• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ಹಾಗೂ ಜೋಶಿ ಬರಹಗಳು ನನಗಿಷ್ಟ!

By Staff
|
ನಮಸ್ಕಾರ ಮಾನ್ಯ ಶ್ರೀಮತಿ ತ್ರಿವೇಣಿಯವರಿಗೆ,

ತಮ್ಮ ಉಳಿತಾಯದ ಬಗೆಗಿನ ಲೇಖನವನ್ನು ಅದು ಪ್ರಕಟವಾದ ದಿನವೇ ಓದಿದೆ. ಲೇಖನದಲ್ಲಿ ತಾವು ಪ್ರಸ್ತಾಪಿಸಿರುವ ವಿಷಯ ಹಳೆಯದಾದರೂ ನಿರೂಪಿಸಿರುವ ರೀತಿ ಚೆನ್ನಾಗಿದೆ. ಕೆಲವೊಮ್ಮೆ ವಿಷಯ ಎಷ್ಟೇ ಚೆನ್ನಾಗಿದ್ದರೂ, ನಿರೂಪಣೆ ಚೆನ್ನಾಗಿಲ್ಲದಿದ್ದರೆ ಸಪ್ಪೆ ಅನ್ನಿಸುತ್ತದೆ. ಆದರೆ ನಿಮ್ಮ ನಿರೂಪಣೆಯಿಂದ ಲೇಖನಕ್ಕೆ ಹಾಗು ವಿಷಯಕ್ಕೆ ಮೆರುಗು ಬಂದಿದೆ. ನಿಮ್ಮ ಹಾಗು ಶ್ರೀಯುತ ಜೋಶಿಯವರ ಲೇಖನಗಳನ್ನು ಓದಿ ನನಗೂ ಲೇಖನಗಳನ್ನು ಹೆಚ್ಚು ಹೆಚ್ಚು ಓದುವ/ಬರೆಯುವ ಉತ್ಸಾಹ ಬಂದಿದೆ. ನಿಮ್ಮ ಲೇಖನವನ್ನು ಓದಿ ಕೆಲವರಾದರೂ ಉಳಿತಾಯದ ಮಂತ್ರ ಜಪಿಸಿದ್ದೇ ಆದಲ್ಲಿ, ಅದು ಒಳ್ಳೆಯದು.

ವಂದನೆಗಳು.

- ಪಿ. ಜಿ. ರಘುನಾಥ, ಬೆಂಗಳೂರು

*

ತ್ರಿವೇಣಿಯವರೆ,

ನಾನು ನಿಮ್ಮ ಹಾಗೂ ಜೋಶಿಯವರ ಲೇಖನಗಳನ್ನು ಓದುತ್ತೇನೆ. ನೀವಿಬ್ಬರೂ ಚೆನ್ನಾಗಿ ಬರೆಯುತ್ತೀರಿ. ನಿಮ್ಮ ಲೇಖನದಲ್ಲಿ ಬಳಸುವ ಕವನಗಳನ್ನು ಹೇಗೆ ಸಂಗ್ರಹಿಸುತ್ತೀರಿ?

ನಾನೂ ಕೂಡ ಕಡೂರು ತಾಲೋಕ್‌ನಲ್ಲಿರುವ ಬಿಸಲೇಹಳ್ಳಿಯಿಂದ ಬಂದವಳು. ಈಗ ಬೆಂಗಳೂರಿನಲ್ಲಿದ್ದೇನೆ.

ವಂದನೆಗಳು.

- ನಾಗರತ್ನ ನಂಜುಡಪ್ಪ, ಬೆಂಗಳೂರು

*

ಉಳಿತಾಯದ ಮಹಾ ಮಂತ್ರವನ್ನು ಮರೆತವರು ಎಂದಿಗೂ ಜಾಣರಾಗಲಾರರು. ಸೋರುವ ಪಾತ್ರೆ ಬರಿದಾಗಲೇ ಬೇಕು. ಇದು ಲೋಕ ನಿಯಮ.

ಉಳಿತಾಯದ ಮಹತ್ವವನ್ನು ನೆನಪಿಸಿಕೊಟ್ಟ ತ್ರಿವೇಣಿಯವರಿಗೆ ವಂದನೆ.

ಇಂತೀ,

-- ಸುಳಿಮನೆ ಸರೋಜಮ್ಮ ಪೆಜತ್ತಾಯ,

ಬಾಳೆಹೊಳೆ - 677 179

*

ತ್ರಿವೇಣಿಯವರೆ,

ಉಳಿತಾಯದ ಬಗ್ಗೆ ನೀವು ಬರೆದ ಲೇಖನವನ್ನು ಓದಿದೆ. ‘ಉಳಿತಾಯ’ ನನಗೆ ಕೂಡ ಯಾವಾಗಲೂ ಒಂದು ಕುತೂಹಲಕಾರಿಯಾದ ವಿಷಯ. ನೀವು ಹೇಳಿದಂತೆ ಜಿಪುಣತನ/ಉಳಿತಾಯ/ದುಂದುವೆಚ್ಚ ಈ ವಿಷಯಗಳು ಖಂಡಿತವಾಗಿಯೂ subjective -ಸಂದರ್ಭಾನುಸಾರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ, ಕುಟುಂಬದಿಂದ ಕುಟುಂಬಕ್ಕೆ, ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತದೆ.

ಇದಮಿತ್ಥಂ ಎಂದು ಈ ವಿಷಯದ ಬಗ್ಗೆ ಹೇಳಲು ಸಾಧ್ಯವಿಲ್ಲದಿದ್ದರೂ ಕೂಡ (ಇದರ ಬಗ್ಗೆ ಈ ಮೊದಲು ಚಿಂತಿಸದವರು) ಈ ವಿಷಯದ ಬಗ್ಗೆ ಸ್ವಲ್ಪವಾದರೂ ಆಸಕ್ತಿ ತೋರಿಸಬಹುದು ಅಂತ ನನ್ನ ಅಭಿಪ್ರಾಯ. ಚೆನ್ನಾಗಿ ಬರೆದಿದ್ದೀರಿ.

ಇತಿ,

- ಸಿ. ಕೃಷ್ಣಶಾಸ್ತ್ರಿ , ಕ್ಯಾಲಿಫೋರ್ನಿಯ

*

ಮಾನ್ಯರೇ,

ಈಗ ಇಲ್ಲಿ, ಅಮೆರಿಕದಲ್ಲಿ ಹಾಲಿಡೇ ಮಾಸ! ಆಪ್ತೇಷ್ಟರಲ್ಲಿ ಕೊಡುಗೆಗಳನ್ನು ಹಂಚಿಕೊಳ್ಳುವ ಸಂಪ್ರದಾಯವನ್ನು ನಾವುಗಳೆಲ್ಲಾ ದೇಶಕಾಲೋಚಿತವಾಗಿ ಪಾಲಿಸುತ್ತಿರುವುದರಲ್ಲಿ ತಪ್ಪೇನೂ ಕಾಣೆ. ಆದರೆ ಭಾರತದ ನಡುವರ್ಗದ ಮೌಲ್ಯದಲ್ಲಿ ಹುಟ್ಟಿ ಬೆಳೆದ ಅನೇಕರು ಇಲ್ಲಿನ ಗ್ರಾಹಕ ಸಂಸ್ಕೃತಿಯ ವೈಪರೀತ್ಯದ ಸುಳಿಯಲ್ಲಿ ಸಿಲುಕಿರುವುದನ್ನು ಕಂಡರೆ, ಶ್ರೀಮತಿ ತ್ರಿವೇಣಿಯವರ ಉಳಿತಾಯದ ಮಹಾಮಂತ್ರ ಕುರಿತಾದ ಲೇಖನ ತುಂಬಾ ಪ್ರಸ್ತುತ ಅನ್ನಿಸುತ್ತಿದೆ. ಅಂಗಡಿಯಿಂದ ಹುರುಪಿನಲ್ಲಿ ತಂದ ಮರುಕ್ಷಣವೇ ಮೂಲೆಗುಂಪಾಗುವ ಉಡುಗೆಗಳು, ಆಟಿಕೆಗಳು ಮತ್ತು ತಿನಿಸುಗಳು ಕಿಮ್ಮತ್ತಿನ ಪಟ್ಟಿ ಸಮೇತ ತಿಂಗಳುಗಟ್ಟಲೆ ಅಣಕಿಸುತ್ತ ಒಂದು ದಿನ ಗಾರ್ಬೇಜ್‌ ಟ್ರಕ್ಕಿನಲ್ಲಿ ಕಣ್ಮರೆಯಾಗುವುದು ಸರ್ವೇಸಾಮಾನ್ಯ.

ಕ್ರೆಡಿಟ್‌ ಕಾರ್ಡಿಗೆ ಲೆಕ್ಕ ಬರೆಸಿ ಕೊಂಡು ತಂದ ಬೆಣ್ಣೆಯನ್ನು ಕಾಸಿ ತುಪ್ಪ ತಿನ್ನುತ್ತ, ತಿಳಿಯದೇ ‘ಋಣಂ ಕೃತ್ವಾ ಘೃತಂ ಪಿಬೇತ್‌’ ಎಂದ ಮಹಾಶಯನ ಅನುಯಾಯಿಗಳಾಗಿಬಿಟ್ಟಿರುವ ನಮಗೆಲ್ಲ ಬುದ್ಧನ ಆಗಮನ ಸ್ವಾಗತವೇ! ಮುಂಬರುವ ಕೆಲವು ವಾರಗಳಲ್ಲಿ ತಾರಕಕ್ಕೆ ಏರುವ ‘ಜಿಂಗ್ಲ್‌ ಬೆಲ್ಸ್‌’ನ ಆರ್ಭಟದಲ್ಲಿ, ತ್ರಿವೇಣಿಯವರ ಕೆಲವು ಕಿವಿಮಾತುಗಳು ಮುಳುಗಿಹೋಗುವ ಸಾಧ್ಯತೆಗಳೇ ಅಧಿಕವಾಗಿದ್ದಾಗ್ಯೂ, ಅವುಗಳ ಕಾಲೌಚಿತ್ಯ ನಿರ್ವಾಜ್ಯವಾಗಿದೆ.

ತಮ್ಮವ,

- ಪ್ರಭು,

ಫ್ರೀಮಾಂಟ್‌, ಕ್ಯಾಲಿಫೋರ್ನಿಯ

*

Triveni,

I did read your "how we have forgotten to save" article. It is good.

Reading it made me nostalgic, thought about my grandmothers who were not wasting anything.

I vividly remember my moms mother washing dishes, where she conserved water. I always used to wonder why she did that when the water was pouring from the tap. After I came to this country and saw people wasting & not recycling made me think about my grandmothers. The savings & sacrifices they made is why we are enjoying. We should all abandon extreme consumerism and embrace savings for the future. My father once wrote, not to be ashamed of our simplicity.

Hope our posterity will not see us as buy and throw generation.

Best wishes & regards,

- Lakshmi Krishna - IL

*

Dear Editor,

The article written by sodari Smt Thriveni Srinivasa Rao is wonderful indeed and helpful to all.

Sree Sripadarayaru the guru of Sree Vyasastheertha and Sri Purandhara Dasaru writes as follows which is a word by word repetetion of this article.

"Ittange Iruveno Vittala
Srustivanditha Pada paduma Vittala....."

Respectfully,

- Nagaraj Rao,
Toronto, Canada

(ಈ ದೇವರನಾಮವನ್ನು ಪೂರ್ಣ ರೂಪದಲ್ಲಿ ಕಳುಹಿಸಿಕೊಟ್ಟಿರುವ ಶ್ರೀ ನಾಗರಾಜರಾವ್‌ ಅವರಿಗೆ ವಂದನೆಗಳು)

*

Hi Triveni,

Since I had half day, I was able to read your article. It is nice. Nanagu nimma tharaha naavu kadur nalli iddaga maduthiddu nenapige bantu. Aga---- idannella naave thlidu madabekendu namma doddavaru apekshisuthiddaru, Ega----difference enendare, helkotru abhyasa madade maretu adara bagge lakshavilladiruvudu. Re--cycling is one of our implementation in U.S ,nammannu aa daarige karedoyyuthade. Antha nanna abhipraya. illi labour elladukku jasthi erodrinda kelavusala, yeseyuvudu cheap agi ulithaya agabahudu.(in certain circumstances) Innulida circustances nalli neevu helidanthe ulithayada chinthe madidare, ulithaya onde alla, jeevanada values &virtues kooda kapadabahudu.

Thanks for the article,

With regards,

- Meena B. Subbarao. M.D.
Salinas – CA.

*

Namaskar,

Extremly glad to go through your column, Wonderful.

Sincerely,

- Basavaraj Nirakari, Haveri

*

Triveni avare,

nimma "tuLasivana" tappade OduttA baMdiddEne. Few of them have taken me back to childhood days while few have brought me back to reality! But, they are always interesting to read. So, please continue writing your excellent articles...

Regards,

- Jyothi shekar- CA

*

Hi,

I saw ur article abt diwali in tulasivana it was very nice u have used a lot of poems there, that was very nice but it was very lengthy it took a lot of time. try to reduce the length. Show some courtesy abt ur readers, but really it was vvvvvvvvvv nice.

- Prathima, Chikkamagalur

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more