• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮೆದೆಯಲ್ಲೂ ಉರಿಯುತಿದೆ ಸಿರಿನುಡಿಯ ದೀಪ!

By Staff
|
ನಮಸ್ತೆ ತ್ರಿವೇಣಿಯವರೆ,

ದಟ್ಸ್‌ಕನ್ನಡ.ಕಾಮ್‌ನಲ್ಲಿ ನಿಮ್ಮ ಲೇಖನ ಓದಿದೆ. ನವಿರಾದ ಹಾಸ್ಯ ಲೇಪನದೊಂದಿಗೆ ಕನ್ನಡದ ಉಳಿವಿನ ಸಮಸ್ಯೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಈ ಲೇಖನದಲ್ಲಿ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಕೂಡ ಒಂದೆರಡು ಮಾತು ಬರೆದಿದ್ದರೆ ಚೆನ್ನಾಗಿತ್ತು ಎಂದು ನನ್ನನಿಸಿಕೆ. ನಾನು ಹೇಳುತ್ತಿರುವುದು ಕನ್ನಡ ಅಂತರ್ಜಾಲ ತಾಣ ಮತ್ತು ಗುಂಪುಗಳ ಬಗ್ಗೆ. ಈ ಅಂತರ್ಜಾಲ ಗುಂಪುಗಳಲ್ಲಿ ಇಂಗ್ಲೀಷ್‌ ಭಾಷೆಯ ಅತಿಯಾದ ಉಪಯೋಗವು ಕೆಲವೊಮ್ಮೆ ನಗೆ, ಕೆಲವೊಮ್ಮೆ ಮರುಕ, ಕೆಲವೊಮ್ಮೆ ಅಸಹ್ಯ, ಕೆಲವೊಮ್ಮೆ ಕೋಪ ಹೀಗೆ ಎಲ್ಲಾ ಭಾವನೆಗಳನ್ನು ಮೂಡಿಸುತ್ತದೆ! ಆದರೆ ಕೆಲವರಲ್ಲಿರುವ ಕನ್ನಡಪ್ರೇಮವನ್ನು ನೋಡಿದರೆ ಖುಷಿಯೂ ಆಗುತ್ತದೆ.

ಇರಲಿ, ಅದು ಇದು ಅಂತ ಬರೆದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ :-) ನಿಮ್ಮ ಲೇಖನವನ್ನು ಓದಿದೆ. ಚೆನ್ನಾಗಿದೆ ಅಂತ ಬರೆಯಲು ಮನಸ್ಸಾಯ್ತು ಆಷ್ಟೆ. ದೂರದ ಅಮೆರಿಕಾದಲ್ಲಿ ಇದ್ದುಕೊಂಡು, ಕನ್ನಡವನ್ನು ಮರೆಯದೆ, ಉಳಿಸಲು ಕೈಲಾದ ಪ್ರಯತ್ನ ಮಾಡುತ್ತಿರುವ ನಿಮ್ಮ ಉತ್ಸಾಹ ಮೆಚ್ಚತಕ್ಕದ್ದು.

ಇತಿ,

- ಸಿ. ಕೃಷ್ಣಶಾಸ್ತ್ರಿ, ಕ್ಯಾಲಿಫೋರ್ನಿಯ

*

ನಮಸ್ಕಾರ ತುಳಸಿ ಅಕ್ಕಾ!

ನಿಮ್ಮ ಲೇಖನ ‘ಸಕಾಲಿಕ ಮತ್ತು ಸಹಜ’ ಕಳಕಳಿಯಿಂದ ತುಂಬಿದೆ! ಭಾಷೆ ಮತ್ತು ಶೈಲಿ ಮನೋಹರವಾಗಿದೆ.

ಈ ಕನ್ನಡದ ಅಭಿಮಾನವನ್ನು ಸೂಸುವ ಲೇಖನವನ್ನು ತಾವು ಕನ್ನಡದಲ್ಲಿ ಏಕೆ ಬರೆದಿರಿ?

‘ಇಂಗ್ಲಿಷ್‌ ಭಾಷೆಯಲ್ಲೇ ಬರೆದರೆ ಚೆನ್ನಾಗಿತ್ತು!’ ಎಂದು ನನ್ನ ಅಭಿಪ್ರಾಯ. ನೀವು ಈರೀತಿಯಲ್ಲಿ ಕನ್ನಡದಲ್ಲಿ ಬರೆದರೆ, ನೀವು ಉದ್ದೇಶಿಸಿ ಬರೆದ ನಮ್ಮ ‘ಮರಿಕನ್ನಡಿಗರು’ ಅದನ್ನು ಹೇಗೆ ಓದಿ ಅರ್ಥೈಸಿ ಕೊಂಡಾರು? ಉದಾ : ನನ್ನ ಮನೆಯಲ್ಲೇ ನೋಡಿ!

ನನ್ನ ಪುತ್ರಿಯರಿಬ್ಬರೂ ( ವರ್ಷ 27 ಮತ್ತು ಮೂವತ್ತ ಎರಡು ) ತಮ್ಮ ಏಳನೇ ಕ್ಲಾಸಿನಲ್ಲೇ ಕನ್ನಡಕ್ಕೆ ಇತಿಶ್ರೀ ಹಾಡಿದವರು. ಬೆಂಗಳೂರಿನಲ್ಲಿ ವಾಸವಾಗಿದ್ದರೂ, ನಮ್ಮ ಪುತ್ರಿಯರು ಈಗ ಕನ್ನಡ ಓದುವುದಿಲ್ಲ. ಕನ್ನಡ ಭಾಷೆಯಲ್ಲಿ ಬರೆಯುವುದಂತೂ ಇಲ್ಲವೇ ಇಲ್ಲ! ಅನಿವಾರ್ಯವಾದಾಗ ಮಾತ್ರ ಮನೆಯಲ್ಲಿ / ಮನೆಯಿಂದ ಹೊರಗೆ ಕನ್ನಡ ಮಾತನಾಡುತ್ತಾರೆ.

ನಾನು ಮತ್ತು ನನ್ನ ಯಜಮಾನತಿ ‘ಹಠ ಹಿಡಿದು’, ಅವರ ಬಾಲ್ಯದಿಂದಲೂ ಅವರೊಡನೆ ಕನ್ನಡವನ್ನೇ ಮಾತನಾಡುತ್ತಿದ್ದೇವೆ. ಅದಕ್ಕೋಸ್ಕರ ‘ಹಳೇ ರೂಢಿಯಿಂದಲೋ’ ಎಂಬಂತೆ ನಮ್ಮ ಮನೆಯಯ ಮಕ್ಕಳು ನಮ್ಮೊಡನೆ ಕನ್ನಡದಲ್ಲಿ ಸಂಭಾಷಿಸುತ್ತಾರೆ. ಅವರು ಚಿಕ್ಕದಾಗಿದ್ದಾಗ ಅವರು ನಮ್ಮನ್ನು ಬಾಯಿತುಂಬಾ ‘ಅಪ್ಪ, ಅಮ್ಮ’ ಎಂದು ಕರೆಯುತ್ತಿದ್ದರು. ಅವರು ಕಾನ್ವೆಂಟು ಸೇರಿದ ಮ್ಯಾಲೆ ನಮ್ಮನ್ನು ‘ಡ್ಯಾಡಿ, ಮಮ್ಮಿ’ ಅನ್ನ ತೊಡಗಿದರು! ಇತ್ತೀಚೆಗೆ ನಾವು ಬರೇ ‘ಡ್ಯಾಡ್‌! .... ಮೋಮ್‌!... ’ ಅನ್ನಿಸಿಕೊಂಡು ಕಾಲ ಹಾಕುತ್ತಿದ್ದೇವೆ.

‘ನಮ್ಮ ತ್ರಿವೇಣಿ ಅಮ್ಮನವರು ಅದೆಷ್ಟು ಕಷ್ಟ ಪಟ್ಟು ಕನ್ನಡ ಪ್ರೇಮದ ಬಗ್ಗೆ ಬರೆದಿದ್ದಾರೆ. ನೀವು ಈ ಇಂಟರ್‌ನೆಟ್‌ ಲೇಖನವನ್ನು ಸ್ವಲ್ಪ ಓದಿ!’ ಎಂದರೆ, ನಮ್ಮ ಕುವರಿಯರು, ನಮ್ಮ ಮನೆಯ ಆಯತ ವದನೆ( ಕಂಪ್ಯೂಟರ್‌ )ಯ ಕಡೆಗೆ ಒಮ್ಮೆ ಗಮನ ಹರಿಸಿ, ‘ಆ ಮೇಲೆ ಪುರುಸೊತ್ತು ಮಾಡಿಕೊಂಡು ಓದುವೆವು!’ ಎಂದರು. ನನಗೆ ಗೊತ್ತು, ನಮ್ಮ ದೇವರ ಸತ್ಯ! ಅವರು ಸದ್ರಿ ಲೇಖನವನ್ನು ಓದುವುದಿಲ್ಲ! ಯಾಕೆಂದರೆ, ಅವರಿಗೆ ಕನ್ನಡ ಅಕ್ಷರಗಳ ಪರಿಚಯವೇ ಮರೆತೇ ಹೋಗಿದೆ! ಈ ವಿಚಾರವನ್ನು ಬಹು ದುಃಖದಿಂದ ಬರೆಯುತ್ತಿದ್ದೇನೆ. ಇದು ಸತ್ಯ ವಿಚಾರ. ಕೆಲವೊಮ್ಮೆ ಸತ್ಯ ಬಹು ಕಹಿ!

ನಾವು ನಮ್ಮ ಮಕ್ಕಳಿಗೆ ಎಂದೂ ಕನ್ನಡವನ್ನು ಕಡೆಗಣಿಸಿ ಎನ್ನಲಿಲ್ಲ. ‘ಕನ್ನಡ ಓದಿರಿ’ ಎಂದು ತುಂಬಾ ಪುಸ್ತಕ ತಂದು ಕೊಟ್ಟೆವು. ದಿನಾ ಕನ್ನಡ ಪತ್ರಿಕೆ ತರಿಸುತ್ತೇವೆ. ಮನೆಯಲ್ಲಿ ಕನ್ನಡ ಕಾರ್ಯಕ್ರಮ ದಿನವೂ ಟೀವಿಯಲ್ಲಿ ನೋಡುತ್ತೇವೆ.

ಕನ್ನಡ ಸಿನಿಮಾದ ಸಿ. ಡಿ. ಕೊಂಡು ಆಗಾಗ ನೋಡುತ್ತೇವೆ. ನಮ್ಮ ಮಕ್ಕಳು ಇವುಗಳ ಕಡೆಗೆ ಗಮನ ಹರಿಸುವುದೇ ಇಲ್ಲ! ಅವರ ರೂಮಿನಲ್ಲಿ ಅವರು ಬೇರೆ ಟೀವಿ ಇಟ್ಟುಕೊಂಡು ಹಿಂದಿ / ಇಂಗ್ಲಿಷ್‌ ಕಾರ್ಯಕ್ರಮ ಮಾತ್ರ ನೋಡುತ್ತಾರೆ! ಸದ್ಯ! ಹಿಂದಿ ಕಾರ್ಯಕ್ರಮವನ್ನಾದರೂ ನೋಡುತ್ತಾರಲ್ಲಾ ಎಂದು ‘ಸ್ವಲ್ಪ ಸಂತೋಷ’ ಪಡುತ್ತೇವೆ.

ಅವರ ಕನ್ನಡ ಪ್ರೇಮದ ಬಗ್ಗೆ ಇನ್ನೇನು ಬರೆಯಲಿ?

ತಾಯೇ, ನಿಮ್ಮ ಬರಹ ಮನೋಜ್ಞವಾಗಿ ಮೂಡಿ ಬಂದಿದೆ. ಚಿ. ಸುರಭಿಯ ಚಿತ್ರಣೆ ತುಂಬಾ ಸೊಗಸಾಗಿದೆ. ನೀವು ಬರೆದ ಅಂತರ್ಜಾಲದಲ್ಲಿನ ಲೇಖನವನ್ನು ಇಂದಿನ ಯುವಜನರು ಓದಿದರೆ ತುಂಬಾ ಚೆನ್ನಿತ್ತು! ಎಷ್ಟು ಜನ ಓದುವರು???? ..... ಗೊತ್ತಿಲ್ಲ!

ಉತ್ತಮ ಲೇಖನ ಬರೆದ ನಿಮಗೆ ಮತ್ತು ಪ್ರಕಟಿಸಿದ ಅದುವೆ ಕನ್ನಡಕ್ಕೆ ವಂದನೆಗಳು.

ಇಂತೀ

- ಮಧುಸೂಧನ ಪೆಜತ್ತಾಯ, ಬೆಂಗಳೂರು

*

ನಮಸ್ಕಾರ.

ನನ್ನ ಹೆಸರು ವೆಂಕಟೇಶ್‌ ಅಂತ. ನಾನು ನಿಮ್ಮ ಲೇಖನವನ್ನು ದಟ್ಸ್‌ ಕನ್ನಡದಲ್ಲಿ ಓದಿದೆ. ಇಂದಿನ ಕನ್ನಡ ಸ್ಥಿತಿಯ ಬಗೆ ಬಹಳ ಖೇದವಾಗುತ್ತದೆ. ನೀವು ದಯವಿಟ್ಟು ನಮ್ಮ ಕನ್ನಡಿಗರು ಕನ್ನಡಿಗರಿಗಾಗಿ, ನಡೆಸುತ್ತಿರುವ ಜಾಲತಾಣವನ್ನು ಒಮ್ಮೆ ಭೇಟಿಮಾಡಿ. http://www.kannadaaudio.com

ಕನ್ನಡ ಬೆಳೆಸಲು ನಾವೆಲ್ಲ ಕೈ ಜೋಡಿಸೋಣ.

ಧನ್ಯವಾದಗಳು.

- ವೆಂಕಟೇಶ್‌ ಬಿಳಿಗೆರೆ

*

Srimati Triveniyavarey,

We read your article with great interest... All the facts you mentioned are true.

Thank you for opening the eyes of Kannadigas by your article...

We at Vancouver Kannada Koota taking lot of steps to make Kannada to grow:

1. With the efforts of few friends we are conducting Kannada class for all our kids and elders who has interest to learn Kannada.

2. We are telling stories from Karnataka to all our kids.

3. We are teaching Kannada calture to all our kids and also to elders.

4. We do Kannada Rajyotsava function here in Vancouver and children are participating with full interst.

5. We are creating togetherness with all our kids to learn our history.

I dont know how many Kannada sangha in North America are doing all these activities. We always think we all should learn our Mother tongue and make them to write and read our language.

We Kannadigas always talk about Kannada during Kannada Rajyothsava after that we forget it and do our own way... We need to have Kannada all the year around.

Jai Karnataka Mathey...

With Warm Regards,

- Ravindra, Canada

*

Hello Triveni,

Good article.

I had an opportunity to live outside Karnataka, in India. The people I met of various languages such as Tamil, Telugu and specially, Marathi were all sharing the same sentiments. In Madras, like in Bangalore, English schools clearly score on Tamil schools. Globalization does not distinguish between the Indian languages. Carefully, without hurting their sentiments, I have gathered some data among my Indian colleagues here and realized that their kids too, like ours, do not prefer to speak (let alone read and write) in their mother tongue. We, all Indians, are there in a same boat, in my opinion.

Being said that, I still agree with you that, when it comes to abimaana, we kannadigas run very low. Globalization kills all Indian languages and needless to say, Kannada is the first one to go.

Regards,

- M.R. Dattathri, CA

*

Hi,

I have read your article "Brundaavanadali aduvanaare?" I must have read the same atleast five times. Very interesting and i really enjoyedthe same , Congratulations! I must have written long back but any way pl excuse me for the dealy.

Looking forward to more articles from you.

Thanking you,

Sincerly,

- Basavaraj Nirakari.

Technical Adviser, Haveri - 581110

*

Namaskara Triveniyavare,

Nimma parichaya agiddu Thatskannada article moolaka. Nimma tavaru Kadur antha keli kushi @ surprise aythu. Nanna ooru Kadur howdu. Nanna vidyabyasa puc varage kadur nalle aytu. Nanage nimma gurutu siguthilla innu. May be you did not spend much time in Kadur. We lived in Kote, Kadur. Some way or the other, I should still be able to identify you. Currently I live in Salinas, Ca. I practice Pediatrics here.

Congratulations to you on your successful writings. I am very proud you, more so for sharing the same birth place. Write to me more about you When you get a chance.

Regards,

- Meena Subbarao

Salinas – CA.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more