಲಿಸ್‌ ಅಧಿಕಾರಿಯಾಬ್ಬರು ಒಂದು ಭಾಷಣದಲ್ಲಿ, ಕ್ರೆೃಂ ಸ್ಟೋರಿಯಂತಹ ಕಾರ್ಯಕ್ರಮಗಳು ಜನಗಳು ಮತ್ತು ಯುವಕರ ಮೇಲೆ ಅಪಾಯಕಾರೀ ಪರಿಣಾಮ ಬೀರುತ್ತವೆ ಎಂದು ಹೇಳಿದ್ದರು. ಅದನ್ನು ಓದಿದಾಗಿನಿಂದ ನನ್ನ ತಲೆಯಲ್ಲಿ ಅದೇ ಓಡುತ್ತಿತ್ತು. ಇಂತಹ ಕಾರ್ಯಕ್ರಮಗಳು ಒಳ್ಳೆಯದೋ, ಕೆಟ್ಟದ್ದೋ ಎಂದು. ಅಷ್ಟರಲ್ಲಿ ನಿಮ್ಮ ಲೇಖನ ಓದಿ ನನಗೂ ನನ್ನ ಅನಿಸಿಕೆಗಳನ್ನು ಬರೆಯೋಣವೆನಿಸಿತು

ನಾನು ಮೊದಮೊದಲು ಉದಯ ಟೀವಿ ಹಾಕಿಸಿಕೊಂಡಾಗ ಬಹಳ ಇಷ್ಟಪಟ್ಟು ನೋಡಿದೆ. ಒಂದೆರಡು ಕಾರ್ಯಕ್ರಮಗಳು ಬಹಳ ಕುತೂಹಲವನ್ನೇ ಎಬ್ಬಿಸಿತ್ತು. ಬರಬರುತ್ತಾ ಅದರಲ್ಲಿ ತೋರಿಸುವ ದೃಶ್ಯಗಳು ಟೀವಿಯಲ್ಲಿ ತೋರಿಸಲು ಅನರ್ಹವಾಗಿದ್ದವು. ಕತ್ತಿಯಿಂದ ಕೊಚ್ಚಿದ ಹೆಣ, ಅರೆಸುಟ್ಟ ಹೆಣ....ನೋಡಲು ಬಹಳ ಅಸಹ್ಯವೆನಿಸಿದವು. ನಂತರ ಕೆಲವು ಪ್ರಸಂಗಗಳನ್ನು ಸ್ನೇಹಿತರೊಡಗೂಡಿ ವಿಮರ್ಶಿಸತೊಡಗಿದೆ. ನಾವು ಒಂದು ದೃಷ್ಟಿಕೋನದಿಂದ ಮಾತ್ರ ನೋಡುತ್ತಿದ್ದೇವೆ, ಇನ್ನೊಂದು ಕೋನದಿಂದ ನೋಡುತ್ತಿಲ್ಲ ಎಂದು ನಮಗನಿಸಿತು.

ಕ್ರೆೃಂ ಸ್ಟೋರಿಯ ಕತೆಗಳು ಬಹಳ ರಸವತ್ತಾಗಿರಬಹುದು. ನನ್ನ ದೃಷ್ಟಿಯಲ್ಲಿ, ಯಾವ ವಿಷಯಗಳು ಕೋರ್ಟು ಕಚೇರಿ ಹತ್ತದೆ, ಕಾನೂನಿನಿಂದ ತಪ್ಪಿಸಿಕೊಂಡಿದ್ದರೆ ಅಂತಹ ವಿಷಯಗಳನ್ನು ಎತ್ತಿ ಹಿಡಿದರೆ ಸರಿಯೆನಿಸಬಹುದು. ಕೋರ್ಟುಕಚೇರಿ ಹತ್ತಿರುವ ವಿಷಯಗಳಾದರೆ, ಅಂತವುಗಳನ್ನು ಕಾನೂನಿನ ಚೌಕಟ್ಟಿಗೇ ಬಿಟ್ಟರೆ ಒಳ್ಳೆಯದು ಅನ್ನಿಸುತ್ತದೆ.

ನಿಮ್ಮ ಲೇಖನ ಬಹಳ ವಿಚಾರಪೂರ್ಣವಾಗಿದೆ. ನಿಮ್ಮ ಶೈಲಿ ಯಾವಾಗಲೂ ನನಗಿಷ್ಟ. ಹೀಗೆ ನಿಮ್ಮ ಲೇಖನ ಮಾಲೆ ಮುಂದುವರೆಯಲಿ.

-ವಲ್ಲೀಶ ಶಾಸ್ತ್ರಿ , ಕ್ಯಾಲಿಫೋರ್ನಿಯಾ

*

Dear Editor,

What ever I wanted to write, Mrs.Triveni has written in a very effective way. I totally agree that crime story is one of the best programs that is being telecasted in karnataka. She has written that since she is in USA, she is not able to watch Crime Diary and so hasnt written any thing on that.

Since I have returned to Bangalore, I am able to watch that also. Even this program is being done in a very professional way.

But only thing that I would like to complain is to change the timings of one of these two programs. Both of them are getting telecasted from 10.00PM to 10.30 PM and thereby making viewers choose one. Since both of them are excellent eye openers to the society, I strongly feel that they should telecast them at different timings so that both will get more viewers who are now getting divided. Usually every night we see the beginning of both the programs and go for the most interesting topic. I think both of them should discuss and decide about the timings.

Thanks to both your portal and Triveni for this wonderful article.

- Ram Prasad
www.geocities.com/singer_ram

*

Hi Madam,

how are u?

neevu barediruva crimestory baravanige mathu nimma vaada sariyagide.

thanks,

- Santosh kumar, Bangalore

*

Dear Triveni,

I read the article and there is so much of truth in it. I saw the program when I had been to India this time and my inlaws didnt let me see it regularly since I was pregnant and was not appropriate for me to watch it but they all watch the show everyday and benefitting from it! They say that it allows them to be more cautious and aware of the things thats happening around them. Truth hurts and hence people involved in such things obviously dont like the facts to be dragged out.

It was a nice article.

- Anu IL

*

Hello madam,

I am sathish kumar B.T. from Bangalore. I read u r article. It was a nice article i loved it very much. When I saw

Triveni I thought it is an article from famous writer Triveni, but in u r writting I found some of the character that were in her writting.

I truly admire u . I have also written some of the articles and kavanas .I want to share with u. Ii will be

waiting for u r reply,

thanking you,

- B.T. Satish kumar, Bangalore

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X