• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಥೆಗಳ ಕಳೆಯುವ ಕಥೆಗಾರ ಲೇಖನಕ್ಕೊಂದು ಒಪ್ಪೋಲೆ

By Staff
|
ಶ್ರೀಮತಿ ತ್ರಿವೇಣಿ ಅವರೇ,

ನಿಮ್ಮ ಅಂಕಣ ಮತ್ತು ಇತರ ಸಾಹಿತ್ಯಕ ಬರಹಗಳನ್ನು ದಟ್ಸ್‌ ಕನ್ನಡದಲ್ಲಿ ಓದಿ ಆನಂದಿಸುತ್ತಿರುವ ಹಲವಾರು ಸಹೃದಯರಲ್ಲಿ ನಾನೂ ಒಬ್ಬಳು. ಶಾಂತಾರಾಮ ಸೋಮಯಾಜಿಯವರನ್ನು ಭೇಟಿಯಾಗಿ, ಅವರೊಡನೆ ಸಾಹಿತ್ಯ ಸಲ್ಲಾಪದಲ್ಲಿ ತೊಡಗಿ, ಅವರ ಸಾಹಿತ್ಯ ಕೃಷಿಯನ್ನು ಮೆಚ್ಚಿದ್ದೇನೆ. ಅಂತಹವರ ಪರಿಚಯವನ್ನು ಸೊಗಸಾಗಿ ಮಾಡಿಕೊಟ್ಟಿರುವ ನಿಮಗೆ ನನ್ನ ಹಾರ್ದಿಕ ಅಭಿನಂದನೆಗಳು. ನಿಮ್ಮ ಈ ಲೇಖನದ ಶೀರ್ಷಿಕೆಯಂತೂ ನನ್ನ ಕುತೂಹಲವನ್ನು ಕೆರಳಿಸಿ, ತಕ್ಷಣ ಓದುವಂತೆ ಮಾಡಿತು, ಏಕೆಂದರೆ ‘ಕತೆಗಾರ’ ಕವಿತೆಯನ್ನು ರಚಿಸಿದ ಕವಿ ನನ್ನ ಪೂಜ್ಯ ತಂದೆ ಪುತಿನ ಅವರು. ಅವರ ‘ಹೃದಯ ವಿಹಾರಿ’ ಎಂಬ ಕವನ ಸಂಕಲನದಲ್ಲಿ ಈ ಕವಿತೆ ಇದೆ. ಕವಿತೆಯ ಪೂರ್ಣ ಪಾಠ ಹೀಗಿದೆ:

Pu.Ti. Narasimhacharಕತೆಗಾರ

ವೆತೆಗಳ ಕಳೆಯುವ ಕತೆಗಾರ

ನಿನ್ನ ಕಲೆಗೆ ಯಾವುದು ಭಾರ?

ಆವುದು ವಿಸ್ತರ ಯಾವುದು ದುಸ್ತರ

ನಿನಗೆಲೆ ಹರ್ಷದ ಹರಿಕಾರ?

ಕಪಿ ಹಾರಿತು ಹೆಗ್ಗಡಲನು ಎಂಬೆ

ಕಡಲನೆ ಕಡೆದರು ಬೆಟ್ಟದೊಳೆಂಬೆ

ನಿನ್ನೂಹೆಯ ಹೇರಾಳವ ತುಂಬೆ

ಸೃಷ್ಟಿಕರ್ತನಿಗು ಅರಿದೆಂಬೆ

ಒಲುಮೆಬೇಹಿಗಾ ಮೇಘಮರಾಳ

ಮುನಿಯ ತೋಹಿಗಮರಾಂಗನೆ ಮೇಳ

ಸುರರೆಡೆಯಾಳೆ ಕಲಿಪುರುಷ ಕರಾಳ

ಅರಿವರಾರು ನಿನ್ನೈಂದ್ರಜಾಲ!

ಮಾತೊಳೆ ವಿಶ್ವವ ತೋಲಿಸುವ

ಬಗೆಯಾಳಿವೆಲ್ಲವ ಜಾಲಿಸುವ

ಮುದದೊಳಗೆಲ್ಲರ ಕೀಲಿಸುವ

ನಿನ್ನನದಾರಿಗೆ ಹೋಲಿಸುವ?

ವೆತೆಗಳ ಕಳೆಯುವ ಕತೆಗಾರ

ನಿನ್ನ ಕಲೆಗೆ ಯಾವುದು ಭಾರ?

ಪುತಿನ ಜನ್ಮಶತಾಬ್ಧಿಯನ್ನು ನಾಡಿನಾದ್ಯಂತ ಆಚರಿಸುತ್ತಿರುವ ಈ ಶುಭ ಸಂವತ್ಸರದಲ್ಲಿ, ಈ ಪದ್ಯದಿಂದ ನನ್ನ ಸಿಹಿ ನೆನಪಿನ ಸುರುಳಿಯನ್ನು ಬಿಚ್ಚಿದ ನಿಮಗೆ ನನ್ನ ಧನ್ಯವಾದಗಳು. ನಿಮ್ಮ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ.

ನಮಸ್ಕಾರಗಳೊಡನೆ,

- ಅಲಮೇಲು ಅಯ್ಯಂಗಾರ್‌

*

(‘ವ್ಯಥೆಗಳ ಕಳೆಯುವ ಕಥೆಗಾರ’ ಎಂಬ ಲೇಖನದಲ್ಲಿ , ‘ವ್ಯಥೆಗಳ ಕಳೆಯುವ.....’ ಕವನ ಮಾಸ್ತಿಯವರದೆಂದು ಉಲ್ಲೇಖಿಸಿದ್ದೆ. ಆದರೆ ಆ ಕವನ ತಮ್ಮ ತಂದೆ ‘ಪುತಿನ’ ಅವರದೆಂದು ತಿದ್ದಿ ಕೊಟ್ಟಿದ್ದಲ್ಲದೆ, ಬಹು ಅಪರೂಪದ ಕವನದ ಪೂರ್ಣಪಾಠವನ್ನು ಕೂಡ ಕಳಿಸಿಕೊಟ್ಟಿರುವ ಶ್ರೀಮತಿ ಅಲಮೇಲು ಅಯ್ಯಂಗಾರ್‌ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಅನೇಕ ಬಾರಿ ನನಗೆ ಹೀಗಾಗುತ್ತದೆ. ಆಂಗ್ಲಭಾಷೆಯ ಅಥವಾ ಇತರ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದರೂ, ಅಂತರ್ಜಾಲದಲ್ಲಿ, ತುದಿಬೆರಳಿನ ಮೂಲಕ ಕೈಗೆಟುಕಿಸಿಕೊಳ್ಳುವ ನಮಗೆ, ಕನ್ನಡದ, ಕನ್ನಡ ಕವಿ-ಕಾವ್ಯದ ಕುರಿತು ಚಿಕ್ಕದೊಂದು ಮಾಹಿತಿ ಬೇಕೆಂದರೂ, ಕತ್ತಲಿನಲ್ಲಿ, ತಡವರಿಸುವಂತಹ ಅನುಭವವಾಗುತ್ತದೆ. ಇಂತಹ ಗೊಂದಲಗಳು ಉಂಟಾದ ಸಂದರ್ಭದಲ್ಲಿ ನಾನು ಹರಿಹರೇಶ್ವರರಂತಹ ಹಿರಿಯರನ್ನು ಮೊರೆ ಹೋಗುವುದುಂಟು. ಕನ್ನಡ ಸಾಹಿತ್ಯವನ್ನು, ಬೇರಾವುದೇ ಭಾರತೀಯ ಭಾಷೆಗೆ ಕಡಿಮೆ ಇಲ್ಲದಂತೆ ಶ್ರೀಮಂತಗೊಳಿಸಿದ, ನಮ್ಮ ಹೆಮ್ಮೆಯ ಕವಿ, ಸಾಹಿತಿಗಳ, ಅವರ ಕೃತಿಗಳ ಬಗ್ಗೆ ಅಂತರ್ಜಾಲದಲ್ಲೇ ಎಲ್ಲಾ ಮಾಹಿತಿಯನ್ನು ದೊರಕಿಸಿಕೊಳ್ಳುವ, ಒಂದು ಸುದಿನ ಬಹಳ ಬೇಗ ಬರಲಿ ಎಂಬುದು ನನ್ನ ಹೃದಯದಾಳದ ಹಂಬಲ! - ಕೆ. ತ್ರಿವೇಣಿ ಶ್ರೀನಿವಾಸರಾವ್‌.)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more